in ,

ಮಲಬದ್ಧತೆ ಸಮಸ್ಯೆಗೆ ಸುಲಭ ಪರಿಹಾರಗಳು

ಮಲಬದ್ಧತೆ-ಸಮಸ್ಯೆ.
ಮಲಬದ್ಧತೆ-ಸಮಸ್ಯೆ.

ಮಲಬದ್ಧತೆ ಎನ್ನುವುದು ಸುಮಾರು ಮಂದಿಯಲ್ಲಿ ಕಂಡುಬರುವ ಖಾಯಿಲೆ. ಮಲಬದ್ಧತೆಯು ವ್ಯಕ್ತಿಯಿಂದ (ಅಥವಾ ಪ್ರಾಣಿ) ಹೊರಹಾಕಲು ತೊಂದರೆಯಾಗುವ ಗಟ್ಟಿ ಮಲವನ್ನು ಅನುಭವಿಸಲ್ಪಡುವ ಜೀರ್ಣ ವ್ಯವಸ್ಥೆಯ ಒಂದು ಪರಿಸ್ಥಿತಿ. ಇದು ಸಾಮಾನ್ಯವಾಗಿ ದೊಡ್ಡ ಕರುಳು ಆಹಾರದಿಂದ ಬಹಳ ಹೆಚ್ಚು ನೀರನ್ನು ಹೀರಿಕೊಳ್ಳುವ ಕಾರಣ ಉಂಟಾಗುತ್ತದೆ. ಆಹಾರವು ಜಠರ ಮತ್ತು ಕರುಳಿನ ಪ್ರದೇಶದ ಮೂಲಕ ಅತಿ ನಿಧಾನವಾಗಿ ಚಲಿಸಿದರೆ, ದೊಡ್ಡ ಕರುಳು ಅತಿ ಹೆಚ್ಚು ನೀರನ್ನು ಹೀರಿಕೊಳ್ಳಬಹುದು, ಪರಿಣಾಮವಾಗಿ ಮಲವು ಶುಷ್ಕ ಮತ್ತು ಗಟ್ಟಿಯಾಗುತ್ತದೆ.
ಆಹಾರ ಸರಿಯಾಗಿ ಜೀರ್ಣವಾಗಬೇಕೆಂದರೆ ಫೈಬರ್ ಯುಕ್ತ ಅಥವಾ ನಾರಿನಂಶವಿರುವ ಆಹಾರ ಸೇವಿಸಬೇಕು. ದಿನವಿಡೀ ಸಾಕಷ್ಟು ಫೈಬರ್ ಆಹಾರ ಸೇವಿಸಿದರೆ ಕರುಳಿನ ಚಲನೆ ಸುಗಮವಾಗಿರುತ್ತದೆ. ಒಂದು ವೇಳೆ ಸೇವಿಸದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಮಲಬದ್ಧತೆ ಸಮಸ್ಯೆ ಬರುವ ಪ್ರಮುಖ ಕಾರಣಗಳು:

ಮಲಬದ್ಧತೆ ಸಮಸ್ಯೆಗೆ ಸುಲಭ ಪರಿಹಾರಗಳು


ಮಲಬದ್ಧತೆ ಕಳಪೆ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಉಂಟಾಗುವ ಸಮಸ್ಯೆ. ಇಂದಿನ ದಿನಗಳಲ್ಲಿ ಅನೇಕ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೊಟ್ಟೆಯ ಅಸಮಾಧಾನದಿಂದಾಗಿ, ಅನೇಕ ದೈಹಿಕ ಸಮಸ್ಯೆಗಳನ್ನು ಹೊಂದಲು ಪ್ರಾರಂಭಿಸುತ್ತಾರೆ. ದೇಹದಲ್ಲಿ ನೀರಿನ ಕೊರತೆ, ದೈಹಿಕ ಪರಿಶ್ರಮದ ಕೊರತೆ, ಫೈಬರ್ ಭರಿತ ಆಹಾರದ ಕೊರತೆ, ಅನಿಯಮಿತ ದಿನಚರಿ ಮುಂತಾದ ಹಲವು ಮುಖ್ಯ ಕಾರಣಗಳು. ಕರುಳಿನ ಸ್ನಾಯುಗಳು ಕ್ರಮೇಣ ಸೋಂಕಿಗೆ ಒಳಗಾದಾಗ ಇದು ಸಂಭವಿಸಬಹುದು. ಈ ಕಾರಣದಿಂದಾಗಿ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ ಮತ್ತು ಮಲವು ಒಣಗಲು ಪ್ರಾರಂಭಿಸುತ್ತದೆ. ಮಲಬದ್ಧತೆ ಉಂಟಾಗುತ್ತದೆ. ಮಲಬದ್ಧತೆಯನ್ನು ನಿಭಾಯಿಸಲು ಉತ್ತಮ ಮಾರ್ಗವೆಂದರೆ ಆಹಾರದಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಅಥವಾ ನಮ್ಮ ದೈನಂದಿನ ಆಹಾರದ ಜೊತೆಗೆ ಕೆಲವು ಆಹಾರಗಳನ್ನು ಸೇರಿಸುವುದು.

ಪಪ್ಪಾಯಿ : ಪಪ್ಪಾಯಿ ಮಲಬದ್ಧತೆಗೆ ಬಹಳ ಹಳೆಯ ಪರಿಹಾರವಾಗಿದೆ. ಹೌದು, ಪಪ್ಪಾಯಿ ಹಣ್ಣು, ಎಲೆಗಳು ಮತ್ತು ಪಪ್ಪಾಯಿ ಎಲೆಗಳ ಜ್ಯೂಸ್ ಅನೇಕ ಆರೋಗ್ಯ ಸಮಸ್ಯೆಗಳಿಗೆ ಅದ್ಭುತ ಪರಿಹಾರವಾಗಿದೆ. ವಿಶೇಷವಾಗಿ ಜೀರ್ಣಕ್ರಿಯೆ ಸಮಸ್ಯೆಗೆ ಪಪ್ಪಾಯಿ ಒಳ್ಳೆಯದು. ಏಕೆಂದರೆ ಅದರಲ್ಲಿ ಕೆಲವು ಕಿಣ್ವಗಳು ಇರುವುದರಿಂದ ನೈಸರ್ಗಿಕ ವಿರೇಚಕ ಗುಣಗಳನ್ನು ಹೊಂದಿರುತ್ತದೆ.

ನಿಂಬೆ ರಸ : ನಿಂಬೆ ಸೇವನೆಯು ನಿಮ್ಮ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಇದಕ್ಕಾಗಿ ನೀವು ನಿಂಬೆ ರಸ ಮತ್ತು ಜೇನುತುಪ್ಪದ ರಸವನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಿ. ಇದು ಮಲಬದ್ಧತೆಯ ಸಮಸ್ಯೆಯಲ್ಲಿ ನಿಮಗೆ ಪರಿಹಾರ ನೀಡುತ್ತದೆ.ವಿಟಮಿನ್ ಸಿ ಅಂಶ ಒಳಗೊಂಡಿರುವ ಲಿಂಬೆಯು ಸಿಟ್ರಸ್ ಅಂಶ ಹೊಂದಿದ್ದು ಇದು ನಿಮ್ಮ ಮಲಬದ್ಧತೆ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸುತ್ತದೆ. ಬೆಚ್ಚಗಿನ ನೀರಿನಲ್ಲಿ ಲಿಂಬೆ ರಸ ಬೆರೆಸಿ ಸೇವಿಸಿದರೆ ಮಲಬದ್ಧತೆ ಸಮಸ್ಯೆಯಿಂದ ನೀವು ಪರಿಹಾರ ಪಡೆದುಕೊಳ್ಳಬಹುದು. ಕರುಳಿನ ಚಲನೆ ಉತ್ತೇಜನಗೊಳ್ಳುತ್ತದೆ.

ಮಲಬದ್ಧತೆ ಸಮಸ್ಯೆ ಇದ್ದರೆ, ಬೆಳಗಿನ ಉಪಾಹಾರದಲ್ಲಿ ಓಟ್ಸ್ ಮೀಲ್ ಸೇವಿಸಿ. ಏಕೆಂದರೆ ಇದು ನಾರಿನ ಸಮೃದ್ಧ ಮೂಲವಾಗಿದೆ. ಉತ್ತಮ ಫಲಿತಾಂಶಗಳಿಗಾಗಿ, ಓಟ್ ಬ್ರಾನ್ ಸೇವಿಸಿ. ಇದು ವಿರೇಚಕ ಗುಣಗಳನ್ನು ಹೊಂದಿದೆ. ಅಷ್ಟೇ ಅಲ್ಲ, ತರಕಾರಿ ಸೂಪ್ ಕುಡಿಯುವುದರಿಂದಲೂ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು.

ಮಸೂರ, ಬೀನ್ಸ್ ಮತ್ತು ಬಟಾಣಿ ಸೇರಿದಂತೆ ಹಲವು ದ್ವಿದಳ ಧಾನ್ಯಗಳಿದ್ದು, ನೀವು ಮಲಬದ್ಧತೆ ಸಮಸ್ಯೆ ಎದುರಿಸುತ್ತಿದ್ದರೆ ಇದನ್ನು ಸೇವಿಸಬಹುದು. ಇವುಗಳಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆ ಹೋಗಲಾಡಿಸುತ್ತದೆ. ಇದು ಮಲಬದ್ಧತೆ ಹೋಗಲಾಡಿಸಲು ಸಹಾಯ ಮಾಡುವುದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಸದೃಢವಾಗಿಡುತ್ತದೆ.

ಮಲಬದ್ಧತೆ ಸಮಸ್ಯೆ ನಿವಾರಣೆಗೆ ಅಗಸೆಬೀಜ ಸಹಕಾರಿಯಾಗಿದೆ. ನೀವು ಈ ಬೀಜಗಳನ್ನು ತಿನ್ನುತ್ತಿದ್ದಂತೆ ಅದು ನೀರನ್ನು ಜೆಲ್‌’ಗೆ ಪರಿವರ್ತಿಸುತ್ತದೆ. ಇದು ನಿಮ್ಮ ಕರುಳನ್ನು ಸಮಾಧಾನವಾಗಿಡುತ್ತದೆ. ಮಲ ನಯವಾಗಲು ಸಹಾಯ ಮಾಡುತ್ತದೆ. ಅಲ್ಲದೆ, ನೀವು ಕಡಿಮೆ ಫೈಬರ್ ಆಹಾರವನ್ನು ಸೇವಿಸುತ್ತಿದ್ದರೆ, ಅಗಸೆಬೀಜವು ಮಲಬದ್ಧತೆಗೆ ಸಹಾಯ ಮಾಡುವ ಫೈಬರ್ ಹೆಚ್ಚಿನ ಅಂಶವಿರುವುದರಿಂದ ಹೆಚ್ಚಿನ ಸಹಾಯವಾಗುತ್ತದೆ.

ತರಕಾರಿಗಳು, ಹಣ್ಣುಗಳು, ಬೇಳೆ, ಬೀನ್ಸ್, ಧಾನ್ಯಗಳು, ಬೀಜಗಳು ಮತ್ತು ನಟ್ಸ್’ನಲ್ಲಿ ಸಾಕಷ್ಟು ಫೈಬರ್ ಅಂಶವಿರುತ್ತದೆ. ಜೊತೆಗೆ ಸಾಕಷ್ಟು ತಾಜಾ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದರಿಂದ ನಿಮಗೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಕೆಲವು ಸಿಟ್ರಸ್ ಹಣ್ಣುಗಳು ಫೈಬರ್ ಅನ್ನು ಒಳಗೊಂಡಿರುತ್ತವೆ.

ಜೀರ್ಣಕ್ರಿಯೆಯಲ್ಲಿ ಶುಂಠಿಯು ಅತ್ಯಂತ ಪರಿಣಾಮಕಾರಿ ಪರಿಹಾರ ಒದಗಿಸುತ್ತಿದ್ದು ನಿಮ್ಮ ಕಿಬ್ಬೊಟ್ಟೆಯಲ್ಲಿನ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ. ನೀವು ಮಲಬದ್ಧತೆ ಹೊಂದಿರುವಾಗ ಕರುಳಿನ ಚಲನೆಯನ್ನು ಸುಲಲಿತಗೊಳಿಸಲು ಇದು ಸಹಕಾರಿಯಾಗಿದೆ

ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದು : ರಾತ್ರಿಯಲ್ಲಿ ಒಂದು ಲೋಟ ಬೆಚ್ಚಗಿನ ಹಾಲಿನಲ್ಲಿ 2 ಚಮಚ ದೇಸಿ ತುಪ್ಪವನ್ನು ಬೆರೆಸಿ ಕುಡಿಯುವುದು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಇದು ಮಲಬದ್ದತೆ ಸಮಸ್ಯೆ ನಿವಾರಣೆಗೆ ರಾಮಬಾಣವಿದ್ದಂತೆ.

ಅಲೋವೆರಾದಲ್ಲಿರುವ ಅದ್ಭುತ ಉರಿಯೂತದ ಏಜೆಂಟ್ ಜೀರ್ಣಾಂಗವ್ಯೂಹದ ಉರಿಯೂತವನ್ನು ಎದುರಿಸುತ್ತದೆ. ಹೀಗಾಗಿ, ಇದು ಮಲಬದ್ಧತೆ, ಅತಿಸಾರ ಮತ್ತು ಐಬಿಎಸ್ ನಂತಹ ಜಠರಗರುಳಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

ಮಲಬದ್ಧತೆ ಸಮಸ್ಯೆಗೆ ಸುಲಭ ಪರಿಹಾರಗಳು

ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸುವುದು ಮಲಬದ್ಧತೆಗೆ ಪ್ರಯೋಜನಕಾರಿ

ಕರುಳಿನ ಭಾಗದಲ್ಲಿ ಮಲ ಹೆಚ್ಚು ಗಟ್ಟಿಯಾಗಿ ಹೊರಬರಲು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಹೆಚ್ಚಿಗೆ ನೀರನ್ನು ಕುಡಿಯುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ನಿಮಗೆ ಸಾಧ್ಯ ಆದರೆ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಪ್ರತಿಬಾರಿ ಕುಡಿಯುವುದು ಒಳ್ಳೆಯದು.

​ದೇಹದಿಂದ ಅತಿಯಾದ ವಿಷಕಾರಿ ತ್ಯಾಜ್ಯವನ್ನು ತೆಗೆದು ಹಾಕುವಲ್ಲಿ ಸಹ ತೆಂಗಿನ ಎಣ್ಣೆಯ ಪಾತ್ರವನ್ನು ಮರೆಯುವಂತಿಲ್ಲ. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವ ಜನರು ಪ್ರತಿ ದಿನ 1 ಅಥವಾ 2 ಟೀ ಚಮಚ ತೆಂಗಿನ ಎಣ್ಣೆಯನ್ನು ಸೇವಿಸುವ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು.
ತೆಂಗಿನ ಎಣ್ಣೆ ಒಂದು ನೈಸರ್ಗಿಕ ಪದಾರ್ಥವಾಗಿರುವುದರಿಂದ ಇದನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ಅಡ್ಡ – ಪರಿಣಾಮಗಳು ಉಂಟಾಗುವುದಿಲ್ಲ.


ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಲ್ಲಿನ-ರಥ-ಹಂಪಿ

ವಿಜಯನಗರ ಸಾಮ್ರಾಜ್ಯ ಹಂಪಿಯ ಇತಿಹಾಸ

ಹಲಸಿನಹಣ್ಣು

ಹಲಸಿನ ಹಣ್ಣಿನ ಮಹತ್ವ