in

ಅಡುಗೆ ಮನೆಯಲ್ಲಿ ಸಿಗುವ ಔಷಧಿಗಳು

ಮನೆ ಅಂದಮೇಲೆ ಎಲ್ಲಾ ಕೊಠಡಿಗಳು ಮುಖ್ಯವಾಗಿರುತ್ತದೆ. ಅದರಲ್ಲೂ ಅಡುಗೆಮನೆ ತುಂಬಾ ಮುಖ್ಯವಾದ  ಕೋಣೆ. ಬರೀ ಊಟ, ತಿಂಡಿ ತಿನಿಸುಗಳನ್ನು ತಯಾರಿಸಲು ಮಾತ್ರ ಅಲ್ಲ, ಅಲ್ಲಿರುವ ಪ್ರತಿಯೊಂದು ವಸ್ತುವಿನಲ್ಲಿ ಔಷಧಿ ಗುಣ ಇರುತ್ತದೆ. ಸಣ್ಣಪುಟ್ಟ ಕಾಯಿಲೆಗಳಿಗೆ ಡಾಕ್ಟರ್ ಹತ್ತಿರ ಹೋ ಗುವ ಪ್ರಮೇಯ ಬರುವುದಿಲ್ಲ. ಅದು ಈಗಿನ ಪರಿಸ್ಥಿತಿಯಲ್ಲಿ ಒಂದು ಸಣ್ಣ ಜ್ವರ ಬಂದರೂ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಊರಿಗೊಬ್ಬರು ಡಾಕ್ಟರ್. ಆದರೆ ಈಗ ಎಲ್ಲಾಕಡೆ ಕ್ಲಿನಿಕ್. ಔಷಧಿ ಮಾಫಿಯಾ ಅಂದರೂ ತಪ್ಪಾಗಲಾರದು. ಇಂಗ್ಲಿಷ್ ಮೆಡಿಸಿನ್ ಬದಲು ನಮ್ಮ ಸಾಂಪ್ರದಾಯಿಕ ಔಷಧಿಗಳನ್ನು ಬಳಸಿದರೆ ಆರೋಗ್ಯಕ್ಕೆ ಯಾವುದೇ ರೀತಿಯ ಅಡ್ಡಪರಿಣಾಮ ಆಗುವುದಿಲ್ಲ. ಅಡುಗೆ ಮನೆಯಲ್ಲಿ ಅನೇಕ ವಸ್ತುಗಳು ಔಷಧಿಗುಣವನ್ನು ಹೊಂದಿದೆ. ಅದರಲ್ಲಿ ಪ್ರಮುಖವಾದ ಪದಾರ್ಥಗಳ ಬಗ್ಗೆ ತಿಳಿಯೋ ಣ.

೧.ಅರಿಶಿನ

ಅಡುಗೆ ಮನೆಯಲ್ಲಿ ಸಿಗುವ ಔಷಧಿಗಳು

ಸರ್ವ ರೋಗಕ್ಕೂ ಅರಿಶಿನ ಮದ್ದು ಹಸಿ ಅಥವಾ ಪುಡಿ ಮಾಡಿದ ಅರಿಶಿನ ಯಾವುದಾದರೂ ಸರಿ. ಸುಟ್ಟ ಗಾಯಗಳಿಂದ ನಮ್ಮ ದೇಹವನ್ನು ಅರಿಶಿನ  ಕಾಪಾಡುತ್ತದೆ. ಮುಖದ ಕಾಂತಿ, ಸೌಂದರ್ಯಕ್ಕೆ ಕೂಡ ಉಪಕಾರಿಯಾಗಿದೆ. ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಒಂದು ಲೋಟ ನೀರಿಗೆ ತಾಜಾ ಅರಿಶಿನ, ಕರಿಮೆಣಸಿನ ಪುಡಿ ಹಾಕಿ ಕುದಿಸಿ, ಟೀ ಕುಡಿಯುವ ರೀತಿ ಕುಡಿಯಬೇಕು. ಜೇನುತುಪ್ಪ ಅಥವಾ ಬೆಲ್ಲ ಉಪಯೋಗಿಸಬಹುದು. ಕಫ ಜಾಸ್ತಿ ಇದ್ದರೆ ಹಾಲಿಗೆ ಸ್ವಲ್ಪ ಅರಸಿನ ಹಾಕಿ ಪ್ರತಿನಿತ್ಯ ಕುಡಿಯಬೇಕು. ಬಿದ್ದ ಗಾಯ, ಹುಣ್ಣು, ಪಾದ ಒಡೆಯುವ ಸಮಸ್ಯೆಗೆ, ತೆಂಗಿನ ಎಣ್ಣೆಯ ಜೊತೆಸೇರಿಸಿ ಮಿಶ್ರಣ ಮಾಡಿ  ಹಚ್ಚಿಕೊಳ್ಳಬೇಕು. ನೋವು ಕಡಿಮೆಯಾಗುತ್ತದೆ. ಗಾಯಗಳು ಇನ್ಫೆಕ್ಷನ್ ಆಗುವುದನ್ನು ತಡೆಯುತ್ತದೆ. ಬಿದ್ದು ಪೆಟ್ಟದಾಗ ರಕ್ತನಿಲ್ಲದಿದ್ದರೆ ಅಲ್ಲಿಗೆ ಅರಿಶಿನ ಹಾಕಿದರೆ ಸಾಕು, ಕೂಡಲೇ ರಕ್ತಸ್ರಾವ ನಿಲ್ಲುತ್ತದೆ. ಮಹಿಳೆಯರು ಮುಖಕ್ಕೆ ಅರಿಶಿನ ನಿರಂತರವಾಗಿ ಹಚ್ಚಿಕೊಂಡರೆ ಮುಖದ ಮೇಲಿನ ಕೂದಲಿನ ಬೆಳವಣಿಗೆ ಕಮ್ಮಿ ಆಗುತ್ತದೆ.

 ೨.ಕರಿಮೆಣಸು

ಅಡುಗೆ ಮನೆಯಲ್ಲಿ ಸಿಗುವ ಔಷಧಿಗಳು

ಸಾಂಬಾರು ಪದಾರ್ಥಗಳ ರಾಜ ಕರಿಮೆಣಸು ಅಡುಗೆಮನೆಯಲ್ಲಿ ಒಂದು ಒಳ್ಳೆಯ ಪರಿಮಳ ಕೊಡುತ್ತದೆ. ಕರಿಮೆಣಸಿನ ಸೇವನೆಯಿಂದ ತಲೆನೋವು ಕಮ್ಮಿಯಾಗುತ್ತದೆ. ಬಿಕ್ಕಳಿಗೆ ಬರುವುದು ನಿಲ್ಲುತ್ತದೆ. ಕರಿಮೆಣಸಿನ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸಿದರೆ ಒಣಕೆಮ್ಮು ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಶೀತ, ಕೆಮ್ಮು ಇದ್ದರೆ, ಚಹಾಕ್ಕೆ ಕರಿಮೆಣಸಿನ ಪುಡಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ ಕುಡಿಯಬೇಕು. ಬಾಣಂತಿಯರಿಗೆ ಕಾಳು ಮೆಣಸಿನ ರಸಂ ತಯಾರಿಸಿ ಕೊಡಬೇಕು. ಇದರಿಂದ ಶೀತ ಬಾಧೆ ಇರುವುದಿಲ್ಲ.

೩.ಬೆಲ್ಲ

ಅಡುಗೆ ಮನೆಯಲ್ಲಿ ಸಿಗುವ ಔಷಧಿಗಳು

ಮಾತು ಬೆಲ್ಲದ ತರ ಇರಬೇಕು ಎಂದು ಒಂದು ಮಾತು. ಅಂದರೆ ಅಷ್ಟು ಸಿಹಿಯಾಗಿರಬೇಕು ಎಂದು ಅರ್ಥ. ಸಿಹಿ ಯಾರಿಗೆ ಇಷ್ಟ ಇಲ್ಲ, ಹಾಗಂತ ಅತಿಯಾಗಿ ತಿನ್ನಲು ಬಾರದು. ಸಕ್ಕರೆ ಬಳಸುವ ಬದಲು ಬೆಲ್ಲ ತುಂಬಾ ಒಳ್ಳೆಯದು. ಚಿಕ್ಕ ವಯಸ್ಸಲ್ಲಿ ಒಂದು ತುಂಡು ಬೆಲ್ಲಕೊಟ್ಟರೆ ಸಾಕು. ಖುಷಿಯೋ ಖುಷಿ. ನಮಗೆಲ್ಲ ಚಾಕ್ಲೇಟ್ಗಿಂತ ಬೆಲ್ಲ ಅಂದರೆ ತುಂಬಾ ಇಷ್ಟ. ಪ್ರತಿದಿನ ಬೆಲ್ಲ ತಿನ್ನುವುದರಿಂದ ತುಂಬಾ ಪ್ರಯೋಜನವಿದೆ. ರಕ್ತವನ್ನು ಶುದ್ಧೀಕರಸುತ್ತದೆ. ಜೀರ್ಣಕ್ರಿಯೆಗೆ ಒಳ್ಳೆಯದು. ಅಜೀರ್ಣಕ್ಕೆ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ಸೇರಿಸಿ ತಿಂದರೆ ಒಳ್ಳೆಯದು. ಕಬ್ಬಿಣದ ಅಂಶ ಬೆಲ್ಲದಲ್ಲಿ ಜಾಸ್ತಿ ಇರುವುದರಿಂದ ರಕ್ತಹೀನತೆ ಕಮ್ಮಿಯಾಗುತ್ತದೆ. ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಬೇಕು. ಮುಟ್ಟಿನ ಸಮಯದಲ್ಲಿ ಕಿಬ್ಬೊಟ್ಟೆ ನೋವು ಇದ್ದರೆ ಮಾತ್ರೆಯ ಬದಲು ಬೆಲ್ಲವನ್ನು ಹಾಲಿಗೆ ಹಾಕಿ ಕುಡಿಯಬೇ ಕು.

೪.ಈರುಳ್ಳಿ

ಅಡುಗೆ ಮನೆಯಲ್ಲಿ ಸಿಗುವ ಔಷಧಿಗಳು

ತರಕಾರಿಗಳ ರಾಜ ಈರುಳ್ಳಿ, ಒಂದು ಅದ್ಭುತವಾದ ಔಷಧಿ ಗುಣವನ್ನು ಹೊಂದಿದೆ. ಕೂದಲಿಗೆ ಹೊಳಪು ನೀಡುತ್ತದೆ. ಕೂದಲಿಗೆ ಎಣ್ಣೆ ತಯಾರಿಸುವಾಗ ಒಂದು ಈರುಳ್ಳಿಯನ್ನು ಕೂಡ ಪೇಸ್ಟ್ ಮಾಡಿ ಅಥವಾ ತುಂಡು ಮಾಡಿ ಸೇರಿಸಿ. ಹೊಸ ಕೂದಲು ಬೆಳೆಯಲು ಸಹಕಾರಿಯಾಗುತ್ತದೆ. ಅಲೋವೆರಾ ಜೊತೆ ಈರುಳ್ಳಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿಕೊಂಡರೆ ತಲೆಹೊಟ್ಟು ಕಮ್ಮಿಯಾಗಿ ಕೂದಲು ಉದರುವಿಕೆಯನ್ನು ತಡೆಯಬಹುದು. ಮಕ್ಕಳಿಗೆ ಎದೆಯಲ್ಲಿ ಕಫ ಕಟ್ಟಿ ಗರ ಗರ ಇದ್ದರೆ ಈರುಳ್ಳಿ ರಸ ತೆಗೆದು ಕುಡಿಸಬೇಕು. ಎದೆ ಕಟ್ಟುವಿಕೆ, ಉಸಿರಾಟ ತೊಂದರೆ ಕಮ್ಮಿಯಾಗುತ್ತದೆ. ಮಹಿಳೆಯರಲ್ಲಿ ಕೆಲವರಿಗೆ ಮುಟ್ಟಿನ ಸಂದರ್ಭ ದಲ್ಲಿ ಜಾಸ್ತಿ ರಕ್ತಸ್ರಾವ ಆಗಿ ಹಿಮೋಗ್ಲೋಬಿನ್ ಕಮ್ಮಿ ಆಗುವ ಸಾಧ್ಯತೆ ಇರುತ್ತದೆ. ಆ ಸಂದರ್ಭ ದಲ್ಲಿ ಈರುಳ್ಳಿಯನ್ನು ತುಪ್ಪದಲ್ಲಿ ಹುರಿದು ಬೆಲ್ಲದ ಪಾಕ ಹಾಕಿ ತಯಾರಿಸಿ ಇಟ್ಟು ತಿನ್ನುತ್ತಾಬಂದರೆ  ಹಿಮೋಗ್ಲೋಬಿನ್  ಹೆಚ್ಚುತ್ತದೆ.

 ೫.ಜೀರಿಗೆ

ಅಡುಗೆ ಮನೆಯಲ್ಲಿ ಸಿಗುವ ಔಷಧಿಗಳು

ಹಳೆಯ ಮಸಾಲೆಗಳಲ್ಲಿ ಜೀರಿಗೆ ಕೂಡ ಒಂದು. ಪ್ರತಿನಿತ್ಯ ಬೆಳ್ಳಗ್ಗೆ ಜೀರಿಗೆ ನೀ ರು ಕುಡಿಯಿರಿಸಾಕು ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಹಿಂದೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಜೀರಿಗೆ ನೀರು ಕುಡಿಸುತ್ತಿದ್ದರು. ಹೆರಿಗೆ ಸುಸೂತ್ರವಾಗಿ ಆಗುತ್ತದೆ ಎಂದು. ಋತುಚಕ್ರದ ಅಸಮತೋಲನ ಮತ್ತು ನೋವಿನ ಸಮಸ್ಯೆ ಇರುವ ಮಹಿಳೆಯರು ಜೀರಿಗೆ ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಂತಹವರು, ಮೊಸರು, ಮಜ್ಜಿಗೆ ಮತ್ತು ಸಲಾಡ್ ಗಳಲ್ಲಿ ಇದನ್ನು ಬೆರೆಸಿ ಸೇವಿಸಬಹುದು. ಕೊಲೆಸ್ಟ್ರಾಲ್ ಸಮಸ್ಯೆ ಗೆ ಒಳ್ಳೆಯದು.ಜೀರಿಗೆ ಜೀ ರ್ಣಕ್ರಿಯೆಗೆ ಕೂಡ ಒಳ್ಳೆಯ ಮದ್ದು. ಪ್ರತಿದಿನ ಒಂದು ಚಮಚ  ಜೀರಿಗೆಯನ್ನು ನೀವು ಕುಡಿಯುವ ನೀರಿನ ಜೊತೆ ಸೇರಿಸಿ ಕುಡಿದರೆ ಸಾಕು ತುಂಬಾ ಪ್ರಯೋ ಜನ ಆಗಬಹುದು. ಇಷ್ಟು ಮಾತ್ರ ಅಲ್ಲ ಅಡುಗೆ ಕೋಣೆಯ ವಸ್ತುಗಳ ಚಮತ್ಕಾರ. ಇನ್ನೂ ಹಲವಾರು ವಸ್ತುಗಳಿವೆ. ಎಲ್ಲವೂ ಒಂದೊಂದು  ರೀತಿಯಲ್ಲಿ ಉಪಯೋಗಿಯಾಗಿದೆ. ನಮ್ಮ   ದೇಶವೇ ಒಂದು ಅದ್ಭು ತ. ಇಲ್ಲಿ ಸಿಗುವ ಪ್ರತಿ ಒಂದು ವಸ್ತು ಕೂಡ ಅಷ್ಟೇ  ಅದ್ಭುತ. ಏಷ್ಟೇ ಆಧುನೀ ಕತೆ ಹೊಂದಿದ್ದರೂ  ನಾವು ಸಮಸ್ಯೆ ಬಂದರೆ ನಮ್ಮ ಹಿರಿಯರನ್ನೇ ಕೇಳಿ ತಿಳಿದುಕೊಳ್ಳಬೇಕು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

6 Comments

ದೇಹಕ್ಕೆ ತಂಪಾದ ಬಾಯಿಗೆ ರುಚಿಯಾದ ಕುಚ್ಚಲಕ್ಕಿ

ನಮ್ಮ ಲಾಲ್ ಬಹದ್ದೂರ್ ಶಾಸ್ತ್ರೀಜಿ!