ಕರಾವಳಿಯ ಕೆಲವು ಪ್ರದೇಶಗಳಲ್ಲಿ ಕೆಂಗಣ್ಣು ಕಾಯಿಲೆ ಕಾಣಿಸಿಕೊಂಡಿದೆ. ಅದಕ್ಕಾಗಿ ಈ ಕಾಯಿಲೆಯಿಂದ ರಕ್ಷಿಸಿಕೊಳ್ಳಲು ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಈಗ ಇದು ಮಂಗಳೂರಿನ ಬಜಪೆ ಊರಿನಲ್ಲಿ ಕಾಣಿಸಿಕೊಂಡಿದೆ. ಮುಂದೆ ಇದು ಬೇರೆ ಬೇರೆ ಪ್ರದೇಶಗಳಿಗೂ ಹರಡಬಹುದು.
ಕೆಂಪುಕಣ್ಣು (ಕೆಂಗಣ್ಣು) ಕಾಯಿಲೆ ಜಿಲ್ಲೆಯಲ್ಲಿ ವ್ಯಾಪಿಸಿದ್ದು, ಎರಡು ವಾರಗಳಲ್ಲಿ ಜಿಲ್ಲೆಯಲ್ಲಿ ಸುಮಾರು 2,500 ಜನರನ್ನು ಬಾಧಿಸಿದೆ. ಮಂಗಳೂರು ಗ್ರಾಮಾಂತರ, ಬಂಟ್ವಾಳ ತಾಲ್ಲೂಕುಗಳಲ್ಲಿ ಇದು ಹೆಚ್ಚು ಹರಡಿದೆ.
ಕೆಂಗಣ್ಣು ಕಾಯಿಲೆ ಎಂದರೇನು?
ಕೆಂಗಣ್ಣು ಕಾಯಿಲೆಗೆ ಮದ್ರಾಸ್ ಐ ಎಂದು ಕರೆಯುತ್ತಾರೆ. ಈ ಕೆಂಗಣ್ಣು ಕಾಯಿಲೆ ಸೋಂಕು ಹಾಗೂ ಬ್ಯಾಕ್ಟೀರಿಯಾ ಕಾರಣದಿಂದ ಬರಬಹುದು ಎನ್ನಲಾಗಿದೆ. ಕಣ್ಣಿನ ಬಿಳಿ ಭಾಗದ ಮೇಲೆ ಮತ್ತು ಕಣ್ಣಿನ ರೆಪ್ಪೆಗಳ ಮೇಲ್ಬಾಗದಲ್ಲಿ ಉರಿಊತಕ್ಕೆ ಒಳಗಾಗಿ ಕಣ್ಣು ಕೆಂಪು ಬಣ್ಣ ಅಥವಾ ಗುಲಾಬಿ ಬಣ್ಣಕ್ಕೆ ಹೊಂದಿಕೊಳ್ಳುವುದು ಇದರ ಲಕ್ಷಣವಾಗಿದೆ. ಇದು ಸುಲಭವಾಗಿ ಬೇರೆ ಅವರಿಗೆ ಹರಡುತ್ತೆ. ಇದಕ್ಕೆ ಇನ್ನು ಸರಿಯಾದ ಚಿಕಿತ್ಸೆ ಇಲ್ಲ. ವೈದ್ಯರು ಈ ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಐ ಡ್ರಾಪ್ ಗಳನ್ನ ಸೂಚಿಸುತ್ತಾರೆ.
ಮದ್ರಾಸ್ ಐ ಎಂದು ಕರೆಯಲ್ಪಡುವ ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್‍ಗೆ ಕಾರಣ ಬ್ಯಾಕ್ಟೀರಿಯಾ. ಕಣ್ಣಿನ ಬಿಳಿಭಾಗದ ಮೇಲ್ಮೆ ಮತ್ತು ಕಣ್ಣಿನ ರೆಪ್ಪೆಗಳ ಒಳಭಾಗ ಉರಿಯೂತಕ್ಕೆ ಈಡಾಗಿ ಕೆಂಪು ಅಥವಾ ಗುಲಾಬಿ ಬಣ್ಣ ಹೊಂದಿ ಊದಿಕೊಳ್ಳುವುದು ಇದರ ಲಕ್ಷಣ. ಇದು ಸುಲಭವಾಗಿ ಹರಡುವ ಸೋಂಕು ರೋಗವಾಗಿದ್ದು ಇದು ಕಣ್ಣಿನ ಕಪ್ಪು ಗುಡ್ಡೆಗೆ ಹರಡಿದ್ರೆ ದೃಷ್ಟಿಗೆ ಸಂಚಕಾರವಾಗೋ ಸಾಧ್ಯತೆಯಿದೆ. ಹೀಗಾಗಿ ಕೆಂಗಣ್ಣು ರೋಗ ಪ್ರದೇಶದಲ್ಲಿ ಇರುವಾಗ ಕಣ್ಣನ್ನು ಮುಟ್ಟಿಕೊಳ್ಳದಿರುವುದು, ಆಗಾಗ ಕೈ ಸ್ವಚ್ಚಗೊಳಿಸುತ್ತಿರುವುದು, ವೈರಸ್‍ಗೆ ತುತ್ತಾದವರ ಸಂಪರ್ಕದಿಂದ ದೂರವಿರುವುದರಿಂದ ಅಪಾಯದಿಂದ ಪಾರಾಗಬಹುದು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೆಂಗಣ್ಣು ಕಾಯಿಲೆ ಹೆಚ್ಚಾಗ್ತಿದೆ. ಮಂಗಳೂರು ನಗರ ಹೊರವಲಯದ ಬಜಪೆ, ಎಕ್ಕಾರು ಸೇರಿದಂತೆ ಬಂಟ್ವಾಳ, ಬೆಳ್ತಂಗಡಿ ತಾಲೂಕು ಪರಿಸರದಲ್ಲಿ ಹೆಚ್ಚಿನ ಜನರಲ್ಲಿ ಮದ್ರಾದ್ ಐ ಕಾಯಿಲೆ ಆವರಿಸಿದೆ. ಇಡೀ ಊರಿನಲ್ಲಿ ಕಪ್ಪು ಕನ್ನಡಕ ಧರಿಸಿ ಓಡಾಡೋ ಜನ ಕಾಣಿಸ್ತಿದ್ದಾರೆ. ಭಾದಿತರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳು ಹೆಚ್ಚಿದ್ದು ಇವರ ಮೂಲಕ ಈ ವೈರಸ್ ಇತರರಿಗೆ ವೇಗವಾಗಿ ಹರಡುತ್ತಿದೆ. ಹೀಗಾಗಿ ದಿನವೊಂದಕ್ಕೆ 100ಕ್ಕಿಂತ ಹೆಚ್ಚು ಜನ ಈ ಕೆಂಗಣ್ಣು ಕಾಯಿಲಿಗೆ ತುತ್ತಾಗುತ್ತಿದ್ದು ಕಣ್ಣಿನ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ.
ಇದು ವೈರಸ್‌ನಿಂದ ಹರಡುವ ಸಾಂಕ್ರಾಮಿಕ ಕಾಯಿಲೆ ಆಗಿದ್ದರಿಂದ ಇನ್ನೂ ಎರಡು ವಾರ ಮುಂದುವರಿಯಬಹುದು. ಸಾರ್ವಜನಿಕರು ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಕೆಂಗಣ್ಣಿಗೆ ತುತ್ತಾದವರು ಸಾರ್ವಜನಿಕ ಪ್ರದೇಶಕ್ಕೆ ಬರದೆ ಮನೆಯಲ್ಲೇ ಇರಬೇಕು. ಕಣ್ಣನ್ನು ಪದೇ ಪದೇ ಮುಟ್ಟುವುದರಿಂದ, ಬಟ್ಟೆಯ ಮೂಲಕ ರೋಗ ಹರಡುತ್ತದೆ. ಸಾಮಾನ್ಯವಾಗಿ ಮೂರರಿಂದ ಐದು ದಿನಗಳವರೆಗೆ ಇದು ಕಾಡುತ್ತದೆ. ಕೆಲವರಿಗೆ ಬೇಗ ಗುಣವಾಗುತ್ತದೆ. ಕೆಂಗಣ್ಣು ಬಂದವರು ಕನ್ನಡಕ ಧರಿಸುವುದು ಉತ್ತಮ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ಕುಮಾರ್ ತಿಳಿಸಿದರು.
‘ಶಾಲೆಗಳಲ್ಲಿ ಮಕ್ಕಳು ಒಟ್ಟಿಗೆ ಕುಳಿತುಕೊಳ್ಳುವ ಕಾರಣ, ಕೆಂಗಣ್ಣಿಗೆ ತುತ್ತಾದವರು ಮನೆಯಲ್ಲೇ ಆರೈಕೆ ಪಡೆಯುವಂತೆ ತಿಳಿಸಲಾಗಿದೆ. ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧದ ಲಭ್ಯತೆ ಇದೆ. ಆ್ಯಂಟಿಬಯಾಟಿಕ್ ಡ್ರಾಪ್ಸ್ ಹಾಕುವುದರಿಂದ ಕಾಯಿಲೆ ಕಡಿಮೆ ಆಗುತ್ತದೆ. ನೋವು ಬಾಧಿಸಿದರೆ, ಪಾರಾಸಿಟಮೋಲ್ ಮಾತ್ರೆ ಬೇಕಾಗಬಹುದು’ ಎಂದು ವಿವರಿಸಿದರು.
ಕೆಂಪುಕಣ್ಣು ತಗುಲಿರುವ ಮಕ್ಕಳನ್ನು ಐದು ದಿನ ಶಾಲೆಗೆ ಕಳುಹಿಸದಂತೆ ಜಿಲ್ಲಾ ಶಿಕ್ಷಣ ಇಲಾಖೆ ಜ್ಞಾಪನಪತ್ರ ಹೊರಡಿಸಿದೆ. ಇದು ಶೀಘ್ರ ಹರಡುವ ಕಾಯಿಲೆ ಆಗಿದ್ದರಿಂದ, ಮಕ್ಕಳು ಮನೆಯಲ್ಲೇ ಇರುವಂತೆ ಪೋಷಕರು ಮನವರಿಕೆ ಮಾಡಬೇಕು ಎಂದು ಜಿಲ್ಲಾ ದಿವ್ಯಾಂಗ ಉಪನಿರ್ದೇಶಕರು ತಿಳಿಸಿದ್ದಾರೆ.
ಕಣ್ಣನ್ನು ಪದೇ ಪದೇ ಮುಟ್ಟಿಕೊಳ್ಳದೆ ಇರುವುದು ಹಾಗೆಯೆ ಆಗಾಗ ಕೈ ಗಳನ್ನು ತೊಳೆದು ಕೊಳ್ಳುವುದರಿಂದ ಸೋಂಕನ್ನು ತಡೆಗಟ್ಟಬಹುದು. ರೋಗ ಪೀಡಿತರಿಂದ ಸ್ವಲ್ಪ ದೂರ ಇರುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು.
ಧನ್ಯವಾದಗಳು.
GIPHY App Key not set. Please check settings