in ,

ಹಣ್ಣುಗಳ ರಾಜ ಮಾವಿನ ಹಣ್ಣು

ಮಾವಿನ ಹಣ್ಣು
ಮಾವಿನ ಹಣ್ಣು

ಇನ್ನೇನು ಶುರುವಾಗುತ್ತೆ ಮಾವಿನಕಾಯಿ ಸೀಸನ್.
ನಮ್ಮ ಕಡೆ ಗಂಜಿ ಜೊತೆಗೆ ಮಾವಿನಹಣ್ಣು ಇದ್ದರೆ ಸಾಕು, ಬರ್ಜರಿ ಊಟ. ಮಾವಿನ ಹಣ್ಣಿನ ಜೊತೆ ಸ್ವಲ್ಪ ಉಪ್ಪಿನಕಾಯಿ ಹಾಕೊಂಡು ಗಂಜಿ ಊಟ ತಿಂದರೆ ಆಹಾ ಎಂಥಾ ರುಚಿ.

ಯುಗಾದಿ ಹಬ್ಬದ ಸಂಭ್ರಮದಲ್ಲಿ ಮನೆ ಬಾಗಿಲಿಗೆ ಹಸಿ ಮಾವಿನ ಎಲೆಗಳಿಂದ ತೋರಣ ಕಟ್ಟಿ ಅತ್ಯಂತ ಖುಷಿಯಿಂದ ಹಬ್ಬದ ಆಚರಣೆ ಮಾಡುತ್ತೇವೆ. ಯುಗಾದಿ ಹಬ್ಬ ಕಳೆದ ನಂತರ ಮಾವಿನ ಹಣ್ಣುಗಳು ಭರಾಟೆ ಎಲ್ಲ ಕಡೆ ಪ್ರಾರಂಭವಾಗುತ್ತದೆ.

ಒಟ್ಟಿನಲ್ಲಿ ಬೇಸಿಗೆಯ ಕಾಲದಲ್ಲಿ ಮಾವಿನಕಾಯಿ ಮತ್ತು ಮಾವಿನ ಹಣ್ಣುಗಳ ಸಮಾಗಮ ಇದ್ದೇ ಇರುತ್ತದೆ. ಈ ಸೃಷ್ಟಿಯಲ್ಲಿ ಭಗವಂತ ಕಾಲಕಾಲಕ್ಕೆ ನಮಗೆ ಸಿಗುವಂತಹ ನಿಸರ್ಗದತ್ತವಾದ ಹಣ್ಣು ಮತ್ತು ತರಕಾರಿಗಳಿಂದ ಒಂದೊಂದು ಬಗೆಯ ಆರೋಗ್ಯದ ಲಾಭಗಳನ್ನು ಇಟ್ಟಿರುತ್ತಾನೆ.ಅದರಂತೆ ನಾವು ಅವುಗಳನ್ನು ಉಪಯೋಗಿಸಿಕೊಂಡು ನಮ್ಮ ಆರೋಗ್ಯದ ಸದೃಢತೆಯನ್ನು ಕಾಯ್ದುಕೊಳ್ಳುವುದು ಒಳ್ಳೆಯದು. ​ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ನಿರ್ವಹಿಸುತ್ತದೆ.

ಮಾವಿನಹಣ್ಣಿನಲ್ಲಿರುವ ನಾರಿನ ಅಂಶ ಜೀರ್ಣ ಕ್ರಿಯೆಗೆ ಸಹಕಾರಿ. ಅಲ್ಲದೇ ಮಲಬದ್ಧತೆ ಇರುವವರು ನಿಯಮಿತ ಸೇವನೆ ಮಾಡಿದ್ದಲ್ಲಿ ಬಹಳ ಪರಿಣಾಮಕಾರಿ.

ಹಣ್ಣುಗಳ ರಾಜ ಮಾವಿನ ಹಣ್ಣು
ಮಾವಿನ ಹಣ್ಣು

ಮಾವಿನ ಹಣ್ಣುಗಳು ಪೊಟಾಸಿಯಂ ಅಂಶದಲ್ಲಿ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳಲ್ಲಿ ಮುಂಚೂಣಿ ಯಲ್ಲಿವೆ. ಇದರಿಂದ ರಕ್ತದ ಒತ್ತಡ ನಿರ್ವಹಣೆಯಾಗುತ್ತದೆ ಮತ್ತು ಮಧುಮೇಹ ಸಮಸ್ಯೆ ಕೂಡ ಸಹಜ ಸ್ಥಿತಿಯಲ್ಲಿ ಉಳಿಯುತ್ತದೆ.

ತಾಜಾ ಆಗಿರುವ ಮಾವಿನಕಾಯಿ ಅಥವಾ ಮಾವಿನ ಹಣ್ಣುಗಳನ್ನು ಈ ಮಾವಿನ ಹಣ್ಣಿನ ಸೀಸನ್ ನಲ್ಲಿ ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ. ಮಾವಿನ ಹಣ್ಣಿನ ವಿವಿಧ ಬಗೆಯ ಖಾದ್ಯಗಳನ್ನು ಸೇವನೆ ಮಾಡಿ.

ಮಾವಿನಲ್ಲಿ ಸಾಮಾನ್ಯವಾಗಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಸಮಸ್ಯೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಫೈಬರ್ ಮತ್ತು ಸಿ ವಿಟಮಿನ್ ಮಾವಿನಲ್ಲಿ ಅಧಿಕ ಪ್ರಮಾಣದಲ್ಲಿದ್ದು, ಇದರ ಸೇವನೆಯಿಂದ ಹೊಟ್ಟೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಹಸಿ ಮಾವಿನಕಾಯಿಗಳು ತಮ್ಮಲ್ಲಿ ಕೆಲವೊಂದು ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ ಎಂದು ಹೇಳುತ್ತಾರೆ. ಇದೇ ಕಾರಣದಿಂದ ಮುಖದ ಮೇಲೆ ಕಂಡುಬರುವ ಮೊಡವೆಗಳಿಗೆ ಇದು ರಾಮಬಾಣ ಎಂದು ಹೇಳುತ್ತಾರೆ.

ಕೆಲವರಿಗೆ ಮಾವಿನ ಹಣ್ಣುಗಳು ಚರ್ಮದ ಅಲರ್ಜಿ ಸಮಸ್ಯೆ ಉಂಟು ಮಾಡಿ ಮುಖದ ಮೇಲೆ ಮೊಡವೆ ಗುಳ್ಳೆಗಳು ಮೂಡಿ ಬರುವಂತೆ ಮಾಡುತ್ತವೆ. ಆದರೆ ಮಾವಿನಕಾಯಿಗಳು ಇದಕ್ಕೆ ಪರಿಹಾರವನ್ನು ಒದಗಿಸುತ್ತವೆ.

ಯಾರಿಗೆ ಮುಖದ ಮೇಲೆ ಅತಿಯಾದ ಮೊಡವೆ ಸಮಸ್ಯೆಗಳು ಮತ್ತು ಮೊಡವೆ ಕಲೆಗಳು ಇರುತ್ತವೆ ಅಂತಹವರು ಹಸಿ ಮಾವಿನಕಾಯಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅದನ್ನು ಮುಖದ ಮೇಲೆ ಪ್ರತಿರಾತ್ರಿ ಮಲಗಿಕೊಳ್ಳುವ ಸಂದರ್ಭದಲ್ಲಿ ಹಚ್ಚಿ. ನಿರಂತರವಾಗಿ ನಾಲ್ಕೈದು ದಿನಗಳ ಕಾಲ ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶಗಳು ನಿಮಗೆ ಕಾಣಲು ಪ್ರಾರಂಭವಾಗುತ್ತವೆ. ಮುಖದಲ್ಲಿ ಕಪ್ಪು ಕಲೆ, ಮೊಡವೆ, ಕೂದಲ ಸಮಸ್ಯೆ ನಿವಾರಣೆಗೆ ಮಾವಿನ ಹಣ್ಣು ಬಳಸಿ.

ಮಾವಿನಲ್ಲಿ ಹಲವು ಪ್ರಯೋಜನಗಳಿದ್ದರೂ ಇದನ್ನು ಹೆಚ್ಚು ಸೇವಿಸುವುದು ಉತ್ತಮವಲ್ಲ. ಇದರಲ್ಲಿ ಸಕ್ಕರೆ ಮತ್ತು ಕ್ಯಾಲೊರಿ ಪ್ರಮಾಣವನ್ನು ಹೆಚ್ಚಾಗಿರುವುದರಿಂದ ಪ್ರತಿದಿನ ನಿರ್ದಿಷ್ಟ ಸಂಖ್ಯೆಯಷ್ಟು ಸೇವಿಸುವುದು ಉತ್ತಮ.ಮಾವಿನ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಸಿ, ವಿಟಮಿನ್ ಕೆ ಮಿನರಲ್ಸ್, ಆಂಟಿ ಓಕ್ಸಿಡೆಂಟ್, ಮೆಗ್ನೇಷಿಯಂ, ಪೊಟ್ಯಾಷಿಯಂ ಇದ್ದು ಇವೆಲ್ಲ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಹಣ್ಣುಗಳ ರಾಜ ಮಾವಿನ ಹಣ್ಣು
ಮಾವಿನ ಹಣ್ಣು

ಡಯಾಬಿಟಿಕ್ ರೆಟಿನೋಪತಿ ಸಮಸ್ಯೆ ಇರುವವರು ಮಾವಿನ ಎಲೆಗಳನ್ನು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಔಷಧಿ ರೂಪದಲ್ಲಿ ಬಳಕೆ ಮಾಡಿಕೊಳ್ಳಬಹುದು. ಏಕೆಂದರೆ ಮಾವಿನ ಎಲೆಗಳಲ್ಲಿ ವಿಟಮಿನ್ ಎ ಅಂಶ ಹೆಚ್ಚಾಗಿ ಕಂಡು ಬರುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಇದು ಹೆಚ್ಚು ಪ್ರಭಾವಶಾಲಿ ಆಗಿರುತ್ತದೆ. ಜೊತೆಗೆ ಹೇಳಬೇಕು ಎಂದರೆ ಮಧುಮೇಹ ಸಮಸ್ಯೆಯನ್ನು ಒಳಗೊಂಡಿರುವ ಜನರಿಗೆ ಮಿತಿಯಲ್ಲಿ ಸೇವನೆ ಮಾಡಿದರೆ ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡದೆ ಇರುವ ಆಹಾರಗಳಲ್ಲಿ ಮಾವು ಕೂಡ ಒಂದು. ಮಧುಮೇಹ, ಕಣ್ಣಿನ ಸಮಸ್ಯೆ, ಹಲ್ಲುಗಳ ಆರೋಗ್ಯಕ್ಕೆ ಸೇಬು ಹಣ್ಣಿನ ಸಿಪ್ಪೆ ಬಹಳ ಒಳ್ಳೆಯದು.

ಮಾವಿನ ಹಣ್ಣಿನಲ್ಲಿ ಫೈಬರ್ ಮತ್ತು ಕ್ಯಾಲೊರಿ ಹೆಚ್ಚಾಗಿರುವುದರಿಂದ ಹಸಿವು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ದೇಹದ ತೂಕವನ್ನು ನಿಯಂತ್ರಿಸಲು ಸಹಕರಿಸುತ್ತದೆ.

​ಕೊಲೆಸ್ಟ್ರಾಲ್ ಅಂಶ ನಿರ್ವಹಣೆಯಾಗುತ್ತದೆ. ಹಸಿ ಮಾವಿನ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ನಾರಿನ ಅಂಶ, ವಿಟಮಿನ್ ಸಿ ಅಂಶ ಮತ್ತು ಪೆಕ್ಟಿನ್ ಅಂಶ ಇರುವ ಕಾರಣ ಕೊಲೆಸ್ಟ್ರಾಲ್ ಮಟ್ಟವನ್ನು ಇದು ತಗ್ಗಿಸುತ್ತದೆ.ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಅಥವಾ ಎಲ್ಡಿಎಲ್ ಅಂಶಗಳು ನಮ್ಮ ಹೃದಯಕ್ಕೆ ಎಂದಿಗೂ ಸಹ ಮಾರಕ ಪ್ರಭಾವವನ್ನು ಉಂಟು ಮಾಡುತ್ತವೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪು ಕಟ್ಟುವಂತೆ ಮಾಡುವುದು ಸಹ ಇದೇ ಅಂಶಗಳು. ಹಾಗಾಗಿ ಮೊದಲು ಇವುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.ಮಧುಮೇಹ, ಕೊಲೆಸ್ಟ್ರಾಲ್ ಇನ್ನೂ ನಾನಾ ಸಮಸ್ಯೆಗಳಿಗೆ ಮೆಂತೆ ನೆನೆಸಿಟ್ಟ ನೀರು ರಾಮಬಾಣ.

​ಹೃದಯದ ಕಾಯಿಲೆಯಿಂದ ರಕ್ಷಣೆ ನೀಡುತ್ತವೆ. ಮಾವಿನ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಮತ್ತು ವಿಟಮಿನ್ ಎ ಅಂಶ ಹೆಚ್ಚಾಗಿ ಕಂಡುಬರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಗುಣವನ್ನು ಇದು ಪಡೆದಿದೆ.
ಇದರ ಜೊತೆಗೆ ಮಧುಮೇಹವನ್ನು ನಿರ್ವಹಣೆ ಮಾಡಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಅಚ್ಚುಕಟ್ಟಾಗಿ ಕಾಯ್ದುಕೊಂಡು ನಮ್ಮ ಹೃದಯದ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸುತ್ತದೆ.ಬೇಸಿಗೆಕಾಲ ಆದರೂ ಸರಿ ಅಥವಾ ಬೇರೆ ಯಾವುದೇ ಸಮಯ ಆದರೂ ಮಾವಿನಕಾಯಿ ಅಥವಾ ಹಣ್ಣು ಸಿಕ್ಕಿದಂತಹ ಸಂದರ್ಭದಲ್ಲಿ ಅವುಗಳ ಸೇವನೆ ಮಾಡಿ ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಝಾನ್ಸಿ ರಾಣಿ ಲಕ್ಷ್ಮೀಬಾಯಿ

ಝಾನ್ಸಿ ರಾಣಿ ಲಕ್ಷ್ಮೀಬಾಯಿ

ದೇಹದ ಉಷ್ಣಾಂಶ ಜಾಸ್ತಿ ಆದಾಗ ಉಪಯೋಗಿಸಬಹುದಾದ ಆಹಾರಕ್ರಮಗಳು