in ,

ಮೊಸರಿನ ಉಪಯೋಗಗಳು

ಮೊಸರು
ಮೊಸರು

ಮೊಸರು ಎಲ್ಲರಿಗೂ ಇಷ್ಟವಾಗುವ ಆಹಾರ. ತರಕಾರಿ ಸಾಂಬಾರ್,ಪಲ್ಯ ಏನೇ ಇದ್ದರೂ ಜೊತೆಗೆ ಮೊಸರು ಇದ್ದರೆ ಊಟ ಕಂಪ್ಲೀಟ್. ನಮ್ಮ ಅಜ್ಜಿ ಇದ್ರೂ ಒಂದು ದಿನ ಮೊಸರು ಊಟದಲ್ಲಿ ಇಲ್ಲದೆ ಇದ್ದಿದ್ದು ಇಲ್ಲ ಅಂತೆ. ಯಾವುದೇ ಖಾಯಿಲೆ ಇರಲಿಲ್ಲ ಅವರಿಗೆ. ಒಂದು ತುರಿಕೆ ,ಕಜ್ಜಿ ಅಂತ.ಮೊಸರಿನಲ್ಲಿ ಅಷ್ಟು ಪ್ರಮಾಣದ ರೋಗನಿರೋಧಕ ಶಕ್ತಿ ಇದೆ.

ಮೊಸರು ಒಂದು ಅದ್ಭುತವಾದ ಆಹಾರ ಉತ್ಪನ್ನ. ಇದನ್ನು ಗಣನೀಯವಾಗಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ಇರುವ ವಾತ, ಪಿತ್ತ ಹಾಗೂ ಕಫವನ್ನು ಸಮತೋಲನದಲ್ಲಿ ಉಳಿದುಕೊಳ್ಳುತ್ತವೆ. ಅವುಗಳಿಗೆ ಸಂಬಂಧಿಸಿದಂತೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದು.

ಮೊಸರಿನ ಉಪಯೋಗಗಳು
ಮೊಸರು

ಮೊಸರಿನಲ್ಲಿ ಏನೆಲ್ಲಾ ಇದೆ ಅಂತ ನೋಡೋಣ
ಮೊಸರಿನಲ್ಲಿರುವ ಪೋಷಕಾಂಶಗಳು.
ಮೊಸರಿನಲ್ಲಿ ಕ್ಯಾಲ್ಸಿಯಂ, ರಿಬೋಫ್ಲಾವಿನ್, ಪ್ರೋಟೀನ್, ವಿಟಮಿನ್ ಬಿ ಇತ್ಯಾದಿ ಪೋಷಕಾಂಶಗಳಿವೆ.

ಮೊಸರಿನ ಉಪಯೋಗಗಳು.

ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ :
ಮೊಸರು ತಿನ್ನುವುದರಿಂದ, ಜೀರ್ಣಕ್ರಿಯೆಯ ಶಕ್ತಿ ಬಲಗೊಳ್ಳುತ್ತದೆ, ರಕ್ತದ ನಷ್ಟ ಮತ್ತು ದೇಹದಲ್ಲಿನ ದೌರ್ಬಲ್ಯವನ್ನು ತೆಗೆದುಹಾಕಲು ಇದು ಸಹಾಯಕ. ನೀವು ಕಡಿಮೆ ಹಸಿವನ್ನು ಅನುಭವಿಸಿದರೂ ಅದನ್ನು ಸೇವಿಸಬಹುದು.ಮೊಸರು ಈ ಮೊದಲೇ ಅರ್ಧಕ್ಕಿಂತ ಹೆಚ್ಚು ಜೀರ್ಣವಾಗಿರುವುದರಿಂದ ಜಠರದಲ್ಲಿಯೇ ಸಂಪೂರ್ಣವಾಗಿ ಜೀರ್ಣಗೊಳ್ಳುತ್ತದೆ. ಇದರಿಂದ ಜಠರರಸ ಮತ್ತು ಕರುಳಿನ ರಸಗಳು ಇತರ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮರ್ಥವಾಗುತ್ತವೆ. ಇದರಿಂದಾಗಿ ಒಟ್ಟಾರೆ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಭಾರತೀಯ ಅಡುಗೆಗಳಲ್ಲಿ ಸಾಂಬಾರ ಪದಾರ್ಥಗಳ ಉಪಯೋಗ ಹೆಚ್ಚಿರುವುದರಿಂದ ಹಾಗೂ ಈ ಸಾಂಬಾರ ಪದಾರ್ಥಗಳು ಸುಲಭವಾಗಿ ಜೀರ್ಣವಾಗದುದರಿಂದ ಜೊತೆಯಲ್ಲಿ ಮೊಸರು ಸೇವಿಸುವುದು ಅವಶ್ಯವಾಗಿದೆ. ಒಣಮೆಣಸು ಹಾಕಿ ಮಾಡಿದ ಸಾರು, ಮೀನು ಸಾರು, ಕರಿದ ಮೀನು ಮೊದಲಾದವುಗಳನ್ನು ಸೇವಿಸಿದ ಬಳಿಕ ಮೊಸರು ಸೇವಿಸದೇ ಇದ್ದರೆ ಮರುದಿನ ಮಲವಿಸರ್ಜನೆಯ ಸಮಯದಲ್ಲಿ ಉರಿಯುಂಟಾಗುವುದು ಇದೇ ಕಾರಣದಿಂದ. ಬದಲಿಗೆ ಊಟದ ಬಳಿಕ ಮೊಸರನ್ನು ಸೇವಿಸಿದರೆ ಉರಿ ಉಂಟಾಗುವುದಿಲ್ಲ.

ತೂಕ ಇಳಿಸಲೂ ಸಹಾಯ ಮಾಡುತ್ತದೆ :
ಒಂದು ವೇಳೆ ಹಾರ್ಮೋನುಗಳ ವ್ಯತ್ಯಯದಿಂದಾಗಿ ತೂಕ ಒಂದು ವೇಳೆ ಏರಿದ್ದರೆ ಅಂತಹವರಿಗೆ ಮೊಸರು ವರದಾನವಾಗಿದೆ. ಏಕೆಂದರೆ ಇದರಲ್ಲಿರುವ ಪೋಷಕಾಂಶಗಳು ಈ ವ್ಯಾಧಿಗೆ ಕಾರಣವಾದ ಸ್ಟೆರಾಯ್ಡ್ ಆದ ಕಾರ್ಟಿಸೋಲ್‌ನ ಸ್ರವಿಕೆಯನ್ನು ಕಡಿಮೆಗೊಳಿಸುತ್ತದೆ

ಹೊಟ್ಟೆಯನ್ನು ತಂಪಾಗಿಸುತ್ತದೆ :
ಬೇಸಿಗೆ ಕಾಲದಲ್ಲಿ ಕಡೆದ ಮಜ್ಜಿಗೆಯನ್ನು ಸೇವಿಸಬೇಕು. ಇದು ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ. ಹೊಟ್ಟೆಯ ಶಾಖವನ್ನು ಶಾಂತಗೊಳಿಸುತ್ತದೆ. ನೀವು ಮೊಸರನ್ನು ಅನ್ನದೊಂದಿಗೆ ಬೆರೆಸಿ ತಿನ್ನಬಹುದು. ಇದು ಹೊಟ್ಟೆಯನ್ನು ಆರೋಗ್ಯವಾಗಿರಿಸುತ್ತದೆ, ಅತಿಸಾರದ ಸಮಸ್ಯೆಯಿಂದ ನಿಮ್ಮನ್ನು ದೂರವಿರಿಸುತ್ತದೆ.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ :

ಮೊಸರಿನ ಉಪಯೋಗಗಳು
ಮೊಸರು

ಮೊಸರು ಆಹಾರವಾಗಿ ಮಾತ್ರವಲ್ಲದೇ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಮೊಸರಿನೊಂದಿಗೆ ಲಿಂಬೆಹಣ್ಣಿನ ರಸವನ್ನು ಸಮಪ್ರಮಾಣದಲ್ಲಿ ಸೇರಿಸಿ ತೆಳುವಾಗಿ ಚರ್ಮದ ಮೆಲೆ ಹೆಚ್ಚಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವುದರಿಂದ (ಸೋಪು ಉಪಯೋಗಿಸಬಾರದು) ಚರ್ಮ ಕಾಂತಿಯನ್ನು ಪಡೆಯುತ್ತದೆ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿಯಂತೆ ಒಂದು ತಿಂಗಳು ನಿರ್ವಹಿಸುವುದರಿಂದ ಗಮನಾರ್ಹ ಬದಲಾವಣೆಯನ್ನು ಪಡೆಯಬಹುದು.

ಹಸಿವನ್ನು ಹೆಚ್ಚಿಸುತ್ತದೆ :
ಮೊಸರಿಗೆ ಕೊಂಚ ಉಪ್ಪು ಅಥವಾ ಸಕ್ಕರೆಯನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಹಸಿವು ಕೊಂಚ ಹೆಚ್ಚಾಗುವುದನ್ನು ಗಮನಿಸಲಾಗಿದೆ. ಊಟದಿಂದ ವಿಮುಖರಾದವರಿಗೆ ಮೊದಲು ಮೊಸರನ್ನು ನೀಡಿ ಬಳಿಕ ಊಟಕ್ಕೆ ಕರೆಯುವುದು ಒಳ್ಳೆಯದು.

ಬಾಯಿಯ ಸೋಂಕುಗಳನ್ನು ನಿವಾರಿಸುತ್ತದೆ :
ಹೊರಗಿನ ವಾತಾವರಣಕ್ಕೆ ಅತಿಹೆಚ್ಚು ಪ್ರಕಟವಾಗುವ ಆರ್ದ್ರ (ಸದಾ ತೇವವಾಗಿರುವ) ಭಾಗವೆಂದರೆ ಬಾಯಿ. ಗಾಳಿಯ ಮತ್ತು ಆಹಾರ ಸೇವನೆಯ ಬಳಿಕ ಹಲ್ಲುಗಳ ಸಂಧಿಯಲ್ಲಿ ಉಳಿಯುವ ಆಹಾರದ ಮೂಲಕ ಆಗಮಿಸುವ ಹಲವು ಬ್ಯಾಕ್ಟೀರಿಯಾಗಳ ಕಾರಣದಿಂದಾಗಿ ಸೋಂಕು ಉಂಟಾಗುವ ಸಾಧ್ಯತೆಗಳಿವೆ. ಈ ಆಹಾರ ಕೊಳೆಯುವುದರಿಂದ ಬಾಯಿಯ ದುರ್ವಾಸನೆ ಉಂಟಾಗುತ್ತದೆ. ಊಟದ ಬಳಿಕ ಕಟ್ಟಕಡೆಯದಾಗಿ ಮೊಸರು (ಹಾಗೂ ಮಜ್ಜಿಗೆ) ಸೇವಿಸುವುದರಿಂದ ಈ ದುರ್ವಾಸನೆ ಬರುವುದಿಲ್ಲ. ಏಕೆಂದರೆ ಇದಕ್ಕೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಮೊಸರು ಈಗಾಗಲೇ ಜೀರ್ಣಿಸಿಕೊಂಡುಬಿಟ್ಟಿರುತ್ತದೆ.

ಹೃದಯವನ್ನು ಆರೋಗ್ಯವಾಗಿಡಿತ್ತದೆ :
ಮೊಸರು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಅನುಮತಿಸುವುದಿಲ್ಲ. ಹೀಗಾಗಿ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಮೊಸರು ನಮ್ಮನ್ನು ರಕ್ಷಿಸುತ್ತದೆ.ಮೊಸರಿನ ನಿಯಮಿತ ಸೇವನೆಯಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಉತ್ತಮ ಕೊಲೆಸ್ಟರಾಲ್ ಹೆಚ್ಚಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಹೃದಯ ಕಡಿಮೆ ಒತ್ತಡದಲ್ಲಿ ರಕ್ತವನ್ನು ದೂಡಿಕೊಟ್ಟರೆ ಸಾಕಾಗುತ್ತದೆ. ಇದರಿಂದ ಹೃದಯದ ಕ್ಷಮತೆ ಹೆಚ್ಚುತ್ತದೆ ಹಾಗೂ ಆಘಾತದ ಅಪಾಯಗಳಿಂದ ಪಾರಾಗುತ್ತದೆ.

ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ:
ಮೊಸರಿನಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಅಂಶವಿದೆ ಮತ್ತು ಮೂಳೆಗಳು ಆರೋಗ್ಯವಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯ. ಇದು ಮೂಳೆಗಳ ಬೆಳವಣಿಗೆಗೂ ಕಾರಣವಾಗುತ್ತದೆ. ಹಲ್ಲು, ಉಗುರುಗಳು, ಸ್ನಾಯುಗಳನ್ನು ಆರೋಗ್ಯವಾಗಿರಿಸುತ್ತದೆ. ನೀವು ನಿಯಮಿತವಾಗಿ ಮೊಸರು ಸೇವಿಸುವುದರಿಂದ ಕೀಲು ನೋವಿನಿಂದ ದೂರವಿರಬಹುದು.ಮತ್ತು ರಂಜಕ ಗಳ ಅಗತ್ಯವಿದೆ. ಮೊಸರಿನಲ್ಲಿ ಈ ಎರಡೂ ಧಾತುಗಳು ಸಿದ್ಧರೂಪದಲ್ಲಿ ಲಭ್ಯವಿರುವುದರಿಂದ ರಕ್ತದ ಮೂಲಕ ಮೂಳೆ ಮತ್ತು ಹಲ್ಲುಗಳು ಸದೃಢವಾಗಲು ಸಹಕರಿಸುತ್ತವೆ. ಒಂದು ವೇಳೆ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ಟೊಳ್ಳಾಗುವ ಮತ್ತು ಗಾಳಿಗುಳ್ಳೆಗಳಿಂದ ತುಂಬಿರುವ ತೊಂದರೆ ಎದುರಿಸುತ್ತಿದ್ದರೆ ನಿಯಮಿತವಾಗ ಮೊಸರಿನ ಸೇವನೆಯಿಂದ ಈ ತೊಂದರೆ ನಿವಾರಣೆಯಾಗುತ್ತದೆ.

ಮೂಲವ್ಯಾಧಿ ನಿವಾರಣೆ ಆಗುತ್ತದೆ :

ಮೊಸರಿನ ಉಪಯೋಗಗಳು
ಮೂಲವ್ಯಾಧಿ

ಆಗಾಗ್ಗೆ ಕೆಲವರು ಮೂಲವ್ಯಾಧಿಯಿಂದ ಬಳಲುತ್ತಿರುತ್ತಾರೆ. ಈ ಸಂದರ್ಭದಲ್ಲಿ ಮಲ ವಿಸರ್ಜಿಸುವಾಗ ರಕ್ತಸ್ರಾವ, ತಿರುಳಿನ ಹಾದಿಯಲ್ಲಿ ಊತ, ನೋವು ಉಂಟಾಗುತ್ತದೆ. ನೀವು ಮಜ್ಜಿಗೆಯನ್ನು ಸೇವಿಸಿದರೆ ಇದರಿಂದ ಪರಿಹಾರ ಪಡೆಯಬಹುದು.ಮೂಲವ್ಯಾಧಿಯಿಂದ ಬಳಲುವವರಿಗೆ ಉತ್ತಮವಾದ ಆಹಾರವಾಗಿದೆ
ಮೂಲವ್ಯಾಧಿಯಿಂದ ಬಳಲುವವರಿಗೆ ಉತ್ತಮವಾದ ಆಹಾರವಾಗಿದೆ ಆಹಾರದಲ್ಲಿ ನಾರಿನ ಅಂಶ ಕಡಿಮೆಯಿದ್ದಾಗ ಮಲವಿಸರ್ಜನೆ ಕಷ್ಟಕರವಾಗಿ ಕರುಳು ದೂಡುವ ಒತ್ತಡಕ್ಕೆ ಮಣಿದು ಮಲದ್ವಾರದ ಒಳಗೋಡೆಗಳಲ್ಲಿ ಗಂಟುಗಳುಂಟಾಗುತ್ತವೆ. ಇದನ್ನೇ ಮೂಲವ್ಯಾಧಿ ಎಂದು ಕರೆಯುತ್ತೇವೆ. ಬಳಿಕ ಆಗಮನವಾದ ಯಾವುದೇ ಆಹಾರದ ತ್ಯಾಜ್ಯ ಈ ಗಂಟುಗಳ ಮೇಲೆ ಇನ್ನಷ್ಟು ಒತ್ತಡ ಹೇರುವುದರಿಂದ ಸಹಿಸಲಸಾಧ್ಯವಾದ ನೋವು, ಉರಿಯುಂಟಾಗುತ್ತದೆ. ಇದಕ್ಕೆ ಅತ್ಯಂತ ಸೌಮ್ಯವಾದ ಆಹಾರ, ಸೂಕ್ತ ಔಷಧಿ ಮತ್ತು ಕಾಲಾವಕಾಶದ ಅಗತ್ಯವಿದೆ. ಮೊಸರು ಆಹಾರಗಳಲ್ಲಿಯೇ ಅತ್ಯಂತ ಸೌಮ್ಯವಾದ ಆಹಾರವಾಗಿರುವುದರಿಂದ ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೆ ಇದಕ್ಕಿಂತ ಒಳ್ಳೆಯ ಆಹಾರ ಇನ್ನೊಂದಿಲ್ಲ. ಮೊಸರು, ಅಕ್ಕಿಯ ಗಂಜಿ ಮತ್ತು ಸ್ವಲ್ಪ ಶುಂಠಿ ಸೇರಿಸಿದ ಊಟ ಉತ್ತಮ ಪರಿಣಾಮವನ್ನು ನೀಡುತ್ತದೆ.

ತಲೆಹೊಟ್ಟು ನಿವಾರಿಸಲು ಸಾಧ್ಯವಾಗುತ್ತದೆ:
ಮೊಸರನ್ನು ಬೆರಳ ತುದಿಗಳಲ್ಲಿ ಅದ್ದಿ ತಲೆಹೊಟ್ಟಿರುವ ಕಡೆ ನಯವಾಗಿ ಮಸಾಜ್ ಮಾಡುವುದರಿಂದ ಕ್ರಮೇಣವಾಗಿ ತಲೆಹೊಟ್ಟು ನಿವಾರಣೆಯಾಗುತ್ತದೆ. ವಾಸ್ತವಾಗಿ ತಲೆಹೊಟ್ಟು ಎಂದರೆ ಪಕಳೆ ಎದ್ದಿರುವ ನಮ್ಮ ತಲೆಯ ಚರ್ಮದ ಒಣಭಾಗ. ಇದಕ್ಕೆ ಕೆಲವು ಬೂಸು ಬರಿಸುವ ಕ್ರಿಮಿಗಳು ಕಾರಣ. ಮೊಸರಿನಲ್ಲಿ ಈ ಕ್ರಿಮಿಗಳನ್ನು ನಿವಾರಿಸಲು ತಕ್ಕನಾದ ಧಾತುಗಳಿರುವುದರಿಂದ ಕ್ರಿಮಿಗಳು ನಾಶವಾಗಿ ಚರ್ಮ ಪಕಳೆಯೇಳುವುದರಿಂದ ಮುಕ್ತಿ ಪಡೆಯುತ್ತದೆ. ಪರಿಣಾಮವಾಗಿ ತಲೆಹೊಟ್ಟು ಮಾಯವಾಗುತ್ತದೆ.

ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

6 Comments

 1. 1. Вибір натяжних стель – як правильно обрати?
  2. Топ-5 популярних кольорів натяжних стель
  3. Як зберегти чистоту натяжних стель?
  4. Відгуки про натяжні стелі: плюси та мінуси
  5. Як підібрати дизайн натяжних стель до інтер’єру?
  6. Інноваційні технології у виробництві натяжних стель
  7. Натяжні стелі з фотопечаттю – оригінальне рішення для кухні
  8. Секрети вдалого монтажу натяжних стель
  9. Як зекономити на встановленні натяжних стель?
  10. Лампи для натяжних стель: які вибрати?
  11. Відтінки синього для натяжних стель – ексклюзивний вибір
  12. Якість матеріалів для натяжних стель: що обирати?
  13. Крок за кроком: як самостійно встановити натяжні стелі
  14. Натяжні стелі в дитячу кімнату: безпека та креативність
  15. Як підтримувати тепло у приміщенні за допомогою натяжних стель
  16. Вибір натяжних стель у ванну кімнату: практичні поради
  17. Натяжні стелі зі структурним покриттям – тренд сучасного дизайну
  18. Індивідуальність у кожному домашньому інтер’єрі: натяжні стелі з друком
  19. Як обрати освітлення для натяжних стель: поради фахівця
  20. Можливості дизайну натяжних стель: від класики до мінімалізму
  вартість натяжних потолків [url=https://natjazhnistelitvhyn.kiev.ua/]https://natjazhnistelitvhyn.kiev.ua/[/url] .

 2. [url=https://avtosalonbmwftnz.dp.ua]bmw автосалон[/url]

  Приобрести новый BMW 2024 лета в течение Украине по наихорошей цене у официознного дилера. Тест-драйв, хеджирование, субсидирование, промоакции и еще спецпредложения.
  https://www.avtosalonbmwftnz.dp.ua

ಚಂದ್ರ

ರಾತ್ರಿಯಲ್ಲಿ ಬರುವ ಚಂದ್ರ

ಜೋಳದ ರೊಟ್ಟಿ

ತಟ್ಟಿ ತಟ್ಟಿ ಮಾಡುವ ಜೋಳದ ರೊಟ್ಟಿ