in ,

ಸಪೋಟ ಹಣ್ಣು/ಚಿಕ್ಕು ಹಣ್ಣಿನ ಮಹತ್ವ

ಸಪೋಟ ಹಣ್ಣು
ಸಪೋಟ ಹಣ್ಣು

ಸಪೋಟ ಒಂದು ಪ್ರಮುಖ ಹಣ್ಣಿನ ಮರ. ಮೂಲತಃ ವೆಸ್ಟ್ ಇಂಡೀಸ್ ಹಾಗೂ ಮೆಕ್ಸಿಕೋಮೂಲಸ್ಥಾನ. ಕರ್ನಾಟಕದಲ್ಲಿ ಕರಾವಳಿ ಹಾಗೂ ಒಳನಾಡಿನಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಯೂರೋಪಿಯನ್ನರು, ಅದರಲ್ಲೂ ಪೋರ್ಚುಗೀಸರು ಭಾರತಕ್ಕೆ ಬಂದಾಗ ಹಲವಾರು ತರಕಾರಿ ಹಣ್ಣುಗಳ ಬೀಜಗಳನ್ನು ತಂದು ನೆಟ್ಟರು. ಅವುಗಳಲ್ಲಿ ಆಲ್ಫಾನ್ಸೋ ಮಾವಿನ ಹಣ್ಣು, ಅನಾನಸ್, ಆಲೂಗೆಡ್ಡೆ, ಮೆಣಸಿನಕಾಯಿ, ಸಪೋಟ, ಮುಖ್ಯವಾದವುಗಳು. ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಬೆಳೆಯುವ ಉತ್ಕೃಷ್ಟ ಮಟ್ಟದ ವಿಶ್ವ ಪ್ರಸಿದ್ಧ ‘ಹಾಪೂಸ್ ಮಾವಿನಹಣ್ಣು’ಗಳ ಗುಣಮಟ್ಟವನ್ನು ಸುಧಾರಿಸಿದ ಖ್ಯಾತಿ ಅವರಿಗೆ ಸೇರಬೇಕು.

ಭಾರತದಲ್ಲಿ ಸಪೋಟ ಹಣ್ಣನ್ನು ಹೆಚ್ಚಾಗಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಬೆಳೆಯುತ್ತಾರೆ. ಸಪೋತ ಹಣ್ಣಿನ ಜ್ಯೂಸ್, ಜಾಮ್, ಸ್ಮೂಥಿ, ಸಿಹಿ ತಿಂಡಿಗಳು ಇತ್ಯಾದಿಗಳನ್ನು ತಯಾರಿಸುವರು.

ಸಪೋಟ ಹಣ್ಣು/ಚಿಕ್ಕು ಹಣ್ಣಿನ ಮಹತ್ವ
ಸಪೋಟ ಹಣ್ಣು

ಸಪೋಟ ಹಣ್ಣಿನಲ್ಲಿ ಸಸ್ಯಜನ್ಯವಾಗಿರುವಂತಹ ಪಾಲಿಪೆನಾಲ್ ಇದ್ದು, ಹೊಟ್ಟೆಯಲ್ಲಿ ಇದು ಆಮ್ಲದ ಸ್ರವಿಸುವಿಕೆಯನ್ನು ತಟಸ್ಥಗೊಳಿಸುವುದು. ಪರಾವಲಂಬಿ ವಿರೋಧಿ, ವೈರಲ್ ವಿರೋಧಿ, ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವಂತಹ ಸಪೋಟ ಹಣ್ಣು ಕಿರಿಕಿರಿ ಉಂಟು ಮಾಡುವ ಹೊಟ್ಟೆಗೆ ಶಮನ ನೀಡುವುದು.

ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಯ ಇತರ ಸಮಸ್ಯೆಗಳನ್ನು ಇದು ನಿವಾರಿಸುವುದು. ನಾರಿನಾಂಶವು ಅಧಿಕವಾಗಿ ಇರುವ ಕಾರಣದಿಂದಾಗಿ ಜೀರ್ಣಕ್ರಿಯೆಗೆ ಇದು ಸಹಕಾರಿ ಮತ್ತು ಮಲಬದ್ಧತೆ ಇರುವವರಿಗೆ ವಿರೇಚಕವಾಗಿ ವರ್ತಿಸುವುದು. ಇದು ಹೊಟ್ಟೆಯ ಸೋಂಕನ್ನು ತಗ್ಗಿಸುವುದು.

ಖನಿಜಾಂಶಗಳಾಗಿರುವ ಕ್ಯಾಲ್ಸಿಯಂ, ಪೋಸ್ಪರಸ್, ತಾಮ್ರ ಮತ್ತು ಕಬ್ಬಿನಾಂಶವು ಮೂಳೆಯನ್ನು ಬಲಗೊಳಿಸುವುದು. ನಿಯಮಿತವಾಗಿ ಚಿಕ್ಕು ತಿಂದರೆ ಅದರಿಂದ ಮೂಳೆಗಳ ಗುಣಮಟ್ಟವು ಸುಧಾರಣೆ ಆಗುವುದು.

ಚಿಕ್ಕು ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಸರ್ಗದತ್ತವಾಗಿ ನಿಮಗೆ ಫ್ರಕ್ಟೋಸ್ ಮತ್ತು ಸುಕ್ರೋಸ್ ಅಂಶಗಳು ಸಿಗುತ್ತವೆ. ಇವುಗಳು ಬೇರೆ ಯಾವುದೇ ಸಕ್ಕರೆ ರೂಪಗಳಿಗೆ ಹೋಲಿಸಿದರೆ ಬಹಳ ಆರೋಗ್ಯಕರ ಎಂಬುದು ಸಾಬೀತಾಗಿದೆ. ಇದರ ಜೊತೆಗೆ ಬಹಳ ಬೇಗನೆ ನಿಮಗೆ ಶಕ್ತಿ ಕೂಡ ಸಿಗಲಿದೆ.

ಆಹಾರಪದ್ಧತಿಯಲ್ಲಿ ನಾವು ನಾರಿನ ಅಂಶವನ್ನು ಹೆಚ್ಚಾಗಿ ಬಳಕೆ ಮಾಡಿದರೆ ಒಳ್ಳೆಯದು. ಏಕೆಂದರೆ ನಾರಿನ ಅಂಶ ಹೆಚ್ಚಾಗಿರುವ ಹಣ್ಣು ಮತ್ತು ತರಕಾರಿಗಳು ಸಹ ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸಿ ಸರಾಗವಾಗಿ ಮಲ ವಿಸರ್ಜನೆ ಆಗುವಂತೆ ಮಾಡುತ್ತದೆ. ಮಲಬದ್ಧತೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತವೆ. ಸುಮಾರು 100 ಗ್ರಾಂ ಚಿಕ್ಕು ಹಣ್ಣಿನಲ್ಲಿ 5ಗ್ರಾಂ ನಾರಿನಾಂಶವನ್ನು ಒಳಗೊಂಡಿರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಹಾಗಾಗಿ ಪ್ರತಿದಿನ ಚಿಕ್ಕು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಕೇವಲ ಮಲಬದ್ಧತೆ ಸಮಸ್ಯೆಯಿಂದ ದೂರ ಉಳಿಯುವುದು ಮಾತ್ರವಲ್ಲದೆ ಅಜೀರ್ಣ ಸಮಸ್ಯೆಯಿಂದ ಸಹ ಮುಕ್ತಿ ಪಡೆಯಬಹುದು.

ತಾಮ್ರದ ಕೊರತೆ ಇದ್ದರೆ ಆಗ ಅಸ್ಥಿರಂಧ್ರತೆ ಸಮಸ್ಯೆ ಕಾಡುವುದು. ಸಪೋತ ಹಣ್ಣು ಮೂಳೆಗಳು, ಸ್ನಾಯುಗಳ ಮತ್ತು ಅಂಗಾಂಶಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಬೆಳೆಯುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಇದು ತುಂಬಾ ಒಳ್ಳೆಯದು. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಇದು ಒದಗಿಸುವುದು. ಇದರಿಂದ ಆರೋಗ್ಯಕರ ಜೀವನ ಸಾಗಿಸಬಹುದು.

ಸಪೋಟ ಹಣ್ಣು/ಚಿಕ್ಕು ಹಣ್ಣಿನ ಮಹತ್ವ
ಸಪೋಟ ಹಣ್ಣು

ಚಿಕ್ಕುಸ್ ನಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಸಿಗುತ್ತದೆ. ಇವುಗಳ ಕಾರಣದಿಂದ ನಿಮ್ಮ ರೋಗ ನಿರೋಧಕ ಶಕ್ತಿ ತಾನಾಗಿಯೇ ವೃದ್ಧಿಯಾಗುತ್ತದೆ. ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶ ಪೊಟ್ಯಾಶಿಯಂ ಅಂಶ ವಿಟಮಿನ್ ಎ ವಿಟಮಿನ್ ಸಿ ನಿಯಾಸಿನ್ ತಾಮ್ರದಂಶ ಹೆಚ್ಚಾಗುವ ಮೂಲಕ ಬಲವಾದ ರೋಗನಿರೋಧಕ ಶಕ್ತಿಯಿಂದ ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಗಳನ್ನು ದೂರ ಇಟ್ಟು ನಿಮ್ಮನ್ನು ಆರೋಗ್ಯವಂತರನ್ನಾಗಿ ಇರಿಸುವ ಭಾರ ಚಿಕ್ಕುಸ್ ನಲ್ಲಿ ಸೇರಿದೆ. ಆಗಲಿ ಪ್ರತಿದಿನವೂ ಅವುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಸೀಬೆಹಣ್ಣು ಮತ್ತು ಕಿತ್ತಳೆ ಹಣ್ಣುಗಳಿಗಿಂತ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್-ಸಿ ಎಂಬ ಪ್ರಮುಖವಾದ ಅಂಶ ಇರುವುದರಿಂದ ನಿಮ್ಮ ತ್ವಚೆಗೆ ಸಾಕಷ್ಟು ಅನುಕೂಲಕರ ಎಂದು ಹೇಳಬಹುದು.
ಇದ್ದಕ್ಕಿದ್ದಂತೆ ಚರ್ಮದ ಮೇಲೆ ಸುಕ್ಕುಗಳು ಕಂಡುಬರುವುದು ಸಣ್ಣಸಣ್ಣ ಗೆರೆಗಳು ಮೂಡಿಬರುವ ಯಾವುದೇ ಸಮಸ್ಯೆಗಳು ಆನಂತರದಲ್ಲಿ ಇರುವುದಿಲ್ಲ. ಹಾಗಾಗಿ ಆಹಾರ ಪದ್ಧತಿಯಲ್ಲಿ ಸಪೋಟ ಹಣ್ಣಿಗೆ ಜಾಗ ಕೊಡಿ.

​ಮೂಳೆಗಳಿಗೆ ಹೆಚ್ಚು ಪ್ರಯೋಜನಕಾರಿ
ಬೇರೆ ದೇಶದವರಿಗೆ ಹೋಲಿಸಿದರೆ ನಾವು ಭಾರತೀಯರು ಸದೃಡವಾದ ಮೂಳೆಗಳನ್ನು ಮೈಯಲ್ಲಿ ಹೊಂದಿಲ್ಲ ಎಂಬುದು ಸಂಶೋಧನೆಗಳಿಂದ ಸಾಬೀತಾಗುತ್ತದೆ. ಏಕೆಂದರೆ ಬೇರೆ ದೇಶದವರು ತಿನ್ನುವ ಪ್ರಮಾಣದಲ್ಲಿ ನಾವು ಹಣ್ಣುಗಳನ್ನು ಸೇವನೆ ಮಾಡುವುದಿಲ್ಲ.
ಅದರಲ್ಲೂ ಬಹುತೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮತ್ತು ಈಗ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳಲ್ಲಿ ಸಹ ಜನರು ಚಿಕ್ಕುಸ್ ಹಣ್ಣುಗಳನ್ನು ಮೊದಲ ಪ್ರಾಮುಖ್ಯತೆಯಿಂದ ಸೇವನೆ ಮಾಡುತ್ತಾರೆ.

ತನ್ನಲ್ಲಿ ಅಪಾರ ಪ್ರಮಾಣದ ಫಾಸ್ಪರಸ್ ಮತ್ತು ಕಬ್ಬಿಣದ ಅಂಶವನ್ನು ಒಳಗೊಂಡಿರುತ್ತದೆ. ಇದರಿಂದ ನಿಮ್ಮ ಮೂಳೆಗಳು ಬಹುತೇಕ ಗಟ್ಟಿಯಾಗುತ್ತವೆ. ಹಾಗಾಗಿ ಇನ್ನು ಮುಂದೆಯಾದರೂ ನಿಮ್ಮ ಆಹಾರಕ್ರಮದಲ್ಲಿ ಚಿಕ್ಕುಸ್ ಅಳವಡಿಸಿ ಸೇವನೆ ಮಾಡಿ.

​ಕ್ಯಾನ್ಸರ್ ಸಮಸ್ಯೆಯಿಂದ ನಿವಾರಣೆ ಆಗುತ್ತದೆ
ಚಿಕ್ಕು ಹಣ್ಣಿನಲ್ಲಿ ಅತ್ಯಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್ ಅಂಶ ಲಭ್ಯವಿದೆ. ಜೊತೆಗೆ ವಿಟಮಿನ್-ಸಿ ಅಂಶ ಕೂಡ ಹೆಚ್ಚಾಗಿರುವುದರಿಂದ ನಿಮ್ಮ ಜೀವಕೋಶಗಳಿಗೆ ಉಂಟಾಗುವ ಹಾನಿಯನ್ನು ಇದು ತಪ್ಪಿಸುತ್ತದೆ.

ಪೋಷಕಾಂಶಗಳ ಕಾರಣದಿಂದಾಗಿ ಸಪೋಟವನ್ನು ಸುಪರ್ ಫುಡ್ ಅಥವಾ ಅತಿ ಪ್ರಬಲ ಆಹಾರಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಇದರ ಗುಣಗಳಲ್ಲಿ ಕ್ಯಾನ್ಸರ್ ನಿವಾರಕ ಗುಣವೂ ಒಂದಾಗಿದೆ. ಈ ಹಣ್ಣಿನಲ್ಲಿ ಕರಗುವ ನಾರು, ಸಕ್ಷಮ ಆಂಟಿ ಆಕ್ಸಿಡೆಂಟುಗಳು ಹಾಗೂ ಕ್ಯಾನ್ಸರ್ ನಿರೋಧಕ ಗುಣವಿರುವ ವಿಟಮಿನ್ ಎ ಕ್ಯಾನ್ಸರ್ ಕಾರಕ ಕಣಗಳನ್ನು ನಿವಾರಿಸುವಲ್ಲಿ ಬೆಂಬಲ ನೀಡುವ ಮೂಲಕ ಹಲವು ಬಗೆಯ ಕ್ಯಾನ್ಸರುಗಳಿಂದ ರಕ್ಷಣೆ ಒದಗಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪಾರ್ವತಿ ಪುತ್ರ ಸುಬ್ರಮಣ್ಯ

ಕಾರ್ತಿಕೇಯ, ಪಾರ್ವತಿ ಪುತ್ರ ಸುಬ್ರಮಣ್ಯ

ಇಂದು ಭಯಂಕರ ಮಂಗಳವಾರ!4ರಾಶಿಯವರಿಗೆ ಲಕ್ಷ್ಮೀದೇವಿ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ ದುಡ್ಡು

ಇಂದು ಭಯಂಕರ ಮಂಗಳವಾರ!4ರಾಶಿಯವರಿಗೆ ಲಕ್ಷ್ಮೀದೇವಿ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ ದುಡ್ಡು