in ,

ಹೂವುಗಳ ರಾಣಿ ಗುಲಾಬಿ

ಗುಲಾಬಿ
ಗುಲಾಬಿ

ಗುಲಾಬಿ ಯು ರೋಸೇಸಿ ವಂಶದೊಳಗೆ ಬರುವ ರೋಸಾ ಕುಲದ ಒಂದು ದೀರ್ಘಕಾಲಿಕ, ಹೂವಿನ ಪೊದೆಸಸ್ಯ ಅಥವಾ ಬಳ್ಳಿಯಾಗಿದ್ದು, ಅದು 100ಕ್ಕೂ ಹೆಚ್ಚಿನ ಜಾತಿಗಳನ್ನು ಒಳಗೊಂಡಿದೆ ಹಾಗೂ ವೈವಿಧ್ಯಮಯ ಬಣ್ಣಗಳಲ್ಲಿ ದೊರೆಯುತ್ತದೆ. ನೆಟ್ಟಗೆ ನಿಲ್ಲುವ ಪೊದೆಸಸ್ಯಗಳು ಮತ್ತು ಯಾವುದಾದರೂ ಆಸರೆಯ ಮೇಲೇರುವ ಅಥವಾ ಹಬ್ಬುವ ಸಸ್ಯಗಳು ಮತ್ತು ಈ ಜಾತಿಯು ಒಳಗೊಂಡಿದ್ದು, ಕಾಂಡಗಳ ಮೇಲೆ ಅಲ್ಲಲ್ಲಿ ಚೂಪಾದ ಮುಳ್ಳುಗಂತಿಗಳು ಇರುತ್ತವೆ. ಇವುಗಳಲ್ಲಿ ಬಹುತೇಕ ಸಸ್ಯಗಳು ಏಷ್ಯಾಕ್ಕೆ ಸೇರಿದ್ದರೆ, ಅಲ್ಪ ಸಂಖ್ಯೆಯ ಜಾತಿಗಳು ಯುರೋಪ್, ಉತ್ತರ ಅಮೆರಿಕಾ ಮತ್ತು ವಾಯವ್ಯ ಆಫ್ರಿಕಾದ ಮೂಲದವಾಗಿವೆ. ವೈವಿಧ್ಯಮಯ ಜಾತಿಯ ಗುಲಾಬಿ ಹೂಗಳ ಸೌಂದರ್ಯ ಹಾಗೂ ಪರಿಮಳದ ಕಾರಣದಿಂದಾಗಿ ಮೂಲಸಸ್ಯಗಳು, ತಳಿಗಳು ಹಾಗೂ ಮಿಶ್ರತಳಿಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಎಲೆಗಳು ಕಾಂಡದ ಎರಡೂ ಪಕ್ಕದಲ್ಲಿ ಪರ್ಯಾಯವಾಗಿ ಜೋಡಿಸಲ್ಪಟ್ಟಿದ್ದು, ಗರಿಯಂತೆ ಸಂಯುಕ್ತವಾಗಿರುವ ಈ ಎಲೆಗಳ ಬಿಡಿ ಎಲೆಗಳು ಅಥವಾ ಪರ್ಣಕಗಳು ಅಂಡಾಕಾರದಲ್ಲಿದ್ದು, ಅವುಗಳ ಅಂಚುಗಳು ಚೂಪಾಗಿರುತ್ತದೆ. ಈ ಗಿಡದ ಮೆದು ತಿರುಳಿನಂತಹ, ತಿನ್ನಲು ಯೋಗ್ಯವಾದ ಹಣ್ಣನ್ನು ಗುಲಾಬಿ ಹಣ್ಣು ಎಂದು ಕರೆಯಲಾಗುತ್ತದೆ. ಗುಲಾಬಿ ಗಿಡಗಳ ಗಾತ್ರದಲ್ಲಿ ವೈವಿಧ್ಯತೆ ಕಂಡುಬರುತ್ತದೆ. ಕುಬ್ಜಾಕಾರದ, ಚಿಕಣಿ ಗಾತ್ರದ ಗುಲಾಬಿಗಳಿಂದ ಮೊದಲ್ಗೊಂಡು 20 ಮೀಟರ್‌ಗಳಷ್ಟು ಎತ್ತರದವರೆಗೂ ಹಬ್ಬಬಲ್ಲ ಏರುಬಳ್ಳಿಯವರೆಗೂ ಈ ಗಿಡಗಳ ಗಾತ್ರ-ವೈವಿಧ್ಯತೆಯಿದೆ. ವಿಶ್ವಾದ್ಯಂತದ ವಿವಿಧ ಭಾಗಗಳಿಂದ ಬರುವ ಗುಲಾಬಿ ಜಾತಿಗಳು ಸುಲಭವಾಗಿ ಸಂಕರೀಕೃತಗೊಂಡು, ಉದ್ಯಾನದ ವೈವಿಧ್ಯಮಯ ಗುಲಾಬಿಗಳಾಗಿ ಹೊರಹೊಮ್ಮಿವೆ. ರೋಸ್ ಎಂಬ ಹೆಸರು ಫ್ರೆಂಚ್‌ ಮೂಲದಿಂದ ಬಂದಿದೆ. ಲ್ಯಾಟಿನ್ ಹೆಸರಾದ ರೋಸಾ ದಿಂದ ತನ್ನ ಹೆಸರನ್ನು ರೋಸ್‌ ಗಳಿಸಿಕೊಂಡಿದ್ದು, ಇದನ್ನು ಕೂಡಾ ಗ್ರೀಕ್‌ನ ರೋಡಿಯನ್‌ ನಿಂದ ಹಳೆಯ ಪರ್ಷಿಯನ್ ವುರ್ಡಿ “ಹೂವು” ಎಂಬುದರಿಂದ, ಆಸ್ಕನ್‌ ಭಾಷೆಯಿಂದ ಎರವಲು ಪಡೆದಿದೆ. ಗುಲಾಬಿ ಹೂವುಗಳನ್ನು ಆವಿಯ ಪ್ರಕ್ರಿಯೆಗೆ ಒಳಪಡಿಸಿ ಸಂಗ್ರಹಿಸಲಾಗುವ ಸಾರತೈಲವಾದ ಗುಲಾಬಿಯ ಅತ್ತರ್‌ ಶತಶತಮಾನಗಳಿಂದಲೂ ಸುಗಂಧದ್ರವ್ಯಗಳಲ್ಲಿ ಬಳಸಲ್ಪಡುತ್ತಿದೆ.

ಹೂವುಗಳ ರಾಣಿ ಗುಲಾಬಿ
ಗುಲಾಬಿ ನೀರು

ಗುಲಾಬಿ ತೈಲದಿಂದ ತಯಾರಿಸಲ್ಪಡುವ ಗುಲಾಬಿ ನೀರು ಅಥವಾ ಪನ್ನೀರನ್ನು ಏಷ್ಯಾದ ಮತ್ತು ಮಧ್ಯಪ್ರಾಚ್ಯ ದೇಶಗಳ ಆಹಾರ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಬಹು ಸಾಮಾನ್ಯವಾಗಿ ಗುಲಾಬಿಯ ದಳಗಳ ಸಾರದಿಂದ ತಯಾರಿಸಲ್ಪಡುವ ಗುಲಾಬಿ ಷರಬತ್‌ಗೆ ಫ್ರೆಂಚರು ಪ್ರಸಿದ್ಧಿ ಪಡೆದಿದ್ದಾರೆ. ಸಂಯುಕ್ತ ಸಂಸ್ಥಾನಗಳಲ್ಲಿ ಸದರಿ ಫ್ರೆಂಚ್ ಗುಲಾಬಿ ಷರಬತ್‌ ಅಥವಾ ಪಾಕವನ್ನು ಗುಲಾಬಿ ದೋಸೆಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಗುಲಾಬಿ ಹಣ್ಣುಗಳನ್ನು ಕೆಲವೊಮ್ಮೆ ಮುರಬ್ಬ, ಜೆಲ್ಲಿ ಮತ್ತು ಹಣ್ಣಿನ ಮುರಬ್ಬ ಇವೇ ಮೊದಲಾದವುಗಳನ್ನು ತಯಾರಿಸಲು ಅಥವಾ ಚಹಾದೊಂದಿಗೆ ಕುದಿಸಲು ಬಳಸುತ್ತಾರೆ. ಗುಲಾಬಿ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ C ಜೀವಸತ್ವದ ಅಂಶವನ್ನು ಹೊಂದಿರುವುದೇ ಇದಕ್ಕೆ ಮೂಲಕಾರಣ. ಅಷ್ಟೇ ಅಲ್ಲ, ಅವುಗಳ ರಸವನ್ನು ಹಿಂಡಿ ಮತ್ತು ಶೋಧಿಸಿ, ಗುಲಾಬಿ ಹಣ್ಣುಗಳ ಪಾಕ ಅಥವಾ ಷರಬತ್‌ನ್ನು ತಯಾರಿಸುತ್ತಾರೆ. ಗುಲಾಬಿ ಹಣ್ಣುಗಳ ಬೀಜದ ಎಣ್ಣೆಯನ್ನು ತಯಾರಿಸಲೂ ಸಹ ಗುಲಾಬಿ ಹಣ್ಣುಗಳನ್ನು ಬಳಸಲಾಗುತ್ತದೆ. ಈ ತೈಲವನ್ನು ತ್ವಚಾ ಸಂರಕ್ಷಕ ಉತ್ಪನ್ನಗಳು ಹಾಗೂ ಕೆಲವೊಂದು ಪ್ರಸಾದನ ಉತ್ಪನ್ನಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.

ಗುಲಾಬಿಗಳು ಹಲವಾರು ರೋಗಗಳಿಗೆ ತುತ್ತಾಗುತ್ತವೆ. ಅವುಗಳೆಂದರೆ, ಗುಲಾಬಿ ಬೂಸ್ಟು ಗುಲಾಬಿ ಕಪ್ಪುಚುಕ್ಕೆ ಮತ್ತು ಸೂಕ್ಷ್ಮ ಶಿಲೀಂಧ್ರ. ಗುಲಾಬಿ ಗಿಡದ ಮೇಲೆ ಶಿಲೀಂಧ್ರ ರೋಗದ ಒಂದು ಸೋಂಕು ಕಾಣಿಸಿಕೊಂಡಾಗ ಅದನ್ನು ವಾಸಿಮಾಡಲು ಪ್ರಯತ್ನಿಸುವುದಕ್ಕಿಂತ, ಶಿಲೀಂಧ್ರನಾಶಕ ಸಿಂಪಡಣೆಯಂತಹ ಮುಂಜಾಗ್ರತಾ ಕ್ರಮವನ್ನು ಅನುಸರಿಸುವುದರಿಂದ, ಗುಲಾಬಿಯಲ್ಲಿ ಕಂಡುಬರುವ ಶಿಲೀಂಧ್ರ ರೋಗಗಳನ್ನು ಅತ್ಯುತ್ತಮವಾಗಿ ನಿವಾರಿಸಬಹುದು. ಒಂದು ವೇಳೆ ರೋಗವು ತಗುಲಿರುವುದು ಗೋಚರಿಸುವಂತಿದ್ದರೆ, ಅದರ ವಾಸ್ತವಿಕ ಸೋಂಕನ್ನು ಹಿಮ್ಮೆಟ್ಟಿಸಲಾಗದಿದ್ದರೂ, ಗುಲಾಬಿ ಸಸ್ಯದ ಸಮರುವಿಕೆ ಹಾಗೂ ಶಿಲೀಂಧ್ರನಾಶಕಗಳ ಬಳಕೆಯಿಂದ ರೋಗದ ಹರಡುವಿಕೆಯನ್ನು ತಗ್ಗಿಸಬಹುದು. ಇತರ ಸಸ್ಯಗಳಿಗೆ ಹೋಲಿಸಿದರೆ ಗುಲಾಬಿಯ ಕೆಲವೊಂದು ಪ್ರಕಾರಗಳು ಶಿಲೀಂಧ್ರ ರೋಗಗಳಿಗೆ ತುತ್ತಾಗುವುದು ಗಣನೀಯವಾಗಿ ಕಡಿಮೆ ಎಂದು ಹೇಳಬಹುದು. ಗುಲಾಬಿಗೆ ಮಾರಕವಾಗಿರುವ ಪ್ರಮುಖವಾದ ಕೀಟದ ಪಿಡುಗೆಂದರೆ ಎಲೆಕೊರಕ ಇದು ಗಿಡದ ರಸವನ್ನೆಲ್ಲಾ ಹೀರಿ ಅದನ್ನು ದುರ್ಬಲಗೊಳಿಸುತ್ತದೆ. ಗುಲಾಬಿಯ ಕೀಟನಾಶಕಗಳ ಸಿಂಪಡಣೆಯನ್ನು ಕೆಲವೊಮ್ಮೆ ಶಿಫಾರಸು ಮಾಡಲಾಗುತ್ತದೆಯಾದರೂ, ಅದರಿಂದಾಗಿ ಕೆಲವೊಂದು ಪ್ರಯೋಜನಕರ ಕೀಟಗಳೂ ಸಹ ಹಾನಿಗೊಳಗಾಗಬಹುದು. ಅದ್ದರಿಂದ ನಷ್ಟದ ಪ್ರಮಾಣವನ್ನು ತಗ್ಗಿಸುವ ದೃಷ್ಟಿಯಿಂದ ಸಿಂಪಡಣೆಯ ಕಾರ್ಯವನ್ನು ಎಚ್ಚರದಿಂದ ನಡೆಸಬೇಕು. ಲೆಪಿಡೋಪ್ಟೆರಾ ಜಾತಿಯ ಕೆಲವೊಂದು ಮರಿಹುಳುಗಳು ಗುಲಾಬಿಗಳನ್ನು ಆಹಾರ ಸಸ್ಯವಾಗಿಯೂ ಬಳಸುತ್ತೇವೆ.

ಹೂವುಗಳ ರಾಣಿ ಗುಲಾಬಿ
ಗುಲಾಬಿ

ಗುಲಾಬಿಯು ಚಯಾಪಚಯ ವೃದ್ಧಿಸುವುದು ಹಾಗೂ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು. ಇದರಿಂದ ತೂಕ ಇಳಿಸಲು ತುಂಬಾ ಸಹಕಾರಿ ಆಗಿರುವುದು.
ಗುಲಾಬಿ ಎಸಲುಗಳನ್ನು ತಿಂದರೆ ಅದರಿಂದ ಹೊಟ್ಟೆಯು ತುಂಬಿದಂತೆ ಆಗುವುದು ಮತ್ತು ನೈಸರ್ಗಿಕವಾಗಿ ತೂಕ ಇಳಿಸಲು ಇದು ಸಹಕಾರಿ.

10-15 ತಾಜಾ ಗುಲಾಬಿ ಎಸಲುಗಳನ್ನು ಕುದಿಯುವ ನೀರಿಗೆ ಹಾಕಿ ಮತ್ತು ಇದು ಗುಲಾಬಿ ಬಣ್ಣಕ್ಕೆ ತಿರುಗುವುದನ್ನು ನೋಡಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಒಂದು ಚಿಟಿಕೆ ದಾಲ್ಚಿನಿ ಹುಡಿ ಹಾಕಿ. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ತೂಕ ಇಳಿಸಬಹುದು.

ಗುಲಾಬಿ ಹೂವಿನ ಕಷಾಯಕ್ಕೆ ಸ್ವಲ್ಪ ತುಪ್ಪ ಸೇರಿಸಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

ಮೆಂತ್ಯದ ಸೊಪ್ಪಿಗೆ ಗುಲಾಬಿ ನೀರನ್ನು ಹಾಕಿ ಪೇಸ್ಟ್‌ ಮಾಡಿ ಆ ಪೇಸ್ಟ್‌ನಿಂದ ಹೇರ್‌ ಪ್ಯಾಕ್‌ ಮಾಡಿ 30 ನಿಮಿಷ ಬಿಟ್ಟು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಶ್ರೀಗಂಧದ ಪುಡಿ, ಗುಲಾಬಿ ಹೂವು, ರೋಜ್‌ವಾಟರ್‌ ಮತ್ತು ಸ್ವಲ್ಪ ಜೇನುತುಪ್ಪ ಎಲ್ಲವನ್ನೂ ಕಲಸಿ ಮುಖಕ್ಕೆ ಪ್ಯಾಕ್‌ ಹಾಕಿ 10 ನಿಮಿಷ ಬಿಟ್ಟು ಮುಖ ತೊಳೆದರೆ ಮೊಡವೆಗಳಿಂದಾಗುವ ಉರಿ ಮತ್ತು ಚರ್ಮದ ಕೆಂಪು ಶಮನವಾಗುತ್ತವೆ.

ಗುಲಾಬಿ ಹೂವಿನ ದಳಗಳ ಕಷಾಯವನ್ನು ಸೇವಿಸಿದರೆ ಹೊಟ್ಟೆ ಉರಿ ಮತ್ತು ಅಲ್ಸರ್‌ ಗುಣವಾಗುತ್ತವೆ.

ಗುಲಾಬಿ ಹೂವಿನ ದಳಗಳಿಗೆ ಕಲ್ಲುಸಕ್ಕರೆ ಮತ್ತು ಪಚ್ಚಕರ್ಪೂರ ಸೇರಿಸಿ ಚೆನ್ನಾಗಿ ಅರೆದು ಸಣ್ಣ ಸಣ್ಣ ಮಾತ್ರೆಗಳನ್ನು ಮಾಡಬೇಕು. ಈ ಮಾತ್ರೆಯನ್ನು ನಿಯಮಿತವಾಗಿ ಸೇವಿಸಿದರೆ ಕೆಮ್ಮು ಮತ್ತು ಬಾಯಿ ದುರ್ಗಂಧ ನಿವಾರಣೆಯಾಗುತ್ತದೆ.

ನಿದ್ದೆ ಬಾರದಿದ್ದರೆ ಗುಲಾಬಿ ಹೂವಿನಿಂದ ತಯಾರಿಸಿದ ಎಣ್ಣೆಯನ್ನು ಹತ್ತಿಯಲ್ಲಿ ಅದ್ದಿ ಆ ಹತ್ತಿಯನ್ನು ಮಲಗುವ ಮುನ್ನ ರೂಮಿನಲ್ಲಿ ಇಟ್ಟರೆ ಅದರ ಸುವಾಸನೆಯಿಂದ ನಿದ್ದೆ ಚೆನ್ನಾಗಿ ಬರುತ್ತದೆ.

ಬಾದಾಮಿ ಮತ್ತು ಗುಲಾಬಿ ಹೂವನ್ನು ನೀರಲ್ಲಿ ರಾತ್ರಿ ನೆನೆಸಿ ಬೆಳಗ್ಗೆ ಅವುಗಳಿಂದ ಪೇಸ್ಟ್‌ ತಯಾರಿಸಿ ಅದನ್ನು ನಿರ್ಜೀವ ಚರ್ಮದ ಮೇಲೆ ಹಚ್ಚಿ ತಿಕ್ಕಿದರೆ ಅವು ಉದುರಿಹೋಗುತ್ತವೆ.

ಗುಲಾಬಿ ಹೂವಿನ ಕಷಾಯದಿಂದ ಕಣ್ಣುಗಳನ್ನು ತೊಳೆದರೆ ಕಣ್ಣುಗಳ ನೋವು ನಿವಾರಣೆಯಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಶ್ವತ್ಥಾಮ

ಅಮರತ್ವವೇ ಶಾಪವಾಗಿಸಿಕೊಂಡ ಗುರು ಪುತ್ರ ಅಶ್ವತ್ಥಾಮ

ತಾಳೆ ಮರದ ಹಣ್ಣು

ತಾಳೆ ಮರದ ಹಣ್ಣು