in

ಮಳೆಯ ವಿಧಗಳು ಮತ್ತು ಪ್ರಕ್ರಿಯೆ

ಮಳೆಯ ವಿಧಗಳು
ಮಳೆಯ ವಿಧಗಳು

ವಾತಾವರಣದಲ್ಲಿರುವ ನೀರಾವಿಯು ತಂಪು ಪಡೆದುಕೊಂಡು ಮತ್ತೆ ದ್ರವರೂಪಕ್ಕೆ ಬಂದು ಭೂಮಿಯ ಮೇಲೆ ಬೀಳುವ ಪ್ರಕ್ರಿಯೆಯೇ ಮಳೆ. ಮೋಡಗಳಲ್ಲಿನ ನೀರು ಬೇರೆ ಬೇರೆ ಹನಿಗಳಾಗಿ ಭೂಮಿಗೆ ಉದುರುತ್ತವೆ. ಎತ್ತರದ ಮೋಡಗಳಿಂದ ಬೀಳುವ ಹನಿಗಳೆಲ್ಲಾ ನೆಲವನ್ನು ತಲುಪಲಾರವು. ಮೋಡ ಮತ್ತು ನೆಲಗಳ ಮಧ್ಯೆ ಶುಷ್ಕ ವಾತಾವರಣವಿದ್ದಲ್ಲಿ ಗಣನೀಯ ಪ್ರಮಾಣದ ಸಣ್ಣ ಹನಿಗಳು ಮತ್ತೆ ಆವಿಯಾಗಿ ಹೋಗುತ್ತವೆ. ಹೀಗೆ ಒಂದು ಹನಿಯೂ ನೆಲ ಮುಟ್ಟದೆ ಹೋದರೆ ಅಂತ ಮಳೆಯನ್ನು ‘ವಿರ್ಗಾ’ ಎಂದು ಕರೆಯುವರು. ಇಂತಹ ವಿದ್ಯಮಾನವು ಸಾಮಾನ್ಯವಾಗಿ ಬಿಸಿ ಮತ್ತು ಶುಷ್ಕ ಮರುಭೂಮಿಯ ಪ್ರದೇಶಗಳಲ್ಲಿ ಘಟಿಸುತ್ತದೆ.

ಸಮುದ್ರ, ಮಹಾಸಾಗರಗಳ ನೀರು ಆವಿಯಾಗಿ ಆಕಾಶ ತಲುಪಿ ಅಲ್ಲಿ ಮೋಡಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಮೋಡಗಳ ಸಾಂದ್ರತೆ ಹೆಚ್ಚಿ ಮತ್ತು ಅಲ್ಲಿನ ವಾತಾವರಣ ತಂಪಾದಾಗ ಮೋಡಗಳ ತೇವಾಂಶ ಹನಿಗೂಡಿ ಭೂಮಿಯನ್ನು ಸೇರುತ್ತದೆ. ನೆಲದ ಮೇಲೆ ಹೀಗೆ ಬಿದ್ದ ನೀರು ಹಳ್ಳ, ನದಿಗಳ ಮೂಲಕ ಮತ್ತೆ ಸಾಗರವನ್ನು ತಲುಪುವುದು. ಈ ಚಕ್ರ ಮತ್ತೆ ಮುಂದುವರಿಯುವುದು. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಜಲಚಕ್ರ ಎಂದು ಕರೆಯಲಾಗುತ್ತದೆ. ನೆಲದ ಮೇಲಿನ ಮರಗಿಡಗಳು ಸಹ ಗಣನೀಯ ಪ್ರಮಾಣದಲ್ಲಿ ತೇವಾಂಶವನ್ನು ವಾತಾವರಣಕ್ಕೆ ಸೇರಿಸುತ್ತವೆ.

ಮಳೆಯ ಬಗೆಗಳು

ಪುರಾತನ ಕಾಲದಿಂದಲೂ ಮಳೆಯನ್ನು ನಕ್ಷತ್ರದ ಹೆಸರಿಂದ ಕರೆಯುವ ಕ್ರಮ ಭಾರತದಲ್ಲಿದೆ. ಭರಣಿ ಮೃಗಶಿರ ಆರಿದ್ರಾ ಮಳೆ. ಒಂದು ಮಳೆಗೆ ಬಿತ್ತನೆ ಇನ್ನೊಂದಕ್ಕೆ ಬೇರೆ ಕೆಲಸ ಹೀಗೆ. ಆರಿದ್ರಾ ಮಳೆಗೆ ಅದ್ರಿಮಳೆ ಎಂಬ ಹಬ್ಬವನ್ನೂ ಆಚರಿಸುತ್ತಾರೆ.

ಮಳೆ ಬೀಳಲು ನೆರವಾದ ಕಾರಣ ಮತ್ತು ವಾತಾವರಣದ ಸ್ಥಿತಿಗಳ ಆಧಾರದ ಮೇಲೆ ಮಳೆಯನ್ನು ಈ ಮೂರು ಬಗೆಯವಾಗಿ ವಿಂಗಡಿಸಬಹುದು.

*ಓರೋಗ್ರಾಫಿಕ್ ಮಳೆ
*ಕನ್ವೆಕ್ಟಿವ್ ಮಳೆ
*ಚಂಡಮಾರುತದ ಮಳೆ
*ಓರೋಗ್ರಾಫಿಕ್ ಮಳೆ

ಮಳೆಯ ವಿಧಗಳು ಮತ್ತು ಪ್ರಕ್ರಿಯೆ
ಮಳೆಯ ಬಗೆಗಳು

ರಿಲೀಫ್ ಮಳೆಯೆಂದೂ ಸಹ ಕರೆಸಿಕೊಳ್ಳುವ ಈ ಬಗೆಯ ಮಳೆಯು ಹೆಚ್ಚಿನ ಪ್ರಮಾಣದ ತೇವಾಂಶವುಳ್ಳ ಮಾರುತಗಳು ಘಟ್ಟಗಳ ಸಾಲಿನಂತಹ ಪ್ರಾಕೃತಿಕ ಅಡೆತಡೆಯನ್ನು ಎದುರಿಸಿದಾಗ ಉಂಟಾಗುತ್ತದೆ. ಹೀಗೆ ತಡೆಯುಂಟಾದಾಗ ಮಾರುತಗಳು ಇನ್ನೂ ಎತ್ತರಕ್ಕೆ ಚಲಿಸುತ್ತವೆ. ಎತ್ತರ ಹೆಚ್ಚಿದಂತೆಲ್ಲಾ ಗಾಳಿಯ ಒತ್ತಡ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತದರ ಪರಿಣಾಮವಾಗಿ ಉಷ್ಣತೆಯು ಕುಸಿಯತೊಡಗುವುದು.
ಉಷ್ಣತೆಯು ಕಡಿಮೆಯಾದಾಗ ತೇವಾಂಶದಲ್ಲಿ ಹೆಚ್ಚಳವುಂಟಾಗಿ ಸೂಕ್ಷ್ಮಗಾತ್ರದ ನೀರಹನಿಗಳುಳ್ಳ ಮೋಡಗಳ ಉತ್ಪತ್ತಿಯಾಗುವುದು. ಆದರೆ ತೇವಾಂಶ ಮತ್ತೂ ಹೆಚ್ಚತೊಡಗಿದಾಗ ಮೋಡಗಳಲ್ಲಿನ ನೀರಿನಂಶವು ಹನಿಗೂಡತೊಡಗುತ್ತದೆ. ಇಂತಹ ಹನಿಗಳು ಭಾರದ ಕಾರಣದಿಂದಾಗಿ ಮೋಡಗಳಿಂದ ಕೆಳಬಿದ್ದು ಮಳೆಯ ರೂಪದಲ್ಲಿ ನೆಲವನ್ನು ಸೇರುತ್ತವೆ. ಪರ್ವತದ ಹೊರಮುಖದಿಂದ ಮೇಲೆ ಸಾಗಿ ಮುಂದುವರಿದ ಮಳೆಯ ಮಾರುತವು ಪರ್ವತಸಾಲಿನ ಹಿಂಭಾಗ ತಲುಪಿ ಕೆಳಗಿಳಿಯತೊಡಗುವುದು.
ಹೀಗೆ ಇಳಿಯುವ ಕಾರಣದಿಂದಾಗಿ ಗಾಳಿಗಳಲ್ಲಿ ತೇವಾಂಶ ಕಡಿಮೆಯಿರುವುದು. ಅಲ್ಲದೆ ಪರ್ವತದ ಮುಂಭಾಗದ ಪ್ರದೇಶದಲ್ಲಿ ತನ್ನಲ್ಲಿದ್ದ ಹೆಚ್ಚಿನ ತೇವಾಂಶವನ್ನು ಮಳೆಯ ರೂಪದಲ್ಲಿ ಮರುತವು ಹೊರ ಹಾಕಿರುತ್ತದೆ. ಆದ್ದರಿಂದಲೇ ಪರ್ವತದ ಹಿಂಭಾಗದ ಪ್ರದೇಶವು ಇಂತಹ ಮಾರುತಗಳಿಂದ ಅತ್ಯಲ್ಪ ಪ್ರಮಾಣದ ಮಳೆಯನ್ನು ಮಾತ್ರ ಪಡೆಯುವುದು.
ಇಂತಹ ಪ್ರದೇಶವನ್ನು ಪರ್ವತದ ಮಳೆಯ ನೆರಳಿನ ಪ್ರದೇಶ ಎಂದು ಕರೆಯಲಾಗುತ್ತದೆ. ಹಿಂದೂ ಮಹಾಸಾಗರದ ಮಳೆಯ ಮಾರುತಗಳು ಓರೋಗ್ರಾಫಿಕ್ ಮಳೆಗೊಂದು ಒಳ್ಳೆಯ ಉದಾಹರಣೆ. ಭಾರತದಲ್ಲಿ ಬೀಳುವ ಒಟ್ಟು ಮಳೆಯ ೮೦% ಪ್ರಮಾಣ ಈ ರೀತಿಯದೆಂದು ಹೇಳಲಾಗುತ್ತದೆ.

ಕನ್ವೆಕ್ಟಿವ್ ಮಳೆ

ಈ ರೀತಿಯ ಮಳೆಯು ಮುಖ್ಯವಾಗಿ ವಿಷುವದ್ರೇಖೆಯ ಹವಾಮಾನ ವಲಯ ಮತ್ತು ಉಷ್ಣವಲಯದ ಹವಾಮಾನ ವಲಯಗಳಲ್ಲಿ ಉಂಟಾಗುವುದು. ಇಂತಹ ಪ್ರದೇಶಗಳಲ್ಲಿ ಹಗಲಿನ ಸಮಯದಲ್ಲಿ ತಾಪಮಾನ ಬಲು ಹೆಚ್ಚಾಗಿರುತ್ತದೆ. ಈ ಸನ್ನಿವೇಶದಲ್ಲಿ ಜಲಸಮೂಹಗಳಿಂದ ನೀರು ಆವಿಯಾಗುವ ಪ್ರಮಾಣ ಅತಿ ಹೆಚ್ಚು.
ಅಲ್ಲದೆ ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಡುಗಳು ಬಹಳ ದಟ್ಟವಾಗಿರುವುದರಿಂದ ಮರಗಿಡಗಳ ಮೂಲಕ ವಾತಾವರಣ ಸೇರುವ ತೇವಾಂಶವೂ ಬಲು ಹೆಚ್ಚು. ಹೀಗೆ ಆವಿಯಾದ ತೇವಾಂಶವು ಸುತ್ತಲಿನ ಬಿಸಿಗಾಳಿಯೊಡಗೂಡಿ ಮೇಲೇರಲಾರಂಭಿಸುತ್ತದೆ. ಮೇಲೆ ತಿಳಿಸಿದಂತೆ ಎತ್ತರ ಹೆಚ್ಚಿದಂತೆಲ್ಲಾ ತಾಪಮಾನ ಕುಸಿಯತೊಡಗಿ ಕೊನೆಗೆ ಮಳೆಯ ರೂಪದಲ್ಲಿ ಗಾಳಿಯಲ್ಲಿನ ತೇವಾಂಶವು ನೆಲ ಸೇರುತ್ತದೆ.

ಚಂಡಮಾರುತದ ಮಳೆ

ಈ ಬಗೆಯ ಮಳೆಯು ಚಂಡಮಾರುತದ ಚಟುವಟಿಕೆಯಿಂದ ಉಂಟಾಗುತ್ತದೆ. ಇದು ಚಂಡಮಾರುತದ ಹೊರ ಅಂಚಿನ ಪ್ರದೇಶದಲ್ಲಿ ವ್ಯಾಪಕವಾಗಿ (ಕೆಲವೊಮ್ಮೆ ಅತಿ ಭಾರಿಯಾಗಿ) ಸಂಭವಿಸುವುದು. ವಿಭಿನ್ನ ಉಷ್ಣತೆ, ಸಾಂದ್ರತೆ ಮತ್ತು ತೇವಾಂಶವನ್ನು ಹೊಂದಿರುವ ಎರಡು ಬೃಹತ್ ವಾಯುಸಮೂಹ(ಏರ್ ಮಾಸ್)ಗಳನ್ನು ಒಂದನ್ನೊಂದು ಸಂಧಿಸಿದಾಗ ಚಂಡಮಾರುತವು ಉಂಟಾಗುತ್ತದೆ.
ಉಷ್ಣವಲಯದ ತೇವಭರಿತ ಬಿಸಿ ಮಾರುತವು ಧ್ರುವಪ್ರದೇಶದ ತಂಪು ಮಾರುತವನ್ನು ಸಂಧಿಸುವುದು ಇದಕ್ಕೊಂದು ಉದಾಹರಣೆಯಾಗಿದೆ. ಈ ಸಂಧಿಸ್ಥಾನವು ಒಂದು ಬೆಚ್ಚಗಿನ ಮುಖ ಮತ್ತು ಒಂದು ತಂಪಾದ ಮುಖಗಳನ್ನು ಹೊಂದಿರುತ್ತದೆ. ಬೆಚ್ಚಗಿನ ಭಾಗದ ಬಿಸಿ ಹಗುರ ಗಾಳಿಯು ಭಾರವಾದ ತಂಪುಗಾಳಿಗಿಂತ ಮೇಲಕ್ಕೇರುವುದು. ಬಿಸಿಗಾಳಿ ಮೇಲೇರಿದಂತೆಲ್ಲಾ ತಂಪಾಗತೊಡಗಿ ಅದರೊಳಗಿನ ತೇವಾಂಶವು ಒತ್ತಾಗತೊಡಗಿ ಮೋಡಗಳ ನಿರ್ಮಾಣವಾಗುವುದು.
ಈ ರೀತಿಯ ಮೋಡವು ಆಲ್ಟೋಸ್ಟ್ರೇಟಸ್ ಮೋಡವೆಂಬ ಹೆಸರು ಪಡೆದಿದೆ. ಇಂತಹ ಮೋಡಗಳಿಂದ ಮಳೆಯು ಬಿಟ್ಟೂಬಿಡದೆ ಹಲವು ಗಂಟೆಗಳಿಂದ ಹಲವು ದಿನಗಳವರೆಗೆ ಬೀಳುತ್ತದೆ. ಸಂಧಿಸ್ಥಾನದ ತಂಪುಮುಖದಲ್ಲಿ ತಂಪುಗಾಳಿಯು ಬಿಸಿಗಾಳಿಯನ್ನು ತೀವ್ರಗತಿಯಲ್ಲಿ ಮೇಲಕ್ಕೆ ದಬ್ಬಿ ಸಾಂದ್ರ ಮಳೆಮೋಡಗಳ ನಿರ್ಮಾಣದಲ್ಲಿ ಸಹಕರಿಸುವುದು. ಈ ರೀತಿಯ ಮೋಡವು ಕ್ಯುಮುಲೋನಿಂಬಸ್ ಮೋಡವೆಂದು ಕರೆಯಿಸಿಕೊಳ್ಳುವುದು. ಈ ಮೋಡಗಳಿಂದ ಬೀಳುವ ಮಳೆಯು ಸಾಮಾನ್ಯವಾಗಿ ಭಾರೀ ಮಳೆಯಾಗಿದ್ದು ಸಣ್ಣ ಅವಧಿಯದಾಗಿರುವುದು.

ಮಾನವನಿರ್ಮಿತ ಯಂತ್ರಗಳು ಮತ್ತು ಇತರ ಪ್ರದೂಷಣ ಸಾಧನಗಳಿಂದ ಸೂಕ್ಷ್ಮ ಗಾತ್ರದ ವಸ್ತುಕಣಗಳು ಮೋಡದ ಉತ್ಪತ್ತಿಯಲ್ಲಿ ಪಾತ್ರ ವಹಿಸುವುವು. ಒಂದು ವಿಶಿಷ್ಟ ಸಂಗತಿಯೆಂದರೆ ವಾಹನಗಳ ದಟ್ಟಣೆಯಿಂದಾಗಿ ವಾರದ ಮೊದಲ ಭಾಗದಲ್ಲಿ ಮೋಡಗಳ ರಚನೆಯುಂಟಾಗಿ ವಾರಾಂತ್ಯದಲ್ಲಿ ಅವು ಮಳೆ ಸುರಿಸುವ ಸಂಭವ ಹೆಚ್ಚಾಗಿರುತ್ತದೆ.

ಇದಕ್ಕೊಂದು ಉದಾಹರಣೆಯೆಂದರೆ ಯು.ಎಸ್.ಎ ನ ಅತಿ ನಿಬಿಡ ಜನವಸತಿ ಮತ್ತು ವಾಹನದಟ್ಟಣೆಯುಳ್ಳ ಪೂರ್ವ ಕರಾವಳಿಯಲ್ಲಿ ವಾರಾಂತ್ಯದಲ್ಲಿ ಬೀಳುವ ಮಳೆಯ ಪ್ರಮಾಣವು ಗಣನೀಯವಾಗಿ ಹೆಚ್ಚು. ನೆಲದ ಮೇಲೆ ಹಸಿರು ಹೆಚ್ಚಿದ್ದಷ್ಟೂ ಮೋಡಗಳ ಉತ್ಪತ್ತಿ ಹೆಚ್ಚಿ ತನ್ಮೂಲಕ ಮಳೆಯ ಪ್ರಮಾಣವೂ ಅಧಿಕವಾಗಿರುತ್ತದೆ. ಆದರೆ ಮಾನವನು ಅವಿರತವಾಗಿ ನಡೆಸಿಕೊಂಡು ಬಂದಿರುವ ಅರಣ್ಯನಾಶದಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕುಸಿಯತೊಡಗಿದೆ.

ಮಳೆಯ ವಿಧಗಳು ಮತ್ತು ಪ್ರಕ್ರಿಯೆ
ಮಳೆಯ ಪ್ರಮಾಣ

ಸಾಮಾನ್ಯವಾಗಿ ಮಳೆಯ ಸಣ್ಣ ಹನಿಗಳು ಪೂರ್ಣ ಗೋಲಾಕಾರದಲ್ಲಿರುತ್ತವೆ. ದೊಡ್ಡ ಹನಿಗಳು ಬುಡದಲ್ಲಿ ಮಟ್ಟಸವಾಗಿರುತ್ತವೆ. ಅತಿ ದೊಡ್ಡ ಹನಿಗಳು ಪ್ಯಾರಾಚೂಟ್ ಆಕಾರದಲ್ಲಿರುವುವು. ಮಳೆಯ ಹನಿಗಳ ಗಾತ್ರವು ಸಾಮಾನ್ಯವಾಗಿ ೧ ರಿಂದ ೨ ಮಿಲಿಮೀಟರ್ ಗಳಷ್ಟು. ೫ ಮಿ.ಮೀ. ಗಿಂತ ದೊಡ್ಡ ಹನಿಗಳು ಅಸ್ಥಿರಗೊಂಡು ಒಡೆದು ಸಣ್ಣಸಣ್ಣ ಹನಿಗಳಾಗಿ ಮಾರ್ಪಡುತ್ತವೆ.

ಈವರೆಗೆ ದಾಖಲಾಗಿರುವಂತೆ ೨೦೦೪ರಲ್ಲಿ ಬ್ರೆಜಿಲ್ ಮತ್ತು ಮಾರ್ಷಲ್ ದ್ವೀಪಗಳಲ್ಲಿ ೧೦ ಮಿ.ಮೀ. ಗಾತ್ರದ ಭಾರೀ ಮಳೆಹನಿಗಳು ಬಿದ್ದುವು. ಆದರೆ ಇಂತಹ ವಿದ್ಯಮಾನ ಬಲು ಅಪರೂಪ. ಸಮುದ್ರಮಟ್ಟದಲ್ಲಿ ಮತ್ತು ಬೀಸುಗಾಳಿಯಿಲ್ಲದಿರುವಾಗ ೦.೫ ಮಿ.ಮೀ. ಮಳೆಹನಿಯು ನೆಲಕ್ಕೆ ಸೆಕೆಂಡಿಗೆ ೨ ಮೀಟರ್ ವೇಗದಲ್ಲಿ ಇಳಿದರೆ ೫ ಮಿ.ಮೀ. ಗಾತ್ರದ ಹನಿಯು ಸೆಕೆಂಡಿಗೆ ೯ ಮೀಟರ್ ವೇಗದಲ್ಲಿ ಅಪ್ಪಳಿಸುವುದು.
ನೀರಿನ ಮೇಲೆ ಮಳೆಹನಿಯು ಬಿದ್ದಾಗ ಉಂಟಾಗುವ ವಿಶಿಷ್ಟ ಸದ್ದಿಗೆ ನೀರಿನಡಿಯಲ್ಲಿ ಗಾಳಿಯ ಗುಳ್ಳೆಗಳ ಕಂಪನವೇ ಕಾರಣವಾಗಿರುತ್ತದೆ. ವಾತಾವರಣದಲ್ಲಿನ ಇಂಗಾಲಾಮ್ಲವು ಮಳೆಹನಿಗಳಲ್ಲಿ ಕೊಂಚ ಪ್ರಮಾಣದಲ್ಲಿ ಕರಗಿ ಕಾರ್ಬಾನಿಕ್ ಆಮ್ಲದ ಅಲ್ಪ ಅಂಶವನ್ನು ಮಳೆಯ ನೀರಿನಲ್ಲಿ ಸೇರಿಸುತ್ತದೆ. ಕೆಲ ಮರುಭೂಮಿ ಪ್ರದೇಶಗಳಲ್ಲಿ ಧೂಳಿನಲ್ಲಿ ಕೊಂಚ ಕ್ಯಾಲ್ಸಿಯಮ್ ಕಾರ್ಬೊನೇಟ್ ಅಂಶವು ಬೆರೆತಿರುವುದರಿಂದ ಅಲ್ಲಿ ಮಳೆಯಾದರೆ ಆ ನೀರು ಕೊಂಚ ಮಟ್ಟಿಗೆ ಕ್ಷಾರಯುಕ್ತವಾಗಿರುವ ಸಂಭವವಿದೆ.

ಮಳೆಯ ಪ್ರಮಾಣನ್ನು ಮಳೆಮಾಪಕದ (ರೆಯ್ನ್ ಗೇಜ್) ಮೂಲಕ ಅಳೆಯಲಾಗುತ್ತದೆ. ಮಟ್ಟಸ ನೆಲದ ಮೇಲಿರಿಸಲಾದ ಈ ಮಾಪಕದಲ್ಲಿ ಸಂಗ್ರಹವಾದ ನೀರಿನ ಆಳವನ್ನು ಬಿದ್ದ ಮಳೆಯ ಪ್ರಮಾಣ ಎಂದು ಪರಿಗಣಿಸಲಾಗುತ್ತದೆ. ಮಳೆಮಾಪಕಗಳನ್ನು ನೆಲದಿಂದ ಸಮಾನ ಮತ್ತು ನಿಗದಿತ ಎತ್ತರದಲ್ಲಿ ಸ್ಥಾಪಿಸಲಾಗುತ್ತದೆ.

ಎಲ್ಲಾ ಸಸ್ಯರಾಜಿಗಳಿಗೂ ನೀರಿನ ಅವಶ್ಯಕತೆಯಿದ್ದೇ ಇರುವುದರಿಂದ ಮಳೆಯು ಸಸ್ಯಗಳ ಬೆಳವಣಿಗೆಯ ಮೇಲೆ ಅತಿ ಮುಖ್ಯ ಪರಿಣಾಮವನ್ನು ಬೀರುತ್ತದೆ. ಆದರೆ ಸಸ್ಯಗಳು ನಿಗದಿತ ಪ್ರಮಾಣ ಮತ್ತು ನಿಯಮಿತ ಅವಧಿಯಲ್ಲಿ ನೀರನ್ನು ಬಯಸುವುದರಿಂದ ಅತಿ ಕಡಿಮೆ ಅಥವಾ ಅತಿ ಹೆಚ್ಚು ಮಳೆ ಎರಡೂ ಸಸ್ಯಗಳಿಗೆ ಹಾನಿಕರ. ಬರದ ವಾತಾವರಣವು ಸಸ್ಯಸಂಕುಲವನ್ನು ಪೂರ್ಣವಾಗಿ ನಾಶಮಾಡಿದರೆ, ಅತಿ ಮಳೆಯು ಸಸ್ಯಗಳಲ್ಲಿ ರೋಗಗಳನ್ನುಂಟುಮಾಡಬಹುದು ಮತ್ತು ಹಾನಿಕಾರಕ ಶಿಲೀಂಧ್ರಗಳ ಉತ್ಪತ್ತಿಗೆ ಕಾರಣವಾಗುವುದು.
ಪ್ರತಿ ಜಾತಿಯ ಗಿಡವು ನಿಗದಿತ ಪ್ರಮಾಣದ ನೀರಿನ ಆಸರೆಯಲ್ಲಿ ಮಾತ್ರ ಉತ್ತಮ ಬೆಳವಣಿಗೆ ತೋರುವುದು. ಕಳ್ಳಿ ಗಿಡಕ್ಕೆ ಅತ್ಯಲ್ಪ ಪ್ರಮಾಣದ ನೀರು ಸಾಕಾದರೆ ಉಷ್ಣವಲಯದ ಸಸ್ಯಗಳು ಬದುಕುಳಿಯಲು ವರ್ಷಕ್ಕೆ ನೂರಾರು ಅಂಗುಲ ಮಳೆಯನ್ನು ಬಯಸುತ್ತವೆ.
ವಿಶ್ವದ ಎಲ್ಲಾ ದೇಶಗಳು ವ್ಯವಸಾಯಕ್ಕಾಗಿ ಮಳೆಯನ್ನು ನಾನಾ ಪ್ರಮಾಣದಲ್ಲಿ ಅವಲಂಬಿಸಿವೆ.

ಭಾರತದಲ್ಲಿ ಕೃಷಿಯು ಮಳೆಯ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ಹತ್ತಿ, ಬತ್ತ, ಎಣ್ಣೆಬೀಜಗಳ ಬೆಳೆಗಳು ಪೂರ್ಣವಾಗಿ ಮಳೆಯನ್ನೇ ನೆಚ್ಚಿವೆ. ಮಳೆಗಾಲದ ಆರಂಭವು ಕೆಲವೇ ದಿನಗಳಷ್ಟು ವ್ಯತ್ಯಾಸವಾದರೂ ದೇಶದ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾವುಂಟಾಗುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

 1. Изнемогли простужаться зимой и переплатить за отопление?
  Обтепление фасада – решение проблемы!
  Компания “Тепло и уют” с 2010 года предлагает профессиональные услуги по термоизоляции фасадов зданий любой сложности. За это время мы зарекомендовали себя как безопасный и надежный партнер, о чем свидетельствуют многие отзывы наших клиентов.
  Почему стоит выбрать нас?
  доступные цены. [url=https://stroystandart-kirov.ru/]Утепление и отделка фасада дома цена[/url] от 1350 руб/м2.
  практичность и специализация. Наши бригады имеют обширный опыт работы в сфере обтепления фасадов. Мы используем только подтвержденные материалы и современные технологии, что гарантирует высочайшее качество работ.
  Частный подход. Мы подберем для вас оптимальное решение с учетом ваших потребностей и бюджета.
  Бесплатная консультация и выезд замерщика. Наши специалисты бесплатно проконсультируют вас по всем вопросам инсуляции фасада и произведут аккуратные замеры.
  Наш сайт: [url=https://stroystandart-kirov.ru/]https://www.stroystandart-kirov.ru/[/url]
  Уверенность качества. Мы предоставляем гарантию на все виды работ.
  Звоните нам сегодня и получите бесплатную консультацию!
  Мы сделаем ваш дом теплым, уютным и экономичным!

 2. Мы специалисты специалистов по поисковой оптимизации, специализирующихся на продвижении сайтов в поисковых системах.
  Мы постигли успехи в своей области и желаем поделиться с вами нашими знаниями и навыками.
  Какими преимуществами вы сможете воспользоваться:
  • [url=https://seo-prodvizhenie-ulyanovsk1.ru/]технический аудит сайта цена[/url]
  • Глубокий анализ вашего сайта и формирование индивидуального плана продвижения.
  • Оптимизация контента и технических параметров вашего сайта для лучших результатов.
  • Постоянный контроль и анализ данных для улучшения вашего онлайн-присутствия.
  Подробнее [url=https://seo-prodvizhenie-ulyanovsk1.ru/]https://seo-prodvizhenie-ulyanovsk1.ru/[/url]
  У наших клиентов уже есть результаты: увеличение посещаемости, улучшение рейтинга в поисковых системах и, конечно, рост бизнеса. Вы можете получить бесплатную консультацию у нас, для обсуждения ваших требований и разработки стратегии продвижения, соответствующей вашим целям и бюджету.
  Не упустите шанс улучшить свои результаты в интернете. Обращайтесь к нам уже сегодня.

ಭೀಮಸೇನ

ಪಾಂಡವ ಭೀಮಸೇನನ ವರ್ಣನೆ

ಜೋಗ ಜಲಪಾತ

ಪ್ರಸಿದ್ಧ ಜಲಪಾತಗಳಲ್ಲಿ ಒಂದು ಜೋಗ