ಮೇಷ ರಾಶಿ ಕೊಡುಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿವೆ.ಅನಿವಾರ್ಯವಾಗಿ ದೂರ ಪ್ರಯಾಣಕೈಗೊಳ್ಳಬೇಕಾಗುವುದು.ಕೃಷಿ ಕೆಲಸಗಳಿಗಾಗಿ ಪರಿಶ್ರಮ ವಹಿಸುವಿರಿ.ವಾಹನ ಚಲಾಯಿಸುವಾಗ ಹೆಚ್ಚಿನ ಎಚ್ಚರಿಕೆ ಅತ್ಯಗತ್ಯ.
ಶಾಲಾ ಮಕ್ಕಳ ಸನ್ಮಾನದಂತಹ ಕಾರ್ಯಕ್ರಮಗಳಲ್ಲಿ ಅವರ ಸಂತೋಷ ನಿಮ್ಮ ಆನಂದಬಾಷ್ಪಕ್ಕೆ ಕಾರಣವಾಗುವುದು. ಅಯೋಗ್ಯರಿಗೆ ಜವಾಬ್ದಾರಿಗಳನ್ನು ಕೊಡವುದು ಬೇಡ.ವೃಷಭ ರಾಶಿ ಕುಟುಂಬದ ಅಭಿವೃದ್ಧಿಯಲ್ಲಿ ನಿಮ್ಮ ಅವಿರತ ಪ್ರಯತ್ನ ಫಲಕಾರಿಯಾಗುವುದು.ಸಜ್ಜನರ ಸಹವಾಸದಿಂದ ಪ್ರಾಪಂಚಿಕ ಜ್ಞಾನವೃದ್ಧಿ, ಉನ್ನತ ಅಧಿಕಾರಿಗಳ ಮೇಲೆ ಇದ್ದ ತಪ್ಪು ತಿಳುವಳಿಕೆಗಳು ದೂರಾಗುವಂತಾಗುವುದು.ಯಾರದ್ದೋ ಮಾತು ಕೇಳಿ ಸಣ್ಣಪುಟ್ಟ ಅನಾರೋಗ್ಯವನ್ನು ನಿವಾರಿಸಿಕೊಳ್ಳಲು ವಿಚಿತ್ರವಾದ ಔಷಧ ಉಪಯೋಗ ಮಾಡಬೇಡಿ
ಮಿಥುನ ರಾಶಿ ವೈವಾಹಿಕ ಜೀವನದಲ್ಲಿ ನಿಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳ- ಬೇಕೆಂದು ತೀರ್ಮಾನಿಸಿದ್ದರೂ, ಅದು ಅಷ್ಟು ಸುಲಭವಾಗಿ ನಡೆಯುವುದಿಲ್ಲ. ಕೃಷಿಗೆ ಸಂಬಂಧಿಸಿದಂತೆ ಪಡೆದ ಸಾಲವನ್ನು ಹಿಂದಿರುಗಿಸುವ ಶಕ್ತಿ ದೊರಕಲಿದೆ. ಮೇಲಾಧಿಕಾರಿಗಳಿಂದ ನಿಮಗೆ ಪ್ರಶಂಸೆ ಸಿಗಲಿದೆ ಕರ್ಕಾಟಕ ರಾಶಿ ನಿಮ್ಮ ಬದುಕಿಗೊಂದು ಹೊಸ ಆಯಾಮ ಸಿಗಲಿದೆ. ಈ ತಿರುವಿನಲ್ಲಿ ನಿಮ್ಮಸ್ನೇಹಿತನ ಪಾತ್ರ ತುಂಬ ಪ್ರಮುಖವಾಗಿರುತ್ತದೆ. ಬಹುಕಾಲಗಳಿಂದ ಬಾಕಿ ಇರುವ ಸಾಲ ತೀರಿಸುವಿಕೆಯಂತಹ ಯೋಜನೆ ಇದ್ದರೆ ಒಳ್ಳೆಯದು.ನಿಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಖುಷಿಯ ಸಮಯಗಳನ್ನು ಕಳೆಯುತ್ತೀರಾ.
ಸಿಂಹ ರಾಶಿ ತಲೆ, ಮಾನಸಿಕ ಅಸ್ವಸ್ಥತೆಯಂಥ ತೊಂದರೆಗಳುಂಟಾಗುವ ಸಂಭವ. ಅನಗತ್ಯ ವಿಚಾರಗಳ ಬಗ್ಗೆ ಚಿಂತೆ ಬೇಡ. ವ್ಯಾಪಾರ ಮಾಡುತ್ತಿರುವವ- ರು ತಮ್ಮವ್ಯವಹಾರವನ್ನು ವಿದೇಶಕ್ಕೆ ಪಸರಿಸುವಯೋಚನೆ ಮಾಡಬಹುದು.ಕನ್ಯಾ ರಾಶಿ ಅಧಿಕಾರಿ ವರ್ಗದವರಿಂದ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಶಂಸೆ ಕೇಳುವಿರಿ.ಯಾವುದೇರೀತಿಯ ವಾಗ್ದಾನಗಳನ್ನು ಮಾಡುವಾಗ ಹಲವು ಬಾರಿ ಯೊಚಿಸಿ, ಉಳಿಸಿಕೊಳ್ಳಲು ಕಷ್ಟವಾಗುವಂಥ ಮಾತುಗಳನ್ನು ಕೊಡದಿರಿ. ಆದಷ್ಟು ಹಣವನ್ನು ಬಹಳಷ್ಟು ಖರ್ಚು ಮಾಡುತ್ತೀರಾ.
ತುಲಾ ರಾಶಿ ಒತ್ತಾಯ ಪೂರ್ವಕವಾಗಿ ಮಾಡುತ್ತಿರುವ ಕೆಲಸಕಾರ್ಯಗಳನ್ನು ಬಿಡಬೇಕು ಎನ್ನುವ ಮನೋಭಾವದ ಸಾಧ್ಯತೆ. ಕೀಲು ನೋವು, ವಾತದಂಥ ಕಾಯಿಲೆಯಿಂದ ಬಳಲುತ್ತಿರುವವರು ಆರೋಗ್ಯದ ಮೇಲೆ ಕಾಳಜಿ ಇಡಿ. ಎಷ್ಟೋ ದಿನದಿಂದ ನಿಂತ ಕೆಲಸಗಳು ಪೂರ್ತಿ ಆಗುತ್ತವೆ
ವೃಶ್ಚಿಕ ರಾಶಿ ಚಿತ್ರಕಾರರು ಬರಹಗಾರರಂಥ ಕ್ರಿಯಾತ್ಮಕ ಕೆಲಸಗಳಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಬರಲಿವೆ.ಮಗಳ ಕುಟುಂಬದವರಿಗೆ ನಿಮ್ಮ ಹಾರೈಕೆಗಳ ಅಗತ್ಯವಿರುವುದರಿಂದ ಅದನ್ನು ನಡೆಸಿಕೊಡಿ.ಅವರೋಹಣ ಪ್ರಕ್ರಿಯೆಯಲ್ಲಿರುವ ಷೇರು ವ್ಯವಹಾರಗಳು ನಿಧಾನಗತಿಯಲ್ಲಿ ಆರೋಹಣ ಪ್ರಕ್ರಿಯೆಗೆ ಬರುತ್ತದೆ.
ಧನು ರಾಶಿ ನಿವೇಶನ ಖರೀದಿ, ಕಟ್ಟಡ ನಿರ್ಮಾಣದಂತಹ ಕೆಲಸಗಳಿಗೆ ಪೂರಕವಾತಾವರಣ ದೊರೆಯಲಿದೆ.ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯ ಸರಿಯಾದ ಮಾತುಕತೆಯಿಂದ ದೂರವಾಗಿ ಉತ್ತಮವಾದ ಸಂಬಂಧ ನಿಮ್ಮದಾಗಲಿದೆ. ವ್ಯವಹಾರ ಮಾಡುತ್ತಿರುವವರಿಗೆ ಸ್ವಲ್ಪ ನಷ್ಟ ನೀವು ಅನುಭವಿಸುತ್ತೀರಾ.ಮಕರ ರಾಶಿ ನಿಮ್ಮನ್ನು ನೀವು ರೂಪಿಸಿಕೊಳ್ಳಲು ಹೆಚ್ಚಿನ ಶ್ರಮ ಹಾಕಬೇಕೆನ್ನುವ ವಿಚಾರವು ನಿಮ್ಮಲ್ಲಿ ಕೋಪ ಅಸಹನೆಯನ್ನು ಉಂಟು ಮಾಡಲಿದೆ.ಇತರ
ರೊಂದಿಗೆ ವಿವಾದಾತ್ಮಕ ವಿಷಯಗಳ ಕುರಿತು ಚರ್ಚಿಸುವುದು ಉಚಿತವಲ್ಲ.ಮನೆ ಅಥವಾ ಹೊಸ ವಾಹನವನ್ನು ನೀವು ಖರೀದಿ ಮಾಡುತ್ತೀರಾ
ಕುಂಭ ರಾಶಿ ವಿಜ್ಞಾನ, ಶಿಕ್ಷಣ ಹಾಗೂ ಸಂಶೋಧನೆ ಕ್ಷೇತ್ರದಲ್ಲಿನ ವೃತ್ತಿಪರರು ಅಭಿವೃದ್ಧಿ ಕಾಣುವ ಲಕ್ಷಣಗಳಿವೆ. ಕುಟುಂಬದಲ್ಲಿ ಸಣ್ಣ ಪುಟ್ಟ ಕಲಹಗಳಾಗುವ ಸಾಧ್ಯತೆ, ಮನೆಯ ಸಮೀಪದಲ್ಲಿಯೇ ಇರುವಂಥ ಶಿವಾಲಯಕ್ಕೆ ಭೇಟಿ ನೀಡಿ. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಆರಂಭವಾಗುತ್ತವೆ.
ಮೀನ ರಾಶಿ ಹಣ ಸಹಾಯ ಮಾಡುತ್ತೇವೆ ಎಂದ ಸ್ನೇಹಿತರು ನೀಡದೆ ಸತಾಯಿಸುವ ಸಾಧ್ಯತೆ. ನಿಮ್ಮದೇ ಸಂಪಾದನೆಯೂ ನೀರಿನಂತೆ ಖರ್ಚಾಗುತ್ತದೆ.ದಿನದ ಅಂತ್ಯದಲ್ಲಿ ಸಂಬಂಧಿಗಳಿಂದ ಮನಸ್ಸಿಗೆ ಮುದವಾಗುವ ವಾರ್ತೆ ಕೇಳುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆಯನ್ನು ನೀವು ಕಾಣುತ್ತೀರಾ.
GIPHY App Key not set. Please check settings