ರಾಶ್ ಬಿಹಾರಿ ಬೋಸ್ ಒಬ್ಬ ಪ್ರಖ್ಯಾತ ವಕೀಲ ಮತ್ತು ಶಿಕ್ಷಣತಜ್ಞ. ರಾಶ್ ಬಿಹಾರಿ ಬೋಸ್ ಪ್ರಸಿದ್ಧ ಕ್ರಾಂತಿಕಾರಿ ಮಾತ್ರವಲ್ಲ, ಮೊದಲ ಆಜಾದ್ ಹಿಂದ್ ಫೌಜ್‌ನ ಸೃಷ್ಟಿಕರ್ತರೂ ಆಗಿದ್ದರು. ಸ್ವಾತಂತ್ರ್ಯವನ್ನು ಸಾಧಿಸಲು ಮತ್ತು ಸ್ವತಂತ್ರ ಸರ್ಕಾರವನ್ನು ಸಂಘಟಿಸಲು ಪ್ರಯತ್ನಿಸಿದ ದೇಶದ ಕ್ರಾಂತಿಕಾರಿಗಳಲ್ಲಿ, ಶ್ರೀ ರಾಶ್ ಬಿಹಾರಿ ಬೋಸ್ ಅವರ ಹೆಸರು ಪ್ರಮುಖವಾಗಿದೆ.
ಬೋಸರು ಮೇ ೨೫, ೧೮೮೬ರಂದು ಪಶ್ಚಿಮ ಬಂಗಾಳದ ಬುರ್ದ್ವಾನಿನ ಸುಬಲ್ದಹಾ ಹಳ್ಳಿಯಲ್ಲಿ ಜನಿಸಿದರು. ಬೋಸರು ತಮ್ಮ ಸಣ್ಣ ವಯಸ್ಸಿನಲ್ಲೇ ರೆವಲ್ಯೂಷನರಿ ಪಾರ್ಟಿಯನ್ನು ಸೇರಿದರು.
ಭಾರತದ ಸ್ವಾತಂತ್ರ್ಯ ಕ್ರಾಂತಿಕಾರಿ. ಬ್ರಿಟಿಷರ ವಿರುದ್ಧ ಸಮರ ಸಾರಿ ಮೋಸ್ಟ್ ವಾಟೆಂಡ್ ಲಿಸ್ಟ್ ಸೇರಿದ ಅವರು, ತಲೆ ಮರೆಸಿಕೊಂಡು ಜಪಾನಿನ ಟೋಕಿಯೋ ಸೇರುತ್ತಾರೆ. ಹೀಗೆ ಟೋಕಿಯೋ ನಿವಾಸಿಯಾದ ಆ ಕ್ರಾಂತಿಕಾರಿ ಪರಿಚಯಿಸಿದ ಭಾರತೀಯ ಖಾದ್ಯ ಇಂಡೋ ಕರಿ ಇಂದಿಗೂ ಜಪಾನಿನಲ್ಲಿ ಮೆನುವಿನಲ್ಲಿ ಸ್ಥಾನ ಪಡೆದಿದೆ.
ರಾಶ್ ಬಿಹಾರಿ ಬೋಸ್ ಅವರು ಕಾಂಗ್ರೆಸ್ನ ಮಧ್ಯಮ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. ರಾಶ್ ಬಿಹಾರಿ ಬೋಸ್ ಅವರು ಉಗ್ರಗಾಮಿಗಳನ್ನು ಮಾರಣಾಂತಿಕ, ಜನರನ್ನು ಪ್ರಚೋದಿಸುವ ಮತ್ತು ಪ್ರತಿಕ್ರಿಯಿಸದ ಚಳವಳಿಗಾರರು ಎಂದು ಕರೆದರು. ಬ್ರಿಟಿಷರ ವಿರುದ್ಧ ವಾತಾವರಣ ನಿರ್ಮಿಸಲು ಮತ್ತು ಭಾರತದ ವಿಮೋಚನೆಗೆ ಮಾರ್ಗವನ್ನು ಕಂಡುಕೊಳ್ಳಲು ವಿದೇಶಿ ರಾಷ್ಟ್ರಗಳ ಸಹಾಯದಿಂದ ದೇಶದಿಂದ ಹೊರಹೋಗುವ ಜನರಲ್ಲಿ ಒಬ್ಬರು. 1937 ರಲ್ಲಿ, ಅವರು ‘ಇಂಡಿಯನ್ ಫ್ರೀಡಂ ಅಸೋಸಿಯೇಷನ್’ ಅನ್ನು ಸ್ಥಾಪಿಸಿದರು ಮತ್ತು ಎಲ್ಲಾ ಭಾರತೀಯರಿಗೆ ಕರೆ ನೀಡಿದರು ಮತ್ತು ಭಾರತವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದರು.

ರಾಸ್ ಬಿಹಾರಿ ಬೋಸರು ತೊಷಿಕೋ ಎಂಬ ಜಪಾನಿನ ಮಹಿಳೆಯನ್ನು ವರಿಸಿದ್ದರು. ಬ್ರಿಟಿಷ್ ದೌರ್ಜನ್ಯ ತಡೆಯಲಾಗದ ಬೋಸ್ ದಂಪತಿ ಆಗಾಗ ತಮ್ಮ ವಾಸಸ್ಥಳವನ್ನು ಬದಲಾಯಿಸಬೇಕಾಗಿ ಬಂತು. ಈ ಮಧ್ಯೆ ತೋಶಿಕೊ ಮತ್ತು ರಾಶ್ ಬಿಹಾರಿ ದಂಪತಿ ಇಬ್ಬರು ಮಕ್ಕಳಿಗೆ ಪೋಷಕರಾಗುತ್ತಾರೆ. ಎರಡನೇ ಮಗುವಿಗೆ ಜನ್ಮ ನೀಡಿದ ಮೂರು ವರ್ಷಗಳ ಬಳಿಕ ಬೋಸ್ ಪತ್ನಿ ತೋಶಿಕೊ ತನ್ನ 28 ನೇ ವಯಸ್ಸಿನಲ್ಲಿ ನ್ಯುಮೋನಿಯಾದಿಂದ ಮರಣ ಹೊಂದುತ್ತಾರೆ.
ರಾಸ್ ಬಿಹಾರಿ ಬೋಸರ ಕ್ರಾಂತಿಕಾರ ಸಂಘಟನೆಯಲ್ಲಿ ಸುಭಾಷ್ ಚಂದ್ರ ಬೋಸರಲ್ಲದೆ ಅರವಿಂದ್ ಘೋಷ್, ಖುದಿರಾಮ್ ಬೋಸ್ ಬಾಘಾ ಜತಿನ್ ಮುಂತಾದ ಪ್ರಮುಖರಿದ್ದರು.
ಲೇಖಕ, ಪತ್ರಕರ್ತರೂ ಆಗಿದ್ದ ರಾಸ್ ಬಿಹಾರಿ ಬೋಸರಿಗೆ ಜಪಾನ್ ಸರ್ಕಾರ “ಆರ್ಡರ್ ಆಫ್ ದಿ ರೈಸಿಂಗ್ ಸನ್” ಎಂಬ ಗೌರವ ನೀಡಿತ್ತು.
ತಮ್ಮ ಬಾಲ್ಯದ ಜೀವನದಿಂದ ಪ್ರಾರಂಭವಾಗುವ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಬಹಳ ಆಸಕ್ತಿ ಹೊಂದಿದ್ದರು ಮತ್ತು ಭಾರತೀಯ ರಾಷ್ಟ್ರೀಯ ಸೇನೆಯನ್ನು ಹೊರತುಪಡಿಸಿ, ಜುಗಂತರ್ ಅನ್ನು ಸಹ ಬಿಹಾರಿ ಬೋಸ್ ಸ್ಥಾಪಿಸಿದರು. ಅವರು 28-30 ಮಾರ್ಚ್ 1942 ರಂದು ಜಪಾನಿನ ಅಧಿಕಾರಿಗಳೊಂದಿಗೆ ಟೋಕಿಯೊದೊಂದಿಗೆ ಸಮ್ಮೇಳನವನ್ನು ಕರೆದರು, ಅದು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಅನ್ನು ಸ್ಥಾಪಿಸಲು ನಿರ್ಧರಿಸಿತು.
ತಾಯಿ ಮರಣ ಹೊಂದಿದ ಬಳಿಕ ಬೋಸ್ ತನ್ನ ಚಿಕ್ಕಮ್ಮ- ಚಿಕ್ಕಪ್ಪನ ಸುಪರ್ಧಿಯಲ್ಲಿ ಬೆಳೆಯುತ್ತಾರೆ. ಹೀಗೆ ಬೆಳೆದು ದೊಡ್ಡವರಾದ ಯುವ ರಾಶ್ ಬಿಹಾರಿ, ಚಂದರ್ನಗೋರ್ ಎಂಬಲ್ಲಿ ಕಾಲೇಜು ಶಿಕ್ಷಣ ಪಡೆಯತ್ತಾರೆ. ಬಳಿಕ ಡೆಹ್ರಾಡೂನ್ಗೆ ತೆರಳಿ ಅರಣ್ಯಾಧಿಕಾರಿ ಆಗುತ್ತಾರೆ. ಈ ವೇಳೆ, ಕೆಲಸ ನೋಡಿಕೊಂಡು ಸುಮ್ಮನಿರದ ಬಬೋಸ್, ಬ್ರಿಟಿಷರ ವಿರುದ್ಧದ ಕ್ರಾಂತಿಕಾರಿ ವಿಚಾರಗಳಲ್ಲಿ ಭಾಗಿಯಾಗುತ್ತಾರೆ. ಬಳಿಕ 1908ರಲ್ಲಿ ನಡೆದ ಅಲೀಪೋರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಂಧನದ ಭೀತಿಯಿಂದ ಬೋಸ್ ಕೋಲ್ಕತ್ತಾದಿಂದ ಪಲಾಯಣ ಮಾಡುತ್ತಾರೆ.
ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬುಗಳಲ್ಲಿ ರಾಸ್ ಬಿಹಾರಿ ಬೋಸರು ಹಲವಾರು ಕ್ರಾಂತಿಕಾರಿಗಳೊಡನೆ ಬ್ರಿಟಿಷರ ವಿರುದ್ಧದ ಭೂಗತ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜನ ಮೆರವಣಿಗೆಯ ಸಂದರ್ಭದಲ್ಲಿ ದೆಹಲಿಯ ಚಾಂದಿನಿ ಚೌಕದಲ್ಲಿ ಡಿಸೆಂಬರ್ ೨೩, ೧೯೧೨ರಂದು ಬಾಂಬ್ ಎಸೆದಾಗ ರಾಸ್ ಬಿಹಾರಿ ಬೋಸರ ಹೆಸರು ಪ್ರಖ್ಯಾತಿ ಪಡೆಯಿತು.

ಈ ಬಾಂಬ್ ಎಸೆದ ನಂತರದಲ್ಲಿ ಬೋಸರು ಚಾಣಾಕ್ಷತನದಿಂದ ಪೋಲೀಸರ ಕಣ್ಣು ತಪ್ಪಿಸಿಕೊಂಡು ವಾರಾಣಾಸಿಯಲ್ಲಿ ಅವಿತು, ಗದರ್ ಪಕ್ಷದ ಕಾರ್ಯಕರ್ತರೊಡನೆ ಏಕಕಾಲದಲ್ಲಿ ಉತ್ತರ ಭಾರತದಲ್ಲೆಲ್ಲಾ ಧ್ವನಿಸುವಂತೆ ವಿವಿಧ ಕ್ರಾಂತಿಕಾರಕ ಹೋರಾಟಗಳಿಗೆ ಸೂತ್ರಧಾರಿಯಾದರು.
ಮಾರ್ಚ್ ೧೯೪೨ರಲ್ಲಿ ಇಂಡಿಯನ್ ಇಂಡಿಪೆಂಡೆಂಟ್ಸ್ ಲೀಗ್ ಸ್ಥಾಪನೆಗಾಗಿ ಬೋಸರು ಒಂದು ಸಮಾವೇಶವನ್ನು ನಡೆಸಿದರು. ಈ ಸಂಸ್ಥೆಯ ಮೊದಲ ಅಧಿವೇಶನ ಜೂನ್ ೧೯೪೨ರಲ್ಲಿ ಬ್ಯಾಂಕಾಕಿನಲ್ಲಿ ಜರುಗಿತು. ಈ ಸಮಾವೇಶದಲ್ಲಿ ಅವರಿಗೆ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪನೆಗಾಗಿನ ಅಧಿಕಾರವನ್ನು ನೀಡಲಾಯಿತು. ಈ ನಿಟ್ಟಿನಲ್ಲಿ ಅವರು ಜಪಾನಿನಲ್ಲಿದ್ದ ಯುದ್ಧ ಖೈದಿಗಳನ್ನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಟದ ಸೈನಿಕರನ್ನಾಗಿ ಸಂಘಟಿಸಿದರು. ೧೯೪೩ರಲ್ಲಿ ಸಿಂಗಪೂರಿನಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ ನಾಯಕತ್ವವನ್ನು ರಾಸ್ ಬಿಹಾರಿ ಬೋಸರು ಸುಭಾಷ್ ಚಂದ್ರ ಬೋಸರಿಗೆ ವರ್ಗಾಯಿಸಿದರು.
ದೇಶಕ್ಕಾಗಿ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟು ಸ್ವಾರ್ಥರಹಿತ, ಕಷ್ಟಕರವಾದ ಕ್ರಾಂತಿಕಾರಕ ಮಾರ್ಗದಲ್ಲಿ ಬದುಕಿದ .ರಾಸ್ ಬಿಹಾರಿ ಬೋಸರು ಜನವರಿ ೨೧, ೧೯೪೫ರಂದು ಟೋಕಿಯೋದಲ್ಲಿ ನಿಧನರಾದರು.
ಧನ್ಯವಾದಗಳು.
GIPHY App Key not set. Please check settings