in

ದೇಹದ ಉಷ್ಣಾಂಶ ಜಾಸ್ತಿ ಆದಾಗ ಉಪಯೋಗಿಸಬಹುದಾದ ಆಹಾರಕ್ರಮಗಳು

ಕೆಲವೊಮ್ಮೆ ಅನಿರೀಕ್ಷಿತವಾಗಿ ಉಂಟಾಗುವ ದೇಹದ ಉಷ್ಣತೆಯನ್ನು ಮನೆಔಷಧಿಗಳ ಮೂಲಕಗುಣಪಡಿಸಿಕೊಳ್ಳಬಹುದು ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಕಣ್ಣುಗಳಲ್ಲಿ ಉರಿ, ಬಾಯಲ್ಲಿ ಹುಣ್ಣು, ಅಜೀರ್ಣ, ಮಲಬದ್ಧತೆ, ನಿದ್ರಾಹೀನತೆ, ಮುಂತಾದ ಸಮಸ್ಯೆಗಳು ಕಂಡುಬರುತ್ತದೆ.

ದೇಹದ ಉಷ್ಣಾಂಶ
ದೇಹದ ಉಷ್ಣಾಂಶ

ಇನ್ನು ಬೇಸಿಗೆ, ಸುಡುವ ಬಿಸಿಲು, ದೇಹದ       ತಾಪಮಾನ ಹೆಚ್ಚಾಗುವುದರ  ಜೊತೆಗೆ ಬೆವರು  ಬಿಸಿಲಿನ ಬೇಗೆಗೆ ದೇಹ ಸುಸ್ತಾಗಿ   ಹೋಗುತ್ತದೆ.   ಬೇಸಿಗೆಯಲ್ಲಿ ಮಾನವನ ದೇಹದ   ಉಷ್ಣಾಂಶವೂ   ನಿರಂತರವಾಗಿ ಏರಿಕೆಯಾಗುತ್ತ   ಇರುತ್ತದೆ.   ಬೇಸಿಗೆಯಲ್ಲಿ ಅತಿಯಾದ ನೀರು   ಕುಡಿಯಲೇಬೇಕು.ಇಲ್ಲವಾದಲ್ಲಿ  ಬೇಸಿಗೆಯಲ್ಲಿ ನಿರ್ಜಲೀಕರಣ, ಆಯಾಸ, ಶಕ್ತಿಯ ಕೊರತೆ ಉಂಟಾಗುತ್ತದೆ. ಇವುಗಳನ್ನು ಸರಿದೂಗಿಸಿಕೊಳ್ಳಲು ಮನುಷ್ಯರು ತಮ್ಮ ಆರೋಗ್ಯ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಗಟ್ಟಿ ಪದಾರ್ಥಗಳನ್ನು ಬಿಟ್ಟು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಬಳಸಬೇಕಾಗುತ್ತದೆ.

ಕೆಲವೊಂದು ಆಹಾರಗಳು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.

ಆಹಾರ ಕ್ರಮಗಳು
ಆಹಾರ ಕ್ರಮಗಳು

೧.ಶ್ರೀಗಂಧ ಮತ್ತು ರೋಸ್ ವಾಟರ್

ದೇಹಕ್ಕೆ ತಂಪಿನ ಪ್ರಭಾವವನ್ನು ಉಂಟು ಮಾಡುವ ಅಂಶ ಶ್ರೀಗಂಧ ಮತ್ತು ರೋಸ್ ವಾಟರ್ ಇದರಲ್ಲಿ ಇದೆ. ಏಕೆಂದರೆ ಇದರಲ್ಲಿ ಆಂಟಿ ಸೆಪ್ಟಿಕ್ ಗುಣ ಲಕ್ಷಣಗಳು ಕೂಡ ಇರುವುದರಿಂದ ಚರ್ಮದ ಮೇಲೆ ಉಂಟಾಗುವ ಗುಳ್ಳೆಗಳನ್ನು  ಇಲ್ಲವಾಗಿಸುತ್ತದೆ ಮತ್ತು ಶ್ರೀಗಂಧದ ಸುವಾಸನೆ ನಮ್ಮನ್ನು ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.ದೇಹದ ಬೆವರಿನ ದುರ್ಗಂಧ ದೂರವಾಗಿ ಚರ್ಮದ ಸಾಕಷ್ಟು ಸಮಸ್ಯೆಗಳು ಇಲ್ಲವಾಗುತ್ತವೆ ಮತ್ತು ಚರ್ಮದ ಕಿರಿಕಿರಿ ಸಮಸ್ಯೆ ತಪ್ಪುತ್ತದೆ.

೨.ಎಳನೀರು

ಬೇಸಿಗೆ ಕಾಲದಲ್ಲಿ ಇದು ಒಂದು ರೀತಿಯ ಅಮೃತ ಪಾನೀಯ. ಇದು ಬೇಸಿಗೆಯಲ್ಲಿ ದೇಹದ ಉಷ್ಣಾಂಶತೆ ವಿರುದ್ಧ ಹೋರಾಡಲು ಸಹಾಯಕವಾಗುತ್ತದೆ. ನಮ್ಮ ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ನೋಡಿಕೊಳ್ಳುವುದರ ಜೊತೆಗೆ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ.  ದಿನಕ್ಕೊಂದಂರಂತೆ ಅಥವಾ ಎರಡು ದಿನಕ್ಕೊಮ್ಮೆಯಾದರೂ ಎಳನೀರು ಕುಡಿದರೆ ದೇಹದಲ್ಲಿ ಉಷ್ಣಾಂಶ ಹತೋಟಿಯಲ್ಲಿಡಬಹುದು.

೩.ಅಲೋವೆರಾ ಮತ್ತು ಸೌತೆಕಾಯಿ

ನೀರಿನ ಅಂಶವನ್ನು ಹೆಚ್ಚಾಗಿ ಒಳಗೊಂಡಿರುವ ಆಹಾರ ಪದಾರ್ಥ ಅಲೋವೆರಾ ಮತ್ತು ಸೌತೆಕಾಯಿ. ಅಲೋವೆರಾ ಮತ್ತು ಸೌತೆಕಾಯಿಯನ್ನು ಒಟ್ಟಿಗೆ ರುಬ್ಬಿಕೊಂಡು ಪೇಸ್ಟ್ ತಯಾರು ಮಾಡಿ ಅದನ್ನು ನಿಮ್ಮ ಚರ್ಮದ ಭಾಗದಲ್ಲಿ ಹಚ್ಚುವುದರಿಂದ ಚರ್ಮದ ಮೇಲಿನ ಕೆರೆತ ಮತ್ತು ಬೆವರು ಗುಳ್ಳೆಗಳು ವಾಸಿಯಾಗುತ್ತವೆ. ಸುಮಾರು ಇಪ್ಪತ್ತು ನಿಮಿಷಗಳು ಇದನ್ನು ಹಚ್ಚಿ ಹಾಗೆ ಬಿಟ್ಟು ನಂತರ ಶುದ್ಧವಾದ ನೀರಿನಲ್ಲಿ ತೊಳೆದುಕೊಳ್ಳಿ. ಪ್ರತಿದಿನ ಸೌತೆಕಾಯಿ ತಿನ್ನುವುದರಿಂದ ಕೂಡ ಒಳ್ಳೆಯದು.

೪.ದಾಳಿಂಬೆ ರಸ

ಪ್ರತಿದಿನ ಬೆಳಿಗ್ಗೆ ಒಂದು ಲೋಟ ದಾಳಿಂಬೆ ರಸಕ್ಕೆ ಎರಡು ಮೂರು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ ಸೇವಿಸುವುದರಿಂದ ಸುಲಭವಾಗಿ ದೇಹದ ತಾಪಮಾನವನ್ನು ಕಾಯ್ದುಕೊಳ್ಳಬಹುದು. ಎಲ್ಲರೂ ಅನುಸರಿಸಬಹುದು.

೫. ಮಜ್ಜಿಗೆ

ಮಜ್ಜಿಗೆಗಿಂತ ಆರೋಗ್ಯಕರ ಪಾನೀಯ ಯಾವುದು ಇದೆ. ಪ್ರೋಬಯಾಟಿಕ್ಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಪ್ರತಿದಿನ ದಿನಕ್ಕೆ ಎರಡು ಬಾರಿ ಮಜ್ಜಿಗೆಯನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಏಕೆಂದರೆ ಇದು ದೇಹವನ್ನು ತಣ್ಣಗಾಗಿಸಲು ಸಹಾಯ ಮಾಡುತ್ತದೆ. ನಮ್ಮ ದೇಹದ ಶಕ್ತಿಯನ್ನು ಪುನಃಸ್ಥಾಪಿಸಲು ಮತ್ತು ದೇಹವನ್ನು ನೈಸರ್ಗಿಕವಾಗಿ ತಂಪಾಗಿಸಲು ಒಂದು ಲೋಟ ತಣ್ಣನೆಯ ಮಜ್ಜಿಗೆಯನ್ನು ಕುಡಿಯಲೇಬೇಕು.

೬. ಪುದೀನ

ಪ್ರತಿಯೊಬ್ಬರ ಮನೆಗಳಲ್ಲಿ ಬಳಸುವ, ಸೇವಿಸುವ ಗಿಡಮೂಲಿಕೆ. ದೇಹದ ಶಾಖವನ್ನು ನಿಯಂತ್ರಿಸಲು  ಸಾಮಾನ್ಯವಾಗಿ ಆಹಾರ ಅಥವಾ ಪಾನೀಯಗಳಿಗೆ ಸೇರಿಸಲಾಗುತ್ತದೆ. ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುವುದಲ್ಲದೆ ದೇಹವನ್ನು ತಂಪಾಗಿರಿಸಲು ಸಹಕಾರಿಯಾಗಿದೆ. ಮೊಸರು, ಮಜ್ಜಿಗೆ ಅಥವಾ ನಿಂಬೆ ನೀರಿಗೆ ಪುದೀನವನ್ನು ಸೇರಿಸುವುದರಿಂದ ಹೆಚ್ಚಿನ ಲಾಭಗಳು ದೊರೆಯುತ್ತವೆ. ಪುದೀನ ಎಲೆಗಳಿಂದ ಚಟ್ನಿಯನ್ನು ಸಹ ತಯಾರಿಸಿ ಸೇವಿಸಬಹುದು.

೭.ತಂಪು ಬೀಜ

ಇದಕ್ಕೆ ಕಾಮಕಸ್ತೂರಿ ಅಂತ ಕರೆಯುತ್ತಾರೆ.ನೀರಿನಲ್ಲಿ ಹಾಕಿದಾಗ ಸಬ್ಬಕ್ಕಿ ತರ ಕಣ್ಣು ಬಿಡುತ್ತದೆ. ಲಿಂಬು ಶರ್ಬತ್ ಜೊತೆ ಹಾಕಿ ಕುಡಿಯಬಹುದು. ಪೇರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವು ಇದ್ದರೆ ಕಮ್ಮಿ ಯಾಗುತ್ತದೆ.

೮.ಕಲ್ಲಂಗಡಿ ಹಣ್ಣು

ಕಲ್ಲಂಗಡಿ  ಬೇಸಿಗೆಯ ಹಣ್ಣುಗಳಲ್ಲಿ ಒಂದು. ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಜಾಸ್ತಿ  ಇರುತ್ತದೆ. ಇದನ್ನು ಸೇವಿಸುವುದರಿಂದ  ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ತಡೆಯುತ್ತದೆ ಮತ್ತು ದೇಹವನ್ನು ತಂಪಾಗಿರಿಸುತ್ತದೆ. ಇದನ್ನು ನಿರಂತರವಾಗಿ ಸೇವಿಸಿದ್ದಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿರಿಸಬಹುದು.

೯.ಸೌತೆಕಾಯಿ

ಸೌತೆಕಾಯಿಯಲ್ಲೂ ಹೆಚ್ಚಿನ ಪ್ರಮಾಣದ ನೀರಿನ ಅಂಶವಿದೆ.  ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ, ಇದು ಬೇಸಿಗೆಯಲ್ಲಿ ಅಥವಾ  ದೇಹದ ಉಷ್ಣತೆಯ ಸಮಸ್ಯೆಗೆ ರಾಮಬಾಣ. ಸೌತೆಕಾಯಿಯನ್ನು ಸಾಮಾನ್ಯವಾಗಿ ಸಲಾಡ್ಗಳಲ್ಲಿ ಮಾತ್ರವಲ್ಲ, ಕಣ್ಣುಗಳ ಉರಿ ಕಡಿಮೆ ಮಾಡಲು, ಕಣ್ಣುಗಳ ಕಾಂತಿ ಹೆಚ್ಚಿಸಲು ಸಹಾಯಕವಾಗಿದೆ. ಜೊತೆಗೆ ಮುಖದ ಚಿಕಿತ್ಸೆಗಳಲ್ಲಿಯೂ ಬಳಸಲಾಗುತ್ತದೆ.

೧೦.ಮೆಂತ್ಯ (Fenugreek seeds) 

ಅಡುಗೆಮನೆಯಲ್ಲಿರುವ ಅನೇಕ ಪದಾರ್ಥಗಳಲ್ಲಿ ಔಷಧೀಯ ಗುಣಗಳಿರುವಂತೆ, ಮೆಂತ್ಯೆಯು ಸಹ ದೇಹದ ಉಷ್ಣತೆಯನ್ನು ಸಮತೋಲನದಲ್ಲಿರಿಸಲು ಸಹಾಯಕವಾಗಿದೆ. ಕೇವಲ ಒಂದು ಚಮಚೆಯಷ್ಟು ಮೆಂತ್ಯೆಯನ್ನು ಹಸಿಯಾಗಿ ಸೇವಿಸುವುದರಿಂದ ದೇಹದ ತಾಪಮಾನವನ್ನು ಸಮತೋಲನದಲ್ಲಿರಿಸಬಹುದು. ಅಥವಾ ಮೆಂತ್ಯ ಗಂಜಿ ಮಾಡಿ ಕುಡಿಯಬಹುದು.

೧೧.ಖರಬೂಜ

ದೇಹಕ್ಕೆ ತಂಪು ನೀಡುವ ಹಣ್ಣುಗಳಲ್ಲಿ ಖರ್ಬೂಜ ಕೂಡ ಒಂದು. ಈ ಹಣ್ಣನು ಬೆಳಗಿನ ಉಪಹಾರಕ್ಕೆ ಅಥವಾ ಮಧ್ಯಾನ್ಹದ ಊಟವಾದ ನಂತರ ಸೇವಿಸುವುದರಿಂದ ದೇಹ ತಂಪಾಗುತ್ತದೆ. ಇಲ್ಲವೇ ಹಣ್ಣಿಗೆ ಜೇನುತುಪ್ಪ ಹಾಗೂ ಸ್ವಲ್ಪ ಉಪ್ಪು ಬೆರೆಸಿ ರುಚಿಯಾದ ಪೇಯವನ್ನು ತಯಾರಿಸಿ ಸೇವಿಸಬಹುದು. ಕುಡಿಯಲು ಬಹಳ ರುಚಿಯಾಗಿರುವುದರಿಂದ ಇದು ಮಕ್ಕಳಿಗೂ ಇಷ್ಟವಾಗುತ್ತದೆ.

೧೨.ನೀರು

ಬಾಯಿಯಿಂದ ಒಳಗೆ ಹೋಗುವ ದೋಷವಿಲ್ಲ ಆಹಾರ ಎಂದರೆ ನೀರು. ನೀರು ಎಷ್ಟು ಕುಡಿದರೂ ಸಹ ಯಾವುದೇ ತೊಂದರೆ ಇಲ್ಲ. ಒಂದು ಪಾತ್ರೆಯಲ್ಲಿ ತಣ್ಣನೆಯ ನೀರನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಪಾದಗಳನ್ನು ಮುಳುಗಿಸಿ ಇಡುವುದರಿಂದ ದೇಹದ ತಾಪಮಾನ ಕಡಿಮೆಯಾಗುತ್ತದೆ.

 ಧನ್ಯವಾದಗಳು

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮಾವಿನ ಹಣ್ಣು

ಹಣ್ಣುಗಳ ರಾಜ ಮಾವಿನ ಹಣ್ಣು

ಶ್ರೀಕೃಷ್ಣದೇವರಾಯ

ವಿಜಯನಗರ ಶ್ರೀಕೃಷ್ಣದೇವರಾಯ