ಎಲ್ಲಾ ಬಗೆಯ ಒಣಕಾಳುಗಳ ಪೈಕಿ ಬಾದಾಮಿಯು ಅತ್ಯಂತ ಹೆಚ್ಚು ಪೋಷಕಾಂಶಭರಿತವಾದ ಆಹಾರ. ಬಾದಾಮಿ ಬೀಜಗಳಲ್ಲಿ ಪ್ರೋಟೀನ್ಗಳು, ಖನಿಜಗಳು, ಫೋಲಿಕ್ ಆಮ್ಲ, ವಿಟಮಿನ್ ಈ, ಬಿ-17, ಓಮೇಗಾ – 3 ಹಾಗೂ ಓಮೇಗಾ – 6 ಕೊಬ್ಬಿನಾಮ್ಲಗಳಿವೆ. ಬಾದಾಮಿಯನ್ನು ತಿನ್ನುವುದರಿಂದ ದೇಹದ ಮೂಳೆಗಳು ಬಲಗೊಳ್ಳುವುದರ ಜೊತೆಗೆ ಮೆದುಳು ಕೂಡ ಚುರುಕಾಗುತ್ತದೆ. ಆದ್ದರಿಂದಲೇ ಇದನ್ನು ಮಕ್ಕಳಿಗೆ ಕೊಡಬೇಕೆಂದು ವೈದ್ಯರು ಕೂಡ ಹೇಳುತ್ತಾರೆ.
ಪ್ರತಿ ದಿನ ಬಾದಾಮಿಯನ್ನು ತಿನ್ನಬೇಕು ಅಂತ ಹೇಳುತ್ತಾರೆ ಆದರೆ ಯಾರೂ ಕೂಡ ಬಾದಾಮಿಯನ್ನು ಹೇಗೆ ತಿನ್ನಬೇಕೆಂದು ಸರಿಯಾದ ರೀತಿಯಲ್ಲಿ ಹೇಳೋದಿಲ್ಲ ಆದರೆ ಬಾದಾಮಿಯನ್ನು ಹಸಿಯಾಗಿ ತಿನ್ನಬಾರದು ಇದನ್ನು ಏಳರಿಂದ ಎಂಟು ಗಂಟೆಗಳ ಕಾಲ ನೆನೆಸಿಟ್ಟು ನಂತರ ಬಾದಾಮಿಯನ್ನು ತಿನ್ನಬೇಕು.
ರಾತ್ರಿ ನೆನೆಸಿಟ್ಟ ಬಾದಾಮಿಯ ಸೇವನೆ ಉತ್ತಮ ಏಕೆ ?
ಭಾರತದಲ್ಲಿ ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದು ಒಂದು ಸಂಪ್ರದಾಯದಂತೆ ಬಹುತೇಕ ಎಲ್ಲಾ ಕುಟುಂಬಗಳಲ್ಲಿಯೂ ನಡೆಸಿಕೊಂಡು ಬರಲಾಗುತ್ತಿದೆ. ನಮ್ಮ ಅಮ್ಮಂದಿರು ಮತ್ತು ಅಜ್ಜಿಯಂದಿರು ಈ ವಿಧಾನವನ್ನು ಹಿಂದಿನವರಿಂದ ಕಲಿತು ಬಂದು ತಮ್ಮ ಕುಟುಂಬದ ಕಿರಿಯರಿಗೂ ತಿನ್ನಿಸುವ ಮೂಲಕ ಈ ಸಂಪ್ರದಾಯವನ್ನು ಜೀವಂತವಾಗಿ ಇರಿಸಿದ್ದಾರೆ. ಆದರೆ ಏಕಾಗಿ ನೆನೆಸಿಟ್ಟು ತಿನ್ನಬೇಕು? ಹುರಿದು ಅಥವಾ ಕರಿದು ತಿಂದರೆ ಇದರ ರುಚಿ ಹೆಚ್ಚುವುದಲ್ಲವೇ? ಒಣಗಿದ್ದಂತೆಯೇ ತಿಂದರೆ ಏನು ನಷ್ಟ? ಇಂತಹ ಕೆಲವು ಪ್ರಶ್ನೆಗಳು ಎಲ್ಲರ ಮನದಲ್ಲಿಯೂ ಮೂಡಬಹುದು. ಇಂದಿನ ಲೇಖನದಲ್ಲಿ ಇಂತಹ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರವನ್ನು ಮಾಹಿತಿಯ ರೂಪದಲ್ಲಿ ನೀಡಲಾಗಿದೆ. ಬನ್ನಿ, ನೋಡೋಣ.
ನೆನೆಸಿಟ್ಟ ಬಾದಾಮಿಗಳ ಸೇವನೆಯಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು:
ಬಾದಾಮಿಯನ್ನು ಒಣದಾಗಿದ್ದಾಗ ಸೇವಿಸುವುದಕ್ಕಿಂತ ನೆನೆಸಿಟ್ಟು ಸೇವಿಸಿದಾಗ ಜೀರ್ಣಿಸಿಕೊಳ್ಳುವುದು ಸುಲಭ. ನೆನೆಸಿಟ್ಟ ಬಾದಾಮಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಈಗ ಪೋಷಕಾಂಶಗಳನ್ನು ಹೀರಿಕೊಳ್ಳಲು ಹೆಚ್ಚಿನ ಸಹಾಯ ಸಿಗುತ್ತದೆ. ಈ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಕಿಣ್ವಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತವೆ. ಪರಿಣಾಮವಾಗಿ ಜೀರ್ಣಕ್ರಿಯೆ ಸುಲಭ ಮತ್ತು ಪರಿಪೂರ್ಣವಾಗುತ್ತದೆ.
ಬಾದಾಮಿಯಿಂದಾಗುವ ಪ್ರಯೋಜನಗಳು : ಬಾದಾಮಿಯಲ್ಲಿರುವಂತಹ ಪ್ರೋಟೀನ್ಗಳು ಮೆದುಳಿಗೆ ಶಕ್ತಿಯನ್ನು ಒದಗಿಸುವುದು. ಇದು ಮೆದುಳಿನ ಜ್ಞಾನದ ಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ನೆನಪಿನ ಶಕ್ತಿಯ ಸಾಮರ್ಥ್ಯವನ್ನು ವೃದ್ಧಿಸಲು ನೆರವಾಗುವುದು. ಖನಿಜಾಂಶವಾಗಿರುವ ಸತು ಇದರಲ್ಲಿದ್ದು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಮೆದುಳಿನ ಆರೋಗ್ಯವನ್ನು ಹೆಚ್ಚಿಸುವುದು. ವಿಟಮಿನ್ ಈ ಮತ್ತು ಬಿ-17 ಅಂಶವು ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತವೆ. ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಿಸುವ ಮೆಗ್ನೀಷಿಯಂ ಅಂಶವನ್ನು ಹೆಚ್ಚಿಸುತ್ತದೆ. ಫೋಲಿಕ್ ಆಮ್ಲವು ಜನನ ದೋಷದ ಪ್ರಮಾಣ ತಗ್ಗಿಸಿ ಗರ್ಭಿಣಿಯರ ರಕ್ಷಾಕವಚವಾಗಿ ಕಾರ್ಯ ನಿರ್ವಹಿಸುತ್ತದೆ. ಹೃದ್ರೋಗವನ್ನು ತಡೆಗಟ್ಟುತ್ತದೆ. ನೆನೆಸಿಟ್ಟ ಬಾದಾಮಿಯು ತೂಕವಿಳಿಸಲು ಸಹಾಯ ಮಾಡುತ್ತವೆ. ಅನಾರೋಗ್ಯಕರ ಕೊಬ್ಬನ್ನು ಕಡಿಮೆ ಮಾಡುತ್ತದೆ. ಲೈಪೇಸ್ ಎಂಬ ಕಿಣ್ವ ಬಿಡುಗಡೆ ಮಾಡಿ ಕೊಬ್ಬಿನಂಶ ಚೆನ್ನಾಗಿ ಜೀರ್ಣಕ್ರೀಯೆಯಾಗುವಂತೆ ನೋಡಿಕೊಳ್ಳುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ದೇಹಕ್ಕೆ ಶಕ್ತಿ ಕೊಟ್ಟು ಹಲವು ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ.
ಬಾದಾಮಿ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆಯುವುದು ಏಕೆ ಇದರಿಂದ ಪ್ರಯೋಜನ ಏನು ?
ಕಂದು ಬಣ್ಣದ ಬಾದಾಮಿ ಸಿಪ್ಪೆಯಲ್ಲಿ ಟ್ಯಾನಿನ್ ಆಮ್ಲವಿದೆ ಮತ್ತು ಇದು ಪೋಷಕಾಂಶಗಳ ಪ್ರತಿಬಂಧಕವಾಗಿದೆ.
ಬಾದಾಮಿಯಲ್ಲಿ ಅನೇಕ ಪೋಷಕಾಂಶಗಳಿವೆ ಮತ್ತು ಸಿಪ್ಪೆಯೊಂದಿಗೆ ಸೇವಿಸಿದರೆ ಪೋಷಕಾಂಶಗಳು ದೇಹದಿಂದ ಹೀರಲ್ಪಡುವುದಿಲ್ಲ ಮತ್ತು ಆದ್ದರಿಂದ ಬಾದಾಮಿಯನ್ನು ಸಿಪ್ಪೆ ತೆಗೆಯುವುದು ಬಹಳ ಮುಖ್ಯ.
ಬಾದಾಮಿಯು ಬೀಜಗಳ ತೇವಾಂಶ ಮತ್ತು ಸೂರ್ಯನ ಬೆಳಕಿನಿಂದ ರಕ್ಷಿಸಲು ಈ ಹೊದಿಕೆ ಅಥವಾ ಸಿಪ್ಪೆಯನ್ನು ಒದಗಿಸಲಾಗುತ್ತದೆ. ಬಾದಾಮಿಯನ್ನು ನೆನೆಸಿದಾಗ ಅವು ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಆದ್ದರಿಂದ ಅವು ಹೆಚ್ಚು ಪೌಷ್ಟಿಕವಾಗುತ್ತವೆ.
ನೆನೆಸಿದ ನಂತರ ಅವುಗಳನ್ನು ಅಗಿಯುವುದು ಸುಲಭ ಎಂದು ನೀವು ಗಮನಿಸಿದ್ದಿರಬೇಕು. ಅದನ್ನು ಮಗು ಅಥವಾ ವೃದ್ಧರು ಕೂಡ ಸುಲಭವಾಗಿ ಸೇವಿಸಬಹುದು.
ಸಿಪ್ಪೆಗಳ ಅತ್ಯಲ್ಪ ಫೈಬರ್ ಅಂಶದ ಬಗ್ಗೆ ನಿಮಗೆ ತುಂಬಾ ಕಾಳಜಿ ಇದ್ದರೆ ನೀವು ಬಾದಾಮಿಯನ್ನು ತಿಂದ ನಂತರ ಅದನ್ನು ಪ್ರತ್ಯೇಕವಾಗಿ ಸೇವಿಸಬಹುದು
ದೇಹ ತೂಕ ಇಳಿಸಿಕೊಳ್ಳಲು ಸಹ ಬಾದಾಮಿ ಪ್ರಯೋಜನಕಾರಿ ಹೇಗೆ ?
ಹೌದು ಬಾದಾಮಿ ಈಗ ದೇಹ ತೂಕ ಇಳಿಸಿಕೊಳ್ಳಲು ಸಹ ತುಂಬಾ ಪ್ರಯೋಜನಕಾರಿ ಯಾಗಿದೆ. ನೀವು ಈಗ ನಿಮ್ಮ ದೇಹ ತೂಕ ನಿಮ್ಮ ದೈನಂದಿನ ಆಹಾರದಲ್ಲಿ ಬಾದಾಮಿಯನ್ನು ಸೇರಿಸಿಕೊಳ್ಳಬಹುದು. ಈ ಬಾದಾಮಿಯಲ್ಲಿ ಮೆಗ್ನೀಸಿಯಮ್, ಕಾಪರ್, ವಿಟಮಿನ್ ಇ, ಫೈಬರ್ ಮತ್ತು ಪ್ರೋಟೀನ್ನಿಂದ ಸಮೃದ್ಧವಾಗಿದೆ. ಬಾದಾಮಿ ನೇರ ಸ್ನಾಯುವಿನ ದ್ರವ್ಯರಾಶಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬು ಮತ್ತು ದೇಹದ ದ್ರವ್ಯರಾಶಿ ಸೂಚಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಾದಾಮಿ ಗಮನಾರ್ಹವಾದ ಕೊಬ್ಬನ್ನು ಬರ್ನ್ ಮಾಡುವ ಶಕ್ತಿಯನ್ನ ಹೊಂದಿದೆ. ಪ್ರತಿದಿನ ಬಾದಾಮಿಯನ್ನು ತಿನ್ನುವುದರಿಂದ, ನಿಮ್ಮ ತೂಕ ಇಳಿಕೆಯಾಗುವದರ ಜೊತೆಗೆ ಹೆಚ್ಚಿನ ಚಯಾಪಚಯ ಕ್ರಿಯೆಯ ಮೇಲೆ ನೀವು ಸುಲಭವಾಗಿ ನೆಗೆಟಿವ್ ಪರಿಣಾಮ ಬೀರುತ್ತದೆ. ಬಾದಾಮಿಯಲ್ಲಿ ಮೊನೊಸಾಚುರೇಟೆಡ್ ಕೊಬ್ಬುಗಳು, ಒಮೆಗಾ 3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಪ್ರೋಟೀನ್ ಕಂಡು ಬರುತ್ತದೆ.
ಬಾದಾಮಿ ಹಾಲು ಕುಡಿಯುವುದರಿಂದ ಸಿಗುವ ಲಾಭಗಳು
- ನೀವು ಮಧುಮೇಹದಿಂದ ಬಳಲುತ್ತಿದ್ದರೆ, ಹಾಲಿನ ಬದಲಾಗಿ ನೀವು ಬಾದಾಮಿ ಹಾಲನ್ನು ಸೇವಿಸುವುದು ಉತ್ತಮ. ಏಕೆಂದರೆ ಇದರಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆ ಇರುತ್ತದೆ.
- ನೀವು ಪ್ರತಿದಿನ ಒಂದು ಕಪ್ ಬಾದಾಮಿ ಹಾಲನ್ನು ಸೇವಿಸಿದರೆ, ಅದು ದಿನಕ್ಕೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಇ ಯ 20 ರಿಂದ 50 ಪ್ರತಿಶತದಷ್ಟು ಪೂರೈಸುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವುದರಿಂದ ಇದು ಅತ್ಯುತ್ತಮ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಒತ್ತಡ, ಉರಿಯೂತದ ಸಮಸ್ಯೆಗಳನ್ನು ದೂರ ಮಾಡುತ್ತದೆ.
- ಬಾದಾಮಿ ಹಾಲಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದ್ದು, ಇದು ಹೃದಯದ ಕಾರ್ಯ, ಮೂಳೆಯ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹೀಗಾಗಿ ದೇಹದ ಆರೋಗ್ಯಕ್ಕೆ ಬಾದಾಮಿ ಹಾಲು ಅತ್ಯುತ್ತಮ ಆಯ್ಕೆಯಾಗಿದೆ.
- ಅನೇಕರು ಲ್ಯಾಕ್ಟೋಸ್ ಹೊಂದಿರುವ ಹಾಲನ್ನು ಸೇವಿಸುವುದಿಲ್ಲ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಲ್ಯಾಕ್ಟೋಸ್ ಹಾಲಿನ ಬದಲಾಗಿ ಸೋಯಾ ಮಿಲ್ಕ್ ಅನ್ನು ಸೇವಿಸುತ್ತಾರೆ. ಆದರೆ ಸೋಯಾ ಹಾಲು ಸೇವಿಸಲು ಇಚ್ಛಿಸದವರಿಗೆ ಬಾದಾಮಿ ಹಾಲು ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಹಾಲಿನಿಂದ ಪಡೆಯಬಹುದಾದ ಎಲ್ಲಾ ಆರೋಗ್ಯಕರ ಪೌಷ್ಠಿಕಾಂಶಗಳನ್ನು ಬಾದಾಮಿ ಹಾಲಿನ ಸೇವನೆ ಮೂಲಕ ತಮ್ಮದಾಗಿಸಿಕೊಳ್ಳಬಹುದು.
GIPHY App Key not set. Please check settings