in

ಅರ್ಜುನನ ಗಾಂಡೀವದ ಬಗ್ಗೆ ಗೊತ್ತಾ? ವಿಧುರನ ಮುಂದೆ ಅರ್ಜುನನ ಗಾಂಡೀವ ಏನು ಇರಲಿಲ್ಲವಂತೆ

ಅರ್ಜುನನ ಗಾಂಡೀವದ ಬಗ್ಗೆ ಗೊತ್ತಾ?
ಅರ್ಜುನನ ಗಾಂಡೀವದ ಬಗ್ಗೆ ಗೊತ್ತಾ?

ಗಾಂಡೀವ ಒಂದು ದಿವ್ಯ ಧನುಸ್ಸು. ಈ ಧನುಸ್ಸು ಬ್ರಹ್ಮನಿಂದ ಇಂದ್ರನಿಗೂ,ಇಂದ್ರನಿಂದ ವರುಣನಿಗೂ,ವರುಣನಿಂದ ಅಗ್ನಿಗೂ ಬಂತು. ಖಾಂಡವದಹನ ಸಮಯದಲ್ಲಿ ಅಗ್ನಿ ಅರ್ಜುನ ಮಾಡಿದ ಉಪಕಾರಕ್ಕಾಗಿ ಆತನಿಗಿದನ್ನು ಕೊಟ್ಟ. ಈ ಧನಸ್ಸು ಎರಡು ಅಕ್ಷಯ ಬತ್ತಳಿಕೆಗಳೊಂದಿಗೆ ಅರ್ಜುನನಿಗೆ ಪ್ರಾಪ್ತವಾಗಿತ್ತು. ಈ ಕಾರಣದಿಂದಲೇ ಅವನು ಗಾಂಡೀವಿ ಎನಿಸಿದ. ಇದರ ಮಹಿಮೆಯಿಂದ ಅರ್ಜುನ ಎಲ್ಲ ದಿಕ್ಕುಗಳನ್ನು ಗೆದ್ದು, ಇಂದ್ರನನ್ನು ಸೋಲಿಸಿದುದಲ್ಲದೆ ಇದರ ತುದಿಯಿಂದ ಶಿವನ ನೆತ್ತಿ ಮೇಲೆ ಹೊಡೆದು ಗಾಯ ಮಾಡಿದ. ಮಹಾಪ್ರಸ್ಥಾನ ಸಮಯದಲ್ಲಿ ಅರ್ಜುನ ಇದನ್ನು ಸಮುದ್ರದಲ್ಲಿ ಬಿಸಾಡಿದನೆಂದು ಹೇಳಲಾಗಿದೆ. ಅರ್ಜುನನು ಕುರುಕ್ಷೇತ್ರ ಯುದ್ಧದಲ್ಲಿ ಈ ಆಯುಧವನ್ನು ಬಳಸಿದನು, ಅವನನ್ನು ಸೋಲಿಸುವವರೇ ಇರಲಿಲ್ಲ. ಯಾವುದೇ ಸಾಮಾನ್ಯ ವ್ಯಕ್ತಿಗೆ ಗಾಂಡೀವವಿನ ನಿಯಂತ್ರಣ ಸಾಧ್ಯವಾಗಿರಲಿಲಲ್ಲ. ಬಿಲ್ಲನ್ನು ಹೊಡೆದಾಗ ಅದು ಗುಡುಗು ಧ್ವನಿ ಮಾಡುತ್ತಿತ್ತು. ಇದು 108 ಬಿಲ್ಲು ತಂತಿಗಳನ್ನು ಹೊಂದಿತ್ತು, ಅವಿನಾಶಿಯಾಗಿ ಇತ್ತು ಮತ್ತು ಇತರ ವಿಶೇಷ ಗುಣಗಳನ್ನು ಹೊಂದಿತ್ತು.

ಗಾಂಡೀವ ಎಂದರೆ ಏನು? ಅದರ ಹುಟ್ಟು ಹೇಗೆ ಆಯಿತು?

ಗಾಂಡೀವ ಅರ್ಜುನನ ಧನುಸ್ಸು. ಈ ಧನುಸ್ಸು ಬ್ರಹ್ಮದಿಂದ ಇಂದ್ರನಿಗೂ, ಇಂದ್ರನಿಂದ ವರುಣನಿಗೂ, ವರುಣದೇವನಿಂದ ಅಗ್ನಿಗೂ ಬಂತು. ಒಂದು ಬಾರಿ ಅಗ್ನಿದೇವರು ಯಜ್ಞದಲ್ಲಿ ಹಾಕಿರುವ ತುಪ್ಪವನ್ನು ನಿರಂತರವಾಗಿ ತಿಂದು ತಿಂದು ಅವರ ಸ್ಥಿತಿ ಗಂಭೀರವಾಯಿತು, ತಡೆಯಲಾಗದಷ್ಟು ಹೊಟ್ಟೆ ನೋವು ಆರಂಭವಾಯಿತು. ಈ ವಿಷಯವಾಗಿ ಅಗ್ನಿದೇವ ಬ್ರಹ್ಮನನ್ನು ಭೇಟಿಮಾಡಿ ತನ್ನ ನೋವನ್ನು ಹೇಳಿಕೊಂಡನು. ಆಗ ಬ್ರಹ್ಮದೇವ ಔಷಧಿ ಸಸ್ಯಗಳಿಂದ ತುಂಬಿದ ಖಾಂಡವ ವನವನ್ನು ದಹಿಸಿ ಆ ಬೆಂಕಿಯಲ್ಲಿ ತಾನು ತಿಂದ ತುಪ್ಪವನ್ನೆಲ್ಲ ದಹಿಸಬಹುದು ಎಂದು ಹೇಳಿದನು.

ಖಾಂಡವ ವನವು ನಾಗರಾಜನಾದ ತಕ್ಷಕನ ನಿವಾಸ ಸ್ಥಾನ. ಅದನ್ನು ಅಗ್ನಿ ಕಬಳಿಸುವುದನ್ನು ನೋಡಿ ಭಯಭ್ರಾಂತನಾಗಿ ಇಂದ್ರನ ಶರಣು ಬೇಡುತ್ತಾನೆ. ಇಂದ್ರನು ಮೇಘದೂತಗಳನ್ನು ಕಳಿಸಿ ಮಳೆ ಬೀಳುವಂತೆ ಮಾಡುತ್ತಾನೆ. ಅಗ್ನಿಗೆ ಏನು ಮಾಡಲಿ ಎಂದು ಗೊತ್ತಾಗಲಿಲ್ಲ. ಅಲ್ಲಿ ಅರ್ಜುನನ್ನು, ವಾಸುದೇವ ಕೃಷ್ಣನನ್ನು ನೋಡಿ ಅವರನ್ನು ತನಗೆ ಸಹಾಯ ಮಾಡಬೇಕೆಂದು ಕೇಳುತ್ತಾನೆ. ಅರ್ಜುನನು ತನಗೆ ದೇವತೆಗಳೊಂದಿಗೆ ಹೋರಾಟಕ್ಕಾಗಿ ಸೂಕ್ತವಾದ ಆಯುಧಗಳು ಬೇಕೆಂದು ಬಯಸುವುದಾಗ ಅಗ್ನಿ ವರುಣ ದೇವನನ್ನು ಕರೆದು ಅರ್ಜುನನಿಗೆ ಧನುಸ್ಸನ್ನು ವರವಾಗಿ ನೀಡುತ್ತಾನೆ. ಆ ಧನಸ್ಸು ಎರಡು ಅಕ್ಷಯ ಬತ್ತಳಿಕೆಗಳೊಂದಿಗೆ ಅರ್ಜುನನಿಗೆ ಪ್ರಾಪ್ತವಾಗಿತ್ತು. ಈ ಧನುಸ್ಸಿನ ಹೆಸರೇ ಗಾಂಡೀವ. ಯಾವುದೇ ಸಾಮಾನ್ಯ ವ್ಯಕ್ತಿಗೆ ಗಾಂಡೀವವಿನ ನಿಯಂತ್ರಣ ಸಾಧ್ಯವಾಗಿರಲಿಲಲ್ಲ. ಬಿಲ್ಲನ್ನು ಹೊಡೆದಾಗ ಅದು ಗುಡುಗು ಧ್ವನಿ ಮಾಡುತ್ತಿತ್ತು. ಇದು 108 ಬಿಲ್ಲು ತಂತಿಗಳನ್ನು ಹೊಂದಿತ್ತು, ಅವಿನಾಶಿಯಾಗಿ ಇತ್ತು ಮತ್ತು ಇತರ ವಿಶೇಷ ಗುಣಗಳನ್ನು ಹೊಂದಿತ್ತು. ಇದರ ಮಹಿಮೆಯಿಂದ ಅರ್ಜುನ ಎಲ್ಲ ದಿಕ್ಕುಗಳನ್ನು ಗೆದ್ದು, ಇಂದ್ರನನ್ನು ಸೋಲಿಸಿದನು.

ಅರ್ಜುನನ ಗಾಂಡೀವದ ಬಗ್ಗೆ ಗೊತ್ತಾ? ವಿಧುರನ ಮುಂದೆ ಅರ್ಜುನನ ಗಾಂಡೀವ ಏನು ಇರಲಿಲ್ಲವಂತೆ
ಅಗ್ನಿದೇವನಿಂದ ಅರ್ಜುನ ಗಾಂಡೀವ ಪಡೆದನು

ಅಗ್ನಿ ಖಾಂಡವ ವನವನ್ನು ದಹಿಸುವಾಗ ಕಣ್ವ ಮಹರ್ಷಿ ಕೃಷ್ಣನ ಬಳಿ ಬಂದು ತಾನು ನಿತ್ಯವೂ ಆರಾಧಿಸುವ ಅರ್ಚಾಮೂರ್ತಿ ವನದಲ್ಲೇ ಇದೆಯೆಂದು ಅದನ್ನು ಮಾತ್ರ ಅಗ್ನಿ ದಹಿಸದೇ ಬಿಡಬೇಕೆಂದು ಬೇಡುಕೊಳ್ಳುತ್ತಾನೆ. ಕಾಡೆಲ್ಲಾ ದಹನವಾದ ನಂತರ ಆ ಮೂರ್ತಿ ಮಾತ್ರ ಉಳಿದಿದೆ. ತಾನು ಮತ್ತೆ ಆ ಮೂರ್ತಿಗೆ ಪ್ರಾಣಪ್ರತಿಷ್ಟೆ ಮಾಡಿ ಪೂಜೆ ಮಾಡಿಕೊಳ್ಳಲು ಯಾವುದಾದರೂ ಒಳ್ಳೆಯ ಸ್ಥಳ ತೋರಿಸಲೆಂದು ಕೇಳಿದಾಗ ಅರ್ಜುನನು ದಕ್ಷಿಣ ದಿಶಗೆ ತಿರುಗಿ ಗಾಂಡೀವವನ್ನು ಹೆಚ್ಚು ಬಾಣವನ್ನು ಹೊಡೆಯುತ್ತಾನೆ, ಆ ಬಾಣ ಸೀಳಿದ ಜಾಗವನ್ನು ಸ್ವೀಕರಿಸಬಹುದೆಂದು ಕಣ್ವನಿಗೆ ಹೇಳುತ್ತಾನೆ. ಆ ಬಾಣವು ಈಗಿನ ಕೇರಳದಲ್ಲಿ ಇರುವ ಎವೂರ್ ಎಂಬ ಪ್ರಾಂತ್ಯದಲ್ಲಿ ಬೀಳಿಸಿತು. ಇಂದಿಗೂ ಅಲ್ಲಿ ಪ್ರಸಿದ್ಧ ವೈಷ್ಣವಾಲಯವೊಂದಿದೆ.

ಮಹಾಪ್ರಸ್ಥಾನ ಸಮಯದಲ್ಲಿ ಅರ್ಜುನ ಇದನ್ನು ಸಮುದ್ರದಲ್ಲಿ ಬಿಸಾಡಿದನೆಂದು ಹೇಳಲಾಗಿದೆ. ಅದರಿಂದ ಅದು ತಿರುಗಿ ವರುಣನಿಗೆ ಸೇರಿದೆ.

ಅರ್ಜುನನ ಗಾಂಡೀವ ಕೂಡ ವಿಧುರನ ಮುಂದೆ ಏನು ಇರಲಿಲ್ಲವಂತೆ :

ಅರ್ಜುನನ ಗಾಂಡೀವದ ಬಗ್ಗೆ ಗೊತ್ತಾ? ವಿಧುರನ ಮುಂದೆ ಅರ್ಜುನನ ಗಾಂಡೀವ ಏನು ಇರಲಿಲ್ಲವಂತೆ
ವಿಧುರ

ಮಹಾಭಾರತದಲ್ಲಿ ಮಹಾನ್ ಮೇಧಾವಿ ಎಂದೆಂದಿಗೂ ಹೆಸರು ಗಳಿಸಿದವರು ವಿಧುರ. ಇವರ ಬುದ್ಧಿಶಕ್ತಿ ಮತ್ತು ಜ್ಞಾನದ ಬಗ್ಗೆ ಹೇಳುತ್ತಲೇ ಇರಬಹುದು. ಆಗಿನ ಪುರಾಣ ಕಾಲದಿಂದ ಈಗಿನ ಆಧುನಿಕ ಯುಗದವರೆಗೂ ವಿಧುರ ಅವರ ಪ್ರಯೋಜನಗಳಿಂದ ಪಡೆದುಕೊಳ್ಳಬಹುದು. ವಿಧುರನ ನೀತಿಯ ಕಥೆಗಳ ಮೂಲಕ ಬೋಧನೆ ಮಾಡುತ್ತಾರೆ. ಈಗಿನ ಆಧುನಿಕ ಯುಗದವರಿಗೂ ವಿಧುರನ ನೀತಿ ಉಪಯೋಗಕ್ಕೆ ಬರುತ್ತದೆ. ಅಂತಹ ವಿಧುರ ಜ್ಞಾನದಲ್ಲಿ ಉನ್ನತ ಸ್ಥಾನದಲ್ಲಿದೆ ಪರಾಕ್ರಮಿ ಯೋಧನು ಸಹ ಆಗಿದ್ದನು, ಈ ವಿಚಾರ ಹೆಚ್ಚಿನ ಜನರಿಗೆ ತಿಳಿದಿಲ್ಲ. ಕಾಣಿಸಿಕೊಂಡ ಶ್ರೀಕೃಷ್ಣನೇ ವಿಧುರ ಕೌರವರ ಪರವಾಗಿ ಯುದ್ಧಕ್ಕೆ ಬರಬಾರದು ಎಂದು ಉಪಾಯ ಮಾಡಿ ತಡೆಗಟ್ಟಿದ್ದನು. ಶ್ರೀಕೃಷ್ಣನು ಯುದ್ಧದಲ್ಲಿ ದ್ರೋಣಾಚಾರ್ಯರನ್ನು ಸಹ ತಡೆಯದೆ ವಿಧುರನನ್ನು ತಡೆದಿದ್ದನು ಎಂದರೇ, ವಿಧುರ ಎಂಥಾ ಪ್ರವೀಣನಾಗಿದ್ದನು ಎನ್ನುವುದನ್ನು ತಿಳಿಯಬೇಕು. 

ಮಹಾಭಾರತದಲ್ಲಿ ವಿಧುರ ಇನ್ಯಾರು ಅಲ್ಲ ಹಸ್ತಿನಾಪುರದ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೇಧಾವಿಯೇ ವಿಧುರ. ಇವರು ಪಾಂಡವರು ಮತ್ತು ಕೌರವರಿಗೆ ಚಿಕ್ಕಪ್ಪ ಆಗಬೇಕು, ಆದರೆ ವಿಧುರ ದಾಸಿಯ ಮಗ ಎಂಬ ಕಾರಣದಿಂದ, ರಾಜನಾಗುವ ಅರ್ಹತೆ ಇದ್ದರೂ, ಹಸ್ತಿನಾಪುರದ ರಾಜನಾಗಲಿಲ್ಲ. ಮಹಾವಿಷ್ಣುವಿನ ಪರಮಭಕ್ತನಾಗಿದ್ದನು ವಿಧುರ. ರಾಜನಾಗದೆ, ಎಲ್ಲಾ ಯುದ್ಧಕಲೆಯಲ್ಲಿ ಹೋದ ಪರಿಣಿತಿಗಾಗಿದ್ದನು. ಮಹಾವಿಷ್ಣುವಿನಿಂದ ಗೋವರ್ಧನ ಧನುಸ್ಸನ್ನು ವರವಾಗಿ ಬಳಸಿದ್ದ ಏಕೈಕ ವ್ಯಕ್ತಿ ವಿಧುರ ಈತ ಯುದ್ಧಕ್ಕೆ ನಿಂತರೆ ಯಾರಿಂದಲೂ ಒಮ್ಮೆ ಸೋಲಿಸಲು ಸಾಧ್ಯವಾಗಲಿಲ್ಲ, ಶ್ರೀಕೃಷ್ಣನ ಗಾಂಡೀವ ಸಹ ವಿಧುರನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಈ ರೀತಿ ಪಾರಂಗತ ಹೊಂದಿದ್ದ ವಿಧುರನು ಹಲವು ಬಾರಿ ಪಾಂಡವರಿಗೂ ಸಹಾಯ ಮಾಡಿದ್ದೇನೆ.

ಪಾಂಡವರಿಗೆ ಸಹಾಯ ಮಾಡಿದರೂ ಸಹ, ತಾನು ಕೌರವರಿಗೆ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣ, ಯುದ್ಧದ ಸಮಯದಲ್ಲಿ ವಿಧುರನು ಕೌರವರ ಪರವಾಗಿಯೇ ಹೋರಾಟ ಮಾಡಬೇಕಿತ್ತು. ಒಂದು ವೇಳೆ ವಿಧುರ ಯುದ್ಧಕ್ಕೆ ಬಂದರೆ, ಏನಾಗಬಹುದು ಎಂದು ಶ್ರೀಕೃಷ್ಣನಿಗೆ ತಿಳಿದಿತ್ತು. ಶ್ರೀಕೃಷ್ಣನನ್ನು ಏನಾದರೂ ತಂತ್ರ ಮಾಡಿ ವಿಧುರನನ್ನು ಯುದ್ಧದಲ್ಲಿ ಸೋಲಿಸಬಹುದಾಗಿತ್ತು. ಆದರೆ ಪರಾಕ್ರಮಿಯಾದ ವಿಧುರ ಅರ್ಜುನನ ಎದುರು ಸೋಲುವುದು ಧರ್ಮವಲ್ಲ ಎನ್ನುವ ಆಲೋಚನೆಯಿಂದ ಶ್ರೀಕೃಷ್ಣನು ಬೇರೆಯದೇ ಉಪಾಯ ಮಾಡಿ, ವಿಧುರ ಕೌರವರ ಪರವಾಗಿ ಯುದ್ಧದಲ್ಲಿ ಪಾಲ್ಗೊಳ್ಳದೆ ಇರುವ ಹಾಗೆ ತಡೆದನು.

ಅರ್ಜುನನ ಗಾಂಡೀವದ ಬಗ್ಗೆ ಗೊತ್ತಾ? ವಿಧುರನ ಮುಂದೆ ಅರ್ಜುನನ ಗಾಂಡೀವ ಏನು ಇರಲಿಲ್ಲವಂತೆ
ಕುರುಕ್ಷೇತ್ರ ಯುಧ್ಧದಲ್ಲಿ ಶ್ರೀ ಕೃಷ್ಣ ಸಾರಥಿಯಾಗಿ

ಒಮ್ಮೆ ಶ್ರೀಕೃಷ್ಣನು ಕೌರವರು ಮತ್ತು ಪಾಂಡವರ ನಡುವೆ ಶಾಂತಿ ತರುವ ಸಲುವಾಗಿ, ಕೌರವನ ಆಸ್ಥಾನಕ್ಕೆ ಹೋಗುತ್ತಾನೆ. ಆಗ ದುರ್ಯೋಧನನು ಶ್ರೀಕೃಷ್ಣನಿಗೆ ತನ್ನ ಆಸ್ಥಾನದಲ್ಲಿ ಅತ್ಯುತ್ತಮವಾದ ಆತಿಥ್ಯ ಎಂದುಕೊಂಡಿರುತ್ತಾನೆ. ಆದರೆ ಶ್ರೀಕೃಷ್ಣನು ದುರ್ಯೋಧನನ ಆತಿಥ್ಯವನ್ನು ಸ್ವೀಕರಿಸುವುದಿಲ್ಲ. ಪಾಂಡವರ ವಿರುದ್ಧ ಯುದ್ಧ ಮಾಡುತ್ತಿರುವವರ ಆತಿಥ್ಯ ಸ್ವೀಕರಿಸುವುದಿಲ್ಲ ಎಂದು ಶ್ರೀಕೃಷ್ಣನು ಹೇಳುತ್ತಾನೆ. ಬದಲಾಗಿ ಆಸ್ಥಾನದ ಮಂತ್ರಿಯಾದ ವಿಧುರನ ಮನೆಯಲ್ಲಿ ಇರುತ್ತೇನೆ ಎಂದು ಅಲ್ಲಿಯೇ ಉಳಿದುಕೊಂಡು ಬಿಡುತ್ತಾನೆ ಶ್ರೀಕೃಷ್ಣ.

ದುರ್ಯೋಧನನಿಗೆ ತೀವ್ರವಾದ ಸಿಟ್ಟು ಬರುತ್ತದೆ. ಆದರೆ ಶ್ರೀಕೃಷ್ಣ ತನ್ನ ಮನೆಗೆ ಬಂದ ಸಂತೋಷದಲ್ಲಿ ವಿಧುರನು ಅತ್ಯುತ್ತಮವಾದ ಆತಿಥ್ಯವನ್ನು ಶ್ರೀಕೃಷ್ಣನಿಗೆ ನೀಡುತ್ತಾನೆ. ಇದನ್ನೆಲ್ಲ ನೋಡಿದ ದುರ್ಯೋಧನನು ಪಾಂಡವರ ಪರವಾಗಿ ಯುದ್ಧಕ್ಕೆ ಬರುವ ಶ್ರೀಕೃಷ್ಣನಿಗೆ ನಿನ್ನ ಮನೆಯಲ್ಲಿ ಜಾಗ ಕೊಡಬಾರದು ಎಂದು ವಿಧುರನ ಬಾಯಿಗೆ ಬಂದ ಹಾಗೆ ನಿಂದಿಸಲು ಶುರು ಮಾಡುತ್ತಾನೆ. ದುರ್ಯೋಧನನ ಈ ಮಾತುಗಳು ಹರಿತವಾದ ಕತ್ತಿಯಂತೆ ಇರುತ್ತದೆ.

ವಿಧುರ ತನ್ನ ಚಿಕ್ಕಪ್ಪ ಆಗಬೇಕಾದವನು, ಜೊತೆಗೆ ವಯಸ್ಸಿನಲ್ಲಿ ಹಿರಿಯ ಎನ್ನುವುದನ್ನು ಕೂಡ ಮರೆತು, ನೀನಿರುವುದು ಯಾರ ಆಶ್ರಯದಲ್ಲಿ ನಿನಗೆ ನೆನಪಿಲ್ಲ, ಕೃತಜ್ಞತೆ ಇಲ್ಲದ ವ್ಯಕ್ತಿ ನೀನು ಎಂದು ಹೇಳಲು ಶುರು ಮಾಡುತ್ತಾನೆ. ದುರ್ಯೋಧನನ ಈ ಮಾತು ಧೃತರಾಷ್ಟ್ರ, ಭೀಷ್ಮರು ಎಲ್ಲರೂ ಆಶ್ಚರ್ಯಚಕಿತರಾಗಿ ನೋಡುತ್ತಾ, ದುರ್ಯೋಧನನನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಯಾರ ಮಾತು ಕೂಡ ದುರ್ಯೋಧನನ ಕೋಪವನ್ನು ತಡೆಯುವುದಿಲ್ಲ. ಕೋಪದಲ್ಲಿ ಒಂದೇ ಸಮನೆ ನಿಂದಿಸುತ್ತಾ, ವಿಧುರನ ಹುಟ್ಟಿನ ಬಗ್ಗೆ ಕೂಡ ಎಲ್ಲೆ ಮೀರಿ ಮಾತನಾಡುತ್ತಾನೆ ದುರ್ಯೋಧನ..

ಇನ್ನು ಬಯ್ಯಲು ಶುರು ಮಾಡಿ, ನೀನು ನನ್ನ ಆಸ್ಥಾನದಲ್ಲಿ ನನ್ನ ಅನ್ನ ತಿನ್ನುತ್ತಾ ಇದ್ದೀಯಾ, ಆದರೂ ನಿನಗೆ ಪಾಂಡವರ ಮೇಲೆ ಪ್ರೀತಿ ಜಾಸ್ತಿ ಎಂದು ಹೇಳಿ, ವಿಧುರನ ಹುಟ್ಟಿನ ಬಗ್ಗೆ ಮಾತನಾಡಿ ಅಪಮಾನವಾಗುವಂಥ ಮಾತುಗಳನ್ನಾಡುತ್ತಾನೆ ದುರ್ಯೋಧನ. ವಿಧಾನ ವಿಧುರನಿಗೂ ಕೋಪ ಬಂದು, ತನ್ನ ಬಿಲ್ಲು ಬಾಣ ತೆಗೆದು, ದುರ್ಯೋಧನನ ಕಡೆಗೆ ಗುರಿ ಇಡುತ್ತಾನೆ. ಅದನ್ನರಿತ ಶ್ರೀಕೃಷ್ಣನು, ದುರ್ಯೋಧನನ ಅಂತ್ಯ ಎಲ್ಲಿ ಆಗಬೇಕೋ ಅಲ್ಲಿಯೇ ಆಗಬೇಕು ಎಂದುಕೊಳ್ಳುತ್ತಾ, ಮಧ್ಯ ಪ್ರವೇಶ ಮಾಡಿ, ಈ ಕೌರವ ರಾಜ ನೀನು ವಿಧುರರ ಬಗ್ಗೆ ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದು ಹೇಳುತ್ತಾ, ಅವರು ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿ, ನಾನು ತಟಸ್ಥನಾಗಿ ಇರುತ್ತೇನೆ, ಬಿಲ್ಲನ್ನು ಮುರಿದು ಹಾಕಿದರೆ ಏನಾಗಬಹುದು ಎಂದು ಯೋಚಿಸಿ ಹೇಳುತ್ತೇನೆ. ವಿಧುರನಿಗೆ ಅರ್ಥವಾಗುವ ಹಾಗೆ ಮಾಡುತ್ತಾನೆ ಶ್ರೀಕೃಷ್ಣ.

ಈ ಮಾತು ಕೇಳಿದ ದುರ್ಯೋಧನನು, ವಿಧುರನು ನಮ್ಮ ಪರವಾಗಿ ಯುದ್ಧ ಮಾಡದಿದ್ದರೆ, ಏನು ಆಗುವುದಿಲ್ಲ, ನಾವು ಯುದ್ಧದಲ್ಲಿ ಗೆಲ್ಲುತ್ತೇವೆ ಎಂದು ಹೇಳಿ, ಮತ್ತೆ ನಿಂದಿಸಲು ಶುರು ಮಾಡುತ್ತಾನೆ. ಮುರಿದು ಹಾಕುತ್ತಾನೆ ವಿಧುರ. ಆ ರೀತಿ ಮಾಡಿದರೆ ಒಂದು ಜೋ ಸಿಡಿಯಾದರು ಬಡಿದ ಶಬ್ಧ ಕೇಳಿ ಬರುತ್ತದೆ. ಈ ರೀತಿ ಮಾಡಿ ವಿಧುರ ಕೌರವರ ಪರವಾಗಿ ಯುದ್ಧ ಮಾಡದೆ ಇರುವ ಹಾಗೆ ಶ್ರೀಕೃಷ್ಣನು ತಡೆಯುತ್ತಾನೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ಸಂಸ್ಕೃತ ಸಂಧಿಗಳು

ಕನ್ನಡ ವ್ಯಾಕರಣ: ಸಂಸ್ಕೃತ ಸಂಧಿಗಳು ಭಾಗ ೨

ನಾಳೆಯಿಂದ 4 ರಾಶಿ ಮೇಲೆ ಬಿತ್ತು ಶನಿದೇವನ ಕಣ್ಣು.

ನಾಳೆಯಿಂದ 4 ರಾಶಿ ಮೇಲೆ ಬಿತ್ತು ಶನಿದೇವನ ಕಣ್ಣು.