ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ. ಇಲ್ಲಿಯ ಆರಾಧ್ಯ ದೈವ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ, ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿ ಯಕ್ಷಗಾನದ ನಾಡಿನ ಚರಿತ್ರೆಯನ್ನೂ ಅಲಂಕರಿಸುತ್ತಿದೆ.
ಧರ್ಮಸ್ಥಳ ಮಂಜುನಾಥ ದೇವಾಲಯದ ಮತ್ತೊಂದು ಅದ್ಭುತ ಸಂಗತಿಯೆಂದರೆ ಜೈನ ಮತ್ತು ಹಿಂದೂ ಧರ್ಮದ ಸಂಯೋಜನೆ. ಧರ್ಮಸ್ಥಳದ ಆರಾಧ್ಯ ದೈವವಾದ ಮಂಜುನಾಥನ ಪಕ್ಕದಲ್ಲೇ ಜೈನ ತೀರ್ಥಂಕರನನ್ನು ಪೂಜಿಸಲಾಗುತ್ತದೆ.
ಧರ್ಮಸ್ಥಳದ ಇತಿಹಾಸ :

ಕ್ಷೇತ್ರಕ್ಕೆ ಸುಮಾರು ಏಳರಿಂದ ಎಂಟುನೂರು ವರುಷಗಳ ಇತಿಹಾಸ ಇದೆ. ಧರ್ಮಸ್ಥಳದ ಹಿಂದಿನ ಹೆಸರು “ಕುಡುಮ” ಎಂಬುದಾಗಿತ್ತು.
ಈ ಪ್ರಾಂತ್ಯದ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧರ್ಮಿಷ್ಠರಾದ ಸತಿ – ಪತಿ ವಾಸವಾಗಿದ್ದರು.
ಒಮ್ಮೆ ಇವರ ಮನೆಗೆ ನಾಲ್ಕು ಮಂದಿ ಅತಿಥಿಗಳು ಬಂದರು. ಇವರನ್ನು ನೇಮ ನಿಷ್ಠೆಯಿಂದ ಈ ದಂಪತಿಗಳು ಅತಿಥಿ ಸತ್ಕಾರ ಮಾಡಿದರು. ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ತಾವೆಲ್ಲರೂ ಆ ಮನೆಯಲ್ಲಿ ನೆಲೆಸಲು ಇಚ್ಚಿಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಅಣತಿಯಂತೆ ಪೆರ್ಗಡೆಯವರು ತಮ್ಮ ಮನೆ ತೆರವು ಮಾಡಿ ದೇವರುಗಳಿಗೆ ಬಿಟ್ಟು ಕೊಟ್ಟರು.. ಕಾಳರಾಹು-ಪುರುಷ ದೈವ, ಕಳರ್ಕಾಯಿ-ಸ್ತ್ರೀ ದೈವ, ಕುಮಾರಸ್ವಾಮಿ-ಪುರುಷ ದೈವ, ಹಾಗೂ ಕನ್ಯಾಕುಮಾರಿ-ಸ್ತ್ರೀ ದೈವ ಆ ಮನೆಯಲ್ಲಿ ನೆಲೆನಿಂತರು.
ಕಾಳರಾಹು – ಪುರುಷ ದೈವ, ಕಾಳರ್ಕಾಯಿ – ಸ್ತ್ರೀ ದೈವ, ಕುಮಾರಸ್ವಾಮಿ – ಪುರುಷ ದೈವ, ಹಾಗೂ ಕನ್ಯಾಕುಮಾರಿ – ಸ್ತ್ರೀ ದೈವ ಆ ಮನೆಯಲ್ಲಿ ನೆಲೆನಿಂತರು. ಆ ದೈವಗಳ ಆಜ್ಞೆಯಂತೆ ಪರ್ಗಡೆಯವರು ಗುಡಿ ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು.
ಶಿವಯೋಗಿಗಳು ಇಲ್ಲಿ ಈಶ್ವರಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ಧರ್ಮದೇವತೆಗಳು ಕೂಡ ಇದನ್ನೇ ಹೇಳಿ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಕುಡುಮಕ್ಕೆ (ಧರ್ಮಸ್ಥಳ)ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಪ್ರಸಿದ್ದವಾಗಿದೆ.
ಕುಡುಮಕ್ಕೆ (ಧರ್ಮಸ್ಥಳ) ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ.
ಈಗ ವೀರೇಂದ್ರ ಹೆಗ್ಗಡೆ ಅವರು ನಿಜವಾದ ನಮ್ಮ ದಕ್ಷಿಣ ಕನ್ನಡದ ದೇವರು, ಇವರ ಮಟ್ಟಿಗೆ ನಾವು ಮತ್ತೆ ನಮ್ಮ ದಕ್ಷಿಣ ಕನ್ನಡದ ಜನರು ಯಾವತ್ತಿಗೂ ಮಾತು ತಪ್ಪೊಲ್ಲ, ಇವರೇ ನಮ್ಮ ಒಡೆಯರು. ” ಎಂದು ನಂಬಲಾಗಿದೆ.

ವೀರೇಂದ್ರ ಹೆಗ್ಗಡೆಯವರು ನವೆಂಬರ್ ೨೫, ೧೯೪೮ ರಂದು ಜನಿಸಿದರು. ಅವರು ೨೦ ವರ್ಷದವರಿರುವಾಗಲೆ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಯಾದರು. ಸ್ವತಃ ಜೈನರಾಗಿ ಹಿಂದೂ ದೇವಸ್ಥಾನದ ಧರ್ಮದರ್ಶಿಯಾಗಿ ಕಾರ್ಯ ನಿರ್ವಹಿಸುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ ಎಂದು ಹೆಸರು ಬರುವಂತೆ ಮಾಡಿದ್ದಾರೆ.ಧರ್ಮಸ್ಥಳದ ಬೃಹತ್ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು ಇವರೇ. ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಶ್ರೀ ಮಂಜುನಾಥೇಶ್ವರ ಸಾಂಸ್ಕೃತಿಕ ಸಂಶೋಧನಾ ಕೇಂದ್ರವು ಧರ್ಮ, ಸಾಹಿತ್ಯ ಮತ್ತು ಕಲೆಯ ವಿಷಯಗಳ ಬಗ್ಗೆ ಸಂಶೋಧನೆಯನ್ನು ನಡೆಸುತ್ತಾ ಬಂದಿದೆ. ಅನೇಕ ಸಮಕಾಲೀನ ಮತ್ತು ಪ್ರಾಯೋಗಿಕ ಶೈಕ್ಷಣಿಕ ಸಂಸ್ಥೆ – ಕಾರ್ಯಕ್ರಮಗಳನ್ನೂ ಹೆಗ್ಗಡೆಯವರು ನಡೆಸುತ್ತಿದ್ದಾರೆ. ಉಚಿತ ವಿದ್ಯಾರ್ಥಿ ನಿಲಯಗಳು, ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ.
ದೇವಾಲಯದ ಬಗ್ಗೆ ಒಂದು ವಿಶೇಷ ಸಂಗತಿಯೆಂದರೆ ಅದರ ಧಾರ್ಮಿಕ ಸಹಿಷ್ಣುತೆ ಮತ್ತು ಪೂಜಾ ವಿಧಾನಗಳು. ಇದು ಭೂಮಿಯ ಮೇಲಿನ ಅಪರೂಪದ ಶಿವ ದೇವಾಲಯವಾಗಿದ್ದು, ಅಲ್ಲಿ ವೈಷ್ಣವ ಪುರೋಹಿತರು ದೈನಂದಿನ ಪೂಜೆಯನ್ನು ನೋಡಿಕೊಳ್ಳುತ್ತಾರೆ. ಮತ್ತೊಂದೆಡೆ, ದೇವಾಲಯದ ಆಡಳಿತಗಾರರಾಗಿ ಕಾರ್ಯನಿರ್ವಹಿಸುವ ಜೈನರು ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಾರೆ.
ಧರ್ಮಸ್ಥಳದ ಭೋಜನ ಕೋಣೆಯಲ್ಲಿ ಭಕ್ತರು ತಮಗೆ ತೃಪ್ತಿಯಾಗುವಷ್ಟು ಊಟ ಮಾಡಬಹುದು. ಇದು ದಕ್ಷಿಣ ಭಾರತದ ಬೃಹತ್ ಭೋಜನ ಕೋಣೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಇಲ್ಲಿ ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚು ಜನರ ಊಟ ಮಾಡುತ್ತಾರೆ.
ಧನ್ಯವಾದಗಳು.