in

ಬೆನ್ನು ನೋವು, ಎಲ್ಲರಲ್ಲಿ ಕಾಣುವ ಸಮಸ್ಯೆಯಾಗಿದೆ

ಬೆನ್ನು ನೋವು
ಬೆನ್ನು ನೋವು

ಬೆನ್ನು ನೋವು ಎಂಬುದು ಎಲ್ಲರಲ್ಲೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಇತ್ತೀಚೆಗೆ ಇದಕ್ಕೆ ವಯಸ್ಸಿನ ಅಂತರವೂ ಸಹ ಇಲ್ಲ. ಇದೇ ಸಮಸ್ಯೆ ಅನೇಕರನ್ನು ನಿರಂತರವಾಗಿ ಕಾಡುತ್ತಿರುತ್ತವೆ. ಒಂದು ಬಹುಮುಖ್ಯ ಕಾರಣ ಸತತ ಕೆಲಸ ಎನ್ನಬಹುದು. ಇದಾಗ್ಯೂ ತಪ್ಪು ಭಂಗಿಗಳಲ್ಲಿ ಮಲಗುವುದು, ವ್ಯಾಯಾಮ ಮಾಡದಿರುವುದು ಕೂಡ ಬೆನ್ನುನೋವಿಗೆ ಕಾರಣವಾಗಬಹುದು. ಇನ್ನು ಅನೇಕ ಬಾರಿ ಭಾರವಾದ ವಸ್ತುಗಳನ್ನು ಎತ್ತುವುದು ಸಹ ಈ ಸಮಸ್ಯೆಯನ್ನು ಉಂಟು ಮಾಡಬಹುದು.

ತಲೆನೋವಿನಂತೆ ಅತಿ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ತೊಂದರೆ ಎಂದರೆ ಬೆನ್ನು ನೋವು. ಕುತ್ತಿಗೆಯ ಹಿಂಬದಿಯೂ ಬೆನ್ನ ಭಾಗವೇ ಆದರೂ, ಹೆಚ್ಚಾಗಿ ಬೆನ್ನು ನೋವು ಎನ್ನುವಾಗ ಕೆಳ ಬೆನ್ನು ಅಥವಾ ಸೊಂಟದ ಭಾಗ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಬೆನ್ನು ನೋವು ಕಂಡುಬರುತ್ತದೆ. ಇಂತಹವರ ಸಂಖ್ಯೆ ಈಗೀಗ ಹೆಚ್ಚುತ್ತಿದೆ. ಏರುತ್ತಿರುವ ಬೊಜ್ಜು ಮತ್ತು ದೇಹಕ್ಕೆ ವ್ಯಾಯಾಮ ನೀಡದೆ ಗಂಟೆಗಟ್ಟಲೆ ಕುಳಿತೇ ಕೆಲಸ ಮಾಡುವುದು ಇದಕ್ಕೆ ಕಾರಣ. ಇವುಗಳಿಂದ ಬೆನ್ನು ಹುರಿಯ ಸಹಜ ರಚನೆಯಲ್ಲಿ ವ್ಯತ್ಯಾಸ ತೋರಿ, ನೋವುಂಟಾಗುವ ಸಂಭವ ಹೆಚ್ಚು.

ಬೆನ್ನು ನೋವು, ಎಲ್ಲರಲ್ಲಿ ಕಾಣುವ ಸಮಸ್ಯೆಯಾಗಿದೆ
ಕೆಳ ಬೆನ್ನು ನೋವು

ಕೆಳ ಬೆನ್ನು ನೋವು ಸಾಮಾನ್ಯವಾಗಿ ಆಟವಾಡುವಾಗ, ಬೊಜ್ಜಿದ್ದವರಲ್ಲಿ, ನಿಷ್ಕ್ರಿಯರಾಗಿದ್ದಾಗ, ಒತ್ತಡ ಅಥವಾ ಆರ್ತ್ರೈಟಿಸ್‌ನಿಂದ ಬರುತ್ತದೆ. ಸಾಮಾನ್ಯವಾಗಿ ಒಂದು ಅಥವಾ ಕೆಲವು ವಾರಗಳಲ್ಲಿ ನೋವು ಗುಣ ಹೊಂದುತ್ತದೆ. ಕಶೇರುವಿನಲ್ಲಿ 30ಕ್ಕೂ ಹೆಚ್ಚು ಬೆನ್ನು ಮೂಳೆಗಳು ಒಂದರ ಮೇಲೊಂದು ಕುಳಿತು ನಮ್ಮ ದೇಹದ ಭಾರವನ್ನು ಹೊರಲು ಸಹಾಯ ಮಾಡುತ್ತಿರುತ್ತವೆ. ಅವುಗಳ ಮಧ್ಯೆ ಡಿಸ್ಕ್ ಎಂಬ ಮೆತ್ತನೆಯ ವಸ್ತು ಇರುತ್ತದೆ. ಇದು ಬೆನ್ನು ಬಗ್ಗಿ ಏಳುವಾಗ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಈ ಕಶೇರುವಿನ ಮಧ್ಯೆ ಮೆದುಳಿನಿಂದ ಹೊರಟ ದೇಹದ ನರಮಂಡಲದ ಅತಿ ಮುಖ್ಯ ಅಂಗವಾದ ಬೆನ್ನು ಹುರಿ ಇರುತ್ತದೆ. ನೋವು ಕಡಿಮೆಯಾಗದಿದ್ದರೆ ಈ ಅಂಗಕ್ಕೇನಾದರೂ ತೊಂದರೆ ಅಥವಾ ಒತ್ತಡ ಬೀಳುತ್ತಿರಬಹುದು.

ವಯಸ್ಸಾದಂತೆ ಮೂಳೆ ಸವೆಯ ತೊಡಗುತ್ತದೆ. ಅದನ್ನು ಹಿಡಿದಿಡುವ ಪೇಶಿಗಳು ದುರ್ಬಲಗೊಳ್ಳುತ್ತವೆ. ಡಿಸ್ಕ್‌ನಲ್ಲಿರುವ ನೀರಿನಂಶ ಕಮ್ಮಿಯಾಗುತ್ತದೆ ಹಾಗೂ ಅದರ ಆಕಾರ ಚಿಕ್ಕದಾಗಬಹುದು. ಅದರ ಹತ್ತಿಯಂತಹ ಗುಣ ಕಡಿಮೆಯಾಗುತ್ತದೆ. ಹೆಚ್ಚಾಗಿ ಮುಂದೆ ಬಗ್ಗಿ ಏನಾದರೂ ಭಾರ ಎತ್ತಿದರೆ ಅಥವಾ ದೂರವಿರುವ ವಸ್ತುವನ್ನು ಬಾಗಿ ಎಳೆದು ತೆಗೆಯುವಾಗ ಬೆನ್ನ ಮೇಲೆ ಒತ್ತಡ ಹೆಚ್ಚಾಗಿ ಮಾಂಸ ಪೇಶಿಗಳಲ್ಲಿ ಬಿಗಿತ ಬರುತ್ತದೆ. ಬೊಜ್ಜು, ಗರ್ಭಾವಸ್ಥೆ, ಧೂಮಪಾನ, ಋತು ನಿವೃತ್ತಿ ಸಮಯದಲ್ಲಾಗುವ ಮೂಳೆ ಸವಕಲು, ಮಾನಸಿಕ ಒತ್ತಡ, ಬೆನ್ನನ್ನು ವಕ್ರವಾಗಿ ಇಟ್ಟುಕೊಳ್ಳುವುದು ಇತ್ಯಾದಿಗಳಿಂದ ತೊಂದರೆ ಹೆಚ್ಚುತ್ತದೆ.

ಬೆನ್ನು ನೋವಿನಲ್ಲಿ ಅತಿ ಮುಖ್ಯವಾದ ಪಾತ್ರ ವ್ಯಾಯಾಮದ್ದು. ಹೆಚ್ಚಿನವರು ನೋವು ಗುಣವಾದ ಮೇಲೆ ಸ್ವಲ್ಪ ದಿವಸದಲ್ಲೇ ವ್ಯಾಯಾಮವನ್ನು ಮರೆತುಬಿಡುವುದು. ಇದರಿಂದ ಪುನಃ ಪುನಃ ಬಳಲುವ ಸಾಧ್ಯತೆ ಹೆಚ್ಚು. ಹಾಗಾಗಿ ವ್ಯಾಯಾಮವನ್ನು ಬಿಡಬಾರದು. ಮುಖ್ಯವಾಗಿ ಕೆಳ ಬೆನ್ನಿಗೆ ಸಹಕಾರಿಯಾದ ವ್ಯಾಯಾಮಗಳನ್ನು ಮಾಡಬೇಕು.

ಕೆಲವು ಸಂದರ್ಭಗಳಲ್ಲಿ ಬೆನ್ನು ನೋವು ಕೇವಲ ವಿಶ್ರಾಂತಿ ಮತ್ತು ಕೆಲ ಔಷಧಿಗಳ ಸಹಾಯದಿಂದ ಸರಿ ಹೋಗುತ್ತದೆ. ವಿಶ್ರಾಂತಿ ಎಂದರೆ ಕುಳಿತು ಟಿ.ವಿ. ನೋಡುವುದಲ್ಲ. ಮುಖ್ಯವಾಗಿ ಮುಂದೆ ಬಗ್ಗಿ ಭಾರ ಎತ್ತಬಾರದು. ದಿನದ ಹೆಚ್ಚಿನ ಭಾಗ ಅಂಗಾತ ಮಲಗಿರಬೇಕು. ಡಿಸ್ಕ್ ತೊಂದರೆಗಳಿದ್ದಲ್ಲಿ ಅಭ್ಯಂಗ, ಕಟಿವಸ್ತಿ ಮತ್ತು ಔಷಧಿಗಳು ಸಹಾಯಕ. ಮೂರು ವಾರ ಕಳೆದರೂ ಬೆನ್ನು ನೋವು ಕಡಿಮೆಯಾಗದಿದ್ದರೆ ಅಥವಾ ಕಾಲು ಜೋಮು ಹಿಡಿಯುತ್ತಿದ್ದರೆ ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆಯ ಅಗತ್ಯ ಇರುತ್ತದೆ.

ಬೆನ್ನು ನೋವಿಗೆ ಕೆಲವೊಂದು ಅನುಸರಿಸಬೇಕಾದ ಕ್ರಮಗಳು :

ಚೆನ್ನಾಗಿ ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಉತ್ತಮ. ಕಡಿಮೆ ನೀರು ಕುಡಿಯುವುದರಿಂದ ನಿಮಗೆ ತಲೆ ನೋವು ಮತ್ತು ಬೆನ್ನು ನೋವು ಉಂಟು ಮಾಡುತ್ತದೆ. ಹಾಗಾಗಿ ಒಂದು ದಿನದಲ್ಲಿ ಕನಿಷ್ಠ 3 ರಿಂದ 5 ಲೀಟರ್ ವರೆಗೆ ನೀರು ಕುಡಿಯಿರಿ. ಸಾಕಷ್ಟು ನೀರು ಕುಡಿಯುವುದರಿಂದ ದೇಹದಲ್ಲಿ ಕೆಲಸ ಮಾಡುವ ಶಕ್ತಿ ಕೂಡ ಹೆಚ್ಚಾಗುತ್ತದೆ. ಹೀಗಾಗಿ ದಿನದಲ್ಲಿ ಸಾಧ್ಯವಾದಷ್ಟು ಹೆಚ್ಚಿಗೆ ನೀರು ಕುಡಿಯಿರಿ.

ಬೆನ್ನು ನೋವು, ಎಲ್ಲರಲ್ಲಿ ಕಾಣುವ ಸಮಸ್ಯೆಯಾಗಿದೆ
ವ್ಯಾಯಾಮ

ಕಾಲುಗಳೆರಡನ್ನೂ ಮಡಚಿ ಬೆನ್ನು ಮತ್ತು ನಿತಂಬವನ್ನು ಎತ್ತಿ ಹಿಡಿದು ಹತ್ತು ಎಣಿಸಬೇಕು. ಎರಡೂ ಕಾಲನ್ನು ಮಡಚಿ ಕೈಯ್ಯಲ್ಲಿ ಹಿಡಿದು ಮಂಡಿಗೆ ಮೂಗು ತಾಗಿಸಲು ಯತ್ನಿಸಬೇಕು.

ನೋವು ಇದ್ದ ಸ್ಥಳದ ಮೇಲೆ ಇರಿಸುವುದಕ್ಕಾಗಿ ಬಿಸಿ ಅಥವಾ ಶೈತ್ಯ ಪ್ಯಾಕ್‌ ಉಪಯೋಗಿಸಿ. ಹಾಟ್‌ ಬ್ಯಾಗ್‌ಗಳನ್ನು ದೀರ್ಘ‌ಕಾಲ ಇರಿಸಬೇಡಿ, ಅದು ತೊಂದರೆ ಉಂಟುಮಾಡಬಹುದು. ಇವುಗಳನ್ನು ಕೆಲವು ನಿಮಿಷಗಳ ಕಾಲ ಉಪಯೋಗಿಸಬಹುದು ಮತ್ತು ಆಗಾಗ ಪುನರಾವರ್ತಿಸಿ.

ಒಂದು ಬಕೆಟ್ ನಲ್ಲಿ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ನೀವು ಸ್ನಾನ ಮಾಡುವ ಸಂದರ್ಭದಲ್ಲಿ ಅದಕ್ಕೆ ಕೆಲವು ಹನಿಗಳಷ್ಟು ನೀಲಗಿರಿ ಎಣ್ಣೆಯನ್ನು ಹಾಕಿ.
ಈ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ನರಮಂಡಲ ಶಾಂತವಾಗುತ್ತದೆ ಮತ್ತು ಉರಿಯೂತ ಕಡಿಮೆಯಾಗುವುದರ ಜೊತೆಗೆ ನೋವು ನಿವಾರಣೆಯಾಗುತ್ತದೆ.

ಪ್ರತಿದಿನ ಕನಿಷ್ಠ ಎಂದರೂ 30 ನಿಮಿಷಗಳ ವ್ಯಾಯಾಮ ಮಾಡಿ. ವ್ಯಾಯಾಮ ಮಾಡುವುದರಿಂದ ಆಹಾರ ಜೀರ್ಣವಾಗುತ್ತದೆ ಮತ್ತು ಮೂಳೆಗಳು ಆರೋಗ್ಯಕರವಾಗಿರುತ್ತದೆ. ಇದು ದೇಹದ ನೋವಿನ ಸಮಸ್ಯೆಯನ್ನೂ ದೂರ ಮಾಡುತ್ತದೆ.

ಕುಳಿತುಕೊಳ್ಳುವಾಗ, ನಿಲ್ಲುವಾಗ, ಮಲಗುವಾಗ ದೇಹವನ್ನು ನೇರವಾಗಿ ಸರಿಯಾಗಿಟ್ಟುಕೊಳ್ಳಬೇಕು.
ಅತಿ ಮೆತ್ತನೆಯ ಹಾಸಿಗೆ ಒಳ್ಳೆಯದಲ್ಲ. ಅತಿ ಎತ್ತರ ಹಿಮ್ಮಡಿ ಇರುವ ಚಪ್ಪಲಿಗಳನ್ನು ಧರಿಸಬಾರದು.
ಸೊಂಟದ ಹತ್ತಿರ ಬೊಜ್ಜು ಬೆಳೆಯದಿರಲಿ. ಊಟದಲ್ಲಿ ಸಮತೋಲನ ಕಾಪಾಡಬೇಕು.ನಿಯಮಿತ ವ್ಯಾಯಾಮ ಮಾಡಬೇಕು.ಮೂಳೆ ಸವಕಲು ಬಾರದಂತೆ ಕ್ಯಾಲ್ಸಿಯಮ್, ಡಿ ವಿಟಮಿನ್, ಮುಂತಾದುವುಗಳ ಪ್ರಮಾಣ ಗಮನದಲ್ಲಿಡಬೇಕು.

ಅಂಗಾತ ಮಲಗಿ ಒಂದೊಂದಾಗಿ ಕಾಲನ್ನು ನೇರವಾಗಿ (ಮಂಡಿ ಮಡಚದೆ) ಒಂದು ಅಡಿಯಷ್ಟು ಎತ್ತಿ ಹತ್ತು ಸಲ ಎಣಿಸಿ ಕೆಳಗಿಡಬೇಕು. ಬೋರಲು ಮಲಗಿ, ಮೊದಲನೆಯ ವ್ಯಾಯಾಮದಂತೆ ಕಾಲನ್ನು ನೇರವಾಗಿ ಒಂದು ಅಡಿ ಮೇಲೆತ್ತಿ ಹಿಡಿದು ಬಿಡಬೇಕು.

ಒಂದು ಚಮಚ ಸಾಸಿವೆ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಈ ಎಣ್ಣೆಗೆ 6 ಲವಂಗ ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಆ ಎಣ್ಣೆಯಿಂದ ನೋವಿನ ಜಾಗದಲ್ಲಿ ಚೆನ್ನಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಬೆನ್ನು ನೋವಿನಿಂದ ಶೀಘ್ರ ಪರಿಹಾರ ಕಂಡುಕೊಳ್ಳಬುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವಿಶ್ವಾಮಿತ್ರ ಮಹರ್ಷಿ

ವಿಶ್ವಾಮಿತ್ರ ಮಹರ್ಷಿ, ಬ್ರಹ್ಮರ್ಷಿ

ಹೈನುಗಾರಿಕೆ

ಹೈನುಗಾರಿಕೆ ವಿಧಾನಗಳು ಮತ್ತು ಮಾಹಿತಿ