ದೇಹದ ಆರೊಗ್ಯವನ್ನು ಕಾಪಾಡಿಕೊಳ್ಳಲು ನೀರು ಕುಡಿಯುವುದು ಅತ್ಯಗತ್ಯ. ಜೀವಕೋಶಗಳಿಗೆ ಪೋಷಕಾಂಶಗಳನ್ನು ಸಾಗಾಣೆ ಮಾಡಲು, ದೇಹದ ತಾಪಮಾನವನ್ನು ನಿಯಂತ್ರಿಸಲು ಮತ್ತು ಕೀಲುಗಳ ಸಮರ್ಪಕವಾಗಿರಲು ಇದು ಆವಶ್ಯಕ. ಹಾಗಾಗಿ ಮುಂಜಾನೆ ವೇಳೆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಚರ್ಮವು 30% ನೀರನ್ನು ಹೊಂದಿರುತ್ತದೆ, ಅದು ಅದರ ಆರೋಗ್ಯಕ್ಕೆ ಅಗತ್ಯ. ಹೆಚ್ಚು ನೀರಿನ ಸೇವನೆ ಚರ್ಮದ ರಚನೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ತೂಕ ಇಳಿಸಬಹುದು ಎಂದು ಬಹಳಷ್ಟು ಮಂದಿ ಭಾವಿಸಿದ್ದಾರೆ. ಉದಾಹರಣೆಗೆ, ಹೆಚ್ಚು ನೀರು ಕುಡಿಯುವ ಯುವಜನರು ಸುಧಾರಿತ ದೇಹ ಸಮಯೋಜನೆಯನ್ನು ಹೊಂದಿದ್ದಾರೆ ಎಂದು 2019ರಲ್ಲಿ ನಡೆಸಲ್ಪಟ್ಟ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಉಪಾಹಾರ ಸೇರಿದಂತೆ ಮುಖ್ಯ ಊಟಕ್ಕೆ ಮೊದಲು 2010ರಲ್ಲಿ ನಡೆಸಿದ ಹಳೆಯ ಅಧ್ಯಯನವೊಂದರ ಪ್ರಕಾರ, ಮಧ್ಯ ವಯಸ್ಕ ಮತ್ತು ಹಿರಿಯ ವಯಸ್ಕರು, 12 ವಾರಗಳ ವರೆಗೆ, ಪ್ರತೀ ಊಟಕ್ಕೆ ಮೊದಲು 500 ಮಿಲಿ ಲೀಟರ್ ನೀರನ್ನು ಸೇವಿಸಿದ್ದರಿಂದ, ಹೆಚ್ಚು ತೂಕವನ್ನು ಕಳೆದುಕೊಂಡರು.
ಕಾರಣ ಅವರು ಮೊದಲೇ ನೀರು ಕುಡಿದದ್ದರಿಂದ, ಕಡಿಮೆ ಊಟ ಮಾಡಿದ ಕಾರಣಕ್ಕೆ ತೂಕ ಕಡಿಮೆ ಆಯಿತು ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಸಾಮಾನ್ಯವಾಗಿ ದಿನಕ್ಕೆ 8 ಲೋಟ ನೀರು ಕುಡಿದರೆ ಸಾಕು ಎಂದು ಅಂದುಕೊಳ್ಳುತ್ತೇವೆ. ಆದರೆ ದಿನಕ್ಕೆ 10- 12 ಲೋಟ ನೀರು ಅತ್ಯವಶ್ಯ. ಆರೋಗ್ಯವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಲು ದಿನಕ್ಕೆ 5 ಲೀಟರ್ ನೀರಿನ ಅಗತ್ಯವಿದೆ ಎನ್ನುತ್ತಾರೆ ಅವರು. ಬಾಯಾರಿದಾಗ ಎಲ್ಲ ದ್ರವ ಪದಾರ್ಥಗಳಿಗಿಂತಲೂ ಮಾನವನ ದೇಹಕ್ಕೆ ನೀರು ಉತ್ತಮ. ನಾವು ಬಹಳ ಬಳಲಿದಾಗ ನೀರಿನ ಜೊತೆ ಒಂದು ತುಂಡು ಬೆಲ್ಲವನ್ನೂ ಬಾಯಿಗೆ ಹಾಕಿ ಜಗಿದರೆ ದೇಹ ಉಲ್ಲಸಿತವಾಗುತ್ತದೆ.
ಉಗುರು ಬೆಚ್ಚಗಿನ ನೀರು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುವುದರ ಜೊತೆಗೆ ಚರ್ಮದ ಕೆಳಭಾಗದಲ್ಲಿ ಕಂಡು ಬರುವ ಅಡಿಪೋಸ್ ಅಂಗಾಂಶಗಳಿಗೆ ಕೂಡ ಅನುಕೂಲಕಾರಿಯಾಗಿ ಕೆಲಸ ಮಾಡುತ್ತದೆ.
ನೀವು ಇದಕ್ಕಾಗಿ ಕೆಲವು ಹನಿಗಳಷ್ಟು ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪವನ್ನು ಸೇರಿಸಿ ಉಗುರು ಬೆಚ್ಚಗಿನ ನೀರು ಕುಡಿಯುವುದು ಒಳ್ಳೆಯದು.
ಹಾಗೆಯೇ ಅಸಿಡಿಟಿಗೂ ಒಳ್ಳೆಯದು. ಟಾಯ್ಲೆಟ್ ಹೋಗಲು ಕಷ್ಟ ಆಗುವವರೆಗೆ ಬಿಸಿ ನೀರು ಹೊಟ್ಟೆಗೆ ಹೋದಾಗ ಅನುಕೂಲ ಆಗುತ್ತದೆ.
ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದ ಜೀರ್ಣ ಶಕ್ತಿ ಹೆಚ್ಚುತ್ತದೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಕಾಪಾಡುವುದು ಮಾತ್ರವಲ್ಲದೆ ಹೊಳಪಿನಿಂದ ಹಾಗೂ ಕಾಂತಿಯಿಂದ ಕೂಡಿದ ಚರ್ಮ ನಿಮ್ಮದಾಗುವ ಹಾಗೆ ಮಾಡುತ್ತದೆ.
ನೀರು ಕುಡಿಯುವುದರಿಂದ ಕಿಡ್ನಿಗಳಿಗೆ ಕಲ್ಮಶವನ್ನು ದೇಹದಿಂದ ಹೊರ ಹಾಕಲು ಸಹಾಯವಾಗುತ್ತದೆ.
ನೀರು ಕುಡಿಯುವುದು ಮನುಷ್ಯನ ಮನಸ್ಥಿತಿಯ ಮೇಲೆ ಕೂಡ ಪರಿಣಾಮ ಬೀರಬಹುದು. ಕಡಿಮೆ ನೀರು ಕುಡಿಯುವ ಮಂದಿ, ನೀರು ಕುಡಿಯುವ ಪ್ರಮಾಣವನ್ನು ಹೆಚ್ಚಿಸಿದಾಗ ಅವರ ಮನಸ್ಥಿತಿ ಮೊದಲಿಗಿಂತ ಚೆನ್ನಾಗಾಗಿರುವುದು ಕಂಡು ಬಂದಿದೆ.ಸಣ್ಣ ನಿರ್ಜಲೀಕರಣವೂ ಕೂಡ ಅರಿವಿನ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿದುಬಂದಿದೆ.
ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ದೂರವಾಗುತ್ತದೆ
ಪ್ರತಿದಿನ ತಪ್ಪದೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ಚರ್ಮದ ತಾಜಾತನ ಹೆಚ್ಚುತ್ತದೆ. ನೋಡಲು ನೀವು ಸುಂದರವಾಗಿ ಮತ್ತು ಯೌವನಭರಿತರಾಗಿ ಕಾಣುವಿರಿ.
ರಕ್ತವನ್ನು ಶುದ್ದೀಕರಣಗೊಳಿಸಿ, ತ್ಯಾಜ್ಯವನ್ನು ಹೊರಬಿಡಲು ಕಿಡ್ನಿಗೆ ಸಾಕಷ್ಟು ನೀರಿನ ಅವಶ್ಯಕತೆಯಿರುತ್ತದೆ. ನೀರು ಕುಡಿಯುವುದರಿಂ ಮೂತ್ರನಾಳದ ಸೋಂಕನ್ನೂ ತಡೆಗಟ್ಟಬಹುದು. ಕಿಡ್ನಿ ಕಲ್ಲಿನ ತೊಂದರೆಯೂ ಕಾಣಿಸಿಕೊಳ್ಳುವುದಿಲ್ಲ. ಆದರೆ ನೀರು ಕಡಿಮೆ ಕುಡಿದರೆ ಕಿಡ್ನಿ ಕಾರ್ಯ ನಿರ್ವಹಿಸಲು ಕಷ್ಟವಾಗಿ, ವಿಷಕಾರಿ ಅಂಶಗಳು ದೇಹದಲ್ಲೇ ಉಳಿದುಕೊಂಡು ಬಿಡುತ್ತೆ.
ಥರ್ಮೊಜೆನೆಸಿಸ್ ಎಂದರೆ ಶಾಖದ ಉತ್ಪತ್ತಿ. ಒಬ್ಬ ವ್ಯಕ್ತಿ ತಣ್ಣೀರನ್ನು ಕುಡಿದಾಗ, ಆ ನೀರು ದೇಹವನ್ನು ಪ್ರವೇಶಿಸುವಾಗ ಬೆಚ್ಚಗಾಗುವಂತೆ ಮಾಡಲು ಶಾಖ ಉತ್ಪತ್ತಿ ಆಗುತ್ತದೆ, ಅದರಿಂದ ಕ್ಯಾಲೋರಿಗಳು ಕರಗುತ್ತವೆ.
ಬೆಳಗ್ಗೆ ಮಾತ್ರ ನೀರು ಕುಡಿಯುವ ಬದಲು , ಇಡೀ ದಿನ ಆಗಾಗ ನೀರು ಕುಡಿಯುತ್ತಿರುವುದು ಉತ್ತಮ ಮಾನಸಿಕ ಕ್ಷಮತೆಗೆ ಪೂರಕವಾಗಿದೆ.
ವಾತಾವರಣದಿಂದ ಉಂಟಾಗಿರುವ ಪರಿಣಾಮವನ್ನು ತಡೆಯಲು ಸಾಧ್ಯವಾಗುವುದಿಲ್ಲ. ನೀರು ಕುಡಿಯುವುದರಿಂದ ದಿನವಿಡೀ ಲವಲವಿಕೆಯಿಂದ ಇರಬಹುದು.
ನೀರು, ಕೀಲುಗಳ ಸುತ್ತ ಇರುವ ನಯಗೊಳಿಸುವ ದ್ರವದ ಒಂದು ಅಂಶ. ಅದು ಕೀಲು ನೋವು ನಿವಾರಣೆಗೆ ಸಹಾಯ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ. ಇದರಿಂದ ನಿಮ್ಮ ದೇಹದ ಒಳಭಾಗದ ಅಂಗಾಂಗಗಳು ಸಹ ಸ್ವಚ್ಛವಾಗುತ್ತವೆ.
ನಿಮ್ಮ ಲಿವರ್ ಭಾಗ ವಿಷಕಾರಿ ಅಂಶಗಳಿಂದ ಮುಕ್ತವಾಗುತ್ತದೆ ಮತ್ತು ಯಾವುದೇ ಕ್ಯಾನ್ಸರ್ ಅಥವಾ ಇನ್ನಿತರ ಮಾರಕ ಸೋಂಕುಗಳಿಂದ ದೂರವಾಗುತ್ತದೆ
ನೀರು ಕುಡಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲ, ಈ ಮೂಲಕ ನಿಮ್ಮ ಆಲೋಚನೆಗಳೂ ಸ್ಪಷ್ಟವಾಗುತ್ತದೆ. ಚೆನ್ನಾಗಿ ನೀರು ಕುಡಿಯದಿದ್ದರೆ ಮೆದುಳಿಗೆ ಅವಶ್ಯಕವಾದ ಆಮ್ಲಜನಕ ಸಾಗಿಸಲು ಕಷ್ಟವಾಗಿ ಏಕಾಗ್ರತೆಯೂ ಕುಂದುತ್ತದೆ.
ನೀರು ಸೇವನೆಯಿಂದ ನಿಮ್ಮ ಗಂಟಲು ಮತ್ತು ತುಟಿಯಲ್ಲಿ ತೇವಾಂಶವಿರುತ್ತದೆ. ಇದರಿಂದ ಬಾಯಿ ಒಣಗುವುದನ್ನು ತಡೆಯುತ್ತದೆ. ಇಲ್ಲದಿದ್ದರೆ ಬಾಯಿ ಒಣಗುವುದರಿಂದ ದುರ್ವಾಸನೆಯೂ ಬಂದು ಬಾಯಿಯ ಆರೋಗ್ಯವೂ ಕೆಡುತ್ತದೆ. ಆದ್ದರಿಂದ ಆಗಾಗ್ಗೆ ನೀರು ಕುಡಿಯುತ್ತಿದ್ದರೆ ಉತ್ತಮ.
ಧನ್ಯವಾದಗಳು.
GIPHY App Key not set. Please check settings