in

ಬಿಳಿ ಸೆರಗು ಹೆಣ್ಣುಮಕ್ಕಳಿಗೆ ಕಾಡುವ ಸಮಸ್ಯೆ

ಬಿಳಿ ಸೆರಗು
ಬಿಳಿ ಸೆರಗು

ನೋವು ಅಥವಾ ಬಿಳಿ ಮುಟ್ಟು ಕಾಣಿಸಿದ ತಕ್ಷಣ ಮಹಿಳೆಯರು ಚಿಂತೆಗೊಳಗಾಗುತ್ತಾರೆ. ಈ ತೊಂದರೆಗೊಳಗಾದಾಗ ಎಲ್ಲ ಮಹಿಳೆಯರೂ ಕೂಡ ಸಾಮಾನ್ಯವಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಹಾಗು ಆದಷ್ಟು ಬೇಗ ಇದರಿಂದ ಹೊರಬರಲು ಹಲವು ರೀತಿಯ ದಾರಿಗಳನ್ನು ಹುಡುಕಲು ಶುರು ಮಾಡುತ್ತಾರೆ.

ಈ ಸ್ರಾವಕ್ಕೆ ಅತಿ ಹೆಚ್ಚು ಸಾಮಾನ್ಯ ಕಾರಣಗಳೆಂದರೆ ಬ್ಯಾಕ್ಟೀರಿಯಾ ಗಳಿಂದ ಎದುರಾಗುವ ಸೋಂಕು. ನಮ್ಮ ಸಾಮಾನ್ಯ ಶೀತದಂತೆಯೇ ಈ ಸ್ರಾವವೂ ದೇಹದ ರೋಗ ನಿರೋಧಕ ಶಕ್ತಿಯ ಒಂದು ಕ್ರಮವೇ ಆಗಿದೆ. ಜನನಾಂಗಗಳಲ್ಲಿ ನುಸುಳುವ ಬ್ಯಾಕ್ಟೀರಿಯಾಗಳನ್ನು ಹೊರ ಹಾಗಲು ಈ ಸ್ರಾವದ ಪ್ರಮಾಣ ಹೆಚ್ಚುತ್ತದೆ. ಅಲ್ಲದೇ ಬಿಳಿ ರಕ್ತಕಣಗಳು ಈ ಬ್ಯಾಕ್ಟೀರಿಯಾಗಳ ಮೇಲೆ ಎರಗಿ ತಾವೂ ಸತ್ತು ಕೊಳೆಯುವ ಮೂಲಕ ಕಮಟು ವಾಸನೆ ಹೊಂದಿರುತ್ತದೆ. ಸಾಮಾನ್ಯವಾಗಿ ಈ ವಾಸನೆ ಕೊಂಚ ಮೀನಿನ ವಾಸನೆಯನ್ನು ಹೋಲುತ್ತದೆ. ಕೆಲವು ಮಹಿಳೆಯರಲ್ಲಿ ಬ್ಯಾಕ್ಟೀರಿಯಾದ ಸೋಂಕು ಇದ್ದರೂ ಈ ಲಕ್ಷಣಗಳು ಕಾಣಬರದೇ ಇರಬಹುದು.

ಬಿಳಿ ಸೆರಗು ಹೆಣ್ಣುಮಕ್ಕಳಿಗೆ ಕಾಡುವ ಸಮಸ್ಯೆ
ಹೆಣ್ಣುಮಕ್ಕಳಿಗೆ ಕಾಡುವ ಸಮಸ್ಯೆ

ತಿಳಿಯಾದ ಬಣ್ಣದ ಕೊಂಚವೇ ಸ್ನಿಗ್ಧವಿರುವ ಸ್ರಾವ ಎದುರಾದರೆ ಇದು ಸಾಮಾನ್ಯ ಎಂದು ತಿಳಿದು ಕೊಳ್ಳಬೇಕು. ಸ್ವತಃ ಸ್ವಚ್ಛತೆಗೆ ಆದ್ಯತೆ ನೀಡಿದರೆ ಸಾಕು. ಒಂದು ವೇಳೆ ಇದರ ಬಣ್ಣದಲ್ಲಿ ಬದಲಾವಣೆ ಹಾಗೂ ಜ್ವರ, ಕೆಳಹೊಟ್ಟೆಯ ನೋವು, ವಿವರಿಸಲು ಸಾಧ್ಯವಾಗದ ತೂಕ ಇಳಿಕೆ, ಸುಸ್ತು, ಮೂತ್ರ ವಿಸರ್ಜನೆಗೆ ಸತತ ಅವಸರವಾಗುವುದು ಮೊದಲಾದ ಯಾವುದೇ ಲಕ್ಷಣಗಳು ಕಂಡುಬಂದರೂ ತಕ್ಷಣವೇ ವೈದ್ಯರನ್ನು ಕಾಣಬೇಕು.

ಮಹಿಳೆಯ ಜನನಾಂಗಕ್ಕೆ ನೀಡಿರುವ ಒಂದು ಅದ್ಭುತ ಶಕ್ತಿ ಎಂದರೆ ತನ್ನನ್ನು ತಾನೇ ಸ್ವಚ್ಛಗೊಳಿಸಿಕೊಳ್ಳುವ ವ್ಯವಸ್ಥೆ. ಬಿಳಿ ಸೆರಗು ಒಂದು ಕಾಯಿಲೆಯಲ್ಲ, ಬದಲಿಗೆ ಒಳಗಿನ ಕಲ್ಮಶಗಳೆಲ್ಲಾ ಸ್ವಚ್ಛಗೊಂಡು ಹೊರಹಾಕುವ ಕ್ರಿಯೆ. ಹಾಗಾಗಿ ಈ ಸ್ರಾವ ಆಗಾಗ ಆಗುತ್ತಿರಬೇಕು. ಆಗಲೇ ಒಳಗಿನ ಸೂಕ್ಷ್ಮ ಅಂಗಗಳೆಲ್ಲಾ ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿವೆ ಎಂದು ತಿಳಿದುಕೊಳ್ಳಬಹುದು.

ಆದರೆ ಇದು ಆಗದೇ ಇದ್ದರೆ ಅಥವಾ ಸಾಮಾನ್ಯಕ್ಕಿಂತ ಭಿನ್ನ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದರೆ ಮಾತ್ರ ಇದಕ್ಕೆ ಆರೋಗ್ಯ ಸಂಬಂಧಿತ ಇತರ ಕಾರಣಗಳಿರಬಹುದು. ಅಸಾಮಾನ್ಯ ಸ್ರಾವದಲ್ಲಿ ವಾಸನೆ, ತುರಿಕೆ, ನೋವು, ಎಡೆಬಿಡದೇ ಸೋರುವುದು, ರಕ್ತಮಿಶ್ರಿತವಾಗಿರುವುದು ಮೊದಲಾದ ಯಾವುದೇ ಲಕ್ಷಣವಿರಬಹುದು. ತಕ್ಷಣವೇ ವೈದ್ಯರ ಸಲಹೆ ಪಡೆಯುವುದು ಅನಿವಾರ್ಯ.

ಬಿಳಿ ಸೆರಗಿಗೆ ನೀವು ಕೈಗೊಳ್ಳಬೇಕಾದ ಮನೆ ಆರೈಕೆಗಳು :
ಸೋಂಕು ತಡೆಗಟ್ಟಲು, ನೀವು ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಹೆಚ್ಚು ಬಿಗಿ ಇರದ, ಸಡಿಲವಾದ, ಗಾಳಿಯಾಡುವಂತಹ ಹತ್ತಿಯ ಒಳ ಉಡುಪುಗಳನ್ನೇ ಧರಿಸಬೇಕು. ಜನನಾಂಗದ ಒಳಗೆ ಅಳವಡಿಸುವ ಉಪಕರಣಗಳನ್ನು ಬಳಸಬೇಡಿ, ಏಕೆಂದರೆ ಇವುಗಳು ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನೂ ನಿವಾರಿಸಿ ಸ್ರಾವವನ್ನು ಇನ್ನಷ್ಟು ಉಲ್ಬಣಗೊಳಿಸಿ ಸ್ಥಿತಿಯನ್ನು ಹದಗೆಡಿಸ ಬಹುದು. ಲೈಂಗಿಕವಾಗಿ ಹರಡುವ ರೋಗಗಳನ್ನು ತಪ್ಪಿಸಲು ನೀವು ಸುರಕ್ಷಿತ ಲೈಂಗಿಕತೆ ಯನ್ನು ಅಭ್ಯಾಸ ಮಾಡಬೇಕು ಮತ್ತು ಸೂಕ್ತ ರಕ್ಷಣಾ ಕ್ರಮವನ್ನು ಅನುಸರಿಸಬೇಕು.

ಶಿಲೀಂಧ್ರದ ಕಾರಣದಿಂದ ಎದುರಾಗುವ ಸೋಂಕು ಅದು ಭಾರೀ ಉರಿ ಮತ್ತು ತುರಿಕೆಯ ಜೊತೆಗೆ ಬಿಳಿ, ಅಥವಾ ಬೆಣ್ಣೆಯ ಬಣ್ಣದ ಸ್ರಾವವನ್ನು ಉಂಟುಮಾಡುತ್ತದೆ. ಶಿಲೀಂಧ್ರದ ಸೋಂಕು ಹೆಚ್ಚೂ ಕಡಿಮೆ ಪ್ರತಿ ಮಹಿಳೆಯಲ್ಲಿಯೂ ಇರುತ್ತದೆ. ನೀರು ಕುಡಿಯುವುದನ್ನು ಕಡಿಮೆ ಮಾಡುವ ಮಹಿಳೆಯರಲ್ಲಿ ಈ ಸೋಂಕು ಅತಿ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲ, ಮೂತ್ರ ವಿಸರ್ಜನೆಯನ್ನು ಹೆಚ್ಚು ಕಾಲ ತಡೆದು ಹಿಡಿಯುವುದರಿಂದಲೂ ಈ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಈ ಸೋಂಕು ಎಷ್ಟು ವೇಗವಾಗಿ ಹರಡುತ್ತದೆ ಎಂದರೆ ನಿಯಂತ್ರಣಕ್ಕೆ ಸಿಗದೇ ಹೋಗಬಹುದು.

ಆರೋಗ್ಯ ಚೆನ್ನಾಗಿದ್ದಾಗ ಜನನಾಂಗದ ಸ್ವಚ್ಛತಾ ಕಾರ್ಯದ ಬಳಿಕ ಹೊರಹಾಕಲ್ಪಡುವ ದ್ರವ ಸಾಮಾನ್ಯವಾಗಿ ಅತಿ ಪಾರದರ್ಶಕವಲ್ಲದ ತಿಳಿಬಣ್ಣ ಮತ್ತು ಕೊಂಚವೇ ಅಂಟು ಅಂಟಾಗಿರುತ್ತದೆ. ಈ ಸ್ರಾವ ಅಂಡೋತ್ಪತ್ತಿಯ ದಿನ ಗರಿಷ್ಟವಾಗಿದ್ದು ಮೊಟ್ಟೆಯ ಬಿಳಿಭಾಗದಷ್ಟು ಸ್ನಿಗ್ಧ ಮತ್ತು ಎರಡು ಬೆರಳುಗಳ ನಡುವೆ ದಾರದಂತೆ ಉಳಿದುಕೊಳ್ಳುವಂತಿರುತ್ತದೆ. ಅಂಡೋತ್ಪತ್ತಿ ಮತ್ತು ಮಾಸಿದ ದಿನಗಳ ನಡುವೆ ಇದು ಸಾಮಾನ್ಯವಾಗಿ ನೀರಿನಂತಿರುತ್ತದೆ.

ಸ್ರಾವದ ಬಣ್ಣ ತಿಳಿಯಾಗಿರುವ ಬದಲು ಹಳದಿ ಅಥವಾ ತಿಳಿ ಹಸಿರು ಬಣ್ಣದಲ್ಲಿರುತ್ತದೆ. ನೀರು ನೀರಾಗಿರದೇ ನಡುನಡುವೆ ಹೆಪ್ಪುಗಟ್ಟಿದ ತುಂಡುಗಳಿದ್ದು ಸ್ನಿಗ್ಧತೆಯೂ ಅತಿ ಎನಿಸುವಷ್ಟು ಹೆಚ್ಚಿರುತ್ತದೆ. ಅಲ್ಲದೇ ಕಮಟು ವಾಸನೆಯನ್ನೂ ಹೊಂದಿರುತ್ತದೆ. ಬಹುತೇಕ ಎಲ್ಲಾ ಅಸಾಮಾನ್ಯ ಸ್ರಾವಗಳಿಗೆ ಶಿಲಿಂಧ್ರ ಮತ್ತು ಬ್ಯಾಕ್ಟೀರಿಯಾಗಳ ಸೋಂಕು ಪ್ರಮುಖ ಕಾರಣವಾಗಿವೆ. ಈ ಸ್ರಾವದ ಲಕ್ಷಗಳಗಲ್ಲಿ ಒಂದಾದರೂ, ಕೊಂಚ ಪ್ರಮಾಣದಲ್ಲಿಯಾದರೂ ಸರಿ, ಕಂಡುಬಂದರೆ ತಕ್ಷಣವೇ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ.

ಸಾಮಾನ್ಯವಾಗಿ ಲೈಂಗಿಕ ಸಂಪರ್ಕಗಿಂದ ಈ ಸೋಂಕು ಹರಡುತ್ತದೆ. ಅಷ್ಟೇ ಅಲ್ಲ, ಈ ಸೋಂಕು ಇರುವ ವ್ಯಕ್ತಿಯು ಬಳಸುವ ಸ್ನಾನದ ಟವೆಲ್, ಸ್ನಾನದ ಬಳಿಕ ತೊಡುವ ಬಟ್ಟೆಗಳ ಸಂಪರ್ಕದಿಂದಲೂ ಬರಬಹುದು. ಈ ಸೋಂಕು ಎದುರಾದರೆ ಸ್ರಾವ ಗಾಢ ಹಳದಿ ಬಣ್ಣ ಅಥವಾ ತಿಳಿಹಸಿರು ಬಣ್ಣದಲ್ಲಿರುತ್ತದೆ ಹಾಗೂ ಕೊಳೆತ ವಾಸನೆಯನ್ನು ಸೂಸುತ್ತದೆ. ಇದರ ಜೊತೆಗೇ ಜನನಾಂಗದ ಭಾಗದಲ್ಲಿ ನೋವು, ಉರಿ ಮತ್ತು ತುರಿಕೆ ಎದುರಾಗುತ್ತದೆ. ಆದರೆ ಈ ಲಕ್ಷಣಗಳು ಎಲ್ಲಾ ಮಹಿಳೆಯರಲ್ಲಿ ಏಕಪ್ರಕಾರವಾಗಿರದೇ ಕೊಂಚ ಭಿನ್ನವಾಗಿರಬಹುದು ಅಥವಾ ಸೋಂಕು ಇದ್ದರೂ ಯಾವುದೇ ಲಕ್ಷಣಗಳನ್ನು ತೋರದೇ ಇರಬಹುದು.

ಟೀ ಬ್ಯಾಗ್
ತಣ್ಣಗಿರುವ ಒಂದು ಟೀ ಬ್ಯಾಗ್ ಅನ್ನು ತೆಗೆದುಕೊಂಡು ಸಮಸ್ಯೆ ಇರುವ ಜಾಗದಲ್ಲಿ ಇಡಿ. ಐದರಿಂದ ಏಳು ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತೆಗೆಯಿರಿ. ಇದು ಉರಿಯನ್ನು ಕಡಿಮೆ ಮಾಡಿ ನಿಮಗೆ ಬಿಳಿ ಮುಟ್ಟಿನ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.

ಕ್ಯಾರೆಟ್ ಜ್ಯೂಸ್

ಬಿಳಿ ಸೆರಗು ಹೆಣ್ಣುಮಕ್ಕಳಿಗೆ ಕಾಡುವ ಸಮಸ್ಯೆ
ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ನಲ್ಲಿ ಬೀಟಾ ಕ್ಯಾರೋಟೀನ್ ಅಂಶವಿದ್ದು ಇದು ನಿಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಎರಡು ಕ್ಯಾರಟ್ ತೆಗೆದುಕೊಂಡು ಗ್ರೈಂಡರ್ ನಲ್ಲಿ ಹಾಕಿ ಚೆನ್ನಾಗಿ ತಿರುವಿರಿ. ಈ ಜ್ಯೂಸನ್ನು ದಿನಕ್ಕೆರಡು ಬಾರಿ ಸೇವಿಸುತ್ತಾ ಬನ್ನಿ. ಬಿಳಿ ಮುಟ್ಟಿನ ಲಕ್ಷಣಗಳು ಕಡಿಮೆಯಾಗುವರೆಗೆ ಇದನ್ನು ಸೇವಿಸುತ್ತಾ ಬನ್ನಿ.

ಆಲೋವೆರಾ

ಬಿಳಿ ಸೆರಗು ಹೆಣ್ಣುಮಕ್ಕಳಿಗೆ ಕಾಡುವ ಸಮಸ್ಯೆ
ಆಲೋವೆರಾ


ಒಂದು ಅಲೋವೆರಾ ತುಂಡನ್ನು ತೆಗೆದುಕೊಂಡು ಅದರಲ್ಲಿ ಬರುವ ಜೆಲ್ ಅನ್ನು ನೋವಿರುವ ಜಾಗದಲ್ಲಿ ಹಚ್ಚಿ ಒಣಗಲು ಬಿಡಿ.ಇದರಿಂದ ನಿಮಗೆ ತಂಪಾದ ಅನುಭವ ಉಂಟಾಗಿ ಬಿಳಿ ಸೆರಗು ಮತ್ತು ನೋವು ಕಡಿಮೆಯಾಗುತ್ತದೆ.

ಅಡುಗೆ ಸೋಡಾ
ಅಡುಗೆ ಸೋಡಾವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ ಹಚ್ಚಿಕೊಳ್ಳಿ. ಇದನ್ನು ಒಣಗಲು ಬಿಡಿ.ಸ್ವಲ್ಪ ಹೊತ್ತಿನ ನಂತರ ಒದ್ದೆಯಾದ ಬಟ್ಟೆಯಿಂದ ಒರೆಸಿಕೊಂಡು ಒಣಗಿಸಿಕೊಳ್ಳಿ.ಇದು ಬಿಳಿ ಸೆರಗಿನ ಸಮಸ್ಯೆಗೆ ಬೇಗ ಪರಿಹಾರವನ್ನು ನೀಡುತ್ತದೆ.

ತಂಪಾದ ಚಿಕಿತ್ಸೆ
ಕೆಲವು ಐಸ್ ಕ್ಯೂಬ್ಗಳನ್ನು ತೆಗೆದುಕೊಂಡು ಸ್ವಚ್ಛವಾದ ಬಟ್ಟೆಯಿಂದ ಸುತ್ತಿ ತೊಂದರೆಯಿರುವ ಸ್ಥಳದಲ್ಲಿ ಇಟ್ಟುಕೊಳ್ಳಿ. ಇದೂ ಕೂಡ ತಂಪಾದ ಅನುಭವವನ್ನು ನೀಡಿ ನಿಮಗೆ ಆರಾಮವನ್ನು ಕೊಡುತ್ತದೆ ಹಾಗು ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.

ವಿನೇಗರ್
ಉಗುರು ಬೆಚ್ಚಗಿನ ನೀರಿರುವ ಬಾತ್ ಟಬ್ ನಲ್ಲಿ ಅರ್ಧ ಬಟ್ಟಲು ವಿನೆಗರ್ ಹಾಕಿ ಐದರಿಂದ ಏಳು ನಿಮಿಷಗಳ ಕಾಲ ಅದರಲ್ಲಿ ಇರಿ.ದಿನಕ್ಕೆರಡು ಬಾರಿ ಈ ರೀತಿ ಮಾಡಿ.ಇದು ಬಿಳಿ ಮುಟ್ಟಿನ ಸಮಸ್ಯೆಗೆ ಒಳ್ಳೆಯ ಪರಿಹಾರವನ್ನು ನೀಡುತ್ತದೆ.

ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೃಷ್ಣಕುಚೇಲ

ಸ್ನೇಹಕ್ಕೆ ಸಾಕ್ಷಿ ಕೃಷ್ಣಕುಚೇಲರ ಸ್ನೇಹ

ನೀರು ಕುಡಿಯುವ ಪ್ರಯೋಜನಗಳು

ಜೀವ ಜಲ, ನೀರು ಕುಡಿಯುವ ಪ್ರಯೋಜನಗಳು