ತುಂಬಾ ಮಂದಿಗೆ ಬಿಸಿನೀರು ಕುಡಿಯುವ ಅಭ್ಯಾಸ ಇದೆ. ಬಿಸಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನ ಏನಿದೆ? ಬಿಸಿ ನೀರು ಕುಡಿಯಬಹುದಾ? ಹಾಗಾದರೆ ಬಿಸಿನೀರು ಕುಡಿಯುವುದರಿಂದ ಆಗುವ ಲಾಭ ನಷ್ಟಗಳು ಏನಿದೆ ನೋಡೋಣ.
ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದ ತಾಪಮಾನ ಹೆಚ್ಚಾಗುತ್ತದೆ ಮತ್ತು ನಿಮ್ಮ ದೇಹದಲ್ಲಿ ಬೆವರು ಬರಲು ಪ್ರಾರಂಭವಾಗುತ್ತದೆ.
ಈ ಸಂದರ್ಭದಲ್ಲಿ ನಿಮ್ಮ ದೇಹದಿಂದ ವಿಷಕಾರಿ ಅಂಶಗಳು ಮತ್ತು ಕಲುಷಿತ ಬೇಡದ ತ್ಯಾಜ್ಯಗಳು ಹೊರಹೋಗುತ್ತವೆ. ಇದರಿಂದ ನಿಮ್ಮ ಚರ್ಮದ ಮೇಲೆ ಮೊಡವೆಗಳು ಉಂಟಾಗುವ ಸಾಧ್ಯತೆ ಇರುವುದಿಲ್ಲ.
ಮಹಿಳೆಯರು ಬಿಸಿ ನೀರನ್ನು ಕುಡಿಯುವುದರಿಂದ ಮುಟ್ಟಿನ ವೇಳೆ ಆಗುವ ಸ್ನಾಯು ಸೆಳೆತವನ್ನು ನಿವಾರಣೆ ಮಾಡಿಕೊಳ್ಳಬಹುದು. ಮುಟ್ಟಿನ ವೇಳೆ ಸ್ನಾಯು ಸೆಳೆತದ ಸಮಸ್ಯೆಯನ್ನು ಎದುರಿಸುವವರು ಬಿಸಿನೀರನ್ನು ಕುಡಿದರೆ ಅದರಿಂದ ಪರಿಹಾರ ಪಡೆಯಬಹುದಾಗಿದೆ. ಇದು ಹೊಟ್ಟೆಯಲ್ಲಿನ ಸ್ನಾಯುಗಳನ್ನು ಶಮನಗೊಳಿಸಿ ರಕ್ತದ ಹರಿವನ್ನು ಹೆಚ್ಚಿಸಿ ಮತ್ತು ಸ್ನಾಯು ಸೆಳೆತದಿಂದ ಆರಾಮ ಸಿಗುವಂತೆ ಮಾಡುತ್ತದೆ.
ಮೈದಾ ಹಾಗೂ ಇತರ ಅನಾರೋಗ್ಯಕರ ಸಿದ್ಧ ಆಹಾರಗಳನ್ನು ಸೇವಿಸುವವರಿಗೆ ಮಲಬದ್ದತೆ ನಿತ್ಯದ ತೊಂದರೆಯಾಗಿದೆ. ನಿತ್ಯವೂ ಬಿಸಿನೀರನ್ನು ಸೇವಿಸುವ ಮೂಲಕ ಕರುಳುಗಲು ಹೆಚ್ಚು ಸಂಕುಚಿತಗೊಳ್ಳುವ ಮೂಲಕ ದೇಹದಿಂದ ಕಲ್ಮಶಗಳು ಸುಲಭವಾಗಿ ಹೊರಹೋಗಲು ನೆರವಾಗುತ್ತದೆ. ಆದ್ದರಿಂದ ಮಲಬದ್ಧತೆಯ ತೊಂದರೆ ಇರುವವರು ತಕ್ಷಣ ತಮ್ಮ ನೀರಿನ ಅಗತ್ಯತೆಯನ್ನು ಬಿಸಿನೀರಿಗೆ ಬದಲಿಸಿಕೊಳ್ಳುವ ಮೂಲಕ ಶೀಘ್ರವೇ ಈ ತೊಂದರೆ ನಿವಾರಣೆಯಾಗುವುದನ್ನು ಗಮನಿಸಬಹುದು.

ಬಿಸಿ ನೀರು ಕುಡಿದರೆ ಅದರಿಂದ ತೂಕ ಇಳಿಸಿಕೊಳ್ಳಲು ನೆರವಾಗುವುದು ಎಂದು ಹಲವಾರು ಸಂಶೋಧನೆಗಳು ಹೇಳಿವೆ. ಬಿಸಿ ನೀರು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಪರಿಣಾಮಕಾರಿಯಾಗಿ ಹೊರಗೆ ಹಾಕುವುದು. ಇದು ಹೊಟ್ಟೆ ತುಂಬಿದಂತೆ ಮಾಡುವುದು. ಯಾಕೆಂದರೆ ತಣ್ಣೀರಿಗೆ ಹೋಲಿಸಿದರೆ ಬಿಸಿ ನೀರು ಹೆಚ್ಚು ಕಾಲ ಹೊಟ್ಟೆಯಲ್ಲಿ ಉಳಿಯುವುದು.
ಶೀತದ ಪ್ರಕೃತಿಯಲ್ಲಿ ಮೂಗು ಕಟ್ಟುವುದು ಸಾಮಾನ್ಯ. ಹಾಗಿರುವಾಗ ಉಸಿರಾಟಕ್ಕೆ ಹೆಚ್ಚು ಸಮಸ್ಯೆಯನ್ನುಂಟು ಮಾಡುತ್ತದೆ. ಬಿಸಿ ನೀರು ಸೇವನೆಯಿಂದ ಮೂಗು ಕಟ್ಟುವಿಕೆ ಸಡಿಲಗೊಳ್ಳುತ್ತದೆ. ಇದರಿಂದ ನೀವು ಸುಲಭದಲ್ಲಿ ಉಸಿರಾಟ ಕ್ರಿಯೆಯನ್ನು ಪ್ರಾರಂಭಿಸಬಹುದು.
ಬಿಸಿ ನೀರಿನಿಂದಾಗಿ ದೇಹದಲ್ಲಿ ರಕ್ತ ಸಂಚಾರವು ಸುಗಮವಾಗಿ ಆಗಲು ನೆರವಾಗುವುದು. ಬಿಸಿ ನೀರು ರಕ್ತನಾಳನ್ನು ಹಿಗ್ಗಿಸುವ ಮೂಲಕವಾಗಿ ರಕ್ತವು ಸರಿಯಾಗಿ ಸಂಚಾರವಾಗುವಂತೆ ಮಾಡುವುದು. ಇದರಿಂದ ಸಂಪೂರ್ಣ ದೇಹಕ್ಕೆ ರಕ್ತವು ಸರಿಯಾಗಿ ತಲುಪುವುದು. ಇದರಿಂದಾಗಿ ಹೃದಯದ ಆರೋಗ್ಯವು ಉತ್ತಮವಾಗುವುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ಬಿಸಿ ನೀರು ಸೇವನೆಯು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಸ್ನಾಯುಗಳು ಬಲಗೊಳ್ಳಲು ಸಹಾಯ ಮಾಡುತ್ತದೆ. ಜತೆಗೆ ಸ್ನಾಯು ಸೆಳೆತ, ಸಂಧಿವಾತದಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.
ದೇಹದ ಜೀರ್ಣ ಶಕ್ತಿ ಹೆಚ್ಚುತ್ತದೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಕಾಪಾಡುವುದು ಮಾತ್ರವಲ್ಲದೆ ಹೊಳಪಿನಿಂದ ಹಾಗೂ ಕಾಂತಿಯಿಂದ ಕೂಡಿದ ಚರ್ಮ ನಿಮ್ಮದಾಗುವ ಹಾಗೆ ಮಾಡುತ್ತದೆ.
ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನ ಜೊತೆಗೆ ಸ್ವಲ್ಪ ನಿಂಬೆಹಣ್ಣಿನ ರಸ ಮತ್ತು ಕೆಲವು ಹನಿಗಳಷ್ಟು ಜೇನುತುಪ್ಪ ಹಾಕಿ ಕುಡಿದರೆ ತುಂಬಾ ಒಳ್ಳೆಯದು.
ಬಿಸಿ ನೀರು ಸೇವನೆ ಹಲ್ಲಿನ ಆರೋಗ್ಯವನ್ನು ಸುಧಾರಿಸುತ್ತದೆ ಜತೆಗೆ ಸ್ವಚ್ಛವಾಗಿರಿಸಿಕೊಳ್ಳಲು ಸಹಾಯಕವಾಗಿದೆ. ತಣ್ಣೀರಿನಿಂದ ಹಲ್ಲು ಉಜ್ಜುವುದು ಸಂವೇದನಾಶೀಲತೆಯನ್ನು ಉಂಟು ಮಾಡಬಹುದು. ದವಡೆಯ ಒಡೆತ ಕಂಡು ಬರುವುದು.
ಬಿಸಿನೀರು ಸೇವಿಸುವದರಿಂದ ಮನಸ್ಸು ಚುರುಕಾಗುತ್ತದೆ ಜತೆಗೆ ಆರೋಗ್ಯವೂ ಸುಧಾರಿಸುತ್ತದೆ.
ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ದೇಹಕ್ಕೆ ನೀವು ನೀರಿನ ಅಂಶವನ್ನು ಒದಗಿಸುವ ಜೊತೆಗೆ ಚರ್ಮದ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುತ್ತೀರಿ. ಏಕೆಂದರೆ ಇದರಿಂದ ಚರ್ಮದ ಭಾಗದಲ್ಲಿ ಕಂಡುಬರುವ ರಕ್ತನಾಳಗಳಲ್ಲಿ ಅತ್ಯಧಿಕ ರಕ್ತಸಂಚಾರ ಉಂಟಾಗಿ ಚರ್ಮದ ಜೀವಕೋಶಗಳಿಗೆ ಪೌಷ್ಟಿಕ ಸತ್ವಗಳು ಸಿಗುತ್ತವೆ ಮತ್ತು ಆರೋಗ್ಯಕರವಾದ ಚರ್ಮ ನಮ್ಮದಾಗುತ್ತದೆ.
ಬಿಸಿನೀರು ರಕ್ತಸಂಚಾರವನ್ನು ಉತ್ತಮಪಡಿಸುವುದು ಇದರಿಂದಾಗಿ ರಕ್ತವು ದೇಹದೆಲ್ಲೆಡೆ ಸಂಚಾರವಾಗಿ ಸ್ನಾಯುಗಳಿಗೆ ಆರಾಮ ಸಿಗುವುದು ಮತ್ತು ತಲೆನೋವು ನಿವಾರಣೆಯಾಗುವುದು. ಇದು ದೇಹದ ಒಳಗಿನ ನೋವಿಗೂ ಕೂಡ ತುಂಬಾ ಪರಿಣಾಮಕಾರಿಯಾಗಿದೆ.

ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ದೂರಮಾಡಲು ಇದು ಸಹಾಯ ಮಾಡುತ್ತದೆ. ಚರ್ಮದ ಸುಕ್ಕನ್ನು ಹೋಗಲಾಡಿಸಲು ನೆರವಾಗುತ್ತದೆ. ದೇಹದಲ್ಲಿ ವಿಷಕಾರಿ ಅಂಶಗಳು ಕಡಿಮೆಯಾಗುತ್ತಾ ಬರುತ್ತದೆ, ಆಗ ನಮ್ಮ ಚರ್ಮ ನೋಡಲು ಹೊಳಪಿನಿಂದ ಮತ್ತು ಕಾಂತಿಯಿಂದ ಕೂಡಿರುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರು ಕುಡಿಯುವುದರಿಂದ ನಿಮಗಿರುವ ಹೊಟ್ಟೆ ನೋವು ಸಹ ನಿವಾರಣೆಯಾಗುತ್ತದೆ.
ಬಿಸಿನೀರು ಕುಡಿಯುವ ಮುನ್ನ ಎಚ್ಚರ ವಹಿಸಬೇಕಾದ ಅಂಶಗಳು:
ಚಳಿಗಾಲದಲ್ಲಿ ಹೆಚ್ಚು ಬಿಸಿನೀರು ಕುಡಿಯುವುದರಿಂದ ಬಾಯಿಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಈ ರೀತಿ ಕಾಣಿಸಿಕೊಳ್ಳುವ ನೋವಿನಿಂದ ಆಹಾರ ತಿನ್ನುವುದು ಮತ್ತು ಕುಡಿಯುವುದು ಕಷ್ಟವಾಗುತ್ತದೆ. ಇದಲ್ಲದೆ, ಹೆಚ್ಚು ಬಿಸಿ ನೀರನ್ನು ಸೇವಿಸುವುದರಿಂದ ನಾಲಿಗೆ ಉರಿಯುವ ಸಂಭವವೂ ಇರುತ್ತದೆ.
ಯಾವತ್ತಿಗೂ ಅತಿಯಾದ ಬಿಸಿನೀರನ್ನು ಸೇವಿಸಬೇಡಿ. ಉಗುರುಬೆಚ್ಚಗಿರುವ ನೀರನ್ನೇ ಕುಡಿಯುವುದು ಒತ್ತಮ.
ಚಳಿಗಾಲದಲ್ಲಿ ಹೆಚ್ಚು ಬಿಸಿನೀರು ಕುಡಿಯುವುದರಿಂದ ಮೆದುಳಿನ ಕೋಶಗಳಲ್ಲಿ ಉರಿಯೂತ ಉಂಟಾಗುತ್ತದೆ.
ಧನ್ಯವಾದಗಳು.
GIPHY App Key not set. Please check settings