in

ಸರೋಜಿನಿ ನಾಯ್ಡ

ಸರೋಜಿನಿ ನಾಯ್ಡ
ಸರೋಜಿನಿ ನಾಯ್ಡ

ಸರೋಜಿನಿ ನಾಯ್ಡು “ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದಾರೆ. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಕವಯತ್ರಿ. ಇವರು ರಾಷ್ಟ್ರೀಯ ಭಾರತದ ಕಾಂಗ್ರೇಸ್‍‍ನ ಮೊದಲನೆಯ ಮಹಿಳಾ ಅಧ್ಯಕ್ಷರಾದವರು ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾದವರು.

ಸರೋಜಿನಿ ನಾಯ್ಡು ಜನನ :

ಸರೋಜಿನಿ ನಾಯ್ಡ
ಸರೋಜಿನಿ ನಾಯ್ಡ

೧೩ನೇ ಫೆಬ್ರುವರಿ ೧೮೭೯- ಮರಣ: ೨ನೇ ಮಾರ್ಚ್ ೧೯೪೯. ಇವರ ತಂದೆ ವಿಜ್ಞಾನಿ ಮತ್ತು ತತ್ವಜ್ಞಾನಿಗಳಾಗಿದ್ದ ಅಗೋರೆನಾಥ್ ಚಟ್ಟೋಪಾಧ್ಯರು ಮತ್ತು ತಾಯಿ ಬಂಗಾಳಿ ಕವಿಯಿತ್ರಿಯಾದ ಬರಾಡ ಸುಂದರಿ ದೇವಿ. ಸರೋಜಿನಿ ನಾಯ್ಡುರವರು ಅವರ ತಂದೆ-ತಾಯಿಯರ ಎಂಟು ಮಕ್ಕಳಲ್ಲಿ ಮೊದಲನೆಯವಾಗಿದ್ದರು.
ಇವರ ಒಬ್ಬ ಸಹೋದರನಾದ ಬಿರೇಂದ್ರನಾಥ್ ಚಳುವಳಿಗಾರರಾಗಿದ್ದವರು ಮತ್ತೊಬ್ಬ ಸಹೋದರ ಹರಿನಾಥ್ ಕವಿ, ನಾಟಕಗಾರ ಮತ್ತು ನಟನೆಯನ್ನು ಮಾಡುತ್ತಿದ್ದವರು. ಸರೋಜಿನಿ ನಾಯ್ಡುರವರು ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದರು.
ಉರ್ದು, ತೆಲುಗು, ಇಂಗ್ಲೀಷ್, ಬೆಂಗಾಳಿ ಮತ್ತು ಪರ್ಷಿಯನ್ ಭಾಷೆಗಳನ್ನು ನಿರರ್ಗಳವಾಗಿ ಮಾತಾನಾಡುತ್ತಿದ್ದರು. ಇವರು ಹನ್ನೆರಡನೇ ವಯಸ್ಸಿನಲ್ಲಿಯೇ ಮದ್ರಾಸ್ ವಿಶ್ವವಿದ್ಯಾನಿಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆ ಯಲ್ಲಿ ಮೇಲ್ದರ್ಜೆಯಲ್ಲಿ ಪಾಸಾಗಿ ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ಪಡೆದರು. ಇವರ ತಂದೆ ಇವರು ಗಣಿತ ತಜ್ಞೆ ಅಥವಾ ವಿಜ್ಞಾನಿಯಾಗಲಿ ಎಂದು ಬಯಸಿದ್ದರು ಆದರೆ ಸರೋಜಿನಿಯವರು ಕವಿಯಿತ್ರಿಯಾಗಲು ಇಷ್ಟಪಟ್ಟಿದ್ದರು.

ಇವರು ಆಂಗ್ಲಭಾಷೆಯಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಹೈದರಾಬಾದಿನ ನಿಜಾಮರು ಇವರ ಕವಿತೆಗಳಿಂದ ಸ್ಫೂರ್ತಿಗೊಂಡು ವಿದೇಶದಲ್ಲಿ ಕಲಿಯಲು ವಿದ್ಯಾರ್ಥಿವೇತನವನ್ನು ಕೊಟ್ಟರು. ೧೬ನೇ ವಯಸ್ಸಿನಲ್ಲಿ ಇವರು ಮೊದಲು ಇಂಗ್ಲೇಂಡಿನ ಕಿಂಗ್ಸ್ ಕಾಲೇಜಿನಲ್ಲಿ ಮತ್ತು ಆಮೇಲೆ ಕ್ಯಾಬ್ರಿಂಜ್ಡನ ಗಿರ್ಟನ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಅಲ್ಲಿ ಇವರು ಆ ಕಾಲದಲ್ಲಿ ಪ್ರಸಿದ್ಧರಾಗಿದ್ದ ಆರ್ಥರ್ ಸೈಮೊನ್ಸ್ ಮತ್ತು ಎಡ್ಮಂಡ್ ಗೋಸೆಯವರನ್ನು ಭೇಟಿ ಮಾಡಿದರು.
ಗೋಸೆಯವರು ಸರೋಜಿನಿಯವರನ್ನು ಭಾರತದಲ್ಲಿರುವ ಬೆಟ್ಟ-ಗುಡ್ಡಗಳು, ನದಿಗಳು, ದೇವಸ್ಥಾನಗಳು, ಜನರ ಜೀವನ ಕ್ರಮ ಮುಂತಾದ ವಿಷಯಗಳ ಮನದಲ್ಲಿಟ್ಟುಕೊಂಡು ತಮ್ಮ ಕವಿತೆಗಳನ್ನು ರಚಿಸಿದರೆ ಚೆನ್ನಾಗಿರುತ್ತದೆ ಎಂದು ಮನದಟ್ಟು ಮಾಡಿಕೊಟ್ಟರು. ಅದರಂತೆ ಸರೋಜಿನಿ ಯವರು ಸಮಕಾಲೀನ ಇಂಡಿಯಾ ದೇಶದ ಜನರ ಜೀವನಕ್ರಮಗಳನ್ನು ತಮ್ಮ ಕವಿತೆಗಳಲ್ಲಿ ವರ್ಣಿಸಿದರು.

ಸರೋಜಿನಿ ನಾಯ್ಡ
ಸರೋಜಿನಿ ನಾಯ್ಡ

ಇವರು ತಮ್ಮ ಹದಿನೈದನೇ ವಯಸ್ಸಿನಲ್ಲಿ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ಡಾ|| ಗೋವಿಂದರಾಜು ನಾಯ್ಡುರವರನ್ನು ಭೇಟಿಯಾದರು. ನಂತರ ಅವರನ್ನು ಪ್ರೇಮಿಸಿದರು. ಇವರು ತಮ್ಮ ವಿದ್ಯಾಭ್ಯಾಸಗಳನ್ನು ಮುಗಿಸಿ ತಮ್ಮ ೧೯ನೇ ವರ್ಷದಲ್ಲಿ ಗೋವಿಂದರಾಜು ನಾಯ್ಡುರವರನ್ನು ಅಂತರ್ಜಾತಿಯ ಮದುವೆಗಳು ನಡೆಯಲು ಅವಕಾಶವಿಲ್ಲದಿದ್ದ ಕಾಲದಲ್ಲೇ ಮದುವೆಯಾದರು. ಇದು ಇವರು ತೆಗೆದುಕೊಂಡ ಕ್ರಾಂತಿಕಾರಕ ಕ್ರಮವಾಗಿತ್ತು ಆದರೆ ಇವರ ಈ ಪ್ರಯತ್ನಕ್ಕೆ ಇವರ ತಂದೆಯ ಸಂಪೂರ್ಣ ಉತ್ತೇಜನವಿತ್ತು. ಇವರ ಈ ಮದುವೆಯು ಸಂತೋಷಕರದಿಂದ ಕೂಡಿತ್ತು. ಇವರಿಗೆ ಜಯಸೂರ್ಯ, ಪದ್ಮಿನಿ, ರಣಧೀರ್ ಮತ್ತು ಲೈಲಾಮಣಿ ಎನ್ನುವ ನಾಲ್ಕು ಜನ ಮಕ್ಕಳಾದರು.

ಬಂಗಾಳದ ವಿಭಾಗವನ್ನು ತಡೆಯಲು ಸರೋಜಿನಿಯವರು ೧೯೦೫ರಲ್ಲಿ ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿದರು. ಆ ಸಮಯದಲ್ಲಿ ಇವರು ಗೋಪಾಲ್ ಕೃಷ್ಣ ಗೋಖಲೆ, ರವೀಂದ್ರನಾಥ ಟ್ಯಾಗೂರ್, ಮಹಮದ್ ಆಲಿ ಜಿನ್ನ, ಆನಿಬೆಸೆಂಟ್, ಸಿ.ಪಿ. ರಾಮಸ್ವಾಮಿ ಐಯರ್, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂರವರನ್ನು ಭೇಟಿ ಮಾಡಿದರು.
ಮಹಿಳೆಯರು ಅಡಿಗೆಮಾಡಲು ಮಾತ್ರ ಸೀಮಿತವಾಗಿಲ್ಲವೆಂದು ಇವರು ಭಾರತದ ಮಹಿಳೆಯರನ್ನು ಎಚ್ಚರಗೊಳಿಸಿದರು. ಅವರನ್ನು ಅಡಿಗೆ ಮನೆಯ ಆಚೆಗೂ ಇರುವ ಪ್ರಪಂಚವನ್ನು ನೋಡಲು ಹೊರ ಬರುವಂತೆ ಪ್ರೇರೇಪಿಸಿದರು.

ರಾಜ್ಯ-ರಾಜ್ಯಗಳಲ್ಲಿರುವ, ಒಂದೊಂದು ಜಿಲ್ಲೆಗಳಲ್ಲೂ ಸಂಚರಿಸಿ ಮಹಿಳಾ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಹೇಳಿದರು. ಭಾರತದಲ್ಲಿ ಮಹಿಳೆಯರು ಸ್ವ-ಗೌರವವನ್ನು ಪಡೆಯುವಂತೆ ಮಾಡಿದರು. ೧೯೨೫ರಲ್ಲಿ ಸರೋಜಿನಿಯವರು ಕಾನ್ಪುರದಲ್ಲಿ ನಡೆದ ಭಾರತದ ರಾಷ್ಟ್ರೀಯ ಕಾಂಗ್ರೇಸ್‍ನ ವಾರ್ಷಿಕ ಅಧಿವೇಶನದ ಅಧ್ಯಕ್ಷರಾಗಿದ್ದರು. ಸಿವಿಲ್ ಅವಿಧೇಯತೆಯ ಮೂಮೆಂಟ್ಸ್‍ನ ಚಳುವಳಿಯಲ್ಲಿ ಭಾಗವಹಿಸಿ ಗಾಂಧೀಜಿ ಮುಂತಾದ ಚಳುವಳಿಗಾರರೊಂದಿಗೆ ಜೈಲಿಗೆ ಹೋದರು. ೧೯೪೨ರಲ್ಲಿ ’ಕ್ವಿಟ್ ಇಂಡಿಯಾ’ ಚಳುವಳಿಯಲ್ಲಿ ಭಾಗವಹಿಸಿ ೨೧ ತಿಂಗಳ ಕಾಲ ಗಾಂಧೀಜಿ ಮುಂತಾದ ನಾಯಕರೊಂದಿಗೆ ಜೈಲಿನಲ್ಲಿ ಕಳೆದರು.ಇವರು ಗಾಂಧೀಜಿಯೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದ್ದರು ಮತ್ತು ಅವರನ್ನು ಮಿಕ್ಕಿ ಮೌಸ್ ಎಂದು ಕರೆಯುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಸರೋಜಿನಿಯವರು ಉತ್ತರ ಪ್ರದೇಶದ ರಾಜ್ಯಪಾಲರಾದರು. ಇವರು ಮೊದಲನೆಯ ಮಹಿಳಾ ರಾಜ್ಯಪಾಲರು. ಸರೋಜಿನಿಯವರು ತಮ್ಮ ಕಛೇರಿಯಲ್ಲಿ ೨ನೇ ಮಾರ್ಚ್ ೧೯೪೯ರಲ್ಲಿ ನಿಧನರಾದರು.

ಇವರು ಮೊದಲನೆಯ ಮಹಿಳಾ ರಾಜ್ಯಪಾಲರು.
ಭಾರತದ ನೈಟಿಂಗೇಲ್ ಎಂಬ ಬಿರುದು ಇವರಿಗಿದೆ.
‘ಭಾರತದ ಕೋಗಿಲೆ’ ಎಂಬ ಬಿರುದು ಇವರಿಗಿದೆ.
ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹಸಿರು ಸೊಪ್ಪುಗಳು

ದೇಹಕ್ಕೆ ಹಿತವಾದ ಹಸಿರು ಸೊಪ್ಪುಗಳು

ಮೊಣಕಾಲು ನೋವು

ಮೊಣಕಾಲು ನೋವು, ಗಂಟು ನೋವು ಎಲ್ಲರಲ್ಲೂ ಕಾಡುವ ಸಮಸ್ಯೆ