ಹಲ್ಲುಗಳ ಆರೋಗ್ಯ ಕಾಪಾಡಲು ಕೇವಲ ಉತ್ತಮ ಆಹಾರವನ್ನು ಸೇವಿಸಿದರೆ ಮಾತ್ರ ಸಾಕಾಗುವುದಿಲ್ಲ, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಮೂಲಕ ನಿಮ್ಮ ಹಲ್ಲುಗಳನ್ನು ಸ್ವಚ್ಚವಾಗಿ ಇರಿಸುವುದು ಕೂಡ ಅತ್ಯಗತ್ಯವಾಗಿದೆ.
ಉತ್ತಮ ಆಹಾರ ನಿಮ್ಮ ದೇಹವನ್ನು ಸುಸ್ಥಿತಿಯಲ್ಲಿ ಇಡಲು ಸಹಾಯ ಮಾಡುತ್ತದೆ ಮಾತ್ರವಲ್ಲ, ಹಲ್ಲುಗಳು ಮತ್ತು ವಸಡುಗಳ ಆರೋಗ್ಯ ನಿರ್ವಹಣೆಯಲ್ಲೂ ಸಹಾಯ ಮಾಡುತ್ತದೆ. ನಿಮ್ಮ ಹಲ್ಲುಗಳ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುವ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಇರುವುದು ಉತ್ತಮ.
ಬಾಯಿಯ ಸ್ವಚ್ಛತೆ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ನಾವು ಸೇವಿಸಿದ ಆಹಾರ ಪದಾರ್ಥಗಳ ಪಳೆಯುಳಿಕೆಗಳು ಹಲ್ಲುಗಳ ಸಂದುಗಳಲ್ಲಿ ಸಿಕ್ಕಿಹಾಕಿಕೊಂಡು ಬಾಯಿಯ ದುರ್ವಾಸನೆಗೆ ಕಾರಣವಾಗುತ್ತವೆ. ಹಾಗಾಗಿ ದಿನಕ್ಕೆ ಕನಿಷ್ಠ ಎರಡು ಬಾರಿ ಸ್ವಚ್ಛವಾಗಿ ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಬೇಕು. ಇದರ ಜೊತೆಗೆ ಮಧ್ಯ ಮಧ್ಯದಲ್ಲಿ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವ ಅಭ್ಯಾಸ, ಆಯಿಲ್ ಪುಲ್ಲಿಂಗ್ ಇತ್ಯಾದಿಗಳು ಸಹ ಸೇರಿಕೊಂಡರೆ ಹಲ್ಲು ಹಾಗೂ ವಸಡುಗಳ ಸೋಂಕಿನ ಜೊತೆಗೆ ಬಾಯಿಯ ದುರ್ವಾಸನೆ ಕೂಡ ದೂರವಾಗುತ್ತದೆ.

ಹಲ್ಲಿನ ಆರೋಗ್ಯಕ್ಕಾಗಿ ನಾವು ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ. ಕಡಿಮೆ ಸಿಹಿ ಪದಾರ್ಥಗಳನ್ನು ತಿನ್ನುವುದು, ಮೌತ್ ವಾಷ್‌ಗಳನ್ನು ಬಳಸುವುದು ಹಾಗೂ ನಿಯಮಿತವಾಗಿ ದಂತವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳ್ಳುವುದು ಇವೆಲ್ಲಾ ಆರೋಗ್ಯವಂತ ಹಲ್ಲುಗಳಿಗೆ ಮುಖ್ಯವಾದ ಕ್ರಮಗಳು. ಆದರೆ, ನಮ್ಮಲ್ಲಿ ನೈಸರ್ಗಿಕವಾಗಿ ಲಭ್ಯವಿರುವ ಹಲವಾರು ಆಹಾರ ಪದಾರ್ಥಗಳಿಂದ ದಂತ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕ್ಯಾಂಡಿ ಸೇವಿಸುವುದು ನಿಮ್ಮ ಹಲ್ಲುಗಳ ಆರೋಗ್ಯಕ್ಕೆ ಮಾರಕ. ಹುಳಿ ಕ್ಯಾಂಡಿ ಹೆಚ್ಚಿನ ರೀತಿಯ ಆಮ್ಲಗಳನ್ನು ಹೊಂದಿರುತ್ತದೆ. ಇವುಗಳನ್ನು ಅಗಿಯುವುದರಿಂದ ಅವು ಹೆಚ್ಚು ಸಮಯದವರೆಗೆ ಹಲ್ಲುಗಳಿಗೆ ಅಂಟಿಕೊಳ್ಳುತ್ತವೆ. ಇದರಿಂದಾಗಿ ಹಲ್ಲುಗಳಲ್ಲಿ ಹುಳುಕುತನ ಕಂಡುಬರುತ್ತದೆ. ಹೀಗಾಗಿ ಹೆಚ್ಚು ಕ್ಯಾಂಡಿ ಸೇವಿಸುವುದರಿಂದ ದೂರವಿರಬೇಕು.
ನೀರನ್ನು ಕುಡಿಯುವುದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ ಮಾತ್ರವಲ್ಲ, ಹಲ್ಲುಗಳಲ್ಲಿರುವ ಸಕ್ಕರೆ ಮತ್ತು ಆಮ್ಲಗಳನ್ನು ತೊಳೆದುಹಾಕುವುದು ಸಾಧ್ಯವಾಗುತ್ತದೆ. ನೀವು ಏನನ್ನಾದರೂ ತಿಂದಾಗ , ಆ ಆಹಾರದ ಕಣಗಳು ಹಲ್ಲುಗಳ ನಡುವೆ ಸಿಲುಕಿಕೊಳ್ಳುತ್ತವೆ, ಅವು ಹಾನಿಕಾರಕವಾಗಿದ್ದು, ದಂತ ಕವಚವನ್ನು ಕೊಳೆಯುವಂತೆ ಮಾಡುತ್ತವೆ. ನೀರನ್ನು ಕುಡಿದಾಗ ಅಂತಹ ಕಣಗಳು ತೊಳೆದುಹೋಗುತ್ತವೆ ಮತ್ತು ವಸಡುಗಳು ಹಾನಿಕಾರಕ ಬ್ಯಾಕ್ಟೀರಿಯಾ ಸೃಷ್ಟಿಸುವುದು ಕಡಿಮೆ ಆಗುತ್ತದೆ.
ಸೌತೆಕಾಯಿ ಮತ್ತು ಟೊಮೇಟೊ ಹಣ್ಣುಗಳನ್ನು ಹಸಿಯಾಗಿ ತಿನ್ನುವುದರಿಂದ ಹಲ್ಲುಗಳು ಹಾಗೂ ವಸಡುಗಳಿಗೆ ದೀರ್ಘ ಕಾಲ ಆರೋಗ್ಯಕರವಾಗಿ ಮತ್ತು ಭದ್ರವಾಗಿ ಇರುವಂತೆ ಅನುಕೂಲವಾಗುವ ನಾರಿನ ಅಂಶ ನೈಸರ್ಗಿಕ ರೂಪದಲ್ಲಿ ಸಿಗಲಿದೆ. ಯಾವ ಆಹಾರಗಳಲ್ಲಿ ನಾರಿನಂಶ ಹೆಚ್ಚಾಗಿ ಸಿಗಲಿದೆ ಅಂತಹ ಆಹಾರ ಪದಾರ್ಥಗಳು ಹಲ್ಲುಗಳನ್ನು ಸ್ವಚ್ಛ ಮಾಡುವುದು ಮಾತ್ರವಲ್ಲದೆ ಹುಳುಕು ಹಲ್ಲು ಸಮಸ್ಯೆಯನ್ನು ದೂರಮಾಡುತ್ತದೆ. ಇದರ ಜೊತೆಗೆ ಹಸಿ ತರಕಾರಿಗಳು ಹಲ್ಲುಗಳ ಆಯಸ್ಸನ್ನು ಹೆಚ್ಚು ಮಾಡುತ್ತವೆ.

ಹಣ್ಣುಗಳನ್ನು ಜಗಿದು ತಿನ್ನುವುದರಿಂದ ಅದರಲ್ಲಿರುವ ಅಗತ್ಯವಾದ ವಿಟಮಿನ್ ಅಂಶಗಳು ಮತ್ತು ಪೌಷ್ಟಿಕ ಸತ್ವಗಳು ನೇರವಾಗಿ ಹಲ್ಲು ಹಾಗೂ ವಸಡುಗಳ ಜಾಗಕ್ಕೆ ತಲುಪುತ್ತವೆ. ಇದರ ಜೊತೆಗೆ ಊಟ ಆದ ಮೇಲೆ ಹಣ್ಣುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳುವುದರಿಂದ ನೀವು ಆಹಾರ ಸೇವನೆ ಮಾಡಿದ ನಂತರ ಹಲ್ಲುಗಳ ಸಂದುಗಳಲ್ಲಿ ಉಳಿದುಕೊಳ್ಳುವ ಆಹಾರದ ಪಳೆಯುಳಿಕೆಗಳನ್ನು ತೆಗೆದು ಹಾಕಲು ಅನುಕೂಲವಾಗುತ್ತದೆ. ಇದರಿಂದ ಹೆಚ್ಚು ಕಾಲ ನಿಮ್ಮ ಹಲ್ಲುಗಳು ಬಾಳಿಕೆ ಬರುತ್ತವೆ.
ನೀರು ಕುಡಿಯುವುದರಿಂದ ಹಲ್ಲುಗಳಲ್ಲಿರುವ ಸಕ್ಕರೆ ಮತ್ತು ಆಮ್ಲಗಳನ್ನು ತೊಳೆದುಹಾಕುವುದು ಸಾಧ್ಯವಾದರೆ, ಇನ್ನೊಂದೆಡೆ ಹಾಲಿನ ಉತ್ಪನ್ನಗಳ ಸೇವನೆಯಿಂದ ಹಲ್ಲಿನ ದಂತ ಕವಚಗಳು ಗಟ್ಟಿಯಾಗುತ್ತವೆ. ಏಕೆಂದರೆ ಹಾಲಿನ ಉತ್ಪನ್ನಗಳಲ್ಲಿ ಇರುವ ಹೈಡ್ರಾಕ್ಸಿಪಟೈಟ್ ಖನಿಜಗಳು ದಂತ ಕವಚವನ್ನು ಬಲಪಡಿಸುತ್ತವೆ. ಹಾಲನ್ನು ಕುಡಿಯುವುದು ಅಲ್ಲಿನ ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ವಿಧಾನಗಳಲ್ಲಿ ಒಂದು. ಏಕೆಂದರೆ ಹಾಲಿನಲ್ಲಿ ಹಲ್ಲಿನ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಪೋಷಕಾಂಶವಾದ ಕ್ಯಾಲ್ಸಿಯಂ ಇದೆ.
ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿ ನಿಭಾಯಿಸುವ ಶಕ್ತಿ ಜೀರಿಗೆ ಹಾಗೂ ಸೋಂಪು ಕಾಳುಗಳಿಗಿದೆ. ಇದರ ಜೊತೆಗೆ ಹಲ್ಲುಗಳ ಸ್ವಚ್ಛತೆಯಲ್ಲಿ ಸಹ ಇವುಗಳು ಕೆಲಸ ಮಾಡುತ್ತವೆ. ನಾವು ಸೇವಿಸುವ ಆಹಾರದಲ್ಲಿ ಕಂಡು ಬರುವ ಕಾರ್ಬೋಹೈಡ್ರೇಟ್ ಅಂಶಗಳು ಹಲ್ಲುಗಳ ಸಂದುಗಳಲ್ಲಿ ಉಳಿದುಕೊಂಡರೆ ಅದರಿಂದ ಮುಂಬರುವ ದಿನಗಳಲ್ಲಿ ವಸಡುಗಳಿಗೆ ತೊಂದರೆ ಉಂಟಾಗುವುದು. ಹಲ್ಲುಗಳ ಹುಳುಕು ಕೂಡ ಕೆಲವೊಮ್ಮೆ ಇದೇ ಕಾರಣದಿಂದ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಊಟ ಆದಮೇಲೆ ಅರ್ಧ ಟೀ ಚಮಚ ಸೋಂಪು ಕಾಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಿಗಿಯುವ ಅಭ್ಯಾಸ ಮಾಡಿಕೊಳ್ಳಿ.
ದೇಹಕ್ಕೆ ಜೇನು ತುಪ್ಪ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಇದರಲ್ಲಿ anti – inflammatory ಮತ್ತು ಆಂಟಿ – ಮೈಕ್ರೋಬಿಯಲ್ ಗುಣ – ಲಕ್ಷಣಗಳು ಇರುತ್ತವೆ. ಆದರೂ ಕೂಡ ಅತಿ ಹೆಚ್ಚು ಸಿಹಿ ಅಂಶ ಒಳಗೊಂಡಿರುವ ಹಲ್ಲುಗಳು ಕೆಲವೊಮ್ಮೆ ನಮ್ಮ ಅನಾರೋಗ್ಯಕ್ಕೆ ಕಾರಣವಾಗುವುದರ ಜೊತೆಗೆ ಹುಳುಕು ಹಲ್ಲಿಗೆ ದಾರಿ ಮಾಡಿಕೊಡುತ್ತವೆ. ಹಾಗಾಗಿ ನಿಯಮಿತವಾಗಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಜೇನು ತುಪ್ಪ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ . ವಿಶೇಷವಾಗಿ ಮಕ್ಕಳ ಹಲ್ಲುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಹಸಿರು ಸೊಪ್ಪು ತರಕಾರಿಗಳು ಮತ್ತು ಇತರ ಅತ್ಯಧಿಕ ನಾರಿನ ಅಂಶವನ್ನು ಉಳ್ಳ ಆಹಾರಗಳ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟ ಹೊಂದಲು ಸಾಧ್ಯವಾಗುತ್ತದೆ, ಮಾತ್ರವಲ್ಲ ಅವು ನಿಮ್ಮ ಹಲ್ಲುಗಳ ಆರೋಗ್ಯದ ಮೇಲೂ ಅದ್ಭುತ ಪರಿಣಾಮಗಳನ್ನು ಉಂಟು ಮಾಡಬಲ್ಲವು. ಪಾಲಕ್, ಲೆಟ್ಯೂಸ್, ಕಾಲೆ ಮತ್ತು ಅರುಗ್ಯುಲದಂತಹ ಅನೇಕ ಹಸಿರು ಸೊಪ್ಪು ತರಕಾರಿಗಳು ಹಲ್ಲಿನ ದಂತ ಕವಚವನ್ನು ಬಲಪಡಿಸಲು ಸಹಾಯ ಮಾಡುವ ಕೆಲವು ಸೂಪರ್ ಫುಡ್‍ಗಳಾಗಿವೆ.

ಬ್ರೊಕೋಲಿ, ಪಾಲಕ್ ಮೊದಲಾದ ಹಸಿರು ತರಕಾರಿಗಳು ದೇಹಕ್ಕೆ, ನಮ್ಮ ಹಲ್ಲಿನ ಆರೋಗ್ಯಕ್ಕೆ ಬೇಕಾಗುವ ಅನೇಕ ಖನಿಜಗಳನ್ನು, ಜೀವಸತ್ವಗಳನ್ನು ಒದಗಿಸುತ್ತವೆ. ಗಜ್ಜರಿ, ಸೌತೆಕಾಯಿ, ಬೀಟ್‌ರೂಟ್, ಸಿಹಿಗೆಣಸು ಇನ್ನಿತರ ಗಡ್ಡೆಗಳ ಸೇವನೆಯಿಂದ ನಮ್ಮ ದೇಹಕ್ಕೆ ಬೇಕಾಗಿರುವ ನಾರಿನಂಶ ಜೊತೆಗೆ ಜೀವಸತ್ವಗಳು ಹೆಚ್ಚಿಸುತ್ತವೆ. ಇಂತಹ ಗಡ್ಡೆಗಳನ್ನು ಹಸಿಯಾಗಿ ಸೇವಿಸಿದಾಗ ನಮ್ಮ ಲಾಲಾರಸ, ಉತ್ಪತ್ತಿಯಾಗಿ ಹಲ್ಲುಗಳ ಸಂದುಗಳಲ್ಲಿ ಕುಳಿತಿರುವ ಆಹಾರ ಕಣಗಳನ್ನು ಶುಭ್ರಗೊಳಿಸಿ ಹಲ್ಲುಗಳು ಹೊಳೆಯುವಂತೆ ಮಾಡುತ್ತವೆ.
ಕ್ರ್ಯಾನ್‍ಬೆರಿ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಹಾಗೆಯೇ ಹಲ್ಲಿನ ಆರೋಗ್ಯಕ್ಕೂ ಕೂಡ. ಕ್ರ್ಯಾನ್‍ಬೆರಿ ರಸವು ಪ್ಲಾಕ್ ಅನ್ನು ಸುಮಾರು ಶೇಕಡಾ 95ರಷ್ಟು ಕಡಿಮೆ ಮಾಡುತ್ತದೆ.
ಬೇಕರಿ ಪದಾರ್ಥಗಳಾದ ಬ್ರೆಡ್ಡು ಬಿಸ್ಕೆಟ್ ಮತ್ತು ಕೇಕು, ನಮ್ಮ ಮನೆಯ ಅಕ್ಕಪಕ್ಕ ಎಲ್ಲಾದರೂ ಒಂದು ಬೇಕರಿ ಇದ್ದರಂತೂ ನಾವು ಅಲ್ಲಿಗೆ ರೆಗ್ಯುಲರ್ ಕಸ್ಟಮರ್ ಆಗಿಬಿಡುತ್ತೇವೆ. ತಿನ್ನಲು ಅಲ್ಲಿ ಏನೂ ಸಿಗದೆ ಇದ್ದರೂ ಕಡೆಪಕ್ಷ ಒಂದು ಪೌಂಡ್ ಬ್ರೆಡ್ ಆದರೂ ತಂದು ತಿನ್ನುತ್ತೇವೆ. ಆದರೆ ನೆನಪಿರಲಿ ಬೇಕರಿಯಲ್ಲಿ ತಯಾರು ಮಾಡುವ ಆಹಾರ ಪದಾರ್ಥಗಳು ದೀರ್ಘ ಕಾಲ ಹಾಳಾಗದೆ ಹಾಗೆ ಉಳಿಯಲಿ ಎನ್ನುವ ಕಾರಣಕ್ಕೆ ಅವುಗಳಲ್ಲಿ ಸಕ್ಕರೆ ಅಂಶ ಸ್ವಲ್ಪ ಹೆಚ್ಚು ಬಳಕೆ ಮಾಡಿ ಸಂಸ್ಕರಣೆ ಮಾಡಿರುತ್ತಾರೆ. ಹಾಗಾಗಿ ಇಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಹಲ್ಲುಗಳ ಆರೋಗ್ಯ ಹದಗೆಡುವುದು ಖಂಡಿತ. ಇದರ ಜೊತೆಗೆ ಬೇಕರಿಯಲ್ಲಿ ಸಿಗುವ ಚಾಕ್ಲೇಟ್ ಹಾಗೂ ಇನ್ನಿತರ ಸಿಹಿ ತಿಂಡಿ ತಿನಿಸುಗಳು ಹಲ್ಲುಗಳ ಆರೋಗ್ಯಕ್ಕೆ ಹಾನಿಕರ
ತೆಂಗಿನ ಎಣ್ಣೆಯ ಬಳಕೆಯಿಂದ ನಿಮ್ಮ ವಸಡುಗಳ ಆರೋಗ್ಯ ಕಾಪಾಡಲು ಸಹಾಯ ಆಗಬಹುದು. ತೆಂಗಿನ ಎಣ್ಣೆ ದಂತಕ್ಷಯವನ್ನು ತಡೆಯುತ್ತದೆ ಮತ್ತು ವಸಡುಗಳಿಗೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ತೆಂಗಿನ ಎಣ್ಣೆಯನ್ನು ಮುಕ್ಕಳಿಸಲು ಮತ್ತು ಅಡುಗೆಯಲ್ಲಿ ಬಳಸಿ.
ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಬಳಕೆಮಾಡಿ ಇವುಗಳನ್ನು ತಯಾರು ಮಾಡಿರುತ್ತಾರೆ. ಬೇಸಿಗೆಕಾಲ ಬಂತು ಎಂಬ ಕಾರಣಕ್ಕೆ ನೀವು ತಂಪು ಪಾನೀಯಗಳನ್ನು ಹೆಚ್ಚು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಕೇವಲ 3- 4 ವರ್ಷಗಳಲ್ಲಿ ಹಲ್ಲುಗಳ ತೊಂದರೆಯನ್ನು ಕಂಡು ಕೊಳ್ಳುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ವಸಡುಗಳ ಸಮಸ್ಯೆ ಕೂಡ ಬರಬಹುದು.
ಮಾಂಸ ಹಾಗೂ ಮೀನು ಫಾಸ್ಫೊರಸ್ ಹಾಗೂ ಕ್ಯಾಲ್ಸಿಯಂ ಅಂಶಗಳನ್ನು ಹೊಂದಿದ್ದು, ಹಲ್ಲುಗಳು ಹಾಗೂ ಎಲುಬುಗಳ ಆರೋಗ್ಯಕ್ಕೆ ತುಂಬಾ ಉತ್ತಮ
ಮಂಜುಗಡ್ಡೆ ನೀರು ಮಾತ್ರ ಹೊಂದಿರುತ್ತದೆಂದು ನಾವು ಭಾವಿಸುತ್ತೇವೆ. ಆದ್ದರಿಂದ ಅದನ್ನು ಜಗಿಯುವುದರಿಂದ ಯಾವುದೇ ಹಾನಿಯಾಗುವುದಿಲ್ಲವೆಂದು ನಾವು ತಿಳಿದಿರುತ್ತೇವೆ. ಅಮೇರಿಕನ್ ಡೆಂಟಲ್ ಅಸೋಸಿಯೇಷನ್ ಪ್ರಕಾರ, ಗಟ್ಟಿಯಾದ ವಸ್ತುವನ್ನು ಅಗಿಯುವುದು ದಂತಕವಚವನ್ನು ಹಾನಿಗೊಳಿಸುತ್ತದೆ ಮತ್ತು ಹಲ್ಲುಗಳ ಬಿರುಕುಗಳನ್ನು ಉಂಟುಮಾಡುತ್ತದೆ. ನೀವು ಸೀಮಿತ ಪ್ರಮಾಣದಲ್ಲಿ ಐಸ್ ಬಳಸುತ್ತಿದ್ದರೂ ಸಹ ಅದನ್ನು ಎಂದಿಗೂ ಅಗಿಯಲು ಪ್ರಯತ್ನಿಸಬೇಡಿ.
ಕಾರ್ಬೊನೇಟೆಡ್ ಪಾನೀಯಗಳು ಎಂದು ಕರೆಯಲ್ಪಡುವ ಮಾರುಕಟ್ಟೆಯಲ್ಲಿ ಕಂಡುಬರುವ ತಂಪು ಪಾನೀಯಗಳು ನಮ್ಮ ಹಲ್ಲುಗಳಿಗೆ ಹಾನಿ ಮಾಡುವ ಬಹಳಷ್ಟು ಸೋಡಾವನ್ನು ಹೊಂದಿರುತ್ತವೆ. ದಂತಕವಚವನ್ನು ಹಾಳುಮಾಡಲು ಕಾರಣವಾದ ಹೆಚ್ಚಿನ ಆಮ್ಲವನ್ನು ಉತ್ಪಾದಿಸಲು ಸೋಡಾ ಸೇವನೆ ತಪ್ಪಿಸುವುದು ಒಳಿತು.
ಧನ್ಯವಾದಗಳು.
GIPHY App Key not set. Please check settings