in

ರಾತ್ರಿಯಲ್ಲಿ ಬರುವ ಚಂದ್ರ

ಚಂದ್ರ
ಚಂದ್ರ

ಚಂದ್ರ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ. ಭೂಮಿ ಮತ್ತು ಚಂದ್ರನ ನಡುವೆ ಸರಾಸರಿ ದೂರವು 384,399 ಕಿ.ಮೀ.ಗಳು. ಈ ದೂರದಲ್ಲಿ, ಚಂದ್ರನಿಂದ ಪ್ರತಿಫಲಿತವಾದ ಬೆಳಕು ಭೂಮಿಯನ್ನು ತಲುಪಲು ಸುಮಾರು 1.3 ಕ್ಷಣಗಳು ಹಿಡಿಯುತ್ತದೆ.

ಚಂದ್ರನ ವ್ಯಾಸವು 3,474 ಕಿ.ಮೀ.ಗಳಿದ್ದು , ಇದು ಸೌರಮಂಡಲದ ೫ನೇ ಅತಿ ದೊಡ್ಡ ಮತ್ತು ೫ನೇ ಅತಿ ಭಾರವಾದ ಉಪಗ್ರಹವಾಗಿದೆ. ಗ್ಯಾನಿಮಿಡ್, ಟೈಟನ್, ಕ್ಯಾಲಿಸ್ಟೊ, ಮತ್ತು ಐಓಗಳು ಚಂದ್ರನಿಗಿಂತ ದೊಡ್ಡದಾಗಿವೆ. ಭೂಮಿಯ ಮೇಲಿನ ಉಬ್ಬರವಿಳಿತಗಳಿಗೆ ಚಂದ್ರನ ಗುರುತ್ವಾಕರ್ಷಣೆಯೇ ಕಾರಣ. ಚಂದ್ರವು ಭೂಮಿಯ ಸುತ್ತ ೨೭.೩ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. ಭೂಮಿ-ಚಂದ್ರ-ಸೂರ್ಯ ವ್ಯವಸ್ಥೆಯಲ್ಲಿ ಆವರ್ತಿಸುವ ಬದಲಾವಣೆಗಳ ಕಾರಣದಿಂದ ಚಂದ್ರನ ಕಲೆಗಳು ಉಂಟಾಗುತ್ತವೆ. ಈ ಪಕ್ಷಗಳು ೨೯.೫ ದಿನಗಳಿಗೊಮ್ಮೆ ಆವರ್ತಿಸುತ್ತವೆ.

ರಾತ್ರಿಯಲ್ಲಿ ಬರುವ ಚಂದ್ರ
ಸೌರಮಂಡಲ

ಭೂಮಿಯನ್ನಳಿದು ಮಾನವರು ನಡೆದಾಡಿರುವ ಏಕೈಕ ಆಕಾಶಕಾಯವೆಂದರೆ ಚಂದ್ರ. ಚಂದ್ರನನ್ನು ತಲುಪಿದ ಮೊದಲ ಮಾನವರಹಿತ ಗಗನನೌಕೆಯೆಂದರೆ ರಷ್ಯಾದ ಲೂನ ಕಾರ್ಯಕ್ರಮದ ನೌಕೆ. ಲೂನಾ ೧ ಭೂಮಿಯ ಗುರುತ್ವದಿಂದ ಮುಕ್ತಿ ಪಡೆದು ಚಂದ್ರನ ಬಳಿ ಹಾರಿಹೋದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಲೂನಾ ೨ ಚಂದ್ರನ ಮೇಲ್ಮೈ ತಲುಪಿದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಸಾಮಾನ್ಯವಾಗಿ ಮರೆಯಾಗಿರುವ ಚಂದ್ರನ ಹಿಮ್ಮುಖವನ್ನು ಲೂನಾ ೩ ಚಿತ್ರೀಕರಿಸಿತು. ಈ ೩ ಘಟನೆಗಳೂ ೧೯೫೯ರಲ್ಲಿ ಆದವು. ಚಂದ್ರನ ಮೇಲೆ ನಿಧಾನವಾಗಿ ಇಳಿದ ಪ್ರಪ್ರಥಮ ನೌಕೆ ಲೂನಾ ೯ ಮತ್ತು ಚಂದ್ರನನ್ನು ಪರಿಭ್ರಮಿಸಿದ ಪ್ರಪ್ರಥಮ ಮಾನವರಹಿತ ನೌಕೆ ಲೂನಾ ೧೦. ಇವೆರಡೂ ೧೯೬೬ರಲ್ಲಿ ನಡೆದವು.ಅಮೇರಿಕಾ ಸಂಯುಕ್ತ ಸಂಸ್ಥಾನದ ಅಪೋಲೋ ಕಾರ್ಯಕ್ರಮದ ಭಾಗವಾಗಿ, ಚಂದ್ರನತ್ತ ಮೊದಲಬಾರಿಗೆ ಮತ್ತು ಏಕಮಾತ್ರ ಮಾನವ ಸಹಿತ ಯಾನವು ಯಶಸ್ವಿಯಾಗಿ ಪೂರ್ಣಗೊಂಡಿತು. ಚಂದ್ರವನ್ನು ಪರಿಭ್ರಮಿಸಿದ ಮೊದಲ ಮಾನವ ಸಹಿತ ಯಾನವಾದ ಅಪೋಲೋ ೧೯೬೮ರಲ್ಲಿ ಮತ್ತು ಚಂದ್ರನ ಮೇಲೆ ಮಾನವರನ್ನು ತಲುಪಿಸಿದ ಅಪೋಲೋ ೧೧ ೧೯೬೯ರಲ್ಲಿ ಪೂರ್ಣಗೊಂಡವು.

ಅಪೋಲೋ ಕಾರ್ಯಕ್ರಮದ ಸಮಾಪ್ತಿಯೊಂದಿಗೆ ಮಾನವಸಹಿತ ಚಂದ್ರಾನ್ವೇಷಣೆಯು ಕೊನೆಗೊಂಡರೂ, ಭವಿಷ್ಯದಲ್ಲಿ ಚಂದ್ರನತ್ತ ಮಾನವ ರಹಿತ/ಸಹಿತ ಗಗನನೌಕೆಗಳನ್ನು ಕಳುಹಿಸುವ ಯೋಜನೆಗಳನ್ನು ಹಲವು ದೇಶಗಳು ಹೊಂದಿವೆ. ಮಂಗಳ ಗ್ರಹದ ಯಾತ್ರೆಯ ತಯಾರಿಕೆಗಾಗಿ ಚಂದ್ರನ ಮೇಲೆ ಒಂದು ಶಾಶ್ವತ ನೆಲೆಯನ್ನು ಸ್ಥಾಪಿಸುವ ಉದ್ದೇಶವನ್ನು ಡಿಸೆಂಬರ್ ೪, ೨೦೦೬ರಂದು ನಾಸಾ ಸೂಚಿಸಿತು. ಈ ನೆಲೆಯ ನಿರ್ಮಾಣ ಕಾರ್ಯಕ್ಕೆ ಸುಮಾರು ೫ ವರ್ಷಗಳು ತಗಲುವ ನಿರೀಕ್ಷೆಯಿದೆ. ಇದರ ನಂತರ ೨೦೨೦ರಲ್ಲಿ ಮೊದಲ ಯಾನಗಳು ಆರಂಭವಾಗುವ ನಿರೀಕ್ಷೆಯಿದೆ.

ಚಂದ್ರನು ಸಮಕಾಲಿಕ ಪರಿಭ್ರಮಣದಲ್ಲಿರುವುದರಿಂದ, ಅದರ ಒಂದೇ ಮುಖವು ಯಾವಾಗಲೂ ಭೂಮಿಯ ಕಡೆ ತಿರುಗಿರುತ್ತದೆ. ಬಹಳ ಹಿಂದೆ, ಭೂಮಿಯು ಉಂಟುಮಾಡಿದ ಉಬ್ಬರವಿಳಿತಗಳ ಘರ್ಷಣಾ ಪರಿಣಾಮಗಳಿಂದಾಗಿ, ಚಂದ್ರನ ಅಕ್ಷೀಯ ಪರಿಭ್ರಮಣವು ನಿಧಾನವಾಗಿ ಅದು ಭೂಮಿಯ ಜೊತೆ ಹೀಗೆ ಉಬ್ಬರವಿಳಿತಗಳ ಹಿಡಿತದಲ್ಲಿ ಸಿಲುಕಿಕೊಂಡಿತು. ಆದರೂ, ಚಂದ್ರನ ಕಕ್ಷೆಯ ಕೇಂದ್ರ ಚ್ಯುತಿಯ ಕಾರಣದಿಂದ ಉಂಟಾಗುವ ಸಣ್ಣ ಬದಲಾವಣೆಗಳ ಪರಿಣಾಮದಿಂದ, ಅದರ ಸುಮಾರು ೫೯% ಮೇಲ್ಮೈಯನ್ನು ಭೂಮಿಯಿಂದ ನೋಡಬಹುದು.

ರಾತ್ರಿಯಲ್ಲಿ ಬರುವ ಚಂದ್ರ
ಚಂದ್ರ

ಭೂಮಿಯಿಂದ ಕಾಣುವ ಚಂದ್ರನ ಮುಖವನ್ನು ಮುಮ್ಮುಖವೆಂದು ಮತ್ತು ಅದರ ವಿರುದ್ಧ ದಿಕ್ಕಿನಲ್ಲಿರುವ ಮುಖವನ್ನು ಹಿಮ್ಮುಖವೆಂದು ಕರೆಯಲಾಗುತ್ತದೆ. ಗಗನನೌಕೆಗಳು ಚಂದ್ರನ ಹಿಂದೆ ಇರುವಾಗ ಅವುಗಳು ಭೂಮಿಯ ನಡುವೆ ನೇರ ರೇಡಿಯೊ ಸಂಪರ್ಕವನ್ನು ಹೊಂದಿರುವುದಿಲ್ಲ. ಚಂದ್ರನ ಹಿಮ್ಮುಖವನ್ನು ಮೊದಲ ಬಾರಿಗೆ ೧೯೫೯ರಲ್ಲಿ ರಷ್ಯಾದ ಲೂನಾ ೩ ಶೋಧಕವು ಚಿತ್ರೀಕರಿಸಿತು. ಹಿಮ್ಮುಖವನ್ನು ಪ್ರತ್ಯೇಕಿಸುವ ಒಂದು ವೈಶಿಷ್ಟ್ಯವೆಂದರೆ, ಅದರಲ್ಲಿ ಬಹಳ ಕಡಿಮೆ ಮಟ್ಟಸ ವಲಯಗಳು ಇರುವುದು.

ಹುಣ್ಣಿಮೆಯ ದಿನ ಚಂದ್ರನ ಕಾಣದ ಮುಖದಲ್ಲಿ ಅಮಾವಾಸ್ಯೆಯಾಗಿರುತ್ತದೆ. ಹಾಗೆಯೇ ಅಮಾವಾಸ್ಯೆಯ ದಿನ ಕಾಣದ ಮುಖದಲ್ಲಿ ಹುಣ್ಣಿಮೆ.

ಚಂದ್ರನ ಮೇಲಿನ ಗಾಢವಾದ ಮತ್ತು ವೈಶಿಷ್ಟ್ಯಗಳಿಲ್ಲದ ಮಟ್ಟಸಗಳನ್ನು ಮೇರ್ಗಳೆಂದು ಕರೆಯಲಾಗುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಮೇರ್ ಎಂದರೆ ಸಮುದ್ರವೆಂದು ಅರ್ಥ. ಹಿಂದಿನ ಖಗೋಳಶಾಸ್ತ್ರಜ್ಞರು ಈ ವಲಯಗಳು ನೀರಿನಿಂದ ತುಂಬಿವೆಯೆಂದು ನಂಬಿದ್ದರಿಂದ, ಈ ಮಟ್ಟಸಗಳಿಗೆ ಮೇರ್ ಎಂದು ಹೆಸರಿಡಲಾಯಿತು. ಇವುಗಳು ವಾಸ್ತವದಲ್ಲಿ ವಿಸ್ತಾರವಾದ ಪ್ರಾಚೀನ ಕಪ್ಪುಶಿಲೆಯ ಲಾವಾ ಪ್ರವಾಹಗಳು. ಬಹುತೇಕ ಎಲ್ಲಾ ಮಟ್ಟಸಗಳೂ ಚಂದ್ರನ ಮುಮ್ಮುಖದ ಮೇಲೆಯೇ ಕಾಣುತ್ತವೆ ಹಾಗೂ ಹಿಮ್ಮುಖದ ಮೇಲೆ ಕೆಲವೇ ಕೆಲವು ಮಟ್ಟಸಗಳು ಕಂಡುಬರುತ್ತವೆ. ಹಿಮ್ಮುಖದ ಸುಮಾರು ೨% ವಿಸ್ತೀರ್ಣವು ಮಾತ್ರ ಈ ಮಟ್ಟಸಗಳಿಂದ ಆವೃತವಾಗಿದ್ದರೆ,ಮುಮ್ಮುಖದ ಸುಮಾರು ೩೧% ವಿಸ್ತೀರ್ಣವು ಮಟ್ಟಸಗಳಿಂದ ಆವೃತವಾಗಿದೆ.ಈ ವ್ಯತ್ಯಾಸಕ್ಕೆ ದೊರಕಿರುವ ಅತಿ ಸಂಭವನೀಯ ವಿವರಣೆಯೆಂದರೆ, ಮುಮ್ಮುಖದ ಗೋಳಾರ್ಧದಲ್ಲಿ ಶಾಖೋತ್ಪನ್ನ ಮಾಡುವ ವೈಶಿಷ್ಟ್ಯತೆಗಳು ಸಾಂದ್ರವಾಗಿರುವುದು. ಈ ರೀತಿಯ ಸಾಂದ್ರತೆಯು ಲೂನಾರ್ ಪ್ರಾಸ್ಪೆಕ್ಟರ್ನ ಗಾಮಾ-ಕಿರಣ ವರ್ಣಪಟಲಮಾಪಕದಿಂದ ದೊರಕಿದ ಭೂ-ರಾಸಾಯನಿಕ ನಕ್ಷೆಗಳಲ್ಲೂ ಕಂಡುಬರುತ್ತದೆ. ಮುಮ್ಮುಖದ ಹಲವೆಡೆಗಳಲ್ಲಿ ಜ್ವಾಲಾಮುಖಿಗಳು ಮತ್ತು ಜ್ವಾಲಾಮುಖಿ ಗುಮ್ಮಟಗಳು ಇವೆ.

ಚಂದ್ರನ ಮೇಲ್ಮೈಯನ್ನು ಧೂಮಕೇತುಗಳು ಮತ್ತು ಉಲ್ಕಾಪಿಂಡಗಳು ನಿರಂತರವಾಗಿ ಅಪ್ಪಳಿಸಿ ಅಲ್ಪ-ಸ್ವಲ್ಪ ನೀರನ್ನು ಚಂದ್ರನ ಮೇಲ್ಮೈ ಮೇಲೆ ಸೇರಿಸಿವೆ. ಈ ನೀರಿನ ಕಣಗಳು ಸಾಮಾನ್ಯವಾಗಿ ಸೂರ್ಯನ ಬೆಳಕಿನಿಂದ ವಿಭಜಿಸಲ್ಪಟ್ಟು, ಹೊರಬರುವ ಆಮ್ಲಜನಕ ಮತ್ತು ಜಲಜನಕದ ಕಣಗಳು ಬಾಹ್ಯಾಕಾಶಕ್ಕೆ ಹಾರಿ ಹೋಗುತ್ತವೆ. ಅಪೋಲೋ ಗಗನಯಾತ್ರಿಗಳು ಸಮಭಾಜಕದ ಬಳಿ ಸಂಗ್ರಹಿಸಿದ ಶಿಲಾ ಮಾದರಿಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ನೀರಿನ ಅಂಶ ಪತ್ತೆಯಾಗಿರುವುದು, ಚಂದ್ರನ ಮೇಲ್ಮೈ ಮೇಲೆ ತೇವಾಂಶವಿಲ್ಲದಿರುವುದಕ್ಕೆ ಸಾಕ್ಷಿಯಂತಿದೆ. ಆದರೆ, ಚಂದ್ರನ ಅಕ್ಷೆಯು ಕ್ರಾಂತಿವೃತ್ತದ ಸಮತಳಕ್ಕೆ ಸ್ವಲ್ಪ ಓರೆಯಲ್ಲಿ ಇರುವುದರಿಂದ (ಕೇವಲ ೧.೫°), ಧ್ರುವಗಳ ಬಳಿಯಿರುವ ಕೆಲವು ಆಳವಾದ ಕುಳಿಗಳು ಎಂದೂ ಸೂರ್ಯನ ಬೆಳಕನ್ನು ಪಡೆಯುವುದೇ ಇಲ್ಲ ಹಾಗೂ ಶಾಶ್ವತವಾಗಿ ನೆರಳಿನಲ್ಲಿರುತ್ತವೆ ಹೀಗಾಗಿ, ಈ ಕುಳಿಗಳನ್ನು ಪ್ರವೇಶಿಸಿದ ಯಾವುದೇ ನೀರಿನ ಕಣಗಳು ದೀರ್ಘಕಾಲಗಳವರೆಗೆ ಸ್ಥಿರವಾಗಿರಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಟಲ್ ಬಿಹಾರಿ ವಾಜಪೇಯಿ

ಅಟಲ್ ಬಿಹಾರಿ ವಾಜಪೇಯಿ

ಮೊಸರು

ಮೊಸರಿನ ಉಪಯೋಗಗಳು