in ,

ಪ್ರಾಣಿ ಹೆಸರು ಇರುವ ಡ್ರ್ಯಾಗನ್ ಹಣ್ಣು

ಡ್ರ್ಯಾಗನ್ ಹಣ್ಣು
ಡ್ರ್ಯಾಗನ್ ಹಣ್ಣು

ಡ್ರ್ಯಾಗನ್ ಹಣ್ಣು ಅಮೇರಿಕಾ ಮೂಲವಾಗಿರುವ ಕಳ್ಳಿ ಜಾತಿಗೆ ಸೇರಿದೆ. ಪಿಟಾಯಾ ಅಥವಾ ಪಿಟಾಹಯಾ ಎಂದು ಕರೆಯಲ್ಪಡುವ ಇದು ಹೈಲೋಸೀರಿಯಸ್ ಹಣ್ಣಿನ ಕುಲಕ್ಕೆ ಸೇರಿದೆ. ಸಾಮಾನ್ಯವಾಗಿ ಕಂಡು ಬರುವ ಡ್ರ್ಯಾಗನ್ ಹಣ್ಣು, ಗುಲಾಬಿ ಬಣ್ಣದ ಸಿಪ್ಪೆಯನ್ನು ಹೊಂದಿದ ಇದು ಬಿಳಿ ತಿರುಳನ್ನು ಹೊಂದಿದೆ.

ಇನ್ನು ಬಿಳಿ ಡ್ರ್ಯಾಗನ್ ಹಣ್ಣು ಬಿಳಿ ಸಿಪ್ಪೆ ಹಾಗೂ ಬಿಳಿ ತಿರುಳನ್ನು ಹೊಂದಿದೆ.

ಹಳದಿ ಡ್ರ್ಯಾಗನ್ ಹಣ್ಣು, ಹಳದಿ ಸಿಪ್ಪೆ ಮತ್ತು ಬಿಳಿ ತಿರುಳನ್ನು ಈ ಹಣ್ಣು ಹೊಂದಿದೆ. ಸಾಮಾನ್ಯವಾಗಿ ಈ ಹಣ್ಣು ೧೫೦ ರಿಂದ ೬೦೦ ಗ್ರಾಂ ತೂಗುತ್ತದೆ. ಅಪರೂಪಕ್ಕೆ ಕೆಲವೊಂದು ೧ ಕಿಲೋ ಗ್ರಾಂ ಕೂಡಾ ತಲುಪಬಹುದು.

ಚೆನ್ನಾಗಿ ಕಳಿತ ಹಣ್ಣಿನಿಂದ ಬೀಜಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿ ಚೆನ್ನಾಗಿ ಒಣಗಿಸಿ ಶೇಖರಿಸಿಟ್ಟ ಬೀಜಗಳನ್ನು ನಾಟಿ ಮಾಡಲು ಉಪಯೋಗಿಸಬಹುದು. ಹಣ್ಣಿನ ತಿರುಳಿನಿಂದ ಬೀಜಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ, ಒಣಗಿದಾಗ ಬೀಜಗಳನ್ನು ಶೇಖರಿಸಿಡಬಹುದು. ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಹಾಕಿದ ಬೀಜ ೧೧ ರಿಂದ ೧೪ ದಿನಗಳಲ್ಲಿ ಮೊಳಕೆಯೊಡೆಯುತ್ತದೆ. ಕ್ಯಾಕ್ಟಸ್ ಜಾತಿಯ ಗಿಡವಾದರೂ ಬಳ್ಳಿಯಂತೆ ಹಬ್ಬುವುದರಿಂದ ಆಧಾರ ಕೊಡುವುದು ಬಹು ಮುಖ್ಯ. ಇದನ್ನು ಒಳಾಂಗಣ ಸಸ್ಯವಾಗಿಯೂ ಬಳಸಬಹುದು. ಆರೋಗ್ಯವಂತ ಕಾಂಡದಿಂದಲೂ ಸಸ್ಯಾಭಿವೃದ್ಧಿ ಮಾಡಬಹುದು.

ಮಧ್ಯಮ ಪ್ರಮಾಣದ ಮಳೆಯಾಗುವ ಶುಷ್ಕ ವಲಯ ಈ ಬೆಳೆಗೆ ಸೂಕ್ತವಾದ ಪ್ರದೇಶ. ಈ ಸಸ್ಯ ೪೦`c ನಷ್ಟು ಉಷ್ಣಾಂಶದಲ್ಲೂ ಬೆಳೆಯಬಲ್ಲುದು.

ಪ್ರಾಣಿ ಹೆಸರು ಇರುವ ಡ್ರ್ಯಾಗನ್ ಹಣ್ಣು
ಡ್ರ್ಯಾಗನ್ ಹಣ್ಣಿನ ಸಸ್ಯ

ಅತಿಯಾದ ಮಳೆ ಈ ಸಸ್ಯಕ್ಕೆ ಮಾರಕ. ಇದು ಹೂ ಉದುರಲು ಮತ್ತು ಹಣ್ಣು ಕೊಳೆಯಲು ಕಾರಣವಾಗಬಹುದು. ಇತರ ಹಣ್ಣುಗಳಂತೆ ಹಕ್ಕಿಗಳು ಕೂಡಾ ಈ ಹಣ್ಣನ್ನು ಹಾಳು ಮಾಡುತ್ತವೆ. ಮಾತ್ರವಲ್ಲದೆ ಕ್ಸಂಥೋಮೊನಾಸ್ ಕಾಮ್ಮೆಸ್ಟ್ರಿಸ್ ಎಂಬ ಬ್ಯಾಕ್ಟಿರಿಯಾ ಕಾಂಡ ಕೊರೆತಕ್ಕೆ ಕಾರಣವಾಗಬಲ್ಲುದು. ಡೋತಿಯೋರೆಲ್ಲಾ ಎಂಬ ಶಿಲೀಂದ್ರ ಹಣ್ಣಿನ ಮೇಲೆ ಕಪ್ಪು ಚುಕ್ಕೆಗೆ ಕಾರಣವಾಗಬಹುದು.

ತಿನ್ನಲು ರುಚಿಕರವಾಗಿರುವ ಈ ಹಣ್ಣಿನ ತಿರುಳು ಸಿಹಿಯಾಗಿರುತ್ತದೆ. ಈ ಹಣ್ಣಿನ ರಸ ಕೂಡಾ ಉಪಯೋಗಿಸಬಹುದು. ಇದರ ರಸವನ್ನು ವೈನ್ ಅಥವಾ ಇತರ ಪಾನೀಯಗಳಲ್ಲೂ ಪರಿಮಳಕ್ಕಾಗಿ ಉಪಯೋಗಿಸುತ್ತಾರೆ. ಇದರ ಹೂ ಕೂಡಾ ತಿನ್ನಲು ಉಪಯುಕ್ತವಾಗಿದೆ ಮಾತ್ರವಲ್ಲದೆ ಚಹಾ ತಯಾರಿಸಲು ಕೂಡಾ ಉಪಯೋಗಿಸಬಹುದು.

ಡ್ರ್ಯಾಗನ್ ಹಣ್ಣಿನ ಉಪಯೋಗಗಳು :

ಈ ಡ್ರ್ಯಾಗನ್ ಹಣ್ಣು ಕಡಿಮೆ ಕ್ಯಾಲೊರಿಯನ್ನು ಹೊಂದಿದೆ. ಇದರಲ್ಲಿ ನಾರಿನಂಶವೂ ಅಧಿಕವಾಗಿದ್ದು, ಕಬ್ಬಿಣ, ಪ್ರೋಟೀನ್, ಕಾರ್ಬೋಹೈಡ್ರೇಟ್, ಮೆಗ್ನೀಸಿಯಮ್, ವಿಟಮಿನ್ ಸಿ, ವಿಟಮಿನ್ ಇ, ಕ್ಯಾರೊಟಿನಾಯ್ಡ್​ಗಳು, ಪಾಲಿಫಿನಾಲ್​ಗಳಂತಹ ಅಮೂಲ್ಯ ಪೋಷಕಾಂಶಗಳು ಲಭ್ಯವಿದೆ. ಡ್ರ್ಯಾಗನ್ ಹಣ್ಣಿನ ಬೆಲೆ ಸ್ವಲ್ಪ ಹೆಚ್ಚಾಗಿದ್ದರೂ, ಇದು ದೇಹಕ್ಕೆ ಶಕ್ತಿ ಹೆಚ್ಚಿಸುವ ಪೋಷಕಾಂಶಗಳನ್ನು ಒದಗಿಸುತ್ತದೆ.

ಬೀಟಾ-ಕ್ಯಾರೋಟಿನ್ ಮತ್ತು ಲೈಕೋಪೀನ್ ಸಸ್ಯ ವರ್ಣದ್ರವ್ಯಗಳಾಗಿವೆ, ಇವೇ ಡ್ರ್ಯಾಗನ್ ಹಣ್ಣಿಗೆ ಅದರ ಅದ್ಭುತ ಹೊರ ಬಣ್ಣವನ್ನು ನೀಡುತ್ತದೆ. ಕ್ಯಾರೊಟಿನಾಯ್ಡುಗಳಲ್ಲಿ ಸಮೃದ್ಧವಾಗಿರುವ ಆಹಾರವು ಕ್ಯಾನ್ಸರ್ ಮತ್ತು ಹೃದ್ರೋಗದ ಕಡಿಮೆ ಅಪಾಯಕ್ಕೆ ಸಂಬಂಧಿಸಿದೆ.

ಡ್ರ್ಯಾಗನ್ ಹಣ್ಣು ತಿನ್ನುವುದು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಡ್ರ್ಯಾಗನ್ ಹಣ್ಣಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಉತ್ಕರ್ಷಣ ನಿರೋಧಕಗಳು, ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿದೆ.

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಡ್ರ್ಯಾಗನ್ ಹಣ್ಣುಗಳು ಅತ್ಯುತ್ತಮವಾಗಿದೆ. ಏಕೆಂದರೆ ಇದು ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುವುದಿಲ್ಲ. ಈ ಹಣ್ಣಿನಲ್ಲಿನ ಬೀಜಗಳನ್ನು ಕೂಡ ಸೇವಿಸುವುದು ಉತ್ತಮ.

ಪ್ರಾಣಿ ಹೆಸರು ಇರುವ ಡ್ರ್ಯಾಗನ್ ಹಣ್ಣು
ಡ್ರ್ಯಾಗನ್ ಹಣ್ಣು

ಕರುಳಿನಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಎಲ್ಲಾ ಕರಗಳು ನಾರುಗಳಂತೆ, ನಿಮ್ಮ ಕರುಳು ಅವುಗಳನ್ನು ಒಡೆಯಲು ಸಾಧ್ಯವಿಲ್ಲ. ಆದರೂ, ನಿಮ್ಮ ಕರುಳಿನಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ಅವುಗಳನ್ನು ಜೀರ್ಣಿಸಿಕೊಂಡು ತಮ್ಮ ಬೆಳವಣಿಗೆಗೆ ಇಂಧನವಾಗಿ ಬಳಸಿಕೊಳ್ಳಬಹುದು.

ಡ್ರ್ಯಾಗನ್‌ನ ಹೆಚ್ಚಿನ ಫೈಬರ್ ಅಂಶವು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ತುಂಬಾ ಉಪಯುಕ್ತವಾಗಿದ್ದು, ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಡ್ರ್ಯಾಗನ್ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ.

ಡ್ರ್ಯಾಗನ್ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾರೊಟಿನಾಯ್ಡ್​ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಬಿಳಿ ರಕ್ತ ಕಣಗಳನ್ನು ರಕ್ಷಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸುತ್ತದೆ.

ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ಕಬ್ಬಿಣದ ಕೊರತೆಯನ್ನು ನಿವಾರಿಸಬಹುದು. ಇತರ ಎಲ್ಲಾ ಹಣ್ಣುಗಳಿಗೆ ಹೋಲಿಸಿದರೆ ಡ್ರ್ಯಾಗನ್ ಹಣ್ಣಿನಲ್ಲಿ ಮೆಗ್ನೀಸಿಯಮ್ ಅಧಿಕವಾಗಿರುತ್ತದೆ.

ಡ್ರ್ಯಾಗನ್ ಹಣ್ಣು ಹೆಚ್ಚು ದುಬಾರಿಯಾಗಿದೆ
ಈ ಹಣ್ಣುಗಳು ಪ್ರಸ್ತುತ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಪ್ರತಿ ಹಣ್ಣಿನ ಬೆಲೆ (ಸುಮಾರು 400 ಗ್ರಾಂ ತೂಕಕ್ಕೆ) 70 ರಿಂದ100 ರೂಪಾಯಿ ಇರುತ್ತದೆ. ಈ ಹಣ್ಣು ಸ್ವಲ್ಪ ಹುಳಿ ಮತ್ತು ಸ್ವಲ್ಪ ಸಿಹಿಯಾದ ರುಚಿಯನ್ನು ನೀಡುತ್ತದೆ.

ಡ್ರಾಗನ್ ಫ್ರೂಟ್‌ನಲ್ಲಿ ಫೈಬರ್ ಅಂಶ ಹೆಚ್ಚಿದ್ದು, ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆಯನ್ನು ನಿವಾರಿಸಬಲ್ಲದು.

ವಯಸ್ಸಾಗುತ್ತಿದ್ದಂತೆ ಮುಖದ ಚರ್ಮ ಸುಕ್ಕು ಸಾಮಾನ್ಯ. ಆದರೆ ಅದನ್ನು ತಪ್ಪಿಸುವ ಶಕ್ತಿ ಡ್ರಾಗನ್ ಫ್ರೂಟ್‌ಗಿದೆ.
ಫೇಸ್ ಮಾಸ್ಕ್ ಹೆಚ್ಚಾಗಿ ಮಾರಾಟವಾಗುತ್ತಿದೆ. ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿಯೂ ಈ ಫ್ರೂಟ್ ಮುಖ್ಯ ಪಾತ್ರವಹಿಸುತ್ತದೆ.

ಡ್ರ್ಯಾಗನ್ ಹಣ್ಣನ್ನು ವಿವಿಧ ರೀತಿಯಲ್ಲಿ ತಿನ್ನಬಹುದು. ಇದನ್ನು ಅನಾನಸ್ ಮತ್ತು ಮಾವಿನ ಹಣ್ಣಿನ ಜೊತೆ ಸಲಾಡ್ ರೂಪದಲ್ಲಿ ತಿನ್ನಬಹುದು. ಐಸ್ ಕ್ರೀಂ ತಯಾರಿಸಿಯೂ ತಿನ್ನಬಹುದು. ಜ್ಯೂಸ್ ರೂಪದಲ್ಲಿ ಸೇವಿಸಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಾಮೆ ಅಕ್ಕಿ

ಸಿರಿಧಾನ್ಯ ಸಾಮೆ ಅಕ್ಕಿ

ನಮ್ಮ ರಾಷ್ಟ್ರ ಪಕ್ಷಿ

ನಮ್ಮ ರಾಷ್ಟ್ರ ಪಕ್ಷಿ ನವಿಲಿನ ಬಗ್ಗೆ ಮಾಹಿತಿ ಹೀಗಿದೆ