in ,

ಮಧುಮೇಹ /ಸಕ್ಕರೆ ಖಾಯಿಲೆ ಕೆಲವೊಂದು ಸಲಹೆಗಳು

ಸಕ್ಕರೆ ಖಾಯಿಲೆ
ಸಕ್ಕರೆ ಖಾಯಿಲೆ

ಈಗೀನ ಕಾಲದಲ್ಲಿ ಅಂತೂ ಸಕ್ಕರೆ ಖಾಯಿಲೆ ಯಾರಿಗಿಲ್ಲ? ಆರೋಗ್ಯ ಹೇಗಿದೆ ಅಂದರೆ ಸಾಕು ಶುಗರ್, ಬಿ ಪಿ, ಎಲ್ಲಾ ಇದೆ ಮೊದಲ ಉತ್ತರ. ಯಾವುದು ತಿನ್ನುವುದು? ಯಾವುದು ಬಿಡುವುದು.? ಏನು ತಿಂದರೂ ಕಷ್ಟನೆ. ಮಧುಮೇಹ ಒಂದು ಸಲ ಬಂತು ಅಂದರೆ ಸಾಕು ಅಲ್ಲಿಂದ ಪಥ್ಯ ಶುರು. ಅಂತಹ ಕೆಲವೊಂದು ಆಹಾರಕ್ರಮ ನೋಡೋಣ.

ಮಧುಮೇಹ, ಡಯಾಬಿಟೀಸ್, ಶುಗರ್‌ ಎಂದು ನಾನಾ ವಿಧದಲ್ಲಿ ಕರೆಯುತ್ತಾರೆ. ರಕ್ತದಲ್ಲಿ ಗ್ಲುಕೋಸ್‌ ಅಥವಾ ಸಕ್ಕರೆ ಅಂಶವು ಹೆಚ್ಚಾಗುವುದೇ ಸಕ್ಕರೆ ಕಾಯಿಲೆ. ವ್ಯಕ್ತಿಯ ದೇಹದಲ್ಲಿ ಮೆದೋಜೀರಕ ಗ್ರಂಥಿ ಇನ್ಸುಲಿನ್ ಅನ್ನೋ ಹಾರ್ಮೋನ್‌ನನ್ನು ಉತ್ಪಾದಿಸುತ್ತದೆ.ಇದು ಆಹಾರ ಸೇವನೆಯ ನಂತರ ಅಂಗಾಂಶಗಳಲ್ಲಿ ಶೇಖರಣೆಗೊಂಡ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸಿ ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇನ್ಸುಲಿನ್ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದಿರುವಾಗ ಅಥವಾ ದೇಹವು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿರುವಾಗ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹ ಕಾಯಿಲೆ ಶುರುವಾಗುತ್ತದೆ.

ಮಧುಮೇಹ /ಸಕ್ಕರೆ ಖಾಯಿಲೆ ಕೆಲವೊಂದು ಸಲಹೆಗಳು
ಮಧುಮೇಹ

ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆಯಿದು. ಗ್ಲೂಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು, ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ ಒಂದು ಮಹಾಮಾರಿ ಎಂದು ಘೋಷಿಸಿದೆ. ಈ ಕಾಯಿಲೆಯ ಪ್ರಮುಖ ಲಕ್ಷಣಗಳೆಂದರೆ:ಪದೇ ಪದೇ ಮೂತ್ರವಿಸರ್ಜಿಸುವುದು, ತೀವ್ರವಾಗಿ ಬಾಯಾರಿಕೆ ಹಾಗೂ ಹಸಿವಾಗುವುದು,ತೂಕ ಹೆಚ್ಚುವದು ಅಥವಾ ಅಸಾಮಾನ್ಯ ತೂಕ ಇಳಿಕೆ, ಆಯಾಸ, ಪುರುಷರಲ್ಲಿ ಲೈಂಗಿಕ ದೌರ್ಬಲ್ಯತೆ ಮುಂತಾದವುಗಳು. ಸದ್ಯಕ್ಕೆ ಇದನ್ನು ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗಿಲ್ಲ. ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆ ನಿರ್ಧರಿತವಾಗುತ್ತದೆ. ದಿನನಿತ್ಯ ಸುಮಾರು ಇಪ್ಪತ್ತು ನಿಮಿಷದ ವ್ಯಾಯಾಮ ಅಥವಾ ನಡಿಗೆಯಿಂದ ಮಧುಮೇಹವನ್ನು ದೂರವಿಡಬಹುದೆಂದು ವೈದ್ಯರು ಹೇಳುತ್ತಾರೆ.

ಸಕ್ಕರೆ ಕಾಯಿಲೆಯಲ್ಲಿ ಎರಡು ವಿಧಗಳಿವೆ. ಇನ್ಸುಲಿನ್ ಅವಲಂಭಿತ ಡಯಾಬಿಟೀಸ್. ಮೆದೊಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸಲು ವಿಫಲವಾದಾಗ ದೇಹದಲ್ಲಿ ಸಕ್ಕರೆ ಅಂಶವು ಜಾಸ್ತಿಯಾಗುತ್ತದೆ. ಇದು ಹೆಚ್ಚಾಗಿ ಸಣ್ಣ ವಯಸ್ಸಿನವರಿಗೆ ಮತ್ತು ಹದಿಹರೆಯದವರಲ್ಲಿ ಕಂಡುಬರುತ್ತದೆ. ಕೆಲವೊಂದು ಬಾರಿ ೩೦ ವರ್ಷ ದಾಟಿದವರಲ್ಲಿಯೂ ಕಾಣಿಸುತ್ತದೆ. ಎರಡನೆಯದು ದೇಹವು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ಇರುವಾಗ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದು ಸಾಮಾನ್ಯವಾಗಿ ೪೫ ವರ್ಷ ಮೇಲ್ಪಟ್ಟವರಲ್ಲಿ ಕಾಣಿಸುತ್ತದೆ. ಕೆಲವೊಂದು ಬಾರಿ ಮಕ್ಕಳಲ್ಲಿ, ಸ್ಥೂಲಕಾಯ, ಕಡಿಮೆ ದೈಹಿಕ ಸಕ್ರಿಯತೆ ಇರುವವರಲ್ಲಿ ಕಂಡುಬರುತ್ತದೆ.
ಲಕ್ಷಣಗಳು :
ಅತಿಯಾಗಿ ಬಾಯಾರಿಕೆಯಾಗುವುದು.
ಹಸಿವಾಗುವುದು
ದೃಷ್ಟಿ ಮಂಜಾಗುವಿಕೆ
ತೂಕ ಇಳಿಯುವಿಕೆ
ಬೆವರು, ಸುಸ್ತು
ಗಾಯ ಬೇಗ ವಾಸಿಯಾಗದೇ ಇರುವುದು.
ಪದೇ ಪದೇ ಮೂತ್ರವಿಸರ್ಜನೆ
ಗಡಸುಚರ್ಮ
ಕೈ ಕಾಲುಗಳ ಅಡಿಯಲ್ಲಿಜುಮ್ಮೆನಿಸುವುದು.
ಕೆಲವೊಂದು ಬಾರಿ ಮೇಲಿನ ಯಾವುದೇ ಅಂಶ ಕಂಡುಬರದೆ ಇರಬಹುದು. ರಕ್ತ ಪರೀಕ್ಷೆ ಮಾಡಿದಾಗ ಗೊತ್ತಾಗುತ್ತದೆ.

ಮಧುಮೇಹ /ಸಕ್ಕರೆ ಖಾಯಿಲೆ ಕೆಲವೊಂದು ಸಲಹೆಗಳು
ಹಸಿರು ಎಲೆ ತರಕಾರಿ

ಹಸಿರು ಎಲೆ ತರಕಾರಿಗಳು ಈ ಸಮಯದಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ಹೇಳಬಹುದು ಪಾಲಕ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಹಸಿರು ಸೊಪ್ಪು ತರಕಾರಿಗಳಲ್ಲಿ ಪಾಲಿಫಿನಾಲ್ ಮತ್ತು ವಿಟಮಿನ್ ಸಿ ಇರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಇದು ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿದೆ, ಇದು ಇನ್ಸುಲಿನ್ ಪ್ರತಿರೋಧವನ್ನು ಹೋರಾಡಲು ಸಹಾಯ ಮಾಡುತ್ತದೆ.ಪಾಲಕ್ ಸೊಪ್ಪು, ಕೇಲ್, ಬ್ರೊಕೋಲಿ ಇತ್ಯಾದಿಗಳು ತಮ್ಮಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ ಅಂಶಗಳನ್ನು ಒಳಗೊಂಡಿವೆ. ಹಾಗಾಗಿ ಇವುಗಳನ್ನು ತಿನ್ನುವುದರಿಂದ ದೇಹದ ರಕ್ತದ ಸಕ್ಕರೆ ಪ್ರಮಾಣದಲ್ಲಿ ಯಾವುದೇ ಏರಿಕೆ ಕಾಣುವುದಿಲ್ಲ.

ಮೊಟ್ಟೆಗಳು ಪ್ರೋಟೀನ್‌ನ ಶಕ್ತಿ ಕೇಂದ್ರವೆಂದು ಹೇಳಲಾಗುತ್ತದೆ; ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ ಮತ್ತು ಹಸಿವಿನ ಹಾರ್ಮೋನುಗಳನ್ನು ನಿಗ್ರಹಿಸುವ ಮೂಲಕ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಕ್ಕರೆ ರೋಗಿಗಳು ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ಅವರ ಆರೋಗ್ಯವು ಸಾಕಷ್ಟು ಮಟ್ಟಿಗೆ ಉತ್ತಮವಾಗಿರುತ್ತದೆ.

ಸಿಹಿ ಆಲೂಗೆಡ್ಡೆ ಅಥವಾ ಸಿಹಿ ಗೆಣಸು ಮಧುಮೇಹಕ್ಕೆ ಅಗತ್ಯವಾದ ಕಾರ್ಬ್ಗಳಲ್ಲಿ ಒಂದಾಗಿದೆ. ಒಂದು ಮಧ್ಯಮ ಗಾತ್ರದ ಸಿಹಿ ಆಲೂಗಡ್ಡೆ 4 ಗ್ರಾಂ ಫೈಬರ್ ಮತ್ತು ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದಲ್ಲದೆ ಸಿಹಿ ಆಲೂಗಡ್ಡೆಯಲ್ಲಿ ವಿಟಮಿನ್ ಎ ಹೇರಳವಾಗಿ ಕಂಡುಬರುತ್ತದೆ.

ನೆಲ್ಲಿಕಾಯಿಯು ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ನೆಲ್ಲಿಕಾಯಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಅಂಶವಿದ್ದು, ಇದು ಮಧುಮೇಹಿಗಳಿಗೆ ತುಂಬಾ ಉಪಯುಕ್ತ ಮತ್ತು ಇದು ಮೇಧೋಜೀರಕದ ಅಂಗಾಂಶಗಳನ್ನು ಸರಿಪಡಿಸುವುದು.
ಇನ್ಸುಲಿನ್ ಉತ್ಪತ್ತಿ ಮಾಡುವ ಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ. ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಎನ್ನುವ ಅಂಶವಿದ್ದು, ಇದು ದೇಹದಲ್ಲಿ ಕಾರ್ಬೋಹೈಡ್ರೇಟ್ಸ್ ನ್ನು ನಿಯಂತ್ರಣದಲ್ಲಿಡಲು ನೆರವಾಗುವುದು.

ನೆಲ್ಲಿಕಾಯಿ ಸೇವಿಸಿದರೆ ಅದರಿಂದ ದೇಹವು ಹೆಚ್ಚು ಇನ್ಸುಲಿನ್ ಗೆ ಪ್ರತಿಕ್ರಿಯಿಸುವುದು. ದಿನದಲ್ಲಿ ಒಂದು ನೆಲ್ಲಿಕಾಯಿ ತಿನ್ನಬಹುದು. ಆದರೆ ಸಂಸ್ಕರಿಸಿಟ್ಟಿರುವ ನೆಲ್ಲಿಕಾಯಿ ಸೇವಿಸಲು ಹೋಗಬೇಡಿ. ಇದರಲ್ಲಿ ಸಕ್ಕರೆ ಅಂಶವಿರುವುದು ಮತ್ತು ಇದರಿಂದ ದೇಹದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದು.

ಬೆಳ್ಳುಳ್ಳಿಯಲ್ಲಿ ಇರುವಂತಹ ಸಲ್ಫರಸ್ ಅಂಶವು ಇಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚು ಮಾಡಲು ಪ್ರಮುಖ ಪಾತ್ರ ವಹಿಸುವುದು. ಮಧುಮೇಹದಿಂದಾಗಿ ಕಾಣಿಸಿಕೊಳ್ಳುವಂತಹ ಕೆಲವೊಂದು ರೀತಿಯ ಸಮಸ್ಯೆಗಳನ್ನು ಇದು ದೂರ ಮಾಡುವುದು.
ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಸೋಂಕಿನ ವಿರುದ್ಧ ಹೋರಾಡುವುದು ಮತ್ತು ರಕ್ತ ಸಂಚಾರವು ಸರಿಯಾಗಿ ಆಗಲು ನೆರವಾಗುವುದು.

ಸಕ್ಕರೆ ಕಾಯಿಲೆ ಬಂದವರು ಹಣ್ಣುಗಳನ್ನು ತಿನ್ನಬಾರದು ಎಂಬ ತಪ್ಪು ಕಲ್ಪನೆ ಹಿಂದಿನಿಂದ ಜಾರಿಯಲ್ಲಿದೆ. ಆದರೆ, ಯಾವ ಹಣ್ಣು ಹಾಗೂ ಎಷ್ಟು ಪ್ರಮಾಣ ಎಂಬುದನ್ನು ನಿರ್ಧರಿಸಿ ತಿನ್ನಬೇಕಾಗುತ್ತದೆ.

ಪ್ರತಿ ದಿನ ಹಣ್ಣಿನ 3 ರಿಂದ 5 ಭಾಗದ ಸೇವಿಸಬಹುದು(ಒಂದು ಹಣ್ಣಿ ಹೋಳು :1 ಮಧ್ಯಮ ಗಾತ್ರದ ಸೇಬು ಅಥವಾ 1 ಸೀಬೆ ಹಣ್ಣು ಅಥವಾ 1 ಕಿತ್ತಳೆ ಅಥವಾ 1 ಸಣ್ಣ ಬಾಳೆ ಹಣ್ಣು ಅಥವಾ 1 ಮರಸೇಬು ಅಥವಾ 12 ರಿಂದ 15 ದ್ರಾಕ್ಷಿ ಅಥವಾ 1 ಪಪ್ಪಾಯಿ ತುಂಡು ಅಥವಾ 1 ಅನಾನಸ್ ತುಂಡು.. ಇತ್ಯಾದಿಗಳನ್ನು ಸೇವಿಸಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಧಾ ಕೃಷ್ಣ

ರಾಧಾ ಕೃಷ್ಣ ಪವಿತ್ರ ಪ್ರೀತಿ

ಗಾಂಧಾರಿ

ಮಹಾಶಿವನಿಂದ ನೂರು ಮಕ್ಕಳ ವರ ಪಡೆದ ಗಾಂಧಾರಿ