in

ಇಂದು ಮಹಾಶಿವರಾತ್ರಿ ಹಬ್ಬ

ಇಂದು ಮಹಾಶಿವರಾತ್ರಿ ಹಬ್ಬ
ಇಂದು ಮಹಾಶಿವರಾತ್ರಿ ಹಬ್ಬ

“ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು “

ಈಗಾಗಲೇ ನಾವು ಶಿವನ ಬಗ್ಗೆ, ಶಿವರಾತ್ರಿ ಕಥೆ  ತಿಳಿದುಕೊಂಡಿದ್ದೇವೆ. ಇಂದು ಶಿವರಾತ್ರಿ ಹಬ್ಬದ ಸಂಕ್ಷಿಪ್ತ ವಿವರಣೆ ಅಷ್ಟೇ ನೀಡಲು ಬಯಸುತ್ತೇವೆ.

ಮಹಾಶಿವರಾತ್ರಿ ಹಬ್ಬವು ಅತ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡ ಹಬ್ಬಗಳಲ್ಲಿ ಒಂದಾಗಿದೆ. ಮಹಾಶಿವರಾತ್ರಿ ಹಬ್ಬದ ದಿನದಂದು ಶಿವನನ್ನು ಪೂಜಿಸುವ ಸಂಪ್ರದಾಯವಿದೆ. ಈ ಬಾರಿ ಮಹಾಶಿವರಾತ್ರಿ ಹಬ್ಬವನ್ನು ಫೆಬ್ರವರಿ 18 ರಂದು ಆಚರಿಸಲಾಗುತ್ತದೆ.

ಆಧ್ಯಾತ್ಮಿಕ ಪಥದಲ್ಲಿರುವವರಿಗೆ ಮಹಾಶಿವರಾತ್ರಿಯು ಬಹಳ ಪ್ರಮುಖವಾದದ್ದು. ಕುಟುಂಬ ಜೀವನದಲ್ಲಿರುವವರಿಗೆ ಮತ್ತು ಜಗತ್ತಿನಲ್ಲಿನ ಮಹತ್ವಾಕಾಂಕ್ಷಿಗಳಿಗೂ ಸಹ ಇದು ತುಂಬ ಮಹತ್ವವುಳ್ಳದ್ದಾಗಿದೆ. ಕುಟುಂಬಸ್ಥರು ಮಹಾಶಿವರಾತ್ರಿಯನ್ನು ಶಿವನಮದುವೆ ವಾರ್ಷಿಕೋತ್ಸವವಾಗಿ ಆಚರಿಸುತ್ತಾರೆ. ಲೌಕಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿರುವವರು ಆ ದಿನವನ್ನು ಶಿವನು ತನ್ನ ಶತ್ರುಗಳನ್ನೆಲ್ಲಾ ಸದೆಬಡಿದ ದಿನವಾಗಿ ನೋಡುತ್ತಾರೆ.

ಇಂದು ಮಹಾಶಿವರಾತ್ರಿ ಹಬ್ಬ
ಶಿವರಾತ್ರಿಗೆ ರಾತ್ರಿ ಜಾಗರಣೆ ಇರುತ್ತೆ

ಶಿವಪುರಾಣದ ಪ್ರಕಾರ, ಮಹಾಶಿವರಾತ್ರಿಯ ದಿನದಂದು ದೇಶದಾದ್ಯಂತ ಹನ್ನೆರಡು ಜ್ಯೋತಿರ್ಲಿಂಗಗಳು ಕಾಣಿಸಿಕೊಂಡವು. ಈ 12 ಜ್ಯೋತಿರ್ಲಿಂಗಗಳಲ್ಲಿ ಸೋಮನಾಥ ಜ್ಯೋತಿರ್ಲಿಂಗ, ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಓಂಕಾರೇಶ್ವರ ಜ್ಯೋತಿರ್ಲಿಂಗ, ಕೇದಾರನಾಥ ಜ್ಯೋತಿರ್ಲಿಂಗ, ಭೀಮಾಶಂಕರ ಜ್ಯೋತಿರ್ಲಿಂಗ, ವಿಶ್ವನಾಥ ಜ್ಯೋತಿರ್ಲಿಂಗ, ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ವೈದ್ಯನಾಥ ಜ್ಯೋತಿರ್ಲಿಂಗ, ನಾಗೇಶ್ವರ ಜ್ಯೋತಿರ್ಲಿಂಗ, ರಾಮೇಶ್ವರ ಜ್ಯೋತಿರ್ಲಿಂಗ ಮತ್ತು ಗ್ರೀಷ್ಣೇಶ್ವರ ಜ್ಯೋತಿರ್ಲಿಂಗಗಳು 12 ಜ್ಯೋತಿರ್ಲಿಂಗಗಳಾಗಿವೆ. ಈ 12 ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ ಮಹಾಶಿವರಾತ್ರಿಯನ್ನು ಸಹ ಆಚರಿಸಲಾಗುತ್ತದೆ. ಅಂದರೆ ಮಹಾಶಿವರಾತ್ರಿ ದಿನದಂದು 12 ಜ್ಯೋತಿರ್ಲಿಂಗಗಳ ದರ್ಶನವನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಸದ್ಗುರು ಶಿವರಾತ್ರಿಯ ಬಗ್ಗೆ ಹೀಗೆ ಹೇಳುತ್ತಾರೆ: ಒಂದು ಕಾಲದಲ್ಲಿ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ವರ್ಷದ ಮುನ್ನೂರ ಅರವತ್ತೈದು ದಿನಗಳೂ ಹಬ್ಬಗಳಿರುತ್ತಿದ್ದವು. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ವರ್ಷದ ಪ್ರತಿದಿನವನ್ನೂ ಆಚರಿಸಲು ಅವರಿಗೊಂದು ನೆಪಬೇಕಿತ್ತಷ್ಟೆ. ಈ ಮುನ್ನೂರ ಅರವತ್ತೈದು ಹಬ್ಬಗಳನ್ನು ಬೇರೆ ಬೇರೆ ಕಾರಣಗಳಿಗೆ ಮತ್ತು ಜೀವನದ ಬೇರೆ ಬೇರೆ ಉದ್ದೇಶಗಳಿಗೆ ಆಚರಿಸಲಾಗುತ್ತಿತ್ತು. ನಾನಾ ರೀತಿಯ ಐತಿಹಾಸಿಕ ಘಟನೆಗಳು, ಗೆಲುವುಗಳು, ಅಥವಾ ಜೀವನದ ನಿರ್ದಿಷ್ಟ ಸಂದರ್ಭಗಳಾದ ಬಿತ್ತನೆ, ನಾಟಿ ಮತ್ತು ಕೊಯ್ಲು ಮಾಡುವುದನ್ನು ಸಂಭ್ರಮಿಸಲು ಆ ಹಬ್ಬಗಳನ್ನು ಆಚರಿಸುತ್ತಿದ್ದರು. ಹೀಗೆ, ಪ್ರತಿ ಸಂದರ್ಭಕ್ಕೂ ಒಂದು ಹಬ್ಬವಿರುತ್ತಿತ್ತು. ಆದರೆ ಮಹಾಶಿವರಾತ್ರಿಯು ಬೇರೆಯದ್ದೇ ಪ್ರಾಮುಖ್ಯತೆಯನ್ನು ಹೊಂದಿದೆ.

ಪ್ರತಿ ಚಾಂದ್ರಮಾಸದ ಹದಿನಾಲ್ಕನೇ ರಾತ್ರಿ ಅಥವಾ ಅಮಾವಾಸ್ಯೆಯ ಹಿಂದಿನ ರಾತ್ರಿಯನ್ನು ಶಿವರಾತ್ರಿಯೆಂದು ಕರೆಯಲಾಗುತ್ತದೆ.ಒಂದು ವರ್ಷದಲ್ಲಿ ಸಂಭವಿಸುವ ಎಲ್ಲಾ ಹನ್ನೆರಡು ಶಿವರಾತ್ರಿಗಳಲ್ಲಿ, ಫೆಬ್ರವರಿ-ಮಾರ್ಚಿಯಲ್ಲಿ ಬರುವ ಮಹಾಶಿವರಾತ್ರಿಯು ಹೆಚ್ಚಿನ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ರಾತ್ರಿಯಂದು, ಭೂಮಿಯ ಉತ್ತರ ಗೋಳಾರ್ಧದಲ್ಲಿ ಮನುಷ್ಯರಲ್ಲಿ ಶಕ್ತಿಯ ನೈಸರ್ಗಿಕವಾದ ಏರಿಕೆ ಉಂಟಾಗುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಮನುಷ್ಯರನ್ನು ಅವರ ಆಧ್ಯಾತ್ಮಿಕ ಉತ್ತುಂಗಕ್ಕೆ ತಳ್ಳುತ್ತಿರುತ್ತದೆ.

ಇಂದು ಮಹಾಶಿವರಾತ್ರಿ ಹಬ್ಬ
ಶಿವ ಪಾರ್ವತಿ ವಿವಾಹವಾಗಿದ್ದು ಶಿವರಾತ್ರಿಯ ದಿನವೇ

ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ… ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು.. ಈ ಪರ್ವಕಾಲವು ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ.

ಶಿವರಾತ್ರಿಯ ಮತ್ತೊಂದು ವಿಶೆಷವೆಂದರೆ, ಶಿವನು ಪಾರ್ವತಿ ಹಿಮವಂತನ ಮಗಳಾದ ಗಿರಿಜೆಯನ್ನು ಅಂದರೆ ಪಾರ್ವತಿ ದೇವಿಯನ್ನು ವಿವಾಹವಾಗಿದ್ದು ಶಿವರಾತ್ರಿಯ ದಿನವೇ.. ಪಾರ್ವತಿ ದೇವಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ..ಶಿವನ ಜಪ ಮಾಡಿ ಶಿವನನ್ನು ವಲಿಸಿಕೊಂಡು ವಿವಾಹಳಾದಳು… ಅಷ್ಟೇ ಅಲ್ಲ, ಶಿವನು ಸಮುದ್ರ ಮಂಥನದಿಂದ ಉದ್ಭವಿಸಿದ ವಿಷವನ್ನು ಸೇವಿಸಿ, ಜಗತ್ತನ್ನು ವಿನಾಶದಿಂದ ಪಾರು ಮಾಡಿದ್ದು ಕೂಡ ಇದೇ ಸಮಯದಲ್ಲಿ.. ಹೀಗೆ ಹಿಂದೂ ಪುರಾಣಗಳಲ್ಲಿ ಶಿವರಾತ್ರಿಗೆ ಮಹತ್ವದ ಹಿನ್ನೆಲೆ ಇದೆ..

ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಸಲಾಗುತ್ತದೆ. ಇಡೀ ರಾತ್ರಿ ಶಿವದೇವಾಲಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ನಡೆಯುತ್ತದೆ.

ಆಧ್ಯಾತ್ಮಿಕ ಸಾಧಕರು, ಮುನಿಗಳು, ತಪಸ್ವಿಗಳು, ಯೋಗಿಗಳಿಗೆ ಮಹಾಶಿವರಾತ್ರಿಯು ಶಿವನು ಕೈಲಾಸ ಪರ್ವತದೊಂದಿಗೆ ಐಕ್ಯವಾದ ದಿನ. ಅವನು ಪರ್ವತದ ಹಾಗೆ ಸಂಪೂರ್ಣವಾಗಿ ನಿಶ್ಚಲನಾದ. ಯೋಗ ಪರಂಪರೆಯಲ್ಲಿ, ಶಿವನನ್ನು ಒಬ್ಬ ದೇವರೆಂದು ಪೂಜಿಸಲಾಗುವುದಿಲ್ಲ, ಆದರೆ ಯೋಗ ವಿಜ್ಞಾನದ ಉಗಮಕಾರಕ, ಆದಿ ಗುರು ಎಂದು ಪರಿಗಣಿಸಲಾಗುತ್ತದೆ. ಅನೇಕ ಸಹಸ್ರಮಾನಗಳ ಧ್ಯಾನದ ನಂತರ, ಒಂದು ದಿನ ಅವನು ಸಂಪೂರ್ಣವಾಗಿ ಅಚಲನಾದನು. ಆ ದಿನವೇ ಮಹಾಶಿವರಾತ್ರಿ. ಅವನಲ್ಲಿನ ಎಲ್ಲಾ ಚಲನೆಗಳೂ ನಿಂತುಹೋಗಿ, ಅವನು ಅತ್ಯಂತ ಅಚಲನಾದನು. ಆದ್ದರಿಂದ ಯೋಗಿಗಳು ಮಹಾಶಿವರಾತ್ರಿಯನ್ನು ಅಚಲತೆಯ ರಾತ್ರಿಯಾಗಿ ನೋಡುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶಿವ ಪಾರ್ವತಿ ಮದುವೆಯಾದ ಜಾಗ

ಶಿವ ಪಾರ್ವತಿ ಮದುವೆಯಾದ ಜಾಗ ಇಲ್ಲಿದೆ ನೋಡಿ

ಮನೆ ಸುತ್ತ ಮುತ್ತ ಈ ಗಿಡಗಳನ್ನು ನೆಟ್ಟರೆ, ಸಣ್ಣ ಸಣ್ಣ ಕೀಟಗಳಿಂದ ಮುಕ್ತಿ ಪಡೆಯಬಹುದು

ಮನೆ ಸುತ್ತ ಮುತ್ತ ಈ ಗಿಡಗಳನ್ನು ನೆಟ್ಟರೆ, ಸಣ್ಣ ಸಣ್ಣ ಕೀಟಗಳಿಂದ ಮುಕ್ತಿ ಪಡೆಯಬಹುದು