ಸಾಮಾನ್ಯವಾಗಿ ಇವಾಗ ಎಲ್ಲಾ ಕಡೆ ಹಾಗು ಮಾರ್ಕೆಟ್ಗಳಲ್ಲಿ ಇದರ ಅಬ್ಬರ ಜಾಸ್ತಿನೇ ಇದೆ. ಹಾಗಂತ ಇದ್ರಿಂದ ಅಷ್ಟೊಂದು ಆರೋಗ್ಯದ ಲಾಭಗಳಿವೆಯಾ? ಇದ್ರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗುಳು ಆಗುತ್ತಾ? ಹೀಗೆ ಹಲವಾರು ಪ್ರಶ್ನೆ ನಮನ್ನು ಕಾಡದೆ ಇರಲ್ಲ. ಇವಾಗ ಮಾರ್ಕೆಟ್ ನಲ್ಲಿ ಸಿಗೋ ಪ್ರಾಡಕ್ಟ್ಗಳನ್ನೂ ಹಿಂದು ಮುಂದು ನೋಡದೆ ಉಪಯೋಗಿಸುವುದಕ್ಕೆ ಆಗಲ್ಲ. ಪ್ರಪಂಚದಲ್ಲಿ 70% ಜನ ಮಾಮೂಲಿ ಹಾಗೂ ಹಾಲು ಮಿಶ್ರಿತ ಟೀ ಸೇವನೆಯಷ್ಟೇ ಮಾಡಿದ್ರೆ ಇನ್ನ ಉಳಿದ 1೦% ಜನ ಮಾತ್ರ ಈ ಗ್ರೀನ್ ಟೀ ಅಭ್ಯಾಸ ಮಾಡಿಕೊಂಡಿದ್ದಾರೆ. ನಿಜ ಹೇಳೋದಾದ್ರೆ ಗ್ರೀನ್ ಟೀನ ಸೇವಿಸೋದ್ರಿಂದ ಹೆಲ್ತ್ ಬೆನಿಫಿಟ್ಸ್ ಇದ್ದೇ ಇದೆ. ಗ್ರೀನ್ ಟೀನಲ್ಲಿ ಔಷಧೀಯ ಗುಣಗಳು ಇರೋದ್ರಿಂದ ನಮ್ಮ ಭಾರತದ ಔಷಧದಲ್ಲೂ ಇದು ಬಳಕೆ ಆಗ್ತಾ ಇದೆ.
ನಮ್ಮ ಭಾರತದ ಔಷಧದಲ್ಲಿ ಗ್ರೀನ್ ಟೀಯನ್ನು ಮಾನಸಿಕ ಆರೋಗ್ಯ, ಹೃದಯದ ಆರೋಗ್ಯ, ಗಾಯಗಳನ್ನು ಗುಣಪಡಿಸಲು, ದೇಹದ ತೂಕವನ್ನು ಇಳಿಸಲು ಹೀಗೆ ತುಂಬಾ ರೀತಿಯಲ್ಲಿ ಬಳಕೆ ಆಗ್ತಿದೆ. ಆದ್ರೆ ಇದು ಹೆಚ್ಚು ಜನರಿಗೆ ಗೊತ್ತಿಲ್ಲ.ನಾವು ಬರಿ ಗ್ರೀನ್ ಟೀ ಕುಡಿಯೋದ್ರಿಂದ ನಮ್ಮ ತೂಕ ಇಳಿಯುತ್ತೆ ಅನ್ಕೊಂಡಿದೀವಿ ಆದ್ರೆ ಇದರಿಂದ ಇನ್ನು ಹೆಚ್ಚು ಉಪಯೋಗಗಳಿವೆ.
ಗ್ರೀನ್ ಟೀನಾ ಕೆಮೆಲಿಯಾ ಸೈನೆನ್ಸಿಸ್ ಎಲೆಗಳಿಂದ ತಯಾರು ಮಾಡಲಾಗುತ್ತೆ. ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಪ್ರಕಾರ ಇದು ಕ್ಯಾನ್ಸರ್ ತಡೆಗಟ್ಟಲು ಸಹಾಯಕಾರಿ ಎನ್ನಲಾಗಿದೆ. ನಮ್ಮ ರಕ್ತದ ಒತ್ತಡ ಅಂದ್ರೆ ಬಿಪಿ ಇದನ್ನು ಸಹ ಗ್ರೀನ್ ಟೀ ಕಂಟ್ರೋಲ್ ಮಾಡುತ್ತೆ. ದಿನಕ್ಕೆ ಮೂರರಿಂದ ನಾಲ್ಕು ಕಪ್ ಗ್ರೀನ್ ಟೀ ಸೇವನೆಯಿಂದ ಬಿಪಿ ಕಮ್ಮಿ ಮಾಡ್ಕೋ ಬಹುದು. ಇದರಲ್ಲಿ EGCG ಅನ್ನೋ ಸಂಯುಕ್ತ(ಕಾಂಪೌಂಡ್) ಇರೋದ್ರಿಂದ ನಮ್ಮ ದೇಹದ ತೂಕ ಕೂಡ ಕಮ್ಮಿ ಮಾಡ್ಕೋ ಬಹುದು. ಇದರಲ್ಲಿ ಇರುವ ಆಂಟಿಓಕ್ಸಿಡೆಂಟ್ಸ್ ನಮ್ಮ ಚಯಾಪಚಯ ಕ್ರಿಯೆಯನ್ನು ವೃದ್ಧಿ ಮಾಡುತ್ತೆ. ಗ್ರೀನ್ ಟೀ ನಲ್ಲಿರೋ ಆಕ್ಟಿವ್ ಕಂಪೌಂಡ್ಸ್ ಬೊಜ್ಜು ಕರಗಿಸೋ ಹಾರ್ಮೋನ್ಸ್ಗಳನ್ನು ಸಕ್ರಿಯಗೊಳಿಸುತ್ತೆ. ನಾವು ಯಾವದೇ ಎಕ್ಸರ್ಸೈಜ್ ಮಾಡೋದ್ರು ಜೊತೆಗೆ ಒಂದು ಕಪ್ ಗ್ರೀನ್ ಟೀ ಕುಡುದ್ರೆ ಉಪಯೋಗ ಜಾಸ್ತಿ.
ಗ್ರೀನ್ ಟೀ ನಲ್ಲಿ ಕೂಡ ಕೆಫೀನ್ ಅಂಶ ಇದೆ ಆದ್ರೆ ಕಾಫಿಗೆ ಹೋಲಿಕೆ ಮಾಡಿದ್ರೆ ಕಡಿಮೆ. ಗ್ರೀನ್ ಟೀ ಬಹಳ ಗಂಭೀರ ಮೆದುಳಿನ ಸಮಸ್ಯೆಗಳಾದ ಆಲ್ಜಿಮಿರ್ಸ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳ ಗುಣಪಡಿಸಲು ನೆರವಾಗುತ್ತೆ. ಕೆಲವು ಅಧ್ಯಯನಗಳ ಪ್ರಕಾರ ದಿನಕ್ಕೆ 4 ಕಪ್ ಗ್ರೀನ್ ಟೀ ಸೇವಿಸುವವವರು ಖಿನ್ನತೆಗೆ ಒಳಗಾಗುವುದು ಕಡಿಮೆ.
ಗ್ರೀನ್ ಟೀ ಇಂದ ನಮ್ಮ ಚರ್ಮದ ಆರೋಗ್ಯಕ್ಕೂ ಉಪಯೋಗಗಳಿವೆ. ಇದರಿಂದ ಡಾರ್ಕ್ ಸರ್ಕಲ್ಸ್ ಕಮ್ಮಿ ಆಗತ್ತೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತೆ. ಇದನ್ನು ನಿಯಮಿತವಾಗಿ ನಮ್ಮ ಡಾರ್ಕ್ ಸರ್ಕಲ್ಸ್ ಗೆ ಹಚ್ಚುವುದರಿಂದ ಇದು ನಿವಾರಣೆ ಆಗುತ್ತೆ. ಒಂದು 100gm ಗ್ರೀನ್ ಟೀ ಎಲೆಗಳ ಜೊತೆಗೆ ಸ್ವಲ್ಪ ನೀರನ್ನು ಬೆರೆಸಿ ಮುಖಕ್ಕೆ ಹಚ್ಚಿ 30 -40 ನಿಮಿಷಗಳ ಬಳಿಕ ತೊಳೆಯುವುದರಿಂದ ಮೊಡವೆಗಳ ತೊಂದರೆ ಕೂಡ ಕಮ್ಮಿ ಆಗತ್ತೆ.ಗ್ರೀನ್ ಟೀ ಒಂದು ನ್ಯಾಚುರಲ್ ಸನ್ ಸ್ಕ್ರೀನ್ ಕೂಡ ಹೌದು. ಹಾಗಾಗಿ ಇದರ ಮಿಶ್ರಣ ವನ್ನು ಮುಖಕ್ಕೆ ಹಚ್ಚುವುದರಿಂದ ಸನ್ ಬರ್ನ್ ಕಮ್ಮಿ ಆಗುತ್ತೆ. ಇವೆಲ್ಲ ಗ್ರೀನ್ ಟೀ ಇಂದ ಇರೋ ಉಪಯೋಗಗಳು. ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಿಗೋ ಉಪಯೋಗಗಳ ಪಟ್ಟಿ ಇದು.
ಮತ್ತೆ ಇನ್ನೇಕೆ ತಡ ಮಾಡೋದು ಗ್ರೀನ್ ಟೀ ಕುಡೀರಿ ಆರೋಗ್ಯ ಕಾಪಾಡಿಕೊಳ್ಳಿ.
GIPHY App Key not set. Please check settings