in ,

ತಟ್ಟಿ ತಟ್ಟಿ ಮಾಡುವ ಜೋಳದ ರೊಟ್ಟಿ

ಜೋಳದ ರೊಟ್ಟಿ
ಜೋಳದ ರೊಟ್ಟಿ

ಜೋಳದ ರೊಟ್ಟಿ ಅಥವಾ ಭಾಕ್ರಿ ಉತ್ತರ ಕರ್ನಾಟಕದ ಊಟದ ಮುಖ್ಯ ಸಾಮಗ್ರಿ ಹಾಗೂ ಅಲ್ಲಿಯ ಸಂಪ್ರದಾಯದ ಒಂದು ಅವಿಭಾಜ್ಯ ಅಂಗ. ಇದನ್ನು ಅಲ್ಲಿಯ ಮುಖ್ಯವಾದ ಬೆಳೆಯಾದ ಜೋಳದಿಂದ ತಯಾರಿಸಲಾಗುತ್ತದೆ ಹಾಗೂ ಬಿಳಿ ಬಣ್ಣದ್ದಗಿರುತ್ತದೆ. ಸೆಜ್ಜೆಯಿಂದ ತಯಾರಾಗುವ ರೊಟ್ಟಿಯ ಬಣ್ಣ ಸ್ವಲ್ಪ ಹಳದಿ.ಇದನ್ನು ತಯಾರಿಸಲು ಯಾವುದೇ ತೈಲ ಪದಾರ್ಥವನ್ನು ಉಪಯೋಗಿಸುವುದಿಲ್ಲ. ಇದು ಬರೀ ಶರ್ಕರದ ಕಂತೆ. ಇದು ಎಲ್ಲ ವಯಸ್ಸಿನವರಿಗೂ ಕೊಡಬಹುದಾದ ಖಾದ್ಯ. ಇದನ್ನು ತಯಾರಿಸುವುದು ಒಂದು ಕಲೆ. ಇದನ್ನು ರೊಟ್ಟಿ ಬಡಿಯುವುದು ಎನ್ನುತ್ತಾರೆ. ಇದನ್ನು ಮಾಡುವುದು ಸುಲಭವಲ್ಲ. ಸಾಮಾನ್ಯವಾಗಿ ಬೆಳಿಗ್ಗೆ ರೊಟ್ಟಿ ಬಡಿಯುವುದರ ಟಪ್-ಟಪ್ ಶಬ್ದವನ್ನು ದೂರದಿಂದಲೆ ಕೇಳಿಯೇ ಉತ್ತರ ಕನ್ನಡಿಗರ ಮನೆಯನ್ನು ಗುರ್ತಿಸಬಹುದು.

ಇದನ್ನು ೨ ರೀತಿಯಾಗಿ ಉಣ್ಣಬಹುದು.
ಬಿಸಿ ರೊಟ್ಟಿ
ಖಟಿ/ಖಡಕ್ ರೊಟ್ಟಿ

ಬಿಳಿ ಜೋಳದ ರೊಟ್ಟಿ
ಇದು ಉತ್ತರ ಕರ್ನಾಟಕದಲ್ಲೆ ಪ್ರಸಿದ್ದಿಯನ್ನು ಪಡೆದಿದೆ, ಇಲ್ಲಿರುವ ಗುಲಬರ್ಗಾ ಜಿಲ್ಲೆಯ ಶ್ರೀ ಶರಣ ಬಸವೇಶ್ವರ ದೇವಸ್ಥಾನದ ಮಹಾ ದಾಸೋಹದಲ್ಲಿ ಮತ್ತು ಕೊಪ್ಫಳ ಗವಿಸಿದ್ದೇಶ್ವರ ಜಾತ್ರೆಯ ದಾಸೋಹದಲ್ಲಿ ಸುಮಾರು ೩೦ ದಿನಗಳು ಸುತ್ತಮೂತ್ತಲಿನ ಗ್ರಮಸ್ತರಿಂದ ರೊಟ್ಟಿಗಳು ಸ್ವಿಕೃತಿಗೊಳ್ಳುತ್ತದೆ ಇದು ಪ್ರಖ್ಯಾತಿಯನ್ನೆ ಪಡೆದಿದೆ.

ಸಾಮಾನ್ಯವಾಗಿ ಬಿಸಿ ರೊಟ್ಟಿ (ಬುಟ್ಟಿಯಿಂದ ಗಂಗಾಳದ ಬದಲು ತೆವೆಯಿಂದ ಗಂಗಾಳಕ್ಕೆ) ಅಡಿಗೆ ಮನೆಯಲ್ಲೇ ಒಲೆ ಮುಂದೆ ಕೂತು ತಿನ್ನುತ್ತಾರೆ. ಇದು ತುಂಬಾ ಮೃದು ಇದ್ದು ಜೀರ್ಣಿಸಲು ಅತಿ ಸುಲಭ.

ತಟ್ಟಿ ತಟ್ಟಿ ಮಾಡುವ ಜೋಳದ ರೊಟ್ಟಿ
ಖಡಕ್ ರೊಟ್ಟಿ

ಖಟಿ ಅಥವಾ ಖಡಕ್ ರೊಟ್ಟಿಯನ್ನು ಸುಡುವಾಗ ತೆವೆಯ ಮೇಲೆ ಸ್ವಲ್ಪ ಜಾಸ್ತಿ ಹೊತ್ತು ಸುಡುತ್ತಾರೆ. ಹಾಗಾಗಿ ಅದು ಹಪ್ಪಳದ ಹಾಗೆ ಖಡಕ್ ಇರುತ್ತದೆ. ಇದನ್ನು ತುಂಬಾ ದಿನಗಳವರೆಗೆ ಕೆಡದಂತೆ ಇಡಲು ಕೆಲವು ಕಡೆ ಬಿಸಿಲಲ್ಲೂ ಇಡುತ್ತಾರೆ. ಇದನ್ನು 1 ತಿಂಗಳವರೆಗೆ ಸಂಗ್ರಹಿಸಿ ಇಡಬಹುದು.

೨೦೦೫ನೇ ಇಸ್ವಿಯ ಅಗಸ್ಟ್ ಜಲ ಪ್ರಳಯದ ಕಾಲದಲ್ಲಿ ನೆರೆ ಪ್ರಭಾವಿತ ಹಳ್ಳಿಗಳಲ್ಲಿ ಖಟಿ ರೊಟ್ಟಿಗಳನ್ನು ಹಂಚಲಾಗಿತ್ತು.

ಗ್ಲೂಟನ್ ಮುಕ್ತವಾದ ಜೋಳ ಸೇವನೆಯಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕೂಡ ಪರಿಹಾರವಾಗುತ್ತವೆ ಎಂದು ತಿಳಿದುಬಂದಿದೆ. ನಾರಿನಂಶ ಹೆಚ್ಚಾಗಿರುವ ಕಾರಣದಿಂದ ಜೋಳದ ರೊಟ್ಟಿ ತಿನ್ನುವುದರಿಂದ ಆರೋಗ್ಯಕ್ಕೆ ಅಪಾರ ಪ್ರಮಾಣದಲ್ಲಿ ಲಾಭ ಸಿಗುತ್ತದೆ.
ಆರೋಗ್ಯ ತಜ್ಞರು ಹೇಳುವ ಹಾಗೆ ದೀರ್ಘಕಾಲದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಉಂಟಾಗುವ ಹೊಟ್ಟೆಯಲ್ಲಿನ ಹುಣ್ಣುಗಳು, ಕರುಳಿನ ಕ್ಯಾನ್ಸರ್, ಮಲಬದ್ಧತೆ ಸಮಸ್ಯೆ, ಅತಿಯಾದ ಆಮ್ಲೀಯತೆ, ಹೊಟ್ಟೆ ಸೆಳೆತ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳನ್ನು ಕೂಡ ಜೋಳ ಇಲ್ಲವಾಗಿಸುತ್ತದೆ.
ಏಕೆಂದರೆ ಇದರಲ್ಲಿ ಕ್ಯಾನ್ಸರ್ಕಾರಕ ಜೀವಕೋಶಗಳನ್ನು ನಿವಾರಣೆ ಮಾಡುವ ಅದ್ಭುತ ಔಷಧೀಯ ಗುಣಲಕ್ಷಣಗಳು ಕಂಡು ಬರುತ್ತವೆ. ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಕೂಡ ಇದರಲ್ಲಿ ಹೆಚ್ಚಾಗಿ ಸಿಗಲಿದ್ದು, ಮಧುಮೇಹ ಮತ್ತು ಇನ್ಸುಲಿನ್ ಪ್ರತಿರೋಧ ಇದ್ದರೆ, ಅದು ಸುಲಭವಾಗಿ ಬಗೆಹರಿಯುತ್ತದೆ.
ಒಂದು ಮೂಲದ ಸಂಶೋಧನೆ ಹೇಳುವ ಪ್ರಕಾರ, ಜೋಳದ ಕಾಳುಗಳಲ್ಲಿ ಮನುಷ್ಯನ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಫೈಟೋ ಕೆಮಿಕಲ್ ಅಂಶಗಳು ಅಪಾರ ಪ್ರಮಾಣದಲ್ಲಿ ಕಂಡುಬರುತ್ತದೆ.
ಕ್ಯಾನ್ಸರ್ ಸಮಸ್ಯೆಯ ನಿವಾರಣೆಯ ಜೊತೆಗೆ ಅತ್ಯುತ್ತಮ ಹೃದಯರಕ್ತನಾಳದ ಕಾಯಿಲೆಯನ್ನು ಹೋಗಲಾಡಿಸುವಲ್ಲಿ ಕೂಡ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಜೋಳದಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶದ ಪ್ರಮಾಣ ಹೆಚ್ಚಾಗಿ ಸಿಗುತ್ತದೆ. ಇದರಿಂದ ಮೂಳೆಗಳಿಗೆ ಮತ್ತು ನಿಮ್ಮ ಹಲ್ಲುಗಳಿಗೆ ಹೆಚ್ಚು ಬಲ ಬರುತ್ತದೆ.
ನಾರಿನ ಅಂಶ ಹೆಚ್ಚಾಗಿರುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಜೊತೆಗೆ ನಿಮ್ಮ ಕರುಳಿನ ಆರೋಗ್ಯ ಕೂಡ ಅಭಿವೃದ್ಧಿಯಾಗುತ್ತದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಹೇಳುವ ಹಾಗೆ ಜೋಳದಲ್ಲಿ ಕಂಡುಬರುವ ನಯಾಸಿನ್ ಅಥವಾ ವಿಟಮಿನ್ ಬಿ3 ಅಂಶದ ಕಾರಣದಿಂದ ದೇಹದಲ್ಲಿ ನಮ್ಮ ಆಹಾರ ಶಕ್ತಿಯ ರೂಪ ಪಡೆದುಕೊಳ್ಳುವಲ್ಲಿ ಮತ್ತು ನಮಗೆ ಚೈತನ್ಯ ಮತ್ತು ಹೊಸ ಹುರುಪು ಕೊಡುವಲ್ಲಿ ಸಹಾಯ ಮಾಡುತ್ತದೆ.

ಜೋಳದ ರೊಟ್ಟಿಯಲ್ಲಿ ಅಪಾರ ಪ್ರಮಾಣದಲ್ಲಿ ಟ್ಯಾನಿನ್ ಅಂಶಗಳು ಕೂಡ ಇರುವುದರಿಂದ ಮಧುಮೇಹಿ ರೋಗಿಗಳಿಗೆ ಸಾಕಷ್ಟು ಅನುಕೂಲಕಾರಿ. ಏಕೆಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿರ್ವಹಣೆ ಮಾಡುವಲ್ಲಿ ಇದು ಸಹಾಯಕವಾಗುತ್ತದೆ. ಮಧುಮೇಹ ನಿಯಂತ್ರಣ ಮಾಡಿಕೊಳ್ಳಲು ಸಕ್ಕರೆ ಕಾಯಿಲೆ ಹೊಂದಿದವರು ಜೋಳದ ರೊಟ್ಟಿ ಯನ್ನು ಸೇವನೆ ಮಾಡಬಹುದು.

ರಾಗಿ ರೊಟ್ಟಿಯ ತರಹ ಜೋಳದ ರೊಟ್ಟಿ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು ಮತ್ತು ಇದನ್ನು ನಿಮ್ಮ ಮನೆಯಲ್ಲಿ ನೀವು ತಯಾರು ಮಾಡುವ ಬದನೆಕಾಯಿ ಎಣ್ಣೆಗಾಯಿ, ತೆಂಗಿನಕಾಯಿ ಚಟ್ನಿ, ಪಲ್ಯ, ಕಾಳುಗಳನ್ನು ಹಾಕಿ ತಯಾರು ಮಾಡಿದ ಸಾಗು ಹೀಗೆ ಹಲವಾರು ಮಿಶ್ರಣದೊಂದಿಗೆ ಸೇವನೆ ಮಾಡಬಹುದು.
ಸೂಪರ್ಮಾರ್ಕೆಟ್ಗಳಲ್ಲಿ ಈಗ ಜೋಳದ ರೊಟ್ಟಿ ಲಭ್ಯವಾಗುತ್ತಿರುವುದು ಜನರಿಗೆ ಮತ್ತೊಂದು ಸಂತೋಷಕರ ಸುದ್ದಿ. ಹಪ್ಪಳದ ರೀತಿ ನೋಡಲು ಗಟ್ಟಿಯಾಗಿ ಕಡಕ್ ರೊಟ್ಟಿ ಎನಿಸಿಕೊಂಡಿರುವ ಇದನ್ನು ನೀವು 6 ತಿಂಗಳು ಅಥವಾ ವರ್ಷ ಬೇಕಾದರೂ ಶೇಖರಣೆ ಮಾಡಿಕೊಳ್ಳಬಹುದು. ತಿನ್ನುವ ಸಂದರ್ಭದಲ್ಲಿ ಇದನ್ನು ಕೆಲವು ಸೆಕೆಂಡುಗಳ ಕಾಲ ನೀರಿನಲ್ಲಿ ನೆನೆಹಾಕಿ ಆನಂತರ ಬೇಯಿಸಿ ತಿಂದರೆ ಮೆತ್ತಗಿರುತ್ತದೆ. ಅತ್ಯುತ್ತಮ ಆಹಾರ ಪದ್ಧತಿ ನಿಮ್ಮದಾಗುತ್ತದೆ.

ಜೋಳ ಅಂಟು ಮುಕ್ತ (ಗ್ಲುಟೆನ್ ಫ್ರೀ) ಧಾನ್ಯ

ತಟ್ಟಿ ತಟ್ಟಿ ಮಾಡುವ ಜೋಳದ ರೊಟ್ಟಿ
ಜೋಳ

• ಜೋಳ ಅತ್ಯಧಿಕ ಫೈಬರ್ ಹೊಂದಿದೆ

• ಜೋಳವನ್ನು ಆಹಾರವಾಗಿ ಸೇವಿಸುವುದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿ

• ಜೋಳದಲ್ಲಿ ಅಧಿಕ ಪ್ರೋಟೀನ್‌ ಇದೆ

• ಜೋಳದ ಧಾನ್ಯಗಳು ಕಬ್ಬಿಣಾಂಶ, ಮೆಗ್ನೀಶಿಯಂ, ಕಾಪರ್, ಕ್ಯಾಲ್ಸಿಯಂ, ಜಿಂಕ್, ವಿಟಮಿನ್ ಬಿ3 ಮುಂತಾದ ವಿಟಮಿನ್ , ಮಿನರಲ್‍ಗಳು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವುದರಿಂದ ಅವು ದೇಹದ ಮೂಳೆಗಳ ಆರೋಗ್ಯಕ್ಕೂ ಉತ್ತಮ.

• ಜೋಳವನ್ನು ನಿಯಮಿತವಾಗಿ ತಿಂದರೆ ತೂಕ ಇಳಿಯುವುದರಲ್ಲಿ ಸಂಶಯವಿಲ್ಲ.

• ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

• ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

• ಜೋಳದ ಆಹಾರ ಸೇವನೆ ದೇಹದ ಸಾಮರ್ಥ್ಯ ಅಥವಾ ಚೈತನ್ಯದ ಮಟ್ಟವನ್ನು ನಿಯಂತ್ರಿಸುತ್ತದೆ.

• ಜೋಳ ನಮ್ಮ ದೇಹದ ರಕ್ತಪರಿಚಲನೆಯನ್ನು ವೃದ್ಧಿಸುತ್ತದೆ.

ಜೋಳದಿಂದ ರೊಟ್ಟಿ ಮಾತ್ರವಲ್ಲ, ಲಾಡು, ಕಡುಬು, ಅಂಬಲಿ, ಮುದ್ದೆ, ಉಪ್ಪಿಟ್ಟು , ದೋಸೆ, ತಾಲಿಪಟ್ಟು ಹೀಗೆ ಅನೇಕ ಬಗೆಯ ತರಾವರಿ ಖಾದ್ಯಗಳನ್ನು ತಯಾರಿಸಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೊಸರು

ಮೊಸರಿನ ಉಪಯೋಗಗಳು

ಧರ್ಮಸ್ಥಳ

ಧರ್ಮಸ್ಥಳದ ಮಹತ್ವದ