in ,

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು

ಡ್ರೈ ಫ್ರೂಟ್ಸ್
ಡ್ರೈ ಫ್ರೂಟ್ಸ್

ಅಧಿಕ ಶಕ್ತಿ ಕೊಡುವ ಆಹಾರಗಳಲ್ಲಿ ಡ್ರೈ ಫ್ರೂಟ್ಸ್ ಗಳು ಸೇರಿವೆ. ಬಾದಾಮಿ, ದ್ರಾಕ್ಷಿ, ಖರ್ಜೂರ, ಅಂಜೂರ, ಪಿಸ್ತ…ಇನ್ನೂ ಹಲವಾರು ಇಲ್ಲಿ ಕೆಲವೊಂದು ಡ್ರೈ ಫ್ರೂಟ್ಸ್ ಬಗ್ಗೆ ತಿಳಿಯೋಣ.

ಬಾದಾಮಿ

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು
ಬಾದಾಮಿ

ದಿನಾಲೂ ಬಾದಾಮಿ ತಿನ್ನುವುದರಿಂದ ತುಂಬಾ ಪ್ರಯೋಜನಗಳಿವೆ. ಬಾದಾಮಿಗಳಲ್ಲಿ ಪೋಷಕಾಂಶಗಳ ಭಂಡಾರವೇ ಇದೆ. ಹೃದಯದ ಆರೋಗ್ಯಕ್ಕೆ ಇವು ಪೂರಕವಾಗಿವೆ. ಮಧುಮೇಹಿಗಳಿಗೂ ಇದು ಒಳ್ಳೆಯದು. ಆದರೆ ಇವುಗಳನ್ನು ಒಣದಾಗಿ ಸೇವಿಸುವುದರಿಂದ ಇದರ ಪೋಷಕಾಂಶಗಳ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಇವುಗಳನ್ನು ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆಹಾರವಾಗಿ ಸೇವಿಸುವುದರಿಂದ ಹೆಚ್ಚು ಪ್ರಯೋಜನವಿದೆ.
ರಾತ್ರಿ ನೆನೆಸಿಟ್ಟ್ ಬಾದಾಮಿಯನ್ನು ತಿನ್ನುವುದು ಒಂದು ಸಂಪ್ರದಾಯದಂತೆ ಬಹುತೇಕ ಎಲ್ಲಾ ಕುಟುಂಬಗಳಲ್ಲಿಯೂ ನಡೆಸಿಕೊಂಡು ಬರಲಾಗುತ್ತಿದೆ. ನಮ್ಮ ಅಮ್ಮಂದಿರು ಮತ್ತು ಅಜ್ಜಿಯಂದಿರು ಈ ವಿಧಾನವನ್ನು ಹಿಂದಿನವರಿಂದ ಕಲಿತು ಬಂದು ತಮ್ಮ ಕುಟುಂಬದ ಕಿರಿಯರಿಗೂ ತಿನ್ನಿಸುವ ಮೂಲಕ ಈ ಸಂಪ್ರದಾಯವನ್ನು ಜೀವಂತವಾಗಿ ಇರಿಸಿದ್ದಾರೆ. ನೆನೆಸಿಟ್ಟ ಬಾದಾಮಿಯಲ್ಲಿ ಇರುವಂತಹ ಪ್ರೀ ಬಯಾಟಿಕ್ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಾಯಕಾರಿ ಆಗಿರುತ್ತದೆ. ಪ್ರೀ ಬಯಾಟಿಕ್ ಅಂಶವು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯವನ್ನು ಉತ್ಪಾದಿಸುವ ಮೂಲಕ ಹೊಟ್ಟೆಯ ಮೇಲೆ ಪರಿಣಾಮ ಬೀರುವಂತಹ ರೋಗಗಳನ್ನು ತಡೆಗಟ್ಟುತ್ತದೆ. ಇನ್ನು ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಅದು ಸಂಪೂರ್ಣ ಜೀರ್ಣಕಿಯೆಗೆ ಸಹಾಯ ಮಾಡಿ ಆಹಾರವು ಸರಾಗವಾಗಿ ಹಾಗೂ ವೇಗವಾಗಿ ಕರಗಲು ಸಹಾಯ ಮಾಡುತ್ತದೆ. ಬಾದಾಮಿಯನ್ನು ನೀರಿನಲ್ಲಿ ನೆನೆಸಲು ಹಾಕಿದ್ರೆ ಸಿಪ್ಪಯು ಕಿತ್ತು ಹೋಗುವುದು ಇದರಿಂದ ಅದು ಬೇಗನೆ ಕರಗಿ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ. ತಾಯಿ ಆಗುವವರು ಇದ್ದರೆ ಪ್ರತೀ ದಿನವೂ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದು ಒಳ್ಳೆಯದು. ಇದು ತಾಯಿ ಹಾಗೂ ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು. ನೆನೆಸಿಟ್ಟ ಬಾದಾಮಿಯು ತಾಯಿಯ ಹಾಗೂ ಗರ್ಭದಲ್ಲಿ ಇರುವ ಮಗುವಿಗೆ ಸಾಕಷ್ಟು ಪೋಷಕಾಂಶಗಳನ್ನು ಹಾಗೂ ಶಕ್ತಿಯನ್ನು ಒದಗಿಸುತ್ತವೆ.

ಬಾದಾಮಿಯಲ್ಲಿ ಹಲವಾರು ಅಗತ್ಯ ಪೋಷಕಾಂಶಗಳಿವೆ. ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳಿವೆ.
ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ಕೊಬ್ಬುಗಳು ಮತ್ತು ಕರಗುವ ನಾರು ಇದೆ. ಕೆಲ ಬಾದಾಮಿಗಳ ಸೇವನೆಯಿಂದ ಅನಗತ್ಯ ಆಹಾರ ಸೇವನೆಯ ಬಯಕೆ ಬರುವುದಿಲ್ಲ. ಅಗತ್ಯಕ್ಕೆ ತಕ್ಕಷ್ಟು ಆರೋಗ್ಯಕರ ಆಹಾರ ಸೇವಿಸಿದರೆ ಆರೋಗ್ಯ ತನ್ನಿಂತಾನೇ ಉತ್ತಮಗೊಳ್ಳುತ್ತದೆ. ತನ್ಮೂಲಕ ತೂಕ ಇಳಿಕೆಗೆ ಪರೋಕ್ಷವಾಗಿ ನೆರವಾಗುತ್ತದೆ. ವ್ಯತಿರಿಕ್ತವಾಗಿ ತೂಕ ಹೆಚ್ಚಿಸಿಕೊಳ್ಳಬಯಸುವ ವ್ಯಕ್ತಿಗಳು ಬಾದಾಮಿ ಸೇವನೆಯ ಪ್ರಮಾಣವನ್ನು ಹೆಚ್ಚಿಸಬಹುದು. ಅಧ್ಯಯನದ ಪ್ರಕಾರ ಆರು ತಿಂಗಳ ಕಾಲ ಬಾದಾಮಿ ತಿನ್ನುವ ಮಹಿಳೆಯರ ತೂಕ ಇಳಿಕೆ ಮತ್ತು ಅವರ ಬಿಎಂಐ ನಿಯಂತ್ರಣದ ಕುರಿತು ಆಶ್ಚರ್ಯಕರ ಫಲಿತಾಂಶಗಳು ಲಭಿಸಿವೆ.

ದೇಹಕ್ಕೆ ಪ್ರಮುಖವಾಗಿ ಅಗತ್ಯವಾಗಿರುವ ಪೋಷಕಾಂಶವಾದ ‘ಮೆಗ್ನೀಸಿಯಮ್’ ಅನ್ನು ಪೂರೈಸುತ್ತವೆ, ಇದು 300 ಕ್ಕೂ ಹೆಚ್ಚು ದೈಹಿಕ ಕಾರ್ಯಗಳಿಗೆ ಕಾರಣವಾಗಿದೆ. ಇಂದು, ಪ್ರಪಂಚದಾದ್ಯಂತದ ಹೆಚ್ಚಿನ ಜನರು ಮೆಗ್ನೀಸಿಯಮ್ ಕೊರತೆ ಹೊಂದಿದ್ದಾರೆ ಅಥವಾ ಕನಿಷ್ಠ ಸೇವನೆಯನ್ನು ಪಡೆಯುತ್ತಿಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಆದರೆ ಪ್ರತಿದಿನ ಕೆಲವು ಬಾದಾಮಿಗಳನ್ನು ನೆನೆಸಿಟ್ಟು ತಿನ್ನಲು ಪ್ರಾರಂಭಿಸಿದರೆ ಈ ಕೊರತೆಯನ್ನು ನೀಗಿಸಬಹುದು.

ಬಾದಾಮಿಯಲ್ಲಿ ಎಲ್-ಕಾರ್ನಿಟೈನ್ ಮತ್ತು ಇತರ ಪೋಷಕಾಂಶಗಳಿದ್ದು ಇದು ಹೊಸ ಮೆದುಳಿನ ಕೋಶಗಳ ಉತ್ಪಾದನೆ ಮತ್ತು ಬೆಳವಣಿಗೆಗೆ ನೆರವಾಗುತ್ತದೆ. ಅರಿವಿನ ಸಾಮರ್ಥ್ಯಗಳಿಗೆ ಸಂಬಂಧಿಸಿರುವ ಮೆದುಳಿನಲ್ಲಿರುವ ಫೆನಿಲಾಲನೈನ್ ಎಂಬ ರಾಸಾಯನಿಕವು ಸ್ಮರಣಶಕ್ತಿಯನ್ನು ಉತ್ತಮಗೊಳಿಸುತ್ತದೆ ಎಂದು ಸಾಬೀತಾಗಿದೆ. ಬಾದಾಮಿಯಲ್ಲಿರುವ ವಿಟಮಿನ್ ಬಿ6 ಮೆದುಳಿನ ಜೀವಕೋಶಗಳಿಗೆ ಪ್ರೋಟೀನ್‌ಗಳ ಜೈವಿಕ ಲಭ್ಯತೆಯನ್ನು ಹೆಚ್ಚಿಸುತ್ತದೆ.

ಒಣ ದ್ರಾಕ್ಷಿ

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು
ಒಣ ದ್ರಾಕ್ಷಿ

ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶ, ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ನಾರಿನಾಂಶ ಆಗಾಧ ಪ್ರಮಾಣದಲ್ಲಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ. ಇನ್ನು ಒಣದ್ರಾಕ್ಷಿಯಲ್ಲಿರುವ ಹೆಚ್ಚಿನ ಮಟ್ಟದ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಸಿಗಬೇಕೆಂದರೆ, ಪ್ರತಿದಿನ ಮಲಗುವ ಮುನ್ನ ನಾಲ್ಕರಿಂದ ಐದು ಒಣದ್ರಾಕ್ಷಿಯನ್ನು ರಾತ್ರಿ ಅರ್ಧ ಕಪ್ ನೀರಿನಲ್ಲಿ ನೆನಸಿಟ್ಟು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಒಣ ದ್ರಾಕ್ಷಿಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ ಮತ್ತು ಇದು ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುವುದು. ನೀರಿನಲ್ಲಿ ನೆನೆಸಿದ ವೇಳೆ ಇದು ಅದ್ಭುತವಾಗಿ ಕೆಲಸ ಮಾಡುವುದು. ಇದರಿಂದ ಮಲಬದ್ಧತೆ ಇದ್ದರೆ ಆಗ ನೆನೆಸಿದ ದ್ರಾಕ್ಷಿ ಸೇವಿಸಿ ಮತ್ತು ಕರುಳಿನ ಕ್ರಿಯೆಯನ್ನು ಇದು ಸರಾಗವಾಗಿಸುವುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಪ್ರತಿದಿನ ಒಂದು ಲೋಟ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಬಹುದು.

ಒಣದ್ರಾಕ್ಷಿಯಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು ವಿಶೇಷವಾಗಿ ಬಾಯಿ, ಒಸಡು ಹಲ್ಲುಗಳಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ. ತನ್ಮೂಲಕ ಇದರಿಂದ ಎದುರಾಗುವ ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ.

ಖರ್ಜೂರ

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು
ಖರ್ಜೂರ

ಖರ್ಜೂರ ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಮ್ಯಾಂಗನೀಸ್, ಸೆಲೆನಿಯಮ್, ತಾಮ್ರ, ಮೆಗ್ನೀಸಿಯಮ್ ಮುಂತಾದ ಪದಾರ್ಥಗಳು ಕಂಡುಬರುತ್ತವೆ. ಮೂಳೆಗಳನ್ನು ಬಲಪಡಿಸಲು ಇದು ಸಹಾಯಕವೆಂದು ಪರಿಗಣಿಸಲಾಗುತ್ತದೆ.

ಅಜೀರ್ಣ ಅಥವಾ ಹೊಟ್ಟೆಯ ಸಮಸ್ಯೆಗಳಿದ್ದರೆ, ನೀವು ಖರ್ಜೂರವನ್ನು ತಿನ್ನಬಹುದು. ಇದರಲ್ಲಿನ ಫೈಬರ್ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಖರ್ಜೂರದಲ್ಲಿರುವ ವಿಟಮಿನ್ ಸಿ, ವಿಟಮಿನ್ ಡಿ ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು, ಚರ್ಮದ ಆರೋಗ್ಯವನ್ನು ಸುಧಾರಿಸಲು ಇದು ಸಹಾಯಕ ಎಂದು ಪರಿಗಣಿಸಲಾಗಿದೆ. ಇದಲ್ಲಿರುವ ಆಂಟಿ-ಏಜಿಂಗ್ ಗುಣಗಳು ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಅಗತ್ಯವಾದ ಅಂಶಗಳಲ್ಲಿ ಪ್ರೋಟೀನ್ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಸ್ನಾಯುಗಳನ್ನು ಬಲಪಡಿಸಲು ಪ್ರೋಟೀನ್ ಕೆಲಸ ಮಾಡುತ್ತದೆ. ಖರ್ಜೂರಲ್ಲಿರುವ ಪೌಷ್ಠಿಕಾಂಶ ಮತ್ತು ಪ್ರೋಟೀನ್ ಗುಣಲಕ್ಷಣಗಳು ಪ್ರೋಟೀನ್ ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಅಂಜೂರ

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು
ಅಂಜೂರ

ನಮ್ಮ ಕರುಳಿನ ಚಲನೆ ಉಂಟಾಗಿ ಹೊಟ್ಟೆಯ ಪದರದಲ್ಲಿ ಆಹಾರವನ್ನು ಜೀರ್ಣ ಮಾಡಲು ಅನುಕೂಲವಾಗುವ ಹಾಗೆ ಸಿಂಬಳವನ್ನು ಉತ್ಪತ್ತಿಮಾಡಿ ಮಲ ವಿಸರ್ಜನೆಯ ಸಂದರ್ಭದಲ್ಲಿ ಅಗತ್ಯವಾದ ನೀರಿನ ಅಂಶವನ್ನು ಒದಗಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಇಲ್ಲವಾಗುತ್ತದೆ.

ಒಣಗಿದ ಅಂಜೂರ ಹಣ್ಣುಗಳು ಮನುಷ್ಯನ ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ಏಕೆಂದರೆ ಇವುಗಳಲ್ಲಿ ಒಮೆಗಾ 3 ಮತ್ತು ಒಮೆಗಾ 6 ಅಂಶಗಳ ಜೊತೆಗೆ ಹೃದಯದ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುವ ಫಿನಾಲ್ ಸಂಯುಕ್ತಗಳು ಕೂಡ ಇರುತ್ತವೆ.

ಕರುಳಿನ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಬಹುದು. ಆದರೆ ಅಂಜೂರದ ಹಣ್ಣಿನ ಸೇವನೆಯಿಂದ ನಮ್ಮ ಕರುಳಿನ ಭಾಗ ಸ್ವಚ್ಛವಾಗುತ್ತದೆ.

ಪಿಸ್ತಾ

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು
ಅಂಜೂರ

ದಿನಕ್ಕೆ ಒಂದು ಅಥವಾ ಎರಡು ಬಾರಿ ಪಿಸ್ತಾವನ್ನು ತಿನ್ನುವವರು ಹೆಚ್ಚಿನ ಪ್ರಮಾಣದ ಲುಟೀನ್ ಮತ್ತು ವೈ ಟೊಕೊಫೆರಾಲ್ ಅನ್ನು ಹೊಂದಿದ್ದರು. ಬೀಜಗಳ ಪೈಕಿ ಪಿಸ್ತಾವು ಲುಟೀನ್ ಮತ್ತು ವೈ ಟೊಕೊಫೆರಾಲ್ ಅಂಶವನ್ನು ಹೆಚ್ಚು ಹೊಂದಿದ್ದು, ಇವೆರಡೂ ಕಣ್ಣಿನ ಆರೋಗ್ಯಕ್ಕೆ ಬಹಳ ಮುಖ್ಯವಾದ ಉತ್ಕರ್ಷಣ ನಿರೋಧಕಗಳಾಗಿವೆ.

ಪಿಸ್ತಾಗಳಲ್ಲಿ ಫೈಬರ್ ಅಧಿಕವಾಗಿದೆ, ಇದು ನಿಮ್ಮ ಕರುಳಿನ ಬ್ಯಾಕ್ಟೀರಿಯಾಕ್ಕೆ ಒಳ್ಳೆಯದು. ಪಿಸ್ತಾ ತಿನ್ನುವುದರಿಂದ ಬ್ಯುಟೈರೇಟ್‌ನಂತಹ ಪ್ರಯೋಜನಕಾರಿ ಕಿರು-ಸರಪಳಿ ಕೊಬ್ಬಿನಾಮ್ಲಗಳನ್ನು ಉತ್ಪಾದಿಸುವ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಒಂದು ಸರ್ವಿಂಗ್’ನಲ್ಲಿ 3 ಗ್ರಾಂ ಪಿಸ್ತಾ ಇರುತ್ತದೆ.

ನಾರಿನಂಶ ಮತ್ತು ಪ್ರೋಟಿನ್ ಗಳ ಸಮೃದ್ಧ ಮೂಲವಾಗಿದೆ. ಇದರ ಸೇವನೆಯಿಂದಾಗಿ ದೀರ್ಘ ಸಮಯದವರೆಗೆ ಹಸಿವಾಗುವುದನ್ನು ತಡೆಗಟ್ಟುತ್ತದೆ. ಇದರಿಂದಾಗಿ ನಿಮ್ಮ ಅತಿಯಾದ ತಿನ್ನುವಿಕೆಯು ದೂರವಾಗುತ್ತದೆ. ಇದರಿಂದಾಗಿ ನೀವು ಆರೋಗ್ಯಕರವಾಗಿ ತೂಕವನ್ನು ಕಳೆದುಕೊಳ್ಳಬಹುದಾಗಿದೆ. ಹೆಚ್ಚಿನ ಪ್ರಮಾಣದಲ್ಲಿರುವ ಪ್ರೋಟಿನನ್ನು ಜೀರ್ಣಿಸಲು ಹೆಚ್ಚಿನ ಕೊಬ್ಬು ಉಪಯೋಗಿಸಲ್ಪಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

38 Comments

ಗಾಂಧಾರಿ

ಮಹಾಶಿವನಿಂದ ನೂರು ಮಕ್ಕಳ ವರ ಪಡೆದ ಗಾಂಧಾರಿ

ಕೆಳದಿಯ ಚೆನ್ನಮ್ಮ

ವೀರ ಮಹಿಳೆ ಹೆಣ್ಣು ಹುಲಿ ಕೆಳದಿಯ ಚೆನ್ನಮ್ಮ