ಅಮರಶಿಲ್ಪಿ ಜಕಣಾಚಾರಿ ಯವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ, ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ.
ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆ ಅಪಾರವಾದುದು. ಅಂತಹ ಅಪರೂಪದ ಕೊಡುಗೆ ಯನ್ನು ನಾಡಿಗೆ ನೀಡಿ ತನ್ನ ಕಲಾ ಕೌಶಲ್ಯ ಕೊಡುಗೆಯನ್ನು ನಾಡಿಗೆ ನೀಡಿ ಅಜರಾಮರನಾದವನು ಅಮರಶಿಲ್ಪಿ ಜಕಣಾಚಾರಿ.
ಜಕಣಾಚಾರಿ ಹುಟ್ಟಿದ್ದು ತುಮಕೂರಿನ ಕ್ರೀಡಾ ಪುರ ಎಂಬ ಹಳ್ಳಿಯಲ್ಲಿ. ಸೌಂದರ್ಯ ಮತ್ತು ಕಲಾ ಆರಾಧಕನಾಗಿದ್ದ ಜಕಣಾಚಾರಿ ವೈಯಕ್ತಿಕ ಬದುಕಿನಲ್ಲಿ ನಡೆದ ಘಟನೆಗಳಿಂದ ಬೇಸತ್ತು ಹೆಂಡತಿ ಮನೆ, ಊರನ್ನು ತೊರೆದು ಲೋಕಸಂಚಾರಿಯಾಗಿ ಅಲೆಯುತ್ತಿರುವಾಗ ರಾಮಾನುಜಾಚಾರ್ಯರು ಮಾರ್ಗದರ್ಶನ ದಿಂದ ತನ್ನ ವೃತ್ತಿಯಲ್ಲಿ ಏಕಾಗ್ರತೆನ್ನು ಸಾಧಿಸಿದ. ಹೊಯ್ಸಳ ಅರಸ ವಿಷ್ಣುವರ್ಧನ ಮತ್ತು ರಾಣಿ ಶಕುಂತಲಾ ದೇವಿಯರ ಆಶಯದಂತೆ ಬೇಲೂರು ಚನ್ನಕೇಶವ ದೇವಾಲಯದ ನಿರ್ಮಾಣ ಜವಾಬ್ದಾರಿಯನ್ನು ವಹಿಸಿಕೊಂಡ. ಅದು ದೇವಾಲಯವಾಗದೆ ಅಪರೂಪದ ಕಲಾಕೃತಿಯಾಗಿ ನಿರ್ಮಿಸಿಲು ತನ್ನ ಜೀವನವನ್ನೇ ಮುಡುಪಾಗಿಟ್ಟ. ಶಿಲೆಯನ್ನು ಕಲೆಯಾಗಿ ಅರಳಿಸಿದ. ಪುರಾಣ ಮಹಾಕಾವ್ಯಗಳು ಕಲ್ಲಿನಲ್ಲಿ ಜೀವಂತವಾದವು. ಅತ್ಯಂತ ಸೂಕ್ಷ್ಮ ಕುಸರಿ ಕೆತ್ತನೆಯು ಕವಿಗಳಿಗೆ ಕಲೆಯ ಬಲೆಯಾಗಿ ಕಂಡರೆ ಇತಿಹಾಸಕಾರನಿಗೆ ಆಕರವಾಗಿ ಕಂಡಿತು. ಸೌಂದರ್ಯೋಪಾಸಕನಿಗೆ ವಿಸ್ಮಯವಾಗಿ ಕಂಡಿತು.

ಜಕಣಾಚಾರ್ಯನ ಮಗನ ಹೆಸರು ಡಂಕಣಾಚಾರ್ಯ. ಡಂಕಣಾಚರ್ಯನು ಆತನ ತಂದೆಯನ್ನು ಹುಡುಕುವುದಕ್ಕಾಗಿ ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿ ಬೆಳೆದನು. ಬೇಲೂರಿನಲ್ಲಿ ಅವನು ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟನು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಒಂದು ಒಡಕನ್ನು ಆತನು ಕಂಡನು. ಇದರಿಂದ ಕೋಪಗೊಂಡ ಜಕಣಾಚಾರ್ಯರು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಆ ಯುವ ಶಿಲ್ಪಿಗೆ ಮಾತನ್ನಿತ್ತರು. ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ಆ ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರ್ಯರು ತಮ್ಮ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡರು. ಕೊನೆಯಲ್ಲಿ, ಆ ಇಬ್ಬರು ಶಿಲ್ಪಿಗಳು ಅವರಿಬ್ಬರೂ ತಂದೆ, ಮಗನೆಂಬ ಸಂಬಂಧವನ್ನು ತಿಳಿದುಕೊಂಡರು.
ಕರ್ನಾಟಕ ಸರಕಾರವು 1995 ರಿಂದ ಶಿಲ್ಪ ಕಲೆಯಲ್ಲಿ ಸಾಧನೆ ಮಾಡಿದ ಶಿಲ್ಪಗಳನ್ನು ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಯನ್ನು ನೀಡಿ ಗೌರವಿಸುತ್ತದೆ.
ಕರ್ನಾಟಕ ಸರ್ಕಾರವು ಪ್ರತಿವರ್ಷ ಶಿಲ್ಪಕಲೆಗೆ ಅತಿ ಹೆಚ್ಚಿನ ಕೊಡುಗೆ ನೀಡುವ ಕಲೆಗಾರನಿಗೆ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸುತ್ತದೆ.ಅಮರಶಿಲ್ಪಿ ಜಕಣಾಚಾರಿ ಯವರು ಹಲವಾರು ಸುಂದರವಾದ ದೇವಾಲಯಗಳನ್ನು ನಿರ್ಮಿಸಿದ್ದಾರೆ.ಅಮರಶಿಲ್ಪಿ ಜಕಣಾಚಾರಿ ರವರ ಸ್ಮರಣ ದಿನಾಚರಣೆಯನ್ನು ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಆಚರಿಸಿಲಾಗುವುದು.

ಬೇಲೂರಿನ ಚೆನ್ನಕೇಶವ ದೇವಸ್ಥಾನ ಮತ್ತು ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನ ಎರಡನ್ನೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲು ಪ್ರಸ್ತಾಪಿಸಲಾಗಿದೆ. ದೆಹಲಿ ಸುಲ್ತಾನರ ಪಡೆಗಳಿಂದ ನಗರವನ್ನು ಎರಡು ಬಾರಿ ವಜಾಗೊಳಿಸಿದಾಗಿನಿಂದ ಹಳೇಬೀಡುನಲ್ಲಿರುವ ಹೊಯ್ಸಳೇಶ್ವರ ದೇವಾಲಯವು ಸ್ವಲ್ಪ ಹಾನಿಗೊಳಗಾಗಿದೆ. ಆದಾಗ್ಯೂ, 900 ವರ್ಷಗಳಷ್ಟು ಹಳೆಯದಾದ ಚೆನ್ನಕೇಶವ ದೇವಾಲಯವು ಇನ್ನೂ ನಿಂತಿದೆ ಮತ್ತು ಇಲ್ಲಿ ಪ್ರತಿದಿನ ಪೂಜೆಗಳನ್ನು ನಡೆಸಲಾಗುತ್ತದೆ. ವಿಷ್ಣುವರ್ಧನನು ಈ ದೇವಾಲಯದ ನಿರ್ಮಾಣವನ್ನು ನಿಯೋಜಿಸಿದ್ದಲ್ಲದೆ, ಹೊಯ್ಸಳ ರಾಜಧಾನಿಯನ್ನು ಬೇಲೂರಿನಿಂದ ಹೊಸ ನಗರಕ್ಕೆ ವರ್ಗಾಯಿಸಿದನು, ನಂತರ ಅದನ್ನು ದ್ವಾರಸಮುದ್ರ ಎಂದು ಕರೆಯಲಾಯಿತು, ಇದು ಭಗವಾನ್ ಕೃಷ್ಣನ ದ್ವಾರಕಾದಿಂದ ಸ್ಫೂರ್ತಿ ಪಡೆದ ನಂತರ ಅದರ ಹೆಸರನ್ನು ಪಡೆದುಕೊಂಡಿತು. ಬೇಲೂರು ದ್ವಾರಸಮುದ್ರದ ಅದೃಷ್ಟವನ್ನು ಅನುಭವಿಸದ ಕಾರಣ, ಈ ರಾಜಧಾನಿಯ ಸ್ಥಳಾಂತರವು ಬೇಲೂರಿನಲ್ಲಿ ಇನ್ನೂ ಚೆನ್ನಕೇಶವ ದೇವಾಲಯವು ನಿಂತಿರಲು ಕಾರಣವಾಗಿರಬಹುದು.
ಧನ್ಯವಾದಗಳು.
GIPHY App Key not set. Please check settings