in

ಸಕ್ಕರೆ ಬಳಸದೆ ಆರೋಗ್ಯಕರವಾದ ಜ್ಯೂಸ್ ಗಳು

ತಿನ್ನಬೇಕು, ಕುಡಿಬೇಕು, ಟೇಸ್ಟಿ ಯಾಗಿರಬೇಕು,ಆರೋಗ್ಯವಾಗಿ ಕೂಡ ಇರಬೇಕು. ಸುಮ್ಮ ಸುಮ್ಮನೇ ಬಾಯಿ ಚಪಲಕ್ಕೆ ಇರೋಬರೊದನೆಲ್ಲ ತಿಂತ ಇದ್ದರೆ ಬಗೆ ಬಗೆಯ ಕಾಯಿಲೆಗಳು ಕೂಡ ಧರ್ಮಕ್ಕೆ ಬರುತ್ತದೆ.

ಬೆಲ್ಲ ಮತ್ತು ಸಕ್ಕರೆಯ ಉಪಯೋಗಗಳ ವ್ಯತ್ಯಾಸಗಳು

ಸಕ್ಕರೆ ಎಲ್ಲರಿಗೂ  ತಿಳಿದಿರುವುದು, ಸಕ್ಕರೆ ಅಂದರೆ ಸಿಹಿ, ಸಿಹಿ ತಿಂಡಿ ತಿನಿಸುಗಳ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಸಕ್ಕರೆ ನಮ್ಮೆಲ್ಲರ ಆಹಾರ ಪದ್ದತಿಯಲ್ಲಿ ಹಾಸುಹೊಕ್ಕಾಗಿದೆ. ಸಕ್ಕರೆ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸ್ವೀಟ್ಸ್ ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತದೆ. ಭಾರತೀಯರು ಅಂದ್ರೆ ಸಕ್ಕರೆ ಹಾಕಿದ ಟೀ ಕುಡಿದ್ರೇನೆ ಬೆಳಗಾಗೋದು ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯ. ಇನ್ನು ಸಂಜೆ ಹೊತ್ತಂತೂ ಟೀ, ಕಾಫಿ ಇಲ್ಲದೇ ಆಗೋದೆ ಇಲ್ಲ. ಸಕ್ಕರೆ ಸೇವನೆಯಿಂದ ಅಥವಾ ಸಕ್ಕರೆಯ ಅಂಶವುಳ್ಳ ಪಾನೀಯ, ತಿಂಡಿ ತಿನಿಸುಗಳ ಸೇವನಯಿಂದ ಹುಳುಕುಹಲ್ಲು, ಮಧುಮೇಹ, ಬೊಜ್ಜು ಬರುತ್ತೆ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರೋ ವಿಷಯ. ಆದ್ರೆ ಪ್ರೌಢಾವಸ್ಥೆಯಲ್ಲಿ ಸಕ್ಕರೆ ಸೇವನೆ ಅತಿಯಾದರೆ ಮೆದುಳಿನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ.

ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಲ್ಲದಲ್ಲಿ ಕಬ್ಬಿಣದಂತಹ ಅಂಶಗಳಿದ್ದು, ಸಿಹಿ ಪೇಸ್ಟ್ರಿ ತಯಾರಿಕೆಯಲ್ಲಿ ಮಾತ್ರ ಈಗ ಬಳಸಲಾಗುತ್ತದೆ. ಬೆಲ್ಲವನ್ನು ಆಯುರ್ವೇದದ ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ. ರಕ್ತಹೀನತೆಯ ರೋಗಿಗಳಿಗೆ ಬೆಲ್ಲ ನೀಡುವುದು ಉತ್ತಮ ಫಲಿತಾಂಶವನ್ನು ಕೊಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರು ಬೆಲ್ಲವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು. ಬೆಲ್ಲವನ್ನು ಸೇವನೆ ಮಾಡುವುದರಿಂದ ಕೇವಲ ದೇಹದಲ್ಲಿ ಮಾತ್ರವಲ್ಲದೆ ನಮ್ಮ ಲಿವರ್ ಭಾಗದಲ್ಲೂ ಕೂಡ ಸ್ವಚ್ಛತೆಯನ್ನು ಕಾಯ್ದುಕೊಳ್ಳುತ್ತದೆ ಎಂದು ಹೇಳಬಹುದು.

ಇಲ್ಲಿ ಕೆಲವೊಂದು ಆರೋಗ್ಯಕರವಾದ ಪಾನೀಯಗಳನ್ನು ಸಕ್ಕರೆ ಬಳಸದೆ ,ಬೆಲ್ಲ ಬಳಸಿ ತಯಾರಿಸುದನ್ನು ತಿಳಿಯೋಣ ಮತ್ತು  ಅದರಿಂದ ಆಗುವ ಪ್ರಯೋಜನಗಳನ್ನು ತಿಳಿಯಬಹುದು.

ಸೋರೆಕಾಯಿ ಜ್ಯೂಸ್:

ಸಕ್ಕರೆ ಬಳಸದೆ ಆರೋಗ್ಯಕರವಾದ ಜ್ಯೂಸ್ ಗಳು

ಸೋರೆಕಾಯಿಯಲ್ಲಿ ಅಧಿಕ ನೀರಿನ ಅಂಶ ಇರುತ್ತದೆ. ಸೋರೆಕಾಯಿ ದೇಹಕ್ಕೆ ತಂಪು. ಸಾಂಬಾರ್, ಪಲ್ಯ, ಪಾಯಸ ಅನೇಕ ಬಗೆಯ ಖಾದ್ಯಗಳನ್ನು ಮಾಡಬಹುದು. ಕೆಲವೊಮ್ಮೆ ಮಿತಿ ಮೀರಿ ತಿಂದು ಬಿಡುತ್ತೇವೆ. ಹೀಗೆ ತಿಂದಾಗ ಅಜೀರ್ಣ ಸಮಸ್ಯೆ ಉಂಟಾದರೆ ಅದನ್ನು ಹೋಗಲಾಡಿಸಲು ಸೋರೆಕಾಯಿಯ ಸೂಪ್ ಕುಡಿದರೆ ಸಾಕು. ಸೋರೆಕಾಯಿ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಲ ಬದ್ದತೆ ನಿವಾರಣೆಗೆ ಸಹಾಯಕಾರಿ. ರುಚಿಯಾದ, ಮಕ್ಕಳಿಗೆ ಕೂಡ ಇಷ್ಟವಾಗುವ ಸೋರೆಕಾಯಿ ಜ್ಯೂಸ್  ತಯಾರಿಸುವುದು ಹೇಗೆ ಎಂದರೆ, ಸೋರೆಕಾಯಿ ಸಿಪ್ಪೆ ತೆಗೆದು ಕತ್ತರಿಸಿ, ಸ್ವಲ್ಪ ಉಪ್ಪು, ಬೆಲ್ಲ, ಏಲ್ಲಕ್ಕಿ, ನೀರು ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ. ನೀರಿನ ಪ್ರಮಾಣ ನಿಮಗೆ  ಬೇಕಾಗುವಸ್ಟು ಹಾಕಿ. ಕೋಲ್ಡ್ ಇಷ್ಟ ಪಡುವವರು ಫ್ರಿಡ್ಜ್ ನಲ್ಲಿ ಇಟ್ಟು ಕುಡಿಯಬಹುದು.

ಹೆಸರು ಕಾಳು ಜ್ಯೂಸ್:

ಸಕ್ಕರೆ ಬಳಸದೆ ಆರೋಗ್ಯಕರವಾದ ಜ್ಯೂಸ್ ಗಳು

ಹೆಸರು ಕಾಳು ಕೂದಲಿಗೆ ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು.ಅಧಿಕ ಪ್ರಮಾಣದಲ್ಲಿ ಪ್ರೋಟಿನ್ ಇದೆ ಹೆಸರುಕಾಳಿನಲ್ಲಿ. ಮಧುಮೇಹಿ ರೋಗಿಗಳಿಗೆ ಹೆಸರುಕಾಳು ಉತ್ತಮ ಆಹಾರ. ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ನಿಯಂತ್ರಿಸುತ್ತದೆ. ಮೊಳಕೆ ಕಟ್ಟಿದ ಹೆಸರುಕಾಳು ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದನ್ನೂ ಕೂಡ ಅನೇಕ ರೀತಿಯಲ್ಲಿ ಸೇವಿಸಬಹುದಾಗಿದೆ. ಹೆಸರುಕಾಳಿನ ಜ್ಯೂಸ್ ಮಾಡಲು ಚೆನ್ನಾಗಿ ತೊಳೆದ ಹೆಸರುಕಾಳು, ಬೆಲ್ಲ, ಉಪ್ಪು, ಏಲ್ಲಕ್ಕಿ, ನೀರು ಮಿಕ್ಸಿಗೆ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ. ನೀರು ಬೇಕಾಗುವಷ್ಟು ಉಪಯೋಗಿಸಿ. ಕೋಲ್ಡ್ ಇಷ್ಟ ಪಡುವವರು ಫ್ರಿಡ್ಜ್ ನಲ್ಲಿಟ್ಟು ಕುಡಿಯಬಹುದು.

ರಾಗಿ ಜ್ಯೂಸ್:

 ರಾಗಿ ಚಿಕ್ಕ ಮಕ್ಕಳಿಂದ ವಯಸ್ಕರವರೆಗೂ ಉಪಯೋಗಿಸಬಹುದಾದ ವಸ್ತು. ರಾಗಿಯಲ್ಲಿ  ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಜಾಸ್ತಿ ಇರುತ್ತದೆ. ರೊಟ್ಟಿ, ದೋಸೆ, ಮುದ್ದೆ ಹೀಗೆ ಅನೇಕ ಬಗೆಯ ಅಡುಗೆಗಳನ್ನು ರಾಗಿಯಿಂದ ತಯಾರಿಸಬಹುದು. ಚಿಕ್ಕ ಮಕ್ಕಳಿಗೆ ಮೊದಲು ಕೊಡುವುದೇ ರಾಗಿ ಸರಿ. ದೇಹದ ಕೊಬ್ಬನ್ನು ಕಡಿಮೆ ಮಾಡಿ ತೂಕ ಇಳಿಕೆ ಮಾಡುತ್ತದೆ. ಮಧುಮೇಹಿಗಳಿಗೆ ಸೂಕ್ತವಾದ ಆಹಾರ. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ದೇಹಕ್ಕೆ ತಂಪು ಕೊಡುತ್ತದೆ. ನಮ್ಮ ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯಲ್ಲಿ ಅತೀ ಹೆಚ್ಚು ರಾಗಿ ಬೆಳೆಯುತ್ತಾರೆ. ರಾಗಿ ಜ್ಯೂಸ್ ಮಾಡಲು ಚೆನ್ನಾಗಿ ತೊಳೆದ ರಾಗಿ, ಬೆಲ್ಲ ,ಉಪ್ಪು, ಏಲಕ್ಕಿ, ನೀರು ಇದನ್ನು ಕೂಡ ಚೆನ್ನಾಗಿ ಗ್ರೈಂಡ್ ಮಾಡಿ ನೀರಿನ ಪ್ರಮಾಣ ನಿಮಗೆ ಬೇಕಾಗುವಷ್ಟು ಹಾಕಿ.

ಎಳ್ಳಿನ ಜ್ಯೂಸ್:

ಸಕ್ಕರೆ ಬಳಸದೆ ಆರೋಗ್ಯಕರವಾದ ಜ್ಯೂಸ್ ಗಳು

ಎಳ್ಳು ಭಾರತದ ಅಂತ್ಯಂತ ಪ್ರಾಚೀನ ಧಾನ್ಯ. ಎಳ್ಳು ಸೇವನೆಯಿಂದ ಆರೋಗ್ಯದ ಲಾಭಗಳು ಜಾಸ್ತಿ.  ಎಳ್ಳಿನಲ್ಲಿ ಆಂಟಿಆಕ್ಸಿಡೆಂಟ್ ಜಾಸ್ತಿ ಇದೆ. ಕ್ಯಾಲ್ಸಿಯಂ ಅಂಶ ಅಧಿಕವಾಗಿರುವುದರಿಂದ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಎಳ್ಳೆಣ್ಣೆ ಬಳಕೆ ಕೂಡ ತುಂಬಾ ಒಳ್ಳೆಯದು. ದೋಸೆ ಕಾವಲಿಗೆ ಬೇರೆ ಎಣ್ಣೆಯನ್ನು ಉಪಯೋಗಿಸುವ ಬದಲು ಎಳ್ಳೆಣ್ಣೆ ಉಪಯೋಗಿಸಿ. ಕೂದಲಿನ ಬೆಳವಣಿಗೆಗೆ ಎಳ್ಳೆಣ್ಣೆ ಒಳ್ಳೆಯದು. ಚರ್ಮಕ್ಕೆ ಕೂಡಾ ತುಂಬಾ ಒಳ್ಳೆಯದು. ಎಳ್ಳಿನ ಜ್ಯೂಸ್ ಕೂಡ ತುಂಬಾ ಆರೋಗ್ಯಕಾರಿ ಮತ್ತು ರುಚಿ. ಎಳ್ಳಿನ ಜ್ಯೂಸ್ ಮಾಡಲು ಎಳ್ಳು, ಬೆಲ್ಲ, ನೀರು , ಉಪ್ಪು, ಏಲಕ್ಕಿ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ ನೀರು ಬೇಕಾಗುವಷ್ಟು ಸೇರಿಸಿ ಕುಡಿಯಿರಿ.

ಬೆಲ್ಲ ಕಾಳುಮೆಣಸಿನ ಪಾನಕ :

ಸಕ್ಕರೆ ಬಳಸದೆ ಆರೋಗ್ಯಕರವಾದ ಜ್ಯೂಸ್ ಗಳು

ಬೇಸಿಗೆ ಕಾಲಿಟ್ಟಾಗಿದೆ. ತಂಪು ತಂಪು ಪಾನೀಯಗಳನ್ನು ಎಷ್ಟು ಕುಡಿದರೂ ಸಾಕೋಗೋಲ್ಲ. ದೇಸೀ ಪಾನಿಯಗಳಲ್ಲಿ ಬೆಲ್ಲದ ಪಾನಕವೂ ಒಂದು. ಇದನ್ನು ಮಾಡೋದು ಹೇಗೆ ನೋಡಣ ಬನ್ನಿ. ಬೆಲ್ಲ (ಜೋನಿ ಬೆಲ್ಲವಾದರೆ ಒಳ್ಳೆಯದು), ನಿಂಬೆ ಹಣ್ಣು, ಕಾಳುಮೆಣಸಿನ ಪುಡಿ, ಕೇಸರಿ ದಳ ಮತ್ತು ಏಲಕ್ಕಿ ಪುಡಿ-ಸ್ವಲ್ಪ, ಉಪ್ಪು ಸ್ವಲ್ಪ ಹಾಕಿ. ಒಂದು ಲೀಟರ್ ನೀರಿಗೆ ಬೆಲ್ಲ ಪುಡಿ ಮಾಡಿ ಹಾಕಿ, ಜೋನಿ ಬೆಲ್ಲವಾದರೆ ಚೆನ್ನಾಗಿ ಕರಗಿಸಿ. ಇದಕ್ಕೆ ಕಾಳು ಮೆಣಸಿನ ಪುಡಿಯನ್ನೂ ಸೇರಿಸಿ. ನಂತರ ಕೇಸರಿ ದಳ ಹಾಗೂ ನಿಂಬೆ ರಸ ಸೇರಿಸಿ ಕುಡಿಯಿರಿ.

ಅಲ್ಲಿ ಇಲ್ಲಿ ಸಿಗುವ ಯಾವು ಯಾವುದೋ ಜ್ಯೂಸ್ ಕುಡಿಯುವ ಬದಲು ಮನೆಯಲ್ಲಿಯೇ ತಯಾರಿಸಿದ ಜ್ಯೂಸ್ ಕುಡಿಯುದರಿಂದ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾಮ ಬಂಟ ಹನುಮಂತ ಕೂಡ ರಾಮ ಲಕ್ಷ್ಮಣರ ಅಂಶ ಎಂದೇ ಹೇಳಲಾಗುತ್ತದೆ.

ಅಲೋವೆರಾ (ಲೋಳೆ ರಸ) ಒಂದು ಮನೆಯಲ್ಲಿದ್ದರೆ ಆರೋಗ್ಯಕ್ಕೆ ಒಳ್ಳೆಯದು, ಅಲ್ಲದೆ ವಾಸ್ತು ಪ್ರಕಾರನೂ ಒಳಿತು.