in ,

ಕರ್ನಾಟಕ ಏಕೀಕರಣದ ನಂತರ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ

ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ
ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ

ರಾಜಕೀಯ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ, ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಹೇಳಿದರು.

ತಾಲ್ಲೂಕಿನ ಸೀಬಾರದ ಎಸ್.ಎನ್. ಸ್ಮಾರಕದ ಆವರಣದಲ್ಲಿ ಗುರುವಾರ ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ `ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಎಸ್. ನಿಜಲಿಂಗಪ್ಪ ಅವರ ಪಾತ್ರ ಕುರಿತು ಉಪನ್ಯಾಸ ನೀಡಿದರು.

ಕರ್ನಾಟಕ ಎಂಬ ಪದವನ್ನು ಉತ್ತರ ಕರ್ನಾಟಕದವರು ಮಾತ್ರ ಹೆಚ್ಚಾಗಿ ಬಳಸುತ್ತಿದ್ದರು. ಮದ್ರಾಸ್ ಪ್ರಾಂತ್ಯ, ಹೈದರಾಬಾದ್ ಪ್ರಾಂತ್ಯ, ಮುಂಬೈ ಪ್ರಾಂತ್ಯ, ಮೈಸೂರು ಪ್ರಾಂತ್ಯಗಳಾಗಿ ನಾಲ್ಕು ವಿಭಾಗಗಳಾಗಿ ಹರಿದು ಹಂಚಿಹೋಗಿದ್ದ ಪ್ರದೇಶಗಳನ್ನು ಒಂದುಗೂಡಿಸುವ ಸಲುವಾಗಿ ಗಣನೀಯ ಸೇವೆ ಸಲ್ಲಿಸಿದವರಲ್ಲಿ ನಿಜಲಿಂಗಪ್ಪ ಅವರು ಮೊದಲಿಗರು.

ಪ್ರಬಲವಾಗಿ ಕನ್ನಡ ನಾಡು ಒಂದಾಗಬೇಕು ಎನ್ನುವ ದೃಷ್ಟಿಯಿಂದ 1915ರಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್‌ನ ಮೊದಲ ಸಮ್ಮೇಳನದಲ್ಲಿ ಕೂಡ ಈ ವಿಷಯಕ್ಕೆ ಒಮ್ಮತ ದೊರೆಯಿತಾದರೂ ಅದು ಈಡೇರಲಿಲ್ಲ ಎಂದು ತಿಳಿಸಿದರು.

ಕರ್ನಾಟಕ ಏಕೀಕರಣದ ನಂತರ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ
ಎಸ್.ನಿಜಲಿಂಗಪ್ಪ

1947ರಲ್ಲಿ ಕರ್ನಾಟಕ ಇನ್ನೂ ಪ್ರತ್ಯೇಕ ರಾಜ್ಯವಾಗಿರಲಿಲ್ಲ. ಆದರೆ, ಆ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ ಅವರ ಭಾಷಣ ನಿಜಲಿಂಗಪ್ಪನವರ ಮನಸ್ಸು ಮುಟ್ಟುವಲ್ಲಿ ಯಶಸ್ವಿಯಾಯಿತು. ಇತ್ತ ಉತ್ತರ ಕರ್ನಾಟಕದ ಮಂದಿಗೂ ಏಕೀಕರಣವಾಗಬೇಕು ಎನ್ನುವ ಬಯಕೆಯಿತ್ತು.

ಬೆಳಗಲ್ ರಾಮರಾಯರು, ಹೊನ್ನಾಪುರಮಠ, ಹುಲ್ಲೂರು ಶ್ರೀನಿವಾಸ್ ಜೋಯಿಸ್ ಸೇರಿದಂತೆ ಅನೇಕರು ಸುದೀರ್ಘ ಹೋರಾಟ ಮಾಡಿದ ಮೇಲೆ ಹೊಸ ತಿರುವು ಪಡೆದುಕೊಂಡಿತು. ಸ್ವಾತಂತ್ರ್ಯ ನಂತರ ಆಂಧ್ರಪ್ರದೇಶ ಪ್ರತ್ಯೇಕ ರಾಜ್ಯವಾಗಬೇಕು ಎಂದು ಅಲ್ಲಿನ ಪಟ್ಟಿಶ್ರೀರಾಮುಲು ಅಮರಣಾಂತ ಉಪವಾಸ ಕೈಗೊಂಡು ಮರಣ ಹೊಂದಿದ ಮೇಲೆ ಪ್ರತಿಭಟನೆಯ ಕಾವು ಹೆಚ್ಚಿತ್ತು.

ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಆಗಿನ ಪ್ರಧಾನಿಯಾಗಿದ್ದ ದಿವಂಗತ ಜವಹರ್‌ಲಾಲ್ ನೆಹರು ಜೆವಿಪಿ-ಜವಾಹರ್‌ಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಪಟ್ಟಾಭಿ ಸೀತಾರಾಮ್‌ರಾವ್ ಸಮಿತಿ ರಚಿಸಿ 1956ರ ನ. 1ರಂದು ಭಾಷಾವಾರು ಪ್ರಾಂತ್ಯಗಳ ಸ್ಥಾಪನೆಗೆ ಅನುವು ಮಾಡಿಕೊಟ್ಟರು. ದೇಶದ ಇತರೆ ಎಲ್ಲ ರಾಜ್ಯಗಳಂತೆ ಕರ್ನಾಟಕ ಕೂಡ ಏಕೀಕರಣ ರಾಜ್ಯವಾಯಿತು ಎಂದು ತಿಳಿಸಿದರು.

ಕನ್ನಡದ ಮೇಲೆ ಕನಿಷ್ಠ ಅಭಿಮಾನ ತೋರಿಸಬೇಕಾಗಿದೆ. ಕೇವಲ ಬ್ಯಾನರ್, ಫ್ಲೇಕ್ಸ್‌ನಲ್ಲಿ ಕನ್ನಡ ಅಭಿಮಾನ ತೋರಿಸದರೆ ಸಾಲದು. ಹೃದಯದ ಅಂತರಾಳದಿಂದ ಕನ್ನಡ ಅಭಿಮಾನ ಮೂಡಬೇಕು. ಇಂದಿನ ಕೆಲವು ಶಿಕ್ಷಣ ತಜ್ಞರು ಅಸಂಬದ್ಧ ಸಿದ್ಧಾಂತಗಳನ್ನು ತಂದು ಕನ್ನಡ ಬೆಳೆಸುತ್ತೇವೆ ಎನ್ನುತ್ತಾರೆ. ಕನ್ನಡದ ಆಹ್ವಾನ ಪತ್ರಿಕೆಗಳಲ್ಲಿ ಇಂಗ್ಲಿಷ್ ಹೆಸರು, ವಿಳಾಸ ಬರೆದುಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಎಸ್ಸೆನ್ ಮೆಮೋರಿಯಲ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಚ್. ಹನುಮಂತಪ್ಪ ಮಾತನಾಡಿ, ನಿಜಲಿಂಗಪ್ಪ ಕರ್ನಾಟಕ ಏಕೀಕರಣದ ರೂವಾರಿಯಾಗಿದ್ದು, ಅವರು ಶ್ರಮಿಸದಿದ್ದರೆ ಇಷ್ಟು ಬೇಗ ಏಕೀಕರಣವಾಗುತ್ತಿರಲಿಲ್ಲ. 1946ರಲ್ಲಿ ಕನ್ನಡದ ಜನ ಒಟ್ಟಾಗಿ ಬಾಳಬೇಕೆನ್ನುವ ದೃಷ್ಟಿಯಿಂದ ಅಖಿಲ ಕರ್ನಾಟಕ ಏಕೀಕರಣ ಪರಿಷತ್ ಸ್ಥಾಪಿಸಿದರು. ಆಗಿನ ಪ್ರಧಾನಿ ನೆಹರು ರಾಜ್ಯದ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡುತ್ತೇನೆ ಎಂದರೂ ಸಹ ಕರ್ನಾಟಕ ಏಕೀಕರಣವಾದ ಮೇಲೆ ನನಗೆ ಅಧಿಕಾರ ಕೊಡಿ ಎಂದು ಹೇಳಿದ ಮುತ್ಸದಿ ರಾಜಕಾರಣಿ ಎಂದು ಸ್ಮರಿಸಿಕೊಂಡರು.

ರಾಜ್ಯ ಏಕೀಕರಣವಾಗಿ 57ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದರೂ ಬಾವುಟಕ್ಕೆ ಮತ್ತು ನಾಡಗೀತೆಗೆ ಇಂದಿಗೂ ಸ್ಪಷ್ಟತೆ ದೊರೆತಿಲ್ಲ. ಮುಂದಿನ ವರ್ಷದ ಒಳಗೆ ಈ ಸಮಸ್ಯೆ ಬಗೆಹರಿಸಿ ಆಚರಣೆಗೆ ತರುವ ಕೆಲಸವನ್ನು ಸರ್ಕಾರ ಮಾಡಬೇಕು. ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗ ಮತ್ತು ಶ್ರಮದಾನದಷ್ಟೇ ಏಕೀಕರಣದಲ್ಲೂ ಸಹ ಅಷ್ಟೇ ಪ್ರಮಾಣದಲ್ಲಿ ಆಗಿದೆ.

ಆದರೆ, ಕೆಲವರು ರಾಜ್ಯ ಒಡೆಯುವ ಮಾತುಗಳನ್ನಾಡುತ್ತಿರುವುದು ಮೂರ್ಖತನದ ಪರಮಾವಧಿಯಾಗಿದ್ದು, ಸಮಾಜಕ್ಕೆ ದ್ರೋಹ ಮಾಡುವಂತ ಕೆಲಸವಾಗಿದೆ. ಸಚಿವರಾದ ಉಮೇಶ್‌ಕತ್ತಿ ಹಾಗೂ ಅಸ್ನೋಟಿಕರ್ ಅವರಿಗೆ ಏಕೀಕರಣ ಯಾವ ಉದ್ದೇಶಕ್ಕಾಗಿದೆ ಎನ್ನುವುದು ತಿಳಿದಿಲ್ಲವೆಂದು ಕಾಣುತ್ತದೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಸುತ್ತಿ ಕರ್ನಾಟಕ ಏಕೀಕರಣವಾದ ಬಗ್ಗೆ ತಿಳುವಳಿಕೆ ಮೂಡಿಸಬೇಕಿದೆ.

ಅದು ಬೆಳಗಾವಿಯಿಂದಲೇ ಪ್ರಾರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು. ವೀರಶೈವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಕೆ. ಕುಮಾರಸ್ವಾಮಿ ಹಾಜರಿದ್ದರು. ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ನಾಡಗೀತೆ ಹಾಡಿದರು. ಷಣ್ಮುಖಪ್ಪ ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ್ ವಂದಿಸಿದರು.

ಕರ್ನಾಟಕ ಏಕೀಕರಣದ ನಂತರ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ
ಎಸ್.ನಿಜಲಿಂಗಪ್ಪ

ರಾಷ್ಟ್ರ ನಾಯಕ ಸಿದ್ದವ್ವನಹಳ್ಳಿ ನಿಜಲಿಂಗಪ್ಪ – (ಡಿಸೆಂಬರ್ ೧೦, ೧೯೦೨ )ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು ಎಂಬ ಚಿಕ್ಕಹಳ್ಳಿಯೊಂದರ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ ಎಸ್. ನಿಜಲಿಂಗಪ್ಪನವರು ಶಾಂತ ಸ್ವಭಾವಕ್ಕೆ ಮತ್ತು ಸಜ್ಜನಿಕೆಗೆ ಪ್ರಸಿಧ್ಧರಾದ ದೇಶಪ್ರೇಮಿ ಮತ್ತು ರಾಜಕಾರಣಿ.

ಎಸ್.ನಿಜಲಿಂಗಪ್ಪ ಇವರು ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯೂ ಅಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ನಿಜಲಿಂಗಪ್ಪ ನವರು ಎರಡು ಅವಧಿಗಳಿಗೆ ೪ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಎಸ್. ನಿಜಲಿಂಗಪ್ಪ ನವರನ್ನು ನವಕರ್ನಾಟಕದ ನಿರ್ಮಾತೃ ಎಂದು ಕರ್ನಾಟಕದ ಜನತೆ ನೆನೆಪಿಸಿಕೊಳ್ಳುತ್ತಾರೆ. ಶರಾವತಿ ಜಲವಿದ್ಯುತ್ ಯೋಜನೆ ಮತ್ತುಕಾಳಿ ವಿದ್ಯುತ್ ಯೋಜನೆಯ ಪ್ರಮುಖ ರೂವಾರಿ ಇವರಾಗಿದ್ದಾರೆ. ಕನಾ

ಚಿಕ್ಕಂದಿನಲ್ಲಿ ತಮ್ಮ ಹಳ್ಳಿಯ “ವೀರಪ್ಪ ಮಾಸ್ತರ” ರಿಂದ ಸಾಂಪ್ರದಾಯಿಕ ವಾಗಿ ಅಕ್ಷರಾಭ್ಯಾಸ ಮಾಡಿದ ನಿಜಲಿಂಗಪ್ಪನವರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ೧೯೨೪ರಲ್ಲಿ ಪದವೀಧರರಾಗಿ ಉತ್ತೀರ್ಣರಾದರು. ೧೯೨೧-೧೯೨೪ ರ ಅವಧಿಯಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ವಿಧ್ಯಾರ್ಥಿ ನಿಲಯದ ವಿಧ್ಯಾರ್ಥಿಗಳಾಗಿದ್ದರು. ಶ್ರೀ ಬಸವೇಶ್ವರ ಮತ್ತು ಶಿವಶರಣರ ನೀತಿ-ಸಾಧನೆಗಳನ್ನು ಅಭ್ಯಾಸಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಿಜಲಿಂಗಪ್ಪನವರು, ಗಾಂಧೀಜಿಯವರ ವಿಚಾರಧಾರೆಯಿಂದಲೂ ಪ್ರಭಾವಿತರಾದರು. ಚಿತ್ರದುರ್ಗವನ್ನು ತಮ್ಮ ಕರ್ಮಭೂಮಿಯಾಗಿ ಸ್ವೀಕರಿಸಿದ ನಿಜಲಿಂಗಪ್ಪನವರು ಅಂದಿನ ಚಿತ್ರದುರ್ಗ ಜಿಲ್ಲೆಯ ಏಳಿಗೆಗಾಗಿ ಶ್ರಮವಹಿಸಿದ್ದಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಂಬೆ, ಅಂಬಾಲಿಕ, ಅಂಬಿಕಾ

ಅಂಬೆ, ಅಂಬಾಲಿಕ, ಅಂಬಿಕಾ ಎಂಬ ಮೂವರು ರಾಜಕುವರಿಯರು ಮಹಾಭಾರತದಲ್ಲಿ ಬರುವ ಪಾತ್ರಗಳು

ಜೇನು ತುಪ್ಪ

ನೈಸರ್ಗಿಕವಾದ ಸಕ್ಕರೆ ಜೇನು ತುಪ್ಪ