ಚಿಪ್ಕೊ ಚಳುವಳಿ ೧೯೭೦ರಲ್ಲಿ ನೆಡೆಯಿತು. ಚಿಪ್ಕೋ ಚಳುವಳಿ ಅಥವಾ ಚಿಪ್ಕೋ ಆಂದೋಲನ ಎಂಬುದು ಮಹಾತ್ಮ ಗಾಂಧಿಯವರ ಮೂಲಮಂತ್ರಗಳಾದ ಸತ್ಯಾಗ್ರಹ ಮತ್ತು ಅಹಿಂಸೆಗಳ ಮೂಲಕ ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಮರ ಕಡಿಯುವುದರ ಬಗ್ಗೆ ಅಸಹಕಾರ ತೋರಿಸಿದ ಪ್ರಮುಖ ಚಳುವಳಿಯಾಗಿದೆ. ಚಿಪ್ಕೋ ಚಳುವಳಿಯು ಮೊದಲಿಗೆ ೧೯೭೦ರಲ್ಲಿ ಉತ್ತರಖಂಡದ ಗರ್ವಾಲಹಿಮಾಲಯ ಹಾಗೂ ಉತ್ತರಪ್ರದೇಶದಲ್ಲಿ ಅತಿಯಾಗಿ ನಡೆಯುತ್ತಿದ್ದ ಅರಣ್ಯನಾಶದ ಬಗ್ಗೆ ಅರಿವು ಮೂಡಿಸುವುದರ ಮೂಲಕ ಆರಂಭವಾಯಿತು. ಮಾರ್ಚ್ ೨೬ ೧೯೭೪ರಲ್ಲಿ ಉತ್ತರಖಂಡ ರಾಜ್ಯದ ಚಮೋಲಿ ಜಿಲ್ಲೆಯ ರೇನಿಹಳ್ಳಿ ಮತ್ತು ಹೇಮ ವಾಲ್ಘಂಟೆಯಲ್ಲಿ ಕೆಲವು ಮಹಿಳೆಯರು ಭಯಬೀತರಾಗಿ ತಮ್ಮ ಕಾಡಿನ ಸಾಂಪ್ರದಾಯಿಕ ಹಕ್ಕನ್ನು ವಾಪಸ್ಸು ಪಡೆಯುವ ಸಲುವಾಗಿ ಇವರು ಮರಕಡಿಯುವುದನ್ನು ವಿರೋಧಿಸಿ ಹೋರಾಟ ನಡೆಸಿದರು. ಈ ಘಟನೆಯನ್ನು ಈ ಚಳುವಳಿಯ ಪ್ರಮುಖ ಘಟನೆ ಎನ್ನಬಹುದು. ಏಕೆಂದರೆ ಈ ಹೋರಾಟ ಇಂತಹ ನೂರಾರು ಘಟನೆಗಳಿಗೆ ಸ್ಪೂರ್ತಿಯಾಯಿತು ಮತ್ತು ಇದು ಪ್ರಖ್ಯಾತ ಉತ್ತರಖಂಡದಾದ್ಯಂತ ಹಬ್ಬಿತು. ನಂತರ ೧೯೮೦ರ ವೇಳೆಗೆ ಈ ಚಳುವಳಿ ಇಡೀ ಭಾರತದಾದ್ಯಂತ ವ್ಯಾಪಿಸಿತು ಮತ್ತು ಬಿಂದ್ಯಾ ಮತ್ತು ಪಶ್ಚಿಮ ಘಟ್ಟಗಳಲ್ಲಿ ಅತೀ ಹೇರಳವಾಗಿ ನಡೆಯುತ್ತಿದ್ದ ಅರಣ್ಯ ನಾಶಕ್ಕೆ ಪೂರ್ಣವಿರಾಮ ನೀಡಲು ಈ ಘಟನೆ ಸಹಾಯಕವಾಯಿತು. ಈಗ ಈ ಘಟನೆ ಗರ್ವಾಲದ ಚಿಪ್ಕೋ ಚಳುವಳಿಗೆ ಮುನ್ಸೂಚನೆ ಹಾಗೂ ಸ್ಪೂರ್ತಿಯ ಸೆಲೆಯಾಗಿ ಕಾಣುತ್ತಿದೆ. ಇದರ ಪ್ರಮುಖ ನಾಯಕರು ಸುಂದರ್ ಲಾಲ್ ಬಹುಗುಣ ಆಗಿದ್ದರು.
ಚಿಪ್ಕೋ ಚಳುವಳಿಯ ಕಾಡಿನ ರಕ್ಷಣೆಗಾಗಿ ನಡೆದ ಹೋರಾಟ ಎನ್ನುವುದಕ್ಕಿಂತಲ್ಲೂ ಅಲ್ಲಿನ ಜನರ ಜೇವನೋಪಾಯದ ರಕ್ಚಣೆಗಾಗಿ ನಡೆದ ಹೋರಾಟ ಎಂಬುದು ಹೆಚ್ಚಿನ ಪರಿಸರವಾದಿಗಳ ಮಾಪನದಿಂದ ತಿಳಿದು ಬಂದಿದೆ. ಅಲ್ಲದೇ ಈ ಚಳುವಳಿ ಪ್ರಪಂಚದಾದ್ಯಂತ ಒಂದು ಅಹಿಂಸಾತ್ಮಕ ಚಳುವಳಿಯೆಂಬ ನಿದರ್ಶನಕ್ಕೆ ಪಾತ್ರವಾಯಿತು. ಯಾವುದೇ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಈ ಪರಿಸರ ಚಳುವಳಿ ನಡೆಸುವುದು ಕಷ್ಟ ಎನ್ನುವ ಸಂದರ್ಭದಲ್ಲಿ ಇದು ಜನ್ಮತಾಳಿತು. ಈ ಅಹಿಂಸಾತ್ಮಕ ಚಳುವಳಿಯ ಯಶಸ್ವಿಗೆ ಬಹಳ ಪರಿಸರವಾದಿಗಳ ಗಮನಕ್ಕೆ ಬಂದಾಗ ಅದರಿಂದ ಸ್ಪೂರ್ತಿಗೊಂಡ ಇವರು ಬಿರುಸಾಗಿ ಸಾಗುತ್ತಿದ್ದ ಅರಣ್ಯ ನಾಶವನ್ನು ತಡೆದು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪರಿಸರ ನಮ್ಮ ಜೇವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ನಿರೂಪಿಸಿದರು. ಈ ಮೇಲಿನ ಎಲ್ಲಾ ಸಂಗತಿಗಳು ಭಾರತದ ನಾಗರಿಕ ಸಮಾಜವನ್ನು ಬಡಿದೆಬ್ಬಿಸಿದೆ. ಇದಾದ ೨೫ ವರ್ಷಗಳ ಬಳಿಕ “ಇಂಡಿಯಾ ಟುಡೇ” ಚಿಪ್ಕೋ ಚಳುವಳಿಯ ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದ ಸುಮಾರು ನೂರಾರು ಜನ ಭಾರತವನ್ನು ಮಾದರಿಯಾಗಿಸಿದರೆಂದು ಪ್ರಕಟಿಸಿತ್ತು. ಅದರೆ ಇತ್ತೀಚಿಗೆ ಇದು ಪರಿಸರ ಸಮಾಜ ಎನ್ನುವುದಕ್ಕಿಂತಲೂ ಸ್ತ್ರೀ ಪರಿಸರವಾದ ಎಂದು ಚಾಲ್ತಿಯಲ್ಲಿದೆ. ಈ ಚಳುವಳಿಯ ಬೆನ್ನೆಲುಬು ಕೇವಲ ಹೆಂಗಸರು ಮಾತ್ರವೇ ಅಲ್ಲ ಏಕೆಂದರೆ ಈ ಚಳುವಳಿಯ ಹೆಚ್ಚಿನ ನಾಯಕರು ಗಂಡಸರೇ ಆಗಿದ್ದಾರೆ. ಆದರೂ ಹೆಂಗಸರು ಇದರ ಮುಖ್ಯ ಮೂಲಾಧಾರಸ್ತಂಭ ಏಕೆಂದರೆ ಅತಿಯಾದ ಅರಣ್ಯನಾಶದಿಂದ ಅಡುಗೆಗೆ ಸೌದೆಯ ಅಭಾವ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಮತ್ತು ನೀರಾವರಿಗೆ ಹಾಗೂ ಕುಡಿಯುವ ನೀರಿನ ಕೊರತೆ, ಇಂತಹ ಸಮಸ್ಯೆಗಳಿಂದ ಪ್ರಭಾವಿತಗೊಂಡು ಈ ಚಳುವಳಿಯಲ್ಲಿ ಧೈರ್ಯವಾಗಿ ಮೊದಲು ದುಮ್ಮುಕಿದವರು ಹೆಂಗಸರು. ಹಾಗಾಗಿ ಹೆಂಗಸರು ಸಹಾ ಈ ಚಳುವಳಿಯ ಮೂಲಾಧರವೆಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ವರ್ಷಗಳು ಉರುಳಿದಂತೆ ಚಿಪ್ಕೋ ಚಳಿವಳಿಯ ಅಡಿಯಲ್ಲಿ ಗಿಡನೆಡುವ ಮರಬೆಳೆಸುವ ಕಾರ್ಯಗಳು ನಡೆದವು. ಚಿಪ್ಕೋ ಚಳುವಳಿಯ ವಕ್ತಾರರು ಕಾಡು ಬೆಳೆಸುವುದರಲ್ಲಿ ಮೊದಲಿಗರೆನ್ನಿಸಿದರು. ೧೯೮೭ರಲ್ಲಿ ಈ ಚಳುವಳಿಯು ಜೀವನಾಧಾರದ ಹಕ್ಕು ಎಂಬ ಗೌರವಕ್ಕೆ ಪಾತ್ರವಾಯಿತು.

ಭಾರತದಲ್ಲಿ ವಿನಾಶಕ ರೀತಿಯಲ್ಲಿ ಹೆಚ್ಚುತ್ತಿದ್ದ ಅರಣ್ಯನಾಶ ಸೌದೆಗಾಗಿ ಕಟ್ಟಿಗೆಗಳನ್ನು ಮತ್ತು ಮೇವು ಸಂಗ್ರಹಿಸುತ್ತಿದ್ದ ಶ್ರಮಿಕ ವರ್ಗದ ಜನರಿಗೆ ಅಪಾಯ ತಂದೊಡ್ಡಿತು. ಅಷ್ಟೆ ಅಲ್ಲದೆ ಮಣ್ಣಿನ ಸವಕಳಿ ಮತ್ತು ಗುಡ್ಡ ಪ್ರದೇಶದಲ್ಲಿ ನೀರಿನ ಮೂಲಗಳು ಬತ್ತಿಹೋಗುವುದು ಮುಂತಾದ ಸಮಸ್ಯೆ ಗಳಿಗೆ ಇದು ಕಾರಣವಾಯಿತು. ಇದಾದ ತರುವಾಯ ಈ ಪ್ರದೇಶಗಳಲ್ಲಿನ ಜನರು ಮೇವಿನ ಅಭಾವದಿಂದಾದ ಜಾನುವಾರುಗಳನ್ನು ಸಾಕುವುದನ್ನೇ ಬಿಡಬೇಕಾಯಿತು. ಅರಣ್ಯ ರಕ್ಷಣೆಗೆಂದೆ ರೂಪಿಸಿದ ಕಾಯ್ದೆಗಳಾದ ಅಂದರೆ ೧೯೭೨ರಲ್ಲಿ ರೂಪುಗೊಂಡ ಭಾರತ ಅರಣ್ಯ ಕಾಯ್ದೆಯಿಂದ ಈ ಬಿಕ್ಕಟ್ಟು ಇನ್ನೂ ಅಧಿಕವಾಯಿತು. ಈ ಕಾಯ್ದೆಯ ಪ್ರತಿಫಲವಾಗಿ ಕಡಿಮೆ ಉಳುಮೆ ಭೂಮಿ ಹೊಂದಿದ್ದ ಹಾಗೂ ನೈಸರ್ಗಿಕ ಸಂಪತ್ತಿದ್ದರೂ ತುಂಬಾ ಬಡವರಾಗಿದ್ದ ಅಧಿಕ ಸಂಖ್ಯೆಯಲ್ಲಿದ್ದ ಜನರನ್ನು ಕಾಡಿನ ಪ್ರವೇಶ ಮಾಡುವುದನ್ನು ನಿರ್ಬಂಧಿಸಲಾಯಿತು. ಇದರ ಪರಿಣಾಮವಾಗಿ ಇಂತಹ ಕೆಳಮಟ್ಟದ ಆರ್ಥಿಕ ಪರಿಸ್ಥಿತಿ ಹೊಂದಿದ್ದ ಈ ಜನರು ೧೯೬೦ರಲ್ಲಿ ತಮ್ಮ ಜೀವನೋಪಾಯಕ್ಕೆ ಕೆಲಸಗಳನ್ನು ಹರಸಿ ಮೈದಾನ ಪ್ರದೇಶಗಳನ್ನು ಹುಡುಕಿಕೊಂಡು ಕಡಿಮೆ ಜನರಿರುವ ಪ್ರದೇಶಗಳಿಗೆ ಸ್ಥಳಾಂತರಗೊಂಡರು. ಕ್ರಮೇಣ ಅಲ್ಲಿಯ ಜನರು ತಮ್ಮ ಜೀವನಾಧಾರವಾಗಿದ್ದ ಕಾಡಿಂದ ತಮ್ಮನ್ನು ಕಸಿದು ಕೊಂಡಿದ್ದರ ಈ ಪರಿಸರ ಬಿಕ್ಕಟ್ಟಿನಿಂದ ಜಾಗೃತಗೊಂಡರು. ಇದರ ಪರಿಣಾಮವಾಗಿ ೧೯೬೪ರಲ್ಲಿ ದಾಶೋಲಿ ಗ್ರಾಮ ಸ್ವರಾಜ್ಯ ಸಂಘ “ದಾಸೋಲಿ ಸೋಸೈಟಿ ಫಾರ್ ವಿಲೇಜ್ ಸೇಲ್ಪ್ ರೂಲ್” ಎಂಬ ಸಂಫವು ಗಾಂಧಿ ಸಮಾಜ ಸೇವಕರಾದ ಚಂಡೀಪ್ರಸಾದ್, ಜಯಪ್ರಕಾಶ್ ನಾರಾಯಣ್ ಮತ್ತು ಸರ್ವೋದಯ ಚಳುವಳಿಯಿಂದ ಸ್ಪೂರ್ತಿಗೊಂಡು ಗುಡಿ ಕೈಗಾರಿಕೆಯಲ್ಲಿ ಕಾಡಿನ ಸಂಪತ್ತನ್ನು ಬಳಸಬಹುದೆಂಬ ಗುರಿಯೊಂದಿಗೆ ಸ್ಥಾಪಿಸಿದರು. ಇದರ ಪ್ರಥಮ ಕಾರ್ಯವೆಂದರೆ ಗೋಪೇಶ್ವರದ ಸ್ಥಳೀಯರಿಗೆ ಉಳುಮೆ ಭೂಮಿ ಒದಗಿಸಿಕೊಟ್ಟಿದ್ದು. ನಂತರ ೧೯೮೦ರಲ್ಲಿ ದಾಸೋಲಿ ಗ್ರಾಮ ಸ್ವರಾಜ್ಯ ಸಂಘ, ದಾಸೋಲಿ ಗ್ರಾಮ್ ಸ್ವರಾಜ್ ಮಂಡಲಿ ಎಂದು ಮರು ನಾಮಕರಣಗೊಂಡಿತು. ಇದಲ್ಲದೆ ಅವರು ಇನ್ನೊಂದು ವಿಷಮ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭ ಒದಗಿತ್ತು. ಅದೆನೆಂದರೆ ವಸಾಹತು ಕಾಲದಿಂದ ರೂಢಿಯಲ್ಲಿದ್ದ ಅರಣ್ಯ ನಿಯಮಗಳು ಮತ್ತು ಕಂಟ್ರಾಕ್ಟರ್ ಪದ್ಧತಿಗಳು ಈ ಅರಣ್ಯ ನಿಯಮದ ಪ್ರಕಾರ ಅಲ್ಲಿನ ಕಾಡನ್ನು ಭಾಗಗಳಾಗಿ ವಿಭಾಗಿಸಿ ದೊಡ್ಡ-ದೊಡ್ಡ ಕಂಟ್ರಾಕ್ಟರ್ ಗಳಿಗೆ ಗುತ್ತಿಗೆ ನೀಡಲಾಗಿತ್ತು. ಅಗಾಗಿ ಮೈದಾನ ಪ್ರದೇಶಕಗಳಲ್ಲಿ ತುಂಬಾ ಕೆಳ ದರ್ಜೆಯ ಕೆಲಸಗಳಾದ ಬಂಡೆ ಒಡೆಯುವುದು, ಮನೆಗೆಲಸ, ಮುಂತಾದವುಗಳನ್ನು ಬಿಟ್ಟು ಕೌಶಲ್ಯವೊಂದಿದ್ದ ಕಾರ್ಮಿಕರು ಈ ದೊಡ್ಡ ಪ್ರದೇಶಳಲ್ಲಿ ಬಂದರು. ಮತ್ತೊಂದು ರೀತಿಯಲ್ಲಿ ಮೊದಲೇ ತಮ್ಮ ಜೀವನೋಪಾಯಕ್ಕಾಗಿ ಪರದಾಡುತ್ತಿದ್ದ ಗುಡ್ಡಗಾಡ್ಡು ಜನರ ಜೊತೆಗೆ ಹೊರಗಿನ ಪ್ರದೇಶಗಳಿಂದ ಜನರು ಹರಿದು ಬಂದಿದ್ದು ಪರಿಸರ ಸಮನತೋಲನ ವಿಷಯಕ್ಕೆ ಕುಂದುತರುವ ಕೆಲಸವಾಗಿತ್ತು. ಹೀಗೆ ತೀವ್ರವಾಗಿ ಹೆಚ್ಚುತಿದ್ದ ಅರಣ್ಯನಾಶ ಪರಿಸರ ಅಸಮತೋಲನಕ್ಕೆ ಕಾರಣವಾಗಿರುತ್ತದೆಂಬ ಜಾಗೃತ ಭಾವನೆಯನ್ನು ಗರ್ವಾಲ ಜನತೆಯ ಮನದಲ್ಲಿ ಮೂಡಿಸಿತ್ತು. ಇದೇ ರೀತಿ ಮರಗಳನ್ನು ಕಡಿಯುತ್ತಿದ್ದರ ಪರಿಣಾಮ ವಾಗಿ ಜುಲೈ ೧೯೭೦ರಲ್ಲಿ ಅಲಕಾನಂದ ನದಿ ಪ್ರವಾಹವು ಬದ್ರಿನಾಥ ಬಳಿ ಇರುವ ಹನುಮನ ಚಟ್ಟಿಯಿಂದ ಹರಿದ್ವಾರದವರೆಗೆ ಸುಮಾರು ೩೫೦ ಕಿ.ಮೀ. ಸೇರಿದಂತೆ ಹಲವು ಹಳ್ಳಿಗಳು ಸೇತುವೆ ರಸ್ತೆಗಳು ನಾಶವಾದವು. ಈ ಘಟನೆ ನಡೆದಿದ್ದರಿಂದ ಮತ್ತು ಹೆಚ್ಚುತ್ತಿದ್ದ ಯಾಂತ್ರಿಕ ಕಾರ್ಯಗಳಿಂದ ಈ ಪ್ರದೇಶಗಳಲ್ಲಿ ಭೂ ಕುಸಿತ ಸರ್ವೇ ಸಾಮಾನ್ಯವಾಯಿತು.
ಹಳ್ಳಿಯ ಜನರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಹೆಂಗಸರು ಸ್ವತಃ ತಾವೇ ಚಿಕ್ಕ-ಚಿಕ್ಕ ಗುಂಪುಗಳಾಗಿ ತಮ್ಮನ್ನು ಸಂಘಟಿಸಿಕೊಂಡು ಅವರಲ್ಲಿ ಭಯ ಹುಟ್ಟಿಸಿದ ಆರ್ಥಿಕ ವ್ಯವಾಹರಕ್ಕಾಗಿ ಮರಗಳನ್ನು ಕಡಿದು ತಮ್ಮ ಜೀವನಾಧಾರಕ್ಕೆ ಕೊಡಲಿ ಪೆಟ್ಟು ನೀಡಿದ್ದ ಕಾರ್ಯಾಚರಣೆಯ ವಿರುದ್ಧ ತಿರುಗಿ ಬೀಳಲು ಸಿದ್ಧರಾದರು. ಇದರ ಪರಿಣಾಮವಾಗಿ ೧೯೭೧ ಅಕ್ಟೋಬರ್ ರಂದು ಸಂಘದ ಜನರೆಲ್ಲಾ ಸೇರಿ ಅರಣ್ಯ ಇಲಾಖೆಯ ಈ ನಿಯಮಗಳ ವಿರುದ್ಧ ಗೋಪೇಶ್ವರದಲ್ಲಿ ಹೋರಾಟ ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ ಬಹಳಷ್ಟು ಜಾಥಾ, ಸಮ್ಮೇಳನಗಳು ೧೯೭೨ ರಲ್ಲಿ ನಡೆದವು. ಆದರೆ ಅವುಗಳು ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ.
ಮೊದಲ ಹೋರಾಟ ನಡೆದ ಸಂದರ್ಭವೆಂದರೆ ಡಿ.ಜಿ.ಎಸ್.ಎಸ್.(DGSS) ಸಂಘ ಅರಣ್ಯ ಇಲಾಖೆಗೆ ತಮ್ಮ ಕೃಷಿ ಉಪಯೋಗಕ್ಕಾಗಿ ಹತ್ತು ಒಣಗಿದ ಮರಗಳನ್ನು ವಾರ್ಷಿಕವಾಗಿ ನೀಡಲು ಮನವಿ ಮಾಡಿಕೊಂಡಿತ್ತು. ಅದರೆ ಅರಣ್ಯ ಇಲಾಖೆಯು ಇದನ್ನು ತಿರಸ್ಕರಿಸಿ ಆಟದ ಸಾಮಾಗ್ರಿ ತಯಾರಿಸುವ ಸೈಮನ್ ಕಂಪನಿಗೆ ಸುಮಾರು ೩೦೦ ಮರಗಳನ್ನು ಟೆನ್ನಿಸ್ ಬ್ಯಾಟ್ ತಯಾರಿಕೆಗೆ ಗುತ್ತಿಗೆ ನೀಡಿತು (೧೯೭೩). ನಂತರ ಇದಾದ ಎರಡು ವಾರಗಳ ಬಳಿಕ ಲಂಬರ್ಮನ್ ಗಳು ಗೋಪೇಶ್ವರಕ್ಕೆ ಬಂದರು. ಇವರನ್ನು ಎದುರಿಸುವ ಸಲುವಾಗಿ ಏಪ್ರಿಲ್ ೨೪ರಂದು (೧೯೭೩) ನೂರಾರು ಹಳ್ಳಿ ಜನ ಮತ್ತು ಸಂಘದ ಸದಸ್ಯರು ಡ್ರಮ್ ಗಳನ್ನು ಬಾರಿಸುತ್ತಾ ಘೋಷಣೆಗಳನ್ನು ಕೂಗುತ್ತಾ ಕಂಟ್ರಾಕ್ಟರ್ಸ್ ಗಳನ್ನು, ಲಂಬರ್ಮನ್ ಗಳನ್ನು ಎದುರಿಸಿ ಓಡಿಸಿದರು.
ಆ ನಂತರ ಈ ಕಂಟ್ರಾಕ್ಟ್ ಅನ್ನು ತಕ್ಷಣವೇ ವಜಾ ಮಾಡಿ ಸರ್ಕಾರ ಸಂಘದ ಪರವಾಗಿ ತೀರ್ಪು ನೀಡಿತ್ತು ಈ ಘಟನೆಯ ಪ್ರತಿಫಲವಾಗಿ ಸಂಘದ ಜನರು ವಾರ್ಷಿಕವಾಗಿ ಮೂರು ಮರಗಳನ್ನು ತಮ್ಮ ಕೃಷಿ ಕಾರ್ಯಗಳಿಗೆ ಬಳಸಲು ಅನುಮತಿ ನೀಡಲಾಯಿತು ಮತ್ತು ವ್ಯವಾಹರಕ್ಕಾಗಿ ಮರಗಳನ್ನು ಮಾರುವ ಇಂತಹ ಅರಣ್ಯ ನಿಯಮಗಳ ಬಗ್ಗೆ ಹೆಚ್ಚು ನಿಗ ಇಡಲು ಆರಂಭಿಸಿತು. ಈ ಸಂಘ ಮರಗಳನ್ನು ಅಪ್ಪಿಕೊಳ್ಳುವುದು ಅಥವಾ ಚಿಪ್ಕೋ ಎಂಬ ಅಹಿಂಸಾತ್ಮಕ ಹೋರಾಟದ ಮೂಲಕ ಮರಗಳ ರಕ್ಷಣೆಗೆ ಪಣ ತೊಟ್ಟಿತ್ತು. ಆದರೆ ಮತ್ತೊಂದು ಅನ್ಯಾಯದ ಸಂಗತಿಯೆಂದರೆ ಈ ಹೋರಾಟಕ್ಕೆ ಕಾರಣವಾಗಿದ್ದ ಅದೇ ಕಂಪನಿಗೆ ಗೋಪೇಶ್ವರದಿಂದ ಸುಮಾರು ೮೦ ಕಿ,ಮೀ. ದೂರದಲ್ಲಿರುವ ಘಟ ಎಂಬ ಕಾಡಿನಿಂದ ಬಹಳಷ್ಟು ಮರಗಳನ್ನು ಗುತ್ತಿಗೆಗೆ ನೀಡಲಾಗಿತ್ತು.
ಗೋಪೇಶ್ವರದ್ದಲ್ಲಿ ನಡೆದ ವಿರೋಧದಿಂದ ಪ್ರೇರಣೆ ಪಡೆದಿದ್ದ ಇಲ್ಲಿನ ಜನರಿಂದ ಮತ್ತೇ ಅದೇ ರೀತಿಯ ವಿರೋಧವನ್ನು ಸ್ವಲ್ಪ ದಿನಗಳ ನಂತರ ಈ ಕಂಪನಿ ಎದುರಿಸಬೇಕಾಯಿತು. ಈ ಘಟನೆ ನಡೆದ ನಂತರ ಇದರಿಂದ ಜಾಗೃತಗೊಂಡ ಘಟ ಮತ್ತು ತಾರ್ಸಲಿ ಕಾಡಿಗೆ ಸಮೀಪವಿರುವ ಜನರು ಮತ್ತೇ ಕಂಟ್ರಾಕ್ಟರ್ಸ್ ಬರುವವರೆಗೆ ಅಂದರೆ, ಡಿಸೆಂಬರ್ ವರೆಗೂ ಮರಗಳ ಮೇಲೆ ಗಮನವಿಟ್ಟು ಅವರಿಂದ ಮರಗಳನ್ನು ರಕ್ಷಿಸಿದರು. ಲಂಬರ್ಮನ್ ಗಳು ಕಡಿದಿರುವ ಐದು ಮರಗಳನ್ನು ಬಿಟ್ಟು ಓಡಿಹೋದರು.

ತರುವಾಯ ಒಂದು ಪ್ರಮುಖವಾದ ಘಟನೆ ಕೆಲವೇ ತಿಂಗಳ ನಂತರ ಜರುಗಿತ್ತು ಅದೆನೆಂದರೆ, ಸರ್ಕಾರ ಜನವರಿ ೧೯೭೪ರಂದು ರೇನಿ(ಣಿ)ಹಳ್ಳಿಯ ಬಳಿ ಇರುವ ಅಲಕಾನಂದ ನದಿಯ ದಂಡೆಯ ಮೇಲಿದ ಸುಮಾರು ೨೫೦೦ ಮರ ಗಳನ್ನು ಹರಾಜು ಮಾಡಿತು. ಆಗ ಭಟ್ ಎಂಬುವವರು ರೇನಿ(ಣಿ)ಯ ಜನರನ್ನು ಪ್ರೇರೆಪಿಸಿ ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಇದರ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದರು. ಕೆಲವೇ ಕೆಲವು ವಾರಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಭೆಗಳು ಸಮ್ಮೇಳನಗಳು ರೇನಿ(ಣಿ)ಹಳ್ಳಿಯಲ್ಲಿ ನಡೆಯತೊಡಗಿದವು.
ಮಾಚ್ ೨೬ ೧೯೭೪ ರಂದು ಗುತ್ತಿಗೆದಾರರು ರೇಣೀ ಹಳ್ಳಿಗೆ ಮರ ಕಡಿಯಲು ಬಂದಾಗ ರಾಜ್ಯ ಸರ್ಕಾರ ಮತ್ತು ಗುತ್ತಿಗೆದಾರರ ಮನಸ್ಸನ್ನು ಬದಲಾಯಿಸಲು ಪರಿಹಾರವಾಗಿ ಪ್ರತಿಫಲ ಜಾಗವನ್ನು ಕೇಳಲು ಕಾರ್ಮಿಕರು ಮನೆಗೆ ಹಿಂತಿರುಗಬೇಕಾದರೆ ರೇನಿ ಹಳ್ಳಿಹವರು ಡಿ.ಜಿ.ಸ್.ಸ್. ಕಾರ್ಯಕರ್ತರು ಚಮೊಲಿ ಹಳ್ಳಿಯಲ್ಲಿಮರದ ದಿಮ್ಮಿಗಳ್ಳನ್ನು ತುಂಬಿದ ಗಾಡಿಯ ಹತ್ತಿರ ಬಂದು ಮರಕಡಿಯುವವರ ವಿರುದ್ದ ವಾಗ್ವಾದಕ್ಕಿಳಿದರು.ಆಗ ಅಲ್ಲಿನ ಸ್ಥಳೀಯ ಹುಡುಗಿ ಅವರನ್ನು ನೋಡಿ ರೇಣಿ ಹಳ್ಳಿಯ ‘ಮಹಿಳಾ ಮಂಗಳ ದಳ’ ದ ನಾಯಕಿಯಾದ ಗೌರಿ ದೇವಿಗೆ ವಿಷಯವನ್ನು ಮುಟ್ಟಿಸಿದಳು. ಆಗ ಗೌರಿ ದೇವಿ ಆ ಊರಿನ ೨೭ ಜನ ಮಹಿಳೆಯರೊಂದಿಗೆ ಆ ಜಾಗಕ್ಕೆ ಬಂದು ಮರ ಕಡಿಯುವುದನ್ನು ವಿರೋಧಿಸಿದರು.
ಯಾವಾಗ ಎಲ್ಲಾ ಮಾತು ಕಥೆಗಳು ವಿಫಲವಾದವೂ ಮತ್ತು ಮರ ಕಡಿಯುವವರು ಕಿರುಚಲು ಮತ್ತು ಮಹಿಳೆಯರನ್ನು ದುರುಪಯೋಗ ಪಡಿಸಿ ಕೊಳ್ಳಲು ಮತ್ತು ಬಂದೂಕಿನೊಂದಿಗೆ ಹೆದರಿಸಲು ಆರಂಭಿಸಿದಾಗ ಅವರು ಸಹಾಯಕ್ಕಾಗಿ ಹಾಗೂ ಮರ ಕಡಿಯುವುದನ್ನು ತಪ್ಪ್ಪಿಸಲು ಮರಗಳ್ಳನ್ನು ಅಪ್ಪಿಕೊಂಡರು. ಇದು ಹೀಗೆ ಬಹಳ ಘಂಟೆಗಳವರೆಗೆ ಮುಂದುವರೆಯಿತು. ಆ ಮಹಿಳೆಯರು ಇಡೀ ರಾತ್ರಿ ತಮ್ಮ ಮರಗಳನ್ನು ಮರ ಕಡಿಯದಂತೆ ಎಚ್ಚರಿಕೆಯಿಂದ ನೋಡಿಕೊಂಡರು. ಹಾಗಾಗಿ ಕೆಲವು ಗುತ್ತಿಗೆದಾರರು ತಮ್ಮ ಪಟ್ಟು ಸಡಿಲಿಸಿ ಹಳ್ಳಿಯನ್ನು ತೊರೆದರು.
ಮರುದಿನ ಅವರು ಹಿಂತಿರುಗಿದಾಗ ಈ ಚಳುವಳಿಯ ಸುದ್ದಿ ನೆರೆಹೊರೆಯ ಹಳ್ಳಿಗಳಾದ ಲಾತಾ, ಹೆನ್ವ್ವಾಲ್ಗಟಿ ಇನ್ನುಳಿದ ಹಳ್ಳಿಗಳೀಗು ತಲುಪಿ ಇನ್ನು ಹೆಚ್ಚಿನ ಜನರು ಚಳುವಳಿಯಲ್ಲಿ ಭಾಗವಹಿಸಿದರು. ಕೊನೆಗೆ ನಾಲ್ಕೈದು ದಿನಗಳಲ್ಲಿ ಸಿಂಮಾಡ್ಸ್ ಕಂಪನಿಯ ಗುತ್ತಿಗೆದಾರರು ಹಳ್ಳಿಯನ್ನು ತೊರೆದರು.
ಧನ್ಯವಾದಗಳು.
GIPHY App Key not set. Please check settings