ಪಿಪ್ಪಲಿ ಎಂದು ಕರೆಯುವ ಮೂಲಿಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಪಿಪ್ಪಲಿ ಇದು ಒಂದು ಔಷಧೀಯ ಸಸ್ಯ. ಇದು ಕಾಳುಮೆಣಸಿನ ಹತ್ತಿರದ ಸಂಬಂಧಿ. ಹಿಪ್ಪಲಿಯನ್ನು ಸಮಾನ್ಯವಾಗಿ ವಿಪ್ಪಲಿಯೆಂದು ಕೂಡ ಕರೆಯುತ್ತಾರೆ. ವಿಪ್ಪಲಿ ನೆಲದಲ್ಲಿ ಹರಡುವ ಒಂದು ಬಹುವಾರ್ಷಿಕ ಔಷಧಿ ಬಳ್ಳಿ. ಇದರ ಕಾಯಿಗಳಲ್ಲಿ ಪೈಪ್ರಿನ್ ಮತ್ತು ಪಿಪ್ಲಾರಿಟಿನ್ ಎಂಬ ಸಸ್ಯಕ್ಷಾರಗಳಿವೆ. ದೀರ್ಘಕಾಲದ ಮೆಣಸು, ಕೆಲವೊಮ್ಮೆ ಭಾರತೀಯ ಉದ್ದದ ಮೆಣಸು ಎಂದು ಕರೆಯಲ್ಪಡುತ್ತದೆ, ಇದು ಪೈಪರೇಸಿಯ ಕುಟುಂಬದಲ್ಲಿ ಹೂಬಿಡುವ ಬಳ್ಳಿಯಾಗಿದೆ. ಇದನ್ನು ಸಾಮಾನ್ಯವಾಗಿ ಒಣಗಿಸಿ ಮಸಾಲೆ ಮತ್ತು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ.
ಹಿಪ್ಪಲಿ ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಸಿಗುತ್ತದೆ. ಇದರ ಸಸ್ಯವು ವೀಳ್ಯೆದೆಲೆ ರೀತಿಯಲ್ಲಿ ಎಲೆಗಳನ್ನು ಹೊಂದಿದ್ದು, ಮೆಣಸಿನ ಬಳ್ಳಿಯಂತೆ ಹಬ್ಬುತ್ತದೆ. ಹಿಪ್ಪಲಿಯ ಆರೋಗ್ಯ ಗುಣ ತಿಳಿದರೆ ನೀವು ಕೂಡ ಮನೆಯಲ್ಲಿ ತಂದಿಟ್ಟುಕೊಳ್ಳುತ್ತೀರಿ. ಹಾಗಾದರೆ ಹಿಪ್ಪಲಿ ಯಾವೆಲ್ಲ ರೀತಿಯ ಅನಾರೋಗ್ಯಕ್ಕೆ ರಾಮಬಾಣದಂತೆ ಕೆಲಸಮಾಡುತ್ತದೆ.

ಉದ್ದವಾದ ಮೆಣಸಿನಕಾಯಿಯು ಸದೃಶವಾಗಿರುವರುಚಿಯನ್ನು ಹೊಂದಿರುತ್ತದೆ, ಆದರೆ ಅದರ ಹತ್ತಿರದ ಸಂಬಂಧಿ ಪೈಪರ್ ಅದಕ್ಕಿಂತಲೂ ಬಿಸಿಯಾಗಿರುತ್ತದೆ – ಇದರಿಂದಾಗಿ ಕಪ್ಪು, ಹಸಿರು ಮತ್ತು ಬಿಳಿ ಮೆಣಸು ಪಡೆಯಲಾಗುತ್ತದೆ. ದೀರ್ಘ ಮೆಣಸಿನಕಾಯಿಯಾದ ಪೈಪರ್‍ರೆಟ್ರೊಫ್ರಾಕ್ಟಮ್ನ ಇನ್ನೊಂದು ಜಾತಿಯ ಜಾವಾ , ಇಂಡೋನೇಶಿಯಾಕ್ಕೆ ಸ್ಥಳೀಯವಾಗಿದೆ. ಈ ಸಸ್ಯದ ಫಲವನ್ನು ಸಾಮಾನ್ಯವಾಗಿ ಮೆಣಸಿನಕಾಯಿಗಳು ಗೊಂದಲಕ್ಕೊಳಗಾಗುತ್ತಾರೆ, ಇದು ಅಮೆರಿಕಾದ ಮೂಲದಿಂದ ಕ್ಯಾಪ್ಸಿಕಂನ ಕುಲಕ್ಕೆ ಸೇರಿದೆ.
ಹಿಪ್ಪಲಿ ಕಪ್ಪಾಗಿದರು, ರುಚಿಯಲ್ಲಿ ಸ್ವಲ್ಪ ಖಾರ ಸುವಾಸನೆಯಲ್ಲಿ ಮೆಣಸಿನ ಕಾಳಿನ ವಾಸನೆಯನ್ನೇ ಹೋಲುತ್ತದೆ. ಆದರೆ ನೋಡಲು ಸ್ವಲ್ಪ ಉದ್ದವಾಗಿದ್ದು ಇದು ಕೂಡ ಬಳ್ಳಿಯಲ್ಲೇ ಬಿಡುವ ಸಂಬಾರಿನ ವಸ್ತು ಇದಾಗಿದೆ. ಈ ಹಿಪ್ಪಲಿಯ ಕಾಯಿಗಳು ಗೊಂಚಲಾಗಿ ಉರುಳೆಯಾಕಾರವಾಗಿರುತ್ತದೆ. ಇದು ಕಾಯಾಗಿರುವಾಗ ಎಲೆಹಸಿರು ಬಣ್ಣದಿಂದ ಕೂಡಿದ್ದು. ಬೆಳೆದು ಒಣಗಿದ ಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಹಿಪ್ಪಲಿ ಜ್ವರನಿವಾರಕ, ಕಥ ಕೆಮ್ಮು ನಿಯಂತ್ರಕ, ಪಚನಕಾರಿ, ನೋವುನಿವಾರಕ.. ಹಪ್ಪಲಿಪುಡಿ ಜೇನುತುಪ್ಪ ಸೇರಿಸಿ ಪ್ರತಿದಿನ ಕಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಬೊಜ್ಜು ಅಥವಾ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
ಹಿಪ್ಪಲಿಯ ಬೇರನ್ನು ಅಕ್ಕಿಯಿಂದ ತಯಾರಿಸುವ ಬೀರ್‍ಗಳಲ್ಲಿ ಬುರುಗು ಬರಿಸಲು ಬಳಸುತ್ತಾರೆ.
ಅಂಡಮಾನ್ ದ್ವೀಪಗಳಲ್ಲಿ ಹಿಪ್ಪಲಿಯ ಎಲೆಗಳನ್ನು ವೀಳ್ಯದೆಲೆಯಂತೆ ತಿನ್ನಲು ಬಳಸುತ್ತಾರೆ.

ಹಿಪ್ಪಲಿಯ ನಿಯಮಿತಸೇವನೆ ದೀರ್ಫಾಯಷ್ಯವನ್ನು ನೀಡುತ್ತದೆ. ಇದನ್ನು ಮಸಾಲೆಗಳಲ್ಲಿ ಕಷಾಯದ ಪುಡಿಗಳಲ್ಲಿ ಬೆರೆಸುವುದರಿಂದ ಇದರ ಈ ಎಲ್ಲಾ ಲಾಭಗಳನ್ನೂ ಪಡೆದುಕೊಳ್ಳಬಹುದು.
ಪ್ರಾಸ್ಟೇಟ್, ಸ್ತನ, ಶ್ವಾಸಕೋಶ, ಕೊಲೊನ್, ಲ್ಯುಕೇಮಿಯಾ, ಪ್ರಾಥಮಿಕ ಮಿದುಳಿನ ಗೆಡ್ಡೆಗಳು ಮತ್ತು ಗ್ಯಾಸ್ಟ್ರಿಕ್, ಕ್ಯಾನ್ಸರ್ ಸೇರಿದಂತೆ ವಿವಿಧರೋಗಗಳಿಗೆ ಔಷಧಿಯಾಗಿದೆ.
ಕಾಯಿ ಮತ್ತು ಬೇರುಗಳನ್ನು ಸಂಧಿವಾತ ಮತ್ತು ಸೊಂಟ ನೋವು ನಿವಾರಿಸಲು, ಜ್ವರ ನಿವಾರಕ ಹಾಗೊ ಕಾಮೋತ್ತೇಜಕವಾಗಿ ಮತ್ತು ಶಕ್ತಿವರ್ಧಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಹಿಪ್ಪಲಿ ಬೇರಿನ ಕಷಾಯ ಸೇವಿಸಿದರೆ ಸಂಧಿವಾತ, ಸೊಂಟನೋವು ಗುಣವಾಗುವುದು. ದೇಹದಲ್ಲಿನ ವಿಷಕಾರಿ ಅಂಶಗಳು ಹೋಗುವುದು. ಕಷಾಯ ಕಾಮೋತ್ತೇಜಕ ನಿದ್ರಾಹೀನತೆ ದೂರಾಗಿಸುವುದು.
ಹಿಪ್ಪಲಿಯನ್ನು ಬಿಸಿ ಮಾಡಿ ಅದನ್ನು ಪುಡಿ ಮಾಡಿ ನಂತರ ಅದನ್ನು ವೀಳ್ಯೆದೆಲೆಯಲ್ಲಿಟ್ಟು ಜೇನುತುಪ್ಪ ಬೆರೆಸಿ ಎರಡು ಬಾರಿ ಸೇವಿಸಿ. ಸೇವಿಸುವಾಗ ಮಕ್ಕಳಿಗಾದರೆ ಅರ್ಧಚಮಚ ಮಾತ್ರ ನೀಡಿ. ವಯಸ್ಸಿಗನುಗುಣವಾಗಿ ಪ್ರಮಾಣವನ್ನು ಬದಲಾಯಿಸಿಕೊಳ್ಳಿ. ಇದು ಅಸ್ತಮಾ ಸಮಸ್ಯೆಯುಳ್ಳವರಿಗೂ ಕೂಡ ಉತ್ತಮವಾಗಿದೆ.
ಇದು ಆಸ್ತಮಾಕ್ಕೆಉತ್ತಮಗಿಡಮೂಲಿಕೆಯಾಗಿದೆ. ಕೂದಲು ಬೆಳವಣಿಗೆಗೆ ಸಹಾಯಕವಾಗುತ್ತದೆ
ಹಿಪ್ಪಲಿ ಪುಡಿಯನ್ನು ಹಾಲು ಮತ್ತು ಅಡುಗೆಸೋಡ ರಸದಲ್ಲಿ ಬೆರೆಸಿ ಕುಡಿದರೆ ಹೊಟ್ಟೆ ಉಬ್ಬರ ಕಡಿಮೆಯಾಗುವಲ್ಲಿ ಸಹಕಾರಿ.
ಹೆಚ್ಚು ಮಸಾಲೆ ಪದಾರ್ಥದ ಸೇವನೆಯಿಂದ ಅಥವಾ ಆಹಾರ ಸರಿಯಾಗಿ ಜೀರ್ಣವಾಗದೆ ಕೆಲವೊಮ್ಮೆ ಮಲಬದ್ಧತೆ ಉಂಟಾಗುತ್ತದೆ. ಇದರಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಈ ಮಲಬದ್ಧತೆ ಸಮಸ್ಯೆಗೆ ಹಿಪ್ಪಲಿ ಉತ್ತಮವಾಗಿದೆ.
ದಿರ್ಘಾಯುಷಿಯಾಗಿ ಬಾಳಲು ಸಹಾಯಕವಾದ ಸಸ್ಯವಾಗಿದೆ. ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕಲು ಸಹಾಯಕವಾಗಿದೆ.
ಹಿಪ್ಪಲಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೇಗೆಂದರೆ 2 ಚಿಟಿಕೆ ಹಿಪ್ಪಲಿ ಚೂರ್ಣ ಹಾಗೂ 1 ಚಮಚ ತ್ರಿಫಲ ಚೂರ್ಣವನ್ನು ಅರ್ಧಕಪ್ ಬಿಸಿ ನೀರಿಗೆ ಹಾಕಿಕೊಂಡು ಸೇವಿಸಿ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಗಂಟಲು ನೋವಿನಿಂದ ಬಳಲುತ್ತ ಇರುವವರಿಗೆ ಇದು ಉತ್ತಮ ಔಷಧಿ. ನರಗಳನ್ನು ಸೇಳೆದು ರಾತ್ರಿ ನಿದ್ದೆ ಬರುವ ಹಾಗೆ ಮಾಡುತ್ತದೆ.ರಕ್ತ ಹೀನತೆ ತಡೆಗಟ್ಟುವಿಕೆ ಮತ್ತು ರಕ್ತ ಪರಿಚಲನೆ ನಿರ್ವಹಿಸಲು ಸಹಾಯಕವಾಗಿದೆ.
ದೇಹದಲ್ಲಿ ರಕ್ತದೊತ್ತಡ 120/80ಕ್ಕಿಂತ ಕಡಿಮೆಯಾದಾಗ ಲೋ ಬಿಪಿ ಅಥವಾ ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇದರಿಂದ ಇಡೀ ದೇಹ ತಣ್ಣಗಾಗುವುದು, ಹೃದಯಕ್ಕೆ ಅಪಾಯವಾಗುವ ಸಾಧ್ಯತೆಗಳೂ ಇರುತ್ತವೆ. ಇದಕ್ಕೆ ಹಿಪ್ಪಲಿ ಪರಿಣಾಮಕಾರಿಯಾದ ಔಷಧವಾಗಿದೆ.

ಹಿಪ್ಪಲಿಯನ್ನು ಗೋಮೂತ್ರದ ಜೊತೆ ಸೇವಿಸಿದರೆ ಸಂಧಿಗಳ ನೋವು-ಊತ ಕಡಿಮೆಯಾಗುವಲ್ಲಿ ಸಹಕಾರಿ.
ಹಿಪ್ಪಲಿಪುಡಿ ಮತ್ತು ಓಬಜೆಪುಡಿಯನ್ನು ಬಿಸಿಹಾಲಿನನಲ್ಲಿ ಬೆರೆಸಿ ದಿನಕ್ಕೆರಡು ಸಲ ಕುಡಿದರೆ ಅರೆತಲೆನೋವು ವಾಸಿ.
ಹಿಪ್ಪಲಿ, ಶುಂಠಿ, ಕರಿಮೆಣಸು ಹಾಗೂ ನಾಗಕೇಸರಗಳನ್ನು ಪುಡಿ ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಹಿಪ್ಪಲಿ ದೇಹದಲ್ಲಿನ ಅಧಿಕ ಬೊಜ್ಜನ್ನು ಕರಗಿಸಲು ಸಹಾಯಕವಾಗಿದೆ. ಹಿಪ್ಪಲಿ ಪುಡಿಗೆ ಜೇನುತುಪ್ಪ ಸೇರಿಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಹೊಟ್ಟೆ, ಸೊಂಟದ ಭಾಗದ ಬೊಜ್ಜು ಕರಗುತ್ತದೆ.
ಹಿಪ್ಪಲಿಪುಡಿ ಹುರಿದ ಜೀರಿಗೆಪುಡಿ ಸೈಂಧವ ಲವಣ ಉಪ್ಪುನ್ನು ಮಜ್ಜಿಗೆಯಲ್ಲಿ ಬೆರೆಸಿ 4-5 ದಿನ ಸೇವಿಸಿದರೆ ಮೂಲವ್ಯಾಧಿ ಗುಣವಾಗುವುದು.
2 ಚಿಟಿಕೆ ಹಿಪ್ಪಲಿ ಪುಡಿ ಹಾಗೂ 1 ಚಮಚ ಹಸಿ ಶುಂಠಿಯವನ್ನು ಮಿಶ್ರಣ ಮಾಡಿ ಸೇವಿಸಿ. ಇದರಿಂದ ಲೋ ಬಿಪಿ ಸಮಸ್ಯೆ ನಿವಾರಣೆಯಾಗುತ್ತದೆ. ಹೀಗಾಗಿ ಲೋ ಬಿಪಿ ಸಮಸ್ಯೆ ಇದ್ದವರು ಹಿಪ್ಪಲಿಯನ್ನು ಅಗತ್ಯವಾಗಿ ಬಳಕೆ ಮಾಡಬಹುದಾಗಿದೆ.
ಹಿಪ್ಪಲಿಯನ್ನು ಬಿಸಿಮಾಡಿ ಹುರಿದು ವೀಳ್ಯದೆಲೆಯಲ್ಲಿಟ್ಟು ಜೇನು ಬೆರೆಸಿ ಒಂದೆರಡು ಸಲ ತಿಂದರೆ ಕೆಮ್ಮು, ಅಸ್ತಮಾ ಉಸಿರಾಟದ ತೊಂದರೆ ಕಡಿಮೆಯಾಗುವುದು. ಮಕ್ಕಳಲ್ಲಿ ವಯೋಮಾನಕ್ಕನುಗುಣವಾಗಿ ಪ್ರಮಾಣ ನಿರ್ಧರಿಸಿಕೊಳ್ಳಿ.
ಹಿಪ್ಪಲಿಯ ಜೊತೆ ತುಪ್ಪ ಮತ್ತು ಜೇನುತುಪ್ಪ ಸೇರಿಸಿ ಹಲ್ಲು ಉಜ್ಜುವುದರಿಂದ ಹಲ್ಲುಗಳು ಜುಮ್ ಕಡಿಮೆ ಮಾಡುತ್ತದೆ.
ಹಿಪ್ಪಲಿಯ ಬೇರು ಕಾಂಡಗಳನ್ನು ಆಯುರ್ವೇದ ಯುನಾನಿ ಪದ್ಧತಿಯಲ್ಲಿ ಪಿಷ್ಲ್‌ಮೋಲ್ ಎಂಬ ಔಷಧವಾಗಿ ಬಳಸುವರು. ಇದನ್ನು ಶ್ವಾಸನಾಳದ ಸೋಂಕು,ಅಸ್ತಮ, ಕೆಮ್ಮು, ಉಬ್ಬಸ, ಮಂಪರು ನಶ್ಯ, ಮೂರ್ಛೆರೋಗ, ಮಲಬದ್ಧತೆ, ಅಮಶಂಕೆ, ಪಿತ್ತನಾಳ ಪಿತ್ತಕೋಶದ ದೋಶ, ಕುಷ್ಠರೋಗ, ಗ್ಯಾಸ್ಟಿಕ್, ಕ್ಯಾನ್ಸರ್, ವಾತನಿವಾರಣೆಗೆ ಬಳಸುತ್ತಾರೆ.
ಧನ್ಯವಾದಗಳು.
GIPHY App Key not set. Please check settings