in

ತಲೆ ಹೊಟ್ಟಿನ ಸಮಸ್ಯೆಗೆ ಇಲ್ಲಿದೆ ಉಪಾಯಗಳು

ತಲೆ ಹೊಟ್ಟಿನ ಸಮಸ್ಯೆ
ತಲೆ ಹೊಟ್ಟಿನ ಸಮಸ್ಯೆ

ತಲೆಹೊಟ್ಟಿನಿಂದಾಗಿ ತಲೆಯಲ್ಲಿ ಪದೇ ಪದೇ ತುರಿಕೆ ಕಂಡುಬರಬಹುದು. ತಲೆಹೊಟ್ಟು ಎನ್ನುವುದು ತಲೆಯ ಸಾಮಾನ್ಯ ಸಮಸ್ಯೆ ಮತ್ತು ಚರ್ಮವು ಅಲ್ಲಿ ಬಿಳಿಯ ಪದರಗಳನ್ನು ಉಂಟು ಮಾಡುವುದು. ಇದು ಚರ್ಮದ ಸತ್ತಕೋಶಗಳ ಪದರವಾಗಿರುವುದು ಮತ್ತು ಇದರಿಂದ ಕೂದಲಿಗೆ ಸರಿಯಾಗಿ ಆಮ್ಲಜನಕವು ಸಿಗದೆ ಇರುವುದು.

ತಲೆಹೊಟ್ಟಿನ ಸಮಸ್ಯೆಗೆ ಪ್ರಮುಖ ಕಾರಣ ಮಳೆಗಾಲದಲ್ಲಿ ಕೂದಲು ಒದ್ದೆಯಾಗುವುದು, ಇನ್ನು ಸ್ನಾನ ಮಾಡಿದ ಬಳಿಕ ಕೂದಲು ಮಂದವಾಗಿದ್ದರೆ ಬೇಗನೆ ಒಣಗುವುದಿಲ್ಲ. ತಲೆಯಲ್ಲಿ ತೇವಾಂಶ ಹಾಗೇ ಉಳಿಯುವುದರಿಂದ ಮಳೆಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತಲೆಹೊಟ್ಟಿನ ಸಮಸ್ಯೆ ಕೂದಲಿನ ಆರೋಗ್ಯ ಹಾಳು ಮಾಡುವುದರ ಜತೆಗೆ ಮೊಡವೆ ಸಮಸ್ಯೆ, ತಲೆ ತುರಿಕೆ ಮುಂತಾದ ಸಮಸ್ಯೆ ಕಂಡು ಬರುವುದು. ತಲೆಹೊಟ್ಟಿನ ಸಮಸ್ಯೆಯನ್ನು ಕೂಡಲೇ ಗುಣಪಡಿಸದಿದ್ದರೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು, ಇನ್ನು ತಲೆಹೊಟ್ಟು ಹಣೆಯ ಮೇಲೆ, ಬೆನ್ನಿನ ಮೇಲೆ ಬಿದ್ದರೆ ಆ ಭಾಗದಲ್ಲಿ ಮೊಡವೆಗಳು ಕಂಡುಬರುವುದು.

ತಲೆಹೊಟ್ಟಿಗೆ ಪ್ರಮುಖ ಕಾರಣ ಕೂದಲಿನ ಆರೈಕೆಗೆಂದು ನಾವು ಬಳಸುವ ಹೇರ್ ಪ್ರಾಡೆಕ್ಟ್‌ಗಳು. ಹೇರ್‌ ಕಲರಿಂಗ್, ಕೂದಲಿನಲ್ಲಿ ಎಣ್ಣೆ ಉಳಿಸಿಕೊಳ್ಳುವುದು ಇವೆಲ್ಲಾ ತಲೆಹೊಟ್ಟಿಗೆ ಪ್ರಮುಖ ಕಾರಣಗಳು. ತಲೆ ಬುಡದಲ್ಲಿ ಎಣ್ಣೆ ಹೆಚ್ಚಾದಾಗ, ಎಣ್ಣೆಯಿಲ್ಲದ ಕೂದಲಿನ ಬುಡ ಒಣಗಿದಾಗ ಶಿಲೀಂದ್ರಗಳ ಸೋಂಕಿನಿಂದಾಗಿ ತಲೆಹೊಟ್ಟಿನ ಸಮಸ್ಯೆ ಕಂಡು ಬರುತ್ತದೆ.

ತಲೆಹೊಟ್ಟಿನ ಸಮಸ್ಯೆಯು ನಿಜವಾಗಿಯೂ ತುಂಬಾ ಅಸಹನೆ ಮತ್ತು ಹಿಂಸೆಗೆ ಕಾರಣವಾಗುವುದು. ನಾವು ಬಯಸಿದ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಲು ತಲೆಹೊಟ್ಟಿನಿಂದಾಗಿ ಸಾಧ್ಯವಾಗುವುದೇ ಇಲ್ಲ. ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಆಗ ತಲೆಹೊಟ್ಟು ಬಟ್ಟೆಯ ಮೇಲೆ ಬಂದು ಬಿದ್ದು ಯಾರ ಮುಂದೆಯೂ ಹೋಗಲು ಆತ್ಮವಿಶ್ವಾಸವೇ ಇಲ್ಲದಂತೆ ಆಗಬಹುದು.

ತಲೆಹೊಟ್ಟು ಸಮಸ್ಯೆಗೆ ಕೆಲವೊಂದು ಪರಿಹಾರಗಳು ನಮ್ಮ ಕೈ ಯಲ್ಲೆ ಇದೆ :

ತಲೆ ಹೊಟ್ಟಿನ ಸಮಸ್ಯೆ
ತಲೆ ಹೊಟ್ಟಿನ ಸಮಸ್ಯೆ

ಬಾಳೆಹಣ್ಣನ್ನು ಸೇವಿಸುವುದರಿಂದ ಅದು ಕೂದಲನ್ನು ಆಂತರಿಕವಾಗಿ ಪೋಷಣೆ ಮಾಡುತ್ತದೆ. ಬಾಳೆಹಣ್ಣನ್ನು ಮ್ಯಾಶ್‌ ಮಾಡಿ ತಲೆಗೆ ಹಚ್ಚಿದರೆ ತಲೆ ಹೊಟ್ಟು ಕಡಿಮೆಯಾಗುವುದರ ಜತೆಗೆ ಬೆಸ್ಟ್‌ ಹೇರ್‌ ಕಂಡೀಷನರ್ ಕೂಡ ಹೌದು.

ಪೆಪ್ಪರ್‌ಮೆಂಟ್ ತೈಲ ಕೂಡ ತಲೆಹೊಟ್ಟಿನಿಂದ ಉಂಟಾಗುವ ತಲೆತುರಿಕೆಯನ್ನು ನಿವಾರಿಸುತ್ತದೆ. ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ನೆತ್ತಿಗೆ ನೇರವಾಗಿ ಹಚ್ಚಬಹುದಾಗಿದೆ. ಇದರೊಂದಿಗೆ ತೆಂಗಿನ ಎಣ್ಣೆ, ಹರಳೆಣ್ಣೆಯನ್ನು ಮಿಶ್ರ ಮಾಡಿ ಹಚ್ಚಬಹುದಾಗಿದೆ. ವಾರದಲ್ಲಿ ಎರಡು ಬಾರಿಯಾದರೂ ಹಚ್ಚಬೇಕು.

ಮಳೆಗಾಲದಲ್ಲಿ ತಲೆಹೊಟ್ಟು ಉಂಟಾಗುವುದನ್ನು ತಡೆಯಲು ಎರಡು ದಿನಕ್ಕೊಮ್ಮೆ ತಲೆ ತೊಳೆಯಿರಿ. ತಲೆ ತೊಳೆಯಲು ಮೈಲ್ಡ್ ಶ್ಯಾಂಪೂ ಬಳಸಿ. ಸ್ನಾನಕ್ಕೆ ಮುಂಚೆ ಒಂದು ಚಮಚ ತೆಂಗಿನೆಣ್ಣೆಯನ್ನು ಬಿಸಿ ಮಾಡಿ ತಲೆಗೆ ಹಚ್ಚಿ ನಂತರ ಶ್ಯಾಂಪೂ ಹಚ್ಚಿ ಸ್ನಾನ ಮಾಡಿ.
ಇನ್ನು ಶ್ಯಾಂಪೂ ಅನ್ನು ಹೆಚ್ಚಾಗಿ ಬಳಸಬೇಡಿ ಹಾಗೂ ಪ್ರತಿದಿನ ಹಚ್ಚಬೇಡಿ.ಕೂದಲನ್ನು ತೊಳೆದ ಬಳಿಕ ಚೆನ್ನಾಗಿ ಒಣಗಿಸಿ, ಒಣಗಿಸಲು ಡ್ರೈಯರ್ ಬಳಸುವುದು ಅಷ್ಟು ಉತ್ತಮ ಅಲ್ಲ.

ಅಲೊವೇರಾ ನೈಸರ್ಗಿಕ ತಂಪಿನ ಗುಣಗಳನ್ನು ಹೊಂದಿದ್ದು ಇದು ತುರಿಕೆಯ ನೆತ್ತಿಯನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಅಲೊವೇರಾ ಜೆಲ್ ತೆಗೆದುಕೊಂಡು ಕೂದಲಿನ ಬುಡಕ್ಕೆ ನೆತ್ತಿಗೆ ಹಚ್ಚಿ ಹಾಗೂ 15-20 ನಿಮಿಷ ಹಾಗೆಯೇ ಬಿಡಿ. ವಾರದಲ್ಲಿ ಎರಡು ಬಾರಿ ಈ ವಿಧಾನ ಅನುಸರಿಸಿ.

ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ತೆಂಗಿನೆಣ್ಣೆ ಕೂಡ ತುಂಬಾ ಸಹಕಾರಿ. ತಲೆಬುಡದಲ್ಲಿ ಮಾಯಿಶ್ಚರೈಸರ್ ಕಡಿಮೆಯಾಗಿದ್ದರೆ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ತಲೆ ತೊಳೆದರೆ ತಲೆ ಹೊಟ್ಟಿನ ಸಮಸ್ಯೆ ಕಡಿಮೆಯಾಗುವುದು.

ಲಿಂಬೆ ರಸ ನೈಸರ್ಗಿಕವಾಗಿ ತಲೆಹೊಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡಲಿದ್ದು ಇದರಲ್ಲಿರುವ ಆ್ಯಸಿಡಿಟಿ ಅಂಶದಿಂದ ತಲೆತುರಿಕೆ ಮಾಯವಾಗುತ್ತದೆ. ಲಿಂಬೆ ರಸವನ್ನು ಹತ್ತಿಯ ಉಂಡೆಯ ಸಹಾಯದಿಂದ ಕೂದಲಿನ ಬುಡಕ್ಕೆ ಹಾಗೂ ನೆತ್ತಿಗೆ ಹಚ್ಚಿಕೊಳ್ಳಿ. 10 ನಿಮಿಷ ಹಾಗೆಯೇ ಬಿಟ್ಟು ನಂತರ ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನವನ್ನು ಕೂದಲಿಗೆ ಅನುಸರಿಸಬೇಕು.

ಆ್ಯಪಲ್ ಸಿಡರ್ ವಿನಿಗರ್ ಬಳಸುವುದು
ಆ್ಯಪಲ್ ಸಿಡರ್ ವಿನಿಗರ್ ನಿರ್ಜೀವ ತ್ವಚೆಯನ್ನು ಹೋಗಲಾಡಿಸುವಲ್ಲಿ ಸಹಕಾರಿ. ಆ್ಯಪಲ್ ಸಿಡರ್ ವಿನಿಗರ್ ತಲೆಯ ಪಿ ಹೆಚ್ ಸಮತೋಲನ ಕಾಪಾಡಿ ಶೀಲೀಂದ್ರಗಳು ಸೋಂಕು ಉಂಟಾಗದಂತೆ ತಡೆಯುತ್ತದೆ.

ಎರಡು ಚಮಚ ಆಲೀವ್ ಆಯಿಲ್ ಬಿಸಿ ಮಾಡಿಕೊಳ್ಳಿ. ಈ ಎಣ್ಣೆಯನ್ನು ನಿಮ್ಮ ನೆತ್ತಿಗೆ ಹಾಗೂ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ರಾತ್ರಿಪೂರ್ತಿ ಹಾಗೆಯೇ ಬಿಡಿ. ಬೆಳಗ್ಗೆ ಕೂದಲನ್ನು ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಆಲೀವ್ ಎಣ್ಣೆಯ ಮಸಾಜ್ ಅನ್ನು ಕೂದಲಿಗೆ ಮಾಡಿದರೆ ಒಳ್ಳೆಯದು.

ತಾಜಾ ಕರಿಬೇವನ್ನು ಪೇಸ್ಟ್ ಮಾಡಿ ಇದಕ್ಕೆ ಹಾಲು ಹಾಕಿ ಮಿಕ್ಸ್ ಮಾಡಿ, ಆ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿ 3-4 ಗಂಟೆ ಬಿಡಿ. ನಂತರ ತಣ್ಣೀರಿನಲ್ಲಿ ಕೂದಲನ್ನು ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ. ವಾರದಲ್ಲಿ 2-3 ಬಾರಿ ಈ ರೀತಿ ಮಾಡುತ್ತಾ ಬಂದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಇನ್ನು ಈ ಮಿಶ್ರಣದಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುವುದು ಮಾತ್ರವಲ್ಲ, ಕೂದಲು ಸೊಂಪಾಗಿ ಬೆಳೆಯುವುದು.

ತಲೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ಮೊಸರು ಹಚ್ಚಿ ಅರ್ಧ ಗಂಟೆ ಬಿಟ್ಟು ಮೈಲ್ಡ್ ಶ್ಯಾಂಪೂ ಬಳಸಿ ತಲೆ ತೊಳೆಯಿರಿ. ಮೊಸರು ಹಚ್ಚುವ ಮುನ್ನ ತೆಂಗಿನೆಣ್ಣೆ ಬಿಸಿ ಮಾಡಿ ಮಸಾಜ್ ಮಾಡಿ ನಂತರ ಮೊಸರು ಹಾಕಿದರೆ ಕೂದಲಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ತಲೆಹೊಟ್ಟು ಸಮಸ್ಯೆ ಇಲ್ಲವಾಗುವುದು.ಮೊಸರು ಕೂದಲಿಗೆ ಹೊಳಪ್ಪನ್ನು ಕೊಡುತ್ತದೆ.

ಕೆಲವೊಂದು ಆಹಾರಗಳು ಕೂದಲಿನ ಅರೋಗ್ಯಕ್ಕೆ:

ಕೂದಲಿನ ಅರೋಗ್ಯ
ಕೂದಲಿನ ಅರೋಗ್ಯ

ಶುಂಠಿ
ಅಜೀರ್ಣ ಸಮಸ್ಯೆಯಿಂದಲೂ ತಲೆಹೊಟ್ಟಿನ ಸಮಸ್ಯೆ ಕಾಡುತ್ತದೆ, ಶುಂಠಿ ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು, ಅಲ್ಲದೆ ಶೀಲೀಂಧ್ರಗಳನ್ನು ನಾಶ ಮಾಡಿ ತಲೆಹೊಟ್ಟು ಬರದಂತೆ ತಡೆಯುತ್ತದೆ.

ಸೂರ್ಯಕಾಂತಿ ಬೀಜ
ತಲೆಹೊಟ್ಟನ್ನು ನೈಸರ್ಗಿಕವಾಗಿ ಹೋಗಲಾಡಿಸಲು ಸೂರ್ಯಕಾಂತಿ ಬೀಜವನ್ನು ಬಳಸಬಹುದು. ಇದನ್ನು ಆಹಾರಕ್ರಮದಲ್ಲಿ ಸೇರಿಸಿದರೆ ನಿಮ್ಮ ತಲೆ ಬುಡದ ಆರೋಗ್ಯ ಹೆಚ್ಚುವುದು. ಇದರಲ್ಲಿ ಸತು ಹಾಗೂ ವಿಟಮಿನ್ ಬಿ6 ಇದ್ದು ಜೀರ್ಣಕ್ರಿಯೆಗೆ ಕೂಡ ಸಹಕಾರಿ. ಅಜೀರ್ಣದಿಂದ ತಲೆಹೊಟ್ಟಿನ ಸಮಸ್ಯೆ ಉಂಟಾಗಿದ್ದರೆ ಸೂರ್ಯಕಾಂತಿ ಬೀಜ ತಿಂದು ಸಮಸ್ಯೆಯನ್ನು ಹೋಗಲಾಡಿಸಿ.

ಗೋಧಿ
ತಲೆಹೊಟ್ಟು ಹೋಗಲಾಡಿಸುವ ಅತ್ಯುತ್ತಮವಾದ ಆಹಾರವೆಂದರೆ ಗೋಧಿ. ಇದರಲ್ಲಿ ಸತು ಹಾಗೂ ವಿಟಮಿನ್ ಬಿ6 ಇದ್ದು ಕೂದಲಿನ ಬುಡವನ್ನು ಆಂತರಿಕವಾಗಿ ಆರೈಕೆ ಮಾಡುತ್ತದೆ.

ಸೇಬು
ದಿನಾ ಒಂದು ಸೇಬು ತಿಂದು ವೈದ್ಯರನ್ನು ದೂರವಿಡಿ ಎಂದು ಸೇಬಿನ ಆರೋಗ್ಯವರ್ಧಕ ಗುಣಗಳನ್ನು ವರ್ಣಿಸಲಾಗುವುದು. ಇದರಲ್ಲಿ ವಿಟಮಿನ್ ಬಿ6 ಹಾಗೂ ಜಿಂಕ್ ಹೇರಳವಾಗಿದೆ. ಸೇಬು ತಲೆಹೊಟ್ಟಿನ ಸಮಸ್ಯೆ ನಿವಾರಿಸುವಲ್ಲಿಯೂ ಪರಿಣಾಮಕಾರಿ.

ಕಾಬೂಲ್‌ ಕಡಲೆ
ಚನ್ನಾ ಅಥವಾ ಕಾಬೂಲ್ ಕಡಲೆ ಸೇವನೆ ಒಳ್ಳೆಯದು. ಇದರಲ್ಲಿ ವಿಟಮಿನ್ ಬಿ6 ಹಾಗೂ ಜಿಂಕ್ ಹೇರಳವಾಗಿದೆ. ನಿಮ್ಮ ಆಹಾರ ಕ್ರಮದಲ್ಲಿ ಚೆನ್ನಾ ಸೇರಿಸಿ ಕೂದಲಿನ ಆರೋಗ್ಯ ಹೆಚ್ಚಿಸಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಹಲ್ಯೆ

ಪಂಚ ಪತಿವೃತೆಯರಲ್ಲಿ ಮೊದಲನೆಯವಳು, ಅಹಲ್ಯಾ

ಝಾನ್ಸಿ ರಾಣಿ ಲಕ್ಷ್ಮೀಬಾಯಿ

ಝಾನ್ಸಿ ರಾಣಿ ಲಕ್ಷ್ಮೀಬಾಯಿ