in

ರಾಧಾ ಕೃಷ್ಣ ಪವಿತ್ರ ಪ್ರೀತಿ

ರಾಧಾ ಕೃಷ್ಣ
ರಾಧಾ ಕೃಷ್ಣ

ರಾಧಾ – ಕೃಷ್ಣನ ಪ್ರೀತಿಗೆ ಸರಿಯಾದ ಪ್ರೀತಿ ಪ್ರಪಂಚದಲ್ಲಿ ಬೇರಾವ ಪ್ರೀತಿಯೂ ಇರಲು ಸಾಧ್ಯವಿಲ್ಲ. ರಾಧೆ ಕೃಷ್ಣನನ್ನು ವಿವಾಹವಾಗದೇ ತನ್ನ ಮನಸ್ಸಿನಲ್ಲಿ ಕೃಷ್ಣನಿಗೆ ಪತಿಯ ಸ್ಥಾನವನ್ನು ನೀಡಿದರೆ, ಕೃಷ್ಣ ಕೂಡ ರಾಧೆಯನ್ನು ತನ್ನ ಹೃದಯ ಪೂರ್ವಕವಾಗಿ ಸ್ವೀಕರಿಸಿದ್ದನು. ಪುರಾಣಗಳಲ್ಲಿ ಶ್ರೀಕೃಷ್ಣನನ್ನು ವಿಷ್ಣುವಿನ ಅವತಾರವೆಂದು ಹಾಗೂ ರಾಧೆಯನ್ನು ಲಕ್ಷ್ಮಿಯ ಅವತಾರವೆಂದು ಪರಿಗಣಿಸಲಾಗುತ್ತದೆ.
ಕೃಷ್ಣನಿಲ್ಲದ ರಾಧೆ ಅಪೂರ್ಣ ಮತ್ತು ರಾಧೆಯಿಲ್ಲದ ಕೃಷ್ಣ ಅಪೂರ್ಣ. ಕೃಷ್ಣನ ಜನನವನ್ನು ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿಯೆಂದು ಆಚರಿಸಿದರೆ, ರಾಧೆಯ ಜನನವನ್ನು ರಾಧಾಷ್ಟಮಿ ಎಂದು ಆಚರಿಸಲಾಗುತ್ತದೆ. ರಾಧಾಷ್ಟಮಿಯು ಉತ್ತರ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ರಾಧೆಯ ಬಗ್ಗೆ ನೀವು ಕೇಳಿರದ ಸಾಕಷ್ಟು ವಿಷಯಗಳಿವೆ. ಈ ವಿಷಯಗಳು ರಾಧೆಯ ಜೀವನದ ಮೇಲೆ ಪ್ರಭಾವವನ್ನು ಬೀರಿದೆ.
ವೃಷಭಾನು ಹಾಗೂ ಕೀರ್ತಿ ದೇವಿಯ ಪುತ್ರಿ ರಾಧೆಯು ಕೃಷ್ಣನಿಗಿಂತ 5 ವರ್ಷ ದೊಡ್ಡವಳಾಗಿದ್ದು, ಸಣ್ಣ ವಯಸ್ಸಿಂದಲೇ ಕೃಷ್ಣನೊಂದಿಗೆ ಪ್ರೇಮಕ್ಕೆ ಬಿದ್ದಿದ್ದಳು. ಬಾಲ್ಯದ ಆಟದಲ್ಲಿ ಕೃಷ್ಣನೊಂದಿಗೆ ವಿವಾಹವೂ ಆಗಿದ್ದಳು ಎಂದು ಪುರಾಣ ಹೇಳುತ್ತದೆ.

ರಾಧಾ ಮತ್ತು ಕೃಷ್ಣನ ಗಂದರ್ವ ವಿವಾಹ ನಡೆದಿತ್ತು ಎಂದು ಒಂದು ನಂಬಿಕೆ :

ರಾಧಾ ಕೃಷ್ಣ ಪವಿತ್ರ ಪ್ರೀತಿ
ರಾಧೆ ಕೃಷ್ಣ

ಗರ್ಗ ಸಂಹಿತೆಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಸ್ವತಃ ಬ್ರಹ್ಮ ದೇವನೇ ಭೂಮಿಗೆ ಬಂದು ರಾಧಾ ಮತ್ತು ಕೃಷ್ಣನಿಗೆ ಗಂಧರ್ವ ವಿವಾಹವನ್ನು ಮಾಡಿಸಿದನೆಂದು ಹೇಳಲಾಗಿದೆ. ಕೃಷ್ಣನ ತಂದೆ ಆಗಾಗ ಕೃಷ್ಣನನ್ನು ಭಂಡಿರ್‌ ಗ್ರಾಮಕ್ಕೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದರು. ಆಗ ಕೃಷ್ಣ ಮತ್ತು ರಾಧೆಯ ನಡುವೆ ಪರಿಚಯ ಉಂಟಾಗುತ್ತದೆ. ಒಮ್ಮೆ ಕೃಷ್ಣ ಭಂಡಿರ್‌ ಗ್ರಾಮಕ್ಕೆ ಬಂದಾಗ ಆಕಾಶದಲ್ಲಿ ಇದ್ದಕ್ಕಿದ್ದಂತೆ ಮಿಂಚು ಕಾಣಿಸಿಕೊಂಡು ಭೂಲೋಕವನ್ನು ಕತ್ತಲು ಮುಚ್ಚಿಕೊಳ್ಳುತ್ತದೆ. ಆ ಸಮಯದಲ್ಲಿ ಬ್ರಹ್ಮನು ಭೂಮಿಗೆ ಬಂದು ರಾಧಾ ಮತ್ತು ಬಾಲಾವಸ್ಥೆಯಲ್ಲಿದ್ದ ಕೃಷ್ಣನಿಗೂ ಗಂಧರ್ವ ವಿವಾಹವನ್ನು ಮಾಡಿಸಿದರೆಂಬ ಉಲ್ಲೇಖವಿದೆ.

ಕೃಷ್ಣ ಮತ್ತು ರಾಧೆ ಬಾಲ್ಯದಲ್ಲಿ ಸ್ನೇಹಿತರಾಗಿದ್ದರು. ವೃಂದಾವನದಲ್ಲಿ ರಾಸಲೀಲೆ ಮಾಡಿದ ಗೋಪಿಕೆಯರಲ್ಲಿ ರಾಧೆಯು ಒಬ್ಬಳಾಗಿದ್ದಳು. ಗೋಪಿಕೆಯರೆಲ್ಲರೂ ಕೃಷ್ಣನಿಗೆ ಹತ್ತಿರವಾಗಿದ್ದರೂ ರಾಧೆಯನ್ನು ಮಾತ್ರ ತುಂಬಾ ಪ್ರೀತಿಸುತ್ತಿದ್ದ. ಕೃಷ್ಣ ಕೊಳಲನ್ನು ನುಡಿಸುವಾಗ ರಾಧೆ ಹಾಡುತ್ತಾ ನೃತ್ಯ ಮಾಡುತ್ತಿದ್ದಳು. ಆದರೆ ಈ ಪ್ರೀತಿಯು ಪ್ರೌಢತೆಗೆ ಹೋಗಲೇ ಇಲ್ಲ. ಯಾಕೆಂದರೆ 12ನೇ ವಯಸ್ಸಿನಲ್ಲಿ ಕೃಷ್ಣನು ವೃಂದಾವನವನ್ನು ಬಿಟ್ಟು ಗುರುಕುಲ ಸೇರಲು ಹೋದ ಮತ್ತು ಮಥುರಾದಲ್ಲಿದ್ದ ತನ್ನ ಮಾವ ಕಂಸನ ವಧಿಸಲು ಹೋದ. ಕೆಲವೊಂದು ಪುರಾಣಗಳಲ್ಲಿ ಇರುವಂತೆ ರಾಧೆಯ ಮದುವೆಯು ಅತ್ಯಂತ ಶ್ರೀಮಂತ ವ್ಯಕ್ತಿ ಅಭಿಮನ್ಯು ಜತೆ ನಡೆದಿದೆ ಎಂದು ಹೇಳಲಾಗಿದೆ. ಕೆಲವು ಪುರಾಣಗಳಲ್ಲಿ ರಾಧೆಯ ಪತಿಯ ಹೆಸರು ಚಂದ್ರಹಾಸ ಎಂದು ತಿಳಿದುಬರುತ್ತದೆ. ವೃಂದಾವನದಲ್ಲಿ ರಾಧಾ-ಕೃಷ್ಣನ ಮದುವೆಯು ತುಂಬಾ ಗೌಪ್ಯವಾಗಿ ನಡೆದಿತ್ತು ಮತ್ತು ಬ್ರಹ್ಮನು ಪೌರೋಹಿತ್ಯವನ್ನು ವಹಿಸಿದ್ದ ಎಂದು ಕೆಲವೊಂದು ಪುರಾಣಗಳು ಹೇಳುತ್ತವೆ.

ರಾಧೆಯ ಜೀವನ :

ರಾಧಾ ಕೃಷ್ಣ ಪವಿತ್ರ ಪ್ರೀತಿ
ರಾಧಾ

ರಾಧೆ ಬರ್ಸಾನಾದ ವೃಷಭಾನು ಎನ್ನುವ ಗೋಪಿಯ ಮನೆಯಲ್ಲಿ ಜನಿಸಿದವಳು. ಇನ್ನು ಕೆಲವರು ರಾಧೆ ಯಮುನಾ ಬಳಿಯ ರಾವಲ್‌ ಗ್ರಾಮದಲ್ಲಿ ಜನಿಸಿದವಳೆಂದು ಹೇಳುತ್ತಾರೆ. ವಾಸ್ತವವಾಗಿ ರಾಧೆ ಕೃಷ್ಣನ ಮಾವನನ್ನು ವಿವಾಹವಾದಳು. ಅಂದರೆ ಕೃಷ್ಣನ ತಾಯಿ ಯಶೋಧೆಯ ಸಹೋದರನಾದ ರಾಯನ್‌ನ್ನು ರಾಧೆ ವಿವಾಹವಾಗುತ್ತಾಳೆ.ರಾಧಾ ಮತ್ತು ರುಕ್ಮಿಣಿ ಇಬ್ಬರೂ ಒಬ್ಬರೆ ಕೆಲವರು ಹೇಳುವ ಪ್ರಕಾರ, ರಾಧೆ ಎನ್ನುವ ಮಹಿಳೆಯೇ ಇರಲಿಲ್ಲವಂತೆ. ರಾಧಾನೇ ರುಕ್ಮಿಣಿ ಮತ್ತು ರುಕ್ಮಿಣಿಯೇ ರಾಧಾ ಎಂದು ಹೇಳಲಾಗುತ್ತದೆ. ರಾಧಾಳಿಗೆ ಯಾವುದೇ ಪ್ರತ್ಯೇಕ ಅಸ್ಥಿತ್ವವಿಲ್ಲವೆಂಬ ನಂಬಿಕೆಯಿದೆ. ರುಕ್ಮಿಣಿಯನ್ನು ಕೂಡ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ ಹಾಗೂ ರಾಧೆಯನ್ನು ಕೂಡ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅಷ್ಟು ಮಾತ್ರವಲ್ಲ, ರಾಧಾ ಕೂಡ ಶುಕ್ಲ ಪಕ್ಷದಲ್ಲಿ ಜನಿಸಿದಳೆಂದು ಮತ್ತು ರುಕ್ಮಿಣಿ ಕೂಡ ಶುಕ್ಲ ಪಕ್ಷದಲ್ಲಿ ಜನಿಸಿದಳೆಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಇಬ್ಬರೂ ಒಬ್ಬರೇ ಎಂದು ಪರಿಗಣಿಸಲಾಗುತ್ತದೆ. ಕೃಷ್ಣ ವೃಂದಾವನ ತೊರೆದ ಬಳಿಕ, ತಾಯಿಯ ಬಲವಂತಕ್ಕೆ ರಾಧೆ ವಿವಾಹವಾದಳು. ಆಕೆಗೆ ಒಂದು ಮಗುವೂ ಇತ್ತು. ಜಗತ್ತಿನಲ್ಲೇ ಅತಿ ಸುಂದರಿ ರಾಧೆ ಎಂಬ ಮಾತಿತ್ತು. ರಾಧೆ, ರಾಧಿಕಾ, ಮಾಧವಿ, ಕೇಶವಿ, ರಸೇಶ್ವರಿ, ರಾಧಾರಾಣಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ರಾಧೆಯನ್ನು ಹಿಂದೂಗಳು, ಅದರಲ್ಲೂ ವೈಷ್ಣವರು ಪ್ರೀತಿಯ ದೇವತೆ ಎಂದು ಪೂಜಿಸುತ್ತಾರೆ. ಆಕೆ ಕೃಷ್ಣನ ಶಾಶ್ವತ ಸಂಗಾತಿಯಾಗಿದ್ದು, ಗೋಕುಲದಲ್ಲಿ ಕೃಷ್ಣನ ಜೊತೆ ಸದಾ ವಾಸವಿರುತ್ತಾಳೆ ಎಂಬ ನಂಬಿಕೆಯಿದೆ. ರಾಧೆಯ ಹೆಸರನ್ನು ಭಜಿಸುವವರೊಂದಿಗೆ ಕೃಷ್ಣನಿರುತ್ತಾನೆ.

ರಾಧೆಕೃಷ್ಣರ ಪ್ರೇಮ :

ರಾಧಾ ಕೃಷ್ಣ ಪವಿತ್ರ ಪ್ರೀತಿ
ರಾಧಾ ಕೃಷ್ಣ

ರಾಧಾ ಮತ್ತು ಕೃಷ್ಣ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ರಾಧೆಯ ಮನೆಯವರಿಗೆ ವಿಷಯ ತಿಳಿದಾಗ ರಾಧಾಳನ್ನು ಬಂಧಿಸುತ್ತಾರೆ. ಕೃಷ್ಣ ರಾಧೆಯನ್ನು ಬಂಧನದಿಂದ ಮುಕ್ತಗೊಳಿಸಿ ಯಶೋಧೆ ಬಳಿ ಕರೆದುಕೊಂಡು ಹೋಗುತ್ತಾನೆ. ಯಶೋಧೆ ಅವರಿಬ್ಬರಿಗೂ ಬುದ್ಧಿವಾದವನ್ನು ಹೇಳಿ, ಈ ರೀತಿ ಮಾಡುವುದು ಸರಿಯಲ್ಲವೆಂದು ವಿವರಿಸುತ್ತಾರೆ. ನಂತರ ರಾಧೆ ಮತ್ತು ಗರ್ಗ ಕೃಷ್ಣನ ಜನನದ ಕಾರಣವನ್ನು ತಿಳಿಸುತ್ತಾರೆ. ಕೃಷ್ಣನನ್ನು ಮಥುರಾಗೆ ಕರೆಸಿದಾಗ, ರಾಧಾಳಿಗೆ ತಾನು ಮಥುರಾಕ್ಕೆ ಹೋಗಿ ಹಿಂದಿರುತ್ತೇನೆಂದು ಭರವಸೆಯನ್ನು ನೀಡಿ ಹೋದವನು ಹಿಂದಿರುಗಿ ಬರುವುದಿಲ್ಲ. ಇದೇ ರಾಧಾ ಮತ್ತು ಕೃಷ್ಣನ ಕೊನೆಯ ಭೇಟಿಯಾಗಿತ್ತು.
ರಾಧೆ ಭೂಮಿಯನ್ನು ತೊರೆಯುವ ಮುನ್ನ ಕೃಷ್ಣನನ್ನು ಭೇಟಿಯಾಗಬೇಕೆಂದು ಆಸೆ ಹೊಂದಿದ್ದಳು. ರಾಧೆ ಕೃಷ್ಣನ ಮುರುಳಿ ರಾಗವನ್ನು ಅಥವಾ ಕೊಳಲಿನ ನಿನಾದವನ್ನು ಕೇಳಿ ಭೂಮಿಯನ್ನು ತೊರೆಯಲು ಇಷ್ಟ ಪಡುವುದಾಗಿ ಕೃಷ್ಣನಿಗೆ ತಿಳಿಸುತ್ತಾಳೆ. ಕೃಷ್ಣ ನಂತರ ಮುರುಳಿಧರನಾಗಿ ಗೋಲೋಕಕ್ಕೆ ಬರುತ್ತಾನೆ. ರಾಧೆಯು ತನ್ನಾಸೆಯಂತೆ ಮುರುಳಿ ನಾದವನ್ನು ಕೇಳಿ ದೇಹವನ್ನು ತ್ಯಜಿಸುತ್ತಾಳೆ. ತನ್ನ ಪ್ರೇಯಸಿಯ ಮರಣವನ್ನು ಸಹಿಸದ ಕೃಷ್ಣ ಕೊಳಲನ್ನು ಮುರಿದು ಪೊದೆಗೆ ಎಸೆಯುತ್ತಾನೆ. ಅಂದಿನಿಂದ ಕೃಷ್ಣನು ಕೊಳಲೂದುವುದನ್ನೇ ನಿಲ್ಲಿಸುತ್ತಾನೆ. ಕೃಷ್ಣನ ಆರಾಧಕರಾದ ಹಾಲು ಮಾರುವ ಗೋಪಿಯರ ಮುಖ್ಯಸ್ಥೆಯಾಗಿದ್ದಳು ರಾಧೆ. ಸ್ವಾರ್ಥರಹಿತ ಭಕ್ತಿ, ಪ್ರೀತಿಯ ಉದಾಹರಣೆಯಾಗಿರುವ ರಾಧೆ ಕೃಷ್ಣನ ಅಂತಃಶಕ್ತಿಯಾಗಿದ್ದಾಳೆ. ರಾಧೆಯನ್ನು ಕೃಷ್ಣನ ಸ್ತ್ರೀರೂಪ ಎಂದು ಪರಿಗಣಿಸಲಾಗುತ್ತದೆ. ಪ್ರತಿವರ್ಷ ರಾಧೆಯ ಹುಟ್ಟುಹಬ್ಬವನ್ನು ರಾಧಾಷ್ಟಮಿ ಎಂದು ಆಚರಿಸಲಾಗುತ್ತದೆ. ಕೃಷ್ಣಾಷ್ಟಮಿಯಾಗಿ 15 ದಿನಕ್ಕೆ ಇದನ್ನು ಆಚರಿಸಲಾಗುತ್ತದೆ.

ಕೃಷ್ಣನ ಪ್ರೇಮದಲ್ಲಿ ಮುಳುಗಿದ್ದ ರಾಧೆ ತನ್ನನ್ನು ವಿವಾಹವಾಗುವಂತೆ ಕೇಳಿದಾಗ, ವಿವಾಹಕ್ಕೆ ಎರಡು ಆತ್ಮಗಳು ಬೇಕು, ನಮ್ಮಿಬ್ಬರದೂ ಒಂದೇ ಆತ್ಮ ಎರಡು ದೇಹವಾಗಿರುವಾಗ ನನ್ನನ್ನೇ ನಾನು ಹೇಗೆ ವಿವಾಹವಾಗಲಿ ಎಂದನಂತೆ ಕೃಷ್ಣ. ಕೃಷ್ಣ ರಾಧೆಯ ಸಂಬಂಧ ಅತ್ಯುನ್ನತ ಪ್ರೇಮಕ್ಕೆ ಉದಾಹರಣೆ. ಅಲ್ಲಿ ಭಕ್ತಿಯಿದೆ, ಪ್ರೀತಿಯಿದೆ, ತ್ಯಾಗವಿದೆ, ಬದ್ಧತೆಯಿದೆ… ಕೃಷ್ಣನಿಗೆ ಸಹಸ್ರಾರು ಪತ್ನಿಯರಿದ್ದಾಗಲೂ ಕೇವಲ ಪ್ರೇಮಿಯಾಗಿಯೇ ಉಳಿದ ರಾಧೆ-ಕೃಷ್ಣನ ಪ್ರೇಮ ಇಂದಿಗೂ ಜೀವಂತವಾಗಿದೆ.
ರಾಧಾ ಬದುಕಿದ್ದ ಬರ್ಸಾನಾದಲ್ಲಿ ಇಂದಿಗೂ ಲಾಠಿಮಾರ್ ಹೋಳಿ ಆಚರಿಸಲಾಗುತ್ತದೆ. ಹಿಂದೆ ಕೃಷ್ಣ ಬರ್ಸಾನಾಕ್ಕೆ ಹೋಗಿ ರಾಧೆ ಹಾಗೂ ಇತರೆ ಗೋಪಿಕೆಯರನ್ನು ಪೀಡಿಸಿದ್ದ ಕಾರಣ ಅವರೆಲ್ಲ ಕೋಲು ಹಿಡಿದು ಕೃಷ್ಣನನ್ನು ಅಟ್ಟಿಸಿಕೊಂಡು ಹೋಗಿದ್ದರಂತೆ. ಇಂದಿಗೂ ಈ ಆಚರಣೆ ಜಾರಿಯಲ್ಲಿದ್ದು, ಹೋಳಿಯ ಮುನ್ನಾ ದಿನ ನಂದ ಹಳ್ಳಿಯಿಂದ ಯುವಕರು ಬರ್ಸಾನಾಕ್ಕೆ ಹೋಗುತ್ತಾರೆ. ಬರ್ಸಾನಾದ ಯುವತಿಯರು ಕೋಲು ಹಿಡಿದು ಇವರನ್ನು ಬೆರೆಸಲು ನಿಂತಿರುತ್ತಾರೆ. ಈ ಯುವತಿಯರ ಕೈಗೆ ಸಿಕ್ಕಿಬಿದ್ದ ಹುಡುಗರಿಗೆ ಸ್ತ್ರೀಯ ವೇಷ ಧರಿಸಿ ಎಲ್ಲರ ನಡುವೆ ನರ್ತಿಸುವಂತೆ ಮಾಡಲಾಗುತ್ತದೆ.
ವೃಂದಾವನದಲ್ಲಿ ರಾಧಾ ಕೃಷ್ಣ ಪ್ರೇಮಮಂದಿರವಿದ್ದು, ರಾಧೆಯ ಆರಾಧಕರ ಬಹಳಷ್ಟು ಜನರಿದ್ದಾರೆ. ವೃಂದಾವನದ ಗೋಪಿಯರ ರಾಣಿಯಾಗಿದ್ದ ಆಕೆಯನ್ನು ವೃಂದಾವನೇಶ್ವರಿ ಎಂದೂ ಕರೆಯಲಾಗುತ್ತದೆ.

ಸೀತೆ ಹಾಗೂ ರಾಧೆಯರ ವ್ಯಕ್ತಿತ್ವ ಸಂಪೂರ್ಣ ವಿಭಿನ್ನವಾದುದಾದರೂ ಇಬ್ಬರನ್ನೂ ಹಿಂದೂ ಧರ್ಮ ಆರಾಧಿಸುತ್ತದೆ. ಸೀತೆಯು ರಾಣಿಯಾಗಿದ್ದು, ಪತಿಗೆ ತಕ್ಕ ಪತ್ನಿಯಾಗಿ, ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುವವಳಾಗಿದ್ದರೆ, ರಾಧೆಯು ಕೇವಲ ತನ್ನ ಪ್ರೇಮಿಯೊಂದಿಗಿನ ಸಂಬಂಧದಿಂದಾಗಿ ಗುರುತಿಸಿಕೊಂಡವಳು. ಕೃಷ್ಣನನ್ನು ವಿವಾಹವಾಗದೆಯೂ ತೀವ್ರವಾಗಿ ಪ್ರೀತಿಸಿ ಸೈ ಎನಿಸಿಕೊಂಡವಳು. ಇವರು ನೈತಿಕತೆಯ ಎರಡು ತುದಿಯಲ್ಲಿದ್ದರೂ ಇಬ್ಬರನ್ನೂ ಹಿಂದೂ ಧರ್ಮ ಗೌರವಿಸುವ ಜೊತೆಗೆ, ದೇವಿಯರ ರೂಪವಾಗಿ ನೋಡುತ್ತದೆ

ರಾಧಿಕಾ, ರಾಧಾರಾಣಿ ಮತ್ತು ರಾಧಿಕಾ ರಾಣಿ ಎಂದೂ ಕರೆಯಲ್ಪಡುವ ರಾಧೆಯನ್ನು ಬಹುತೇಕ ಯಾವಾಗಲೂ ಕೃಷ್ಣನ ಪಕ್ಕದಲ್ಲಿ ಚಿತ್ರಿಸಲಾಗುತ್ತದೆ ಮತ್ತು ಪ್ರಮುಖವಾಗಿ ರಾಧೆಯನ್ನು ಮೂಲ ದೇವತೆ ಅಥವಾ ಶಕ್ತಿಯೆಂದು ಪರಿಗಣಿಸುವ ಇಂದಿನ ವಲ್ಲಭ ಹಾಗೂ ಗೌಡೀಯ ವೈಷ್ಣವ ಪಂಥಗಳ ದೇವತಾಶಾಸ್ತ್ರದಲ್ಲಿ ಚಿತ್ರಿಸಲಾಗಿದೆ. ನಿಂಬಾರ್ಕ ಸಂಪ್ರದಾಯದಲ್ಲಿ ರಾಧೆಯು ಪ್ರಧಾನ ಪೂಜಾ ದೇವತೆ ಕೂಡ ಆಗಿದ್ದಾಳೆ, ಏಕೆಂದರೆ ಈ ಸಂಪ್ರದಾಯದ ಸ್ಥಾಪಕ ನಿಂಬಾರ್ಕನು ರಾಧೆ ಹಾಗೂ ಕೃಷ್ಣ ಒಟ್ಟಾಗಿ ಪರಮ ಸತ್ಯವನ್ನು ನಿರ್ಮಿಸುತ್ತಾರೆ ಎಂದು ಘೋಷಿಸಿದನು.

ರಾಧೆ ಮತ್ತು ಕೃಷ್ಣನ ಪ್ರೀತಿಯು ದೈಹಿಕ ಸಂಬಂಧವನ್ನು ಮೀರಿದಾಗಿತ್ತು ಎನ್ನುವ ಸಂದೇಶವನ್ನು ಸಾರುತ್ತದೆ. ರಾಧೆ ಮತ್ತು ಕೃಷ್ಣ ಯಾವತ್ತೂ ಪತಿ-ಪತ್ನಿಯಾಗಿರಲಿಲ್ಲ. ಮದುವೆಯ ಬಂಧನದಲ್ಲೂ ಅವರು ಬಂಧಿಯಾಗಿರಲಿಲ್ಲ. ಆದರೂ ಅವರಿಬ್ಬರೂ ಪ್ರೇಮಿಗಳಾಗಿದ್ದರು. ಅವರಿಬ್ಬರ ಪ್ರೀತಿಯಲ್ಲಿ ಯಾವುದೇ ದೈಹಿಕ ಆಕರ್ಷಣೆ ಇಲ್ಲದೆ ಇದ್ದ ಕಾರಣದಿಂದಾಗಿ ಪ್ರೀತಿಯು ತುಂಬಾ ಪವಿತ್ರವಾಗಿತ್ತು.ಇದು ನಿಷ್ಕಾಮ ಮಟ್ಟದ ಪ್ರೀತಿಯಾಗಿತ್ತು. ಕೃಷ್ಣನಿಗೆ ರಾಧೆಯ ಭಕ್ತಭಾವವೂ ಅಭೂತಪೂರ್ವಾಗಿತ್ತು.

ಸಾವಿರಾರು ವರ್ಷಗಳು ಕಳೆದರೂ ಇಂದಿಗೂ ನಾವು ರಾಧಾ-ಕೃಷ್ಣರನ್ನು ಪೂಜಿಸುತ್ತೇವೆ. ರಾಧಾ-ಕೃಷ್ಣರ ಹೆಸರು ಜಗತ್ತು ಇರುವ ತನಕ ಅಜರಾಮರವಾಗಿರುತ್ತದೆ. ಇದರಿಂದಾಗಿಯೇ ರಾಧಾ-ಕೃಷ್ಣರ ಪ್ರೀತಿಯು ಯಾವತ್ತೂ ಪವಿತ್ರವೆಂದು ಭಾವಿಸಲಾಗುತ್ತಿದೆ.

ಸಾವಿರಾರು ವರ್ಷಗಳು ಕಳೆದರೂ ಇಂದಿಗೂ ನಾವು ರಾಧಾ-ಕೃಷ್ಣರನ್ನು ಪೂಜಿಸುತ್ತೇವೆ. ರಾಧಾ-ಕೃಷ್ಣರ ಹೆಸರು ಜಗತ್ತು ಇರುವ ತನಕ ಅಜರಾಮರವಾಗಿರುತ್ತದೆ. ಇದರಿಂದಾಗಿಯೇ ರಾಧಾ-ಕೃಷ್ಣರ ಪ್ರೀತಿಯು ಯಾವತ್ತೂ ಪವಿತ್ರವೆಂದು ಭಾವಿಸಲಾಗುತ್ತಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸತಿ ಸಾವಿತ್ರಿ

ಸತಿ ಸಾವಿತ್ರಿ ಕಥೆ

ಸಕ್ಕರೆ ಖಾಯಿಲೆ

ಮಧುಮೇಹ /ಸಕ್ಕರೆ ಖಾಯಿಲೆ ಕೆಲವೊಂದು ಸಲಹೆಗಳು