in

ಸೋಡಾ ನೀರು ಅತಿಯಾಗಿ ಕುಡಿಯುತ್ತೀರಾ? ಹಾಗಾದರೆ ಕಡಿಮೆ ಮಾಡಿ

ಸೋಡಾ ನೀರು ಅತಿಯಾಗಿ ಕುಡಿಯುತ್ತೀರಾ?
ಸೋಡಾ ನೀರು ಅತಿಯಾಗಿ ಕುಡಿಯುತ್ತೀರಾ?

ಸೋಡಾ ನೀರನ್ನು ವಾಸ್ತವವಾಗಿ ಕಾರ್ಬೊನೇಟೆಡ್ ನೀರು ಎಂದು ಕರೆಯುತ್ತಾರೆ. ಇದರಲ್ಲಿ ಸೋಡಿಯಂ ಬೈಕಾರ್ಬನೇಟ್ ಅನ್ನು ಖನಿಜಯುಕ್ತ ನೀರಿನಲ್ಲಿ ಸೇರಿಸುತ್ತಾರೆ. ಇದನ್ನು ಕ್ಲಬ್ ಸೋಡಾ, ಸೆಲ್ಟ್ಜರ್, ಸ್ಪಾರ್ಕ್ಲಿಂಗ್ ವಾಟರ್ ಅಥವಾ ಫಿಜ್ಜಿ ವಾಟರ್ ಎಂದೂ ಕರೆಯುತ್ತಾರೆ.

ಸೋಡಾ ಎಂದರೆ ಹೆಚ್ಚಿನವರಿಗೆ ಇಷ್ಟವಾಗುವುದು. ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿಗಳಿಗೆ ಕೆಲವರು ಸೋಡಾ ಬಳಕೆ ಮಾಡುವರು. ಇನ್ನು ಕೆಲವರು ಇದನ್ನೇ ಕುಡಿಯುವ ಅಭ್ಯಾಸ ಮಾಡಿಕೊಂಡಿರುವರು. ನೀರಿಗಿಂತಲೂ ಹೆಚ್ಚಾಗಿ ಸೋಡಾ ಕುಡಿಯುವಂತಹ ಜನರು ನಮ್ಮಲ್ಲಿ ಇದ್ದಾರೆ.

ತಂಪು ಪಾನೀಯಗಳು, ಫಿಜ್ಜಿ ಪಾನೀಯಗಳಲ್ಲಿ ಸೋಡಾ ಪ್ರಮಾಣ ಇರುತ್ತದೆ. ಇದನ್ನು ಹಾರ್ಡ್ ಪಾನೀಯ, ಕಾಕ್ಟೈಲ್‌ಗಳು ಅಥವಾ ಆಲ್ಕೊಹಾಲ್ಯುಕ್ತ ಪಾನೀಯಗಳೊಂದಿಗೆ ಬೆರೆಸಿ ಸಹ ನೀಡಲಾಗುತ್ತದೆ.

ಸೋಡಾ ಪಾನೀಯದಲ್ಲಿ ಸಕ್ಕರೆ ಮತ್ತು ಕೃತಕ ಸಿಹಿಯನ್ನು ಒಳಗೊಂಡಿರುತ್ತದೆ. ಇದು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಹಾಳು ಮಾಡುತ್ತವೆ. ಜೊತೆಗೆ ದೇಹವು ಅನಾರೋಗ್ಯದ ವಿರುದ್ಧ ಹೋರಾಡಲು ಅಡ್ಡಿಯನ್ನುಂಟುಮಾಡುವುದು. ಇದು ವಿವಿಧ ಅನಾರೋಗ್ಯಗಳಿಗೆ ಪ್ರಚೋದನೆ ನೀಡುವುದು. ದೇಹದಲ್ಲಿ ಇರುವ ರೋಗ ನಿರೋಧಕ ಶಕ್ತಿಯು ನಿಧಾನವಾಗಿ ಕುಗ್ಗುವುದು.

ಸೋಡಾ ನೀರು ಅತಿಯಾಗಿ ಕುಡಿಯುತ್ತೀರಾ? ಹಾಗಾದರೆ ಕಡಿಮೆ ಮಾಡಿ
ತಂಪು ಪಾನೀಯಗಳು, ಫಿಜ್ಜಿ ಪಾನೀಯಗಳಲ್ಲಿ ಸೋಡಾ ಪ್ರಮಾಣ ಇರುತ್ತದೆ

ಸೋಡಾ ನೀರು ನಿಮ್ಮ ನೆಚ್ಚಿನ ಪಾನೀಯವಾಗಿದ್ದರೆ ಅದರ ನಿಯಮಿತ ಸೇವನೆ ನಿಮ್ಮ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಹಾನಿ ಉಂಟು ಮಾಡುತ್ತದೆ. ಶುಗರ್ ಫ್ರೀ ಸೋಡಾ ಕುಡಿಯುತ್ತೀದ್ದೀರಿ ಎಂದು ಸಂತೋಷ ಪಡುವುದು ಬೇಡ. ಏಕೆಂದರೆ ಅದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ.

ಬೇಸಿಗೆಯಲ್ಲಿ ಸೋಡಾ ಪ್ರಿಯರು ದಿನಕ್ಕೆ ಒಂದರಿಂದ ಎರಡು ಗ್ಲಾಸ್ ಸೋಡಾ ಕುಡಿಯದೇ ಇರಲ್ಲ. ಸಕ್ಕರೆ, ಉಪ್ಪು ಮತ್ತು ಪಾಶ್ಚರೈಟ್‌ಗಳಿಂದ ಸಮೃದ್ಧವಾಗಿರುವ ಸೋಡಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಗೊತ್ತಿದ್ದರೂ ಬೇಸಿಗೆಯಲ್ಲಿ, ಸೋಡಾ ಅಭಿಮಾನಿಗಳು ಕುಡಿದೇ ಬಿಡುತ್ತಾರೆ. ಸೋಡಾದ ರುಚಿ ಅದರಿಂದ ದೂರವಿರಲು ಬಿಡುವುದಿಲ್ಲ. ನೀವು ಶುಗರ್ ಫ್ರೀ ಸೋಡಾ ಕುಡಿಯುತ್ತೀದ್ದೀರಿ ಎಂದು ಸಂತೋಷ ಪಡುವುದು ಬೇಡ. ಏಕೆಂದರೆ ಇದು ಆರೋಗ್ಯಕ್ಕೆ ಯಾವುದೇ ಪ್ರಯೋಜನ ನೀಡಲ್ಲ. ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಬೇಸಿಗೆಯಲ್ಲಿ ಸೋಡಾ ನೀರು ಕುಡಿದರೆ ಉಲ್ಲಾಸ ಭಾವ ಮೂಡುತ್ತದೆ. ಇದು ಈ ಋತುವಿನಲ್ಲಿ ಆಹಾರ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕ್ಯಾನ್‌ನಿಂದ ಸೋಡಾ ಕುಡಿಯುವುದು ಹಾನಿಕಾರಕ ಎಂದು ನೀವು ಯೋಚಿಸಿದರೆ ನೀವು ಬಾಟಲಿಯಿಂದ ಕುಡಿಯಬಹುದು. ಬಿಸ್ಫೆನಾಲ್ ಎ, ಪ್ಲಾಸ್ಟಿಕ್ ಬಾಟಲ್ ಪ್ಯಾಕಿಂಗ್‌ನ ಪ್ರಮುಖ ಭಾಗವಾಗಿದೆ. ನಿಧಾನವಾಗಿ ಸೋರುವಿಕೆ ನಿಮ್ಮ ಸೋಡಾದಲ್ಲಿ ಮಿಶ್ರಣವಾಗಬಹುದು. ಇದು ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಯನ್ನು ಹೆಚ್ಚಿಸುತ್ತದೆ.

ಸೋಡಾದಂತಹ ಪಾನೀಯಗಳು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ. ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಹೆಚ್ಚು ತೊಂದರೆಯನ್ನು ಉಂಟುಮಾಡುವುದು. ಸೋಡಾದಲ್ಲಿ ಇರುವ ಸಕ್ಕರೆಯ ಅಂಶ ಬಿಳಿ ರಕ್ತ ಕಣಗಳ ಮೇಲೆ ಪ್ರಭಾವ ಬೀರುತ್ತವೆ. ಇದು ಸೋಂಕಿನ ವಿರುದ್ಧ ಹೋರಾಡಲು ಅಸಮರ್ಥವಾಗಿರುತ್ತವೆ. ಟೈಪ್ 2 ಮಧು ಮೇಹ ಹೊಂದಿರುವವರು ಸೋಡಾ ಸೇವನೆ ಮಾಡದೆ ಇರುವುದು ಅತ್ಯಗತ್ಯ.

ಬೇಸಿಗೆಯ ಉರಿ ಅಥವಾ ಮನೆಯಿಂದ ಆಚೆ ಇರುವಾಗ ಸೋಡಾ ಮಿಶ್ರಿತ ಪಾನೀಯ ಕುಡಿಯಲು ಮನಸ್ಸು ಬಯಸುವುದು. ಹೀಗೆ ಆಸೆಪಟ್ಟು ಕುಡಿಯುವ ಪಾನೀಯವು ಆರೋಗ್ಯದ ಮೇಲೆ ಗಂಭೀರವಾದ ಪ್ರಭಾವ ಬೀರುತ್ತದೆ. ವಿಶೇಷವಾಗಿ ನಮ್ಮಲ್ಲಿರುವ ರೋಗನಿರೋಧಕ ಶಕ್ತಿಯನ್ನು ಗಮನಾರ್ಹ ರೀತಿಯಲ್ಲಿ ಕುಗ್ಗಿಸುವುದು. ಜೊತೆಗೆ ಸೋಂಕುಗಳಂತಹ ಅಂಟು ರೋಗಗಳು ಬಹುಬೇಗ ನಮ್ಮನ್ನು ಕಾಡಲು ಪ್ರಾರಂಭಿಸುತ್ತವೆ.

ಸೋಡಾ ನೀರು ಅತಿಯಾಗಿ ಕುಡಿಯುತ್ತೀರಾ? ಹಾಗಾದರೆ ಕಡಿಮೆ ಮಾಡಿ
ಸೋಡಾ ಕುಡಿಯುವುದರಿಂದ ಟೈಪ್ 2 ಡಯಾಬಿಟಿಸ್ ಹೆಚ್ಚುವುದು

ಸೋಡಾದಲ್ಲಿ ಯಾವುದೇ ರೀತಿಯ ಪೋಷಕಾಂಶಗಳು ಇಲ್ಲ. ಸೋಡಾದಿಂದ ಹಾನಿಯಾಗುವುದೇ ಹೆಚ್ಚಲ್ಲದೆ, ಇದರಿಂದ ಆರೋಗ್ಯಕ್ಕೆ ಉಪಯೋಗವಾಗುವಂತಹ ಒಂದು ಅಂಶವು ಇಲ್ಲ. ಇದರಲ್ಲಿ ಇರುವಂತಹ ಅನೈಸರ್ಗಿಕ ಅಂಶಗಳು ದೇಹಕ್ಕೆ ಹಾನಿ ಉಂಟು ಮಾಡುವುದು.

ಸೋಡಾ ಬಾಟಲಿ ನಿಮ್ಮ ಕೈ ಸೇರುವ ಮೊದಲು ಸಾವಿರಾರು ಜನರ ಸ್ಪರ್ಶಕ್ಕೆ ಒಳಗಾಗಿರುತ್ತದೆ. ಸೋಡಾ ಕ್ಯಾನ್ ಮೇಕಿಂಗ್, ಪ್ರಿಂಟಿಂಗ್, ಫಿಲ್ಲಿಂಗ್, ಪ್ಯಾಕಿಂಗ್, ಟ್ರಾನ್ಸ್‌ಪೋರ್ಟ್, ವೆಂಡರ್ ಡಿಸ್ಪ್ಲೇ ಮುಂತಾದ ವಿವಿಧ ಸ್ಥಳಗಳನ್ನು ದಾಟಿದ ನಂತರ ಸೋಡಾ ನಿಮ್ಮ ಕೈ ಸೇರುತ್ತದೆ. ಈ ಸಮಯದಲ್ಲಿ ಇ-ಕೋಲಿ ಬ್ಯಾಕ್ಟೀರಿಯಾಗಳು ಈ ಕ್ಯಾನ್‌ಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಈ ಬ್ಯಾಕ್ಟೀರಿಯಾಗಳು ಅತಿಸಾರ, ನ್ಯುಮೋನಿಯಾ ಮತ್ತು ಉಸಿರಾಟದ ಕಾಯಿಲೆ ಉಂಟು ಮಾಡುತ್ತವೆ.

ನಿಯಮಿತವಾಗಿ ಸೋಡಾ ಕುಡಿಯುವುದರಿಂದ ಟೈಪ್ 2 ಡಯಾಬಿಟಿಸ್ ಹೆಚ್ಚುವುದು. ಇಂತಹ ಕೃತಕ ಸಿಹಿ ಹೊಂದಿರುವ ಪಾನೀಯಗಳು ಇನ್ಸುಲಿನ್ ಸಂವೇದನೆಯನ್ನು ಕಡಿಮೆ ಮಾಡುತ್ತವೆ. ಟೈಪ್ 2 ಮಧುಮೇಹ ಅಭಿವೃದ್ಧಿಯಾಗುವುದರ ಜೊತೆಗೆ ಸ್ಯಾಚುರೇಟೆಡ್ ಕೊಬ್ಬು ಕಡಿಮೆ ಆಗುತ್ತವೆ. ಜೊತೆಗೆ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಯನ್ನು ಸೃಷ್ಟಿಸಲು ಕಾರಣವಾಗುವುದು.

ಸೋಡಾದಲ್ಲಿ ಬಳಸುವಂತಹ ನೀರು ನಲ್ಲಿ ನೀರು ಆಗಿದೆ ಮತ್ತು ಇದರಲ್ಲಿ ಕ್ಲೋರಿನ್, ಫ್ಲೋರೈಡ್ ಮತ್ತು ಇತರ ಕೆಲವು ಲೋಹಗಳು ಸೇರಿಕೊಂಡಿರುವುದು.

ಗೋದಾಮು ಮತ್ತು ಅಂಗಡಿಯಲ್ಲಿ ಕಂಡು ಬರುವ ಇಲಿಗಳು ಮತ್ತು ಇತರ ಜೀವಿಗಳು ಜಿರಳೆಗಳು, ನೂರಾರು ಬಾರಿ ನಿಮ್ಮ ಡಬ್ಬಿಗೆ ಹಾರಿರುವ ಸಾಧ್ಯತೆ ಇರುತ್ತದೆ. ಡಬ್ಬವನ್ನು ಶುಚಿಗೊಳಿಸದೆ ಅದರಿಂದ ಸೋಡಾ ಕುಡಿದರೆ ಇಲಿ ಮೂತ್ರ, ಮಡಿಕೆ, ಕ್ರಿಮಿಕೀಟಗಳು ಸಂಪರ್ಕಕ್ಕೆ ಬಂದು ಅನಾರೋಗ್ಯಕ್ಕೆ ತುತ್ತಾಗುವ ಎಲ್ಲಾ ಸಾಧ್ಯತೆಗಳಿವೆ. ಆಗ ವಾಂತಿ, ಅತಿಸಾರ, ಹೊಟ್ಟೆ ನೋವು, ವಾಕರಿಕೆ ಸಮಸ್ಯೆ ಕಾಡುತ್ತದೆ.

ಸೋಡಾದಲ್ಲಿ ಉರಿಯೂತವನ್ನು ಹೆಚ್ಚಿಸುವ ಶಕ್ತಿ ಇದೆ. ಇದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವುದರ ಜೊತೆಗೆ ದೀರ್ಘ ಕಾಲದ ಕಾಯಿಲೆಗಳಿಂದ ಬಳಲುವಂತೆ ಮಾಡುವುದು. ಸೋಡಾ ಸೇವನೆಯ ನಂತರ ಹಾಲು ಮೊಸರಿನಂತಹ ಆಹಾರವನ್ನು ಸೇವಿಸಿದಾಗ ಅಧಿಕ ಪ್ರಮಾಣದ ಯೂರಿಕ್ ಆಮ್ಲ ಬಿಡುಗಡೆ ಆಗುವುದು. ಅದು ಮೂಳೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗೆ ಪ್ರಚೋದನೆ ನೀಡುವುದು. ಜೊತೆಗೆ ಇನ್ಸುಲಿನ್ ಪ್ರತಿರೋಧವನ್ನು ಉತ್ತೇಜಿಸುತ್ತದೆ.

ಸೋಡಾ ನೀರು ಅತಿಯಾಗಿ ಕುಡಿಯುತ್ತೀರಾ? ಹಾಗಾದರೆ ಕಡಿಮೆ ಮಾಡಿ
ಸಿಹಿ ಅಂಶ ಹಾಗೂ ಕೃತಕ ಸಿಹಿಗಳು ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಪ್ರಚೋದನೆ ನೀಡುತ್ತವೆ

ಹೆಚ್ಚಿನ ಸೋಡಾಗಳಲ್ಲಿ ಕೆಫಿನ್ ಅಂಶವಿದ್ದು, ಇದು ಕ್ಯಾನ್ಸರ್, ಸ್ತನದಲ್ಲಿನ ಗಡ್ಡೆ, ಅನಿಯಮಿತ ಹೃದಯ ಬಡಿತ, ಅಧಿಕ ರಕ್ತದೊತ್ತಡ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುವುದು.

ಸೋಡಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫಾಸ್ಪರಸ್ ಅಂಶವಿದ್ದು, ಇದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳದಂತೆ ಮಾಡುವುದು. ಇದರಿಂದಾಗಿ ಅಸ್ಥಿರಂಧ್ರತೆ, ದಂತಕುಳಿ ಮತ್ತು ಮೂಳೆಗಳು ಮೆತ್ತಗಾಗಲು ಸಮಸ್ಯೆಗಳೂ ಬರಬಹುದು.

ಫಾಸ್ಪರಸ್ ಆಮ್ಲವು ಹೊಟ್ಟೆಯ ಆಮ್ಲದ ಜತೆಗೆ ಬೆರೆತುಕೊಂಡು ಜೀರ್ಣಕ್ರಿಯೆ ನಿಧಾನಗೊಳಿಸುವುದು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುವುದು.

ಸಿಹಿ ಅಂಶ ಹಾಗೂ ಕೃತಕ ಸಿಹಿಗಳು ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಪ್ರಚೋದನೆ ನೀಡುತ್ತವೆ. ಜೊತೆಗೆ ದೇಹದ ಎಲ್ಲೆಡೆ ಹರಡಲು ಪ್ರಚೋದನೆ ನೀಡುತ್ತವೆ. ಸಕ್ಕರೆ ಕಾಯಿಲೆಯಂತಹ ಆರೋಗ್ಯ ಸಮಸ್ಯೆಯನ್ನು ಪ್ರಚೋದಿಸುವುದು. ಜೊತೆಗೆ ಕೆಟ್ಟ ಬ್ಯಾಕ್ಟೀರಿಯಾಗಳು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ.

ಸೋಡಾ ಪಾನೀಯವು ದೇಹದಲ್ಲಿ ಅನಗತ್ಯ ಕೊಬ್ಬು ಹಾಗೂ ವಿಷಕಾರಿ ಅಂಶ ಸೇರಿಕೊಳ್ಳುವಂತೆ ಮಾಡುವುದು. ಸೋಡಾದಲ್ಲಿರುವ ರಾಸಾಯನಿಕ ಹಾಗೂ ಸಕ್ಕರೆಯ ಅಂಶವು ದೇಹದಲ್ಲಿ ಅನಿಯಮಿತವಾಗಿ ಕೊಬ್ಬು ಶೇಖರಣೆ ಆಗುವುದು. ಅದು ದೇಹದಲ್ಲಿ ಕರಗದಂತಹ ಬೊಜ್ಜಾಗಿ ಬದಲಾಗುವುದು. ಆ ಕೊಬ್ಬುಗಳು ದೇಹದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪ್ರಚೋದನೆ ನೀಡುವಂತೆ ಮಾಡುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನ

ಫೆಬ್ರವರಿ 23 ರಂದು, ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನ

ಬಜೆಟ್‌ ಮಂಡಿಸುವ ಮುನ್ನ ಹಲ್ವಾ ತಯಾರಿಸುವ ಸಂಪ್ರದಾಯ ಯಾಕೆ?

ಬಜೆಟ್‌ ಮಂಡಿಸುವ ಮುನ್ನ ಹಲ್ವಾ ತಯಾರಿಸುವ ಸಂಪ್ರದಾಯ ಯಾಕೆ?