ದಾಸವಾಳ ಎಂದರೆ ಮನೆಯ ಅಂಗಳದಲ್ಲಿ ಅರಳುವ ಹೂವಷ್ಟೇ. ದೇವರ ಪೂಜೆಗೆ, ಮಕ್ಕಳ ಆಟಕ್ಕೆ ಮಾತ್ರ ಈ ಹೂ ಬಳಕೆಯಾಗುತ್ತದೆ ಅನ್ನುವುದು ತಪ್ಪು. ಕೆಂಪು, ಹಳದಿ, ಕೇಸರಿ ಹೀಗೆ ವಿವಿಧ ಬಣ್ಣಗಳಲ್ಲಿ ಕಾಣುವ ಈ ಹೂವು ಅಂಗಳದ ಅಂದಕ್ಕೆ ಮಾತ್ರವಲ್ಲ, ಆರೋಗ್ಯ ಕಾಪಾಡಿಕೊಳ್ಳಲೂ ಅತ್ಯುತ್ತಮ ಆಯ್ಕೆಯಾಗಿದೆ.
ದಾಸವಾಳವು ಬಹಳ ಆರೋಗ್ಯ ಉಪಯೋಗ ಹೊಂದಿರುವ ಹೂವಾಗಿದೆ. ಕೂದಲು, ಹೊಟ್ಟೆ ಹಾಗೂ ಸ್ತ್ರೀಯರ ಅನೇಕ ಸಮಸ್ಯೆಗಳನ್ನು ದಾಸವಾಳ ಪರಿಹರಿಸಬಲ್ಲದು. ರಕ್ತದೊತ್ತಡ ನಿಯಂತ್ರಣ, ಮುಟ್ಟು, ಕೂದಲು, ಬುದ್ಧಿಶಕ್ತಿ ಹೀಗೆ ಅನೇಕ ಸಮಸ್ಯೆಗಳಿಗೆ ದಾಸವಾಳ ಹೂ ಮತ್ತು ಅದರ ಎಲೆಗಳು ಉಪಯೋಗಿ.

ದಾಸವಾಳವನ್ನು ಡಯೆಟ್ನ ಭಾಗವಾಗಿಯೂ ಬಳಸಬಹುದು. ಡಯೆಟ್ ಮಾಡಿ ಸುಸ್ತಾಗುವ ಅನುಭವ ಆಗಿದ್ದರೆ, ದಾಸವಾಳದ ಎಸಳುಗಳಿಂದ ಅಂತಹ ಅನುಭವವನ್ನು ಇಲ್ಲವಾಗಿಸಬಹುದು. ರಕ್ತದೊತ್ತಡ ನಿಯಂತ್ರಿಸುವಲ್ಲಿಯೂ ದಾಸವಾಳ ಕೆಲಸ ಮಾಡುತ್ತದೆ. ದಾಸವಾಳದ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿದರೆ, ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಮೆನೋಪಾಸ್(ಪೀರಿಯಡ್ಸ್ ನಿಲ್ಲುವ ಸಮಯ) ಸಮಸ್ಯೆಗೆ :
ಮಹಿಳೆಯರಿಗೆ ಈ ಸಮಯದಲ್ಲಿ ಹಾಟ್ ಪ್ಲಾಷ್ ಸಮಸ್ಯೆ ಕಂಡು ಬರುತ್ತದೆ. ತುಂಬಾ ಸೆಕೆಯಾದಂತೆ ಅನಿಸುವುದು, ಮೈಯೆಲ್ಲಾ ಬೆವರುವುದು ಈ ಸಮಸ್ಯೆಯಿಂದ ಹೊರಬರಲು ಕೆಂಪು ಅಥವಾ ಬಿಳಿ ದಾಸವಾಳದ ಹೂವನ್ನು ತಿನ್ನುವುದು ಅಥವಾ ಅದರ ಟೀ ಮಾಡಿ ಕುಡಿಯುವುದು ಒಳ್ಳೆಯದು. ಕೆಲವು ಮಹಿಳೆಯರಲ್ಲಿ ಅಧಿಕ ಬಿಳುಪು ಹೋಗುವ ಸಮಸ್ಯೆ ಕಂಡು ಬರುವುದು, ಈ ಸಮಸ್ಯೆ ಇರುವವರು ದಿನ ಒಂದು ಬಿಳಿ ದಾಸವಾಳ ಹೂ ತಿಂದರೆ ಬಿಳುಪು ಹೋಗುವುದು ಕಮ್ಮಿಯಾಗುವುದು.
ಗಂಡಸರು, 48 ದಿನಗಳ ಕಾಲ ಪ್ರತಿನಿತ್ಯ ಐದು ದಾಸವಾಳ ಹೂಗಳ ಎಸಳನ್ನು ಜಗಿದರೆ, ಹಲವು ಲೈಂಗಿಕ ಸಂಬಂಧಿ ಸಮಸ್ಯೆಗಳು ಸರಿಯಾಗುತ್ತವೆ. ಮಕ್ಕಳು ದಾಸವಾಳದ ದಳ ತಿಂದರೆ ಅದರಿಂದ ಅವರ ಬುದ್ಧಿಮತ್ತೆ ಚುರುಕಾಗುವುದರೊಂದಿಗೆ, ನೆನಪಿನ ಶಕ್ತಿಯೂ ಹೆಚ್ಚಾಗುತ್ತದೆ. ಆದರೆ, ಹೂವಿನೊಂದಿಗೆ ಅದರ ಪರಾಗವನ್ನು ಸೇವಿಸಬಾರದು.
ಮೊಡವೆಗೆ :
ಮೊಡವೆ ಕಡಿಮೆ ಮಾಡಲು ದುಬಾರಿ ಚಿಕಿತ್ಸೆ ಮಾಡಿಸುತ್ತೇವೆ, ಆದರೆ ದಿನಾ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಬರುವುದನ್ನು ತಡೆಯಬಹುದು, ಅಲ್ಲದೆ ಈ ಜ್ಯೂಸ್ ನಿಮ್ಮ ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ.
ರಕ್ತಹೀನತೆಗೆ :
ಕೆಂಪು ದಾಸವಾಳದ ಹೂವು ನೈಸರ್ಗಿಕವಾಗಿ ರಕ್ತದ ಬಣ್ಣವನ್ನು ಹೆಚ್ಚಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿದ್ದವರಿಗೆ ಇದು ಪರಿಣಾಮಕಾರಿ ಔಷಧಿ.
ಶೀತ,ಕೆಮ್ಮು ಇಂಥಹ ಸಮಸ್ಯೆಗೆ :
ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ತಿಂದರೆ ಅಥವಾ ಅದರಿಂದ ಟೀ ಮಾಡಿ ಕುಡಿದರೆ ಈ ಸಣ್ಣ-ಪುಟ್ಟ ಸಮಸ್ಯೆಗಳಿಂದ ಪಾರಾಗಬಹುದು. ದಾಸವಾಳದಲ್ಲಿ ಆಂಟಿ ಆಕ್ಸಿಡೆಂಟ್ ಅಧಿಕವಿರುವುದರಿಂದ ಇದು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕಿ, ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ. ವಿಟಮಿನ್ ಸಿ ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.
ಕೂದಲಿನ ಸಮಸ್ಯೆಗಳಿಗೆ :
ಕೂದಲು ಉದುರುವುದನ್ನು ತಡೆಯುವ ಉತ್ತಮ ಮನೆ ಮದ್ದು ಇದಾಗಿದೆ. ಎಣ್ಣೆಯಲ್ಲಿ ದಾಸವಾಳ ಹೂವನ್ನು ಹಾಕಿ ಕಾಯಿಸಿ, ಆ ಎಣ್ಣೆಯನ್ನು ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಪ್ರತೀದಿನ ಈ ಎಣ್ಣೆ ಹಚ್ಚಿದರೆ ಕಪ್ಪಾದ ಕೂದಲಿನ ಸೌಂದರ್ಯ ನಿಮ್ಮದಾಗುವುದು. ಈ ಹೂವಿನಿಂದ ತೆಗೆದ ರಸ ಕೂದಲಿಗೆ ಹೊಳಪು ನೀಡಿ ಉತ್ತಮ ಕಂಡೀಶನರ್ ನಂತೆ ವರ್ತಿಸುತ್ತದೆ. ತಲೆಹೊಟ್ಟು ನಿವಾರಿಸಿ, ಇದು ಕೂದಲಿಗೆ ಕಪ್ಪು ಬಣ್ಣ ನೀಡುತ್ತದೆ. ದಾಸವಾಳ ಎಲೆಯ ಲೋಳೆ ತಲೆಗೆ ಬಳಸುವುದರಿಂದ ಕೂದಲು ಪಳಫಳ. ಸ್ವಲ್ಪ ತೆಂಗಿನೆಣ್ಣೆಗೆ 7-8 ಬಿಳಿ ದಾಸವಾಳದ ಎಲೆ ಹಾಕಿ ಕಾಯಿಸಿ ತಣಿಸಿ ಕೂದಲಿಗೆ ಹಚ್ಚಿ ನಂತರ ಸ್ನಾನ ಮಾಡಿದರೆ ಕೂದಲು ಹೊಳಪು ಬರುತ್ತದೆ.

ದಾಸವಾಳ ಹೂವಿನ ದಳಗಳನ್ನು ಚೆನ್ನಾಗಿ ಜಜ್ಜಿ, ಅದಕ್ಕೆ ತೆಂಗಿನ ಹಾಲನ್ನು ಬೆರೆಸಿ
ಈ ಮಿಶ್ರಣಕ್ಕೆ ಅಲೋವೆರಾ ಜೆಲ್, ಹಸಿ ಜೇನು ತುಪ್ಪ ಮತ್ತು ಗಟ್ಟಿ ಮೊಸರನ್ನು ಹಾಕಿ ಪೇಸ್ಟ್ ನ ರೀತಿ ತಯಾರಿಸಿಕೊಳ್ಳಿ.
ನಿಮ್ಮ ತಲೆ ಕೂದಲಿನ ಬುಡದಿಂದ ತುದಿಯವರೆಗೂ ಈ ಪೇಸ್ಟ್ ಅನ್ನು ಹಚ್ಚಿ ಸುಮಾರು 25 – 30 ನಿಮಿಷಗಳವರೆಗೆ ಹಾಗೆ ಇರಲು ಬಿಡಿ.
ನಂತರ 1 ಮೈಲ್ಡ್ ಕ್ಲೀನ್ಸರ್ ನಿಂದ ತಲೆ ಕೂದಲನ್ನು ವಾಷ್ ಮಾಡಿಕೊಳ್ಳಿ.
ಸೀಳು ಕೂದಲಿಗೆ ದಾಸವಾಳ ಮತ್ತು ತೆಂಗಿನ ಹಾಲು
ನಿಮ್ಮ ಕೂದಲು ತುದಿಯಲ್ಲಿ ಕವಲು ಒಡೆದಿರುವುದಕ್ಕೆ ಕಾರಣ ಕೂದಲಿನ ಬುಡದಲ್ಲಿ ತೇವಾಂಶವಿಲ್ಲದ ವಾತಾವರಣ ನಿರ್ಮಾಣವಾಗಿರುವುದು. ಈ ಸಮಸ್ಯೆಗೆ ದಾಸವಾಳ ಮತ್ತು ತೆಂಗಿನ ಹಾಲು ನೈಸರ್ಗಿಕ ಮನೆಮದ್ದಾಗಿ ಪರಿಣಾಮ ಬೀರುತ್ತದೆ.
ದೇಹದ ನೀರಿನಂಶ :
ದೇಹದಲ್ಲಿ ನೀರಿನಂಶ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ. ನೀರಿನಂಶದ ಕೊರತೆಯಿಂದ ಬಳಲುತ್ತಿರುವವರು, ಡ್ರೈ ಸ್ಕಿನ್ ಇರುವವರು ಇದರ ಜ್ಯೂಸ್ ಕುಡಿಯುವುದು ಒಳ್ಳೆಯದು. ಕೆಲವರಿಗೆ ಹೊಟ್ಟೆ ಸರಿಯಾಗಿ ಹಸಿಯುವುದಿಲ್ಲ, ಹೊಟ್ಟೆ ಹಸಿಯುತ್ತಿಲ್ಲ ಎಂದು ಊಟ ಸರಿಯಾಗಿ ಮಾಡದಿದ್ದರೆ ನಿಶ್ಯಕ್ತಿ ಉಂಟಾಗುವುದು. ಹೊಟ್ಟೆ ಹಸಿವು ಸರಿಯಾದ ರೀತಿಯಲ್ಲಿ ಆಗಲು ದಾಸವಾಳವನ್ನು ತಿನ್ನುವುದು ಒಳ್ಳೆಯದು.
ಮಧುಮೇಹ, ಕಿಡ್ನಿ ಸಮಸ್ಯೆ :
ಮಧುಮೇಹ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ದಾಸವಾಳದ ರಸವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯಲು ದಾಸವಾಳ ಹೂವು ಸಹಕಾರಿ. ಹೀಗಾಗಿಯೇ ಹವಾಯಿ ದ್ವೀಪದ ಜನರು ಹೂಗಳನ್ನು ನೇರವಾಗಿ ತಿಂದರೆ, ಚೀನಾದವರು ಉಪ್ಪಿನಕಾಯಿ ಮಾಡಿಕೊಂಡು ಸೇವಿಸುತ್ತಾರೆ.
ಹೃದಯ ಸಮಸ್ಯೆಗೆ ಪರಿಹಾರ :
ಹೃದಯ ಸಂಬಂಧಿ ತೊಂದರೆಗಳಿಗೆ ದಾಸವಾಳ ಹೂವಿನ ನೈಸರ್ಗಿಕ ಅಂಶ ಪರಿಣಾಮಕಾರಿ. ಈ ಹೂವಿನ ರಸದ ಕಷಾಯವನ್ನು ಕುಡಿದರೆ ದೇಹದಲ್ಲಿನ ಅತಿಯಾದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ. ದೇಹದಲ್ಲಿರುವ ಅನಗತ್ಯ ಬೊಜ್ಜನ್ನು ಕರಗಿಸುವಲ್ಲಿ ದಾಸವಾಳ ಹೆಚ್ಚು ಪ್ರಯೋಜನ. ದಾಸವಾಳದ ಹೂವಿನ ಟೀ ಮಾಡಿ ಕುಡಿದರೆ ಅಥವಾ ಅದರ ರಸವನ್ನು ಸೇವಿಸಿದರೆ, ಹೃದಯ ಸ್ತಂಭನಕ್ಕೆ ಕಾರಣವಾಗುವ, ರಕ್ತದಲ್ಲಿ ಸೇರಿಕೊಂಡ ಅನಗತ್ಯ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಈ ಮೂಲಕ ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.ಕೊಲೆಸ್ಟ್ರಾಲ್ ಸಮಸ್ಯೆಯನ್ನು ಕಮ್ಮಿ ಮಾಡಬೇಕೆಂದು ಬಯಸುವುದಾದರೆ ದಿನಾ ಒಂದರಿಂದ ಎರಡು ದಾಸವಾಳದ ಹೂವನ್ನು ತಿನ್ನುವುದು ಒಳ್ಳೆಯದು.
ದೇಹಕ್ಕೆ ತಂಪು :
ಬಾಡಿ ಹೀಟ್ ಆಗಿದ್ದರೆ ಅದನ್ನು ಕಮ್ಮಿ ಮಾಡಲು ದಾಸವಾಳ ಹೂವಿನ ಜ್ಯೂಸ್ ಕುಡಿದರೆ ಒಳ್ಳೆಯದು. ದಾಸವಾಳದ ರಸ ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ, ಅದರಲ್ಲೂ ಬಿಳಿ ಬಣ್ಣದ ದಾಸವಾಳದಲ್ಲಿ ತಂಪು ನೀಡುವ ಅಂಶ ಹೆಚ್ಚಿರುವುದರಿಂದ, ಅದು ಕಣ್ಣುಗಳನ್ನು ಆಯಾಸದಿಂದ ಮುಕ್ತವಾಗಿರಿಸಿ, ತಂಪನ್ನು ನೀಡುತ್ತದೆ.
ಧನ್ಯವಾದಗಳು.
GIPHY App Key not set. Please check settings