in

ನೂರಾರು ವರ್ಷಗಳ ಕಾಲ ಬದುಕುವ ಆಲದ ಮರ

ಆಲದ ಮರ
ಆಲದ ಮರ

ಇದು ಹಲಸಿನ ಕುಟುಂಬಕ್ಕೆ ಸೇರಿದ ಬೃಹತ್ತಾಗಿ ಬೆಳೆಯುವ ವೃಕ್ಷವಾಗಿದ್ದು ಮೊದಲಿಗೆ ಎಪಿಫೈಟಿಕ್ ಆಗಿ ಜನ್ಮ ತಾಳುತ್ತದೆ. ಎಪಿಫೈಟಿಕ್ ಅಂದರೆ ಬೇರೊಂದು ಮರದ ಮೇಲೆ ಬಿದ್ದ ಬೀಜ ಹುಟ್ಟಿ ಅಲ್ಲಿಂದ ತನ್ನ ಜೀವನ ಚಕ್ರ ಆರಂಭಿಸುತ್ತದೆ. ಇದು ನಮ್ಮ ದೇಶದ ರಾಷ್ಟ್ರೀಯ ವೃಕ್ಷವಾಗಿದೆ. ಅಶ್ವತ್ಥ ವೃಕ್ಷವೂ ಇದೇ ಜಾತಿಯದ್ದಾಗಿದೆ.

ಆಲದ ಮರ ಒಮ್ಮೆ ನೆಲದ ಮೇಲೆ ಬೇರು ಬಿಟ್ಟರೆ, ಅದು ನೂರಾರು ವರ್ಷಗಳ ಕಾಲ ಬೆಳೆದು ಬದುಕ ಬಲ್ಲದು. ಆಲದ ಮರ ಬೆಳೆದಂತೆ ಅನೇಕ ಬಿಳಲುಗಳನ್ನು ಹೊಂದಿ ವಿಸ್ತಾರವಾಗುತ್ತಾ, ಸುಮಾರು ಒಂದು ಎಕರೆಯಷ್ಟು ಸ್ಥಳವನ್ನು ಅದು ಆಕ್ರಮಿಸಿಕೊಂಡು ಬಿಡುತ್ತದೆ.
ಮನುಷ್ಯನ ಜೀವನಕ್ಕೂ ಆಲದ ಮರಕ್ಕೂ ಅವಿನಾಭಾವ ಸಂಬಂಧವಿದೆ. ಸಾಮಾನ್ಯವಾಗಿ ತಂದೆಯನ್ನು ಆಲದ ಮರಕ್ಕೆ ಹೋಲಿಸುವರು. ಏಕೆಂದರೆ ಇದು ಬಹುಪಯೋಗಿ ಮರ. ಹಾಗಾಗಿ ಮನುಷ್ಯರ ವಂಶಾವಳಿಯನ್ನು ಆಲದ ಮರಕ್ಕೆ ಹೋಲಿಸುತ್ತಾರೆ. ‘ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ’ ಎಂಬ ನುಡಿಗಟ್ಟು ಪ್ರಚಲಿತದಲ್ಲಿದೆ.
ಇದು ಸು. 100′ ಎತ್ತರ ಬೆಳೆದು ಒಳ್ಳೆ ಹರವಾಗಿ ಹಬ್ಬುತ್ತದೆ. ಮರದ ಟೊಂಗೆಗಳಿಂದ ಜೋತುಬಿದ್ದ ಬಿಳಲುಗಳು ಅಥವಾ ಜಡೆ ಬೇರುಗಳು ಟೊಂಗೆಗಳಿಗೆ ಕಂಬಗಳಂತೆ ಆಧಾರ ಕೊಟ್ಟು ಅದರ ಹಬ್ಬುವಿಕೆಗೆ ಸಹಾಯ ಮಾಡುತ್ತವೆ. ಈ ಮರಗಳನ್ನು ದಾರಿಯುದ್ದಕ್ಕೂ ನೆರಳಿಗಾಗಿ ಬಳಸುತ್ತಾರೆ.
ಇದರ ಎಲೆ ಆಡು, ಕುರಿ, ದನಕರುಗಳಿಗೆ ಒಳ್ಳೆಯ ಆಹಾರ. ಕಾಗದ ತಯಾರಿಕೆಗೆ ಬೇಕಾಗುವ ಪಲ್ಪನ್ನು ತಯಾರಿಸಲು ಇದರ ಕಟ್ಟಿಗೆಯನ್ನು ಬಳಸುವರು. ಈ ಮರ ಸೌದೆಗೆ ಉಪಯೋಗವಾಗುತ್ತದೆ. ಆಲದ ಮರದ ಹಾಲನ್ನು ಹಲ್ಲುನೋವಿನ ಶಮನಕ್ಕೂ ಗಂಟುಕಟ್ಟಿದ ಹುಣ್ಣುಗಳಿಗೆ, ಬೆಚ್ಚಾರದಂತೆ ಬಾವು ಬಂದ ಭಾಗಕ್ಕೆ ಲೇಪವಾಗಿಯೂ ಉಪಯೋಗಿಸುವುದುಂಟು.
ಚಿಗುರಿನ ಕಷಾಯವನ್ನು ಭೇದಿಗೆ ಔಷಧವಾಗಿ ಕೊಡುತ್ತಾರೆ. ಹಾಲನ್ನು ಸಂಧಿವಾತಕ್ಕೆ ಉಪಯೋಗಿಸುತ್ತಾರೆ. ಆಲದ ಹಣ್ಣು ಅಳಿಲುಗಳಿಗೆ ತುಂಬಾ ಪ್ರಿಯವಾದ ಆಹಾರ. ಆಲದ ಗಿಡವನ್ನು ಕುಬ್ಜವಾಗಿಸಿ (ಬೋನ್ಸಾಯ್) ಅಲಂಕಾರಿಕ ಗಿಡವಾಗಿಯೂ ಬಳಸುತ್ತಾರೆ.

ನೂರಾರು ವರ್ಷಗಳ ಕಾಲ ಬದುಕುವ ಆಲದ ಮರ
ದೊಡ್ಡ ಆಲದ ಮರ

ಬೆಂಗಳೂರಿನಲ್ಲಿ ಇದೆ ದೊಡ್ಡ ಆಲದ ಮರ

ದೊಡ್ಡ ಆಲದ ಮರ ಬೆಂಗಳೂರಿನಿಂದ ೨೮ ಕಿ.ಮೀ. ದೂರವಿರುವ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿ ೩ ಎಕರೆಯಲ್ಲಿ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ ಹೊಂದಿರುವ ಪುರಾತನ ಆಲದ ಮರವಾಗಿದೆ. ೪೦೦ ವರ್ಷಗಳಷ್ಟು ವಯಸ್ಸಾಗಿರುವ ಈ ವಿರಳ ಆಲದ ಮರಕ್ಕೆ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ. ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಕ್ರಮವಾಗಿ ಮೊದಲ ಮೂರು ದೈತ್ಯ ಆಲದ ಮರಗಳಿವೆ. ಆಲದ ಮರದ ಎತ್ತರ ೯೫ ಅಡಿ. ಕೊಂಬೆಗಳು. ದೈತ್ಯ ಮರ ನಾಲ್ಕು ೩ ಎಕರೆಯಲ್ಲಿ ಆವರಿಸಿದೆ. ಜೋಲಾಡುವ ಸಾವಿರಾರು ಬೇರುಗಳದ್ದೇ ವಿಶಿಷ್ಟ ಆಕರ್ಷಣೆ. ಅವುಗಳ ಒಂದು ಭಾಗವನ್ನೇ ಚಚರವಾಗಿಸಿಕೊಂಡ ಮುನೇಶ್ವರ ಸ್ವಾಮಿ ದೇವಾಲಯ. ಹೆಮ್ಮರ ವೀಕ್ಷಿಸಲು ಬರುವವರು ದಣಿವಾರಿಸಿಕೊಳ್ಳಲು ಕಲ್ಲು ಬೆಂಚುಗಳು ಇವೆ. ೨೦೦೦ರಲ್ಲಿ ಮರದ ಮುಖ್ಯ ಕಾಂಡವು ರೋಗಕ್ಕೆ ತುತ್ತಾಗಿ ನಶಿಸಿತು. ಮರ ಅನೇಕ ಕೊಂಬೆಗಳ ಪೋಷಣೆಯಿಂದ ವೇಗವಾಗಿ, ಅಷ್ಟೇ ಬಲಿಷ್ಠವಾಗಿ ಬೆಳೆಯುತ್ತಿದೆ. ಕೊಂಬೆಗಳು ನಿರಂತರ ಜಟೆಯಂತೆ ಬೇರು ಅರ್ಥಾತ್ ಬಿಳಲುಗಳನ್ನು ನೆಲದಾಳಕ್ಕೆ ಇಳಿಬಿಟ್ಟಿವೆ.

ಸ್ಥಳೀಯರು ಹೇಳುವ ಬಾಯಿಮಾತಿನ ಕಥೆಯ ಪ್ರಕಾರ ಹಿಂದೆ ಈಗಿರುವ ಆಲದಮರದ ಜಾಗದಲ್ಲಿ ಧಾನ್ಯದ ಕಣ ಮಾಡುತ್ತಿದ್ದರಂತೆ, ಕಣವನ್ನು ಹದಗೊಳಿಸಿ ಕಣದ ಮೇಟಿಯಾಗಿ ಆಲದ ಕಡ್ಡಿಯನ್ನು ನೆಟ್ಟಿದ್ದರು ಮೇಟಿಯನ್ನು ಕಣದ ಮಧ್ಯಭಾಗದಲ್ಲಿ ನೆಟ್ಟಿರುತ್ತಾರೆ. ಮೇಟಿಯ ಸುತ್ತಲೂ ಹಗ್ಗದಿಂದ ಕಟ್ಟಿರುವ ಎತ್ತುಗಳನ್ನು ತಿರಿಗಿಸುತ್ತಾರೆ. ಈ ರೀತಿ ಎತ್ತುಗಳ ಕಾಲ್ತುಳಿತಕ್ಕೆ ಸಿಕ್ಕಿದ ರಾಗಿ ತೆನೆಯಲ್ಲಿನ ರಾಗಿ ತೆನೆಯಿಂದ ಪ್ರತ್ಯೇಕಗೊಳ್ಳುತ್ತದೆ. ರಾಗಿ ತುಳಿಸುವ ಈ ದೃಶ್ಯವನ್ನು ರೈತರು ಸುಗ್ಗಿ ಕಾಲದಲ್ಲಿ ಕಣಗಳಲ್ಲಿ ಕೆಲಸ ಮಾಡುವಾಗ ಕಾಣಬಹುದು. ಮೇಟಿಕಡ್ಡಿಯು ಒಂದೇ ರಾತ್ರಿಯಲ್ಲಿ ಆಶ್ಚರ್ಯಕರವಾಗಿ ಚಿಗುರಿ ಬೆಳೆದಿತ್ತು ಇದನ್ನು ನೋಡಿದ ಜಮೀನಿನ ಮಾಲೀಕ ಸಂಪ್ರದಾಯದಂತೆ ದೇವರುಗಳಲ್ಲಿ ಶಾಸ್ತ್ರ ಕೇಳಿದಾಗ ಅದು ದೇವರ ಮಹಿಮೆ ಎಂದು ತಿಳಿಯಲ್ಪಟ್ಟಿತು. ಹೀಗಿರುವಾಗ ಮಾಲೀಕನಿಗೆ ಕನಸಿನಲ್ಲಿ ಮುನೇಶ್ವರ ದೇವರು ಕಂಡು ಆಲದ ಸಸಿಯ ಬಗ್ಗೆ ತಿಳಿಸುತ್ತ ಆ ಜಾಗದಲ್ಲಿ ತಾನು ನೆಲೆಸುವುದಾಗಿ ತಿಳಿಸಿದನು. ಆಗಿನಿಂದ ದೇವರ ಆಜ್ಞೆಯಂತೆ ಅಲ್ಲೇ ಮುನೇಶ್ವರ ದೇವರ ಕಲ್ಲಿನ ಬೆನಕ ಪೂಜೆ ಮಾಡುತ್ತ ಮರವನ್ನು ಕಡಿಯದೆ ಸಂರಕ್ಷಿಸಿದರು. ಅದೇ ಮರ ಇಂದು ಬೃದಾಕಾರವಾಗಿ ಬೆಳೆದು ದೊಡ್ಡ ಆಲದಮರವೆಂದು ವಿಶ್ವ ಪ್ರಸಿದ್ದವಾಗಿದೆ.

ನೂರಾರು ವರ್ಷಗಳ ಕಾಲ ಬದುಕುವ ಆಲದ ಮರ
ಆಲದ ಮರದ ಸಂರಕ್ಷಣೆ

ಕರ್ನಾಟಕ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯು ಆಲದ ಮರದ ಸಂರಕ್ಷಣೆಯ ಹೊಣೆ ವಹಿಸಿಕೊಂಡಿದೆ. ನಾಲ್ಕು ಎಕರೆ ಪ್ರದೇಶಕ್ಕೆ ಸುತ್ತ ಕಬ್ಬಿಣದ ಗ್ರಿಲ್ ಹಾಕಲಾಗಿದೆ. ಪ್ರವಾಸೋದ್ಯಮ ಇಲಾಖೆ ದೊಡ್ಡ ಆಲದ ಮರವನ್ನು ಪಾರಂಪರಿಕ ವೃಕ್ಷವೆಂದು ಘೋಷಿಸಿ ತಾಣವನ್ನು ಪ್ರವಾಸಿ ಕೇಂದ್ರವೆಂದು ಸಾರಿದೆ. ಕೇಂದ್ರ ಸರ್ಕಾರಕ್ಕೂ ಪ್ರದೇಶವನ್ನು ಸರ್ವತೋಮುಖ ಅಭಿವೃದ್ಧಿಗೆ ಪರಿಗಣಿಸಬೇಕೆಂದು ಶಿಫಾರಸು ಮಾಡಿದೆ. ಕುಡಿಯುವ ನೀರಿನ ವ್ಯವಸ್ಥೆಯಿದೆ. ಕೋತಿಗಳ ಕಾಟ ಜೋರಾಗಿ ಇದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚಪಾತಿ

ದಿನನಿತ್ಯದ ಆಹಾರ ಚಪಾತಿ

ಸಂಪ್ರದಾಯ ಉಡುಗೆ ಸೀರೆ

ಭಾರತೀಯ ಸಂಪ್ರದಾಯ ಉಡುಗೆ ಸೀರೆ