in

ಈಗೀನ ಜೀವನಶೈಲಿಯಲ್ಲಿ ಹೊಟ್ಟೆಯ ಅಸಿಡಿಟಿ ಸಮಸ್ಯೆ

ಅಸಿಡಿಟಿ ಸಮಸ್ಯೆ
ಅಸಿಡಿಟಿ ಸಮಸ್ಯೆ

ಆಮ್ಲೀಯತೆಯು ಮಾರಣಾಂತಿಕ ಸಮಸ್ಯೆಯಲ್ಲದೆ ಹೋದರೂ ಇದು ಎದೆಯಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಇದು ಹೆಚ್ಚಿನ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಈ ಸಮಸ್ಯೆಗೆ ಮಾತ್ರೆ ತೆಗೆದುಕೊಳ್ಳುವ ಬದಲಾಗಿ ಆಹಾರ ಕ್ರಮ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.

ಈಗೀನ ಜೀವನಶೈಲಿಯಲ್ಲಿ ಹೊಟ್ಟೆಯ ಅಸಿಡಿಟಿ ಸಮಸ್ಯೆ
ಅಸಿಡಿಟಿ

ಅಸಿಡಿಟಿ ಆಗುವುದಕ್ಕೆ ಮುಖ್ಯ ಕಾರಣ ಅತಿಯಾಗಿ ತಿನ್ನುವುದು ಮತ್ತು ಸರಿಯಾಗಿ ನಿದ್ರೆ ಮಾಡದಂತಹ ಅನಾರೋಗ್ಯಕರ ಅಭ್ಯಾಸಗಳು ಆಸಿಡೋಸಿಸ್ ಮತ್ತು ಅಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆಮ್ಲೀಯತೆಯು ಹೆಚ್ಚಾಗಿ ಮತ್ತು ಸರಿಯಾಗಿರದ ಜೀವನಶೈಲಿಯಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. ತಡವಾಗಿ ಮಲಗಿದರೆ ಮತ್ತು ಅತಿಯಾಗಿ ತಿನ್ನುತ್ತಿದ್ದರೆ, ಖಂಡಿತವಾಗಿಯೂ ಆಂಟಾಸಿಡ್‌ಗಳ ಸಮಸ್ಯೆಗೆ ಸಿಲುಕಬೇಕು.

ಅಸಿಡಿಟಿ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುವ ಆಹಾರಗಳು

ಮಜ್ಜಿಗೆ ಹೊಟ್ಟೆಯನ್ನು ತಣ್ಣಗಾಗಿಸಲು ಸಹಾಯ ಮಾಡುತ್ತದೆ. ತಣ್ಣಗೆ ಮಾಡಿ ಕುಡಿಯುವುದರಿಂದ ಸಹ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಆಮ್ಲವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ, ಇದು ಹೊಟ್ಟೆಯಲ್ಲಿ ಆಮ್ಲವನ್ನು ತಯಾರಿಸುವ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ. ಆದ್ದರಿಂದ ಮುಂದಿನ ಬಾರಿ ನೀವು ಹೊಟ್ಟೆ ಉರಿಯಂತಹ ಸಂವೇದನೆ, ಎದೆಯುರಿ ಅಥವಾ ಆಮ್ಲೀಯತೆಯ ಇತರ ರೋಗಲಕ್ಷಣಗಳನ್ನು ಅನುಭವಿಸಿದಾಗ ಔಷಧಿಯ ಬದಲು ಒಂದು ಲೋಟ ತಣ್ಣನೆಯ ಹಾಲನ್ನು ತೆಗೆದುಕೊಳ್ಳಿ.

ಈಗೀನ ಜೀವನಶೈಲಿಯಲ್ಲಿ ಹೊಟ್ಟೆಯ ಅಸಿಡಿಟಿ ಸಮಸ್ಯೆ
ಬಾಳೆಹಣ್ಣು

ಪ್ರತಿದಿನ ಬೆಳಿಗ್ಗೆ ಬಾಳೆಹಣ್ಣು ತಿನ್ನುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಬಾಳೆಹಣ್ಣಿಗೆ ಅಸಿಡಿಟಿ ಸಮಸ್ಯೆಗಳನ್ನು ಅರ್ಧದಷ್ಟು ಕಡಿಮೆ ಮಾಡುವ ಶಕ್ತಿ ಇದೆ ಎಂಬುದು ಸಾಬೀತಾಗಿದೆ.

ಪ್ರತಿ ದಿನ ಒಂದೇ ಸಮಯಕ್ಕೆ ಆಹಾರ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆಹಾರವನ್ನು ಸ್ಕಿಪ್ ಮಾಡಬಾರದು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು.

1-2 ಟೀ ಚಮಚ ತುಳಸಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಮತ್ತು ಆ ನೀರನ್ನು ಕುಡಿಯಿರಿ. ತುಳಸಿ ಬೀಜಗಳು ದೇಹವನ್ನು ತಂಪಾಗಿಸುತ್ತವೆ. ಆದ್ದರಿಂದ ಪಿರಿಯಡ್ಸ್ ಸಮಯದಲ್ಲಿ ಅಥವಾ ನಿಮಗೆ ಶೀತ / ಕೆಮ್ಮು ಸಮಸ್ಯೆ ಇರುವಾಗ ತುಳಸಿ ಬೀಜಗಳನ್ನು ತೆಗೆದುಕೊಳ್ಳಬೇಡಿ.ಉಳಿದಂತೆ ಇದನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಬೆಳಿಗ್ಗೆ ಅದ್ಭುತವಾದ ಪೌಷ್ಟಿಕಾಂಶದ ಗೂಡಾಗಿರುವ ಎಳನೀರನ್ನು ಕುಡಿಯಿರಿ. ಈ ನೀಡು ಆಮ್ಲೀಯತೆಯ ಸಮಸ್ಯೆಯನ್ನು ಬಹಳ ಪರಿಣಾಮಕಾರಿಯಾಗಿ ನಿಭಾಯಿಸುತ್ತದೆ.

ತರಕಾರಿಗಳು ಹೊಟ್ಟೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ತರಕಾರಿಗಳಲ್ಲಿ ಕೊಬ್ಬು ಮತ್ತು ಸಕ್ಕರೆಯ ಪ್ರಮಾಣವು ತುಂಬಾ ಕಡಿಮೆಯಿದೆ. ಈ ತರಕಾರಿಗಳು ಹೊಟ್ಟೆಯಲ್ಲಿ ಆಮ್ಲ ರಚನೆಯ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಆದ್ದರಿಂದ ದೈನಂದಿನ ಆಹಾರಕ್ರಮದಲ್ಲಿ ಈ ಆಹಾರಗಳನ್ನು ಸೇರಿಸಿ ಅಸಿಡಿಟಿಯಿಂದ ಪರಿಹಾರ ಪಡೆಯಿರಿ.

ಈಗೀನ ಜೀವನಶೈಲಿಯಲ್ಲಿ ಹೊಟ್ಟೆಯ ಅಸಿಡಿಟಿ ಸಮಸ್ಯೆ
ಊಟದ ನಂತರ ವಾಕಿಂಗ್

ಊಟದ ನಂತರ ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಹೀಗೆ ಮಾಡುವುದರಿಂದ ಜೀರ್ಣಾಂಗದಲ್ಲಿ ಅಂಗಗಳು ಚಲಿಸುತ್ತವೆ. ಇದರಿಂದ ಆಹಾರವು ಬೇಗನೆ ಜೀರ್ಣವಾಗುತ್ತದೆ ಮತ್ತು ಆಮ್ಲವು ಏಳುವುದಿಲ್ಲ ಮತ್ತು ಗಂಟಲಿಗೆ ಸೇರಿಕೊಳ್ಳುವುದಿಲ್ಲ.

ಆಹಾರವನ್ನು ಹೆಚ್ಚಾಗಿ ಕಡಿಮೆ ಪ್ರಮಾಣದಲ್ಲಿ ಸೇವಿಸಿ.
ಹೆಚ್ಚಿನ ಪ್ರೋಟೀನ್ ಸೇವನೆಯನ್ನು ತಪ್ಪಿಸಿ. ಮಾಂಸಾಹಾರವನ್ನು ವಾರಕ್ಕೆ 2-3 ಬಾರಿ ಹೆಚ್ಚು ತಿನ್ನಬೇಡಿ.ಊಟದಲ್ಲಿ ಧಾನ್ಯಗಳನ್ನು ಸೇರಿಸುವುದನ್ನು ಮರೆಯಬೇಡಿ.ವಜ್ರಾಸನದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳಬೇಕು.

ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಲು ಹೋಗಬಾರದು. ಇದರ ಬದಲು ದಿನದಲ್ಲಿ ಆಗಾಗ ಸ್ವಲ್ಪ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುವುದರಿಂದ ದೇಹದ ಜೀರ್ಣಾಂಗ ವ್ಯವಸ್ಥೆಗೆ ಬಹಳ ಸುಲಭವಾಗಿ ನೀವು ಸೇವಿಸಿದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡಿ ಅದರಲ್ಲಿರುವ ಪೌಷ್ಟಿಕಾಂಶಗಳನ್ನು ನಿಮ್ಮ ದೇಹಕ್ಕೆ ತಲುಪಿಸಲು ಅನುಕೂಲವಾಗುತ್ತದೆ.

ದೈಹಿಕ ಶ್ರಮವಿಲ್ಲದೆ ಹೊಟ್ಟೆಗೆ ಮಾತ್ರ ಆಹಾರ ಹೋಗುತ್ತಿದ್ದರೆ ಅನಾರೋಗ್ಯ ಕಾಡುವುದು ಮಾಮೂಲಿ. ಹೆಚ್ಚಿದ ಆಮ್ಲೀಯತೆಗೆ ಮತ್ತೊಂದು ಕಾರಣವೆಂದರೆ ಊಟದ ನಂತರ ತಕ್ಷಣವೇ ಮಲಗುವುದು. ಈ ಎಲ್ಲಾ ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತವೆ.

ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ನೀರಿನ ಜೊತೆಗೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಾಕಿ ಕುಡಿಯುವುದರಿಂದ ನಿಮ್ಮ ದೇಹದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ಮೆಟಬಾಲಿಸಂ ಪ್ರಕ್ರಿಯೆ ಚುರುಕುಗೊಳ್ಳುತ್ತದೆ.

ಆಹಾರ ಪದಾರ್ಥಗಳಲ್ಲಿ ನಾರಿನ ಅಂಶ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡಿದರೆ ಅಜೀರ್ಣತೆ, ಮಲಬದ್ಧತೆ, ಎದೆಯುರಿ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಡಿಮೆ ಆಗುತ್ತವೆ.
ಆಹಾರ ಪದಾರ್ಥಗಳ ತಯಾರಿಯಲ್ಲಿ ಜೀರಿಗೆಯನ್ನು ಬಳಕೆ ಮಾಡುವುದರಿಂದ ಹೆಚ್ಚು ಅನುಕೂಲವಾಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಊಟ ಮಾಡಿದ ನಂತರ ಮುಕ್ಕಾಲು ಅಥವಾ ಒಂದು ಟೇಬಲ್ ಚಮಚ ಸೋಂಪು ಕಾಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಿಗಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಭಾರವಾದ ಆಹಾರ ಸೇವನೆ ಮಾಡಿದ ಸಂದರ್ಭದಲ್ಲಿ ಅತ್ಯಂತ ವೇಗವಾಗಿ ನಿಮ್ಮ ಜೀರ್ಣ ಶಕ್ತಿ ಕೆಲಸ ಮಾಡಲು ಪ್ರಾರಂಭ ಮಾಡುತ್ತದೆ.

ಈರುಳ್ಳಿ, ಬೆಳ್ಳುಳ್ಳಿ ಆಹಾರ ಪದ್ಧತಿಯಲ್ಲಿ ಯಾವುದಾದರೂ ಒಂದು ರೂಪದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಅರಿಶಿನ, ಶುಂಠಿ, ಜೀರಿಗೆ ಇತ್ಯಾದಿಗಳನ್ನು ಆಗಾಗ ಬಳಕೆ ಮಾಡುವ ಅಭ್ಯಾಸ ನಿಮ್ಮದಾಗಬೇಕು. ಇದರಿಂದ ಹೈಪರ್ ಅಸಿಡಿಟಿ ಸಮಸ್ಯೆ ಸುಲಭವಾಗಿ ನಿಯಂತ್ರಣವಾಗುತ್ತದೆ.

ಆಹಾರ ಪದ್ಧತಿಯಲ್ಲಿ ಆಗಾಗ ಹಾಗಲಕಾಯಿ ಬಳಕೆ ಮಾಡುವುದು ತುಂಬಾ ಒಳ್ಳೆಯದು. ಹಾಗಲಕಾಯಿಯನ್ನು ಬೇಯಿಸಿ ತಿನ್ನುವುದು, ಡ್ರೈ ರೋಸ್ಟ್ ಮಾಡಿ ಸೇವನೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಅನುಕೂಲಕರ. ಕಹಿ ಎಂಬ ಕಾರಣಕ್ಕೆ ಹಾಗಲ ಕಾಯಿಯನ್ನು ದೂರ ಇರಿಸಬಾರದು. ಇದರಲ್ಲಿ ಸಾಕಷ್ಟು ಔಷಧೀಯ ಗುಣ – ಲಕ್ಷಣಗಳು ಇರುವುದು ಮಾತ್ರವಲ್ಲದೆ ನಿಮ್ಮ ಆರೋಗ್ಯಕ್ಕೆ ಅನುಕೂಲವಾಗುವ ಮತ್ತು ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ.

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಜೀರಿಗೆ ಕಷಾಯ ತುಂಬಾ ಅನುಕೂಲಕಾರಿ ಎಂದು ಹೇಳಲಾಗುತ್ತದೆ. ಸುಮಾರು 200 ಎಂ ಎಲ್ ನೀರು ಅದಕ್ಕೆ 2 ಟೇಬಲ್ ಚಮಚ ಜೀರಿಗೆ ಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಿ, ಆರಿಸಿ, ಶೋಧಿಸಿ ಕುಡಿಯುವುದರಿಂದ ಬಹಳ ಬೇಗನೆ ಹೈಪರ್ ಅಸಿಡಿಟಿ ಸಮಸ್ಯೆ ನಿಯಂತ್ರಣಕ್ಕೆ ಬರಲಿದೆ. ಮಕ್ಕಳು ಹಾಗೂ ವಯಸ್ಸಾದವರಿಗೂ ಕೂಡ ಈ ಪಾನೀಯ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಎದೆಯುರಿ ಮತ್ತು ಹುಳಿ ತೇಗು ಸಮಸ್ಯೆ ಅನುಭವಿಸುತ್ತಿರುವವರು ಸಾಧಾರಣವಾಗಿ ಸಿಟ್ರಸ್ ಹಣ್ಣುಗಳಾದ ನಿಂಬೆ ಹಣ್ಣು, ಮೋಸಂಬಿ ಹಣ್ಣು, ಕಿತ್ತಳೆ ಹಣ್ಣು ಇತ್ಯಾದಿಗಳಿಂದ ದೂರ ಉಳಿಯಲು ಬಯಸುತ್ತಾರೆ. ಇಂತಹವರು ನಿಯಮಿತ ಪ್ರಮಾಣದಲ್ಲಿ ಸಿಟ್ರಸ್ ಹಣ್ಣುಗಳನ್ನು ಹಣ್ಣುಗಳ ರೂಪದಲ್ಲಿ ಅಥವಾ ಜ್ಯೂಸು ರೂಪದಲ್ಲಿ ಸೇವನೆ ಮಾಡಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಾಳಿ ಅವತಾರ

ಪಾರ್ವತಿ ದೇವಿಯ ಕಾಳಿ ಅವತಾರ

ಬ್ರಹ್ಮಾಸ್ತ್ರ

ಬ್ರಮ್ಮನಿಂದ ಪಡೆಯುವ ಬ್ರಹ್ಮಾಸ್ತ್ರ