in

ಕತ್ತೆಗಳ ಹಾಲನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ

ಕತ್ತೆಗಳ ಹಾಲನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ
ಕತ್ತೆಗಳ ಹಾಲನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ

ಮೊನ್ನೆಯಷ್ಟೆ ಒಂಟೆ ಹಾಲಿನ ಬಗ್ಗೆ ತಿಳಿಯಿತು, ಇವತ್ತು ಕತ್ತೆಯ ಹಾಲಿನಲ್ಲಿರುವ ಮಹತ್ವ ತಿಳಿಯೋಣ ಅಂತ.

ನಾವು ಹಾಲು ಎಂದರೆ ಹಸುವಿನ ಹಾಲು ಮಾತ್ರ ಒಳ್ಳೆಯದು ಅಂತ ಅಂದುಕೊಂಡಿದ್ದೆವು, ಆದರೆ ಬೇರೆ ಬೇರೆ ಸಾಕು ಪ್ರಾಣಿಗಳ ಹಾಲು ಕೂಡ ಒಳ್ಳೆಯದೇ.

ಕತ್ತೆಗಳು ಈಕ್ವಿಡೆ ಗುಂಪಿಗೆ ಸೇರುತ್ತವೆ. ಈಕ್ವಿಡೆ ಎಂದರೆ ಕುದುರೆಗಳು ಮತ್ತು ಇದಕ್ಕೆ ಸಂಬಂಧಿತ ಪ್ರಾಣಿಗಳ ಜೀವವರ್ಗೀಕರಣದ ಶಾಸ್ತ್ರ ಎನ್ನಬಹುದು. ಅಂದರೆ ಕತ್ತೆಗಳು ಕುದರೆ ಮತ್ತು ಜೀಬ್ರಾ ತಳಿಗಳಿಗೆ ಹೋಲುತ್ತದೆ ಎಂದು ಅಥವಾ ಆ ಗುಂಪಿಗೆ ಸೇರಿದೆ ಎಂದರ್ಥ. ಪ್ರಪಂಚದಾದ್ಯಂತ ಕತ್ತೆಗಳನ್ನು ಸಾಕುತ್ತಿದ್ದು ಜೆನ್ನಿಗಳು ಎಂದ ಕರೆಯಲ್ಪಡುವ ಹೆಣ್ಣು ಕತ್ತೆಗಳ ಹಾಲನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ.

ಸೋಮಾರಿಗಳನ್ನು ಕತ್ತೆಗಳಿಗೆ ಹೋಲಿಸುತ್ತೇವೆ. ಆದರೆ ಸ್ವತಃ ನಮಗೇ ಕತ್ತೆಗಳ ಪ್ರಯೋಜನಗಳು ಸರಿಯಾಗಿ ತಿಳಿದಿರುವುದಿಲ್ಲ. ಸ್ವಲ್ಪ ಹಿಂದಿನ ದಶಕದಲ್ಲಿ ಕೇವಲ ಬಟ್ಟೆ ಒಗೆಯುವ ಅಗಸನ ಬಳಿ ಮಾತ್ರ ಕತ್ತೆಗಳು ಕಂಡು ಬರುತ್ತಿದ್ದವು. ಆದರೆ ಈಗ ಕತ್ತೆಗಳ ಸಾಕಾಣಿಕೆ ಒಂದು ವ್ಯವಹಾರವಾಗಿ ಬದಲಾಗುತ್ತಿದೆ ಮತ್ತು ಜನರ ಜೀವನ ನಿರ್ವಹಣೆಗೆ ಸಹಾಯ ಆಗುತ್ತಿವೆ.

ಕತ್ತೆಗಳ ಹಾಲನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ
ಕತ್ತೆಗಳ ಸಾಕಾಣಿಕೆ

ಕತ್ತೆ ಹಾಲನ್ನು ಉಪಯೋಗಿಸುವ ಬಗ್ಗೆ ನಮ್ಮಲ್ಲಿ ಅನೇಕ ಗೊಂದಲಗಳಿವೆ. ಕತ್ತೆ ಹಾಲಿನ ಸುದ್ದಿ ನಮ್ಮ ಕಿವಿಗೆ ಆಗಾಗ ಬೀಳುತ್ತಿರುತ್ತದೆ. ಈ ಸುದ್ಧಿ ಕೇಳಿದ ಮೇಲೆ ಕತ್ತೆ ಹಾಲಿನ ಬಳಕೆ ಇತ್ತೀಚಿಗಷ್ಟೆ ಬಂದಿದೆ ಎಂದು ಭಾವಿಸುತ್ತೇವೆ. ಅದರೆ ವಾಸ್ತವದಲ್ಲಿ ಇದರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಇದು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಹರಿಯಾಣದ ಹಿಸಾರ್ ನಲ್ಲಿ ಕತ್ತೆ ಹಾಲಿನ ಡೈರಿ ಆರಂಭಿಸಲು ಚಿಂತನೆಗಳು ನಡೆಯುತ್ತಿವೆ. 1 ಲೀಟರ್ ಹಾಲಿಗೆ ಸುಮಾರು 6ರಿಂದ 7ಸಾವಿರ ರೂ ನಿಗಧಿ ಮಾಡಲಾಗುತ್ತಿದೆ.

ಕತ್ತೆ ಹಾಲು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದು ಹಸುವಿನ ಹಾಲಿಗೆ ಜನಪ್ರಿಯ ಪರ್ಯಾಯವಾಗಿದೆ ಮತ್ತು ಮಾನವ ಎದೆ ಹಾಲಿಗೆ ಸಮಾನವಾದ ಪೌಷ್ಟಿಕಾಂಶದ ಗುಣಗಳನ್ನು ಹೊಂದಿದೆ. ಇದು ಹಸುವಿನ ಹಾಲಿಗಿಂತ ಗಣನೀಯವಾಗಿ ಕಡಿಮೆ ಕೊಬ್ಬು , ಹೆಚ್ಚು ಖನಿಜಗಳು ಮತ್ತು ಲ್ಯಾಕ್ಟೋಸ್ ಅನ್ನು ಹೊಂದಿರುತ್ತದೆ. ಹೆಚ್ಚಿನ ವಿಟಮಿನ್ , ಖನಿಜ ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲದ ಅಂಶದಿಂದಾಗಿ ಕತ್ತೆ ಹಾಲು ಚರ್ಮಕ್ಕೆ  ಒಳ್ಳೆಯದು. ಗುಣಗಳಿಗಾಗಿ ಮೌಲ್ಯಯುತವಾಗಿದೆ. ಇದು ಶಿಶುಗಳಿಗೆ ಉತ್ತಮ ಆಯ್ಕೆಯಾಗಿದೆ, ಏಕೆಂದರೆ ಇದು ನೈಸರ್ಗಿಕ ಜೀವಿರೋಧಿ ಸಂಯುಕ್ತಗಳನ್ನು ಹೊಂದಿರುತ್ತದೆ ಮತ್ತು ಹೃದಯ ಮತ್ತು ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕತ್ತೆಯ ಹಾಲಿನ ಪ್ರಯೋಜನಗಳು ಒಂದೆರಡಲ್ಲ. ಹಲವು ಆಯಾಮಗಳಲ್ಲಿ ಇಂದು ಕತ್ತೆಯ ಹಾಲು ದೇಶ – ವಿದೇಶಗಳಲ್ಲಿ ಬಳಕೆ ಆಗುತ್ತಿದೆ. ಜೊತೆಗೆ ಕತ್ತೆಯ ಹಾಲಿನ ಉತ್ಪನ್ನಗಳು ಕೂಡ ಜನರ ಕಣ್ಣು ಸೆಳೆಯುತ್ತಿವೆ.

ಕತ್ತೆಗಳ ಹಾಲನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ
ಕತ್ತೆ ಹಾಲು ಚರ್ಮಕ್ಕೆ  ಒಳ್ಳೆಯದು

ಹೆಚ್ಚಿನ ಹಾಲುಗಳಲ್ಲಿನ ಪ್ರೋಟಿನ್‍ಗಳು ಕ್ಯಾಸೀನ್ ಮತ್ತು ವೇ ಪ್ರೋಟಿನ್ ಅಂಶ ಹೊಂದಿರುತ್ತದೆ. ಆದರೆ ಕತ್ತೆ ಹಾಲಿನಲ್ಲಿ ಕ್ಯಾಸೀನ್ ಪ್ರಮಾಣ ಕಡಿಮೆ ಇದ್ದು ಹೆಚ್ಚು ಪೌಷ್ಠಿಕಾಂಶವನ್ನು ಹೊಂದಿದೆ. ಇದು ದೇಹದಲ್ಲಿ ಕೆಟ್ಟ ವೈರಸ್ ಮತ್ತು ಬ್ಯಾಕ್ಷೀರಿಯಾಗಳ ಬೆಳವಣಿಗೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.

ಕತ್ತೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಕ್ಯಾಲ್ಸಿಯಂ, ರಂಜಕ ಮತ್ತು ಇತರ ಮೂಳೆಗಳನ್ನು ನಿರ್ಮಿಸುವ ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೂಳೆ ಗುಣಮಟ್ಟ ಮತ್ತು ಬಲವನ್ನು ಹೆಚ್ಚಿಸುತ್ತದೆ.

ಕತ್ತೆ ಹಾಲು ಔಷಧಿ ಮತ್ತು ಸೌಂದರ್ಯವರ್ಧಕಗಳಿಗೆ ಬಳಸಿರುವ ಬಗ್ಗೆ ದೀರ್ಘ ಇತಿಹಾಸ ಹೊಂದಿದೆ. ಹಿಪೋಕ್ರೆಟಿಸ್ ಸಂಧಿವಾತ, ಕೆಮ್ಮು ಮತ್ತು ಗಾಯಗಳಿಗೆ ಚಿಕತ್ಸೆ ರೂಪದಲ್ಲಿ ಬಳಸಿದ್ದರು ಎಂದು ವರದಿಯಾಗಿದೆ. ಕ್ಲಿಯೋಪಾತ್ರ ತನ್ನ ಮೃದುವಾದ ಮತ್ತು ನಯವಾದ ಚರ್ಮಕ್ಕಾಗಿ ಕತ್ತೆ ಹಾಲಿನಿಂದ ಸ್ನಾನ ಮಾಡುತ್ತಿದ್ದಳು ಎನ್ನಲಾಗಿದೆ.

ಕತ್ತೆ ಹಾಲಿನಲ್ಲಿ ಅನೇಕ ಪ್ರಯೋಜನಗಳಿವೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕಡಿಮೆ ಕ್ಯಾಸೀನ್ ಅಂಶ ಹೊಂದಿದ್ದು ಅಲರ್ಜಿಯನ್ನು ತಡೆಯುತ್ತದೆ. ಮತ್ತು ಕತ್ತೆ ಹಾಲಿನ ಸೇವನೆಯಿಂದ ತೂಕ ನಿಯಂತ್ರಿಸಕೊಳ್ಳಬಹುದು ಜೊತೆಗೆ ಎತ್ತರ ಹೆಚ್ಚಸಿಕೊಳ್ಳಲು ಸಹಕಾರಿಯಾಗಿದೆ.

ಸಂಶೋಧನೆಯ ಪ್ರಕಾರ ಕತ್ತೆ ಹಾಲಿನಲ್ಲಿ ಹಸುವಿನ ಹಾಲಿಗಿಂತ ಕಡಿಮೆ ಪ್ರಮಾಣದ ಕೊಬ್ಬಿನ ಅಂಶ ಇರುತ್ತದೆ ಎಂದು ಹೇಳುತ್ತಾರೆ.

ಆದರೆ ಒಬ್ಬ ತಾಯಿಯ ಎದೆ ಹಾಲಿನ ಪೌಷ್ಟಿಕ ಸತ್ವಗಳಿಗೆ ಸಮನಾಗಿ ಅಂದರೆ ವಿಟಮಿನ್ ಅಂಶಗಳು ಮತ್ತು ಅಗತ್ಯವಾದ ಫ್ಯಾಟಿ ಆಸಿಡ್ ಅಂಶಗಳನ್ನು ಒಳಗೊಂಡಿದೆ. ಕತ್ತೆ ಹಾಲಿನ ಆರೋಗ್ಯಕರ ಪ್ರಯೋಜನಗಳು ಸಾಕಷ್ಟಿವೆ. ಚರ್ಮ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಇದು ಬಗೆಹರಿಸುತ್ತದೆ ಮತ್ತು ಹಸುವಿನ ಹಾಲಿಗಿಂತ ದೇಹದಲ್ಲಿ ಬಹಳ ಬೇಗನೆ ಜೀರ್ಣ ಆಗುತ್ತದೆ.

ಕತ್ತೆ ಹಾಲಿನಲ್ಲಿರುವ ವಿಟಮಿನ್‌ಗಳು, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಅಗತ್ಯ ಕೊಬ್ಬಿನಾಮ್ಲಗಳು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಚರ್ಮದ ತಡೆಗೋಡೆಯನ್ನು ಪುನರುತ್ಪಾದಿಸಲು ಮತ್ತು ರಕ್ಷಿಸಲು ಅಗತ್ಯವಾದ ಎಲ್ಲಾ ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಹಾಲಿನ ಪ್ರೋಟೀನ್‌ಗಳಿಂದ ಹೆಚ್ಚಿನ ಪ್ರಯೋಜನಗಳು ಬರುತ್ತವೆ. ಕತ್ತೆ ಹಾಲು ಉತ್ತಮ ಮಾಯಿಶ್ಚರೈಸರ್ ಮತ್ತು ಹಾಲಿನ ಸ್ನಾನಕ್ಕೆ ಅತ್ಯುತ್ತಮವಾಗಿದೆ.

ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ಕೆಮ್ಮು ಮತ್ತು ಇತರ ಸೋಂಕುಗಳಿಗೆ ‍ ಔಷಧೀಯಾಗಿ ಬಳಸಲಾಗುತ್ತಿತ್ತು. ಹಸು, ಮೇಕೆ, ಕುರಿ ಮತ್ತು ಎಮ್ಮೆ ಹಾಲಿಗೆ ಹೋಲಿಸಿದರೆ ಕತ್ತೆ ಹಾಲು ತಾಯಿಯ ಎದೆಹಾಲಿಗೆ ಹೆಚ್ಚು ಹೋಲುತ್ತದೆ. 19 ಶತಮಾನಕ್ಕಿಂತ ಮೊದಲು ಅನಾಥ ಮಕ್ಕಳಿ ಕತ್ತೆ ಹಾಲನ್ನು ಆಹಾರವಾಗಿ ಬಳಸುತ್ತಿದ್ದರು.

ಪ್ರಮುಖ ಅಂಶವೆಂದರೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಇದು ದೇಹವು ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳ ಬಲವರ್ಧನೆಗೆ ಮುಖ್ಯವಾಗಿದೆ. ಒಂದು ಅಧ್ಯಯನದ ಪ್ರಕಾರ ಕತ್ತೆ ಹಾಲು ಸೈಟೋಕಿನ್‍ಗಳ ಬಿಡುಗಡೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸುತ್ತದೆ.

ಹೆಚ್ಚಿನ ಮಟ್ಟದ ಅಪರ್ಯಾಪ್ತ ಮತ್ತು ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿದೆ. ಅವುಗಳ ಪ್ರತಿರಕ್ಷಣಾ-ಪ್ರಚೋದಕ ಗುಣಲಕ್ಷಣಗಳ ಜೊತೆಗೆ, ಈ ನಿಯತಾಂಕಗಳು ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ, ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತವೆ ಮತ್ತು ಪರಿಧಮನಿಯ ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ  ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಕತ್ತೆಗಳ ಹಾಲನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ
ಮಕ್ಕಳಿಗೂ ಕೂಡ ಕತ್ತೆ ಹಾಲಿನ ಸೇವನೆ ಮಾಡಿಸುತ್ತಾರೆ

ಪ್ರೋಟಿನ್ ಜೊತೆಗೆ ಅನೇಕ ಜೀವಸತ್ವ ಮತ್ತು ಖನಿಜಾಂಶಗಳನ್ನು ಹೊಂದಿದೆ. ಇದು ಕಡಿಮೆ ಕೊಬ್ಬಿನಾಂಶ ಹೊಂದಿದ್ದು ಇತರೆ ಹಾಲುಗಳಿಗಿಂತ ಕತ್ತೆ ಹಾಲಿನಲ್ಲಿ ಹೆಚ್ಚು ವಿಟಮಿನ ಡಿ ಅಂಶ ದೊರೆಯುತ್ತದೆ.

ಕತ್ತೆ ಹಾಲನ್ನು ಎಳೆ ಮಕ್ಕಳಿಗೆ ಕುಡಿಸುತ್ತಾರೆ. ಏಕೆಂದರೆ ಕತ್ತೆಯ ಹಾಲು ಹಸುವಿನ ಹಾಲಿಗಿಂತ ಕಡಿಮೆ ಸಾಂದ್ರತೆ ಹೊಂದಿದ್ದು, ಪುಟ್ಟ ಮಕ್ಕಳ ದೇಹದ ಜೀರ್ಣಾಂಗ ವ್ಯವಸ್ಥೆಗೆ ಸರಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ಬಹಳ ಬೇಗನೆ ಜೀರ್ಣವಾಗುತ್ತದೆ.

ಎಳೆ ಕಂದಮ್ಮಗಳಲ್ಲಿ ಗ್ಯಾಸ್ಟ್ರಿಕ್ ಮತ್ತು ಅಜೀರ್ಣತೆ ಉಂಟಾಗುವುದಿಲ್ಲ ಎಂಬ ಕಾರಣಕ್ಕೆ. ಮನೆಯಲ್ಲಿನ ಎಂಟು – ಹತ್ತು ವರ್ಷದ ಮಕ್ಕಳಿಗೂ ಕೂಡ ಕತ್ತೆ ಹಾಲಿನ ಸೇವನೆ ಮಾಡಿಸುತ್ತಾರೆ. ವರ್ಷಕ್ಕೆ ಒಂದು ಬಾರಿಯಾದರೂ ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸುವುದರಿಂದ ಅವರ ದೇಹದ ರೋಗ – ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಕೆಮ್ಮು, ಹೊಟ್ಟೆಯಲ್ಲಿನ ಸೋಂಕು ಮತ್ತು ಚರ್ಮದ ಸೋಂಕು ಇಲ್ಲವಾಗುತ್ತದೆ ಎಂದು ಹೇಳುತ್ತಾರೆ.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ಮತ್ತು ಅವಶ್ಯವಿಲ್ಲದ ಫ್ಯಾಟಿ ಆಸಿಡ್ ಅಂಶಗಳನ್ನು ಕಡಿಮೆ ಮಾಡಿ ನಮ್ಮ ಸಂಪೂರ್ಣ ಆರೋಗ್ಯವನ್ನು ವೃದ್ಧಿಸುತ್ತದೆ.

ತಜ್ಞರ ಪ್ರಕಾರ ಕತ್ತೆ ಹಾಲಿನಲ್ಲಿ ಎರಡು ವಿಶೇಷ ಗುಣಗಳಿವೆ. ಮೊದಲನೆಯದಾಗಿ ಕತ್ತೆಯ ಹಾಲು ಹೆಣ್ಣಿನ ಹಾಲಿನಂತೆ. ಇದು ಉತ್ಕರ್ಷಣ ನಿರೋಧಕ ಮತ್ತು ಪುನರುತ್ಪಾದಕ ಸಂಯುಕ್ತಗಳನ್ನು ಒಳಗೊಂಡಿದೆ. ಇದರಿಂದ ತ್ವಚೆಯು ಮೃದುವಾಗಿರುತ್ತದೆ. ಕತ್ತೆಯ ಹಾಲನ್ನು ಕ್ರೀಮ್‌ಗಳು, ಮಾಯಿಶ್ಚರೈಸರ್‌ಗಳು ಮತ್ತು ಸಾಬೂನುಗಳನ್ನು ತಯಾರಿಸಲು ಬಳಸಲಾಗುತ್ತದೆ. ಹಲವೆಡೆ ಕತ್ತೆ ಹಾಲಿನಿಂದ ತಯಾರಿಸಿದ ಸೌಂದರ್ಯವರ್ಧಕ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ.

ಅದಕ್ಕೆ ಹೇಳೋದು ಹೀನಾಯವಾಗಿ ನೋಡುವ ಜನರಿಗೆ ನಮ್ಮ ಬೆಲೆ ಖಂಡಿತಾ ಒಂದು ದಿನ ತಿಳಿಯುತ್ತೆ ಅಂತ, ಅಲ್ವಾ…?

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

49 Comments

ಅಭಿಷೇಕ್ ಬಚ್ಚನ್ ಪ್ರಸಿದ್ಧ ಭಾರತೀಯ ನಟನ ಜನ್ಮದಿನ

ಫೆಬ್ರವರಿ 5, ಅಭಿಷೇಕ್ ಬಚ್ಚನ್ ಪ್ರಸಿದ್ಧ ಭಾರತೀಯ ನಟನ ಜನ್ಮದಿನ

ಕ್ರೆಡಿಟ್ ಕಾರ್ಡ್ ಬಳಸುತ್ತಿರುವಿರಾ?

ಕ್ರೆಡಿಟ್ ಕಾರ್ಡ್ ಬಳಸುತ್ತಿರುವಿರಾ? ಅನುಕೂಲ, ಅನಾನುಕೂಲ ಎರಡು ಇದೆ, ನೋಡಿ ಉಪಯೋಗಿಸಿ