in

ಮೈಗ್ರೇನ್ ತಲೆನೋವು ಕಾರಣಗಳು

ಮೈಗ್ರೇನ್ ತಲೆನೋವು
ಮೈಗ್ರೇನ್ ತಲೆನೋವು

ಮೈಗ್ರೇನ್ ತಲೆನೋವು, ಒಂದು ಸೈಡ್ ತಲೆನೋವು ತುಂಬಾ ತೊಂದರೆ ಕೊಡುತ್ತೆ. ಯಾವ ಕೆಲಸ ಮಾಡುವುದು ಬೇಡ, ಸುಮ್ಮನೇ ಹೋಗಿ ಮಲಗೋಣ ಅಂದರೆ ಕೂಡ ಸಾಧ್ಯ ಆಗಲ್ಲ. ಕಡೆಗೆ ಪೈನ್ ಕಿಲ್ಲರ್ ತೊಗೊಂಡು ಮಲಗುವ ಸಂದರ್ಭ.

ಮೈಗ್ರೇನ್ ತಲೆನೋವು ಕಾರಣಗಳು
ತಲೆನೋವು

ಮೈಗ್ರೇನ್‌ ತಲೆನೋವು ಏಕಪಾರ್ಶ್ವೀಯವಾಗಿ, ಮಿಡಿಯುತ್ತದೆ ಹಾಗೂ ಇದು 4ರಿಂದ 72 ಗಂಟೆಗಳವರೆಗೆ ಇರುತ್ತದೆ. ರೋಗಲಕ್ಷಣಗಳೆಂದರೆ – ವಾಕರಿಕೆ, ವಾಂತಿ, ಫೋಟೊಫೋಬಿಯ ಮತ್ತು ಫೋನೊಫೋಬಿಯ ಮೈಗ್ರೇನ್‌ ತಲೆನೋವಿನಿಂದ ಬಳಲುವ ಸರಿಸುಮಾರು ಮೂರನೇ ಒಂದರಷ್ಟು ಮಂದಿ ಅಸಾಮಾನ್ಯ ದೃಷ್ಟಿಯ, ಘ್ರಾಣ ಸಂಬಂಧಿ ಅಥವಾ ಇತರ ಇಂದ್ರಿಯ ಅನುಭವಗಳ ಸೆಳವು ಸೂಚನೆಯನ್ನು ಗ್ರಹಿಸುತ್ತಾರೆ. ಇವು ಮೈಗ್ರೇನ್‌ ಕಾಣಿಸಿಕೊಳ್ಳುವುದರ ಮುನ್ಸೂಚನಾ ಲಕ್ಷಣಗಳು. ತಲೆನೋವಿಗೆ ನೋವು ಶಾಮಕ, ವಾಕರಿಕೆಗೆ ವಾಂತಿ-ಶಮನಕ್ಕೆ ಔಷಧಗಳನ್ನು ತೆಗೆದುಕೊಳ್ಳುವುದು ಹಾಗೂ ಪ್ರಚೋದಕ ಕಾರಣಗಳಿಂದ ದೂರವಿರುವುದು ಆರಂಭಿಕ ಚಿಕಿತ್ಸೆಯಾಗಿದೆ. ಮೈಗ್ರೇನ್‌ ತಲೆನೋವಿಗೆ ಕಾರಣ ತಿಳಿದಿಲ್ಲ. ಸಿರೊಟೋನಿನ್ ಸಂಬಂಧಿತ ನಿಯಂತ್ರಣ ವ್ಯವಸ್ಥೆಯಲ್ಲಿನ ಏರುಪೇರು ಇದಕ್ಕೆ ಕಾರಣವೆಂಬುದು ಸಾಮಾನ್ಯವಾಗಿ ಸಿದ್ಧಾಂತ . ಮೈಗ್ರೇನ್‌ ತಲೆನೋವಿನಲ್ಲಿ ಭಿನ್ನತೆಗಳಿವೆ, ಕೆಲವು ಮಿದುಳುಕಾಂಡದಲ್ಲಿ ಹುಟ್ಟುತ್ತವೆ. ಜೀವಕೋಶಗಳ ನಡುವೆ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಐಯಾನುಗಳ ಸಾಗಣೆ ಸರಿಯಾಗಿರದಿರುವುದು ಮತ್ತೆ ಕೆಲವು ಆನುವಂಶೀಯವಾಗಿ ಬರುತ್ತವೆ.ಮೈಗ್ರೇನ್‌ ತಲೆನೋವನ್ನು ಹೆಚ್ಚಿಸುವಲ್ಲಿ 60ರಿಂದ 65 ಪ್ರತಿಶತ ಆನುವಂಶೀಯ ಪ್ರಭಾವವಿದೆ ಎಂಬುದನ್ನು ಅವಳಿಗಳ ಮೇಲೆ ಮಾಡಿದ ಅಧ್ಯಯನಗಳು ಸೂಚಿಸುತ್ತವೆ. ಹಾರ್ಮೋನಿನ ಏರಿಳಿತವೂ ಮೈಗ್ರೇನ್‌‌ಗೆ ಕಾರಣವಾಗುತ್ತದೆ.75 ಪ್ರತಿಶತದಷ್ಟು ವಯಸ್ಕ ರೋಗಿಗಳು ಮಹಿಳೆಯರಾಗಿದ್ದಾರೆ, ಆದರೂ ಮೈಗ್ರೇನ್‌ ಹರೆಯದ ಹುಡುಗ ಮತ್ತು ಹುಡುಗಿಯರಲ್ಲಿ ಸಮ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ.ಮೈಗ್ರೇನ್‌ ತಲೆನೋವಿನ ಲಕ್ಷಣಗಳು ಗರ್ಭಣಿಯರಲ್ಲಿ ಕಾಣಿಸಿಕೊಳ್ಳುವುದಿಲ್ಲ, ಆದರೂ ಮೈಗ್ರೇನ್‌ ಇರುವ ಕೆಲವು ಮಹಿಳೆಯರಲ್ಲಿ ಗರ್ಭಿಣಿಯರಾದಾಗಲೂ ಆಗಾಗ ಕಾಣಿಸಿಕೊಳ್ಳುವುದುಂಟು.

ತಲೆ ನೋವು ಬಂದಂತಹ ಸಂದರ್ಭದಲ್ಲಿ ಹಲವರಿಗೆ ಮೂಗು ಕಟ್ಟುವುದು ಅಥವಾ ನೆಗಡಿ ಉಂಟಾಗುವುದು ಸಾಮಾನ್ಯ. ನೇರವಾಗಿ ಇದನ್ನು ಸೈನಸ್ ತಲೆ ನೋವು ಅಥವಾ ಮೈಗ್ರೇನ್ ತಲೆ ನೋವು ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ರೋಗ ನಿರ್ಣಯ ಮಾಡಲು ಯಾವುದೇ ದೃಢವಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಯಾವ ಪ್ರಕಾರದ ತಲೆ ನೋವಿನಿಂದ ವ್ಯಕ್ತಿ ನಿಜವಾಗಲೂ ಬಳಲುತ್ತಿದ್ದಾನೆ ಎಂಬ ವಿಷಯವನ್ನು ತಿಳಿದುಕೊಳ್ಳದೆ ವೈದ್ಯರು ಸಹ ಚಿಕಿತ್ಸೆ ಆರಂಭಿಸಲು ಸಾಧ್ಯವಿಲ್ಲ. ಕೆಲವೊಂದು ಅಧ್ಯಯನಗಳು ಹೇಳುವ ಹಾಗೆ ಸಾಕಷ್ಟು ಜನರು ತಮಗೆ ಮೈಗ್ರೇನ್ ತಲೆ ನೋವು ಇದ್ದರೂ ಸಹ ಅದನ್ನು ಸೈನಸ್ ಪ್ರಕಾರದ ತಲೆ ನೋವು ಇರಬಹುದು ಎಂದುಕೊಳ್ಳುತ್ತಾರೆ.

ಮೈಗ್ರೇನ್ ತಲೆನೋವು ಕಾರಣಗಳು
ಮೈಗ್ರೇನ್ ತಲೆನೋವು

ತಲೆನೋವು ಮೈಗ್ರೇನ್ ತಲೆನೋವು ಇದ್ದರೆ ಆಗ ಜೀವನ ನರಕ ಎನ್ನುವ ಭಾವನೆ ಮೂಡುವುದು. ಯಾಕೆಂದರೆ ಇದು ಯಾವುದೇ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲು ಬಿಡದಂತಹ ತಲೆನೋವು. ಕೆಲವು ಮಂದಿ ಮೈಗ್ರೇನ್ ನೋವಿನಿಂದಾಗಿ ಸಂಪೂರ್ಣವಾಗಿ ಹಾಸಿಗೆ ಹಿಡಿಯುತ್ತಾರೆ. ಇಂತಹ ನೋವನ್ನು ಕಡಿಮೆ ಮಾಡಲು ಮಾತ್ರೆಗಳಿಗೆ ಮೊರೆ ಹೋಗುವುದು ಸಹಜ. ಆದರೆ ಪ್ರತೀ ಸಲ ಮಾತ್ರೆ ಸೇವಿಸಿದರೆ ಅದರಿಂದ ಬೇರೆ ರೀತಿಯ ಅಡ್ಡಪರಿಣಾಮಗಳು ಕೂಡ ಬರಬಹುದು.

ಮೈಗ್ರೇನ್ ತಲೆನೋವಿಗೆ ಹಲವಾರು ಕಾರಣಗಳು ಇರಬಹುದು. ಇಂದಿನ ದಿನಗಳಲ್ಲಿ ಅತಿಯಾದ ಒತ್ತಡವೇ ಈ ನೋವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಮೈಗ್ರೇನ್ ತಲೆನೋವಿಗೆ ಔಷಧಿ ತೆಗೆದುಕೊಳ್ಳುವ ಬದಲು ಆಹಾರ ಕ್ರಮದಲ್ಲಿ ಕೆಲವು ಆಹಾರಗಳನ್ನು ಸೇವಿಸಿದರೆ ಅದರಿಂದ ತಲೆನೋವು ನಿವಾರಣೆ ಮಾಡ ಬಹುದು ಎಂದು ಹೇಳಲಾಗುತ್ತದೆ.ಈ ಆಹಾರದಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ತಲೆನೋವು ನಿವಾರಣೆ ಮಾಡುವುದು ಮಾತ್ರವಲ್ಲದೆ ಅದು ಬರದಂತೆ ತಡೆಯುವಲ್ಲಿಯೂ ಪ್ರಮುಖ ಪಾತ್ರ ವಹಿಸುವುದು.ಇದು ತಲೆನೋವು ತಡೆಯುತ್ತದೆ. ಕಲ್ಲಂಗಡಿ, ಬೆರ್ರಿಗಳು ಮತ್ತು ಟೊಮೆಟೊ ತಲೆನೋವು ನಿವಾರಣೆ ಮಾಡಲು ಪ್ರಮುಖ ಪಾತ್ರ ವಹಿಸುತ್ತದೆ.

ಮೈಗ್ರೇನ್ ತಲೆನೋವಿಗೆ ಪ್ರಮುಖ ಕಾರಣವೆಂದರೆ ಅದು ನಿರ್ಜಲೀಕರಣ. ನೈಸರ್ಗಿಕವಾಗಿ ನೀರಿನಾಂಶವು ಅಧಿಕಾರಿ ಇರುವಂತಹ ಕೆಲವೊಂದು ಹಣ್ಣುಗಳಲ್ಲಿ ಪ್ರಮುಖ ಖನಿಜಾಂಶಗಳಾಗಿರುವಂತಹ ಮೆಗ್ನಿಶಿಯಂ ಕೂಡ ಇರುವುದು. ಅದರಲ್ಲೂ ಬೇಸಗೆ ಸಂದರ್ಭದಲ್ಲಿ ನಿರ್ಜಲೀಕರಣವು ಹೆಚ್ಚಾಗಿ ಆಗುವ ಕಾರಣದಿಂದಾಗಿ ನೀವು ಇಂತಹ ಹಣ್ಣುಗಳನ್ನು ಸೇವಿಸಲೇಬೇಕು.ಅದೇ ರೀತಿಯಾಗಿ ಸೇಬಿನಲ್ಲಿ ಉನ್ನತ ಮಟ್ಟದ ಫ್ಲಾವನಾಯ್ಡ್ ಗಳಿದ್ದು, ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ ಮತ್ತು ತಲೆನೋವಿನಂತಹ ಒತ್ತಡದ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುವುದು.

ಮೈಗ್ರೇನ್ ತಲೆ ನೋವಿನ ಸಮಸ್ಯೆ ಇರುವವರಿಗೆ ವಾಕರಿಕೆ, ಹೊಟ್ಟೆ ಹಸಿವು ಇಲ್ಲವಾಗುವುದು, ಆಗಾಗ ತಲೆ ಸುತ್ತು ಕಂಡು ಬರುವುದು, ಕಣ್ಣುಗಳು ಮಂಜಾಗುವುದು, ದೈಹಿಕ ಆಯಾಸ ಎದುರಾಗುವುದು, ಶಬ್ದ ಹಾಗೂ ಬೆಳಕಿಗೆ ಅನುಗುಣವಾಗಿ ಅತಿ ಹೆಚ್ಚು ಸೂಕ್ಷ್ಮತೆ ಕಂಡು ಬರುವುದು ಸಾಮಾನ್ಯವಾಗಿರುತ್ತದೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಮೈಗ್ರೇನ್ ತಲೆ ನೋವು ಕಾಡುವ ಸಂಭವ ಮೂರು ಪಟ್ಟು ಹೆಚ್ಚಾಗಿರುತ್ತದೆ.

ಮೊದಲ ಬಾರಿಗೆ ಮೂಗಿನಿಂದ ಬರುವ ದ್ರವದ ವಿಚಾರ ತೆಗೆದುಕೊಂಡರೆ ಯಾರಿಗೆ ಸೈನಸ್ ಪ್ರಕಾರದ ತಲೆ ನೋವು ಇರುತ್ತದೆ ಅವರಿಗೆ ಮೂಗಿನಲ್ಲಿ ನೆಗಡಿಯ ರೂಪದಲ್ಲಿ ಹಳದಿ ಬಣ್ಣದ ಗಟ್ಟಿಯಾದ ಸಿಂಬಳ ಅಥವಾ ದ್ರವ ಹೊರ ಬರಲು ಪ್ರಾರಂಭವಾಗುತ್ತದೆ. ಆದರೆ ಯಾರಿಗೆ ಮೈಗ್ರೇನ್ ತಲೆ ನೋವು ತುಂಬಾ ದಿನಗಳಿಂದ ಇರುತ್ತದೆ ಅವರಿಗೆ ಮೂಗಿನ ದ್ರವ ಪಾರದರ್ಶಕವಾಗಿರುತ್ತದೆ. ಸೈನಸ್ ತಲೆ ನೋವು ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಜ್ವರ ಹಾಗೂ ಬಾಯಿಯ ದುರ್ವಾಸನೆ ಕೂಡ ಇರುವ ಸಾಧ್ಯತೆ ಇರುತ್ತದೆ.

ಮೈಗ್ರೇನ್ ತಲೆನೋವು ಕಾರಣಗಳು
ಶುಂಠಿ ಹುಡಿ

ತಲೆನೋವು ಕಾಡಿದರೆ ಆಗ ಶುಂಠಿಯು ತುಂಬಾ ನೆರವಾಗುವುದು. ತಲೆನೋವು ಹೆಚ್ಚಾಗಲು ಕಾರಣವಾಗುವಂತಹ ಪ್ರೋಸ್ಟಗ್ಲಾಂಡಿನ್ ಎನ್ನುವ ಉರಿಯೂತಕಾರಿಯನ್ನು ಇದು ತಡೆಯುತ್ತದೆ. ತಲೆನೋವಿನೊಂದಿಗೆ ಕಾಡುವಂತಹ ವಾಕರಿಕೆಯಂತಹ ಲಕ್ಷಣಗಳನ್ನು ಕೂಡ ಶುಂಠಿಯು ನಿವಾರಣೆ ಮಾಡುವುದು.

ಒಂದು ಲೋಟ ನೀರಿಗೆ ಶುಂಠಿ ಹುಡಿ ಹಾಕಿ ಕುಡಿದರೆ ತಲೆನೋವು ಕಡಿಮೆ ಮಾಡಿಕೊಳ್ಳಬಹುದು. ಇದು ತುಂಬಾ ದುಬಾರಿ ಬೀಜವಾದರೂ ಹಲವಾರು ರೀತಿಯ ಪೋಷಕಾಂಶಗಳು ಇದರಲ್ಲಿದೆ. ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಮೆಗ್ನಿಶಿಯಂ ರಕ್ತನಾಳಗಳಿಗೆ ಆರಾಮ ನೀಡಿ ತಲೆನೋವಿನಿಂದ ರಕ್ಷಿಸುವುದು. ಮೈಗ್ರೇನ್ ಅತಿಯಾಗಿ ಕಾಡುವಂತಹ ಜನರು ಮೆಗ್ನಿಶಿಯಂ ಅಧಿಕವಾಗಿ ಇರುವ ಆಹಾರ ಸೇವಿಸಬೇಕು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

15 Comments

  1. Оформление кредита в максимально короткие сроки [url=]https://www.infokredit24.ru[/url].
    Быстро кредит можно оформить в том банке, где вы получаете зарплату. Тогда справка о доходах не потребуется и собрать документы будет гораздо проще. Либо, если у вас положительная кредитная история.

ಕೆಂಗಲ್ ಹನುಮಂತಯ್ಯ

ಕೆಂಗಲ್ ಹನುಮಂತಯ್ಯ

ಬಸ್ಮಾಸುರನ ಕಥೆ

ಮೋಹಿನಿ-ಭಸ್ಮಾಸುರನ ಕಥೆ