ದುರ್ಯೋಧನ ಮಹಾಭಾರತ ಕಥಾನಕದಲ್ಲಿ ಒಂದು ಪ್ರಮುಖ ಪಾತ್ರ. ಧೃತರಾಷ್ಟ್ರ ಮತ್ತು ಗಾಂಧಾರಿಯಿಂದ ನೂರು ಜನ ಪುತ್ರರು ಒಬ್ಬಳು ಪುತ್ರಿ. ಇವರೇ ಕೌರವರು ಎಂದು ಪ್ರಸಿದ್ಧರಾದವರು. ಮಗಳು ದುಶ್ಶಲೆ . ಇವರಲ್ಲಿ ದುರ್ಯೋಧನ ಮತ್ತು ದುಶ್ಶಾಸನ ಮೊದಲಿಬ್ಬರು.
ದುರ್ಯೋಧನ ದೃತರಾಷ್ಟ್ರ ಹಾಗು ಗಾಂಧಾರಿಯರಿಗೆ ಜನಿಸಿದ ನೂರು ಪುತ್ರರಲ್ಲಿ ಹಿರಿಯವನು. ಹಸ್ತಿನಾಪುರದ ಕಾರ್ಯಕಾರಿ ಮಹಾರಾಜನ (ದೃತರಾಷ್ಟ್ರನ) ಹಿರಿಯ ಮಗನಾದರೂ, ಕಾಡಿನ ವಾಸದಿಂದ ಹಿಂದಿರುಗಿದ ಪಾಂಡವರ ಕಾರಣದಿಂದ ಯುವರಾಜನಾಗುವ ಅವಕಾಶ ಕೈ ತಪ್ಪಿ ಹೋಗುತ್ತದೆ. ಈ ಕಾರಣದಿಂದ ದುರ್ಯೋಧನ ಮನದಲ್ಲಿ ಪಾಂಡವರ ವಿರುದ್ಧ ದ್ವೇಷದ ಬೀಜ ಮೊಳಕೆ ಒಡೆಯುತ್ತದೆ. ಕರ್ಣನು ದುರ್ಯೋಧನನ ಆಪ್ತಮಿತ್ರ. ಪಾಂಡವರನ್ನು ವನವಾಸಕ್ಕೆ ಅಟ್ಟಿದ ನಂತರ ದುರ್ಯೋಧನ, ಕರ್ಣನ ಗಮನಾರ್ಹ ನೆರವಿನೊಂದಿಗೆ, ವಿಶ್ವದ ಎಲ್ಲ ದಿಕ್ಕಿನ ಎಲ್ಲ ರಾಜರನ್ನು ಮಣಿಸಿ, ದಿಗ್ವಿಜಯ ಯಾತ್ರೆ ನಡೆಸಿ, ಚಕ್ರವರ್ತಿಯಾಗುತ್ತಾನೆ.

ದುರ್ಯೋಧನನನ್ನು ಹೀರೋವಾಗಿಸುವ ಗುಣವಿದು. ಆತ ಸಮಾಜದ ಕಟ್ಟುಪಾಡುಗಳು, ಅಸಮಾನತೆಯನ್ನು ಆಗಲೇ ಪ್ರಶ್ನಿಸಿದ್ದ. ಜಾತಿಯಾಧಾರಿತ ವಿಂಗಡಣೆ ಹಾಗೂ ಕೆಲ ವರ್ಗದ ಜನರನ್ನು ಕೀಳಾಗಿ ನೋಡುವ ಬಗ್ಗೆ ಆತನ ವಿರೋಧವಿತ್ತು. ಸಮಾಜವನ್ನು ಬದಲಾಯಿಸುವಂಥ ಸುಧಾರಣೆಗಳನನ್ನು ತಂದು ಸಮಾನ ಸಮಾಜ ತರಬೇಕೆಂಬ ಆಶಯ ಆತನದಾಗಿತ್ತು. ಇದೇ ಕಾರಣಕ್ಕೆ ದ್ರೋಣಾಚಾರ್ಯರ ಸಹೋದರನಾದರೂ, ಜಾತಿ ವಿಂಗಡಣೆ, ಅಸಮಾನತೆ ವಿರುದ್ಧ ಪ್ರಶ್ನೆ ಎತ್ತುತ್ತಿದ್ದ ಬ್ರಾಹ್ಣಣ ಕೃಪಾ ದುರ್ಯೋಧನನ ಗೆಳೆಯನಾಗಿದ್ದ.
ಗುರುಕುಲದಲ್ಲಿ ಅಧಿಕಾರ ಹಾಗೂ ಪ್ರತಿಭೆ ಬಗ್ಗೆ ಸೂಕ್ಷ್ಮ ಪ್ರಶ್ನೆಗಳನ್ನು ಕೇಳುತ್ತಿದ್ದ ಕಾರಣಕ್ಕಾಗಿ ದುರ್ಯೋಧನನ್ನು ಕಡೆಗಣಿಸಿದ್ದ ದ್ರೋಣಾಚಾರ್ಯರು, ಸದಾ ಆತನ ಬಗ್ಗೆ ಭೀಷ್ಮರಲ್ಲಿ ದೂರುಗಳನ್ನು ಹೇಳುತ್ತಲೇ ಇರುತ್ತಿದ್ದರು.
ಪ್ರತಿಭೆಗೆ ಗೌರವ
ಕೆಳವರ್ಗದವರಲ್ಲಿ ಪ್ರತಿಭೆ ಇದ್ದರೂ ಅವರ ಜಾತಿಯ ಕಾರಣಕ್ಕಾಗಿ ಕಡೆಗಣಿಸುವ ಬಗ್ಗೆ ದುರ್ಯೋಧನ ಕೋಪಗೊಳ್ಳುತ್ತಿದ್ದ. ಏಕಲವ್ಯ ಬೇಟೆಗಾರನೆಂಬ ಕಾರಣಕ್ಕೆ ಆತನಿಗೆ ಬಿಲ್ವಿದ್ಯೆ ಕಲಿಸಲು ನಿರಾಕರಿಸಿದ ದ್ರೋಣಾಚಾರ್ಯರ ಬಗ್ಗೆ ಆತನಲ್ಲಿ ಸಿಟ್ಟಿತ್ತು.
ಪ್ರೀತಿಯ ಬಗ್ಗೆ ನಿಲುವು
ದೂರದ ಮರದಲ್ಲಿ ಏನು ಕಾಣುತ್ತಿದೆ ಎಂದು ದ್ರೋಣರು ತಮ್ಮ ವಿದ್ಯಾರ್ಥಿಗಳನ್ನು ಕೇಳಿದಾಗ ಅರ್ಜುನನ ಜಾಣ ಉತ್ತರ ಪ್ರಶಂಸೆ ಗಳಿಸಿದ್ದು ಗೊತ್ತೇ ಇದೆ. ಗುರಿಯ ಹೊರತಾಗಿ ಅರ್ಜುನನಿಗೆ ಬೇರೇನೂ ಕಾಣಿಸುತ್ತಿರಲಿಲ್ಲ. ಆದರೆ, ದುರ್ಯೋಧನನಿಗೆ ಅಲ್ಲಿ ಪ್ರೀತಿ ಕಾಣಿಸಿತ್ತು. ವಿದ್ಯೆ ಕಲಿವ ಸಲುವಾಗಿ ಪಾಪದ ಪಾರಿವಾಳವನ್ನು ಕೊಲ್ಲುವುದು ಆತನಿಗೆ ಇಷ್ಟವಿರಲಿಲ್ಲ.
ಕಡೆಗಣಿಸಲ್ಪಟ್ಟವರ ಪರ
ಅಧಿಕಾರದಲ್ಲಿರುವವರಿಂದ ಕಡೆಗಣನೆಗೆ ಒಳಗಾದವರ ಪರ ದುರ್ಯೋಧನ ನಿಲ್ಲುತ್ತಿದ್ದ. ಅದೇ ಕಾರಣಕ್ಕೆ ಭೀಷ್ಮರಿಗೆ ದುರ್ಯೋಧನನ ಮೇಲೆ ಹೆಚ್ಚಿನ ಪ್ರೀತಿ ಇತ್ತು. ದುರ್ಯೋಧನ ಕೂಡಾ ಸದಾ ಭೀಷ್ಮರನ್ನು ಗೌರವಿಸುತ್ತಾ, ಅವರ ಮಾತುಗಳಿಗೆ ಬೆಲೆ ಕೊಡುತ್ತಿದ್ದ.
ಗದಾಯುದ್ದ ಪರಿಣತ
ಕೃಷ್ಣನ ಅಣ್ಣ ಬಲರಾಮನೇ ದುರ್ಯೋಧನನಿಗೆ ಗದೆಯಲ್ಲಿ ಹೋರಾಡುವುದು ಕಲಿಸಿದ್ದು. ಈ ವಿದ್ಯೆಯಲ್ಲಿ ದುರ್ಯೋಧನ ಪರಿಣತಿ ಹೊಂದಿದ್ದ. ಕಿರೀಟಧಾರಣೆ ಸಂದರ್ಭದಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಾಗ ದುರ್ಯೋಧನನು ಭೀಮನ ಸಮನಾಗಿ ಗದೆಯೊಂದಿಗೆ ಹೋರಾಡಿದ್ದ.
ಕರ್ಣನ ಏಕೈಕ ಗೆಳೆಯ

ಕಿರೀಟ ಧಾರಣೆ ಸಂದರ್ಭದಲ್ಲಿ ಕರ್ಣ ಕೆಳ ಜಾತಿಯವನೆಂದು ಬ್ರಾಹ್ಮಣರೆಲ್ಲ ಅವನನ್ನು ಅವಮಾನಿಸಿದರು. ಆಗ ಕರ್ಣನನ್ನು ಪ್ರತಿಭೆಯಿಂದಾಗಿ ಗುರುತಿಸಬೇಕೆಂದು ನಿರ್ಧರಿಸಿದ ದುರ್ಯೋಧನ ಆತನನ್ನು ಅಂಗ ದೇಶದ ದೊರೆಯಾಗಿಸಿ ಅವಮಾನಿಸಿದವರಿಗೆ ಉತ್ತರ ನೀಡಿದ.
ಕುರುಕ್ಷೇತ್ರ ಯುದ್ಧ ಮುಗಿಯಿತು. ಭೀಷ್ಮ, ದ್ರೋಣ, ಕರ್ಣ, ದುಶ್ಯಾಸನ ಸೇರಿದಂತೆ ಕೌರವ ಪ್ರಮುಖರೆಲ್ಲಾ ಮೃತಪಟ್ಟರು. ಉಳಿದವನು ದರ್ಯೋಧನ ಒಬ್ಬನೇ. ಕಡೆಗೊಂದು ದಿನ ದುರ್ಯೋಧನ ಮತ್ತು ಭೀಮಸೇನನ ನಡುವೆ ಘನಘೋರ ಯುದ್ಧ ನಡೆಯಿತು. ದುರ್ಯೋಧನನು ಭೀಮನ ಮೇಲೆ ಎರಗಿದ. ಬಲಿಷ್ಠ ಗೂಳಿಗಳಂತೆ ಅವರು ಸೆಣಸಿದರು. ಇಬ್ಬರೂ ಬಲಶಾಲಿಗಳು, ಗದಾಯುದ್ಧದಲ್ಲಿ ನಿಪುಣರು. ಮುಂದೆ ಸಾಗಿ ಆಕ್ರಮಣ ಮಾಡುವರು, ಹಿಂದಕ್ಕೆ ಸರಿದು ಶತ್ರುವಿನ ಪೆಟ್ಟಿನಿಂದ ತಪ್ಪಿಸಿಕೊಳ್ಳುವರು. ಗದೆಗಳು ತಾಗಿದಾಗ ಸಾವಿರ ಕಿಡಿಗಳು ಹಾರುವವು. ಇಬ್ಬರ ದೇಹಗಳೂ ರಕ್ತದಲ್ಲಿ ತೊಯ್ದು ಹೋದವು. ಭೀಮನ ಗದೆಯ ಪೆಟ್ಟಿನಿಂದ ಕೆಳಕ್ಕೆ ಬಿದ್ದ ದುರ್ಯೋಧನನು ಚೇತರಿಸಿಕೊಂಡು ಭೀಮನ ಎದೆಗೆ ಹೊಡೆದನು. ಭೀಮನಿಗೆ ಒಂದು ಕ್ಷಣ ಪ್ರಜ್ಞೆ ತಪ್ಪಿದಂತಾಯಿತು
ದುರ್ಯೋಧನನ ಒಂದು ಪೆಟ್ಟಿಗೆ ಭೀಮನು ಕೆಳಕ್ಕೆ ಬಿದ್ದ, ಮತ್ತೆ ಸಾವರಿಸಿಕೊಂಡು ಎದ್ದು ನಿಂತ. ಯುದ್ಧವನ್ನು ನೋಡುತ್ತ ನಿಂತಿದ್ದ ಪಾಂಡವರಿಗೆ ಆತಂಕವಾಯಿತು
ಅರ್ಜುನನು ಕೃಷ್ಣನನ್ನು, “ಇವರಿಬ್ಬರಲ್ಲಿ ಯಾರು ಶ್ರೇಷ್ಠರು?’ ಎಂದು ಕೇಳಿದ. ಕೃಷ್ಣನು, “ಭೀಮನು ಹೆಚ್ಚು ಬಲಶಾಲಿ, ಆದರೆ ದುರ್ಯೋಧನ ಹೆಚ್ಚು ನಿಪುಣ. ದುರ್ಯೋಧನನು ಹಲವು ವರ್ಷಗಳಿಂದ ಸಾಧನೆ ಮಾಡುತ್ತಲೇ ಬಂದಿದ್ದಾನೆ. ಭೀಮನು ಅಂಥ ಸಾಧನೆ ಮಾಡಿಲ್ಲ. ಭೀಮನು ಹೇಗಾದರೂ ಮಾಡಿ ಗೆಲ್ಲದಿದ್ದರೆ ದುರ್ಯೋಧನನೇ ಈಗಲೂ ಗೆದ್ದು ಸಿಂಹಾಸನದ ಮೇಲಿರುತ್ತಾನೆ’ ಎಂದ. ಆಗ ಅರ್ಜುನನು, ಭೀಮನಿಗೆ ಅವನ ಪ್ರತಿಜ್ಞೆಯನ್ನು ನೆನಪು ಮಾಡಿಕೊಡಲು ತನ್ನ ಎಡತೊಡೆಯನ್ನು ತಟ್ಟಿದನು. ಈ ಕಾಳಗವನ್ನು ಮುಗಿಸಬೇಕೆಂದು ಭೀಮ ದುರ್ಯೋಧನರಿಬ್ಬರೂ ಕೆಚ್ಚೆದೆಯಿಂದ ಹೋರಾಡತೊಡಗಿದರು. ಭೀಮನು ಗದೆಯನ್ನು ಕೆಳಕ್ಕೆ ತರುವಾಗ ದುರ್ಯೋಧನನು ಹಾರಿ ತಪ್ಪಿಸಿಕೊಂಡು ಭೀಮನಿಗೆ ಪ್ರತಿ ಪ್ರಹಾರ ಮಾಡಿದನು. ಆ ಹೊಡೆತಕ್ಕೆ ಭೀಮ ತತ್ತರಿಸಿದ, ದೇಹದಿಂದ ರಕ್ತ ಚಿಮ್ಮಿತು.
ಆದರೂ ಚೇತರಿಸಿಕೊಂಡು ದುರ್ಯೋಧನನತ್ತ ನುಗ್ಗಿದ. ದುರ್ಯೋಧನನು ಮೇಲಕ್ಕೆ ಹಾರಿದ. ಆಗ ಭೀಮನು ತನ್ನ ಮಾರಕ ಗದೆಯನ್ನು ಅವನ ಮೇಲೆ ಎಸೆದ. ಅದು ದುರ್ಯೋಧನನ ತೊಡೆಗಳನ್ನು ಮುರಿಯಿತು. ಪರ್ವತವೊಂದು ಬೀಳುವಂತೆ ಅವನು ಕೆಳಕ್ಕೆ ಬಿದ್ದ.
ಭೀಮನು ಅವನನ್ನು ನೋಡಿ, “ದ್ರೌಪದಿಗೆ ಅವಮಾನ ಮಾಡಿದಾಗ, “ಹಸು ಹಸು’’ ಅಂದೆಯಲ್ಲ? ಈಗ ಹೇಳು’ ಎನ್ನುತ್ತ ದುರ್ಯೋಧನನ ತಲೆಯನ್ನು ಎಡಗಾಲಿನಿಂದ ಒದ್ದ. ದುರ್ಯೋಧನನ ಅಧರ್ಮ ಕಾರ್ಯಗಳನ್ನು ಒಂದೊಂದಾಗಿ ನೆನಪಿಸುತ್ತ ಮತ್ತೆ ಮತ್ತೆ ಒದ್ದ. ಆಗ ಯುಧಿಷ್ಠಿರನು ಅವನನ್ನು ತಡೆದ. ಈ ದ್ವಂದ್ವ ಯುದ್ಧವನ್ನು ನೋಡುತ್ತಿದ್ದ ಬಲರಾಮನಿಗೆ ತಡೆಯಲಾರದಷ್ಟು ಕೋಪ ಬಂದಿತು.ಗದಾಯುದ್ಧದಲ್ಲಿ ಹೊಕ್ಕಳ ಕೆಳಗೆ ಹೊಡೆಯಬಾರದು. ಭೀಮನು ಮಾಡಿದ್ದು ಅನ್ಯಾಯ’ ಎಂದು ಹಲಾಯುಧವನ್ನು ಎತ್ತಿಕೊಂಡು ಭೀಮನಿಗೆ ಹೊಡೆಯಲು ಮುಂದಾದ. ಆಗ ಕೃಷ್ಣ ಅವನನ್ನು ತಡೆದು, “ದುರ್ಯೋಧನನು ಪಾಂಡವರಿಗೆ ಹಲವು ಅನ್ಯಾಯಗಳನ್ನು ಮಾಡಿದ್ದಾನೆ. ಅಲ್ಲದೆ, ಭೀಮನು ಅವನ ತೊಡೆಗಳನ್ನು
ಮುರಿಯುವುದಾಗಿ ಪ್ರತಿಜ್ಞೆ ಮಾಡಿದ್ದ. ಅದನ್ನು ಪೂರೈಸಬೇಕಾಗಿತ್ತು’ ಎಂದು ಸಮಾಧಾನ ಹೇಳಿದ. ತನ್ನ ಕಣ್ಮುಂದೆಯೇ ಅಧರ್ಮದ ಯುದ್ಧ
ನಡೆದಿದ್ದರಿಂದ ಬೇಸರಗೊಂಡ ಬಲರಾಮನು ದ್ವಾರಕೆಗೆ ಹೊರಟು ಹೋದ. ಭೀಮನ ವಿಜಯದಿಂದ ಕೃಷ್ಣನೂ, ಪಾಂಡವರೂ ಬಹಳ ಸಂತೋಷಪಟ್ಟರು.
ಧನ್ಯವಾದಗಳು.
GIPHY App Key not set. Please check settings