in ,

ಸೌರಮಂಡಲದ ಗ್ರಹಗಳು

ಸೌರಮಂಡಲದ ಗ್ರಹಗಳು
ಸೌರಮಂಡಲದ ಗ್ರಹಗಳು

ಗ್ರಹ ಯಾವುದೇ ನಕ್ಷತ್ರ ಕ್ಷೇತ್ರದೊಳಗೆ ಆ ನಕ್ಷತ್ರವನ್ನು ಪರಿಭ್ರಮಿಸುತ್ತಿರುವ ಒಂದು ಘನಕಾಯ. ಪ್ರತಿಯೊಂದು ಗ್ರಹವೂ ಮಾತ್ರಾ ನಕ್ಷತ್ರದಿಂದ ತನ್ನ ಮೇಲೆ ಬೀಳುವ ವಿಕಿರಣವನ್ನು ಪ್ರತಿಫಲಿಸಿ ತನ್ನ ಇರುವನ್ನು ಪ್ರಕಟಿಸುತ್ತದೆ. ಸೂರ್ಯನಿಗೆ ಎಂಟು ಗ್ರಹಗಳಿವೆ. ಸೂರ್ಯನಿಂದ ಅವುಗಳು ಇರುವ ದೂರಾನುಸಾರ ಇವು: ಬುಧ,ಶುಕ್ರ,ಭೂಮಿ,ಮಂಗಳ,ಗುರು,ಶನಿ,ಯುರೇನಸ್ ಮತ್ತು ನೆಪ್ಚೂನ್. ಪ್ಲುಟೋ ಸೇರಿದರೆ ಒಂಭತ್ತು ಗ್ರಹಗಳಾಗುವುವು.

ಸೂರ್ಯ ಮತ್ತು ಸೂರ್ಯನ ಸುತ್ತ ಕಕ್ಷೆಯಲ್ಲಿ ಪ್ರದಕ್ಷಿಸುತ್ತಿರುವ ಗ್ರಹ, ಉಪಗ್ರಹ, ಧೂಮಕೇತು, ಸಣ್ಣ ನಕ್ಷತ್ರಾಕೃತಿಯ ಗ್ರಹ ಅದೇ ಕ್ಷುದ್ರ ಗ್ರಹ (ಎಸ್ಟೆರೊಇಡ್)ಗಳ ಸಮೂಹವನ್ನು ಸೌರವ್ಯೂಹ ಅಥವಾ ಸೌರಮಂಡಲ ಎಂದು ಕರೆಯುತ್ತಾರೆ. ಭೂಮಿಯು ಸೌರವ್ಯೂಹದ ಮೂರನೇಯ ಗ್ರಹ.

ಸೌರವ್ಯವಸ್ಥೆಯು ಸೂರ್ಯನ ಸುತ್ತ ಕೇಂದ್ರಿಕೃತವಾಗಿದೆ. ಹಾಗಾಗಿ ಸೂರ್ಯನನ್ನು ಸೌರವ್ಯೂಹದ ಪೋಷಕನೆಂದು ಪರಿಗಣಿಸಬಹುದು. ಸೌರವ್ಯೂಹವು ಸೂರ್ಯ, ಗ್ರಹಗಳು ಮತ್ತು ಚಂದ್ರನನ್ನು ಒಳಗೊಂಡಿದೆ. ಸೌರವ್ಯೂಹದಲ್ಲಿ 8 ಗ್ರಹಗಳಿವೆ. ಇವಲ್ಲದೆ ಸೌರವ್ಯೂಹವು ಸಾವಿರಾರು ಸಂಖ್ಯೆಯ ಉಪಗ್ರಹಗಳೆಂದು ಕರೆಯಲ್ಪಡುವ ಸಣ್ಣ ಗ್ರಹಗಳನ್ನು ಮತ್ತು ಹಲವಾರು ಧೂಮಕೇತುಗಳನ್ನು ಒಳಗೊಂಡಿದೆ. ಸೌರವ್ಯೂಹದ ಗ್ರಹಗಳೆಂದರೆ( ಅವುಗಳಿಗೂ ಮತ್ತು ಸೂರ್ಯನಿಗೂ ನಡುವೆ ಇರುವ ಅಂತರದ ಅನುಕ್ರಮದಂತೆ) ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್.

ಪ್ರಾಚೀನಕಾಲದಿಂದಲೂ ವಿದ್ವಾಂಸರು ಮತ್ತು ಸಾಮಾನ್ಯ ಜನರು ಈ ಜಗತ್ತಿನ ಕೇಂದ್ರ ಭೂಮಿಯೆಂದು ಭಾವಿಸಿದ್ದರು. 15 ನೇ ಶತಮಾನದಲ್ಲಿ ನಿಕೊಲಸ್ ಕೋಪರ್ನಿಕಸ್ ಸೂರ್ಯಕೇಂದ್ರಿತ ಗಣಿತ ಭವಿಷ್ಯಸೂಚಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಮೊದಲಿಗರಾಗಿದ್ದರು. 17 ನೇ ಶತಮಾನದಲ್ಲಿ ಗೆಲಿಲಿಯೋ ಗೆಲಿಲೈ, ಜೊಹಾನ್ಸ್ ಕೆಪ್ಲರ್, ಮತ್ತು ಐಸಾಕ್ ನ್ಯೂಟನ್’ರ ಭೂಮಿಯನ್ನು ಕುರಿತ ಭೌತಶಾಸ್ತ್ರ ತಿಳುವಳಿಕೆಯ ಅಭಿವೃದ್ಧಿಯು ಕ್ರಮೇಣ ಹೊಸ ಕಲ್ಪನೆಯನ್ನು ಜನರು ಒಪ್ಪಿಕೊಳ್ಳಲು ದಾರಿಮಾಡಿಕೊಟ್ಟಿತು.

ಸೌರಮಂಡಲದ ಗ್ರಹಗಳು
ಭೂಮಿ, ಸೂರ್ಯ

“ಭೂಮಿಯು ಚಲಿಸುತ್ತದೆ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತವೆ”, ಎಂದು ಎಲ್ಲರೂ ಒಪ್ಪುವಂತಾಯಿತು. ದೂರದರ್ಶಕದ ಆವಿಷ್ಕಾರ, ಮತ್ತಷ್ಟು ಗ್ರಹಗಳು ಮತ್ತು ಚಂದ್ರರ ಆವಿಷ್ಕಾರಕ್ಕೆ ದಾರಿಯಾಯಿತು. ದೂರದರ್ಶಕ ಮತ್ತು ಮಾನವರಹಿತ ಬಾಹ್ಯಾಕಾಶ ಉಪಗ್ರಹ ಬಳಕೆಗಳು ಭೂವೈಜ್ಞಾನಿಕ ವಿದ್ಯಮಾನಗಳಿಗೆ, ಸಂಶೋಧನೆಗಳಿಗೆ ಅವಕಾಶ ಮಾಡಿಕೊಟ್ಟಿತು. ಉದಾಹರಣೆಗೆ ಮೋಡಗಳು, ಧೂಳಿನ ಬಿರುಗಾಳಿಗಳು ಮತ್ತು ಇತರ ಗ್ರಹಗಳ ಮೇಲೆ ಪರ್ವತಗಳು, ಮಂಜುಗಡ್ಡೆ, ಕುಳಿಗಳು, ಕಾಲೋಚಿತ ಭೂಗರ್ಭದ ಪ್ರಕ್ರಿಯೆಗಳು ಇತ್ಯಾದಿ ಅಪರಿಮಿತ ಸಂಶೋಧನೆಗಳು ನೆಡೆದವು. ಇದರಲ್ಲಿ ಬಾಹ್ಯಾಕಾಶ ಶೋಧನೆಯು ಅಧ್ಬುತವಾದುದು. ಖಭೌತಶಾಸ್ತ್ರವು ಜಗತ್ತಿನ ಬಗೆಗೆ, ಸೂರ್ಯ,ಚಂದ್ರ, ನಕ್ಷತ್ರಗಳ ವಿಚಾರವಾಗಿ ಜನರಿಗೆ ಹಿಂದೆ ಇದ್ದ ಕಲ್ಪನೆಗಳನ್ನು ಹಿಂದೆ ಹಾಕಿ ಹೊಸ ವಿಚಾರಕ್ಕೆ ಅವಕಾಶಮಾಡಿಕೊಟ್ಟಿತು.

ಸೂರ್ಯ
ನಮ್ಮ ಸೌರ ಮಂಡಲದ ಹೃದಯ ಭಾಗವಾಗಿರುವ ಸೂರ್ಯನು 4.5 ಬಿಲಿಯನ್ ವರ್ಷಗಳ ಹಿಂದೆ ನಮ್ಮ ಆಕಾಶಗಂಗೆಯ “ಒರಿಯನ್ ಸ್ಪರ್” ಎನ್ನುವ ಭಾಗದಲ್ಲಿ ಸೃಷ್ಟಿಯಾದನು. ಬಲವಾದ ಗುರುತ್ವಾಕರ್ಷಣೆ ಹಾಗು ಕಾಂತೀಯ ಕ್ಷೇತ್ರ ಹೊಂದಿರುವ ಸೂರ್ಯನನ್ನು 6 ಪದರಗಳಾಗಿ ವಿಂಗಡಿಸಿ ಅಧ್ಯಯನ ಮಾಡಲಾಗಿದೆ. ಆ ಆರು ಪದರಗಳು ಈ ರೀತಿ ಇದೆ “ಕೊರೋನ, ಕ್ರೋಮೋಸ್ಪಿಯರ್, ಫೋಟೋಸ್ಫಿಯರ್, ಕನ್ವೆಕ್ಟಿವ್ ಜೋನ್, ರೇಡಿಯೆಟಿವ್ ಜೋನ್ ಹಾಗು ಕೋರ್”. ಶೇಕಡ 91 ರಷ್ಟು ಹೈಡ್ರೋಜೆನ್, 8.9 ರಷ್ಟು ಹೀಲಿಯಂ ಹಾಗು ಶೇಖಡ 0.1 ರಷ್ಟು ಇಂಗಾಲ ಮತ್ತು ನೈಟ್ರೋಜನ್ ಅನಿಲಗಳಿಂದ ತುಂಬಿರುವ ಸೂರ್ಯನು ಸುಡುವ ಬೆಂಕಿಯ ಉಂಡೆಯಾಗಿದ್ದಾನೆ.

ಬರೋಬ್ಬರಿ ಒಂದುಕೋಟಿ ಹದಿನೈದು ಲಕ್ಷ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೊಂದಿರುವ ಸೂರ್ಯನ ಕೋರ್ ಭಾಗದಲ್ಲಿ ಹೈಡ್ರೋಜನ್ ಅಣುಗಳು ಜೊತೆಗೂಡಿ ಹೀಲಿಯಮ್ ಅನಿಲವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ವಿಕಿರಣ, ವಿದ್ಯುತ್ ಹಾಗು ಸೋಲಾರ್ ಗಾಳಿ ಉತ್ಪತ್ತಿಯಾಗಿ ಭೂಮಿಯ ಮೇಲೆ ಹೊಸ ಜೀವಿ ಸೃಷ್ಟಿಯಾಗಲು ಕಾರಣವಾಗುತ್ತಿದೆ. ಸೂರ್ಯನು ಅದೆಷ್ಟು ದೊಡ್ಡ ನಕ್ಷತ್ರವೆಂದರೆ ಭೂಮಿಯ ಹಾಗೆ ಇರುವ ಇನ್ನೂ 13 ಲಕ್ಷ ಭೂಮಿಗಳನ್ನು ಅದರ ಒಳಗೆ ಹಿಡಿಸಬಹುದಾಗಿದೆ.

ಇಷ್ಟೊಂದು ದೊಡ್ಡ ಗಾತ್ರದಲ್ಲಿರುವ ಸೂರ್ಯನ ಗುರುತ್ವಾಕರ್ಷಣೆ ನಮ್ಮ ಸೌರ ಮಂಡಲದಲ್ಲಿರುವ ಎಲ್ಲಾ ಗ್ರಹಗಳನ್ನು ನಿರ್ಧಿಷ್ಟ ಜಾಗದಲ್ಲಿ ಇರುವ ಹಾಗೆ ನೋಡಿಕೊಳ್ಳುತ್ತಿದೆ. ಅಕಸ್ಮಾತ್ ಸೂರ್ಯನು ಇಲ್ಲವಾದಲ್ಲಿ ನಮ್ಮ ಸೌರ ಮಂಡಲದ ಎಲ್ಲಾ ಗ್ರಹ ನಕ್ಷತ್ರಗಳು ಗುರುತ್ವಾಕರ್ಷಣೆ ಕಳೆದುಕೊಂಡು ಚಿಲ್ಲಾ ಪಿಲ್ಲಿಯಾಗಿ ಎಲ್ಲೆಡೆ ಬೀಳುತ್ತವೆ. ಇದೇ ಕಾರಣಕ್ಕೆ ಸೂರ್ಯನು ನಮ್ಮ ಸೌರಮಂಡಲದ ಹೃದಯ ಎಂದು ಕರೆದಿರುವುದು.

ಸೂರ್ಯನು ಸೌರವ್ಯವಸ್ಥೆಯ ಅತ್ಯಂತ ದೊಡ್ಡ ಸದಸ್ಯ.
ಸೌರವ್ಯೂಹದ ಎಲ್ಲಾ ಗ್ರಹಗಳೂ ಇವನ ಸುತ್ತ ಪ್ರದಕ್ಷಿಣೆ ಹಾಕುತ್ತವೆ.
ಸೂರ್ಯ ತನ್ನ ಅಕ್ಷದ ಸುತ್ತ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತಿದ್ದಾನೆ.
ಸಂಪೂರ್ಣ ಸೌರವ್ಯವಸ್ಥೆಯ ಶಾಖ ಮತ್ತು ಬೆಳಕಿಗೆ ಸೂರ್ಯನೇ ಏಕೈಕ ಆಧಾರ.
ಸೂರ್ಯನ ಕಿರಣವು ಭೂಮಿಯನ್ನು ತಲುಪಲು 8 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ.

ಚಂದ್ರ

ಸೌರಮಂಡಲದ ಗ್ರಹಗಳು
ಚಂದ್ರ

ಭೂಮಿಗಿರುವ ಏಕೈಕ ನೈಸರ್ಗಿಕ ಉಪಗ್ರಹ ಎಂದರೆ ಚಂದ್ರ.
ಇದು ಸೌರವ್ಯೂಹದ ಮೊದಲ ಉಪಗ್ರಹವಾಗಿದೆ.
ಚಂದ್ರನು ಭೂಮಿಯ ಸುತ್ತ ಒಂದು ಪ್ರದಕ್ಷಿಣೆ ಹಾಕಲು 27 ದಿನ, 7 ಘಂಟೆ ,43 ನಿಮಿಷ ಹಾಗೂ 11.47 ಸೆಕೆಂಡುಗಳ ಕಾಲವನ್ನು ತೆಗೆದುಕೊಳ್ಳತ್ತಾನೆ.

ಗ್ರಹಗಳು
ಸೂರ್ಯನ ಸುತ್ತ ಸುತ್ತುತ್ತಿರುವ ಆಕಾಶಕಾಯಗಳನ್ನೇ ‘ಗ್ರಹಗಳು’ ಎಂದು ಹೆಸರಿಸಲಾಗಿದೆ.
ಮೊದಲು 9 ಗ್ರಹಗಳನ್ನು ಗುರುತಿಸಲಾಗಿತ್ತು. ಆದರೆ 2006 ರಲ್ಲಿ ನಡೆದ ವಿಶ್ವ ಖಗೋಳಶಾಸ್ತ್ರಜ್ಞರ ಸಮ್ಮೇಳನದಲ್ಲಿ 9 ನೇ ಗ್ರಹವಾದ “ಪ್ಲೂಟೋ”ವು ಗ್ರಹ ಎನಿಸಿಕೊಳ್ಳಬಹುದಾದ ಕೆಲ ಲಕ್ಷಣಗಳನ್ನು ಹೊಂದಿಲ್ಲವಾದ್ದರಿಂದ ಅದನ್ನು ಗ್ರಹ ಸ್ಥಾನದಿಂದ ಪದಚ್ಯುತಗೊಳಿಸಲಾಯಿತು. ಹಾಗಾಗಿ ಈಗ

ಸೌರವ್ಯೂಹದಲ್ಲಿ 8 ಗ್ರಹಗಳಿವೆ.
1.ಬುಧ

ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಅತ್ಯಂತ ಚಿಕ್ಕ ಗ್ರಹ. ಸೂರ್ಯನಿಂದ 36 ಮಿಲಿಯನ್ ಮೈಲಿಗಳಷ್ಟು ದೂರದಲ್ಲಿರುವ ಈ ಗ್ರಹದ ಉಷ್ಣಾಂಶವು ಬೆಳಗಿನ ವೇಳೆಯಲ್ಲಿ 427 ಡಿಗ್ರಿ ಸೆಲ್ಸಿಯಸ್ ಇದ್ದರೆ ರಾತ್ರಿ ಸಮಯದಲ್ಲಿ -273 ಡಿಗ್ರಿ ಸೆಲ್ಸಿಯಸ್ ಆಗುತ್ತದೆ. 4880 ಕಿಲೋಮೀಟರ್ ಸುತ್ತಳತೆ ಹೊಂದಿರುವ ಈ ಗ್ರಹವನ್ನು “ಕೋರ್, ಮ್ಯಾನ್ಟಲ್ ಹಾಗು ಕ್ರಸ್ಟ್” ಎನ್ನುವ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಗ್ರಹದ ಇನ್ನೊಂದು ವಿಶೇಷತೆ ಏನೆಂದರೆ ಸೂರ್ಯನ ಸುತ್ತ ಸುತ್ತಲು ಕೇವಲ 88 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ ಪ್ರತಿ 88 ದಿನಕ್ಕೊಮ್ಮೆ ಇಲ್ಲಿ ಹೊಸ ವರ್ಷ ಬರುತ್ತದೆ.

2.ಶುಕ್ರ
ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಗ್ರಹ. ಮರ್ಕುರಿ ಗ್ರಹದ ನಂತರ ಇರುವ ಈ ಗ್ರಹದಲ್ಲಿ ಅನೇಕ ಜ್ವಾಲಾಮುಖಿ ಪರ್ವತಗಳಿದ್ದು ಭೂಮಿಯ ಸುತ್ತಳತೆಯನ್ನೇ ಈ ಗ್ರಹವೂ ಕೂಡ ಹೊಂದಿದೆ. ಭೂಮಿಗೆ ಹಾಗು ಶುಕ್ರ ಗ್ರಹಕ್ಕೆ ಇರುವ ಒಂದೇ ಒಂದು ವ್ಯತ್ಯಾಸವೆಂದರೆ ಈ ಗ್ರಹದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಿದ್ದು ಇದರಿಂದ ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತದೆ.

3.ಭೂಮಿ
ಭೂಮಿಯು (ಸೂರ್ಯನಿಂದ ಇರುವ ದೂರವನ್ನು 1 ಖಗೋಳ ಮಾನ ಎನ್ನುವರು = ಸೂರ್ಯನಿಂದ 15ಕೋಟಿ ಕಿ.ಮೀ.(ಒಂದು ಖಗೋಲಮಾನ ದೂರ) ದೂರದಲ್ಲಿದೆ. ನಿಖರ ಸರಾಸರಿ ದೂರ 149,598,023 ಕಿಮೀ.(92,955,902 ಮೈಲಿ: ಭೂಮಿಯ ಉಪಸೌರ ಮತ್ತು ಅಪರವಿ ನಡುವಿನ ವ್ಯತ್ಯಾಸ 50 ಲಕ್ಷ ಕಿ.ಮೀ. ಇದು ಭೂಮಿ ಸೂರ್ಯನನ್ನು ಸುತ್ತುವಾಗ ಹತ್ತಿರದ ಮತ್ತು ದೂರದ ಬಿಂದುಗಳ ವ್ಯತ್ಯಾಸ.

4.ಮಂಗಳ
ನಮ್ಮ ಸೌರ ಮಂಡಲದ ಎರಡನೆಯ ಚಿಕ್ಕ ಗ್ರಹವಾಗಿರುವ ಮಂಗಳ ಗ್ರಹದ ಮೇಲೆ 3.5 ಬಿಲಿಯನ್ ವರ್ಷಗಳ ಹಿಂದೆ ಜೀವಿಗಳು ಇದ್ದವೆಂದು ತಿಳಿದುಬಂದಿದೆ. ಸೂರ್ಯನಿಂದ 227.9 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಈ ಗ್ರಹವು ಇಂದು ಯಾವುದೇ ಜೀವಿಗಳಿಗೆ ಆಶ್ರಯ ನೀಡುತ್ತಿಲ್ಲ. ಆದರೆ ಈ ಗ್ರಹದ ಮೇಲೆ ಬೃಹತ್ ಮಂಜು ಗಡ್ಡೆಗಳು ಇದ್ದು ಅದನ್ನು ಕರಗಿಸುವುದರಿಂದ ಸಾಕಷ್ಟು ಪ್ರಮಾಣದ ನೀರು ಪಡೆಯಬಹುದಾಗಿದೆ.

5.ಗುರು
ನಮ್ಮ ಸೌರ ಮಂಡಲದಲ್ಲಿ ಸೃಷ್ಟಿಯಾದ ಮೊಟ್ಟಮೊದಲ ಗ್ರಹವೆಂದರೆ ಗುರು ಗ್ರಹ. ಈ ಗ್ರಹವು ಅದೆಷ್ಟು ದೊಡ್ಡದಾಗಿದೆ ಎಂದರೆ 1300 ಭೂಮಿಗಳು ಸೇರಿದರೆ ಒಂದು ಗುರು ಗ್ರಹಕ್ಕೆ ಸಮನಾಗಿದೆ. ಸೂರ್ಯನಿಂದ ಬರೋಬ್ಬರಿ 778.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಈ ಗ್ರಹವು ಸೂರ್ಯನ ಸುತ್ತ ಒಂದು ಸುತ್ತು ಸುತ್ತಲು 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ.

6.ಶನಿ
ಈ ಗ್ರಹವು ನಮ್ಮ ಸೌರ ಮಂಡಲದಲ್ಲಿ ಎರಡನೆಯ ದೊಡ್ಡ ಗ್ರಹ. ಭೂಮಿಗಿಂತ ಹತ್ತು ಪಟ್ಟು ದೊಡ್ಡದಿರುವ ಈ ಗ್ರಹವು ಸೂರ್ಯನಿಂದ 1.43 ಬಿಲಿಯನ್ ಕಿಲೋಮೀಟರ್ ದೂರದಲ್ಲಿದ್ದು ಸೂರ್ಯನ ಸುತ್ತ ಸುತ್ತಲು 29 ವರ್ಷಗಳನ್ನು ತೆಗೆದುಕೊಳ್ಳುವುದು. ಈ ಗ್ರಹವು ಕೂಡ ಗುರು ಗ್ರಹದ ಹಾಗೆ ಸಂಪೂರ್ಣ ಅನಿಲದಿಂದ ಕೂಡಿದ್ದು ಭೂಮಿಯ ಹಾಗೆ ಯಾವುದೇ ಮೇಲ್ಮೈ ಹೊಂದಿಲ್ಲ.

7.ಯುರೇನಸ್
ಈ ಗ್ರಹವು ನಮ್ಮ ಸೌರ ಮಂಡಲದ ಏಳನೆಯ ಗ್ರಹವಾಗಿದ್ದು ಸೂರ್ಯನಿಂದ 2.87 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಸೂರ್ಯನ ಸುತ್ತ ಸುತ್ತಲು 84.3 ವರ್ಷಗಳನ್ನು ತೆಗೆದುಕೊಳ್ಳುವ ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಕಡಿಮೆ ಉಷ್ಣಾಂಶ ಹೊಂದಿರುವ ಗ್ರಹವಾಗಿದೆ. ಭೂಮಿಯ ಹಾಗೆ ಈ ಗ್ರಹಕ್ಕೆ 27 ಚಂದ್ರರಿದ್ದು ಶನಿ ಗ್ರಹದ ಹಾಗೆ ತನ್ನ ಸುತ್ತಲೂ ಸುರುಳಿಯನ್ನು ಹೊಂದಿದೆ.

8.ನೆಪ್ಚೂನ್
ಈ ಗ್ರಹವು ನಮ್ಮ ಸೌರ ಮಂಡಲದ ಎಂಟನೆಯ ಗ್ರಹವಾಗಿದ್ದು ಸೂರ್ಯನಿಂದ 4.5 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಸೂರ್ಯನ ಸುತ್ತ ಸುತ್ತಲು 164.8 ವರ್ಷಗಳನ್ನು ತೆಗೆದುಕೊಳ್ಳುವ ಈ ಗ್ರಹವನ್ನು ಕೇವಲ ಲೆಕ್ಕಾಚಾರದ ಮೂಲಕ ಪತ್ತೆ ಹಚ್ಚಲಾಗಿದೆ. ಗುರು ಮತ್ತು ಶನಿ ಗ್ರಹದ ಹಾಗೆ ಈ ಗ್ರಹದ ವಾತಾವರಣವು ಕೂಡ ಹೈಡ್ರೋಜನ್ ಹಾಗು ಹೀಲಿಯಮ್ ಅನಿಲಗಳಿಂದ ಕೂಡಿದೆ.

ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಂಬಂಧಗಳು

ಬಂದು ಬಳಗ, ತಂದೆ ತಾಯಿ, ಅಣ್ಣ ತಮ್ಮ,ಅಕ್ಕ ತಂಗಿ ಇಂಥಹ ಸಂಬಂಧಗಳು ಎಲ್ಲಿಯವರೆಗೆ?

6:00 ಗೆ ವಾಕಿಂಗ್ ಮಾಡುವವರು ತಪ್ಪದೇ ಈ ಮಾಹಿತಿ ಓದಿ.

6:00 ಗೆ ವಾಕಿಂಗ್ ಮಾಡುವವರು ತಪ್ಪದೇ ಈ ಮಾಹಿತಿ ಓದಿ.