ಮಡಿಕೇರಿ ಕೊಡಗು ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ. ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ. ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು. ಮಡಿಕೇರಿಯನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯುತ್ತಾರೆ.
ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜನು ತನ್ನ ಕಾಲಾಡಳಿತದಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇವಸ್ಥಾನವನ್ನು ಎರಡನೇ ಲಿಂಗರಾಜನು ಕಟ್ಟಿಸಿದನು. ಇಂದು ಇದು ಇಲ್ಲಿಯ ಒಂದು ಪ್ರಮುಖ ದೇವಸ್ಥಾನವೂ, ಪ್ರವಾಸಿ ತಾಣವೂ ಅಗಿದೆ, ಅದೇ ರೀತಿ ರಾಜಾಸೀಟ್, ಅರಮನೆ, ಗದ್ದಿಗೆಯು ಸಹ ಇಂದಿನ ಪ್ರವಾಸಿ ತಾಣಗಳಲ್ಲಿ ಹೆಸರಾಗಿದೆ.

ಅಬ್ಬಿ ಜಲಪಾತವು ಮೈ ತುಂಬಿದಾಗ ಸಂಭ್ರಮದ ನೋಟ. ಈ ಜಲಪಾತವನ್ನು ನೋಡಲು ರಾಜ್ಯದ ಎಲ್ಲಾ ಭಾಗಗಳಿಂದಲೂ ಜನರ ಬರುತ್ತಾರೆ. ಹಾಗೆ ಬಂದ ಪ್ರವಾಸಿಗರ ಮನ ತಣಿಸಿ ಅಬ್ಬಿ ಅವರನ್ನು ಬೀಳ್ಗೊಡುತ್ತದೆ. ಮಡಿಕೇರಿಯ ಮಂಜನ್ನು ಕವಿ ಶ್ರೀ ಜಿ ಪಿ ರಾಜರತ್ನಮ್ ಅವರು `ಮಡಿಕೇರೀಲಿ ಮಂಜು’ ಎಂಬ ಕವಿತೆಯಲ್ಲಿ ವರ್ಣಿಸಿದ್ದಾರೆ.
ಮ್ಯೆಸೂರಿನಲ್ಲಿ ಅತಿ ವಿಜೃಂಭಣೆಯಿಂದ ನಡೆಯುವ ದಸರಾ, ಮಡಿಕೇರಿಯಲ್ಲಿಯೂ ನಡೆಯುತ್ತದೆ. ಮಡಿಕೇರಿಯ ತಲ ಕಾವೇರಿಯಲ್ಲಿ, ಕಾವೇರಿ ನದಿಯು ಹುಟ್ಟಿ ಅಲ್ಲಿಂದ ಸುಮಾರು ೧,೨ ಕಿ ಮಿ ವರೆಗೆ ಅಂತರ್ಗಾಮಿಯಾಗಿ ಹರಿದು ಮುಂದೆ ಭಾಗಮಂಡಲದಲ್ಲಿ ಪುನಃ ತನ್ನ ದರ್ಶನವನ್ನು ನೀಡುತ್ತದೆ. ಇದು ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ನದಿಯು ಸಹ ಅಗಿದೆ. ತಲ ಕಾವೇರಿಯಲ್ಲಿ ಪ್ರತಿ ವರ್ಷವು ತೀರ್ಥೊದ್ಭವವು ಸಂಭವಿಸುತ್ತದೆ.
ಇದರ ದರ್ಶನಕ್ಕೆ ಸಾವಿರರು ಭಕ್ತರು ಅಲ್ಲಿ ಬಂದು ಸೇರುತ್ತಾರೆ, ಸಂಘ ಸಂಸ್ಥೆಗಳು ತೀರ್ಥವನ್ನು ಜಿಲ್ಲೆಯ ಎಲ್ಲಾ ಭಾಗದ ಜನರಿಗೆ ತಲುಪಿಸಲು ಸಹಕರಿಸುತ್ತಾರೆ. ಈ ನದಿಯು ಮುಂದೆ ತಮೀಳುನಾಡು ರಾಜ್ಯದ ಮೂಲಕ ಬಂಗಾಳಕೊಲ್ಲಿ ಯನ್ನು ಸೇರುತ್ತದೆ. ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ತಾಣ. ಮಂದಲ್ ಪಟ್ಟಿ’. ಮಡಿಕೇರಿಯಿಂದ ೧೨ ಕಿ.ಮಿ ದೂರದಲ್ಲಿದೆ. ಗಾಳಿಬೀಡು ಸಮೀಪದ ಕಾಲೂರು ಎಂಬ ಗ್ರಾಮದಲ್ಲಿದೆ. ಬೆಟ್ಟ ಗುಡ್ಡಗಳಿಂದ ಕೂಡಿದ ಮಂದಲ್ ಪಟ್ಟಿ ಪ್ರವಾಸಿಗರ ನೆಚ್ಚಿನ ತಾಣ. ಇದಕ್ಕೆ ಇನ್ನೊಂದು ಹೆಸರು ಮುಗಿಲು ಪೇಟೆ.
ಕೊಡಗು ಜಿಲ್ಲೆಯ ಮಡಿಕೇರಿ ಯಲ್ಲಿರುವ ರಾಜಾಸೀಟ್ ಒಂದು ಪ್ರವಾಸಿ ತಾಣ. ಕೊಡಗಿನ ಪ್ರವಾಸಿ ತಾಣಗಳ ಪೈಕಿ ಮಡಿಕೇರಿಯಲ್ಲಿರುವ ರಾಜಾಸೀಟ್ ಪ್ರಮುಖ ಸಂದರ್ಶನ ತಾಣವಾಗಿದೆ.
ಇದು ನಿರ್ದಿಷ್ಟವಾದಿಯಲ್ಲಿ ಹೂಬಿಡುವ ಹೂಗಳ ಮತ್ತು ಕಾರಂಜಿಗಳ ಒಂದು ಉದ್ಯಾನವನ. ಈ ಕಾರಂಜಿಗಳು ಸಂಗೀತ ಮಯವಾಗಿದ್ದು ಬಣ್ಣ ಬಣ್ಣದ ನೀರನ್ನು ಸಂಗೀತದ ಲಯಕ್ಕೆ ತಕಂತೆ ಹಾರಿಸಲಾಗುತದೆ. ಮುಂಜಾನೆ,ಸಂಜೆ ಮಾತ್ರವಲ್ಲ ಮಟ ಮಟ ಮದ್ಯಾನದಲ್ಲಿಯೂ ಇಲ್ಲಿ ತಂಗಾಳಿ ಬೀಸುತಿರುತ್ತದೆ. ಹಾಗೆಯೇ ಉದ್ಯಾನವನಕ್ಕೆ ಕೊಡಗಿನ ರಾಜರ ನೆನಪಿಗೆ ಈ ಹೆಸರನ್ನು ಇಡಲಾಗಿದೆ. ಮಡಿಕೇರಿ ನಗರದ ಅಂಚಿನಲ್ಲಿ ನಿರ್ಮಾಣವಾಗುತ್ತಿರುವ ಈ ಉದ್ಯಾನವನದಿಂದ ಇಣುಕಿ ನೋಡಿದರೆ ಒಂದೆಡೆ ಮೈಜುಮ್ಎನಿಸುವ ಕಂದಕ ಕಂಡರೆ ಮತ್ತೊಂದೆಡೆ ಪ್ರಕೃರ್ತಿಯ ವಿಹಂಗಮ ನೋಟ ಮನವನ್ನು ಪುಳಕಗೊಳಿಸುತ್ತದೆ.

ರಾಜಾಸೀಟಿನಲ್ಲಿ ಸಣ್ಣದಾದ ಪೆವಿಲಿಯನ್ ಇದ್ದು ಇದನ್ನು ಕಲ್ಲು ಮತ್ತೆ ಗಾರೆಯಿಂದ ಮಾಡಲಾಗಿದೆ. ನಾಲ್ಕು ಕಂಬಗಳನ್ನು ಬೆಂಬಲಕ್ಕೆ ನಿರ್ಮಿಸಿ ಕಮಾನನ್ನು ಕೂಡ ನಿರ್ಮಿಸಲಾಗಿದೆ. ಕೊಡಗು ರಾಜರು ತಮ್ಮ ರಾಣಿಯರ ಜೊತೆ ಈ ಉದ್ಯಾನದಲ್ಲಿ ಸಮಯ ಕಳೆಯುತ್ತಿದ್ದರು. ಕೊಡಗು ರಾಜರ ನೆನಪನ್ನು ಈ ನಿರ್ಮಾಣವು ಮಾಡುತ್ತದೆ. ದೂರದಲ್ಲಿ ಮುಗಿಲೆತ್ತರದಲ್ಲಿ ಬೆಳೆದು ಪೈಪೋಟಿ ನೀಡಲೇನೋ ಎಂಬಂತೆ ನಿಂತಿರುವ ಗಿರಿ ಶಿಖರಗಳು. ಅವುಗಳ ನಡುವಿನ ಇಳಿ ಜಾರಿನಲ್ಲಿ ಬೆಳೆದು ನಿಂತ ಹೆಮ್ಮರಗಳು. ಕಾಫಿ,ಏಲಕ್ಕಿ,ತೋಟಗಳ ನಡುವಿನ ಗದ್ದೆ ಬಯಲುಗಳು. ಪಕ್ಕದ ಗುಡ್ಡದಲ್ಲಿ ಒಥೋತಾಗಿ ಎದ್ದು ನಿಂತ ಜನ ವಸತಿಗಳು. ಕೆಳಗಿನ ಕಂದಕದ ಅಂಕು ಡೊಂಕಾದ ರಸ್ತೆಯಲ್ಲಿ ಸಾಗಿ ಬರುವ ವಾಹನಗಳು. ಹೀಗೆ ಒಂದೆರಡಲ್ಲ ಹತ್ತಾರು ದೃಶ್ಯಗಳು ಕಣ್ಣಿಗೆ ರಾಜುತ್ತದೆ. ಆ ವಾತಾವರಣ ಮತ್ತು ಸಣ್ಣ ಹಾಗೂ ದೊಡ್ಡ ಪರ್ವತಗಳು ಮಂಜಿನಿಂದ ಕವಿದಿದ್ದು,ಈ ಪ್ರದೇಶವು ಕೊಡಗು ರಾಜರ ಪ್ರಜ್ಞೆಯನ್ನು ನೆನಪಿಸುತ್ತದೆ. ಸುತ್ತಲಿನ ಬಂಡೆ ಮತ್ತು ಪರ್ವತಗಳಿಗಿಂತ ಎತ್ತರದಲ್ಲಿ ನಿರ್ಮಾಣ ಮಾಡಲಾಗಿರುವುದರಿಂದ ರಾಜಾಸೀಟ್ನಲ್ಲಿ ಕೂತು ಸುತ್ತಲಿನ ಪರಿಸರವನ್ನು ನೋಡಿ ಆನಂದಿಸಬಹುದು. ಇಡೀ ಕಣಿವೆಗೆ ಬಂಗಾರದ ಕಿರಣಗಳನ್ನು ಹೊಮ್ಮಿಸುವ ಸೂರ್ಯೋದಯ ಮತ್ತು ಸೂರ್ಯಾಸ್ತ್ರವನ್ನು ನೋಡುವುದು ಒಂದು ಅನುಭವ. ಇಲ್ಲಿ ಮಕ್ಕಳು ಆಟ ಆಡುವುದಕ್ಕೆ ಕೂಡ ಸೌಲಭ್ಯ ಒದಗಿಸಲಾಗಿದೆ. ಮುಂಜಾನೆಯಲ್ಲಿ ಸದಾ ಮಡಿಕೇರಿಗೆ ಮುತ್ತಿಕ್ಕುವ ಮಂಜಿಗೆ ರಾಜಾಸೀಟು ದೃಶ್ಯ ಬರೆಯುವ ಕ್ಯಾನ್ವಾಸ್. ಗುಡ್ಡದಲ್ಲಿ ಬೆಳ್ಳಿಯಂತೆ ಸುರಿದು ಕಂದಕಗಳನ್ನೆಲ್ಲ ತುಂಬಿ ಮಂಜಿನ ಸಾಗರ ಸೃಷ್ಟಿಸಿ ನೋಡುಗರನ್ನು ತಬ್ಬಿಬ್ಬು ಗೊಳಿಸುವ ಆ ಗುಡ್ಡ ಈ ಗುಡ್ಡ ಮದ್ಯದ ಕಣಿವೆಗೆ ಸೇತುವೆ ಕಟ್ಟಿ ಒಂದೆಡೆಯಿಂದ ಮತ್ತೊಂದೆಡೆಗೆ ಲಾಗ ಹೊಡೆಯುವ ಮಂಜಿನ ಮಂಗನಾಟಕ್ಕೆ ಕಣಿವೆಗಳ ನಡುವಿನ ಹಾವು ಸರಿದಂತಿರುವ ರಸ್ತೆಯಲ್ಲಿ ಸಾಗಿ ಬರುವ ವಾಹನಗಳ ಮಂದ ದೀಪಗಳು ಹೊಸ ಅನುಭವಕ್ಕೆ ರಾಜಾಸೀಟ್ ಸಾಕ್ಷಿಯಾಗುತ್ತದೆ.
ಧನ್ಯವಾದಗಳು.
GIPHY App Key not set. Please check settings