in ,

ಬೇಸಿಗೆ ಶುರುವಾಯಿತು,ಬೇಸಿಗೆಯಲ್ಲಿ ಸೇವಿಸಬಹುದಾದ ಕೆಲವು ಅಹಾರಗಳು

ಎಳ ನೀರು
ಎಳ ನೀರು

ಬೇಸಿಗೆ ಶುರುವಾಯಿತು,ಇನ್ನೇನು ಏಷ್ಟು ನೀರು ಕುಡಿದರೂ ಸಾಕಾಗಲ್ಲ. ಉರಿ ಉರಿ, ದೇಹದ ಉಷ್ಣತೆ ಹೆಚ್ಚಾಗುತ್ತದೆ. ಆಹಾರ ತಿನ್ನಬೇಕು ಅನಿಸಿದರೂ ಸೆಖೆ ತಡೆಯಲು ಸಾಧ್ಯವೇ ಇಲ್ಲ.ಸೂರ್ಯದೇವ ಏನೋ ನಮ್ಮನ್ನು ಸುಟ್ಟು ಹಾಕುತ್ತಾನೆ ಅನ್ನಿಸುತ್ತೆ. ಕೆಲವೊಂದು ತಂಪಾದ ಆಹಾರಗಳು ಬೇಸಿಗೆ ಕಾಲದಲ್ಲಿ ಸಿಗುತ್ತೆ. ತಿಂದರೆ ಸ್ವಲ್ಪ ದೇಹಕ್ಕೆ ಅಬ್ಭಾ ಅನಿಸುತ್ತೆ. ಬೇಸಿಗೆ ಕಾಲದಲ್ಲಿ ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ. ಇದಕ್ಕಾಗಿಯೇ ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸಬೇಕು. ಇವು ದೇಹವು ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ರಕ್ಷಿಸುತ್ತದೆ. ಆಹಾರವನ್ನು ಸಹ ಸಮ್ಮರ್ ಫ್ರೆಂಡ್ಲಿ ಆಗಿ ಬದಲಾಯಿಸಬಹುದು.

ಬೇಸಿಗೆ ಕಾಲದ ಆಹಾರ
ಬೇಸಿಗೆ ಕಾಲದ ಆಹಾರ

ಎಳ ನೀರು : ಬಿಸಿಲಿನ ಝಳ ತಾಳಲಾರದೆ ತಂಪು ಪಾನೀಯ ಮೊರೆ ಹೋಗುತ್ತೇವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಪಾನೀಯಗಳಿಗಿಂತ ಎಳನೀರು ಸೇವನೆಗೆ ಮೊದಲ ಅದ್ಯತೆ ಕೊಡುವುದು ಒಳ್ಳೆಯದು ಮತ್ತು ವಿದೇಶಿ ಕಂಪನಿಗೆ ಹಣ ಕೊಡುವ ಬದಲು ನಮ್ಮ ರೈತರಿಗೆ ಉಪಯೋಗ ಮಾಡಿದರೆ ಇನ್ನೂ ಒಳ್ಳೆಯದು.

ಟೊಮೋಟೊ :
ಟೊಮೇಟೊದಲ್ಲಿ ವಿಟಮಿನ್ ಸಿ ಮತ್ತು ಲೈಕೋಪೀನ್’ನಂತಹ ಉತ್ಕರ್ಷಣ ನಿರೋಧಕಗಳು ತುಂಬಿರುತ್ತವೆ. ಇದು ಒಟ್ಟಾರೆ ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ಸಹಕಾರಿಯಾಗಿದೆ. ಆದ್ದರಿಂದ ಟೊಮೆಟೊವನ್ನು ಸಲಾಡ್ ಮಿಕ್ಸ್, ರಾಯಿತಾ, ಸ್ಯಾಂಡ್‌ವಿಚ್ ಅಥವಾ ಲೆಟಿಸ್ ರಾಪ್ಸ್’ನಲ್ಲಿ ಮಿಕ್ಸ್ ಮಾಡಿ ತಿನ್ನಬಹುದು. ಕಾಟೇಜ್ ಚೀಸ್ ಜೊತೆ ಸ್ಕಿವರ್ಸ್ ಆಗಿಯೂ ಸೇವಿಸಬಹುದು.

ತಂಪು ಬೀಜ :
ಬೇಸಿಗೆ ದೇಹದಲ್ಲಿ ಸಾಕಷ್ಟು ಶಾಖವನ್ನು ಉಂಟುಮಾಡಬಹುದು, ಇದು ಉಬ್ಬುವುದು ಮತ್ತು ಆಮ್ಲೀಯತೆಗೆ ಕಾರಣವಾಗುತ್ತದೆ. ಆದ್ದರಿಂದ ಸಬ್ಜಾ ಬೀಜದ ಪಾನೀಯಗಳು, ಕೆಫೀರ್ ಡ್ರಿಂಕ್ ಮತ್ತು ನಿಂಬೆ ನೀರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.

ಕಲ್ಲಂಗಡಿ ಹಣ್ಣು :
ಕಲ್ಲಂಗಡಿ ಹಣ್ಣಿನಲ್ಲಿ ನೀರು ಸಮೃದ್ಧವಾಗಿದ್ದು, ಹೈಡ್ರೇಶನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಲೈಕೋಪೀನ್ ಅನ್ನು ಸಹ ಹೊಂದಿರುತ್ತದೆ. ಇದು ಚರ್ಮದ ಕೋಶಗಳನ್ನು ಸೂರ್ಯನ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಕೂಡ ಪೆಕ್ಟಿನ್’ ನ ಉತ್ತಮ ಮೂಲವಾಗಿದೆ. ಸಾಮಾನ್ಯವಾಗಿ ಕಲ್ಲಂಗಡಿಯನ್ನು ಕಲ್ಲಂಗಡಿ ಬೀಜಗಳ ಒಳ ಭಾಗವನ್ನು ಪಾರ್ಚ್ ಮಾಡಿ ತಿನ್ನಲಾಗುತ್ತದೆ.ಈ ಬೀಜಗಳು ದೇಹವನ್ನು ತಂಪಾಗಿಸುತ್ತವೆ ಎಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಬೆಳಗ್ಗೆ ಮೊದಲಾರ್ಧದಲ್ಲಿ ತಿನ್ನಲಾಗುತ್ತದೆ. ಮಿಕ್ಸೆಡ್ ಫ್ರೂಟ್ ಸಲಾಡ್’ನಲ್ಲಿ ಸೇರಿಸಲಾಗುತ್ತದೆ. ಇನ್ನು ಹಣ್ಣನ್ನು ಸುಲಭವಾಗಿ ಜಾಮ್, ಜೆಲ್ಲಿ ಮತ್ತು ಮಾರ್ಮಲೇಡ್ ಆಗಿ ಸೇವಿಸಬಹುದು.

ಕಿತ್ತಳೆಹಣ್ಣು :
ಕಿತ್ತಳೆ ಹಣ್ಣು ಸೀಸನಲ್ ಸಮ್ಮರ್ ಫ್ರೂಟ್. ಇದು ವಿಟಮಿನ್ ಸಿ ಹೊಂದಿರುವುದರಿಂದ ಜನಪ್ರಿಯವಾಗಿದೆ. ಕಿತ್ತಳೆ ಹಣ್ಣನ್ನು ಸಿಪ್ಪೆ ಬಿಡಿಸಿ, ಹಾಗೆ ಇಡಿಯಾಗಿ ಸೇವಿಸಬಹುದು ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.ಬೇಸಿಗೆಯಲ್ಲಿ ನಮ್ಮ ದೇಹದಿಂದ ಹೊರಹೊಮ್ಮುವ ಬೆವರಿನ ಜತೆಗೆ ಪೊಟ್ಯಾಶಿಯಮ್ ಕೂಡ ನಾವು ಕಳೆದುಕೊಳ್ಳುತ್ತೇವೆ. ಇದಕ್ಕೆ ಪರಿಹಾರ ಕಿತ್ತಳೆ ಸೇವನೆ. ಈ ಹಣ್ಣಿನಲ್ಲಿ ಸಿಹಿ ಸಿಟ್ರಸ್ ಪೊಟ್ಯಾಸಿಯಮ್ ಸಮೃದ್ಧವಾಗಿರುತ್ತದೆ. ಶೇಕಡಾ 80 ರಷ್ಟು ನೀರಿನ ಪ್ರಮಾಣ ಹೊಂದಿರುವ ಕಿತ್ತಳೆ ನಿರ್ಜಲೀಕರಣ ನಿವಾರಣೆಗೂ ಸಹಕಾರಿಯಾಗಲಿದೆ.

ತರಕಾರಿ ಸಲಾಡ್ :
ಮೂಲಂಗಿ, ಮೆಂತೆ ಸೊಪ್ಪು, ಗಜ್ಜರಿ ( ಕ್ಯಾರೆಟ್ ) ಮುಂತಾದವುಗಳನ್ನು ಸೇರಿಸಿ ಸಲಾಡ್ ತಯಾರಿಸಿ ಸೇವಿಸಬೇಕು. ಇವುಗಳಿಂದ ನಿರ್ಜಲೀಕರಣ ನಿವಾರಣೆಗೆಯಾಗುತ್ತೆ.

ಮೊಸರು :
ಮೊಸರು ಹಾಗೂ ಇದರಿಂದ ತಯಾರಾಗುವ ಮಜ್ಜಿಗೆ ಬೇಸಿಗೆ ಕಾಲದಲ್ಲಿ ಅತೀ ಹೆಚ್ಚು ಸೇವನೆ ಉತ್ತಮ. ಇದರಿಂದ ದೇಹದ ಉಷ್ಟಾಂಶ ಸಮತೋಲನದಲ್ಲಿರುತ್ತೆ.

ತರಕಾರಿ-ಸೊಪ್ಪುಗಳು :
ಪಾಲಕ್, ಬ್ರೊಕೊಲಿ, ಎಲೆಕೋಸು, ಸೌತೆಕಾಯಿಯಂತಹ ಎಲೆಗಳನ್ನು ಹೊಂದಿರುವ ತರಕಾರಿಗಳಲ್ಲಿ ನೀರಿನ ಅಂಶ ಹೆಚ್ಚಿರುತ್ತದೆ. ಇವುಗಳನ್ನು ಹಾಗೆ ಸೇವಿಸಬಹುದು ಅಥವಾ ರಾಯಿತಾ, ಸಲಾಡ್, ಮಜ್ಜಿಗೆಯಲ್ಲಿ ಸೇರಿಸಿ ಅಥವಾ ಕೆನೆರಹಿತ ಹಾಲು ಅಥವಾ ಬಾದಾಮಿ ಹಾಲಿನಲ್ಲಿ ಸ್ಮೂದಿಯಾಗಿ ತಯಾರಿಸಲಾಗುತ್ತದೆ.

ನೀರಿನ ಬಳಕೆ :
ನೀರು, ನಿಂಬೆಹಣ್ಣು, ಸಬ್ಜಾ ಬೀಜಗಳಿಂದ ಮಾಡಿದ ಗಿಡಮೂಲಿಕೆಗಳ ಪಾನೀಯ ಅಥವಾ ಶಾಟ್ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ.ತಲೆನೋವು ಮತ್ತು ಬ್ರೈನ್ ಫಾಗ್’ನಿಂದ ದೂರವಿರಲು ಬೇಸಿಗೆಯಲ್ಲಿ ನೀರನ್ನು ಸೇವಿಸುವುದು ಕಡ್ಡಾಯವಾಗಿದೆ ಎಂಬುದನ್ನು ನೆನಪಿಡಿ. ಕನಿಷ್ಠ 3-4 ಲೀಟರ್ ನೀರನ್ನು ಕುಡಿಯುವುದನ್ನು ಮರೆಯಬೇಡಿ. ಈ ಸಮಯದಲ್ಲಿ ತೆಂಗಿನ ನೀರು, ಕೆಫೀರ್ ಡ್ರಿಂಕ್, ಸ್ಮೂದಿಗಳು, ತರಕಾರಿ ರಸಗಳು, ದಂಡೇಲಿಯನ್ ಚಹಾ ಮತ್ತು ವೇ ಸ್ಮೂದಿಗಳು ಸೇವಿಸುವುದು ಅತ್ಯಗತ್ಯ.

ಬೆರ್ರಿ ಹಣ್ಣುಗಳು :
ಬೆರ್ರಿ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವುದರಿಂದ ಬೇಸಿಗೆಯಲ್ಲಿ ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಅಧಿಕ ಶಾಖವಿರುವಾಗ ಇವುಗಳಲ್ಲಿರುವ ದ್ರವದ ಅಂಶ ನಮಗೆ ಸಹಾಯ ಮಾಡುತ್ತದೆ. ಬೆರ್ರಿ ಹಣ್ಣು ಹಾಗೇ ಸೇವಿಸಬಹುದು ಅಥವಾ ಸ್ಮೂದಿಯಾಗಿ ಸೇವಿಸಲಾಗುತ್ತದೆ.

ಹಾಲು ಅಥವಾ ತೆಂಗಿನಕಾಯಿ ನೀರಿನೊಂದಿಗೆ ಬೆರೆಸಿದ ಕೆಫೀರ್‌ನೊಂದಿಗೆ ತಯಾರಿಸಿದ ಪ್ರೋಬಯಾಟಿಕ್ ಪಾನೀಯವು ದ್ರವದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದ ಕರುಳಿನ ಸೂಕ್ಷ್ಮಜೀವಿಯನ್ನು ಹಾಗೇ ಇರಿಸುತ್ತದೆ.

ಕಾರ್ನ್:
ಕಾರ್ನ್ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ. ಅದು ಸೂರ್ಯನ ಕಿರಣಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ತರಕಾರಿಗಳು ಅಥವಾ ಸಲಾಡ್‌ಗಳಲ್ಲಿ ಸಿಹಿ ಕಾರ್ನ್ ಅನ್ನು ಸೇವಿಸಲಾಗುತ್ತದೆ.

ಸೇಬು :
ಬೇಸಿಗೆ ಕಾಲದಲ್ಲಿ ಸೇಬು ಸೇವನೆ ಉಪಯೋಗಕಾರಿ. ಇದು ಚರ್ಮ ರೋಗ ಹಾಗೂ ಆರೋಗ್ಯಕ್ಕೂ ಉತ್ತಮವಾಗಿದೆ.

ಕೆಲವೊಂದು ಬೇಸಿಗೆಯಲ್ಲಿ ಅತಿಯಾಗಿ ಸೇವಿಸದೇ ಇರುವುದು ಒಳ್ಳೆಯದು.

ಬೇಸಿಗೆ ಶುರುವಾಯಿತು,ಬೇಸಿಗೆಯಲ್ಲಿ ಸೇವಿಸಬಹುದಾದ ಕೆಲವು ಅಹಾರಗಳು
ಆಹಾರ

ಹಾಲಿನ ಉತ್ಪನ್ನಗಳು :
ಒಂದು ಲೋಟ ತಂಪಾದ ಹಾಲು ಬೇಸಿಗೆ ಕಾಲದಲ್ಲಿ ದೇಹಕ್ಕೆ ತುಂಬಾ ಆರಾಮ ನೀಡಬಹುದು. ಆದರೆ ಒಂದು ಸಲ ಹಾಲಿನ ತಂಪು ಹಾರಿದ ಬಳಿಕ ಹಾಲು ದೇಹವನ್ನು ಬಿಸಿ ಮಾಡಲು ಆರಂಭಿಸುವುದು. ಬೆಣ್ಣೆ ಮತ್ತು ಚೀಸ್ ಕೂಡ ದೇಹಕ್ಕೆ ಇದೇ ರೀತಿಯ ಪರಿಣಾಮ ಉಂಟು ಮಾಡುವುದು. ಹಾಲಿನ ಉತ್ಪನ್ನಗಳು ನಿಮ್ಮ ಗಂಟಲಿನ ಮೂಲಕ ಹೊಟ್ಟೆಯ ಒಳಗಡೆ ಸಾಗುವುದು. ಇದರ ಬಳಿಕ ದೇಹವನ್ನು ಬಿಸಿ ಮಾಡುವುದು. ಹಾಲಿನ ಉತ್ಪನ್ನಗಳು ದೇಹದಲ್ಲಿ ಉಂಟು ಮಾಡುವಂತಹ ಉಷ್ಣತೆಯು ಬೇರೆ ಮಸಾಲೆಗಳಂತೆ ಇರುವುದಿಲ್ಲ. ನಿಮಗೆ ಅತಿಯಾಗಿ ಬೆವರು ಬರುವುದಿಲ್ಲ. ಆದರೆ ಈ ಉಷ್ಣತೆಯಿಂದಾಗಿ ಹೊಟ್ಟೆಯ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ದೀರ್ಘಕಾಲದ ತನಕ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗುವುದು.

ಮಾವಿನ ಹಣ್ಣು :
ಬೇಸಿಗೆಯಲ್ಲಿ ಸಿಗುವಂತಹ ಹಣ್ಣು. ಆದರೆ ನಾವು ತಾಜಾ ಮಾವಿನ ಹಣ್ಣನ್ನು ತಿನ್ನಬೇಡಿ ಎಂದು ಖಂಡಿತವಾಗಿಯೂ ಹೇಳುವುದಿಲ್ಲ. ಆದರೆ ಮಾವಿನ ಹಣ್ಣನ್ನು ಅತಿಯಾಗಿ ಸೇವನೆ ಮಾಡಬೇಡಿ. ಒಂದು ದಿನಕ್ಕೆ ಒಂದು ಮಾವಿನ ಹಣ್ಣು ತಿಂದರೆ ಅದರಿಂದ ದೇಹಕ್ಕೆ ಕೂಡ ಒಳ್ಳೆಯದು. ಆದರೆ ನೀವು ಒಂದಕ್ಕಿಂತ ಹೆಚ್ಚು ಸೇವನೆ ಮಾಡಿದರೆ ಅದರಿಂದ ಹೊಟ್ಟೆಯ ಮೇಲೆ ಪರಿಣಾಮ ಬೀರುವುದು. ಅತಿಯಾಗಿ ಮಾವಿನ ಹಣ್ಣು ಸೇವನೆ ಮಾಡುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾದ ಪರಿಣಾಮವಾಗಿ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು.

ಮಸಾಲೆ :
ಬೇಸಿಗೆ ಕಾಲದಲ್ಲಿ ನಮಗೆ ಹೊರಗಿನ ಬಿಸಿಯನ್ನೇ ತಡೆದುಕೊಳ್ಳಲು ಸಾಧ್ಯ ಆಗುವುದಿಲ್ಲ. ಈ ಕಾರಣದಿಂದಾಗಿ ನಾವು ಸೇವಿಸುವಂತಹ ಆಹಾರ ಕ್ರಮದಲ್ಲಿ ಮಸಾಲೆ ಕಡಿಮೆ ಬಳಕೆ ಮಾಡಬೇಕು. ಹೆಚ್ಚು ಮಸಾಲೆ ಸೇವನೆ ಮಾಡುವುದರಿಂದ ಹೊಟ್ಟೆಗೆ ಇದನ್ನು ಜೀರ್ಣ ಮಾಡಿಕೊಳ್ಳಲು ತುಂಬಾ ಕಷ್ಟ ಆಗುವುದು.

ಚಪಾತಿ :
ಗೋಧಿಯಿಂದ ಮಾಡಲ್ಪಟ್ಟಿರುವಂತಹ ಚಪಾತಿಯು ದೇಹದಲ್ಲಿ ಉಷ್ಣತೆ ಹೆಚ್ಚು ಮಾಡುವುದು. ಇದರಿಂದಾಗಿ ಜೀರ್ಣಕ್ರಿಯೆ ಕಾರ್ಯವು ತುಂಬಾ ಕಷ್ಟವಾಗುವುದು. ಬೇಸಿಗೆಯಲ್ಲಿ ಚಪಾತಿಗೆ ಬದಲು ಅನ್ನ ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

ಐಸ್ ಕ್ರೀಮ್ :
ತಂಪಾಗಿದ್ದರೂ ಇದರಲ್ಲಿ ಕೆಲವೊಂದು ಅಂಶಗಳು ದೇಹವನ್ನು ಬಿಸಿ ಮಾಡುವಂತಹ ಗುಣ ಹೊಂದಿರುವುದು. ಬೇಸಿಗೆಯಲ್ಲಿ ಹೆಚ್ಚಾಗಿ ಜನರು ಐಸ್ ಕ್ರೀಮ್ ತಿನ್ನುವುದನ್ನು ಇಷ್ಟ ಪಡುವರು. ಯಾಕೆಂದರೆ ರಜಾ ಸಮಯದಲ್ಲಿ ತಿರುಗಾಡಲು ಹೋಗುವುದು ಹೆಚ್ಚು. ಅಲ್ಲಿ ಸೆಕೆ ತಡೆಯಲು ಆಗದೆ ಐಸ್ ಕ್ರೀಮ್ ಸೇವನೆಗೆ ಮೊರೆ ಹೋಗುವರು. ಬೇಸಿಗೆಯಲ್ಲಿ ತಂಪಾದ ಪಾನೀಯ ಸೇವನೆ ಅಧಿಕ ಮಟ್ಟದಲ್ಲಿ ಇರುವುದು. ಅದಾಗ್ಯೂ, ಸತ್ಯ ಏನೆಂದರೆ ತಂಪಾದ ಪಾನೀಯಗಳು ಬೇಗನೆ ದೇಹವನ್ನುಬೇಗನೆ ದೇಹವನ್ನು ಬಿಸಿ ಮಾಡುವುದು. ಇದರಿಂದ ಈ ರೀತಿಯ ಆಹಾರವನ್ನು ತ್ಯಜಿಸುವುದು ತುಂಬಾ ಒಳ್ಳೆಯದು.

ಸಾಸ್ :
ಮಕ್ಕಳಿಗೆ ಸಾಸ್ ಅಂದರೆ ತುಂಬಾ ಇಷ್ಟ. ಇದನ್ನು ಅವರನ್ನು ಹೆಚ್ಚಾಗಿ ಪ್ರತಿಯೊಂದು ಆಹಾರದಲ್ಲಿ ಬಳಸಿಕೊಳ್ಳುವರು. ಆದರೆ ಇದು ಒಳ್ಳೆಯದಲ್ಲ. ಬೇಸಿಗೆ ಸಮಯದಲ್ಲಿ ನೀವು ಸಾಸ್ ಗೆ ಗುಡ್ ಬೈ ಹೇಳಬೇಕು. ಯಾಕೆಂದರೆ ಇದರಲ್ಲಿ 360ರಷ್ಟು ಅಧಿಕ ಕ್ಯಾಲರಿ ಇದೆ. ಇದರಿಂದ ನಿಮಗೆ ತುಂಬಾ ಬಳಲಿಕೆ ಆಗಬಹುದು. ನೀವು ಸಾಸ್ ಬದಲಿಗೆ ಕೆಲವೊಂದು ನೈಸರ್ಗಿಕವಾಗಿ ಸಿಗುವ ಹಣ್ಣು ಹಾಗೂ ತರಕಾರಿ ಬಳಕೆ ಮಾಡಿಕೊಳ್ಳಿ. ಸಾಸ್ ಗೆ ಟೊಮೆಟೊವು ಒಳ್ಳೆಯ ಪರ್ಯಾಯ ಎಂದು ಪರಿಗಣಿಸಲಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೈಸೂರ್ ಸಂಸ್ಥಾನ

ಮೈಸೂರು ಸಂಸ್ಥಾನ

ಕೌರವ ದೊರೆ ಸುಯೋಧನ

ಕೌರವ ದೊರೆ ಸುಯೋಧನ