in

ಬಹು ಉಪಯೋಗಿ ಕಾಮಕಸ್ತೂರಿ ಇದರ ಬೀಜದಿಂದ ಎಷ್ಟೆಲ್ಲಾ ಅರೋಗ್ಯ ಲಾಭವಿದೆ

ಕಾಮಕಸ್ತೂರಿ
ಕಾಮಕಸ್ತೂರಿ

ಕಾಮ ಕಸ್ತೂರಿ ಅಥವಾ ತುಳಸಿ ಬೀಜ ಎಂದೇ ಜನಪ್ರಿಯವಾಗಿರುವ ಪದಾರ್ಥವು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ತನ್ನ ಶಕ್ತಿಯುತ ಕಪ್ಪು ಬೀಜಗಳಿಂದ ಚಿಕಿತ್ಸೆ ನೀಡುತ್ತದೆ. ಈ ತುಳಸಿ ಬೀಜಗಳು ತೂಕವನ್ನು ಇಳಿಕೆ ಮಾಡಿಕೊಳ್ಳುವುದರಿಂದ ಹಿಡಿದು ಚರ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವವರೆಗೆ ಸಾಕಷ್ಟು ಉಪಯೋಗಗಳನ್ನು ಶತಮಾನಗಳಿಂದಲೂ ನೀಡುತ್ತಲೇ ಇದೆ. ಆದರೆ ಇಂದಿಗೂ ಕೆಲವರಿಗೆ ಕಾಮಕಸ್ತೂರಿ ಬೀಜದ ಉಪಯೋಗ ತಿಳಿದಿಲ್ಲ. ಹಳ್ಳಿ ಮನೆಯ ಹಿತ್ತಲಿನಲ್ಲಿ, ಹೂದೋಟದಲ್ಲಿ ಬೆಳೆಯುವ, ನೋಡಲು ತುಳಸಿಯಂತೆಯೇ ಕಾಣುವ ಸಸ್ಯ ಕಾಮಕಸ್ತೂರಿ. ಸುಗಂಧಭರಿತವಾಗಿರುವ ಇದರ ಎಲೆಗಳನ್ನು ದೇವರ ಪೂಜೆಗೆ, ಹೂವಿನೊಂದಿಗೆ ಸೇರಿಸಿ ಮುಡಿದುಕೊಳ್ಳಲು ಬಳಸುತ್ತಾರೆ. ತುಳಸಿಯಂತೆಯೇ ಹೂವು, ತೆನೆ ಬಿಡುವ ಕಾಮ ಕಸ್ತೂರಿಯ ಬೀಜಗಳನ್ನು ತಂಪು ಪಾನೀಯದಲ್ಲಿ ಬಳಸುತ್ತಾರೆ. ಅಷ್ಟೇ ಅಲ್ಲ, ಈ ಸಸ್ಯವನ್ನು ಮನೆಮದ್ದಾಗಿ, ಅನೇಕ ಸಣ್ಣ-ಪುಟ್ಟ ಆರೋಗ್ಯ ಬಾಧೆಗಳನ್ನು ದೂರ ಮಾಡಲೂ ಉಪಯೋಗಿಸಬಹುದು.

ಇನ್ನೇನು ಬೇಸಿಗೆ ಕಾಲ ಶುರುವಾಗುತ್ತಿದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಈ ತುಳಸಿ ಬೀಜಗಳನ್ನು ಸೇವನೆ ಮಾಡಬಹುದು. ದೊಡ್ಡ ರೆಸ್ಟೋರೆಂಟ್‌ಗಳಲ್ಲಿ ತುಳಸಿ ಬೀಜಗಳನ್ನು ಬೆರಸಿರುವ ಜ್ಯೂಸ್‌, ಮಿಲ್ಕ್‌ ಶೇಕ್‌, ಫಾಲುಡಾದಂತಹ ದ್ರವ ಪದಾರ್ಥಗಳ ರುಚಿಯನ್ನು ನೀವು ಸವಿದಿರಬಹುದು.
ಈ ತುಳಸಿ ಬೀಜಗಳು ಅತ್ಯುತ್ತಮವಾದ ಶೀತಕಗಳಲ್ಲಿ ಒಂದಾಗಿದ್ದು, ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ.


​ಮಧುಮೇಹ ಶಮನ :

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಈ ತುಳಸಿ ಬೀಜಗಳು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಟೈಪ್‌ 2 ಮಧುಮೇಹ ಹೊಂದಿರುವವರಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿ, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.ತುಳಸಿ ಬೀಜಗಳನ್ನು ರಾತ್ರಿ ನೆನಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ಕುಡಿಯಬಹುದು.
ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ.
ಮಲಬದ್ಧತೆಯನ್ನು ನಿವಾರಿಸುತ್ತದೆ.ಮಲಬದ್ಧತೆ, ಹೊಟ್ಟೆ ನೋವು, ಎದೆಯಲ್ಲಿ ಉರಿಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ತುಳಸಿ ಬೀಜಗಳು ಅತ್ಯುತ್ತಮವಾದ ಚಿಕಿತ್ಸೆ ನೀಡುತ್ತದೆ.

ತುಳಸಿ ಅಥವಾ ಕಾಮ ಕಸ್ತೂರಿ ಬೀಜಗಳು ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಅವುಗಳು ಸೌಮ್ಯವಾದ ತುಳಸಿ ಪರಿಮಳವನ್ನು ಹೊಂದಿದ್ದು, ಒಮೆಗಾ 3, ಕೊಬ್ಬಿನಾಮ್ಲಗಳು, ವಿಟಮಿನ್‌ ಎ, ಬಿ, ಇ ಮತ್ತು ಕೆ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್‌ ಮತ್ತು ಕಬ್ಬಿಣದಂತಹ ವಿವಿಧ ರೀತಿಯ ಪೋಷಕಾಂಶಗಳಿಂದ ಶ್ರೀಮಂತವಾಗಿದೆ.

ಬಹು ಉಪಯೋಗಿ ಕಾಮಕಸ್ತೂರಿ ಇದರ ಬೀಜದಿಂದ ಎಷ್ಟೆಲ್ಲಾ ಅರೋಗ್ಯ ಲಾಭವಿದೆ
ಕಾಮಕಸ್ತೂರಿ ಬೀಜ

ಕಾಮ ಕಸ್ತೂರಿ ಬೀಜವನ್ನು ದಿನಾಲೂ ಉಪಯೋಗಿಸಿ ಇದರಿಂದ ಹೊಟ್ಟೆ ಭಾಗದ ಕೊಬ್ಬನ್ನು ಕರಗಿಸಬಹುದು. ಹಾಗು ನಮ್ಮ ದೇಹದ ತೂಕವನ್ನು ಇಳಿಸಲು ಸಹಾಯವಾಗುತ್ತದೆ. ಇದು ಆಂಟಿಬಯೋಟಿಕ್ಸ್ ಆಗಿ ಕೆಲಸ ಮಾಡುತ್ತದೆ. ಇದನ್ನು ಪ್ರತಿದಿನ ರಾತ್ರಿ ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟರಾಲ್ ಅನ್ನು ಹೊರಗಡೆ ಹಾಕಲು ಸಹಾಯವಾಗುತ್ತದೆ. ಇದನ್ನು ಬೇಸಿಗೆ ಅಲ್ಲಿ ಪ್ರತಿನಿತ್ಯ ಕುಡಿಯುವುದರಿಂದ ನಮಗೆ ಡಿಹೈಡ್ರಾಷನ್ ಇಂದ ಮುಕ್ತಿ ಸಿಗುತ್ತದೆ. ನಿಮ್ಮ ದೇಹದ ಉಷ್ಣತೆ ಹೆಚ್ಚಿದರೆ ನೀವು 5 – 6 ದಿನ ಇದನ್ನು ಕುಡಿಯುತ್ತ ಬಂದರೆ ನಿಮ್ಮ ದೇಹದ ಉಷ್ಣತೆ ಅನ್ನು ಕಡಿಮೆ ಆಗುತ್ತದೆ. ಥೈರಾಯಿಡ್ ಸಮಸ್ಯೆ ಇದ್ದರೆ ಇದೊಂದು ಒಳ್ಳೆ ಮನೆ ಮದ್ದು. ಇದನ್ನು ದಿನಾಲೂ ಕುಡಿಯುತ್ತ ಬನ್ನಿ ಥೈರಾಯಿಡ್ ಇಂದ ಮುಕ್ತಿ ಕಾಣುತ್ತೀರಿ. ಸಕ್ಕರೆ ಕಾಯಿಲೆ ಇರುವವರು ಕೂಡ ಇದನ್ನು ಸೇವನೆ ಮಾಡುವುದರಿಂದ ಡಯಾಬೆಟಿಕ್ಸ್ ಕಂಟ್ರೋಲ್ ಮಾಡುತ್ತದೆ. ಹುಳುಕಡ್ಡಿ ಅಥವಾ ಖಜ್ಜಿ ಸಮಸ್ಯೆ ಅಥವಾ ಸೋರಿಯಾಸಿಸ್ ಅಂತ ಸಮಸ್ಯೆಗಳಿದ್ದರೆ ಈ ಬೀಜವನ್ನು ಚೆನ್ನಾಗಿ ಅರೆದು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ತೊಂದರೆ ಆಗಿರುವ ಭಾಗಕ್ಕೆ ಹಚ್ಚುತ್ತಾ ಬನ್ನಿ. ಇದರಿಂದ ಬೇಗ ಗುಣಮುಖ ಹೊಂದಬಹುದು.

ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ಶ್ರಮ ವಹಿಸುವ ಅಗತ್ಯವಿದೆ. ಅದರಲ್ಲೂ ತೂಕ ನಿರ್ವಹಣೆಯ ವಿಷಯಕ್ಕೆ ಬಂದಾಗ ಹೆಚ್ಚು ಜಾಗರೂಕತೆಯಲ್ಲಿ ಇದ್ದರು ಕೂಡ ತೂಕವನ್ನು ಸಮರ್ಪಕವಾಗಿ ಕಾಪಾಡಿಕೊಳ್ಳಲು ಹೆಣಗಾಡಬೇಕಾಗಬಹುದು.

ಶೀತ, ಜ್ವರಕ್ಕೆ ಕಾಮಕಸ್ತೂರಿಯಿಂದ ಪರಿಹಾರ :
ಶೀತವಾಗಿ ಮೂಗಿನಿಂದ ನೀರು ಸುರಿಯುತ್ತಿದ್ದರೆ ಮತ್ತು ಜ್ವರ ಬರುತ್ತಿದ್ದರೆ, ಕಾಮಕಸ್ತೂರಿ ಎಲೆಗಳ ಕಷಾಯವನ್ನು ಮಾಡಿ, ಆ ಕಷಾಯಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ, ಕುಡಿಯುವುದರಿಂದ ಶೀತ, ಜ್ವರ ಗಳು ಕಡಿಮೆಯಾಗುತ್ತವೆ.

ಇದು ಮೃದುವಾದ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಹಾಗಾಗಿ ಮಲಗುವ ಮಂಚೆ ಕಾಮಕಸ್ತೂರಿ ಬೀಜದ ಹಾಲನ್ನು ನಿಯಮಿತವಾಗಿ ಕುಡಿಯಿರಿ. ನಿಮ್ಮ ಮಲಬದ್ಧತೆಯ ಸಮಸ್ಯೆಯಿಂದ ಪಾರಾಗಿ.

ಆರೋಗ್ಯಕರವಾದ ಚರ್ಮಕ್ಕೆ ತುಳಸಿ ಬೀಜಗಳು :
ತುಳಸಿ ಬೀಜಗಳನ್ನು ಪುಡಿ ಮಾಡಿ, ತೆಂಗಿನ ಎಣ್ಣೆಯಲ್ಲಿ ಸೇರಿಸಿ ಪೀಡಿತ ಚರ್ಮ ಪ್ರದೇಶಗಳಿಗೆ ಅನ್ವಯಿಸುವುದರಿಂದ ಎಗ್ಜಿಮಾ ಮತ್ತು ಸೋರಿಯಾಸಿಸ್‌ನಂತಹ ಹಲವಾರು ಚರ್ಮದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಬಹು ಉಪಯೋಗಿ ಕಾಮಕಸ್ತೂರಿ ಇದರ ಬೀಜದಿಂದ ಎಷ್ಟೆಲ್ಲಾ ಅರೋಗ್ಯ ಲಾಭವಿದೆ
ಕಾಮಕಸ್ತೂರಿ


ಡಯಟಿಷಿಯನ್ ಕೂಡ ಕಾಮಕಸ್ತೂರಿ ಅಥವಾ ಸಬ್ಜಾ ತೂಕ ಇಳಿಕೆ ಮಾಡುವಲ್ಲಿ ಸಹಕಾರಿಯಾಗಿದೆ ಎಂದು ಹೇಳುತ್ತಾರೆ. ಇದು ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ನಿಮ್ಮ ಡಯಟ್‌ ಚಾರ್ಟ್ ನಲ್ಲಿ ಸೇರಿಸುವುದನ್ನು ಮರೆಯಬೇಡಿ.
ರಾತ್ರಿಯ ವೇಳೆ ಒಂದು ಲೋಟ ನೀರಿಗೆ ಒಂದು ಚಮಚ ತುಳಸಿ ಬೀಜವನ್ನು ನೆನಸಿ ಮರುದಿನ ಕುಡಿಯಿರಿ.
ಹೀಗೆ ನಿಯಮಿತವಾಗಿ ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗಿ ತೂಕ ಇಳಿಕೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಎರಡು ಚಮಚ ಸಬ್ಜಾವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಎರಡು ಚಮಚ ಸಬ್ಜಾದಲ್ಲಿ 40ಕ್ಯಾಲೋರಿ ಇದ್ದು 11 ಗ್ರಾಂ ಪ್ರೊಟೀನ್, 5 ಗ್ರಾಂ ಕಾರ್ಬೋಹೈಡ್ರೇಟ್ಸ್, 2 ಗ್ರಾಂ ನಾರಿನಂಶವಿರುವುದರಿಂದ ತೂಕ ಇಳಿಕೆಗೆ ಸರಿಯಾದ ವಸ್ತು ಇದಾಗಿದೆ. ಇದನ್ನು ಪ್ರತಿದಿನ ಬೆಳಗ್ಗೆ ತೆಗೆದುಕೊಳ್ಳುವುದರಿಂದ ಮೈ ಬೊಜ್ಜು ಕರಗುವುದು.ಮಲಬದ್ಧತೆಗೆ ಕಾಮ ಕಸ್ತೂರಿ ಉತ್ತಮ ಪರಿಹಾರವಾಗಿದೆ. ಕಾಮ ಕಸ್ತೂರಿ ಬೀಜಗಳನ್ನು ನೀರಿನಲ್ಲಿ ನೆನೆಸಿದರೆ, ಅದು ಚೆನ್ನಾಗಿ ನೆನೆದು, ಉಬ್ಬಿ ಲೋಳೆಯಂತಾದಾಗ, ಅದಕ್ಕೆ ಸ್ವಲ್ಪ ಕಲ್ಲುಸಕ್ಕರೆಯ ಪುಡಿಯನ್ನು ಸೇರಿಸಿ, ಸೇವಿಸುವುದರಿಂದ ದೇಹ ತಂಪಾಗಿ, ಮಲಬದ್ಧತೆಯು ನಿವಾರಣೆಯಾಗುತ್ತದೆ.

ಕಾಮಕಸ್ತೂರಿ ಬೀಜಗಳನ್ನು ರಾತ್ರೆ ನೆನೆಹಾಕಿದರೆ ಅದು ಅಂಟು ಅಂಟಾಗಿ, ಲೋಳೆಯಂತೆ ಆಗಿರುತ್ತದೆ. ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ರಕ್ತ ಭೇದಿ ನಿಧಾನವಾಗಿ ಕಡಿಮೆಯಾಗುತ್ತದೆ.

ಕಾಮಕಸ್ತೂರಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಾಮಕಸ್ತೂರಿಯು ಪ್ಲೈವನೋಯ್ಡ್ಸ್ ಅಂಶವನ್ನು ಹೊಂದಿದೆ. ಆದ್ದರಿಂದ ಕಾಮಕಸ್ತೂರಿ ಬೀಜವನ್ನು ನೆನೆಹಾಕಿ, ಹಾಲು ಮತ್ತು ಜೇನುತುಪ್ಪ ಸೇರಿಸಿ ತಂಪು ಪಾನೀಯದ ಹಾಗೆ ಉಪಯೋಗಿಸುವುದರಿಂದ, ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಕಾಮಕಸ್ತೂರಿ ಬೀಜಗಳು ಅಂಗಡಿಗಳಲ್ಲಿ ಸಿಗುತ್ತವೆ. ಅಷ್ಟೇನೂ ಹೆಚ್ಚು ಹಣ ಕೊಡಬೇಕಾಗಿಲ್ಲ. ಆರೋಗ್ಯಕ್ಕೆ ಒಳ್ಳೆಯದು ಅಂದ ಮೇಲೆ ಅಡುಗೆಮನೆಯ ಡಬ್ಬಿಯಲ್ಲಿ ಒಂದು ಸ್ಥಾನ ಕೊಡಲೇಬೇಕು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ತೆಂಗಿನಕಾಯಿ ಮರ

ಕಲ್ಪವೃಕ್ಷ ತೆಂಗಿನ ಮರ

ಅಪ್ರತಿಮ ದೇಶಭಕ್ತ ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್

ಅಪ್ರತಿಮ ದೇಶಭಕ್ತ ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್