ಆಹಾರದಲ್ಲಿ ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಬಳಸಿಕೊಂಡರೆ ಆರೋಗ್ಯದ ಸಮಸ್ಯೆಗಳನ್ನು ನಾವು ಅರ್ಧಭಾಗದಷ್ಟು ಪರಿಹರಿಸಬಹುದೆಂದು ಮತ್ತೆ ಮತ್ತೆ ಕೇಳುತ್ತಾ ಮತ್ತು ಓದುತ್ತಾ ಇರುತ್ತೇವೆ. ಹೀಗಿರುವಾಗ ಆಹಾರ ಕ್ರಮದಲ್ಲಿ ತಿನ್ನಲು ಆರೋಗ್ಯಕರವಾದ ಸೊಪ್ಪುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ನಮ್ಮಲ್ಲಿ ಸಾಂಪ್ರದಾಯಿಕವಾಗಿ ನಮ್ಮ ಆಹಾರದ ಭಾಗವಾಗಿ ಕೆಲವು ಆರೋಗ್ಯಕರ ಸೊಪ್ಪುಗಳಿವೆ. ಉದಾಹರಣೆಗೆ, ಪಾಲಕ್ ಸೊಪ್ಪು ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಲು ಪ್ರಮುಖ ಘಟಕವಾಗಿ ಬಹಳ ಕಾಲದಿಂದಲೂ ಬಳಸುತ್ತಾರೆ. ಈ ಆರೋಗ್ಯಕರ ಸೊಪ್ಪುಗಳು ನಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ವಿವಿಧ ರೂಪಗಳಲ್ಲಿ ಸೇರಿಸಬೇಕು.
ಗಿಡಮೂಲಿಕೆಗಳಾಗಿಯೂ ಮತ್ತು ಮಸಾಲೆ ಸೊಪ್ಪುಗಳಾಗಿಯೂ ಇವೆ. ಆಹಾರವನ್ನು ಅಲಂಕರಿಸಲು ಥೈಮ್, ಪಾರ್ಸ್ಲಿ ಮತ್ತು ಪುದೀನ ಸೊಪ್ಪುಗಳನ್ನು ನಾವೆಲ್ಲರೂ ಬಳಸುತ್ತೇವೆ. ಈ ಗಿಡಮೂಲಿಕೆಯ ಸೊಪ್ಪುಗಳನ್ನು ಔಷಧವಾಗಿಯೂ ಬಳಸುತ್ತೇವೆ.ತುಳಸಿ ಎಲೆಯನ್ನು ಕೆಮ್ಮು ಮತ್ತು ಶೀತವನ್ನು ಗುಣಪಡಿಸಲು ಬಳಸುತ್ತೇವೆ. ನಾವು ಆಹಾರಕ್ಕೆಂದು ಬಳಸುವ ಆರೋಗ್ಯಕರ ಸೊಪ್ಪುಗಳೆಲ್ಲವೂ ಹಸಿರು ಬಣ್ಣದಾಗಿರುವುದಿಲ್ಲ. ಎಲ್ಲಾ ಹಸಿರುಬಣ್ಣದ ಸೊಪ್ಪುಗಳು ಮಾತ್ರ ಆರೋಗ್ಯಕರ ತರಕಾರಿಯೆಂದು ನಾವೆಂದುಕೊಂಡಿದ್ದೇವೆ. ಆದರೆ ಕೆಂಪು ಬಣ್ಣದ ತರಕಾರಿಗಳು ಮತ್ತು ಗಿಡಮೂಲಿಕೆಗಳಲ್ಲಿ ಅನೇಕ ಅನನ್ಯ ಆರೋಗ್ಯ ಲಾಭಗಳಿವೆ. ಹಾಗಾಗಿ ಕೆಂಪು ಬಣ್ಣದ ತರಕಾರಿಗಳಲ್ಲಿ ಅಮರಾಂತಸ್ ಸೊಪ್ಪು ಆರೋಗ್ಯಕರ ಆಹಾರಗಳಲ್ಲಿ ಸೇರಿಕೊಂಡಿದೆ.
ಪಾರ್ಸ್ಲಿ ಸೊಪ್ಪು :

ಕೊತ್ತಂಬರಿ ಜಾತಿಯಾಗಿದ್ದು ಅದರ ಎಲೆಗಳಿಗಿಂತ ದೊಡ್ಡದಾಗಿರುತ್ತವೆ. ಇದು ಒಂದು ಅತ್ಯಂತ ಅರೋಗ್ಯಕರ ಗಿಡಮೂಲಿಕೆಯಾಗಿದೆ. ಈ ಆರೋಗ್ಯಕರ ಸೊಪ್ಪಿನ ಉಪಯೋಗದಿಂದ ಜೀವಾಣುವಿನಲ್ಲಿ ಉತ್ಪತ್ತಿಯಾಗುವ ವಿಷವನ್ನು ಹೊರದೂಡಿ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯಮಾಡುತ್ತದೆ.
ಸಾಸಿವೆ ಸೊಪ್ಪು :

ಸಾಸಿವೆ ಸೊಪ್ಪು ಭಾರತದಲ್ಲಿ ಒಂದು ಪ್ರಸಿದ್ಧ ಸೊಪ್ಪಿನ ತರಕಾರಿ. ಸಾಸಿವೆ ಗಿಡದ ಸೊಪ್ಪು ಮಸಾಲೆಯುಕ್ತ ಪರಿಮಳವನ್ನು ಹೊಂದಿದ್ದು ಅದರಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಎ ನಿಮ್ಮ ಚರ್ಮ ಮತ್ತು ಕಣ್ಣುಗಳ ಆರೋಗ್ಯವನ್ನು ಸುಧಾರಿಸುತ್ತದೆ. ಅದರಲ್ಲಿ ಆಂಟಿಆಕ್ಸಿಡೆಂಟ್ ಹೇರಳವಾಗಿದೆ.
ಮೆಂತ್ಯೆ ಸೊಪ್ಪು :

ಮೆಂತ್ಯೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧವನ್ನಾಗಿ ಉಪಯೋಗಿಸುತ್ತಾರೆ. ಇನ್ನು ಪೌಷ್ಟಿಕಾಂಶದ ಆಗರವಾಗಿರುವ ಮೆಂತೆ ಸೊಪ್ಪಿನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳು ಹೊಂದಿದೆ. ಉದಾಹರಣೆಗೆ ಹೊಟ್ಟೆ ನೋವು, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆ ಎಲೆಗಳಿಂದ ಮನೆಔಷಧಿ ತಯಾರಿಸಬಹುದು.
ಮೆಂತ್ಯೆ ಸೊಪ್ಪು ತುಂಬಾ ಲಾಭಕಾರಿ. ಇದು ಮಧುಮೇಹಿಗಳಲ್ಲದೆ ಇರುವ ಜನರಲ್ಲಿ ಕಾರ್ಬ್ಸ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದು. ಮೆಂತ್ಯೆಯು ಇನ್ಸುಲಿನ್ ಚಟುವಟಿಕೆ ಸುಧಾರಣೆ ಮಾಡುವುದು. ಮೆಂತ್ಯೆಯಲ್ಲಿ ಇರುವ ನಾರಿನಾಂಶವು ಇದಕ್ಕೆ ಕಾರಣವಾಗಿದೆ.
ಹರಿವೆ ಸೊಪ್ಪು :

ಹರಿವೆ ಸೊಪ್ಪಿನಲ್ಲಿ ಪ್ರಮುಖ ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ಗಳು ಲಭ್ಯವಿದ್ದು, ಇದು ಉರಿಯೂತ ತಗ್ಗಿಸುವುದು ಮತ್ತು ಆರೋಗ್ಯಕ್ಕೆ ಪೋಷಕಾಂಶಗಳನ್ನು ನೀಡುವುದು. ಹರಿವೆ ಸೊಪ್ಪಿನಲ್ಲಿ ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿ ಇದೆ. ನಾರಿನಾಂಶವನ್ನು ತಿನ್ನುವುದರಿಂದ ತೂಕ ಇಳಿಸಲು ಮತ್ತು ಕೊಲೆಸ್ಟ್ರಾಲ್ ತಗ್ಗಿಸುವ ಪರಿಣಾಮ ಹೃದಯದ ಕಾಯಿಲೆ ನಿವಾರಣೆ ಮಾಡಲು ನೆರವಾಗುವುದು. ಅಧಿಕ ಪ್ರೋಟೀನ್ ಮತ್ತು ನಾರಿನಾಂಶವನ್ನು ಹೊಂದಿರುವಂತಹ ಹರಿವೆ ಸೊಪ್ಪು ಹಸಿವು ಕಡಿಮೆ ಮಾಡುವುದು ಮತ್ತು ತೂಕ ಇಳಿಸುವುದು.
ಪಾಲಕ್ ಸೊಪ್ಪು

ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ, ಕಬ್ಬಿಣಾಂಶವಿದ್ದು, ಇದು ಚಯಾಪಚಯ ಉತ್ತಮಪಡಿಸುವ ಜತೆಗೆ ವೇಗವಾಗಿ ಕ್ಯಾಲರಿ ದಹಿಸಲು ನೆರವಾಗುವುದು. ಕೊಬ್ಬಿನಾಂಶವು ಹೆಚ್ಚಾಗಿದ್ದರೆ, ಆಗ ನೀವು ಪಾಲಕವನ್ನು ತಿಂದರೆ ಒಳ್ಳೆಯದು. ಪಾಲಕ್ ಸೊಪ್ಪಿನಲ್ಲಿ ಆಂಟಿಆಕ್ಸಿಡೆಂಟ್, ವಿಟಮಿನ್ ಗಳು, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫಾಲಿಕ್ ಆಮ್ಲವು ಇದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ. ಈ ಎಲ್ಲಾ ವಿಟಮಿನ್ ಗಳು ರಕ್ತ ಸಂಚಾರವನ್ನು ಉತ್ತಮಪಡಿಸುವುದು ಮತ್ತು ರಕ್ತನಾಳವು ಬ್ಲಾಕ್ ಆಗದಂತೆ ಮಾಡುವುದು.
ನುಗ್ಗೆ ಸೊಪ್ಪು :

ಮಧುಮೇಹ ಇದ್ದಾಗ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆ ಆಗುತ್ತದೆ. ಆದರೆ, ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಡಿ ಅಂಶ ಹೇರಳವಾಗಿರುತ್ತದೆ. ಇದು, ಮನುಷ್ಯನ ದೇಹದಲ್ಲಿ ಹೇರಳವಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಪಾಲಕ್ ಸೊಪ್ಪಿಗಿಂತಲೂ ಆರು ಪಟ್ಟು ಹೆಚ್ಚು ಕಬ್ಬಿಣದ ಅಂಶ ಇದೆ. ಹಾಗಾಗಿ ಇದು ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತ ಹೀನತೆ ಕಡಿಮೆಯಾಗುತ್ತದೆ. ಎರಡು ಚಮಚ ನುಗ್ಗೆ ಸೊಪ್ಪಿನ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ರಕ್ತ ಶುದ್ಧವಾಗುತ್ತದೆ.
ಇದೆಷ್ಟು ಅಲ್ಲದೆ ನಮ್ಮಲ್ಲಿ ಹಲವಾರು ಸೊಪ್ಪುಗಳು ಆರೋಗ್ಯಕ್ಕೆ ಹಿತವಾಗಿದೆ.
ಧನ್ಯವಾದಗಳು.
GIPHY App Key not set. Please check settings