in

ಹೈನುಗಾರಿಕೆ ವಿಧಾನಗಳು ಮತ್ತು ಮಾಹಿತಿ

ಹೈನುಗಾರಿಕೆ
ಹೈನುಗಾರಿಕೆ

ಹೈನುಗಾರಿಕೆ ಎಂಬುದು ಸಾವಿರಾರು ವರ್ಷಗಳಿಂದಲೂ ವ್ಯವಸಾಯದ ಒಂದು ಭಾಗವಾಗುತ್ತಾ ಬಂದಿದೆ. ಐತಿಹಾಸಿಕವಾಗಿ ಹೇಳುವುದಾದರೆ, ಇದು ಚಿಕ್ಕ, ವೈವಿಧ್ಯಮಯ ಒಕ್ಕಲು ಜಮೀನುಗಳ ಒಂದು ಭಾಗ ಎನಿಸಿಕೊಂಡು ಬಂದಿದೆ. ಕಳೆದ ಶತಮಾನದಲ್ಲಿ ಅಥವಾ ಅದಕ್ಕಿಂತ ಹಿಂದೆ, ಕೇವಲ ಹೈನು ಉತ್ಪಾದನೆಯನ್ನು ಮಾತ್ರವೇ ಮಾಡುತ್ತಿರುವ ದೊಡ್ಡದಾದ ಒಕ್ಕಲು ಜಮೀನುಗಳು ಹೊರಹೊಮ್ಮಿವೆ. ಬೃಹತ್‌‌ ಪ್ರಮಾಣದ ಹೈನುಗಾರಿಕೆಯು ಕಾರ್ಯಸಾಧ್ಯವಾಗಬೇಕೆಂದರೆ ಅಲ್ಲಿ ಎರಡು ರೀತಿಯ ಅನುಕೂಲಕರ ಸನ್ನಿವೇಶಗಳಿರಬೇಕು. ಮೊದಲನೆಯದು, ಗಿಣ್ಣಿನಂಥ ಹೆಚ್ಚು ಬಾಳಿಕೆ ಬರುವ ಹೈನು ಉತ್ಪನ್ನಗಳ ಉತ್ಪಾದನೆಗಾಗಿ ಒಂದು ಬೃಹತ್‌‌ ಪ್ರಮಾಣದ ಹಾಲಿನ ಅಗತ್ಯ ಅಲ್ಲಿ ಕಂಡುಬರಬೇಕು, ಅಥವಾ ಹಾಲನ್ನು ಖರೀದಿಸಲೆಂದು ನಗದು ಹಣವನ್ನು ಹೊಂದಿರುವ, ಆದರೆ ತಮ್ಮದೇ ಆದ ಹಸುಗಳನ್ನು ಹೊಂದಿರದ ಜನರ ಒಂದು ಗಣನೀಯ ಮಾರುಕಟ್ಟೆಯು ಅಲ್ಲಿರಬೇಕು.

ಹೈನುಗಾರಿಕೆ ವಿಧಾನಗಳು ಮತ್ತು ಮಾಹಿತಿ
ಹೈನುಗಾರಿಕೆ

ಹೈನುಗಾರಿಕೆ ಎಂಬುದು ಹಾಲಿನ ದೀರ್ಘಾವಧಿ ಉತ್ಪಾದನೆಗೆ ಸಂಬಂಧಿಸಿದಂತಿರುವ ಕೃಷಿಯ, ಅಥವಾ ಒಂದು ಪಶುಸಂಗೋಪನೆಯ, ಉದ್ಯಮದ ಒಂದು ವರ್ಗವಾಗಿದೆ. ಹಾಲಿನ ಉತ್ಪಾದನೆಯನ್ನು ಸಾಮಾನ್ಯವಾಗಿ ಹೈನು ಹಸುಗಳಿಂದ ಮಾಡಲಾಗುತ್ತದೆಯಾದರೂ, ಮೇಕೆಗಳು ಮತ್ತು ಕುರಿಗಳನ್ನೂ ಸಹ ಇದಕ್ಕಾಗಿ ಬಳಕೆಮಾಡಿಕೊಳ್ಳಲಾಗುತ್ತದೆ. ಹೀಗೆ ಉತ್ಪಾದನೆಯಾದ ಹಾಲು ಸ್ಥಳದಲ್ಲೇ ಸಂಸ್ಕರಿಸಲ್ಪಡಬಹುದು ಅಥವಾ ಸಂಸ್ಕರಿಸುವಿಕೆ ಮತ್ತು ಕೊನೆಯ ಚಿಲ್ಲರೆ ಮಾರಾಟಕ್ಕೆ ಸಂಬಂಧಿಸಿದಂತೆ ಹೈನು ಕಾರ್ಖಾನೆಯೊಂದಕ್ಕೆ ಸಾಗಣೆ ಮಾಡಲ್ಪಡಬಹುದು.

ಬಹುಪಾಲು ಹೈನು ಕೇಂದ್ರಗಳು ತಮ್ಮ ಹಸುಗಳಿಂದ ಹುಟ್ಟಿದ ಗಂಡು ಕರುಗಳನ್ನು ಮಾರಾಟಮಾಡುತ್ತವೆ. ಇದು ಸಾಮಾನ್ಯವಾಗಿ ಕರುವಿನ ಮಾಂಸದ ಉತ್ಪಾದನೆಗಾಗಿ ಬಳಸಲ್ಪಡಬಹುದು, ಅಥವಾ ಹಾಲು-ಉತ್ಪಾದಿಸದ ಪ್ರಾಣಿಗಳಾಗಿ ಅವನ್ನು ಪೋಷಿಸುವ ಬದಲಿಗೆ, ಹೋರಿ ಕರುವಿನ ಗುಣಮಟ್ಟವನ್ನು ಅವಲಂಬಿಸಿ ತಳಿ ಸಾಕುವಿಕೆಗಾಗಿ ಅವು ಬಳಸಲ್ಪಡಬಹುದು. ವಿಶಿಷ್ಟವೆಂಬಂತೆ, ಅನೇಕ ಹೈನು ಕೇಂದ್ರಗಳು ತಮ್ಮದೇ ಆದ ಪಶು ಆಹಾರವನ್ನೂ ಬೆಳೆಯುತ್ತವೆ. ಮೆಕ್ಕೆಜೋಳ, ಕುದುರೆ ಮೇವಿನ ಸೊಪ್ಪು, ಮತ್ತು ಒಣಹುಲ್ಲು ಇತ್ಯಾದಿಗಳು. ಇದನ್ನು ಹಸುಗಳಿಗೆ ನೇರವಾಗಿ ತಿನ್ನಿಸಲಾಗುತ್ತದೆ, ಅಥವಾ ಇದನ್ನು ಹಗೇವಿನಲ್ಲಿ ಕೂಡಿಟ್ಟ ಮೇವಿನ ರೀತಿಯಲ್ಲಿ ಸಂಗ್ರಹಿಸಿಟ್ಟು, ಚಳಿಗಾಲದ ಋತುವಿನ ಅವಧಿಯಲ್ಲಿ ಬಳಸಲಾಗುತ್ತದೆ. ಹಾಲಿನ ಉತ್ಪಾದನೆಯ ಗುಣಮಟ್ಟವನ್ನು ಹೆಚ್ಚಿಸುವುದಕ್ಕೋಸ್ಕರ, ಆಹಾರಕ್ರಮದ ಹೆಚ್ಚುವರಿ ಪೂರಕ ಅಂಶಗಳನ್ನು ಪಶು ಆಹಾರಕ್ಕೆ ಸೇರಿಸಲಾಗುತ್ತದೆ.

ಕೇಂದ್ರೀಕೃತ ಹೈನುಗಾರಿಕೆ ಎಂಬುದಾಗಿ ನಾವು ಅರ್ಥೈಸಿಕೊಳ್ಳುವ ಹೈನುಗಾರಿಕೆಯು ಹಳ್ಳಿಗಳು ಮತ್ತು ನಗರಗಳ ಸುತ್ತ ಪ್ರಧಾನವಾಗಿ ಅಭಿವೃದ್ಧಿ ಹೊಂದಿತು. ಮೇಯಿಸುವ ಹುಲ್ಲು ನೆಲದ ಒಂದು ಕೊರತೆಯಿಂದಾಗಿ ನಗರಗಳ ನಿವಾಸಿಗಳು ತಮ್ಮದೇ ಸ್ವಂತದ ಹಸುಗಳನ್ನು ಹೊಂದಲು ಅಸಮರ್ಥರಾಗಿದ್ದರು. ಹೆಚ್ಚುವರಿ ಪ್ರಾಣಿಗಳನ್ನು ಹೊಂದುವ ಮೂಲಕ ಮತ್ತು ಪಟ್ಟಣದಲ್ಲಿ ಹಾಲನ್ನು ಮಾರಾಟ ಮಾಡುವ ಮೂಲಕ, ಪಟ್ಟಣದ ಸಮೀಪವಿರುವ ರೈತರು ಒಂದಷ್ಟು ಹೆಚ್ಚುವರಿ ಹಣವನ್ನು ಸಂಪಾದಿಸಲು ಸಾಧ್ಯವಿತ್ತು.

ಮುಂಜಾನೆಯಲ್ಲಿ ಹಾಲನ್ನು ಪೀಪಾಯಿಗಳಿಗೆ ತುಂಬಿಸುತ್ತಿದ್ದ ಹೈನು ಕೃಷಿಕರು, ಅದನ್ನು ಹೇರುಬಂಡಿಯೊಂದರ ಮೇಲೆ ಮಾರುಕಟ್ಟೆಗೆ ತರುತ್ತಿದ್ದರು. 1800ರ ದಶಕದ ಅಂತ್ಯದವರೆಗೆ, ಕೈನಿಂದ ಹಸುವಿನ ಹಾಲು ಕರೆಯಲಾಗುತ್ತಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ, ಕೆಲವೊಂದು ಈಶಾನ್ಯದ ಸಂಸ್ಥಾನಗಳು ಹಾಗೂ ಪಶ್ಚಿಮ ಭಾಗದಲ್ಲಿ ಹಲವಾರು ಬೃಹತ್‌‌ ಹೈನು ಕಾರ್ಯಾಚರಣೆಗಳು ಅಸ್ತಿತ್ವದಲ್ಲಿದ್ದವು. ಇವು ಏನಿಲ್ಲವೆಂದರೂ ನೂರು ಹಸುಗಳನ್ನು ಒಳಗೊಂಡಿದ್ದವು, ಹಾಲು ಕರೆಯುವ ಓರ್ವ ಪ್ರತ್ಯೇಕ ವ್ಯಕ್ತಿಯು ದಿನವೊಂದಕ್ಕೆ ಒಂದು ಡಜನ್‌‌ ಹಸುಗಳಿಗಿಂತ ಹೆಚ್ಚು ಹಸುಗಳಿಂದ ಹಾಲು ಕರೆಯುತ್ತಾನೆ ಎಂಬುದು ಅಸಾಧ್ಯವಾದ ಮಾತು. ಹೀಗಾಗಿ ಚಿಕ್ಕದಾದ ಕಾರ್ಯಾಚರಣೆಗಳು ಮೇಲುಗೈ ಸಾಧಿಸಿದ್ದವು.

ಕೊಟ್ಟಿಗೆಯೊಂದರಲ್ಲಿನ ಒಳಾಂಗಣಗಳಲ್ಲಿ ಹಾಲುಕರೆಯುವಿಕೆಯು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಸುವಿನ ಕುತ್ತಿಗೆಯನ್ನು ಹಗ್ಗಗಳಿಂದ ಕಟ್ಟಲಾಗುತ್ತಿತ್ತು ಅಥವಾ ಕೊಟ್ಟಿಗೆ ಕಂಬಗಳಿಂದ ಅವು ಯುಕ್ತ ಸ್ಥಳದಲ್ಲಿ ಹಿಡಿದಿಡಲ್ಪಟ್ಟಿರುತ್ತಿದ್ದವು. ಹಾಲುಕರೆಯುವಿಕೆಯೊಂದಿಗೆ ಹಸುವಿನ ಪೋಷಣೆಯೂ ಏಕಕಾಲಿಕವಾಗಿ ಕೊಟ್ಟಿಗೆಯಲ್ಲಿ ನಡೆಯುತ್ತಿತ್ತಾದರೂ, ಬಹುಪಾಲು ಹೈನು ಹಸುಗಳನ್ನು ಹಾಲುಕರೆಯುವಿಕೆಯ ಅವಧಿಗಳ ನಡುವೆ ದಿನದ ವೇಳೆ ಮೇಯಿಸಲಾಗುತ್ತಿತ್ತು.

ತಂಪು ತಾಪಮಾನವು ಇಲ್ಲಿ ಪ್ರಮುಖ ವಿಧಾನವಾಗಿದ್ದು, ಇದರಿಂದ ಹಾಲಿನ ತಾಜಾತನದ ಅವಧಿಯು ವಿಸ್ತರಿಸಲ್ಪಡುತ್ತದೆ. ಗಾಳಿಯಂತ್ರಗಳು ಮತ್ತು ಬಾವಿಯ ಪಂಪುಗಳ ಆವಿಷ್ಕಾರವಾದಾಗ, ಒಕ್ಕಲು ಜಮೀನಿನಲ್ಲಿನ ಪ್ರಾಣಿಗಳಿಗಾಗಿ ನೀರನ್ನು ಒದಗಿಸುವುದರ ಜೊತೆಗೆ, ಹಾಲನ್ನು ತಂಪಾಗಿಸುವುದಕ್ಕಾಗಿಯೂ ಅವನ್ನು ಬಳಸುತ್ತಿದ್ದುದು ಅವುಗಳ ಮೊದಲ ಬಳಕೆಗಳಲ್ಲಿ ಒಂದಾಗಿತ್ತು.ಪಟ್ಟಣದ ಮಾರುಕಟ್ಟೆಗೆ ಸಾಗಣೆ ಮಾಡಲ್ಪಡುವುದಕ್ಕೆ ಮುಂಚಿತವಾಗಿ ಹಾಲಿನ ಸಂಗ್ರಹಣಾ ಅವಧಿಯನ್ನು ವಿಸ್ತರಿಸುವ ಸಲುವಾಗಿ ಈ ಕ್ರಮವನ್ನು ಅನುಸರಿಸಲಾಗುತ್ತಿತ್ತು.

ಒಂದು ತೊಟ್ಟಿಯೊಳಗೆ ಅಥವಾ ಹಾಲುಕರೆದ ನಂತರ ತಂಪಾಗಿಸಲು ತೊಟ್ಟಿಯೊಳಗೆ ಸಜ್ಜುಗೊಳಿಸಲಾದ ಇತರ ಧಾರಕಗಳೊಳಗೆ, ಸ್ವಾಭಾವಿಕವಾಗಿ ತಣ್ಣಗಿರುವ ಅಂತರ್ಜಲವನ್ನು ನಿರಂತರವಾಗಿ ಪಂಪುಮಾಡಲಾಗುತ್ತದೆ. ಹಾಲನ್ನು ತಂಪಾಗಿಸುವ ಈ ವಿಧಾನವು, ವಿದ್ಯುಶ್ಚಕ್ತಿ ಮತ್ತು ಶೈತ್ಯೀಕರಣದ ಆಗಮನಕ್ಕೆ ಮುಂಚೆ ಅತೀವವಾಗಿ ಜನಪ್ರಿಯವಾಗಿತ್ತು.

ಹೈನುಗಾರಿಕೆ ವಿಧಾನಗಳು ಮತ್ತು ಮಾಹಿತಿ
ಹಾಲುಕರೆಯುವ ಯಂತ್ರ

ಶೈತ್ಯೀಕರಣಮೊದಲ ಬಾರಿಗೆ ಪರಿಚಯವಾದ ಹಾಲುಕರೆಯುವ ಯಂತ್ರಗಳು, ಸಾಂಪ್ರದಾಯಿಕ ಹಾಲುಕರೆಯುವ ಕೊಳಗದ ಒಂದು ವಿಸ್ತರಣೆಯಾಗಿದ್ದವು. ಮುಂಚೆಯಿದ್ದ ಹಾಲು ಕರೆಯುವ ಸಾಧನವನ್ನು ಎಂದಿನ ಹಾಲು ಕೊಳಗವೊಂದರ ಮೇಲ್ಭಾಗಕ್ಕೆ ಜೋಡಿಸಿರಲಾಗುತ್ತಿತ್ತು. ಈ ಕೊಳಗವು ಹಸುವಿನ ಅಡಿಯಲ್ಲಿ ನೆಲದ ಮೇಲೆ ಸ್ಥಿತವಾಗಿರುತ್ತಿತ್ತು. ಪ್ರತಿಯೊಂದು ಹಸುವಿನಿಂದಲೂ ಹಾಲು ಕರೆದ ನಂತರ, ತುಂಬಿದ ಬಕೆಟ್ಟನ್ನು ಒಂದು ಸಂಗ್ರಾಹಕ ತೊಟ್ಟಿಯೊಳಗೆ ಸುರಿಯಲಾಗುತ್ತಿತ್ತು. ಏರಿಳಿಯುತ್ತಾ ತೂಗಾಡುವ ಹಾಲು ಕರೆಯುವ ಸಾಧನವಾಗಿ ಇದು ಅಭಿವೃದ್ಧಿ ಹೊಂದಿತು. ಹಸುವೊಂದರಿಂದ ಹಾಲುಕರೆಯುವುದಕ್ಕೆ ಮುಂಚಿತವಾಗಿ, ಜೀನುಪಟ್ಟಿ ಎಂದು ಕರೆಯಲಾಗುತ್ತಿದ್ದ ಒಂದು ದೊಡ್ಡದಾಗಿರುವ ಅಗಲವಾದ ಚರ್ಮದ ಪಟ್ಟಿಯನ್ನು ಹಸುವಿಗೆ ಸುತ್ತಲೂ ಸುತ್ತಿ, ಹಸುವಿನ ಬೆನ್ನಿನ ಕೆಳಭಾಗದಿಂದ ಬರುವಂತೆ ಮಾಡಲಾಗುತ್ತಿತ್ತು. ಹಸುವಿನ ಅಡಿಯಲ್ಲಿ ಬರುವಂತೆ, ಹಾಲು ಕರೆಯುವ ಸಾಧನ ಮತ್ತು ಸಂಗ್ರಹಣಾ ತೊಟ್ಟಿಯನ್ನು ಪಟ್ಟಿಯಿಂದ ನೇತುಹಾಕಲಾಗುತ್ತಿತ್ತು. ನೆಲದ ಮೇಲಿರಿಸಿರುವ ಬಕೆಟ್ಟೊಂದರ ಮೇಲೆ ಹಸುವು ಕರಾರುವಾಕ್ಕಾಗಿ ನಿಲ್ಲುವುದಕ್ಕೆ ಬದಲಾಗಿ, ಹಾಲುಕರೆಯುವ ಪ್ರಕ್ರಿಯೆಯ ಸಂದರ್ಭದಲ್ಲಿ ಅದು ಸ್ವಾಭಾವಿಕವಾಗಿ ಅತ್ತಿತ್ತ ಚಲಿಸುವುದಕ್ಕೆ ಈ ನಾವೀನ್ಯತೆಯು ಅವಕಾಶ ಕಲ್ಪಿಸಿತು.

ವಿದ್ಯುಚ್ಛಕ್ತಿಯ ಮತ್ತು ಹೀರುವ ಮೂಲಕ ಹಾಲುಕರೆಯುವ ಯಂತ್ರಗಳ ಲಭ್ಯತೆಯಿಂದಾಗಿ, ಕೊಟ್ಟಿಗೆಕಂಬವನ್ನೊಳಗೊಂಡ ಕೊಟ್ಟಿಗೆಗಳಲ್ಲಿ ಸಾಧ್ಯವಿದ್ದ ಉತ್ಪಾದನಾ ಮಟ್ಟಗಳು ಹೆಚ್ಚಿಸಲ್ಪಟ್ಟವಾದರೂ, ತೀವ್ರ ಸ್ವರೂಪದ ಪ್ರಯಾಸದಾಯಕ ಹಾಲುಕರೆಯುವ ಪ್ರಕ್ರಿಯೆಯಿಂದಾಗಿ ಕಾರ್ಯಾಚರಣೆಗಳ ಪ್ರಮಾಣವು ಸೀಮಿತಗೊಳಿಸಲ್ಪಡುವುದು ಮುಂದುವರಿಯಿತು. ಹಾಲುಕರೆಯುವ ಯಂತ್ರಗಳನ್ನು ಜೋಡಿಸುವ ಮತ್ತು ತೆಗೆಯುವ ಪ್ರಕ್ರಿಯೆಯಲ್ಲಿ, ತುಂಬಾ ಭಾರವಿದ್ದ ಯಂತ್ರೋಪಕರಣವನ್ನು ಮತ್ತು ಅದರ ವಸ್ತುಗಳನ್ನು ಮತ್ತೆಮತ್ತೆ ಎತ್ತಬೇಕಾಗಿ ಬರುತ್ತಿತ್ತು.ಅಷ್ಟೇ ಅಲ್ಲ, ಈ ಕೆಲಸವು ಪ್ರತಿ ಹಸುವಿಗೂ ಪುನರಾವರ್ತನೆಗೊಳ್ಳುತ್ತಿತ್ತು ಹಾಗೂ ಕರೆಯಲ್ಪಟ್ಟ ಹಾಲನ್ನು ಹಾಲಿನ ಕ್ಯಾನುಗಳಿಗೆ ಮತ್ತೆಮತ್ತೆ ಸುರಿಯಬೇಕಾಗಿ ಬರುತ್ತಿತ್ತು. ಇದರ ಪರಿಣಾಮವಾಗಿ, 50ಕ್ಕೂ ಹೆಚ್ಚಿನ ಹಸುಗಳನ್ನು ಹೊಂದಿದ್ದ ಏಕ-ಕೃಷಿಕ ಕಾರ್ಯಾಚರಣೆಗಳನ್ನು ಕಂಡುಕೊಳ್ಳುವುದು ಅಪರೂಪವಾಗಿತ್ತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬೆನ್ನು ನೋವು

ಬೆನ್ನು ನೋವು, ಎಲ್ಲರಲ್ಲಿ ಕಾಣುವ ಸಮಸ್ಯೆಯಾಗಿದೆ

ಪಂಚ ಪಾಂಡವರು

ದೇವತೆಗಳ ಅಂಶ ಪಂಚ ಪಾಂಡವರು