in ,

ಅಡುಗೆ ಮನೆ ಔಷಧಿಗಳಲ್ಲಿ ಒಂದು ಈರುಳ್ಳಿ

ಈರುಳ್ಳಿ
ಈರುಳ್ಳಿ

ಈರುಳ್ಳಿ ಬರೀ ಅಡುಗೆ ಮಾಡಲು ಅಲ್ಲ, ಅದರಿಂದ ಹಲವು ಪ್ರಯೋಜನಗಳಿವೆ. ಒಂದು ತರಕಾರಿಯಾಗಿ ಬಳಸಲಾಗುವ ಬೆಳೆ. ಈರುಳ್ಳಿ ಸಸ್ಯದ ನೆಲದಡಿಯಲ್ಲಿ ಆಹಾರ ಸಂಗ್ರಹಕ್ಕಾಗಿ ಬಳಕೆಯಾಗುವ ಒಂದು ಲಂಬವಾದ ಕುಡಿಯಾಗಿ ಬೆಳೆಯುತ್ತದೆ, ಹಾಗಾಗಿ ಇದನ್ನು ಒಂದು ಗೆಡ್ಡೆಯೆಂದು ತಪ್ಪಾಗಿ ತಿಳಿಯಬಹುದು, ಆದರೆ ಇದು ಗೆಡ್ಡೆಯಲ್ಲ. ಆಲಿಯಮ್ ಕೆಪಾ ಸಾಗುವಳಿಯಲ್ಲಿ ಮಾತ್ರ ಪರಿಚಿತವಾಗಿದೆ ಆದರೆ ಸಂಬಂಧಿತ ಕಾಡು ಜಾತಿಗಳು ಮಧ್ಯ ಏಷ್ಯಾದಲ್ಲಿ ಕಾಣುತ್ತವೆ. ಅತ್ಯಂತ ಹಳೆಯ ತರಕಾರಿಗಳ ಪೈಕಿ ಒಂದಾದ ಈರುಳ್ಳಿಗಳು, ಬಹುತೇಕ ವಿಶ್ವದ ಎಲ್ಲ ಸಂಸ್ಕೃತಿಗಳಿಗೆ ವ್ಯಾಪಿಸುವ ಹೆಚ್ಚಿನ ಸಂಖ್ಯೆಯ ಪಾಕಗಳು ಮತ್ತು ಅಡುಗೆಗಳಲ್ಲಿ ಕಾಣುತ್ತವೆ. ಇದರಲ್ಲಿ ೩೦೦ ಪ್ರಭೇದಗಳಿವೆ. ಕೆಲವು ಕೆಲವೇ ತಿಂಗಳಲ್ಲಿ ಬೆಳೆದು ಮುದುಡಿ ಹೋಗುವ ಗಿಡಗಳಾದರೆ ಮತ್ತೆ ಕೆಲವು ಬಹುವಾಷಿಕ ಸಸ್ಯಗಳು. ಈರುಳ್ಳಿಯ ಗೆಡ್ಡೆಯಲ್ಲಿ ಅನೇಕ ಸಾವಯವ ಗಂಧಕ ಸಂಯುಕ್ತ ವಸ್ತುಗಳಿವೆ. ಇವು ಸಂಕೀರ್ಣ ರೂಪದಿಂದ ಸರಳ ರೂಪಕ್ಕೆ ಬದಲಾಗುವಾಗ ಈರುಳ್ಳಿಯ ಪರಿಮಳವು ಹೊರಹೊಮ್ಮುತ್ತದೆ. ಈರುಳ್ಳಿಯನ್ನು ಶೀತಲೀಕರಿಸಿದಾಗ ಅಥವಾ ಹುರಿದಾಗ ಅದರ ರಾಸಾಯನಿಕ ರಚನೆ ಬದಲಾಗುತ್ತದೆ. ಅದು ಹಸಿ ಇದ್ದಗ ಕಿಣ್ವಗಳ ಪ್ರಕ್ರಿಯೆಯನ್ನು ಮಾಡುತ್ತಿದ್ದು ನಿಂತು ಹೋಗುತ್ತದೆ. ಈ ಕಾರಣದಿಂದಲೇ ಹುರಿದಾಗ ಅಥವಾ ಬೇಯಿಸಿದಾಗ ಈರುಳ್ಳಿಯ ರುಚಿ ಬೇರೆಯಾಗಿರುತ್ತೆ. ಈರುಳ್ಳಿಯಲ್ಲಿರುವ ಕ್ವೆಸ್ರೆಟಿನ್ ಎನ್ನುವ ರಾಸಾಯನಿಕವು ಒಂದು ಪ್ರಬಲ ಆ್ಯಂಟಿ ಆಕ್ಸಿಡೆಂಟ್ ಆಗಿದ್ದು, ನಮ್ಮ ಆರೋಗ್ಯ ರಕ್ಷಣೆಯನ್ನು ಮಾಡುತ್ತದೆ.

ಅಡುಗೆ ಮನೆ ಔಷಧಿಗಳಲ್ಲಿ ಒಂದು ಈರುಳ್ಳಿ
ಈರುಳ್ಳಿ

ಈರುಳ್ಳಿ ಹೆಚ್ಚಿದರೆ ಕಣ್ಣಿನಲ್ಲಿ ನೀರು ಬರುತ್ತದೆ ಎಂಬುದು ಹಳೆಯ ಮಾತು. ಆದರೆ ಕೆಲವೊಂದು ಆಹಾರ ಸಾಮಗ್ರಿಗಳು ಬಹಳಷ್ಟು ವಿಶಿಷ್ಟವಾದ ಸ್ಥಾನದಲ್ಲಿ ನಿಲ್ಲುತ್ತವೆ ಎಂಬುದನ್ನು ಮೊದಲು ತಿಳಿಯಬೇಕು. ಅದರಲ್ಲಿ ಈರುಳ್ಳಿ ಸಹ ಒಂದು. ಮನುಷ್ಯನ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತಹ ಶಕ್ತಿ ಈರುಳ್ಳಿಗಿದೆ. ಏಕೆಂದರೆ ಪ್ರತಿ ದಿನ ನಾವು ಸೇವಿಸುವ ಆಹಾರದಲ್ಲಿ ತುಂಬಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಮ್ಮ ಹೃದಯದ ಕಾರ್ಯವನ್ನು ಹಠಾತ್ತನೆ ಯಾವಾಗ ಸ್ಥಗಿತಗೊಳಿಸುತ್ತದೆ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ, ಆದ್ದರಿಂದ, ಈರುಳ್ಳಿಯ ಸೇವನೆಯಿಂದ ಈ ಸಮಸ್ಯೆಯಿಂದ ಪಾರಾಗಬಹುದು. ಇದು ಕೇವಲ ಒಂದು ಉದಾಹರಣೆ ಅಷ್ಟೇ. ಇಂತಹ ಹತ್ತು ಹಲವಾರು ಪ್ರಯೋಜನಗಳು ಹಸಿ ಈರುಳ್ಳಿ ತಿನ್ನುವುದರಿಂದ ನಮಗೆ ಸಿಗುತ್ತವೆ.

ಈರುಳ್ಳಿಯಲ್ಲಿ ಕಂಡುಬರುವ ಫೈಬರ್ ಅನ್ನು ಒಲಿಗೋಫ್ರಕ್ಟೋಸ್ ಎಂದು ಕರೆಯಲಾಗುತ್ತದೆ . ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಅರಳಲು ಸಹಾಯ ಮಾಡುತ್ತದೆ, ಇದರಿಂದ ಕರುಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಾತ್ರವಲ್ಲ, ಒಲಿಗೋಫ್ರಕ್ಟೋಸ್ ಅತಿಸಾರದಂತಹ ಸಮಸ್ಯೆಗಳಲ್ಲೂ ಪ್ರಯೋಜನಕಾರಿ.

ನಮ್ಮ ದೇಹದಲ್ಲಿ ಎದುರಾಗುವ ಕೆಲವೊಂದು ಅಲರ್ಜಿ ಸಮಸ್ಯೆಗಳು ಎಂದರೆ ಕಣ್ಣಿನ ಕೆರೆತ, ಗಂಟಲು ಕೆರೆತ ಮತ್ತು ಮೂಗು ಸೋರುವುದು ಅಂದರೆ ನೆಗಡಿ. ಇವುಗಳಿಗೆ ಕಾರಣವೆಂದರೆ ‘ ಹಿಸ್ಟಮಿನ್ ‘ ಎಂಬ ಹಾರ್ಮೋನ್ ನಮ್ಮ ದೇಹದಲ್ಲಿ ಬಿಡುಗಡೆಯಾಗುವುದು. ಇಂತಹ ಅಲರ್ಜಿ ಸಮಸ್ಯೆಗಳಿಂದ ಪಾರಾಗ ಬೇಕೆಂದರೆ ಮೊದಲು ಈ ಹಿಸ್ಟಮಿನ್ ಹಾರ್ಮೋನಿನ ಬಿಡುಗಡೆಯನ್ನು ನಿಲ್ಲಿಸಬೇಕು. ಇದಕ್ಕಾಗಿ ಸೀದಾ ಮೆಡಿಕಲ್ ಶಾಪ್ ಬಾಗಿಲು ತಟ್ಟುವ ಬದಲು ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿರುವ 1 ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ಅಲರ್ಜಿ ಸಮಸ್ಯೆಯನ್ನು ದೂರ ಮಾಡಲು ಔಷಧಿಗಳು ಮಾಡುವ ಕೆಲಸವನ್ನು ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶ ಮಾಡುತ್ತದೆ. ದೇಹದಲ್ಲಿ ಬಿಡುಗಡೆಗೊಳ್ಳುವ ಹಿಸ್ಟಮಿನ್ ಹಾರ್ಮೋನಿನ ಜೊತೆಗೆ ಕೆಲವೊಂದು ಇನ್ಫಾಮೇಟರಿ ಮತ್ತು ಅಲರ್ಜಿಗೆ ಕಾರಣವಾಗುವಂತಹ ಅಂಶಗಳು ಬಿಡುಗಡೆಯಾಗುವುದನ್ನು ತಡೆಯುತ್ತದೆ.
ಕೆಲವೊಮ್ಮೆ ಹೇಗಾಗುತ್ತದೆ ಎಂದರೆ, ನಾವು ಸೇವಿಸುವ ಆಹಾರದಿಂದಲೇ ನಮಗೆ ಕ್ಯಾನ್ಸರ್ ಕಾಯಿಲೆ ಉಂಟಾಗುವ ಸಂಭವ ಹೆಚ್ಚಿರುತ್ತದೆ. ಏಕೆಂದರೆ ನಾವು ಸೇವಿಸುವ ಆಹಾರದಲ್ಲಿ ‘ ಕಾರ್ಸಿನೋಸಿನ್ ‘ ಎಂಬ ಅಂಶವಿದ್ದು, ಇದು ದೇಹದಲ್ಲಿ ಸರಿಯಾಗಿ ಮೆಟಬಾಲಿಸಂ ಪ್ರಕ್ರಿಯೆಯಲ್ಲಿ ಭಾಗಿಯಾಗದಿದ್ದರೆ, ಇದೇ ಅಂಶ ಮುಂದಿನ ದಿನಗಳಲ್ಲಿ ನಮ್ಮ ದೇಹದಲ್ಲಿ ಕ್ಯಾನ್ಸರ್ ಕಾರಕ ಏಜೆಂಟ್ ಗಳಾಗಿ ಬದಲಾಗುತ್ತವೆ. ಇದನ್ನು ತಪ್ಪಿಸಲು ಈರುಳ್ಳಿಗಳು ನಮ್ಮ ಆಹಾರದಲ್ಲಿ ಸೇರ್ಪಡೆಗೊಂಡರೆ, ಅವುಗಳಲ್ಲಿರುವ ಆರ್ಗನೋ ಸಲ್ಫರ್ ಅಂಶಗಳು ನಮ್ಮ ದೇಹಕ್ಕೆ ಉತ್ತಮವಾಗಿ ಕೆಲಸ ಮಾಡುತ್ತವೆ. ಅರಿಶಿಣದ ಜೊತೆ ಈರುಳ್ಳಿಯ ಮಿಶ್ರಣ ಮಾಡಿ ಸೇವಿಸುವುದರಿಂದ ಕರುಳಿನ ಕ್ಯಾನ್ಸರ್ ಸಮಸ್ಯೆ ಉಂಟಾಗುವುದಿಲ್ಲ.

ಈರುಳ್ಳಿಯಲ್ಲಿ ಕಂಡುಬರುವ ಫೈಟೊಕೆಮಿಕಲ್ಸ್ ಗ್ಯಾಸ್ಟ್ರಿಕ್ ಅಲ್ಸರ್ ನ ಪರಿಣಾಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಈರುಳ್ಳಿಯು ಕೆಲವು ನೈಸರ್ಗಿಕ ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ, ಇದು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ಹೊರತಾಗಿ, ಇದು ಹೊಟ್ಟೆ ನೋವು ಮತ್ತು ಹೊಟ್ಟೆ ಹುಳುಗಳಂತಹ ಸಮಸ್ಯೆಗಳಿಂದಲೂ ಪರಿಹಾರವನ್ನು ನೀಡುತ್ತದೆ.

ಅಡುಗೆ ಮನೆ ಔಷಧಿಗಳಲ್ಲಿ ಒಂದು ಈರುಳ್ಳಿ
ಈರುಳ್ಳಿ

ಈರುಳ್ಳಿಯ ಔಷಧೀಯ ಗುಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿವೆ. ಈರುಳ್ಳಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಲಬದ್ಧತೆಯ ಸಮಸ್ಯೆ ಇಲ್ಲದಿದ್ದರೆ, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತದೆ.

ಬೇಸಿಗೆಯಲ್ಲಿ ಈರುಳ್ಳಿ ತಿನ್ನುವುದರಿಂದ ಶಾಖದ ಹೊಡೆತ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಈರುಳ್ಳಿ ಶಾಖದ ಹೊಡೆತದಿಂದ ಮಾತ್ರವಲ್ಲದೆ ಮಧುಮೇಹ ಮತ್ತು ಕ್ಯಾನ್ಸರ್ ನಂತಹ ರೋಗಗಳಿಂದಲೂ ರಕ್ಷಿಸುತ್ತದೆ

ಈರುಳ್ಳಿ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಈರುಳ್ಳಿಯಿಂದ ತೆಗೆದ ಎಣ್ಣೆ ಕೂಡ ಪ್ರಯೋಜನಕಾರಿ. ಈ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕ, ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಹ ಕಂಡುಬರುತ್ತವೆ.

ನೆಗಡಿ, ಕೆಮ್ಮು ಕಫ‌ಕ್ಕೆ 2 ಚಮಚ ಈರುಳ್ಳಿಯ ರಸಕ್ಕೆ 2 ಚಮಚ ಜೇನು ತುಪ್ಪ 2 ಚಿಟಿಕೆ ಕಾಳುಮೆಣಸಿನ ಹುಡಿ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ಕಫ‌ ಶಮನವಾಗುತ್ತದೆ.

ಮಕ್ಕಳಿಗೆ ಇಡೀ ಈರುಳ್ಳಿಯನ್ನು ಬೇಯಿಸಿ ಅಥವಾ ಸುಟ್ಟು ಸೇವಿಸಲು ನೀಡಿದರೆ ಕೆಮ್ಮು ಕಫ‌ ನಿವಾರಣೆಯಾಗುತ್ತದೆ.ಈರುಳ್ಳಿ ರಸ ಮತ್ತು ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿ. ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಈರುಳ್ಳಿ ಹೂವುಗಳನ್ನು ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಯಾಗುತ್ತದೆ.ಈರುಳ್ಳಿಯನ್ನು ಕತ್ತರಿಸಿ ಹಸಿಯಾಗಿ ಊಟಕ್ಕೆ ಮೊದಲು ಸೇವಿಸಿದರೆ ವೃದ್ಧಿಯಾಗುತ್ತದೆ.ಈರುಳ್ಳಿಯನ್ನು ಕತ್ತರಿಸಿ ಬೆಲ್ಲ, ತುಪ್ಪ ಬೆರೆಸಿ ಸೇವಿಸಿದರೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಹೊಟ್ಟೆನೋವು ಶಮನವಾಗುತ್ತದೆ.ಚಮಚ ಈರುಳ್ಳಿ ರಸಕ್ಕೆ 4 ಚಿಟಿಕೆ ಇಂಗು ಬೆರೆಸಿ ಸೇವಿಸಿದರೆ ಹೊಟ್ಟೆನೋವು ಶಮನವಾಗುತ್ತದೆ.ಉಷ್ಣತೆಯಿಂದಾಗುವ ಹೊಟ್ಟೆನೋವಿಗೆ ತುಪ್ಪದಲ್ಲಿ ಹುರಿದ ಈರುಳ್ಳಿಯನ್ನು ಊಟದ ಮೊದಲು ಸೇವಿಸಬೇಕು. ಕೂದಲು ಸೊಂಪಾಗಿ ಬೆಳೆಯಲು ಈರುಳ್ಳಿಯನ್ನು ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ಶ್ಯಾಂಪೂ ಬಳಸಿ ತಲೆ ತೊಳೆಯಿರಿ. ಬಿಸಿ ನೀರಿನೊಂದಿಗೆ ಈರುಳ್ಳಿ ರಸವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಶ್ಯಾಂಪೂ ಬಳಸಿದ ಮೇಲೆ ಸ್ನಾನದ ಕೊನೆಯ ಹಂತದಲ್ಲಿ ಬಳಸಿ. ಮೊಸರು ನೈಸರ್ಗಿಕವಾದ ಕಂಡೀಷನರ್, ಮೊಸರು ಜೊತೆ ಈರುಳ್ಳಿ ರಸ ಮಿಕ್ಸ್ ಮಾಡಿ ಹಚ್ಚಿದರೆ ಕೂದಲು ಮೃದುವಾಗಿ, ಸೊಂಪಾಗಿ ಬೆಳೆಯುತ್ತದೆ ಮತ್ತು ತಲೆ ಹೊಟ್ಟು, ತಲೆ ತುರಿಕೆ ಕಡಿಮೆಯಾಗುತ್ತದೆ.ಮೂಲವ್ಯಾಧಿಯನ್ನು ಗುಣಪಡಿಸುತ್ತದೆ. ಈರುಳ್ಳಿಯನ್ನು ಮೊಸರಿನೊಂದಿಗೆ ಜಜ್ಜಿ ಸೇವಿಸಿ. ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಅದನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಧರ್ಮಸ್ಥಳ

ಧರ್ಮಸ್ಥಳದ ಮಹತ್ವದ

ಕರಾವಳಿ ಕಂಬಳ

ಕರಾವಳಿ ಕಂಬಳ