in

ಹಿಮ್ಮಡಿ ನೋವು ಈಗ ಸಾಮಾನ್ಯವಾಗಿದೆ. ಕಾಡುವ ಹಿಮ್ಮಡಿ ನೋವು ಶಮನಕ್ಕೆ ಇಲ್ಲಿದೆ ಮನೆಮದ್ದು ಪರಿಹಾರ

ಹಿಮ್ಮಡಿ ನೋವು
ಹಿಮ್ಮಡಿ ನೋವು

ಹಿಮ್ಮಡಿ ನೋವು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಹಿಮ್ಮಡಿ ಒಡೆದಿದ್ದರೆ ಅದಕ್ಕೆ ಹಲವು ಕಾರಣಗಳಿರಬಹುದು. ಅನೇಕ ಸಂದರ್ಭಗಳಲ್ಲಿ, ಹಿಮ್ಮಡಿ ನೋವು ತೀವ್ರ ಮತ್ತು ಅಸಹನೀಯವಾಗಿರುತ್ತದೆ. ಆದರೆ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವುದಿಲ್ಲ. ಹಿಮ್ಮಡಿ ನೋವು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ ಮತ್ತು ಚಟುವಟಿಕೆಗಳಲ್ಲಿ ಅಡಚಣೆಯನ್ನು ಉಂಟುಮಾಡಬಹುದು. ಹಿಮ್ಮಡಿ ನೋವು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ನೋವು ಮುಂದುವರಿಯುತ್ತದೆ ಮತ್ತು ದೀರ್ಘಕಾಲದವರೆಗೆ ವಿಶ್ರಾಂತಿ,ನೀವು ಹಿಮ್ಮಡಿ ನೋವಿಗೆ ತುತ್ತಾಗಿದ್ದರೆ, ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ. ಇದುವೇ ಮನೆಮದ್ದುಗಳ ಮೊದಲ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಪಾದಗಳಿಗೆ ವಿಶ್ರಾಂತಿ ನೀಡಿದ್ರೆ ದೇಹದ ಹೆಚ್ಚಿನ ತೂಕವು ಹಿಮ್ಮಡಿಯ ಮೇಲೆ ಬೀಳುವುದಿಲ್ಲ. ಇದರಿಂದ ನೋವಿನಿಂದ ಪಾರಾಗಬಹುದು. ದೇಹದ ಹೆಚ್ಚಿನ ತೂಕದಿಂದಾಗಿ ಹಿಮ್ಮಡಿ ಮೇಲೆ ಭಾರ ಹೆಚ್ಚಾಗುವುದರಿಂದ ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ನೀವು ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ. ಇದರಿಂದ ನೋವು ಕಡಿಮೆಯಾಗುತ್ತದೆ. ಆದರೆ ನೀವು ವಿಶ್ರಾಂತಿ ಪಡೆಯುವ ಮೊದಲ ಮನೆಮದ್ದನ್ನು ಅಳವಡಿಸಿಕೊಳ್ಳಬೇಕು.

ಹಿಮ್ಮಡಿ ನೋವು ಈಗ ಸಾಮಾನ್ಯವಾಗಿದೆ. ಕಾಡುವ ಹಿಮ್ಮಡಿ ನೋವು ಶಮನಕ್ಕೆ ಇಲ್ಲಿದೆ ಮನೆಮದ್ದು ಪರಿಹಾರ
ಹಿಮ್ಮಡಿ ನೋವು

ಹಿಮ್ಮಡಿಯು ಸಾಮಾನ್ಯವಾಗಿ ಗಾಳಿ ಹಾಗೂ ಶುಷ್ಕತೆಗೆ ತೆರೆದುಕೊಳ್ಳುವುದು. ಹಾಗಾಗಿ ದಿನದಲ್ಲಿ ಎರಡು ಬಾರಿ ಪಾದಗಳಿಗೆ ಮಾಯ್ಚುರೈಸ್ ಕ್ರೀಮ್‍ಗಳನ್ನು ಅನ್ವಯಿಸುವುದನ್ನು ರೂಢಿಸಿಕೊಳ್ಳಿ. ಮುಂಜಾನೆ ಸ್ನಾನವಾದ ಬಳಿಕ ಹಾಗೂ ರಾತ್ರಿ ಮಲಗುವ ಮುನ್ನ ಮಾಯ್ಚುರೈಸರ್ ಅನ್ವಯಿಸಿ. ಅದು ಹಿಮ್ಮಡಿಯ ಆರೋಗ್ಯವನ್ನು ಕಾಪಾಡುವುದು. ಜೊತೆಗೆ ಶುಷ್ಕತೆಯಿಂದ ಚರ್ಮ ಒಣಗುವುದು ಮತ್ತು ಬಿರುಕಾಗುವುದನ್ನು ತಡೆಯುವುದು. ಒಡೆದ ಹಿಮ್ಮಡಿಯು ಸಹ ಬಹುಬೇಗ ಉಪಶಮನ ಪಡೆದುಕೊಳ್ಳುವುದು.

ಹಿಮ್ಮಡಿಗೆ ಹಿತವಾಗುವ ಪಾದರಕ್ಷೆ ಧರಿಸಿದರೆ ಒಳ್ಳೆಯದು. ಸರಳ ವ್ಯಾಯಾಮಗಳನ್ನು ಮನೆಯಲ್ಲಿ ಮಾಡುತ್ತಿರಿ. ವೈದ್ಯರ ಸಲಹೆ ಪಡೆದು ನೋವು ನಿವಾರಕ ಮಾತ್ರೆ ತೆಗೆದುಕೊಳ್ಳಿ. ಹಿಮ್ಮಡಿ ನೋವು ಸರಳ ಮದ್ದುಗಳಿಂದ ಕಡಿಮೆಯಾಗದಿದ್ದರೆ ತಜ್ಞರ ಸಲಹೆ ಪಡೆಯುವುದು ಉತ್ತಮ.

ಕೆಲವೊಂದು ಮನೆಯಲ್ಲಿ ಮಾಡಬಹುದಾದ ಚಿಕಿತ್ಸೆ :

ಬಾದಾಮಿ ಎಣ್ಣೆ, ಸಮುದ್ರದ ಉಪ್ಪು, ಜೇನುತುಪ್ಪ, ಅಕ್ಕಿ ಪುಡಿ, ಪುದೀನಾ ಎಣ್ಣೆಯನ್ನು ಬೆರೆಸಿ. ಇದರ ಮೂಲಕ ಪಾದಗಳನ್ನು ಸ್ಕ್ರಬ್​ ಮಾಡಿ. ಪಾದಗಳಲ್ಲಿ ಅಂಟಿಕೊಂಡಿರುವ ಕೆಸರನ್ನು ತೆಗದು ಹಾಕಲು ಇದು ಸಹಾಯ ಮಾಡುತ್ತದೆ. ಒಣಗಿದ ಚರ್ಮವನ್ನು ಕಿತ್ತುಹಾಕಿ, ಹೊಸ ಚರ್ಮ ಹುಟ್ಟಿಕೊಳ್ಳಲು ಸಹಾಯಕವಾಗಿದೆ. ಜತೆಗೆ ಚರ್ಮವನ್ನು ಮೃದುಗೊಳಿಸುತ್ತದೆ.

ಜೇನು ನೈಸರ್ಗಿಕ ಆಂಟಿ ಮೈಕ್ರೋಬಿಯಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಆದ್ದರಿಂದ ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಇದು ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿದೆ. ಹಿಮ್ಮಡಿಗೆ ಸ್ವಲ್ಪ ಜೇನು ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ.

ಹಿಮ್ಮಡಿ ನೋವು ಈಗ ಸಾಮಾನ್ಯವಾಗಿದೆ. ಕಾಡುವ ಹಿಮ್ಮಡಿ ನೋವು ಶಮನಕ್ಕೆ ಇಲ್ಲಿದೆ ಮನೆಮದ್ದು ಪರಿಹಾರ
ಐಸ್ ಬಳಕೆ

ಐಸ್ ಬಳಕೆ : ಹಿಮ್ಮಡಿಯಲ್ಲಿ ನೋವು ಇದ್ದರೆ, ಅದನ್ನು ಐಸ್​​​ನೊಂದಿಗೆ ಸಂಕುಚಿತಗೊಳಿಸುವ ಮೂಲಕ ನಿವಾರಿಸಬಹುದು. ನೋವಿರುವ ಜಾಗದ ಮೇಲೆ ಇದನ್ನು ಅನ್ವಯಿಸುವುದರಿಂದ ನೋವು ಮತ್ತು ಉರಿಯೂತ ಕಡಿಮೆಯಾಗುತ್ತದೆ. 15 ನಿಮಿಷಗಳ ಐಸ್​ನ್ನು ಹಿಮ್ಮಡಿ ನೋವಿನ ಜಾಗಕ್ಕೆ ಅನ್ವಯಿಸುವುದರಿಂದ ನೋವು ಕಡಿಮೆಯಾಗುತ್ತದೆ.

ಅಲೋವೆರಾ ಜೆಲ್ : ಅಲೋವೆರಾ ಜೆಲ್​ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅನೇಕರು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ಕಾಲಿನ ಪಾದಗಳಲ್ಲಿ ಬಿರುಕು ಬಿಟ್ಟ ಜಾಗದಲ್ಲಿ ಸರಿಯಾಗಿ ನೈಸರ್ಗಿಕ ಅಲೋವೆರಾವನ್ನು ಹಚ್ಚಿದರೆ ಪಾದಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಪಾದಗಳು ಮೃದುವಾಗಿರುತ್ತವೆ ಮತ್ತು ಬಿರುಕು ಸಮಸ್ಯೆ ನಿವಾರಣೆಯಾಗುತ್ತದೆ.

ನಿಂಬೆ ರಸ ಮತ್ತು ಸಕ್ಕರೆ : ನಿಂಬೆ ರಸ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಪಾದಗಳ ಒಡಕಿರುವ ಜಾಗಕ್ಕೆ ಹಚ್ಚಿಕೊಳ್ಳಿ. ನಂತರ ಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಪ್ರತಿನಿತ್ಯ 5 ನಿಮಿಷಗಳ ಕಾಲ ಹೀಗೆ ಮಾಡುವುದರ ಮೂಲಕ ಬಹುಬೇಗ ಪಾದದ ಒಡಕು ಸಮಸ್ಯೆ ನಿವಾರಣೆಯಾಗುತ್ತದೆ.

ಲವಂಗದೆಣ್ಣೆ : ಉಪಶಮನ ಮಾಡುವ ಅಂಶಗಳನ್ನು ಒಳಗೊಂಡಿರುವುದರಿಂದ ಲವಂಗದೆಣ್ಣೆ ಹಿಮ್ಮಡಿ ನೋವಿಗೆ ಅತ್ಯುತ್ತಮ ಎಂದೆನಿಸಿದೆ. ನಿಮ್ಮ ಪಾದಗಳನ್ನು ಲವಂಗದೆಣ್ಣೆಯಿಂದ ಮಸಾಜ್ ಮಾಡಿ ಇದು ರಕ್ತ ಪರಿಚಲನೆಯನ್ನು ಸುಧಾರಿಸಿ ನೋವಿನಿಂದ ತ್ವರಿತ ಪರಿಹಾರವನ್ನು ಒದಗಿಸುತ್ತದೆ.

ಬಾಳೆಹಣ್ಣು : ಬಾಳೆಹಣ್ಣನ್ನು ಇದ್ದರೆ, ಅವುಗಳನ್ನು ಹಿಮ್ಮಡಿಯ ಮಾಯಿಸ್ಚರೈಸ್ ಮಾಡಲು ಬಳಸಬಹುದು. ಬಾಳೆಹಣ್ಣು ಆರಿಹೋಗುವವರೆಗೆ ಹಾಗೆಯೇ ಬಿಟ್ಟು ನಂತರ ತೊಳೆಯಿರಿ.

ಎಪ್ಸಮ್ ಉಪ್ಪು : ಹಿಮ್ಮಡಿಯ ನೋವಿನಿಂದ ನಿಮಗೆ ತ್ವರಿತ ಉಪಶಮನವನ್ನು ಈ ಉಪ್ಪು ನೀಡುತ್ತದೆ. ಇದು ಸಲ್ಫೇಟ್ ಅಂಶಗಳನ್ನು ಒಳಗೊಂಡಿರುವುದರಿಂದ ಇದು ಯಾವುದೇ ನೋವು ಅತವಾ ಉರಿಯೂತವನ್ನು ನಿಭಾಯಿಸುತ್ತದೆ. ತ್ವರಿತ ಉಪಶಮನಕ್ಕಾಗಿ, ಎಪ್ಸಮ್ ಉಪ್ಪು ನೀರಿನಲ್ಲಿ ಪಾದಗಳನ್ನು ಮುಳುಗಿಸಿಡಿ.

ಅರಿಶಿನ ಹಾಲು : ಅರಿಶಿನವು ಕರ್ಕ್ಯುಮಿನ್ ಅಂಶವನ್ನು ಹೊಂದಿರುತ್ತದೆ. ಇದು ನೋವು ಮತ್ತು ಉರಿಯೂತವನ್ನು ನಿವಾರಿಸುತ್ತದೆ. ಅಂತೆಯೇ, ಅರಿಶಿನ ಹಾಲನ್ನು ಯಾವಾಗಲೂ ಕುಡಿಯಬೇಕು. ಏಕೆಂದರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಒಂದು ಕಪ್ ಹಾಲಿನಲ್ಲಿ ಒಂದು ಚಮಚ ಅರಿಶಿನವನ್ನು ಬೆರೆಸಿ ಕಡಿಮೆ ಶಾಖದಲ್ಲಿ ಕನಿಷ್ಠ 5 ನಿಮಿಷ ಕುದಿಸಿ. ಇದರ ನಂತರ, ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ದಿನಕ್ಕೆ ಎರಡು ಅಥವಾ ಮೂರು ಬಾರಿ ಕುಡಿಯುವುದರಿಂದ ಇಮ್ಮಡಿ ನೋವು ಶೀಘ್ರದಲ್ಲೇ ಗುಣಮುಖವಾಗುತ್ತದೆ.

ಬಾಣಲೆಯಲ್ಲಿ 1½ ಕಪ್ ನೀರು ಮತ್ತು ¼ ಕಪ್ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ. ಮಿಶ್ರಣವನ್ನು ಬೆಚ್ಚಗಾಗುವವರೆಗೆ ಬಿಸಿ ಮಾಡಿ. ಅದರಲ್ಲಿ ಸ್ವಚ್ಛವಾದ ಬಟ್ಟೆಯನ್ನು ನೆನೆಸಿ, ಹೆಚ್ಚುವರಿ ದ್ರವವನ್ನು ಹೊರತೆಗೆದು ನೋವಿನ ಪ್ರದೇಶದ ಮೇಲೆ ಇರಿಸಿ. ಶಾಖವನ್ನು ಉಳಿಸಿಕೊಳ್ಳಲು ನೀವು ಒಣ ಟವೆಲ್ ಅನ್ನು ಅದರ ಮೇಲೆ ಕಟ್ಟಬಹುದು. ಇದನ್ನು 15 ರಿಂದ 20 ನಿಮಿಷಗಳ ಕಾಲ ಬಿಡಿ ಮತ್ತು ದಿನಕ್ಕೆ 2 ಅಥವಾ 3 ಬಾರಿ ಮತ್ತೆ ಹಚ್ಚಿ ನೋಡಿ.

ಸರ್ವ ರೋಗಕ್ಕೂ ತೆಂಗಿನೆಣ್ಣೆ ಮದ್ದು ಅನ್ನಬಹುದು ಅಷ್ಟು ಉಪಯೋಗ ಇದೆ. ತೆಂಗಿನ ಎಣ್ಣೆ ಒಣ ಚರ್ಮದ ನಿವಾರಣೆಗೆ ತೆಂಗಿನಎಣ್ಣೆ ಉತ್ತಮ. ಮಲಗುವ ಮುನ್ನ ತೆಂಗಿನಎಣ್ಣೆಯನ್ನು ಒಡೆದ ಹಿಮ್ಮಡಿಗಳ ಮೇಲೆ ಹಚ್ಚಿ ಮಲಗಬೇಕು,ನೋವು ಕಡಿಮೆಯಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

49 Comments

ಅಶ್ವತ್ಥ ಮರ

ಅಶ್ವತ್ಥ ಮರದ ವಿಶೇಷತೆ

ರಾಜ ವಿಷ್ಣುವರ್ಧನ

ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನ