ಹಲ್ಲಿಯನ್ನು ಮನೆಯಿಂದ ಓಡಿಸುವುದು ಸುಲಭದ ಕೆಲಸವಲ್ಲ, ಮನೆ ಎಷ್ಟೇ ಸ್ಚಚ್ಛವಾಗಿಟ್ಟರೂ ಹಲ್ಲಿ ಬರುತ್ತದೆ. ಹಲ್ಲಿ ಬರುವುದನ್ನು ತಡೆಗಟ್ಟಲು ಆರು ತಿಂಗಳಿಗೊಮ್ಮೆ ಮನೆಗೆ ಕೀಟ ನಾಶಕ ಹೊಡಿಸಬಹುದು. ಆದರೆ ಪ್ರತಿ ಆರು ತಿಂಗಳಿಗೊಮ್ಮೆ ಮನೆಯ ವಸ್ತುಗಳನ್ನು ಹೊರ ಹಾಕಿ ಕೀಟ ನಾಶಕ ಸಿಂಪಡಿಸುವುದು ಸ್ವಲ್ಪ ಕಷ್ಟದ ಕೆಲಸ. ಮನೆಯ ಗೋಡೆಗಳಲ್ಲಿ ಎಲ್ಲಿ ನೋಡಿದರೂ ಹಲ್ಲಿಗಳು ಇರುವುದು ಕಂಡುಬರುವುದು. ಗೋಡೆಗಳಲ್ಲಿ ಬರುವಂತಹ ಸಣ್ಣ ಸಣ್ಣ ಕೀಟಗಳು, ಸೊಳ್ಳೆ ಇತ್ಯಾದಿಗಳನ್ನು ಹಿಡಿದು ತಿನ್ನುವುದೇ ಈ ಹಲ್ಲಿಗಳ ಕೆಲಸ.
ಇದರಿಂದ ಮನೆಯಲ್ಲಿ ಕೀಟಗಳ ಸಮಸ್ಯೆ ಕಡಿಮೆ ಆಗುವುದಾದರೂ ಹಲ್ಲಿಗಳ ಸಂಖ್ಯೆಯು ಅತಿಯಾದರೆ ಕೆಲವರಿಗೆ ಕಿರಿಕಿರಿ ಆಗುವುದು. ಇನ್ನು ಕೆಲವರು ಹಲ್ಲಿಯನ್ನು ನೋಡಿದ ಕೂಡಲೇ ಬೆಚ್ಚಿ ಬೀಳುವರು.
ಕೆಲವೊಂದು ಪರಿಹಾರಗಳನ್ನು ಕಂಡುಕೊಳ್ಳಬಹುದು ಹಲ್ಲಿ ಕಾಟಕ್ಕೆ :
ಬೆಳ್ಳುಳ್ಳಿ ಮತ್ತು ಈರುಳ್ಳಿ : ಹಲ್ಲಿಗಳು ಇರುವ ಜಾಗದಲ್ಲಿ ಒಂದು ಬೆಳ್ಳುಳ್ಳಿಯನ್ನು ತುಂಡು ಮಾಡಿ ಇಡಬೇಕು. ಬೆಳ್ಳುಳ್ಳಿ ಘಾಟು ಹಲ್ಲಿಯನ್ನು ದೂರ ಓಡಿಸುವುದು. ಇದರ ವಾಸನೆಯು ಕೋಣೆಯಿಡಿ ಹರಡಲು ಸಣ್ಣ ಟೇಬಲ್ ಫ್ಯಾನ್ ಬಳಸಬಹುದು. ಬೆಳ್ಳುಳ್ಳಿಯನ್ನು ಸರಿಯಾಗಿ ತುಂಡು ಮಾಡಿದರೆ ಅದರ ವಾಸನೆಯು ಬರುವುದು. ಈರುಳ್ಳಿ ಮತ್ತು ಬೆಳ್ಳುಳ್ಳಿ ಚಮತ್ಕಾರ ಈರುಳ್ಳಿ ಕತ್ತರಿಸಿದಾಗ ಕೆಲವರ ಕಣ್ಣಿನಲ್ಲಿ ನೀರು ಬರುತ್ತದೆ. ಅದಕ್ಕೆ ಅದರ ಪ್ರಮುಖ ಗಾಟು ಕಾರಣ. ಈ ಘಾಟು ಹಲ್ಲಿಗೂ ಆಗಿ ಬರುವುದಿಲ್ಲ. ಈರುಳ್ಳಿ ಕತ್ತರಿಸಿ ಮನೆಯ ಮೂಲೆ-ಮೂಲೆಯಲ್ಲಿ ಇಡುವುದರಿಂದ ಅದರ ವಾಸನೆಗೆ ಹಲ್ಲಿ ಅಡುಗೆ ಮನೆ ಕಡೆಗೆ ಬರುವುದೇ ಇಲ್ಲ
ನಿಂಬೆಹಣ್ಣು: ಲೆಮನ್ ಗ್ರಾಸ್‌ನ ಸಿಟ್ರಸ್ ವಾಸನೆಯು ಹಲ್ಲಿಗಳನ್ನು ದೂರವಿಡಲು ಉತ್ತಮ ಆಯ್ಕೆಯಾಗಿದೆ ಮತ್ತು ನಿಮ್ಮ ಮನೆಗೆ ಉತ್ತಮವಾದ ಪರಿಮಳ ನೀಡುತ್ತದೆ.
ಮೊಟ್ಟೆಯ ಸಿಪ್ಪೆ : ಮೊಟ್ಟೆಯು ಆರೋಗ್ಯಕ್ಕೆ ಒಳ್ಳೆಯದು. ಅದೇ ರೀತಿ ಅದರ ಸಿಪ್ಪೆಯನ್ನು ಹಲ್ಲಿ ಓಡಿಸಲು ಕೂಡ ಬಳಸಬಹುದು. ಮೊಟ್ಟೆಯ ಸಿಪ್ಪೆಯನ್ನು ಸರಿಯಾಗಿ ಒಣಗಿಸಿದ ಬಳಿಕ ಅದನ್ನು ಹಲ್ಲಿಗಳು ಅತಿಯಾಗಿ ಬರುವಂತಹ ಜಾಗದಲ್ಲಿ ಇಟ್ಟುಬಿಡಿ. ಮೊಟ್ಟೆಯ ವಾಸನೆ ಇರುವ ಜಾಗದಿಂದ ಹಲ್ಲಿಗಳು ದೂರ ಓಡುವುದು. ಮೊಟ್ಟೆಯ ಸಿಪ್ಪೆಯನ್ನು ಆಗಲೇ ಮನೆಯಿಂದ ಹೊರಗೆ ಎಸೆಯಿರಿ. ಹಲ್ಲಿಗಿಂತಲೂ ಅದರಲ್ಲಿನ ಬ್ಯಾಕ್ಟೀರಿಯಾವು ತುಂಬಾ ಅಪಾಯಕಾರಿ.
ನಾಪ್ತಾಲಿನ್ ಚೆಂಡುಗಳು : ಹಲ್ಲಿ ಮತ್ತು ಇತರ ಹಲವಾರು ಕೀಟಗಳನ್ನು ದೂರವಿಡುವುದು. ಮನೆಯಲ್ಲಿ ಸಣ್ಣ ಮಕ್ಕಳು ಅಥವಾ ಸಾಕು ಪ್ರಾಣಿಗಳು ಇದ್ದರೆ ಆಗ ನೀವು ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು.
ಮಕ್ಕಳು ಇದನ್ನು ತಿಂದರೆ ಅಥವಾ ಅದನ್ನು ಮುಟ್ಟಿ ಬಾಯಿಗೆ ಕೈ ಹಾಕಿದರೆ ಅದರಿಂದ ವಾಕರಿಕೆ ಮತ್ತು ವಾಂತಿ ಬರಬಹುದು.
ಐಸ್ ವಾಟರ್ : ಹಲ್ಲಿಯನ್ನು ಹೊರಕ್ಕೆ ಹಾಕಲು ಪ್ರಯತ್ನಿಸುವಾಗ ಅದು ಓಡಿ ಹೋಗಿ ಮೂಲೆ ಸೇರಿ ನಮ್ಮ ಕೈಯಿಂದ ತಪ್ಪಿಸಿಕೊಳ್ಳುತ್ತದೆ. ಕಬೋರ್ಡ್, ಸೆಲ್ಫ್ ಸಂಧಿಯಲ್ಲಿ ಸೇರಿಕೊಂಡರೆ ಮತ್ತೆ ಅದನ್ನು ಓಡಿಸುವುದು ಕಷ್ಟ. ಆದ್ದರಿಂದ ಹಲ್ಲಿಯನ್ನು ಕಂಡ ತಕ್ಷಣ ಐಸ್ ನೀರು ಎರಚಿ. ಐಸ್ ನೀರು ಅದರ ಮೇಲೆ ಬಿದ್ದರೆ ಅದಕ್ಕೆ ಬೇಗನೆ ಓಡಲು ಸಾಧ್ಯವಾಗುವುದಿಲ್ಲ. ಆಗ ಅದನ್ನು ಮೆಲ್ಲನೆ ಗುಡಿಸಿ ತೆಗೆದು ಹೊರಹಾಕಬಹುದು.
ಸೊಳ್ಳೆ ನಿವಾರಕ ದ್ರಾವಣ : ಹೆಚ್ಚಾಗಿ ಪ್ರತಿಯೊಬ್ಬರ ಮನೆಯಲ್ಲೂ ಇರುವುದು. ಹೀಗಾಗಿ ಇದನ್ನು ಬಳಸಿದರೆ ಹಲ್ಲಿಗಳನ್ನು ದೂರ ಮಾಡಬಹುದು.
ಇದನ್ನು ಹಾಗೆ ಸ್ಪ್ರೇ ಮಾಡಬಹುದು ಅಥವಾ ಹಚ್ಚಿದರೆ ಆಗ ಹಲ್ಲಿಗಳು ದೂರ ಓಡುವುದು. ಇದರ ರಾಸಾಯನಿಕದ ವಾಸನೆಯಿಂದಾಗಿ ಹಲ್ಲಿಗಳು ದೂರ ಓಡಿ ಹೋಗುವುದು.
ಹೊಗೆ ಸೊಪ್ಪಿನ ರಸ : ಹೊಗೆ ಸೊಪ್ಪನ್ನು ನೀರಿಗೆ ಹಾಕಿ ಎರಡು ಗಂಟೆ ಬಿಡಿ. ಹೊಗೆ ಸೊಪ್ಪಿನ ರಸ ನೀರಿಗೆ ಬಿಡಲಿ. ಈಗ ಆ ನೀರನ್ನು ಸ್ಪ್ರೇ ಬಾಟಲಿನಲ್ಲಿ ತುಂಬಿ ಮನೆ ತುಂಬಾ, ಮನೆಯ ಮೂಲೆ-ಮೂಲೆಯಲ್ಲಿ ಸ್ಪ್ರ್ರೇ ಮಾಡಿದರೆ ಅದರ ಘಾಟು ವಾಸನೆಗೆ ಹಲ್ಲಿ ಓಡಿ ಹೋಗುವುದು.
ನವಿಲುಗರಿ ಅಥವಾ ಕೋಳಿ ಗರಿ : ಮನೆಯ ಗೋಡೆಯಲ್ಲಿ ಅಲಂಕಾರಕ್ಕೆ ನವಿಲು ಗಿರಿ ಇಡುವುದನ್ನು ನೋಡಿರಬಹುದು. ಆದರೆ ಈ ರೀತಿ ನವಿಲು ಗರಿ ಇಡುವುದರಿಂದ ದೊರೆಯವ ಮತ್ತೊಂದು ಪ್ರಯೋಜನವೆಂದರೆ ಹಲ್ಲಿ ಕಾಟ ಇಲ್ಲವಾಗುವುದು. ನವಿಲು ಗರಿ ನೋಡಿ ಅದೇನೋ ದೊಡ್ಡ ಪ್ರಾಣಿಯಿರಬಹುದೆಂದು ಹಲ್ಲಿ ಆ ಕಡೇ ಸುಳಿಯವುದೇ ಇಲ್ಲ.
ಕಾಫಿ ಪುಡಿ : ಕಾಫಿ ಹುಡಿಯನ್ನು ಮನೆಯ ಮೂಲೆ-ಮೂಲೆಯಲ್ಲಿ ಇಡುವುದರಿಂದ ಹಲ್ಲಿ ಕಾಟ ಇಲ್ಲವಾಗುವುದು. ಕಾಫಿ ಪುಡಿ ಜೊತೆ ತಂಬಾಕು ಸೇರಿಸಿ, ಅದನ್ನು ಉಂಡೆ ಕಟ್ಟಿ ಮನೆಯ ಮೂಲೆ-ಮೂಲೆಯಲ್ಲಿ ಇಟ್ಟರೆ ಹಲ್ಲಿ ಕಾಟ ಇಲ್ಲದೆ. ನಿರಾಳವಾಗಬಹುದು. ಮನೆಯ ಮೂಲೆಗಳಲ್ಲಿ ಕಾಫಿ ಬೀಜಗಳನ್ನು ಇಡುವುದರಿಂದ ಸಹ ಹಲ್ಲಿ ಮತ್ತು ಜಿರಳೆಗಳು ಹೊರ ಹೋಗುತ್ತವೆ.
ಪೆಪ್ಪರ್ ಸ್ಪ್ರೇ : ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಮತ್ತು ಹಲ್ಲಿಗಳನ್ನು ಕಂಡ ಮನೆಯ ಸುತ್ತಲೂ ಸಿಂಪಡಿಸಿ. ಅವುಗಳಿಗೆ ಕಾಳುಮೆಣಸು ಎಂದರೆ ಅಲರ್ಜಿ, ಕಿರಿಕಿರಿ ಉಂಟು ಮಾಡುವುದರಿಂದ ಓಡಿಹೋಗುತ್ತವೆ.
ಟೊಬಾಸ್ಕೊ ಸಾಸ್ ಸ್ಪ್ರೇ : ಒಂದು ಅಥವಾ ಎರಡು ಟೇಬಲ್ ಸ್ಪೂನ್ ಸಾಸ್ ಅನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಮತ್ತು ಅದನ್ನು ಸ್ಪ್ರೇ ಕ್ಯಾನ್‌ಗೆ ತುಂಬಿಸಿ. ನೀವು ಇದನ್ನು ನಿಮ್ಮ ಗೋಡೆಗಳು ಅಥವಾ ಹಲ್ಲಿಗಳು ಇರುವ ಸ್ಥಳದಿಂದ ಸ್ವಲ್ಪ ಅನತಿ ದೂರದಲ್ಲಿ ಸ್ಪ್ರೇ ಮಾಡಿ.
ಧನ್ಯವಾದಗಳು.
GIPHY App Key not set. Please check settings